ಸ್ಟಾರ್‌ಗಳ ವಿಮಲ್‌ ಜಾಹೀರಾತು
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
(ಕಾಲ್ಪನಿಕ ಸಂದರ್ಶನ)
ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಅದು ಕೆಜಿಎಫ್ ಚಿತ್ರ ಮತ್ತು ನಟ ಸುದೀಪ್ ಅವರಿಗೆ ಸಂಬಂಧಪಟ್ಟಿದ್ದು. ಹಾಗೆ ನೋಡಿದರೆ ಅದು ಹಳೆಯ ವಿಡಿಯೋ.
ಈಗ ಕೆಜಿಎಫ್ ಚಿತ್ರ ಬಿಡುಗಡೆ ಆದ ಮೇಲೆ ಮಾತನಾಡಿದ್ದಲ್ಲ. ಆ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್ ಬಗ್ಗೆ ಮಾತಾಡಿ ಅಂತ ಸುದೀಪ್ ಅವರನ್ನು ಕೇಳಿದಾಗ, ‘ಆ ಚಿತ್ರದಲ್ಲಿ ನಾನಿಲ್ಲ ಸರ್’ ತ ಸುದೀಪ್ ಹೇಳಿದ್ದು ಕೇಳಿ ಕೆಲವರಿಗೆ ಸುದೀಪ್‌ಗೆ ಯಶ್ ಅವರ ಮೇಲೆ ಹೊಟ್ಟೆಕಿಚ್ಚು ಎನಿಸುತ್ತಿದೆ. ಆದರೆ ಹಾಗಂದುಕೊಂಡರೆ ಅದಕ್ಕಿಂತ ತಮಾಷೆ ಇನ್ನೊಂದಿಲ್ಲ. ಯಾಕಂದ್ರೆ ಯಶ್ ಈಗ ಕೆಜಿಎಫ್ ಮೂಲಕ ಬಾಲಿವುಡ್‌ ವರೆಗೂ ಹೆಸರು ಮಾಡಿರಬಹುದು. ಆದರೆ ಇತ್ತೀಚಿನ ನಟರಲ್ಲಿ ಬಾಲಿವುಡ್ ಸೇರಿದಂತೆ ಪರಭಾಷೆಯ ಅನೇಕ ಸಿನಿಮಾಗಳಲ್ಲಿ ಅಭಿನಯ ಮಾಡಿದವರಲ್ಲಿ ಸುದೀಪ್ ಅವರೇ ಮೊದಲಿಗರು.
ಯಶ್ ಅವರಿಗಿಂತ ಬಹಳ ಮುಂಚೆಯೇ ರಾಮ್ ಗೋಪಾಲ್ ವರ್ಮಾ, ರಾಜಮೌಳಿ ಅವರಂಥ ನಿರ್ದೇಶಕರ ಅಡಿಯಲ್ಲಿ, ಹಲವಾರು ಸಿನಿಮಾ ಮಾಡಿದ್ದಾರೆ ಸುದೀಪ್. ಅಲ್ಲದೆ, ಅಮಿತಾಬ್ ಬಚ್ಚನ್ ಅವರಂಥ ಮೇರು ನಟರ ಜತೆಗೆ ಅಭಿನಯಿಸೋದು ಸಣ್ಣ ಮಾತಲ್ಲ. ಹಾಗಾಗಿ ಇವತ್ತು ಯಶ್ ನೋಡ್ತಾ ಇರೋದನ್ನ ಯಾವುದೋ ಕಾಲದ ಸುದೀಪ್ ನೋಡಿದ್ದಾರೆ. ಅವರಿಗೆ ಯಶ್ ಅವರ ಸಕ್ಸಸ್ ನೋಡಿಉರ್ಕೊಳ್ಳುವಂಥದ್ಧು ಏನೂ ಇಲ್ಲ. ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ, ಸಾಮಾನ್ಯವಾಗಿ ಚಿತ್ರವೊಂದರ ಪತ್ರಿಕಾಗೋಷ್ಠಿಗಳಲ್ಲಿ, ಆ ಸಿನಿಮಾ ಬಿಟ್ಟು ಬೇರೆ ವಿಷಯ ಬಂದಾಗ ಎಲ್ಲ ನಟರೂ, ಅದು ಆಮೇಲೆ ಮಾತಾಡೋಣ, ಈಗ ಸದ್ಯಕ್ಕೆ ನಮ್ಮ ಸಿನಿಮಾ ಬಗ್ಗೆ ಮಾತಾಡೋಣ ಅಂತಲೇ ಹೇಳೋದು. ಬೇರೆ ಯಾರೂ ಬೇಡ.
ಇದೇ ಯಶ್ ತಮ್ಮ ಕೆಜಿಎಫ್ ಚಿತ್ರದ ಪತ್ರಿಕಾಗೋಷ್ಠಿಯ, ಪತ್ರಕರ್ತರೊಬ್ಬರು ಕೆಜಿಎಫ್ ಆಯ್ತು, ಮುಂದೇನು ಅಂತ ಕೇಳಿದಾಗ, ಇದು ಕೆಜಿಎಫ್ ಪತ್ರಿಕಾಗೋಷ್ಠಿ, ಅದರ ಬಗ್ಗೆ ಮಾತ್ರ ಮಾತಾಡೋಣ ಅಂತಲೇ ಹೇಳಿದ್ದಾರೆ. ತಮ್ಮ ಬಗ್ಗೆ, ತಮ್ಮ ಮುಂದಿನ ಚಿತ್ರದ ಬಗ್ಗೆಕೇಳಿದಾಗಲೇ ಯಶ್ ಹೀಗೆ ಹೇಳಬಹುದಾದರೆ, ತನಗೇ ಸಂಬಂಧವೇ ಇರದ, ಇನ್ನೊಬ್ಬರ ಚಿತ್ರದ ಬಗ್ಗೆ ಕೇಳಿದಾಗ, ಆ ಚಿತ್ರದಲ್ಲಿ ನಾನಿಲ್ಲ ಅಂತ ಸುದೀಪ್ ಹೇಳಿದ್ದರಲ್ಲಿ ತಪ್ಪೇನಿದೆ ? ಅವರು ಹೇಳಿದ ರೀತಿ ಸ್ವಲ್ಪ ಖಾರವಾಗಿರಬಹುದು ಅಷ್ಟೇ.. ಏನೂ ಮಾಡೋಕಾಗಲ್ಲ.ಅದು ಸುದೀಪ್ ಅವರ ಟಿಪಿಕಲ್ ಸ್ಟೈಲ್.
ಲೂಸ್ ಟಾಕ್ರೋಹಿತ್ ಶರ್ಮಾಏನ್ ಮಿಸ್ಟರ್ ರೋಹಿತ್ ಶರ್ಮಾ , ಜೀವನದಲ್ಲಿಏಳು ಬೀಳು ಇದ್ದಿದ್ದೇ, ಆದ್ರೆ ಹಂಗಂತ ಏಳೂ ಸಲಬೀಳೋದಾ?ಏನ್ ಮಾಡೋದು, ಇದು ನಮ್ಮ ಏಳೇಳು ಜನ್ಮದ ಕರ್ಮಧ ಫಲ.
ಸರಿ, ಏಳೇಳು ಬ್ಯಾಗ್ ಪ್ಯಾಕ್ ಮಾಡ್ಕೊ…ಅಯ್ಯೋ, ಬಿಡಿ, ಮುಂಬೈನ ಐಪಿಎಲ್ ನಡೀತಾ ಇರೋದು, ಏನ್ ಲಾಂಗ್ ಜರ್ನಿ ಮಾಡ್ಬೇಕಾ? ಎಡವಿ ಬಿದ್ರೆ ಮನೆ ಸಿಗುತ್ತೆ.
ಅಯ್ಯೋ, ಶಿವನೇ ಏಳು ಸಲ ಎಡವಿ ಬಿದಿದ್ದು ಸಾಲದಾ, ಇನ್ನೂ ಬೀಳ್ಬೇಕೂ ಅಂತಿದ್ದೀರಾ…ಸರಿ ಹೋಯ್ತು. ಹೋಗ್ಲಿ, ಮುಂದಿನ ಪ್ಲ್ಯಾನು?ಇನ್ನೇನಿದೆ ಅದೇ ಹಳೇ ಫಿಲಾಸಫಿ, ಸೋಲೇ ಗೆಲುವಿನ ಸೋಪಾನ
ಮುಂದಿನ ಮ್ಯಾಚುಗಳೇನು ಮೆತ್ತನೆಯ ಸೋಫಾನಾ, ಮತ್ತೆ ಏಳು ಮ್ಯಾಚು ಸೋತೀರಿ ಜೋಪಾನ. ಸರಿ, ಫಿನಿಶರ್ ಧೋನಿ ಬಗ್ಗೆ ಏನ್ ಹೇಳ್ತೀರಾ?ಅದೃಷ್ಟ ’ಕೈ ಕೊಟ್ಟಾಗ’ ಯಾರ್ ಬೇಕಾದ್ರೂ ಫಿನಿಷ್ ಆಗಬಹುದು. ಬಾಲ್‌ನ ಉನಾದ್ಕಟ್ ‘ಕೈಗ್ ಕೊಟ್ಟಾಗ’ ಯಾರ್ ಬೇಕಾದ್ರೂ ಫಿನಿಷರ್ ಆಗ್ಬೋದು.
ಸರಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಫೈಲ್ ಕೆಳಗೆ ಇದ್ದೀರಾ, ಹೇಗಿದೆ ಅನುಭವ?
ಟೇಬಲ್ ಕೆಳಗಿದ್ದೀವಿ ಅಂತ ಅಷ್ಟೇನೂ ಬೇಜಾರಿಲ್ಲ, ಆದ್ರೆ, ಟೇಬಲ್ ಕೆಳಗೆ ಫಿಕ್ಸಿಂಗ್ ಮಾಡಿಕೊಂಡವರೂ, ಪಾಯಿಂಟ್ಸ ಟೇಬಲ್‌ನಲ್ಲಿ ನಮಗಿಂಥ ಮೇಲಿದ್ದಾರಲ್ಲ ಅನ್ನೋದೇ ಜಾಸ್ತಿ ಬೇಜಾರು.
ನೆಟ್ ಪಿಕ್ಸ್ಖೇಮು ಮತ್ತೆ ಖೇಮುಶ್ರೀ ಒಂದು ದಿನ ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿ ಒಂದು ಜಯಂಟ್ ವೀಲ್ ನೋಡಿ ಖೇಮುಗೆ ಅದರಲ್ಲಿ ಕೂರಬೇಕು ಅಂತ ಆಸೆ ಆಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ ೫೦೦ ರುಪಾಯಿ. ೫೦೦ ರುಪಾಯಿ ಏನು ಸುಮ್ನೆ ಬರುತ್ತಾ? ಅಂದ್ಳು. ಸರಿ ಅಂತ ಖೇಮು ಸುಮ್ಮನೆ ಆದ.
ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವೀಲ್‌ನಲ್ಲಿ ಕೂತ್ಕೊಳ್ಳೋ ಆಸೆ ಆಯ್ತು. ಹೆಂಡತಿಗೆ ಹೇಳಿದ. ಖೇಮುಶ್ರೀಯಿಂದ ಅದೇ ಉತ್ತರ ಬಂತು, ೫೦೦ ರುಪಾಯಿ ಏನು ಸುಮ್ನೆ ಬರುತ್ತಾ ಅಂತ. ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. ನಂಗೆ ವಯಸ್ಸು ೭೦ ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ. ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ ಅಂದ ಖೇಮು. ಅದಕ್ಕೆ ಖೇಮುಶ್ರೀ ಮತ್ತೆ ಅದೇ ಮಾತು ಹೇಳಿದ್ಳು, ೫೦೦ ರುಪಾಯಿಏನು ಸುಮ್ನೆ ಬರುತ್ತಾ? ಆಗ ಇದನ್ನ ಆ ಜಯಂಟ್ ವೀಲ್ ರೈಡರ್ ಕೇಳಿಸಿಕೊಂಡ.
ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ ೫೦೦ ರುಪಾಯಿ ಫೋನ್ ಆಗುತ್ತೆ ಅಂತ ಖೇಮುದಂಪತಿಗೆ ಹೇಳಿದ. ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆಲ್ಲ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ.
ಆದರೆ ಇಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತ ರೈಡರ್ ಹೇಳಿದ, ‘ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ.’ ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ ‘ಹಂಗೇನಿಲ್ಲಸಾರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ ೫೦೦ ರುಪಾಯಿ ಏನು ಸುಮ್ನೆ ಬರುತ್ತಾ?’
ಲೈನ್ ಮ್ಯಾನ್
ಕೆಜಿಎಫ್ ಚಿತ್ರಕ್ಕೂ, ಜೋಗಿ ಚಿತ್ರಕ್ಕೂ ಇರೋ ಹೋಲಿಕೆ ಏನು ?-ಎರಡರಲ್ಲೂ ಸುದೀಪ್ ಇಲ್ಲ !!
ಭಾರತದಲ್ಲಿ ಬಡತನ ನಿರ್ಮೂಲನೆ-ಅದಾನಿನಿಧಾನವೇ ಪ್ರಧಾನ ಕೇಳಿದ್ವಿ, ಇದೇನಿದು ಅದಾನಿಯೇ ಪ್ರಧಾನಿ?
ಕೆಜಿಎಫ್ ಚಿತ್ರದಲ್ಲಿ ರವೀನಾ ಟಂಡನ್ ಅವರ ಪಾತ್ರ ಎಷ್ಟಿದೆ?ಅವರದ್ದು ಚಿತ್ರದಲ್ಲಿ ಪ್ರಧಾನ ಪಾತ್ರ ಮತ್ತು ಪ್ರಧಾನಿ ಪಾತ್ರ
ಭೂಮಿ ಬಗ್ಗೆ ಸಾಕಷ್ಟು ತಿಳಿದುಕೊಂಡವನುಉZಠಿ ಶಾಸಜ್ಞ
ಈ ಸಲ ಐಪಿಎಲ್‌ನಲ್ಲಿ ಹೀನಾಯ ಪ್ರದರ್ಶನ ಕೊಡ್ತಾ ಇರೋ ಚೆನ್ನೈ ಮತ್ತು ಮುಂಬೈ ಮ್ಯಾಚ್ ಇರುವಾಗ ಸಮಾಧಾನ ಅಂದ್ರೆ– ಯಾರಾದ್ರೂ ಒಬ್ರೇ ಸೋಲೋಕಾಗೋದು ಅನ್ನೋದು
ಗುಟ್ಕಾ ವಿಷಯಯಶ್ – ಪ್ಯಾನ್ ಇಂಡಿಯಾ ಸ್ಟಾರ್ ಅಜಯ್ ದೇವಗನ್, ಶಾರುಖ್ ಖಾನ್ , ಅಕ್ಷಯ್ ಕುಮಾರ್- ಪಾನ್ ಇಂಡಿಯಾ ಸ್ಟಾರ್ಸ್
ಅಕ್ಷಯ್ ಕುಮಾರ್ ಅವ್ರೇ ನೀವು ಪಾನ್ ಇಂಡಿಯಾ ಸ್ಟಾರ್ ಅಂತೆ ?-ಸ್ಟಾರಾ? ಹಲೋ ನಾನು ಜಾಹೀರಾತು ಕೊಡ್ತಾ ಇರೋದು ‘ವಿಮಲ’ ಗೆ , ‘ಸ್ಟಾರ್’ ಗೆ ಅಲ್ಲ.
ಬಿಜೆಪಿ ಸಪೋರ್ಟ್ ಮಾಡೋ ಅಕ್ಷಯ್ ಕುಮಾರ್ ಬಗ್ಗೆ ಜನ ಆಡಿಕೊಳ್ತಾಇರೋದು-ಅಕ್ಷಯ್‌ಗೆ ಗೊತ್ತಿರೋದು ಎರಡೇ ಒಂದು ಕಮಲ, ಇನ್ನೊಂದು ವಿಮಲ
ಅಕ್ಷಯ್ ಕುಮಾರ್ ಅವ್ರೇ ಈ ಥರ ವಿಮಲ್ ಜಾಹೀರಾತು ನಿಮಗೆ ಸೂಟ್ ಆಗಲ್ಲ-ಅಯ್ಯೋ, ನಾನು ವಿಮಲ್ ಅಂದ್ರೆ ವಿಮಲ್ ಸೂಟಿಂಗ್ಸ್ ಜಾಹೀರಾತು ಅಂದ್ಕೊಂಡು ಒಪ್ಕೊಂಡಿದ್ದೆ.
ಆ ಸಲದ ಐಪಿಎಲ್ ನಲ್ಲಿ ಆರ್‌ಸಿಬಿ ಅಭಿಮಾನಿಗಳು ಏನ್ ಹೇಳ್ತಾ ಇದ್ದಾರೆ-ನಾವೇ ವಾಸಿ, ಈ ಸಲ ಕಪ್ ನಮ್ದೇ ಅಂತ ಹೇಳ್ತಾ ಇರ್ತೀವಿ. ಪಾಪ, ಈ ಮುಂಬೈ, ಚೆನ್ನೈ ಫ್ಯಾನ್ಸ್‌ಗೆ, ಪ್ರತಿ ಮ್ಯಾಚಿಗೂ ಮುಂಚೆ, ಈ ಸಲ ಮ್ಯಾಚ್ ನಮ್ದೆ ಅಂತ ಹೇಳ್ಕೊಂಡ್ ತಿರುಗಾಡೋ ಪರಿಸ್ಥಿತಿ ಬಂದಿದೆ.