ಕೌಟುಂಬಿಕ ಬಂಧ ಬಿಗಿಯಾಗಲಿ, ಬೆಸುಗೆ ಗಟ್ಟಿಗೊಳ್ಳಲಿ
ಶ್ವೇತಪತ್ರ
ಡಾ.ಶ್ವೇತಾ ಬಿ.ಸಿ
@.
ಕುಟುಂಬಗಳು ಮತ್ತು ನಗರೀಕರಣ 2022ರ ಧ್ಯೇಯವಾಕ್ಯ. ನಗರಗಳಲ್ಲಿ ಕೌಟುಂಬಿಕ ಸ್ನೇಹಪರತೆಯ ನೀತಿಗಳನ್ನು ರೂಪಿಸಿ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಇದರ ಗುರಿ. ಕುಟುಂಬ ಪ್ರಮುಖ ಮೂಲಭೂತ ಮಾನಸಿಕ ಅಗತ್ಯ ಗಳಲ್ಲಿ ಒಂದಾಗಿದೆ ಮತ್ತು ಜೀವನದ ಬಹುಮುಖ್ಯ ಪಾಠಗಳನ್ನು ಕಲಿಸಿಕೊಡುತ್ತವೆ.
ಕಳೆದ ಭಾನುವಾರ (ಮೇ 15) ಸ್ನೇಹಿತರ ಕಸಿನ್ಸ್‌ಗಳ ವಾಟ್ಸಪ್ ಸ್ಟೇಟಸ್‌ಗಳ ತುಂಬಾ ರಾರಾಜಿಸುತ್ತಾ ಇದ್ದದ್ದು ಫ್ಯಾಮಿಲಿ ಫೋಟೋಸ್ ಕೆಳಗೊಂದು ಕ್ಯಾಪ್ಷನ್ ಹ್ಯಾಪಿ ಇಂಟರ್‌ನ್ಯಾಷನಲ್ ಫ್ಯಾಮಿಲಿ ಅಂತ. ಯಾರದ್ದೇ ಮದುವೆ ರಿಸೆಪ್ಷನ್‌ನಲ್ಲಿ, ಎಂಗೇ ಜ್ಮೆಂಟ್‌ನಲ್ಲಿ, ಗೃಹಪ್ರವೇಶದಲ್ಲಿ ಕುಟುಂಬದವರೆಲ್ಲ ಒಟ್ಟಾಗಿ ನಿಂತು ತೆಗೆಸಿದ ಚಿತ್ರಗಳು.
ಎಲ್ಲಾ ಫ್ರೇಮ್‌ಗಳಿಗೂ ಜೀವ ತುಂಬಿದ್ದು ಮಾತ್ರ ಫೋಟೋಗೆ ಪೋಸ್ ಕೊಟ್ಟ ಪ್ರತಿ ಯೊಬ್ಬರ ನಗು. ಕುಟುಂಬದ ಎಲ್ಲರೂ ಒಟ್ಟು ಸೇರುವುದೇ ಒಂದು ಸೆಲೆಬ್ರೇಷನ್. ನಾವೆಲ್ಲಾ ನಮ್ಮ ವೈಯಕ್ತಿಕ ಬದುಕಿನ ಪ್ರಪಂಚಕ್ಕೆ ಖುಷಿಯ ತುಂಬ ಬಯಸುವವರು.ಹಾಗಾದರೆ ನಮ್ಮ ಮನೆಯನ್ನು ಕುಟುಂಬದ ಸದಸ್ಯರನ್ನು ಇನ್ನೊಂದಿಷ್ಟು ಪ್ರೀತಿ ಸೋಣ. ಬದುಕು ಮೊಳಕೆಯೊಡೆಯುವ, ಪ್ರೀತಿಯೆಂದೂ ಕೊನೆಯಾಗದ, ಒಂದು ಹಿಡಿ ನಗೆ, ಒಂದು ಬೊಗಸೆ ನೆಮ್ಮದಿ, ಎರಡು ಮೊಳ ಆತ್ಮವಿಶ್ವಾಸ ಮತ್ತು ಬುಟ್ಟಿಯಷ್ಟುಜೀವನ್ಮುಖತೆ ಕಟ್ಟಿಕೊಡುವ ಜಾಗವೇ ಕುಟುಂಬ.
ದುಡಿದು ಸೋತು ಬಂದಾಗ ಅವಮಾನಗಳನ್ನು ನುಂಗಿ ಇನ್ನು ನನ್ನ ಕೈಲಾಗಲ್ಲ ಎನಿಸಿ ದಾಗ ಕುಸಿದಾಗ ಕುಗ್ಗಿದಾಗ ನಮ್ಮನ್ನು ಸಂತೈಸಿ ಸಾಂತ್ವಾನಿಸಿ ಒಳಗೊಳ್ಳುವುದೇ ನಮ್ಮ ಕುಟುಂಬ. ನಮ್ಮೆಲ್ಲರ ಜೀವಲೋಕ ಮತ್ತು ಭಾವಲೋಕ ವಿಸ್ತರಿಸುವುದೇ ಕುಟುಂಬದ ಮೂಲಕ. ವಸುದೈವ ಕುಟುಂಬಕಂ ಇಡೀ ಜಗತ್ತೇ ಒಂದು ಕುಟುಂಬ. ಈ ಸಂದೇಶ ವನ್ನು ವಿಶ್ವಕ್ಕೆ ಸಾರಿದ್ದು ನಾವು ಭಾರತೀಯರು. ಇದರ ಮಾದರಿಯ ವಿಶ್ವ ಕುಟುಂಬ ದಿನ ಆಚರಿಸಲಾಗುತ್ತಿದೆ.
1993ರ ಮೇ 15ನ್ನು ವಿಶ್ವಸಂಸ್ಥೆ ವಿಶ್ವ ಕುಟುಂಬ ದಿನವೆಂದು ಘೋಷಿಸಿತು. ಕುಟುಂಬದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸು ವುದು ಸಾಮಾಜಿಕ ಆರ್ಥಿಕ ಬದಲಾವಣೆ ಹಾಗೂ ಆಧುನಿಕತೆಯಿಂದ ಕುಟುಂಬಗಳ ಮೇಲಾಗುವ ಪರಿಣಾಮಗಳ ಕುರಿತು ಅರಿವನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶ. 2015ರಲ್ಲಿ ರಚನೆಯಾದ 17 ಸುಸ್ಥಿರ ಅಭಿವೃದ್ಧಿ ಗುರುಗಳಲ್ಲಿಯೂ ಕುಟುಂಬಕ್ಕೆ ಮಹತ್ವ ನೀಡಲಾಗಿದೆ.
ಕುಟುಂಬಗಳು ಮತ್ತು ನಗರೀಕರಣ 2022ರ ಧ್ಯೇಯವಾಕ್ಯ. ನಗರಗಳಲ್ಲಿ ಕೌಟುಂಬಿಕ ಸ್ನೇಹಪರತೆಯ ನೀತಿಗಳನ್ನು  ರೂಪಿಸಿ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಇದರ ಗುರಿ. ಕುಟುಂಬ ಪ್ರಮುಖ ಮೂಲಭೂತ ಮಾನಸಿಕ ಅಗತ್ಯಗಳಲ್ಲಿ ಒಂದಾಗಿದೆ. ಆಧುನಿಕ ಜಗತ್ತಿನ ನಮ್ಮೆಲ್ಲರ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬದಲಾಗುತ್ತಿರುವ ಸಾಂಸ್ಕೃತಿಕ ರೂಢಿಗಳು ಹೊಸ ಆದ್ಯತೆಗಳು ಇಂಟರ್‌ನೆಟ್‌ನ ಕೊಡುಗೆಗಳಾಗಿ ಹೊಸ ಸಂಭಾಷಣೆಯ ಮಾರ್ಗಗಳು ಎಲ್ಲಾ ಹೊಸ ತಿರುವುಗಳ ನಡುವೆ ಸಹಜ ವಾಗಿ ಮೂಡುವ ಪ್ರಶ್ನೆಯೇ ಕುಟುಂಬ ಮತ್ತು ಅದರ ಪ್ರಾಮುಖ್ಯತೆ? ಬದುಕು ಎಷ್ಟೇ ಬದಲಾದರೂ ಬದಲಾಗದೇ ಇರುವ ಮಾನಸಿಕconnectionನಮ್ಮೆಲ್ಲರ ಕುಟುಂಬ.
ಕುಟುಂಬದ ಪರಿಕಲ್ಪನೆ ಮತ್ತು ವ್ಯಾಖ್ಯಾನ ಕಾಲದಿಂದ ಕಾಲಕ್ಕೆ ವಿಕಾಸಗೊಳ್ಳುತ್ತಾ ಬಂದಿದ್ದರೂ ಅದರ ಆಪ್ತತೆ ಮಾತ್ರ ಅಷ್ಟೇ ಬೆಚ್ಚಗಿನದ್ದು. ಆಧುನಿಕ ಜಗತ್ತು ನಮ್ಮ ಬದುಕಿನ ಮೇಲೆ ಅನೇಕ ಒತ್ತಡಗಳನ್ನು ಮೂಡಿಸಿದೆ ಹಾಗಾಗಿ ಹಿಂದೆಂದಿಗಿಂತಲೂ ಕುಟುಂಬದ ಜತೆ ಒಟ್ಟಾಗಿ ಬದುಕುವ ಅವಶ್ಯಕತೆ ನಮ್ಮೆಲ್ಲರಿಗಿದೆ. ನಮ್ಮದು ಎಂಬ ಒಳಗೊಳ್ಳುವಿಕೆಯ ಭಾವ ಮೂಡಿಸುವುದೇ ಕುಟುಂಬ. ನನ್ನ ಶ್ವೇತಪತ್ರದ ಮೊದಲ ಅಂಕಣ ಪ್ರೇರಣಾ ಪಿರಮಿಡ್ ಕುರಿತದ್ದಾಗಿತ್ತು.
ಅಮೆರಿಕದ ಮನೋವಿಜ್ಞಾನಿ ಅಬ್ರಹಾಂ ಮ್ಯಾಸ್ಲೋ ನೀಡಿದ ಅಗತ್ಯಗಳ ಅನುಕ್ರಮದ ಬಗ್ಗೆ ಮಾತನಾಡಿದ್ದೆ. ಮನುಷ್ಯನ ಅಗತ್ಯಗಳೇ ಅವನನ್ನು ಜೀವಂತವಾಗಿರಿಸಿ ಅವನಲ್ಲಿ ಪ್ರೇರಣೆಯನ್ನು ತುಂಬಿ ಅವರೊಳಗೊಂದು  ಹುಟ್ಟಿಸುತ್ತಾ ಅವನನ್ನು energizeಮಾಡುತ್ತ ಅವನ ಬದುಕಿಗೆ  ತುಂಬುತ್ತಿರುತ್ತವೆ. ಮನುಷ್ಯನ ಮೂಲಭೂತ ಅಗತ್ಯಗಳಾದ ಹಸಿವು, ನಿದ್ರೆ, ಗಾಳಿ, ನೀರು, ಲೈಂಗಿಕತೆಯ ಅಗತ್ಯತೆಗಳು ಪೂರೈಕೆಯಾದ ನಂತರ ಅವನನ್ನು ಕಾಡುವ ಮಾನಸಿಕ ಅಗತ್ಯವೇ ಪ್ರೀತಿ ಮತ್ತು ಸಂಬಂಧಗಳು. ಇವು ಬಹು ನಿರ್ಣಾಯಕವಾದ ಜೀವ ದ್ರವ್ಯಗಳು. ಕುಟುಂಬ ಎಂಬ ಪರಿಕಲ್ಪನೆ ನಮ್ಮ ಬದುಕಿನ ಪ್ರಮುಖ ಅಂಶ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಕುಟುಂಬದ ಪ್ರಭಾವ ಬಹು ಮುಖ್ಯವಾಗಿರುತ್ತದೆ.
ಕುಟುಂಬವನ್ನು ನಮ್ಮ ಬದುಕಿನ ಬಹುಮುಖ್ಯ ಆದ್ಯತೆಯಾಗಿಸಿಕೊಳ್ಳಬೇಕಿದೆ. ಅಪ್ಪ-ಅಮ್ಮ, ತಮ್ಮ-ತಂಗಿ, ಅಣ್ಣ-ಅತ್ತಿಗೆ, ಗಂಡ-ಹೆಂಡತಿ, ಅತ್ತೆ-ಮಾವ, ಮೈದುನ- ವಾರಗಿತ್ತಿ ಹೀಗೆ ಕೂಡು ಕುಟುಂಬದ ಬಂಧಗಳು ದೀರ್ಘಾಯಸ್ಸನ್ನು ನೀಡುವುದಲ್ಲದೇ ಉತ್ತಮ ಮಾನಸಿಕ ಆರೋಗ್ಯವನ್ನು ಬದುಕಿಗೆ ಅರ್ಥ ಹಾಗೂ ಉದ್ದೇಶವನ್ನು ತುಂಬ ಬಲ್ಲವು.1938ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾನಿಲಯವು724ಜನರನ್ನು ಒಳಗೊಂಡ ಇತಿಹಾಸದಲ್ಲಿ ಮಾನವನ ವಿಕಾಸವೆಂಬ ಒಂದು ಸುದೀರ್ಘವಾದ ಸಂಶೋಧನೆ ಯನ್ನು ಕೈಗೊಂಡಿತು. ನಮ್ಮಲ್ಲಿ ಖುಷಿಯನ್ನು ತುಂಬಬಲ್ಲ ಅಂಶಗಳೇನು ಎಂಬುದನ್ನು ನಿರ್ಧರಿಸುವುದೇ ಈ ಪ್ರಯೋಗದ ಮುಖ್ಯ ಉದ್ದೇಶವಾಗಿತ್ತು.
ಪ್ರಯೋಗದಲ್ಲಿ ಪಾಲ್ಗೊಂಡ724ಜನರ ದೈಹಿಕ ಹಾಗೂ ಮಾನಸಿಕ ಗುಣಲಕ್ಷಣಗಳು ಅವರ ಸಾಮಾಜಿಕ ಜೀವನ, ಬುದ್ಧಿಮತ್ತೆ,ಅವರ ಕಲಿಕಾ ವಿಧಾನ ಹೀಗೆ ಅವರ ಬದುಕಿನ ಎಲ್ಲಾ ಸ್ತರಗಳನ್ನು ಒಳಗೊಂಡಂತೆ ಅಧ್ಯಯನ ನಡೆಸಲಾಯಿತು. ಈ ಅಧ್ಯಯನ ವರದಿಯನ್ನು 2012ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಯಿತು ಫಲಿತಾಂಶವನ್ನು ವಿಶ್ಲೇಷಿಸಿದಾಗ ಕಂಡುಬಂದ ಮುಖ್ಯವಾದ ಅಂಶವೆಂದರೆ ಅಧ್ಯಯನಕ್ಕೆ ಒಳಪಟ್ಟ ಜನರ ಖುಷಿ ಮತ್ತು ಮಾನಸಿಕ ಆರೋಗ್ಯಕ್ಕೆ ಮುಖ್ಯವಾದ ಕಾರಣ ಕೌಟುಂಬಿಕ ಬಂಧ ಹಾಗೂ ಸಂಬಂಧಗಳ ಬೆಸುಗೆ.
ಬಾಲ್ಯ ಮತ್ತು ಹರೆಯದಲ್ಲಿ ಬೇರೆಯವರ ಜತೆಗೆ ಹೇಗೆ ಒಡನಾಡಬೇಕೆಂಬುದನ್ನು ನಮ್ಮ ಪೋಷಕರು ಹಾಗೂ ಕುಟುಂಬದವ ರಿಂದ ಕಲಿಯುತ್ತೇವೆ, ನಮ್ಮ ಸುತ್ತಲಿನವರಿನ ವರ್ತನೆ ಹಾಗೂ ಭಾವನೆಗಳನ್ನು ನಾವು ಅನುಸರಿಸುತ್ತೇವೆ. ಇದು ನಮ್ಮೊಳಗಿನ ಸಾಮಾಜಿಕತೆಯನ್ನು ಪೋಷಿಸುತ್ತ ಬದುಕಿಗೆ ತೆರೆದುಕೊಳ್ಳುವುದನ್ನು ಕಲಿಸುತ್ತದೆ. ಸಮಕಾಲೀನ ಸಮಾಜದ ಬದಲಾವಣೆಗಳಿಂದ ಕುಟುಂಬಗಳೇನು ಹೊರತಾಗಿಲ್ಲ ಕುಟುಂಬದ ರಚನೆಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿವೆ ಕಾಲದ ಜತೆಗೆ ಸಾಗಬೇಕಾದಇವತ್ತಿನ ಸಂದರ್ಭದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.
ಶಿಕ್ಷಣ ಹಾಗೂ ವೃತ್ತಿಗಳಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳು ಸಾಮಾಜಿಕ ಬದಲಾವಣೆಗಳನ್ನು ತಂದೊಡ್ಡುತ್ತಿವೆ ಇವುಗಳ ಪ್ರಭಾವ ಮತ್ತು ಪರಿಣಾಮ ಕುಟುಂಬದ ಮೇಲೂ ಉಂಟಾಗುತ್ತಿದೆ. ಭಾರತೀಯ ಸಮಾಜ ಗುರುತಿಸಿಕೊಳ್ಳುವುದೇ ಅದರ ಕೂಡ ಕುಟುಂಬವೆಂಬ ರಚನೆಯಿಂದ ಇಲ್ಲಿ ಕುಟುಂಬ ಸಾಮಾಜಿಕ ಬದುಕಿನ ಮುಖ್ಯ ಭಾಗ.
ಭಾರತೀಯರಾದ ನಾವು ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವುದಕ್ಕಿಂತ ಕುಟುಂಬದ ಭಾಗವಾಗಿ ಹೆಚ್ಚು ಗುರುತಿಸಿಕೊಡಿರುತ್ತೇವೆ. ಈ ಕೂಡು ಕುಟುಂಬದ ಪರಿಕಲ್ಪನೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ವಿಭಕ್ತ, ಸಿಂಗಲ್ ಪೇರೆಂಟ್ ಕುಟುಂಬಗಳಾಗಿ  ರೂಪಾಂತರ ಗೊಳ್ಳುತ್ತಿದೆ. ಬದಲಾವಣೆ ಜಗದ ನಿಯಮ ಬದಲಾವಣೆಗಳ ಜತೆಗೆ ನಾವು ಸಾಗಬೇಕಿದೆ. ಇವತ್ತಿನ ದಿನಕ್ಕೆ ಮನೆಯಲ್ಲಿ ಎಷ್ಟು ಜನ ಇದ್ದೇವೆ ಎಂಬುದು ಮುಖ್ಯವಾಗುವುದು ಬೇಡ ಇರುವ ಜನರು ಎಷ್ಟು ಕನೆಕ್ಟ್ ಆಗಿದ್ದೇವೆ ಒಬ್ಬರಿಗೊಬ್ಬರು ಎಷ್ಟು ಪೂರಕವಾಗಿದ್ದೇವೆ ಎಂಬುದಷ್ಟೇ ಮುಖ್ಯವಾಗಿಸಿಕೊಳ್ಳೋಣ ಆಗಷ್ಟೇ ಕುಟುಂಬ ಎಂಬ ಗಾಢತೆಗೆ ನಿಜ ಅರ್ಥ ಬರಲು ಸಾಧ್ಯ.
ಖಂಡಿತ ಕುಟುಂಬಗಳು ಇರಬೇಕು ಸಂಬಂಧಗಳ ಚೌಕಟ್ಟಿನೊಳಗೆ ಬದುಕನ್ನು ಮತ್ತೆ ಮತ್ತೆ  ಮಾಡಲು ಹೊಸ ಸಂತೋಷ ಗಳನ್ನು ಮೈ ತುಂಬಿಕೊಳ್ಳಲು. ಕುಟುಂಬಗಳಲ್ಲಿ ಸದಾ ಖುಷಿ ತುಂಬಿರಲಿಕ್ಕೆ ಸಾಧ್ಯಾನಾ? ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡ ಬಹುದು! ಸುಖಿ ಕುಟುಂಬಗಳಲ್ಲಿಯೂ ಜಗಳಗಳು ಇರುತ್ತವೆ ಭಿನ್ನಾಭಿಪ್ರಾಯಗಳು ಇರ್ತಾವೆ. ಬಡತನವಿರಬಹುದು, ಸಾಲ, ಅನಾರೋಗ್ಯ ಹೀಗೆ ಸಮಸ್ಯೆಗಳ ಪಟ್ಟಿಯೇ ಇರಬಹುದು ಆದರೆ      ಸುಖಿ ಕುಟುಂಬಗಳಲ್ಲಿ ಗೊಣ ಗಾಟಗಳಿರುವುದಿಲ್ಲ, ಮನಸ್ಸು ಅಸ್ಥಿರವಾಗಿರುವುದಿಲ್ಲ, ಯೋಚನೆಗಳಲ್ಲಿ ಸ್ಥಿರತೆ ಇರುತ್ತದೆ ಅಂದು ಪಕ್ವಯಿರುತ್ತದೆ.
ಈ ವಿವೇಕ ನಮಗೆ ಒಡಮೂಡುವುದು ಸಹಬಾಳ್ವೆಯಿಂದ ಕುಟುಂಬ ನಮಗೆ ಈ  ಗಳನ್ನ ಸದ್ದಿಲ್ಲದೇ ಕಲಿಸಿ ಬಿಡುತ್ತದೆ ಜೀವನದ ಜತೆ ಹೊಂದಿಕೊಳ್ಳಲು. ಒಬ್ಬರಿಗೊಬ್ಬರು ಹೊಂದಿಕೊಂಡು ಬದುಕುವುದು ಜೀವನದ ಚಲನೆಯಲ್ಲಿ ಬಹುಮುಖ್ಯ ಭಾಗ. ಕುಟುಂಬದ ಸದಸ್ಯರು ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಕೊಂಡಿಯಂತೆ ಬೆಸೆದುಕೊಂಡಿರುವುದು ಸಾಮಾಜಿಕ ಸಂಪರ್ಕ ಹಾಗೂ ಸಾಮಾಜಿಕ ಪ್ರಭಾವವನ್ನು ಮೂಡಿಸುತ್ತದೆ.
ಕುಟುಂಬದ ಸಂಪರ್ಕ ಹಾಗೂ ಒಡನಾಟ ವ್ಯಕ್ತಿಗೆ ಸಂಪೂರ್ಣವಾದ ಮಾನಸಿಕ ಯೋಗಕ್ಷೇಮದ ಜತೆಗೆ ಅವನ ವ್ಯಕ್ತಿತ್ವಕ್ಕೆಮೂರ್ತರೂಪವನ್ನು ಕೊಡಬಲ್ಲದೆಂದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ. ಕೌಟುಂಬಿಕ ಸಂಬಂಧದೊಳಗಿನ ಪ್ರೀತಿ ಸಲಹೆ ಕಾಳಜಿಗಳನ್ನೊಳಗೊಂಡ ಸಾಮಾಜಿಕ ಬೆಂಬಲ ವ್ಯಕ್ತಿಯ ಮನೋಸಾಮಾಜಿಕ ವರ್ತನಾತ್ಮಕ ದೈಹಿಕ ಯೋಗಕ್ಷೇಮಗಳಿಗೆ ಸಕಾರಾತ್ಮಕ ಮಾರ್ಗವಾಗಿದೆ.
 ಮತ್ತು  ಎನ್ನುವ ಮನೋವಿಜ್ಞಾನಿಗಳು 2003ರಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡು ಬಂದ ಸೂಕ್ಷ್ಮ ವಿಷಯ ವೇನೆಂದರೆ ಕುಟುಂಬದ ಸಂಪೂರ್ಣ ಸಹಕಾರ ಮತ್ತು ಬೆಂಬಲ ದೊರೆತ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆಶಾವಾದ, ಸಕಾರಾತ್ಮಕ ಮನೋಭಾವಗಳು ಹೆಚ್ಚಾಗಿರುವುದನ್ನು ಗುರುತಿಸಬಹುದಾಗಿದೆ. ವಿಶ್ವಕುಟುಂಬ ದಿನದ ನೆಪದಲ್ಲಿ ಬರೆಯುತ್ತಿರುವ ಈ ಲೇಖನ ಬದುಕಿನುದ್ದಕ್ಕೂ ಕುಟುಂಬ ನಮ್ಮನ್ನು ಹೇಗೆ ಹುರಿದುಂಬಿಸಬಲ್ಲದು ಎಂಬುದನ್ನು ಮತ್ತೆ ನೆನಪಿಸ ಲಷ್ಟೇ.
ಕುಟುಂಬ ಭವಿಷ್ಯದ ಸಂಬಂಧಗಳಿಗೆ ಒಂದು ವೇದಿಕೆಯನ್ನು ಒದಗಿಸಿಕೊಡುತ್ತದೆ. ಆ ಮೂಲಕ ನಮ್ಮ ಮಕ್ಕಳು ಅವರ ಮಕ್ಕಳು ಸಂಬಂಧಗಳ ಬಗೆಗೆ ನಂಬಿಕೆಗಳನ್ನು ಮತ್ತೆ ಗಟ್ಟಿಗೊಳಿಸಿಕೊಳ್ಳುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ, ಭಾವನಾತ್ಮಕ, ಆರ್ಥಿಕ ಬೆಂಬಲಕ್ಕೆ ಕುಟುಂಬದ ಪ್ರೀತಿ ಮತ್ತು ಪ್ರೋತ್ಸಾಹ ಬಹುಮುಖ್ಯವಾದದ್ದು. ಕುಟುಂಬಗಳು ಆತ್ಮೀಯತೆಯ ಮೂಲ ಅಂಶಗಳು. ಆತಂಕ, ಬೇಜಾರು, ಒಂಟಿತನ ಕಾಡಿದಾಗ ಬದುಕಿಗೆ ಭರವಸೆ ತುಂಬುವುದು ನಮ್ಮ ಕುಟುಂಬಗಳು. ನಾವು ಎಂಬ ಸುರಕ್ಷಿತ ಭಾವ ಮೂಡುವುದೇ ಕುಟುಂಬದ ಮೂಲಕ.
ನಟಿ ಶ್ರೀದೇವಿ ಅಭಿನಯದ  ಸಿನೆಮಾದ ಕುಟುಂಬದ ಕುರಿತಾದ ಸಂಭಾಷಣೆಯೊಂದು ಅರ್ಥಪೂರ್ಣ ವೆನಿಸಿ ನೆನಪಾಗುತ್ತಿದೆ- ಬದುಕನ್ನು ಸುಂದರವಾಗಿಸುವ ಸಂಬಂಧಗಳ ಸೇತುವೆಯ ಕುಟುಂಬ ಇಷ್ಟು ದೊಡ್ಡ ಪ್ರಪಂಚದಲ್ಲಿ ನಮ್ಮದೇ ಆದ ಪುಟ್ಟ ಪ್ರಪಂಚವೇ ಕುಟುಂಬ ಅಲ್ಲಿ ಯಾವಾಗಲೂ ಒಳಿತುಗಳಿರುತ್ತವೆ.     .
ಹೀಗೆ ಕುಟುಂಬಗಳು ಜೀವನದ ಬಹುಮುಖ್ಯ ಪಾಠಗಳನ್ನು ಮೌಲ್ಯಗಳನ್ನು ಕಲಿಸಿಕೊಡುತ್ತವೆ. ಹೊಸ ಜಗತ್ತಿನ ಹಲವು ದಿಕ್ಕುಗಳ ಗಾಳಿ ಬೆಳಕಿಗೆ ತೆರೆದುಕೊಂಡಿರುವ ನಾವುಗಳು ಕೌಟುಂಬಿಕ ಬಂಧಗಳನ್ನು ಸಂಬಂಧಗಳನ್ನು ಸಂಭ್ರಮಿ ಸೋಣ.