ಡೈರಿ ಬರೆಯುವುದು ಒಳ್ಳೆಯ ಹವ್ಯಾಸ, ಆದರೆ…
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
೧೯೧೨ರಲ್ಲಿ ಕಾಫ್ಕಾ ಡೈರಿಯಲ್ಲಿ ಬರೆದ ಸಾಲುಗಳು ಪ್ರಸಿದ್ಧ. ’ ’ ಎಂದಷ್ಟೇ ಅವರು ಬರೆದಿದ್ದರು. ಅಮೆರಿಕದ ಅಧ್ಯಕ್ಷರಾದವರ ಪರವಾಗಿ ಅವರ ಸೆಕ್ರೆಟರಿಗಳು ಬರೆದ ಡೈರಿಗಳು    ಎಂದು ಪ್ರಕಟವಾಗಿವೆ. ಈ ಡೈರಿಗಳಲ್ಲಿ ಅವರ ಕಾರ್ಯಕ್ರಮ, ಮೀಟಿಂಗ್‌ ಗಳ ಬಗ್ಗೆ ಪ್ರಸ್ತಾಪವಿದೆಯೇ ಹೊರತು ಖಾಸಗಿ ಸಂಗತಿಗಳ ವಿವರಗಳಿಲ್ಲದಿರುವುದರಿಂದ ನೀರಸ.
‘ಎಲ್ಲರೂ ಓದುವ ಸಾಹಿತ್ಯವೆಂದರೆ ಪತ್ರ ಸಾಹಿತ್ಯ’ ಎಂದು ಪತ್ರಕರ್ತ ವೈಯೆನ್ಕೆ ಹೇಳುತ್ತಿದ್ದರು. ‘ಅತ್ಯಂತ ಜನಪ್ರಿಯ ಸಾಹಿತ್ಯ ಅಂದ್ರೆ ಪ್ರೇಮ ಪತ್ರ ಸಾಹಿತ್ಯ’ ಎಂಬುದೂ ಅವರ ಉಕ್ತಿಯೇ. ‘ಆಕೆ ನನಗೆ (ಪ್ರೇಮ) ಪತ್ರ ಬರೆದಿದ್ದಳು, ನನಗೆ ಓದಲು ಆಗಿಲ್ಲ. ಓದಲು ಪುರಸೊತ್ತು ಸಿಕ್ಕಿಲ್ಲ’ ಎಂದು ಯಾರೂ ಹೇಳಲಿಕ್ಕಿಲ್ಲ. ಪತ್ರವನ್ನು ಯಾರೇ ಬರೆಯಲಿ, ಅದನ್ನು ಎಲ್ಲರೂ ಓದಲು ತವಕಿಸುತ್ತಾರೆ.
ಬೇರೆಯವರ ಪತ್ರವನ್ನು ಓದುವುದು ಕೆಟ್ಟ ಅಭ್ಯಾಸ ಎಂಬುದು ಗೊತ್ತಿದ್ದರೂ, ಅವುಗಳನ್ನು ಓದದಿರಲು ಸಾಧ್ಯವೇ ಇಲ್ಲ. ಪತ್ರ ಬರೆದವರು ಯಾರೇ ಇರಲಿ, ಅದನ್ನು ಓದದಿದ್ದರೆ ಸಮಾಧಾನವಿಲ್ಲ. ಕೆಲ ವರ್ಷದ ಹಿಂದೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಖ್ಯಾತ ಸಾಹಿತಿಗಳು ಅಂದಿನ ತಮ್ಮ ಸಮಕಾಲೀನ ಮಿತ್ರರಿಗೆ, ಸಾಹಿತಿಗಳಿಗೆ ಬರೆದ ಪತ್ರಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿತ್ತು. ಆ ಎಲ್ಲ ಪತ್ರಗಳನ್ನು ಓದಿ ನಾನು    ಎಂದು ಸಮಾಧಾನ ಪಟ್ಟುಕೊಂಡೆ.
ಅನಂತಮೂರ್ತಿಯವರು ಕುರ್ತಕೋಟಿ ಅವರಿಗೆ ಬರೆದ ಪತ್ರದಲ್ಲಿ ‘ನೀವು ನನ್ನ ಮಾತಿಗೆ ಕೆಂಪು ಶಾಯಿಯಲ್ಲಿ ಷರಾ ಬರೆದಿದ್ದೀರಿ ಎಂದು ಭಾವಿಸಿದ್ದೆ. ಆದರೆ ಕೊನೆಯಲ್ಲಿ ಅದು ಎಲೆ ಅಡಕೆ ಜಗಿಯುವಾಗ ಬಿದ್ದ ನಿಮ್ಮ ಉಗುಳು ಎಂಬುದು ತಿಳಿಯಿತು’ ಎಂದು ಬರೆದಿದ್ದರು. ಯಾರದೇ ಪತ್ರವಿರಬಹುದು ಅದು ನೀರಸ ಎಂಬುದಿಲ್ಲ. ಪ್ರತಿ ಪತ್ರಕ್ಕೂ ಕನಿಷ್ಠ ಒಬ್ಬ ಓದುಗ (ಯಾರಿಗೆ ಬರೆದಿದ್ದೋ ಅವರು)ನಾದರೂ ಇರುತ್ತಾನೆ, ಇರುತ್ತಾಳೆ, ಸಾಲಗಾರ ಬರೆದ ಪತ್ರಕ್ಕೂ. ಪತ್ರ ಸಾಹಿತ್ಯದ ಬಗ್ಗೆ ಮಹಾಪ್ರಬಂಧ ಬರೆದ ಪೊಲೀಸ್ ನಿವೃತ್ತ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ ಈ ವಿಷಯದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬಹುದು.
ಪತ್ರದಷ್ಟೇ ಕುತೂಹಲಕರ ಸಾಹಿತ್ಯ ಅಂದ್ರೆ ಡೈರಿ ಸಾಹಿತ್ಯ. ಪತ್ರದಲ್ಲಿ ಕೃತ್ರಿಮವಿದ್ದೀತು. ಆದರೆ ಡೈರಿ ಮಾತ್ರ ಅಪ್ಪಟ ನಿಜ. ನಾವು ಬೇರೆಯವರಿಗೆ ಬರೆದಿದ್ದು ಪತ್ರ. ನಮಗೆ ನಾವೇ ಬರೆದುಕೊಂಡಿದ್ದು ಡೈರಿ. ಹೀಗಾಗಿ ಪ್ರತಿ ಡೈರಿಯೂ ಸ್ಫೋಟಕ. ಹೀಗಾಗಿ ಡೈರಿಯನ್ನು ಎಲ್ಲರೂ ಯಾರ ಕೈಗೂ ಸಿಗದಂತೆ ಅಡಗಿಸಿ ಇಡುತ್ತಾರೆ. ಇದು ಬೇರೆಯವರ ಕೈಗೆ ಸಿಕ್ಕರೆ ಫಜೀತಿ. ಈ ಕಾರಣಕ್ಕೆ ಬಹುತೇಕ ಮಂದಿ ಡೈರಿ ಬರೆಯುವುದೇ ಇಲ್ಲ. ಡೈರಿ ಬರೆಯುವುದು ಒಳ್ಳೆಯ ಅಭ್ಯಾಸ ಎಂದು ಗೊತ್ತಿದ್ದರೂ, ಈ ಅಭ್ಯಾಸವನ್ನು ಯಾರೂ ರೂಢಿಸಿಕೊಳ್ಳದಿರಲು ಇದೇ ಕಾರಣ.
ಡೈರಿ ಬೇರೆಯವರಿಗೆ ಸಿಕ್ಕರೆ, ಓದಿದರೆ ಫಜೀತಿಯೆಂಬ ಕಾರಣಕ್ಕಾಗಿ ಎಲ್ಲರೂ ಸಂಕೇತ, ಸಂಕೇತಾಕ್ಷರ, ಸಂಕ್ಷಿಪ್ತ ರೂಪಗಳಲ್ಲಿ ಬರೆಯುತ್ತಾರೆ. ಇದು ಮತ್ತಷ್ಟು ಕುತೂಹಲ, ಗೊಂದಲ, ಸಂದೇಹಗಳಿಗೆ ಎಡೆ ಮಾಡಿಕೊಡುವುದುಂಟು.     ಎಂಬ ಮಹತ್ವದ ಕೃತಿ ಬರೆದ ಲೂಯಿಸ್ ಕೆರೊಲ್, 1855ರಿಂದ 1897ರವರೆಗೆ, ಬರೆದ ಡೈರಿಗಳನ್ನೆಲ್ಲ ಸೇರಿಸಿ, ಹದಿಮೂರು ಸಂಪುಟಗಳಲ್ಲಿ, ಪ್ರಕಟಿಸಲಾಗಿದೆ. ಆನೆ ಫ್ರಾಂಕ್ ಬರೆದ ಡೈರಿಯನ್ನು ಓದದ ವರು ಇರಲಿಕ್ಕಿಲ್ಲ. ಅದು ಜಗತ್ತಿನ 70 ಭಾಷೆಗಳಿಗೆ ಅನುವಾದಗೊಂಡಿದೆ.
ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ನ ಕೊನೆಯ ಗರ್ಲ್ ಫ್ರೆಂಡ್ ಜೊಹಾನ್ನಾ ಫಾಂಟೊವಾಬರೆದ 62 ಪುಟಗಳ ಮೂಲಡೈರಿ ಪ್ರತಿ ಹರಾಜಿನಲ್ಲೂ ಕೋಟ್ಯಂತರ ಡಾಲರ್‌ಗೆ ಬಿಕರಿಯಾಗುತ್ತಿದೆ. ಈ ಡೈರಿಯಲ್ಲಿ ಐನ್‌ಸ್ಟೈನ್ ಆಕೆಗೆ ಬರೆದ ಒಂದು ಕವನವೂ ಇದೆ.                    .       ಎಂದು ಆಕೆ ಬರೆಯು ತ್ತಾಳೆ. ನೆಹರು ಹೊರತಾಗಿ ಬೇರೆ ಯಾವ ರಾಜಕಾರಣಿಗಳಿಗೂ ಡೈರಿ ಬರೆಯುವ ಹವ್ಯಾಸವಿರಲಿಲ್ಲ. ಪ್ರಧಾನಿಯಾದ ನಂತರ ಅದನ್ನೂ ಅವರು ನಿಲ್ಲಿಸಿದರು. ರಾಮಮನೋಹರ ಲೋಹಿಯಾ ನಿರಂತರವಾಗಿ ಅಲ್ಲದಿದ್ದರೂ ಆಗಾಗ ಬರೆದಿದ್ದುಂಟು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಡೈರಿ ಅಭ್ಯಾಸ ಇಟ್ಟುಕೊಂಡಿದ್ದರು. ಅವರು ಡೈರಿಯಲ್ಲಿ ಪ್ರಸ್ತಾಪಿಸಿದ ಕೆಲವು ಪ್ರಸಂಗಗಳನ್ನು ತಮ್ಮ ಆತ್ಮಕಥೆಯಲ್ಲಿ ಮೆಲುಕು ಹಾಕಿದ್ದಾರೆ.
1912ರಲ್ಲಿ ಕಾಫ್ಕಾ ಡೈರಿಯಲ್ಲಿ ಬರೆದ ಸಾಲುಗಳು ಪ್ರಸಿದ್ಧ. ’ ’ ಎಂದಷ್ಟೇ ಅವರು ಬರೆದಿದ್ದರು. ಡೈರಿ ಬರೆಯುವ ಅಪಾಯದ ಬಗ್ಗೆ ಅವರಿಗೆ ಗೊತ್ತಿದ್ದಿರಬಹುದು. ಅಮೆರಿಕದ ಅಧ್ಯಕ್ಷರಾದವರ ಪರವಾಗಿ ಅವರ ಸೆಕ್ರೆಟರಿಗಳು ಬರೆದ ಡೈರಿಗಳು    ಎಂದು ಪ್ರಕಟ ವಾಗಿವೆ. ಈ ಡೈರಿಗಳಲ್ಲಿ ಅವರ ಕಾರ್ಯಕ್ರಮ, ಮೀಟಿಂಗ್‌ಗಳ ಬಗ್ಗೆ ಪ್ರಸ್ತಾಪವಿದೆಯೇ ಹೊರತು ಖಾಸಗಿ ಸಂಗತಿಗಳ ವಿವರಗಳಿಲ್ಲದಿರುವುದರಿಂದ ನೀರಸ. ಜಾರ್ಜ್ ವಾಷಿಂಗ್ಟನ್ ಹಾಗೂ ಜಾನ್ ಆಡಮ್ಸ್ ಬರೆದ ಡೈರಿಗಳು ಮಾತ್ರ ಆಗಾಗ ಪ್ರಸ್ತಾಪವಾಗುತ್ತಿರುತ್ತವೆ.
ಡೈರಿ ಬರೆಯುವ ಅಭ್ಯಾಸ ಎಂಥ ಅಪಾಯಕಾರಿ ಎಂಬುದು ಕರ್ನಾಟಕದ ರಾಜಕಾರಣಿಗಳಿಗೆ ಮತ್ತೊಮ್ಮೆ ಮನವರಿಕೆಯಾಗಿದೆ. ಡೈರಿ ಬರೆಯುವುದು ಒಳ್ಳೆಯ ಅಭ್ಯಾಸವೇ. ಆದರೆ ಏನು ಬರೆಯಬೇಕೆಂಬುದು ಗೊತ್ತಿರಬೇಕಷ್ಟೇ.
ಮೂರು ಮುದುಕರು
ಓಶೋ ಹೇಳಿದ ಈ ಮೂವರು ವೃದ್ಧರ ಕತೆಯನ್ನು ಕೇಳಿ. ಒಬ್ಬರಿಗೆ ಎಪ್ಪತ್ತು ವರ್ಷ, ಮತ್ತೊಬ್ಬರಿಗೆ ಎಂಬತ್ತು, ಮೂರನೆಯವರಿಗೆ ತೊಂಬತ್ತು ವರ್ಷ. ಮೂರೂ ಜನ ಸ್ನೇಹಿತರು ನಿವೃತ್ತರಾಗಿ, ಪಾರ್ಕಿನಲ್ಲಿ ಸುತ್ತಾಡಿ ಕಲ್ಲು ಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಅವರಲ್ಲೇ ಕಿರಿಯರಾದ ಎಪ್ಪತ್ತರ ವೃದ್ಧರು ತುಂಬಾ ಬೇಸರಗೊಂಡವರಂತೆ ಇದ್ದರು. ಎಂಬತ್ತರ ವೃದ್ಧರು ಅವರನ್ನು ಕುರಿತು, ‘ಏನು ವಿಷಯ? ತುಂಬಾ ಬೇಸರದಲ್ಲಿರುವಂತಿದೆಯಲ್ಲ?’ ಎಂದರು.ಆಗ ಆ ಎಪ್ಪತ್ತರ ವೃದ್ಧರು ಹೇಳಿದರು ‘ನನಗೆ ತುಂಬಾ ಅಪರಾಧಿ ಭಾವ ಕಾಡುತ್ತಿದೆ. ನಿಮ್ಮೊಡನೆ ಹಂಚಿಕೊಂಡರೆ ಸ್ವಲ್ಪ ಭಾರ ಕಡಿಮೆಯಾಗಬಹುದೇನೋ. ಒಂದು ಘಟನೆ ನಡೆಯಿತು. ಒಂದು ಸುಂದರವಾದ ಹೆಣ್ಣು ನಮ್ಮ ಮನೆಗೆ ಅತಿಥಿಯಾಗಿ ಬಂದಿದ್ದಳು. ಆಕೆ ಸ್ನಾನ ಮಾಡುತ್ತಿರುವಾಗ ಸ್ನಾನದ ಮನೆಯ ಕಿಂಡಿ ಯೊಂದರಿಂದ ನಾನು ನೋಡುತ್ತಾ ನಮ್ಮ ತಾಯಿಯ ಕೈಗೆ ಸಿಕ್ಕಿಬಿದ್ದೆ’.
ಅವರ ಮಾತು ಕೇಳಿ ವಯಸ್ಸಾದ ಇನ್ನಿಬ್ಬರು ಮಿತ್ರರು ಬಾಯಿ ತುಂಬಾ ನಕ್ಕರು. ನಂತರ ‘ನೀನೊಬ್ಬ ಮೂರ್ಖ, ಎಲ್ಲರೂ ಚಿಕ್ಕಂದಿನಲ್ಲಿ ಹೀಗೆಯೇ ಮಾಡಿರು ತ್ತಾರೆ’ ಎಂದರು. ಆಗ ಅವರು ‘ಇದು ಚಿಕ್ಕ ವಯಸ್ಸಿನಲ್ಲಿ ಆಗಿದ್ದಲ್ಲ. ಇಂದು ಬೆಳಗ್ಗೆ ನಡೆದ ಘಟನೆ’ ಎಂದರು. ಎರಡನೆಯವರು ಆಗ ‘ಹಾಗಿದ್ದರೆ ಅದು ಗಂಭೀರ ವಾದುದೇ. ಹೀಗೆ ನನಗೂ ಕಳೆದ ಮೂರು ದಿನಗಳಿಂದ ಆಗುತ್ತಿರುವ ಅನುಭವ ಹೇಳುತ್ತೇನೆ ಕೇಳು. ಅದನ್ನು ನನ್ನ ಹೃದಯದಲ್ಲೇ ಭಾರವಾದ ಬಂಡೆಯಂತೆ ಇಟ್ಟುಕೊಂಡಿ ದ್ದೇನೆ.
ಕಳೆದ ಮೂರು ದಿನಗಳಿಂದ ನನ್ನ ಪತ್ನಿ ಪ್ರಣಯದಾಟಕ್ಕೆ ನಿರಾಕರಿಸುತ್ತಲೇ ಇದ್ದಾಳೆ’ ಎಂದರು. ಆಗ ಮೊದಲನೆಯವರು ‘ಇದು ನಿಜಕ್ಕೂ ಕೆಟ್ಟ ಸಂಗತಿಯೇ’ಎಂದರು. ಆಗ ತೊಂಬತ್ತರ ವೃದ್ಧರು ಜೋರಾಗಿ ನಗುತ್ತಾ ‘ಮೊದಲು ಅವನ ಪ್ರಣಯದಾಟ ಏನು ಎನ್ನುವುದನ್ನು ಕೇಳು’ ಎಂದರು. ಹಾಗೆ ಕೇಳಿದಾಗ ಎರಡನೆ ಯವರು, ಸವಿಸ್ತಾರವಾಗಿ ‘ನಾನು ಅವಳಿಂದ ಹೆಚ್ಚೇನೂ ಕೇಳುವುದಿಲ್ಲ. ನನ್ನನ್ನು ಹೆಚ್ಚು ಮುಜುಗರಕ್ಕೆ ಸಿಲುಕಿಸಬೇಡಿ. ಅದೊಂದು ಸರಳವಾದ ಕ್ರಿಯೆ. ನನ್ನ ಹೆಂಡತಿಯ ಕೈ ಹಿಡಿದು, ಮೂರು ಬಾರಿ ಅಮುಕುತ್ತೇನೆ. ನಂತರ ಅವಳೂ ನಿದ್ದೆ ಹೋಗುತ್ತಾಳೆ. ನಾನೂ ನಿದ್ದೆಗೆ ಜಾರಿಕೊಳ್ಳುತ್ತೇನೆ. ಆದರೆ ಕಳೆದ ಮೂರು ದಿನಗಳಿಂದ, ನಾನು ಕೈ ಹಿಡಿಯಲು ಹೋದಾಗೆಲ್ಲ, ಅವಳು ‘ಇವತ್ತು ಬೇಡ, ಇಂದು ಬೇಡ! ನನಗೆ ನಾಚಿಕೆಯಾಗುತ್ತಿದೆ. ನಿಮಗೂ ವಯಸ್ಸಾಯಿತು, ಇಂದು ಬೇಡ’ ಎಂದು ಬಿಡುತ್ತಾಳೆ.
ಹೀಗೆ ಕಳೆದ ಮೂರು ದಿನಗಳಿಂದ ಆಕೆಯೊಂದಿಗೆ ಪ್ರಣಯದಾಟದಲ್ಲಿ ತೊಡಗುವುದು ನನಗೆ ಸಾಧ್ಯವಾಗಿಲ್ಲ’ ಎಂದರು. ಆಗ ತೊಂಬತ್ತರ ವೃದ್ಧರು ಹೇಳಿದರು, ‘ಇದೆಲ್ಲಾ ಸಮಸ್ಯೆಯೇ ಅಲ್ಲ. ನನಗೆ ಆಗುತ್ತಿರುವುದನ್ನು ನಿಮ್ಮೆದುರು ನಾನು ಹೇಳಿಕೊಳ್ಳಲೇಬೇಕು. ನಿಮಗಿನ್ನೂ ಚಿಕ್ಕ ವಯಸ್ಸು. ಆದ್ದರಿಂದ ಈ ಅನುಭವ ನಿಮಗೆ ಖಂಡಿತಾ ಮುಂದೆ ಉಪಯೋಗವಾಗುತ್ತದೆ. ಕಳೆದ ರಾತ್ರಿ, ಬಹುತೇಕ ರಾತ್ರಿ ಕಳೆದು ಬೆಳಗಾಗುವ ಸಮಯದಲ್ಲಿ ನಾನು ನನ್ನ ಪತ್ನಿಯೊಂದಿಗೆ ರತಿಕ್ರೀಡೆ ಆರಂಭಿಸಿದೆ. ಕೂಡಲೇ ಅವಳು, ‘ಅಯ್ಯೋ ಮೂರ್ಖ! ಇದೇನು ಮಾಡುತ್ತಿರುವೆ?’ ಎಂದು ರೇಗಿದಳು.
ನಾನೂ ‘ನನಗೆ ಬೇಕೆನಿಸಿತು, ಆದ್ದರಿಂದ ನಿನ್ನೊಡನೆಯೇ ಪ್ರಣಯ ಚೇಷ್ಟೆ ಆರಂಭಿಸಿದೆ’ ಎಂದೆ. ಅವಳು ‘ಇದು ಈ ರಾತ್ರಿಯಲ್ಲಿ ಮೂರನೇ ಸಲ. ನೀನೂ ನಿದ್ದೆ ಮಾಡುವುದಿಲ್ಲ, ನನಗೂ ನಿದ್ರಿಸಲು ಬಿಡುವುದಿಲ್ಲ. ರಾತ್ರಿಯೆಲ್ಲಾ ಹೀಗೆ ರತಿಕ್ರೀಡೆಯಾಡುತ್ತಿದ್ದರೆ ಹೇಗೆ’ ಎಂದು ಕೂಗಾಡಿದಳು. ಈಗ ನನಗನ್ನಿಸುತ್ತಿದೆ ‘ನನಗೆ ಅರಳು ಮರುಳು ಉಂಟಾಗಿರಬೇಕು. ನೆನಪಿನ ಶಕ್ತಿ ಕ್ಷೀಣಿಸುತ್ತಿದೆ. ನಿಮ್ಮ ಸಮಸ್ಯೆಗಳು ಇದರ ಮುಂದೆ ಏನೂ ಅಲ್ಲ. ನನ್ನ ನೆನಪಿನ ಶಕ್ತಿಯೇ ಹೊರಟು ಹೋಗು ತ್ತಿದೆ’ ಎಂದರು.
ಯಾರು ಹೇಳಿ? ವೃದ್ಧ ವೇಲುಗೆ ಬಹಳ ಬೇಸರವಾಗಿ ‘ನಾನು ಜಪಾನ್‌ಗೆ ಹೋಗಿ ಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ. ಮಗ ಹೇಳುವಷ್ಟು ಹೇಳಿದ. ವೇಲು ಕೇಳದಿದ್ದಾಗ ಮಗ ‘ಹೇಗೆ ಹೋಗುತ್ತೀಯಾ?’ ಎಂದು ಕೇಳಿದ. ‘ನನ್ನ ದೋಣಿಯಲ್ಲಿ ನಿಧಾನ ಹುಟ್ಟು ಹಾಕುತ್ತಾ ಹೋಗುತ್ತೇನೆ’ ಎಂದ ವೇಲು. ಅವನನ್ನುಬೀಳ್ಕೊಡಲು ಮನೆಯವರೆಲ್ಲ ಹೋದರು. ವೇಲುಗೆ ಕಾಣದಂತೆ ಉದ್ದ ಹಗ್ಗವನ್ನು ದೋಣಿಗೆ ಕಟ್ಟಿ ಇನ್ನೊಂದು ತುದಿಯನ್ನು ಗೂಟಕ್ಕೆ ಕಟ್ಟಿದರು. ಸ್ವಲ್ಪ ಹೊತ್ತಿನನಂತರ ಮನೆಮಂದಿಗೆ ಗಾಬರಿಯಾಗಿ ವಾಪಸ್ ಹೋಗಿ ‘ವೇಲು ಹೇಗಿದ್ದೀಯಾ?’ ಎಂದು ಕೂಗಿದರು. ವೇಲುಗೆ ದನಿ ಎತ್ತ ಕಡೆಯಿಂದ ಬಂತೆಂಬುದು ತಿಳಿಯಲಿಲ್ಲ. ಜೋರಾಗಿ ಕೂಗಿದ -‘ನಾನು ಜಪಾನ್‌ನಲ್ಲಿ ಇದ್ದೇನೆ. ಇಲ್ಲಿ ನನ್ನ ಹೆಸರನ್ನು ಕೂಗುವವರು ಯಾರು?’
ಏನು ವ್ಯತ್ಯಾಸ?
ದೇವರಿಗೂ ಹೆಂಡತಿಗೂ ವ್ಯತ್ಯಾಸ ವಿರಲೇಬೇಕು. ವ್ಯತ್ಯಾಸವಿಲ್ಲದಿದ್ದರೆ ಹೆಂಡತಿಯೇ ದೇವರು ಎನಿಸಿಕೊಳ್ಳುತ್ತಿದ್ದಳು. ಹಾಗಾದರೆ ದೇವರಿಗೂ ಹೆಂಡತಿಗೂ ಇರುವ ವ್ಯತ್ಯಾಸವಾದರೂ ಏನು? ನಾವು ತಿನ್ನುವ ಪ್ರತಿ ಅನ್ನದ ಅಗುಳನ್ನು ದೇವರು ನಿರ್ಧರಿಸುತ್ತಾನಂತೆ. ಅವನ ನಿರ್ದೇಶನವಿಲ್ಲದೆ ನಾವು ಏನನ್ನೂ ತಿನ್ನುವು ದಿಲ್ಲವಂತೆ. ಆದರೆ ಅದು ಬಿರಿಯಾನಿನಾ ಅಥವಾ ಚಿತ್ರಾನ್ನವಾ ಎಂಬುದನ್ನು ಹೆಂಡತಿ ನಿರ್ಧಾರ ಮಾಡುತ್ತಾಳಂತೆ. ಇದೇ ವ್ಯತ್ಯಾಸ.
ಯಾವುದು ಅಪಾಯಕಾರಿ?ಬಿಯರ್‌ಗಿಂತ ಟೀ ಹೆಚ್ಚು ಡೇಂಜರಸ್! ಹೇಗೆ ಗೊತ್ತಾ? ನಿನ್ನೆ ಮಧ್ಯರಾತ್ರಿ ಒಂದು ಗಂಟೆ ತನಕ ಪಬ್ ನಲ್ಲಿ ಎಂಟು ಬಾಟಲಿ ಬಿಯರ್ ಕುಡಿದೆ. ನನ್ನ ಹೆಂಡತಿಮನೆಯಲ್ಲಿ ಟೀ ಕುಡಿಯುತ್ತಿದ್ದಳು. ನಾನು ಮನೆಗೆ ಹೋಗುತ್ತಿದ್ದಂತೆ ಆಕೆ ರೌದ್ರಾವತಾರ ತಾಳಿದಳು. ಬಾಯಿಗೆ ಬಂದಂತೆ ಬಯ್ಯಲಾರಂಭಿಸಿದಳು. ‘ಇಂದು ಯಾವುದಕ್ಕೂ ಒಂದು ತೀರ್ಮಾನ ಆಗಲೇಬೇಕು. ಒಂದೋ ನಾನಿರಬೇಕು, ಇಲ್ಲ ನೀವಿರಬೇಕು’ ಎಂದು ಕೂಗಲಾರಂಭಿಸಿದಳು. ನಾನು ಶಾಂತವಾಗಿದ್ದೆ. ಆಕೆಯ ಎಲ್ಲ ಬಯ್ಗುಳಗಳನ್ನೂ ಕೇಳಿಸಿಕೊಂಡೆ.
ಆದರೆ ಅವಳ ಕೂಗಾಟ, ಕಿರುಚಾಟ ನಿಂತಿರಲಿಲ್ಲ. ಕೇಳುವಷ್ಟು ಕೇಳಿ, ನಂತರ ಸುಮ್ಮನೆ ಬೆಡ್‌ರೂಮಿಗೆ ಹೋಗಿ ಮಲಗಿದೆ. ಆದರೆ ಆಕೆಯ ಬಯ್ಗುಳ ಮಾತ್ರ ನಿಂತಿರಲಿಲ್ಲ. ನಾನು ಹೇಳ್ತೀನಿ, ಟೀ ಬಹಳ ಅಪಾಯಕಾರಿ. (ಬೆಂಗಳೂರಿನ ಪಬ್ ಒಂದರಲ್ಲಿ ಕಾಣಿಸಿದ ಪೋಸ್ಟರ್ ಇದು. ಗುಂಡುಗಲಿ ಮಿತ್ರರೊಬ್ಬರು ಕಳಿಸಿದ್ದು)
ಹೆಸರೇನು? ಒಳ್ಳೆಯ ಹೆಸರೇನು?ಈ ಪ್ರಯೋಗ ಚಾಲ್ತಿಯಲ್ಲಿರೋದು ಭಾರತೀಯರಲ್ಲಿ ಮಾತ್ರ. ಅಪರಿಚಿತರು ಭೇಟಿಯಾದಾಗ ಇಂಗ್ಲಿಷಿನಲ್ಲಿ ’’   ?’’ ಎಂದು ಕೇಳುತ್ತಾರೆ. ಜಗತ್ತಿನ ಬೇರೆ ಯಾವ ದೇಶದಲ್ಲೂ ಇಂಗ್ಲಿಷಿನಲ್ಲಿ ಹೀಗೆ ಕೇಳುವುದಿಲ್ಲ. ಕನ್ನಡದಲ್ಲೂ ‘ನಿಮ್ಮ ಹೆಸರೇನು?’ ಎಂದು ಕೇಳುತ್ತೇವೆ. ಅದೇ ಹಿಂದಿಯಲ್ಲಿ ‘ಆಪ್ ಕಾ ಶುಭ್ ನಾಮ್ ಕ್ಯಾ?’ ಎಂದು ಕೇಳುವುದು ಸಂಪ್ರದಾಯ. ಹಿಂದಿಯ ಶುಭನಾಮ್ ಇಂಗ್ಲಿಷಿನಲ್ಲಿ   ಆಗಿರಲಿಕ್ಕೆ ಸಾಕು. ಎಲ್ಲ ತಂದೆ-ತಾಯಿ ಗಳೂ ತಮ್ಮ ಮಕ್ಕಳಿಗೆ ಒಳ್ಳೆಯ ಹೆಸರನ್ನೇ ಇಟ್ಟಿರುತ್ತಾರೆ.
ಅಷ್ಟಕ್ಕೂ ಕೆಟ್ಟ ಹೆಸರು ಎಂಬುದು ಇಲ್ಲವೇ ಇಲ್ಲ. ಹೀಗಿರುವಾಗ ‘’   ?’ ಎಂದು ಕೇಳಬೇಕಿಲ್ಲ. ‘”’  ?’ಎಂದಷ್ಟೇ ಕೇಳಿ. ಯಾರೂ ತಪ್ಪು ಭಾವಿಸುವುದಿಲ್ಲ. ಅದೇ ರೀತಿ ಭಾರತೀಯರು ಮತ್ತೊಂದು ವಿಚಿತ್ರ ಪ್ರಯೋಗ ಮಾಡುತ್ತಾರೆ. ಅದೇನೆಂದರೆ ಮದರ್ ಪ್ರಾಮಿಸ್. ಆಕ್ಸ್ಫರ್ಡ್ ಡಿಕ್ಷನರಿ ತೆಗೆದು ನೋಡಿ, ಮದರ್ ಪ್ರಾಮಿಸ್ ಎಂಬ ಪ್ರಯೋಗ ಕಾಣಿಸುವುದಿಲ್ಲ. ಈ ಬಳಕೆ ಹೇಗೆ ಬಂತೋ ಗೊತ್ತಿಲ್ಲ. ಆಣೆ, ಪ್ರಮಾಣ ಮಾಡುವಾಗ ‘ಮದರ್ ಪ್ರಾಮಿಸ್’ ಎಂದು ಹೇಳುವುದು ಸಹಜವಾಗಿದೆ. ಕನ್ನಡದ ತಾಯಾಣೆ, ಹಿಂದಿಯ ‘ಮಾ ಕಸಮ್’ ಇಂಗ್ಲಿಷಿನಲ್ಲಿ ಯಥಾವತ್ತಾಗಿ ‘ಮದರ್ ಪ್ರಾಮಿಸ್’ ಆಗಿರಬಹುದು. ಇಂಗ್ಲಿಷಿನಲ್ಲಿ ಆಣೆ ಹಾಕುವ ಪ್ರಸಂಗ ಬಂದರೆ ಪ್ರಾಮಿಸ್ ಎಂದಷ್ಟೇ ಹೇಳಿ. ಅಲ್ಲಿ ತಾಯಿಯನ್ನು ಎಳೆದು ತರಬೇಕಿಲ್ಲ.
ಬಿಟ್ಟೆನೆಂದರೂ ಬಿಡದ ಬಿಟ್ಟಿ ಮಾಯೆ! ಕೆಲವೊಂದು ಸಂಗತಿಗಳು ಹಾಗೇ, ಬಡವನಿಂದ ಶ್ರೀಮಂತನವರೆಗೂ ಎಲ್ಲರನ್ನೂ ಕಾಡುತ್ತದೆ, ಆಕರ್ಷಿಸುತ್ತದೆ.ಅಂಥವು ಇಲ್ಲಿವೆ. ೧. ಪಾನಿಪೂರಿ ತಿಂದ ಮೇಲೆ ಸುಮ್ಮನೆ ಹೋಗುವ ಜಾಯಮಾನ ಯಾರದ್ದೂ ಇಲ್ಲ. ಸುಕ್ಕಾ ಪೂರಿ ಕೊಡದಿದ್ದರೆ ಜಗಳವೇ ಆಗಿಬಿಡುತ್ತದೆ.೨. ಬೇಕರಿಗೆ, ಸ್ವೀಟ್ ಅಂಗಡಿಗೆ ಹೋದಾಗ ಯಾವುದಾದರೂ ಖಾದ್ಯಗಳನ್ನು ಖರೀದಿಸುವಾಗ ಶ್ರೀಮಂತರಾಗಲೀ ಬಡವರಾಗಲೀ ಕೇಳುವುದು ಒಂದೇ ಪ್ರಶ್ನೆ: ‘ಸ್ಯಾಂಪಲ್ ಕೊಡ್ತಿಯೇನಪ್ಪಾ? ಚೆನ್ನಾಗಿದ್ರೆ ತಗೋತೀನಿ’
೩. ಕುಳಿತು ತಿನ್ನುವ ಹೋಟೆಲ್‌ಗೆ ಹೋದಾಗ, ಊಟವಾದ ಮೇಲೆ ಬಿಲ್ ತಂದು ಕೊಡುವ ಕಪ್‌ನಲ್ಲಿ ಸೋಂಪು ಇರಲೇ ಬೇಕು. ಬಿಲ್ಲನ್ನಷ್ಟೇ ಇಟ್ಟರೆ, ಗ್ರಾಹಕರು ವೇಟರ್‌ನನ್ನು ಗುರಾಯಿಸುವ ಬಗೆ ನೋಡಬೇಕು. ಕಣ್ಣಲ್ಲೇ ಕೊಲ್ಲುತ್ತಿರುತ್ತಾರೆ!
೪. ಯಾವುದೇ ದೊಡ್ಡ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಮೊಸರನ್ನ ಇದ್ದೇ ಇರುತ್ತದೆ. ಮೊಸರನ್ನ ಹಾಕಿಸಿಕೊಂಡವರಿಗೆ ಮುಂದಿನದ್ದು ಹಾಕುವ ತನಕ ಪುರಸೊತ್ತು ಇರುವುದಿಲ್ಲ. ‘ಸ್ವಲ್ಪ ಉಪ್ಪಿನಕಾಯಿ ಹಾಕ್ಬಿಡಿ’! ಉಪ್ಪಿನಕಾಯಿ ಇಲ್ಲ ಎಂದ ಭಟ್ಟನ ಕತೆ ಹೇಳತೀರದು. ೫. ಯಾವುದೇ ಜಾಲತಾಣ, ಮಳಿಗೆ, ಮಾರುಕಟ್ಟೆ ಎಲ್ಲೇ ಆಗಲಿ, ಇಂಗ್ಲಿಷ್‌ನಲ್ಲಿ ’  ’ ಎಂಬ ಅಕ್ಷರಗಳನ್ನು ನೋಡಿದ ಕೂಡಲೇ, ಏನಿರಬಹುದು ಎಂದು ನೋಡಿಯೇ ನೋಡುತ್ತಾರೆ. ಅಗಸನಿಂದ ಅರಸನವರೆಗೂ ಈ ಪದಪುಂಜ ಆಕರ್ಷಿಸುತ್ತದೆ.