ಹಳ್ಳಿ ಶೈಲಿಯ ಊಟದ ಪದ್ದತಿ-ತಾಟ್ ಪ್ರೊಸೆಸ್‌
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಇಂದಿನ ಕೆಲವು ಒಂದೆರಡು ರಿಮೇಕ್ ಚಿತ್ರಗಳ ನಿರ್ದೇಶಕರು ಪಾಪ, ತಮಗೆ ಬೆಲೆ ಸಿಗುತ್ತಿಲ್ಲ ಅಂತ ಸಾಕಷ್ಟು ಬಾರಿ ಅಳಲು ತೋಡಿಕೊಳ್ಳುತ್ತಾರೆ. ತಾನು4 ಚಿತ್ರಗಳನ್ನು ಕೊಟ್ಟಿದ್ದರೂ ಜನ ನನ್ನನ್ನು ಗುರುತಿಸುವುದೇ ಇಲ್ಲ. ಒಂದು ಸಿನಿಮಾ ಮಾಡಿದವರಿಗೆ ಬೆಲೆ ಕೊಡುವ ಜನ ನನಗೆ ಯಾಕೆ ಅದೇ ಬೆಲೆ ಕೊಡಲ್ಲ. ಜತೆಗೆ ನನ್ನನ್ನು ರಿಮೇಕ್ ಚಿತ್ರಗಳ ನಿರ್ದೇಶಕ ಎಂದೇ ಹೇಳುತ್ತಾರೆ. ಅದು ಬದಲಾಗಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ.
ರಿಮೇಕ್ ನಿರ್ದೇಶಕ ಎಂಬ ಪಟ್ಟದ ಬಗ್ಗೆ ಮಾತನಾಡುವುದಾದರೆ ಅದು ಸಹಜ. ಅವರು ಮಾಡಿರುವ ಎಲ್ಲಾ ಚಿತ್ರಗಳೂ ಬಹುತೇಕ ರಿಮೇಕ್. ಹಾಗಾಗಿ ಒಬ್ಬ ರಿಮೇಕ್ ನಿರ್ದೇಶಕನಿಗೆ ಸಿಗುವಷ್ಟು ಮರ್ಯಾದೆ ಮಾತ್ರ ಅವರಿಗೆ ಸಿಗುತ್ತಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಇದರ ಬಗ್ಗೆ ಈ ನಿರ್ದೇಶಕರಿಗೆ ಅಸಮಾಧಾನ. ನನ್ನ ಟ್ಯಾಲೆಂಟ್‌ಗೆ ಬೆಲೆ ಇಲ್ಲ ಅಂತ ಬೇಜಾರು. ಇಂಥವರಿಗೆ ನೆನಪಿದ್ದರೆ ಕೆ.ಮಾದೇಶ್ ಎಂಬ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ.
ಆದರೆ ಅವೆಲ್ಲವೂ ರಿಮೇಕ್ ಚಿತ್ರಗಳೇ. ಅವೆಲ್ಲವೂ ಸಾಕಷ್ಟು ಹಣ ಮಾಡಿದರೂ, ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ. ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇಬಿಟ್ಟಿದೆ. ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಅಂದಾಕ್ಷಣ ಕೆ. ಮಾದೇಶ್ ಖಂಡಿತಾ  ಬಹುತೇಕರಿಗೆ ನೆನಪಾ ಗುವುದಿಲ್ಲ. ಅಷ್ಟೇ ಯಾಕೆ ಕನ್ನಡದ ಹಿರಿಯ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬು ಅವರು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ಹೆಚ್ಚು ರಿಮೇಕ್ ಚಿತ್ರಗಳನ್ನು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಎಂದೂ ಸಿಗಲಿಲ್ಲ. ಅವರಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಬಾಬು ಅವರಿಗೇ ಸಿಗಬೇಕಾದ ಬೆಲೆ ಸಿಗಲಿಲ್ಲ.
ಅವರೇ ಕೆಲವೊಮ್ಮೆ ಜನ ತಮ್ಮನ್ನು ಸಿಂಗ್ ಬಾಬು ಜತೆ ಕನ್ಯೂಸ್ ಮಾಡಿಕೊಳ್ಳುತ್ತಾರೆ, ನನಗೊಂದು ಐಡೆಂಟಿಟಿನೇ ಇಲ್ಲ ಎಂದು ಬೇಸರಿಸಿಕೊಂಡಿದ್ದರು. ಇದರ ಮುಂದೆ ಇಂದಿನ ನಿರ್ದೇಶಕರು ಕೊರಗು ಏನೂ ಅಲ್ಲ. ಈ ಹೊಸ ನಿರ್ದೇಶಕರು ಸಾಧಿಸಬೇಕಾಗಿದ್ದು ಇನ್ನೂ ಬಹಳ ಇದೆ. ಅದನ್ನು ತಮ್ಮ ಸ್ವಂತ ಕಥೆಗಳ ಮೂಲಕ ಸಾಧಿಸಿ ಆಮೇಲೆ ಕ್ರೆಡಿಟ್ ಕೊಡ್ತಿಲ್ಲ ಅಂತ ಮಾತಾಡಿದರೆ ಅದಕ್ಕೆ ಬೆಲೆ ಇರುತ್ತೆ.
ಲೂಸ್ ಟಾಕ್ಅರ್ಜುನ್ ತೆಂಡೂಲ್ಕರ್ (ಕಾಲ್ಪನಿಕ ಸಂದರ್ಶನ)ಐಪಿಎಲ್‌ನಲ್ಲಿ ಮತ್ತೆ ಮುಂಬೈ ಇಂಡಿಯ ತಂಡಕ್ಕೆ ಆಯ್ಕೆಯಾದಾಗ ನಿಮ್ಮರಿಯಾಕ್ಷನ್ ಏನಿತ್ತು?-ತಕ್ಷಣ ಅಪ್ಪನಿಗೆ ಕಾಲ್ ಮಾಡಿ ಅಪ್ಪಾ ನಾನ್ ಸೇಲಾದೇ, ಅಂಬಾನಿ ಪಾಲಾದೆ ಅಂತ ಹೇಳಿದೆ.
ಅದಕ್ಕೆ ನಿಮ್ಮ ತಂದೆಯವರಪ್ರತಿಕ್ರಿಯೆ ಏನಿತ್ತು?-ನಾನು ಕ್ರಿಕೆಟ್‌ನಲ್ಲಿ ಬೆಂಚ್ ಮಾರ್ಕ್ ಅನ್ನಿಸಿಕೊಂಡಿದ್ದೆ, ನೀನ್ ನೋಡಿದ್ರೆ ನನ್ ಮರ್ಯಾದೆ ತೆಗೆಯೋಕೆ ಬೆಂಚಲ್ಲಿ ಕೂರೋಕೆ ಟೀಮಿಗೆ ಸೆಲೆಕ್ಟ್ ಆಗ್ತೀಯಾ ಅಂತ ಬೈದ್ರು.
ಆದ್ರೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯ ಓನರ್ ಕೊಟ್ಟ ದುಡ್ಡು ನಿಮ್ಮ ಪಾಕೆಟ್ ಮನಿಗೂ ಸಾಕಾಗಲ್ಲ ಅನ್ಸುತ್ತೆ ಅಲ್ವಾ?-ನನ್ನ ಲಕ್ಷ್ಯ ಲಕ್ಷದ ಕಡೆ ಇರಲಿಲ್ಲ. ತಂಡದ ಹಿತಕ್ಕಾಗಿ ರೋಹಿತ ಶರ್ಮಾ ಅವರ ಜತೆ ನಿಲ್ತಿದ್ದೆ.
ಓಹೋ, ಅಪ್ಪನ ಥರಾನೇ ಚೆನ್ನಾಗಿ ಮಾತಾಡೋದ್ ಕಲ್ತಿದೀರ ಬಿಡಿ, ಸರಿ, ರೋಹಿತ್ ಶರ್ಮಾ ನಿಮ್ಮನ್ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾಕೆ ಆಡಿಸ್ಲಿಲ್ಲ?-ಏನ್ ಮಾಡೋದು ಒಂಥರಾ, ಲೆಕ್ಕಕ್ಕುಂಟು, ಆಟಕ್ಕಿಲ್ಲ ಅನ್ನೋ ಹಂಗೆ ಮಾಡಿಬಿಟ್ರು ನನ್ನ.
ಸರಿ ನಿಮ್ಮ ಮುಂದಿನ ಗುರಿ ?-ಮುಂಬೈ ಇಂಡಿಯ ಆಯ್ತು, ಮುಂದೆ ಇಂಡಿಯ ಟೀಮಿಗೆ ಸೆಲೆಕ್ಟ್ ಆಗಿ ಟ್ವೆಲ್ತ್ ಪ್ಲೇಯರ್ ಆಗಿನೇ ಅರ್ಜುನ ಅವಾರ್ಡ್ ತಗೊಳ್ಳೋದು.
ನೆಟ್ ಪಿಕ್ಸ್
ಡಾಕ್ಟರ್ ಖೇಮು ಹತ್ರ ಒಬ್ಬ ಹುಡುಗ ಬಂದ.ಡಾಕ್ಟ್ರೇ ನಂಗೊಂದು ಪ್ರಾಬ್ಲಮ್ ಆಗಿದೆ.-ಏನು ಹೇಳಿ?ನನ್ನ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್ ಆಗಿದ್ದಾಳೆ.-ಅದರನು ವಿಶೇಷ? ಇದು ಕಾಮನ್ ವಿಷ್ಯ ಅದಲ್ಲ ಡಾಕ್ಟರ್, ನಾವು ಯಾವಾಗಲೂ ಪ್ರೊಟೆಕ್ಷನ್ ಯೂಸ್ ಮಾಡ್ತಾ ಇದ್ವಿ.ಇದು ಹೇಗಾಯ್ತು ಅಂತ ಗೊತ್ತಿಲ್ಲ-ಸರಿ, ನಿಂಗೊಂದು ಕಥೆ ಹೇಳ್ತೀನಿ. ಒಬ್ಬ ಮನುಷ್ಯ ಕಾಡಿನ ಹತ್ರ ಮನೆ ಮಾಡಿಕೊಂಡಿದ್ದ. ತಾನು ಯಾವಾಗಲೂ ಕಾಡಿನ ಒಳಗೆ ಹೋಗುವಾಗ ಗನ್ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ಅವನು ತನ್ನ ಗನ್ ಬದಲು ಛತ್ರಿ ತಗೊಂಡು ಹೋದ. ಅವನ ಮುಂದಿನಿಂದ ಒಂದು ಸಿಂಹ ಬಂದು ಅಟ್ಯಾಕ್ಮಾಡಿತು. ಅದರಿಂದ ಪಾರಾಗಲು ಅವನು ತನ್ನ ಛತ್ರಿ ಅನ್ನು ಓಪನ್ ಮಾಡಿದ. ಒಂದು ಸೆಕೆಂಡ್ ನಂತರ ನೋಡಿದರೆ ಛತ್ರಿಯಿಂದ ಗುಂಡು ಹಾರಿ ಸಿಂಹ ಸತ್ತುಹೋಗಿತ್ತು.
ಛಾನ್ಸೆ ಇಲ್ಲ, ಅದೆಂಗ್ ಸಾಧ್ಯ,. ಸಿಂಹಕ್ಕೆ ಬೇರೆ ಯಾರೋ ಶೂಟ್ ಮಾಡಿರಬೇಕು-ಗುಡ್ ನಿಂಗೆ ಕಥೆ ಅರ್ಥ ಆಯ್ತಲ್ಲ. ನೆಕ್ಸ್ಟ್ ಪೇಷೆಂಟ್ ಪ್ಲೀಸ್.
ಲೈನ್ ಮ್ಯಾನ್
ರಾಮಮಂದಿರದ ದೇಣಿಗೆ ಹಣದಲ್ಲಿ ಮೋಸ ಮಾಡಿದ್ರೆ ಅದು-ಕೃಷ್ಣನ ಲೆಕ್ಕಇಂದಿನ ಯುವಪೀಳಿಗೆಯ ಆಟಿಟ್ಯೂಡ್-ಜೀವನದಲ್ಲಿ ಖುಷಿ ಮೂಲ ಹುಡುಕ್ರೋ ಅಂದ್ರೆ ಋಷಿ ಮೂಲ ಹುಡುಕ್ತಾರೆ.ಒಂದು ಇಮೇಲ್‌ಗೆ ತಕ್ಕ ಉತ್ತರ ಕೊಡೋದು ಅಂದ್ರೆ ಏನು ?uಖಿ Iಅಐಔಉಈ ಐS, ಐ ಘೆಅಐಔಉಈ ಐSಪಬ್ಲಿಕ್ ಟಿವಿ ರಂಗನಾಥ್ ಅವರಿಗೂ ನರೇಂದ್ರ ಮೋದಿಗೂ ಇರೋ ವ್ಯತ್ಯಾಸ-ಏನಾದ್ರೂ ಒಳ್ಳೇದಾದ್ರೆ ರಂಗನಾಥ್ ಅವರು ಆಲ್ ರೈಟ್ ಮುಂದಕ್ಕೋಗಣಅಂತಾರೆ-ಕೆಟ್ಟದ್ದಕ್ಕೆಲ್ಲ ಹಿಂದಿನ ಸರಕಾರವೇ ಹೊಣೆ ಅನ್ನೋ ಮೋದಿ, ಹಿಂದಕ್ಕೋಗಣಅಂತಾರೆಎಲ್ಲರ ಬಗ್ಗೆನೂ ಸಂದೇಹ ಪಡುವವನು-ಅನುಮಾನ್ ಭಕ್ತಮನೇಲಿ ಟಿವಿ ಇದ್ರೆ ಬಿಪಿಎಲ್ ಕಾರ್ಡು ರದ್ದು-ಖೇಮು- ನಮ್ಮನೇಲಿ ಬಿಪಿಎಲ್ ಟಿವಿ ಇಲ್ಲ, ತೊಂದ್ರೆ ಇಲ್ಲ ಬಿಡಿ.ಇರುವೆಗೆ ಸಿಗದ ಸಕ್ಕರೆ
ಸೀಮೆಗಿಲ್ಲದ ಸಕ್ಕರೆವಾಣಿ ಅನ್ನೋ ಹುಡುಗಿ ಸತ್ತ ಮೇಲೆ ಏನಾಗ್ತಾಳೆ-ಅಶರೀರ ವಾಣಿಹಳ್ಳಿ ಶೈಲಿಯ ಊಟದ ಪದ್ಧತಿ-ತಾಟ್ ಪ್ರೊಸೆಸ್ದುಂಬಿ ಜೇನಿಗೆ ಹೇಳಿದ್ದೇನು?-ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರಹೆಸರು-ಉತ್ತರ ಧ್ರುವಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ-ಪಿತ್ತ ಜನಕಾಂಗ