ನಮ್ಮ ದೇಹವನ್ನು ನಾವು ಪ್ರೀತಿಸೋಣ, ಗೌರವಿಸೋಣ
ಶ್ವೇತಪತ್ರ
ಡಾ.ಶ್ವೇತಾ.ಬಿ.ಸಿ
@.
ಹದಿಹರೆಯದವರಲ್ಲಿ ಶೇಕಡಾ 34ರಷ್ಟು ಜನ ತಮ್ಮ ದೇಹದ ಬಗ್ಗೆ ಅಸಮಾಧಾನವನ್ನೂ ಮತ್ತು ಶೇಕಡಾ 31ರಷ್ಟು ಜನರು ನಾಚಿಕೆ ಭಾವವನ್ನೂ ಹೊಂದಿರುವು ದಾಗಿ ತಿಳಿಸಿದ್ದಾರೆ. ಶೇಕಡ 34ರಷ್ಟು ವಯಸ್ಕರು ತಮ್ಮ ದೇಹದ ಬಗ್ಗೆ ಆತಂಕವನ್ನು ಹಾಗೂ ಶೇಕಡಾ 35ರಷ್ಟು ವಯಸ್ಕರರು ತಮ್ಮ ದೇಹದ ಬಗ್ಗೆ ಖಿನ್ನತೆ ಯನ್ನು ಹೊಂದಿದ್ದಾರೆ.
ಇತ್ತೀಚೆಗೆ ಉದಯೋನ್ಮುಖ ನಟಿಯಾಗ ಬಯಸಿದ್ದ ಹುಡುಗಿಯ ಸಾವಿನ ಸುದ್ದಿ ಬಹಳ ಡಿಸ್ಟರ್ಬಿಂಗ್ ಆಗಿ ಬಂದೆರಗಿತ್ತು. ಇನ್ನೂ ಹೆಚ್ಚಿನ ಡಿಸ್ಟರ್ಬೆನ್ಸ್‌ಗೆ ಕಾರಣ ವಾಗಿದ್ದು ಆಕೆ ತನ್ನ ಸೊಂಟ ದಪ್ಪಗಿದೆ ಎಂದು ತಾಯಿ-ತಂದೆಗೂ ತಿಳಿಸದೆ ಸೌಂದರ್ಯ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದು. ಯಾಕಿಷ್ಟು ಭ್ರಮೆಗಳು ನಮಗೆ    ,     ನಿಮ್ಮ ಆಕಾರ, ಗಾತ್ರಗಳಾಚೆ ನೀವು ಯಾರಾ ಗಿದ್ದೀರೋ, ಏನಾಗಿದ್ದೀರೋ ಯಾವ ಎತ್ತರದ್ದಲ್ಲಿದ್ದೀರೋ, ಗಾತ್ರದಲ್ಲಿದ್ದೀರೋ ಅದರ ಬಗ್ಗೆ ನಿರ್ದಿಷ್ಟತೆ ಬೇಡ      .
ವಿವಿಧ ಕಾಲಘಟ್ಟಗಳ ಕಲೆಗಳನ್ನು ಹಾಗೂ ಇವತ್ತಿನ ಮಾಧ್ಯಮದ ಅಸ್ತಿತ್ವವನ್ನು ಅವಲೋಕಿಸಿದಾಗ ಸುಂದರ ದೇಹವನ್ನು ನಾವೆ ಪರಿಗಣಿಸಿರುವ ರೀತಿಯಲ್ಲಿ ಸ್ಪಷ್ಟವಾದ ನಾಟಕೀಯ ಬೆಳವಣಿಗೆಗಳು ಕಂಡು ಬರುತ್ತವೆ. ಹೆಣ್ಣಿನ ಸೌಂದರ್ಯವೆಂಬ ಪರಿಕಲ್ಪನೆ ಫಲವತ್ತತೆಯಿಂದ ಲೆಕ್ಕಾಚಾರಗಳ ಅನುಪಾತಕ್ಕೆ ಉದಾ ಹರಣೆಗೆ 36- 24- 36 ಇಂಚುಗಳೆಂಬ ಗಣಿತದ ಲೆಕ್ಕಾಚಾರಕ್ಕೆ ಅಳತೆಗೆ ಬದಲಾವಣೆಗೊಂಡಿದೆ.
ಹೆಣ್ಣಿನ ಸೌಂದರ್ಯವಿಂದು ಗಂಡಸಿನ ಲೈಂಗಿಕ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸುವ ಇಮೇಜ್ ಆಗಿ ಬೆಳೆದಿದೆ. ಹಾಗಿದ್ದರೆ ಏನಿದು  (ದೇಹದ ಚಿತ್ರಣ)? ನಮ್ಮ ದೇಹದ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ ಮತ್ತು ಅನುಭವಿಸುತ್ತೇವೆ ಎಂಬುದೇ ಈ . ನಮ್ಮ ದೇಹದ ಬಗ್ಗೆ ಈ ಯೋಚನೆಗಳು, ಅನುಭವ ಗಳು ನಮ್ಮ ಬದುಕಿನುದ್ದಕ್ಕೂ ಪ್ರಭಾವಿಸಬಲ್ಲವು ಅಷ್ಟೇ ಅಲ್ಲದೆ ನಮ್ಮ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಲ್ಲವು.
 ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು?ನಮ್ಮ  ಬಗ್ಗೆ ನಮ್ಮೆಲ್ಲರಿಗೂ ಇರುವ ಕಾಳಜಿ ಸಾಮಾನ್ಯವಾಗಿ ಇರುವಂತಹ ಅನುಭವವೇ ಹೊರತು ಅದೊಂದು ಮಾನಸಿಕ ಸಮಸ್ಯೆಯಲ್ಲ ಆದ್ಯಾಗೂ  ಮಾನಸಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಅಪಾಯಕಾರಿ ಅಂಶಗಳನ್ನು ಒಳಗೊಂಡಿದೆ. ದೇಹದ ಬಗೆಗಿನ ಅತೃಪ್ತಿ ನಮ್ಮಲ್ಲಿ ಕಡಿಮೆ ಜೀವನ ಮಟ್ಟ, ಮಾನಸಿಕ ಯಾತನೆ, ಅನಾರೋಗ್ಯಕರ, ಆಹಾರ ಸೇವನಾ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
 ನಮ್ಮ ದೇಹದ ಬಗೆಗೆ ನಮಗಿರುವ ತೃಪ್ತಿ ಮತ್ತು ಮೆಚ್ಚುಗೆಗೂ ನಮ್ಮ ಉತ್ತಮ ಮಾನಸಿಕ ಯೋಗಕ್ಷೇಮಕ್ಕೂ ಪಾಸಿಟಿವ್ ಕನೆಕ್ಷನ್ ಇರುವು ದನ್ನು ಅಧ್ಯಯನಗಳು ದೃಢಪಡಿಸಿವೆ. ಇತ್ತೀಚಿನ ದಿನಗಳಲ್ಲಿ ಯುವತಿಯರು ತಮ್ಮ ದೇಹದ ಗಾತ್ರ, ಆಕಾರ ಮತ್ತು ತಾವು ಕಾಣಿಸಿಕೊಳ್ಳುವ ರೀತಿಯಲ್ಲಿ ಹೆಚ್ಚಿನ ಅತೃಪ್ತಿ ಯನ್ನು ಹೊಂದಿದ್ದಾರೆ. ಈ  ಕಾಳಜಿ ಬಾಲ್ಯಾವಸ್ಥೆಯಿಂದಲೇ ಶುರುವಿಟ್ಟುಕೊಂಡು ಬದುಕಿನುದ್ದಕ್ಕೂ ಮಹಿಳೆಯರನ್ನು ಹಾಗೆ ಪುರುಷರನ್ನು ಕಾಡಬಹುದು.
 ಅನ್ನು ಕಾಡುವ ಕಾಳಜಿಗಳೇನು?
 ಬಗ್ಗೆ ನಮ್ಮೆಲ್ಲರ ಅನುಭವ ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ.  ಮೇಲೆ ಪ್ರಬಲವಾಗಿ ಪ್ರಭಾವ ಬೀರುವ ಅಂಶಗಳೆಂದರೆ: ಕುಟುಂಬ ಮತ್ತು ಸ್ನೇಹಿತರ ಜತೆಗಿನ ನಮ್ಮ ಸಂಬಂಧಗಳು. ನಮ್ಮ ಕುಟುಂಬದವರು ಹಾಗೂ ಸ್ನೇಹಿತರು ಮತ್ತೊಬ್ಬರ ದೇಹದ ಬಗ್ಗೆ ಏನು ಮಾತನಾಡಿ ಕೊಳ್ಳುತ್ತಾರೆ ಹಾಗೂ ಟೀಕಿಸುತ್ತಾರೆ ಎನ್ನುವುದು. ಹೀರೊಯಿನ್‌ಗಳಂತೆ ಜೀರೋ ಸೈಜ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಒತ್ತಡ, ತೆಳ್ಳಗಿರುವುದಷ್ಟೆ ಸೌಂದರ್ಯ ಎಂದು ಪ್ರೊಜೆಕ್ಟ್ ಮಾಡುವ ಅಡ್ವಟೈಸ್ಮೆಂಟ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂಗಳು.
 ಅಂಕಿ ಅಂಶಗಳು:ಆನ್‌ಲೈನ್‌ಲ್ಲಿ ಮೆಂಟಲ್ ಹೆಲ್ತ್ ಫೌಂಡೇಶನ್ ಅವರು  ಜತೆಗೂಡಿ 4505 ಜನ 18 ವರ್ಷ ಮೇಲ್ಪಟ್ಟ ವಯಸ್ಕ ರನ್ನು ಹಾಗೂ 1118 ಜನ 13ರಿಂದ 19ನೇ ವಯಸ್ಸಿನೊಳಗಿನ ಹದಿವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಿ  ಕುರಿತಾದ ಅಂಕಿ ಅಂಶಗಳ ಫಲಿತಾಂಶದ ವರದಿಯನ್ನ ಪ್ರಸ್ತುತಪಡಿಸಿರುತ್ತಾರೆ. ಆ ವರದಿಯ ಪ್ರಕಾರ ಶೇಕಡ 20ರಷ್ಟು ವಯಸ್ಕರು ತಮ್ಮ ದೇಹದ ಬಗ್ಗೆ ನಾಚಿಕೆಯನ್ನು, ಶೇಕಡ 34ರಷ್ಟು ವಯಸ್ಕರರು ತಮ್ಮ ದೇಹದ ಬಗ್ಗೆ ಕೀಳರಿಮೆಯನ್ನು ಹಾಗೂ 19 ವಯಸ್ಕರು ತಮ್ಮ ದೇಹದ ಬಗ್ಗೆ ಅಸಹ್ಯ ಭಾವನೆಯನ್ನು ಹೊಂದಿರುವುದಾಗಿ ಅಭಿಪ್ರಾಯ ವನ್ನು ಹಂಚಿಕೊಂಡಿದ್ದಾರೆ.
ಹದಿಹರೆಯದವರಲ್ಲಿ ಶೇಕಡಾ 34ರಷ್ಟು ಜನ ತಮ್ಮ ದೇಹದ ಬಗ್ಗೆ ಅಸಮಾಧಾನವನ್ನೂ ಮತ್ತು ಶೇಕಡಾ 31ರಷ್ಟು ಜನರು ನಾಚಿಕೆ ಭಾವವನ್ನೂ ಹೊಂದಿರುವು ದಾಗಿ ತಿಳಿಸಿದ್ದಾರೆ. ಶೇಕಡ 34ರಷ್ಟು ವಯಸ್ಕರು ತಮ್ಮ ದೇಹದ ಬಗ್ಗೆ ಆತಂಕವನ್ನು ಹಾಗೂ ಶೇಕಡಾ 35ರಷ್ಟು ವಯಸ್ಕರರು ತಮ್ಮ ದೇಹದ ಬಗ್ಗೆ ಖಿನ್ನತೆ ಯನ್ನು ಹೊಂದಿದ್ದಾರೆ. ಈ ಅಧ್ಯಯನ ವರದಿಯ ಪ್ರಕಾರ ಶೇಕಡ 13ರಷ್ಟು ವಯಸ್ಕರು ತಮ್ಮ  ಅನ್ನು ನೆಗೆಟಿವ್ ಆಗಿ ಪರಿಗಣಿಸಿ ಆತ್ಮಹತ್ಯಾ ಪ್ರವೃತ್ತಿಯನ್ನು ಹೊಂದಿರುತ್ತಾರೆ.
ಇನ್ನೂ ಶೇಕಡಾ 21ರಷ್ಟು ವಯಸ್ಕರು ತಮ್ಮ ಅಭಿಪ್ರಾಯದಲ್ಲಿ ಅಡ್ವಟೈಸ್ಮೆಂಟ್‌ಗಳಲ್ಲಿ ತೋರಿಸುವ   ಅವರನ್ನು ಆತಂಕ ಹಾಗೂ ಉದ್ವಿಗ್ನತೆಗೆ ಒಳಪಡಿಸುತ್ತವೆ ಎಂಬುದಾಗಿ ಸ್ಪಷ್ಟಪಡಿಸಿರುತ್ತಾರೆ. ಶೇಕಡ 22ರಷ್ಟು ವಯಸ್ಕರರು ಹಾಗೂ ಶೇಕಡ 40ರಷ್ಟು ಹದಿಹರೆಯದವರು ಸೋಶಿಯಲ್ ಮೀಡಿಯಾ ಅವರನ್ನು ತಮ್ಮ ಬಾಡಿ ಇಮೇಜ್ ಬಗ್ಗೆ ನೆಗೆಟಿವ್ ಆಗಿ ಛಿಛ್ಝಿ ಮಾಡುವಂತೆ ಮಾಡಿದೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಈ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ವಿಷಯ ನಮ್ಮೆಲ್ಲರಿಗೂ ಬಹಳ ಸ್ಪಷ್ಟವಾಗುತ್ತದೆ ಅದೇನೆಂದರೆ ನಾವೆಲ್ಲಾ ನಮ್ಮ ದೇಹಗಳ ಬಗ್ಗೆ ಅದರ ಇರುವಿಕೆಯ ಬಗ್ಗೆ ಅದರ ಅಪಿಯರೆನ್ಸ್ ಬಗ್ಗೆ ಬಹಳ ಇನ್ಸೆಕ್ಯೂರಿಟೀಸ್‌ಗಳನ್ನು ಹೊಂದಿದ್ದೇವೆ. ಪರಿಪೂರ್ಣವಾದ ಸೌಂದರ್ಯವನ್ನು ಹೊಂದಿರುವ ದೇಹ ಗಳು ಇಲ್ಲ ಆದರೂ ನಾವೇಕೆ ಸೌಂದರ್ಯದ ಬಗ್ಗೆ ಪೂರ್ವಗ್ರಹ ಪೀಡಿತರಾಗಿದ್ದೇವೆ. ತೆಳ್ಳಗೆ ಬೆಳ್ಳಗಿರುವುದು ಸುಂದರ, ಈ ಕ್ಲೀಷೆ ಭಾರತೀಯ ಮನಸ್ಥಿತಿಗಳನ್ನು ಇಂದಿಗೂ ನಿರ್ದೇಶಿಸುತ್ತಿದೆ. ನಮ್ಮ ಸಮಾಜದಲ್ಲಿ ವಾಸ್ತವಕ್ಕೆ ದೂರವಾದ ಸೌಂದರ್ಯ ಪ್ರeಯನ್ನು ನಂಬುವಂತೆ ಹೆಣ್ಣುಮಕ್ಕಳನ್ನು ಷರತ್ತು ಬದ್ಧವಾಗಿ ಕಟ್ಟು ಹಾಕಲಾಗಿದೆ.
ಹೆಣ್ಣು ಮಕ್ಕಳಾಗಿ ನಮ್ಮ ದೇಹ ಹೇಗಿರಬೇಕೆಂಬುದನ್ನು ಬೇರೆಯವರ ದೃಷ್ಟಿಕೋನವು ನಿರ್ಧರಿಸುತ್ತದೆ.  ಜೀರೋ ಸೈಜ್ ಇರುವುದಷ್ಟೆ ಸುಂದರವೆಂಬ conceptಗಳು ಮಾನದಂಡಗಳಾಗುತ್ತಿವೆ. ಫೋಟೋ ಎಡಿಟಿಂಗ್‌ಗಳ ಮೂಲಕ ಸಂಪೂರ್ಣವಾಗಿ ನಿಬ್ಬೆರಗಾಗುವಂತೆ ಕಾಣುವ ರೂಪದರ್ಶಿಗಳು ಮತ್ತು ಅವರ ದೇಹದ ಚಿತ್ರಣಗಳು ಹೆಣ್ಣು ಮಕ್ಕಳ ಮೇಲೆ ಒತ್ತಡವನ್ನು ಹೇರುವುದಲ್ಲದೇ ಅವರ ಬಗ್ಗೆ ಅವರಿಗೆ  ಅಭದ್ರತೆಯ ಕೀಳರಿಮೆಯ ಭಾವವನ್ನು ಉಂಟು ಮಾಡುತ್ತಿವೆ.
ಪ್ರತಿಯೊಬ್ಬರ ದೇಹದ ಆಕಾರ ಮತ್ತು ಗಾತ್ರಗಳು ವಿಭಿನ್ನವಾಗಿರುತ್ತವೆ ಮತ್ತು ತಮ್ಮದೇ ರೀತಿಯಲ್ಲಿ ಸಮತೋಲನವನ್ನು ಕಾಯ್ದುಕೊಂಡಿರುತ್ತವೆ. ತೆಳ್ಳಗಿರುವುದಕ್ಕಿಂತ ಹೆಚ್ಚು ಮುಖ್ಯವಾದದ್ದು ಎಷ್ಟು ಆರೋಗ್ಯವಾಗಿ ಸಂತೋಷವಾಗಿದ್ದೇವೆ ಎಂಬುದು. ಅವಾಸ್ತವಿಕ ಸೌಂದರ್ಯಪ್ರಜ್ಞೆಯ ಬೆನ್ನೇರಿ ನಮ್ಮ ಯುವಜನರು ಸರ್ಜರಿಗಳ ಕ್ವಿಕ್ ಡಯಟ್‌ಗಳ ಮೊರೆ ಹೋಗುತ್ತಿದ್ದಾರೆ. ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾದ ಅಂಶವೆಂದರೆ ಡಯಟ್ ಗಳಾಗಲಿ, ಟ್ರಿಟ್‌ಮೆಂಟ್‌ ಗಳಾಗಲಿ, ಬ್ಯೂಟಿಪ್ರಾಡಕ್ಟ್‌ಗಳಾಗಲಿ ನಮ್ಮ ಸೌಂದರ್ಯವನ್ನು ಖಚಿತಪಡಿಸುವುದಿಲ್ಲ.
ಅವುಗಳ ಮೇಲಿನ ಅತಿಯಾದ ಅವಲಂಬನೆ ಅನಾರೋಗ್ಯಕರ ಮತ್ತು ಅಪಾಯಕಾರಿಯಾಗಿ ಬಿಡಬಲ್ಲದು. ಒಳ್ಳೆಯ ಸಮತೋಲನವುಳ್ಳ ಆಹಾರದ ಅಭ್ಯಾಸಗಳು ನಡಿಗೆ, ಯೋಗ, ಧ್ಯಾನ, ವ್ಯಾಯಾಮಗಳು ನಮ್ಮ ದೇಹದ ಮೇಲೆ ಆಶ್ಚರ್ಯಕರವಾದ ಪರಿಣಾಮವನ್ನು ಉಂಟು ಮಾಡಬಲ್ಲವು. ನಾವೆ ನಮ್ಮ ದೇಹದ ಬಗ್ಗೆ ಸಕಾರಾತ್ಮಕವಾದ ಬಾಡಿ ಇಮೇಜನ್ನು ಒಳ್ಳೆಯ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಬೆಳೆಸಿಕೊಳ್ಳಬೇಕಿದೆ.
ಪ್ರತಿಯೊಬ್ಬರಿಗೂ ತಮ್ಮ ದೇಹದ ಬಗ್ಗೆ ಆತ್ಮವಿಶ್ವಾಸ ಆಶಾದಾಯಕವಾದ ಭಾವನೆ ಮೂಡುವಂತಾಗಬೇಕು. ಹಾಗಿದ್ರೆ ನಾವೆಲ್ಲ ಏನು ಮಾಡಬೇಕು? ನಿಮ್ಮ ದೇಹ ಹೇಗಿದೆಯೋ ಹಾಗೆ ಅದನ್ನು ಒಪ್ಪಿಕೊಳ್ಳಿ.
ನೆನಪಿಡಿ   ಎಂಬುದೊಂದು ಇರುವುದಿಲ್ಲ. ಅದು ಸಾಧ್ಯವಾಗುವುದು ಕೇವಲ   ನೊಳಗೆ ಮಾತ್ರ ನಿಜ ಜೀವನದಲ್ಲ. ನಿಮ್ಮ ದೇಹವನ್ನು ನೀವೆ ಟೀಕಿಸಬೇಡಿ ಅದರ ಬಗ್ಗೆ ಜಿಗುಪ್ಸೆ ಪಡಬೇಡಿ.    ಮತ್ತು ಆ ಮೂಲಕ ನಿಮ್ಮ ಆತ್ಮಗೌರವವನ್ನು ಹೆಚ್ಚಿಸಿಕೊಳ್ಳಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮ ಒಂದು ಅದ್ಭುತವಾದ ನಗೆಯ ಮೂಲಕ ನಿಮ್ಮೊಳಗಿನ ಅತ್ಯುತ್ತಮವನ್ನು   ಮಾಡಿ.
ನಿಮ್ಮ  ನಿಮ್ಮ ಒತ್ತಡಗಳಿಗೆ ಅವಮಾನಗಳಿಗೆ ಕಾರಣವಾಗಿದ್ದರೆ ಮಾತಾಡಿ ಸ್ನೇಹಿತರ ಜತೆ ನಿಮಗೆ ಕಂಫರ್ಟ್ ಕೊಡುವ ಯಾರ ಜತೆ ಬೇಕಾ ದರೂ ಹಂಚಿಕೊಂಡಷ್ಟೂ ಹಗುರಾಗಿ ಆತ್ಮವಿಶ್ವಾಸ ಗಟ್ಟಿಗೊಳಿಸಿಕೊಳ್ಳಿ. ನಿಮ್ಮ ದೇಹದ ಆಕಾರ ಗಾತ್ರಗಳ ಬಗ್ಗೆ ನಿಮ್ಮಲ್ಲಿ ಮೂಡುವ ಯೋಚನೆಗಳ ಬಗ್ಗೆ ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ನಕಾರಾತ್ಮಕ ಆಲೋಚನೆಗಳೊಳಗೆ ಕಳೆದು ಹೋಗದಂತೆ ನೋಡಿಕೊಳ್ಳಿ.
        ಜಾಹೀರಾತು ಪ್ರಪಂಚವೆಂಬ ಭ್ರಮೆಗಳೊಳಗೆ ಮುಳುಗಿಹೋಗಿ ಬಿಡಬೇಡಿ. ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿ ಬದುಕಿ. ನಿಮ್ಮ ದೇಹವನ್ನು ಆರೋಗ್ಯವಾಗಿ ಖುಷಿಯಾಗಿ ಇಟ್ಟುಕೊಳ್ಳಲು ಬೇಕಾಗುವ ಎಲ್ಲಾ ಅತ್ಯುತ್ತಮ ಅಭ್ಯಾಸಗಳನ್ನು ನಿಮ್ಮದಾಗಿಸಿ ಕೊಳ್ಳಿ.
ಅದು ನಡಿಗೆ, ಯೋಗ- ಧ್ಯಾನ, ವ್ಯಾಯಾಮ, ನಿದ್ರೆ, ಉತ್ತಮ ಆಹಾರದ ಅಭ್ಯಾಸ ಯಾವುದೇ ಆಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಬ್ಬರ ದೇಹದ ಜತೆಗೆ ನಿಮ್ಮ ದೇಹವನ್ನು ಕಂಪೆರ್ ಮಾಡಿಕೊಳ್ಳಬೇಡಿ ಭ್ರಮೆಗಳ ಆಚೆ ಬದುಕೋಣ ಅಲ್ಟಿಮೇಟ್‌ಲಿ        yourselfAÐærà ಅಷ್ಟೇ.