ಬುದ್ಧಿಜೀವಿಗಳ ಸಖ್ಯದ ಪಾತಕಿ, ಜೈಲು ಪಾಲು
ಪ್ರಚಲಿತ
ಸಂತೋಷಕುಮಾರ ಮೆಹೆಂದಳೆ
2019ರಿಂದ ತಿಹಾರ್ ಜೈಲಿನಲ್ಲಿದ್ದ ಈತನ ಮೇಲೆ ಸೆಕ್ಷನ್ 116- ಭಯೋತ್ಪಾದನಾ ಕೃತ್ಯ, 17 ಅದಕ್ಕಾಗಿ ಹಣಕಾಸು ನಿರ್ವಹಣೆ, 18 ಭ. ಸಂಚು, 120ಬಿ ಮತ್ತು 124-೧ ದೇಶದ್ರೋಹದ ಆಪಾದನೆಗಳು ಸಾಬೀತಾಗಿದ್ದು ಜೀವಾವಽ ಶಿಕ್ಷೆ, ಹತ್ತು ಲಕ್ಷ ದಂಡ ವಿಧಿಸಲಾಗಿದೆ.
ಬಹುಶಃ ಭಾರತದಲ್ಲಿ ಮಾತ್ರ ಇಂತಹ ಅಪಸವ್ಯಗಳು ನಡೆಯುತ್ತವೆ. ಕಾರಣ ತೀರ ಕೈಯ್ಯಲ್ಲಿ ಬಂದೂಕಿದ್ದರೆ ಮಾತ್ರ ಮೀಟರ್ತೋರಿಸುವ ದೇಶದ್ರೋಹದ ವ್ಯಕ್ತಿಗಳಿಗೂ, ನೆತ್ತಿ ಮಾಸು ಹಾರದ ಯಕಶ್ಚಿತ ಹೆಂಗಸೊಬ್ಬಳು ತಾವು ಕೊಟ್ಟು ಕರೆತಂದು ದೇಶದಅತ್ಯಂತ ಬುದ್ಧಿವಂತ ಪ್ರಧಾನಿಯ ಪಕ್ಕೆಗೂ ಆತು ನಿಲ್ಲಿಸಿ ಬಿಡುತ್ತಾಳೆಂದರೆ ಅದೇನು ಅಸಲಿಯತ್ತಿದ್ದೀತು ಆಕೆಯಲ್ಲಿ? ಅಥವಾ ಈ ಎಬುಜೀತನ ಎಂದರೇನೆ ಇಂಥಾ ಮನೆ ಮುರುಕ ಕೆಲಸವಾ? ಕನಿಷ್ಠ ನಿನ್ನೆಯ ಕೋರ್ಟ್ ಫೈಸಲ್ಲುಬಂದ ಮೇಲಾದರೂ ಇಂಥಾ ಮನೆಹಾಳತನ ನಮ್ಮ ಬುದ್ಧಿಜೀವಿಗಳು ನಿಲ್ಲಿಸುತ್ತಾರಾ?
ಬಿಡಿ, ಇದ್ದ ಅಕ್ಕಪಕ್ಕದ ಮನೆಯಂತಿದ್ದವರ ಕುಟುಂಬಗಳು ನಿಮ್ಮ ಸಹವಾಸವೇ ಬೇಡ ಎಂದು, ದುಡ್ಡು ದುಗ್ಗಾಣಿ ಹೊಂಚಿ ಕೊಂಡು ತಮ್ಮದೇ ಒಂದು ಮಾರಿನ ಸೂರು ಕಟ್ಟಿಕೊಳ್ಳುತ್ತಿದ್ದರೆ, ಅದಕ್ಕೂ ಬಾಂಬಿಕ್ಕಿಬಿಡಿ ಎಂದು ಫರ್ಮಾನು  ಹೊರಡಿಸುವ ದನ್ನು ಅದ್ಯಾವ ರೀತಿಯಲ್ಲಿ ಬುದ್ಧಿಜೀವಿತನ ಅಥವಾ ಬಹುತ್ವದ ನೇತಾರರು ಎನ್ನೋಣ. ಕಾರಣ ಅತ್ಯಂತ ಸ್ಪಷ್ಟ ದೇಶ ದ್ರೋಹದ ಕೇಸುಗಳನ್ನು ಮೈತುಂಬ ಎಳೆದುಕೊಂಡಿ ದ್ದರೂ, ಈ ದೇಶದ ಹೆಂಗಸರು ಅವನನ್ನು ಹಲ್ಕಿರಿದು ದೆಹಲಿಯ ರಾಜವಾಡೆ ಗಳಲ್ಲಿ ಮೆರವಣಿಗೆ ಮಾಡಿಸಿದ್ದರು.
ಆಗೆಲ್ಲ ಇದನ್ನು ಪ್ರಶ್ನಿಸಿದವರಿಗೆ ಉಲ್ಟಾ ಇಕ್ಕಿತ್ತು ಆಗಿನ ವ್ಯವಸ್ಥೆ. ಆದರೆ ಇವನೆಂಥಾ ದ್ರೋಹಿ ಎಂದರಿವಾಗಬೇಕಾದರೆ ಕೊಂಚ ಮಾಹಿತಿ ಓದಿಕೊಳ್ಳಿ. ಮೂಲತಃ ಈತನ ಮದುವೆ ಇತ್ಯಾದಿ ಆಗಿದೆಲ್ಲ ಪಾಕಿಸ್ತಾನದಲ್ಲಿ ನೆನಪಿರಲಿ. ಕಾಶ್ಮೀರದಲ್ಲಿ ಹಿಂದೂ ಪಂಡಿತರನ್ನು ಹಣಿಯುವ ಯೋಜನೆ ರೂಪಿತವಾಯಿತಲ್ಲ, ಆಗ ಹುಟ್ಟಿಕೊಂಡಿದ್ದ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್‌ಗೆ, ಅದಾಗಲೇ 1986ರಲ್ಲಿ ಹುಟ್ಟಿದ ಹಿಜ್ಬುಲ-ಆನ್ಸಾರ್, 1987ರ ಜಿಯಾ-ಟೈಗರ್ಸ್, 88ರ ಅಲ್ಫಾ-ಹಮ್ಜಾ, ಅಲ್ಫಾ-ಬದರ್ ಮತ್ತು ಆಂತರಿಕವಾಗಿ ಉತ್ತಮ ಸಂಘಟನೆಯಾಗಿದ್ದ ಅನ್ಸಾರುಲ-ಇಸ್ಲಾಂಗಳೆಂಬ ಮರಿ, ಕಿರಿಗಳನ್ನೆಲ್ಲ ಒಂದು ಗುಂಪಿನಡಿ ತಂದು ಗುಂಪು ಮಾಡಿದವನೇ ಈ ಯಾಸಿನ್ ಮಲಿಕ್.
ತದನಂತರದಲ್ಲಿ ಜೆ.ಕೆ.ಎಲ್.ಎಫ್.ನ ಮಂಚೂಣಿ ನಾಯಕರಲ್ಲಿ ಗುರುತಿಸಿಕೊಂಡ ಮಲಿಕ್, ಕಾಶ್ಮೀರದ ನೆಲ ಪಾಕ್‌ಗೂ ಇಲ್ಲ, ಭಾರತಕ್ಕೂ ಇಲ್ಲ ಅದು ಸಂಪೂರ್ಣ ಪ್ರತ್ಯೇಕ ಎಂದು ನಿಂತಿದ್ದವನು. ಗೃಹಮಂತ್ರಿಯ ಮಗಳನ್ನು ಅಪಹರಿಸಿದ ಕೇಸಿಗೂಮೊದಲೇ ಬೀದಿ ಕಾಳಗದಲ್ಲೂ ಗುರುತಿಸಿಕೊಂಡಿದ್ದ ಪಾತಕಿ. 1983ರಲ್ಲಿ ಶೇರ್ ಇ ಕಾಶ್ಮೀರ್ ಕ್ರಿಡಾಂಗಣಕ್ಕೆ ಧಮಕಿ ಹಾಕಿ ಭಾರತ ವೆಸ್ಟ್‌ಇಂಡೀಸ್ ಕ್ರಿಕೆಟನ್ನು ತಪ್ಪಿಸಲೆತ್ನಿಸಿದ್ದ. ನೆನಪಿರಲಿ ಆವತ್ತು ಭಾರತದ ಒಂದೊಂದು ವಿಕೆಟ್‌ಗೂ ಬಾನೆತ್ತರಕ್ಕೆ ಹಾರಾಡಿದ್ದು ಪಾಕಿಸ್ತಾನದ ಧ್ವಜಗಳು. ವೆಸ್ಟಿಂಡಿಯನ್ನರು ಮಕಮಕ ನೋಡಿಕೊಂಡಿದ್ದರು. ಆಗಲೂ ನಾಲ್ಕು ತಿಂಗಳುಮುದ್ದೆಮುರಿದಿದ್ದ.
ಅದಾಗಿ ಭಾರತ ತೀರ ಬಿಡಲೇ ಆಗದ ಕೇಸಿನಲ್ಲಿ ಜೆ.ಕೆ.ಎಲ್.ಎಫ್.ನ ಮೂಲ ಸ್ಥಾಪಕನಾದ ಮಕ್ಬೂಲ್‌ಭಟ್‌ಗೆ ವಿಧಿಸಲಾದ ಮರಣದಂಡನೆ ವಿರುದ್ಧ ಕಣಿವೆಯಲ್ಲಿ ಅತಿ ದೊಡ್ಡ ರ‍್ಯಾಲಿ ಆಯೋಜಿಸಿದ್ದವನು ಇದೇ ಮಲಿಕ್. ಅತ್ಯಂತ ಧರ್ಮಾಂಧ ಪಾತಕಿಗಳಾದ ಅಶ್ರಫ್ ವಾನಿ, ಜಾವೇದ್ ಮೀರ್, ಹಮೀದ್ ಶೇಖ್‌ಗಳ ಜತೆ ಗುರುತಿಸಿಕೊಂಡಿದ್ದ. ಜೆ.ಕೆ.ಎಲ್.ಎಫ್. 1976ರಲ್ಲಿ ಕಣ್ಬಿಟ್ಟಿತ್ತಾದರೂ ಕಣಿವೆಗೆ ಕಾಲಿಡುವ ಮೊದಲೇ ಯುನೈಟೆಡ್ ಕಿಂಗ್ ಡಮ, ಬರ್ಮಿಂಗ್ ಹ್ಯಾಮ್ ಮತ್ತು ಮಧ್ಯ ಏಷ್ಯಾದಲ್ಲಇದರ ಮೊದಲ ಕಚೇರಿಗಳು ಆರಂಭವಾಗಿದ್ದವು.
ಆದರೆ ಸರಿಯಾದ ಬೇಸ್ ಲಭ್ಯವಾಗದಿದ್ದಾಗ 1984ರಲ್ಲಿ ರವೀಂದ್ರ ಮಾತ್ರೆಯನ್ನು ಬರ್ಮಿಂಗ್ ಹ್ಯಾಮ್‌ನಲ್ಲಿ ಕೊಲ್ಲಿಸುವ ಮೂಲಕ ಉಮೇದಿ ಹಾರಿಸಿತ್ತು. ಸರಿಯಾದ ತಯಾರಿಯ ನಂತರ ಇದು ಭಾರತಕ್ಕೆ ಕಾಲಿಟ್ಟಾಗ ಇದರ ತೆಕ್ಕೆಗೆ ಬಿದ್ದವನು ಮಲಿಕ್. ಹೆಚ್ಚಿನ ಜೀವಮಾನವೆಲ್ಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದೇ ಕಳೆದವನು. ತನ್ನನ್ನು ತಾನು ಗೆರಿಲ್ಲ ಫೈಟರ್ ಎಂದು ಕರೆದು ಕೊಂಡಿದ್ದರೂ, ಪ್ರತ್ಯೆಕತಾವಾದದ ಹೇಡಿಯಂತೆ ಯಾವ ಸೂಚನೆಯನ್ನೂ ಕೊಡದೆ ರಸ್ತೆ ಪಕ್ಕ ನಿಂತಿದ್ದ ಸಾಲು ಸಾಲು ಜನರ ಮೇಲೆ ಬುಲೆಟ್ ಮೇಲೆ ಬಂದು ಬಂದೂಕು ಹಾರಿಸಿ ಕೊಂದು ಹಾಕಿದ್ದವನು.
ರುಬಿನಾ ಸೈಯ್ಯದ್ ಅಪರಹರಣದ ಕೇಸ್‌ನಲ್ಲಿ ಭಾರತೀಯ ಪಡೆಗಳ ಮೇಲೆ ಗೆರಿಲ್ಲ ಯುದ್ಧಕ್ಕಿಳಿದಿದ್ದ. ಅದ್ಯಾವ ಮಟ್ಟಿಗೆ ಭಾರತದ ವಿರುದ್ಧ ಇದ್ದನೆಂದರೆ 1987ರ ಚುನಾವಣೆಯಲ್ಲಿ ಟಿಕೆಟ್ ಕೊಡುವ ಆಫರ್ ಬಂದಾಗ, ಚುನಾವಣೆಯಲ್ಲಿ ನೇರ ಭಾಗಿ ಆಗಲೊಪ್ಪದೆ ಜಮಾತ್ ಇ ಇಸ್ಲಾಮ್‌ನ್ನು ಬೆಂಬಲಿಸಿದ್ದ. ಪ್ರಸ್ತುತ ಭಾರತದ ಸಂವಿಧಾನವನ್ನೇ ತಾನು ಒಪ್ಪದಿರುವಾಗ ಇಲೆಕ್ಷನ್ ಹೇಗೆ ಕಂಟೆಸ್ಟ್ ಮಾಡಲಿ ಎಂದಿದ್ದ. ಇದನ್ನೇ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಳಸಿದ್ದ. ಮಕ್ಬೂಲ್ ಭಟ್ ಮರಣ ದಂಡನೆ ಯನ್ನೇ ವ್ಯಾಪಕ ಬಳಕೆಗೂ, ಪ್ರಚಾರಕ್ಕೂ, ಇನ್ವಾಲ್ವ್ ಮಾಡಿದವನು ಇದೇ ಯಾಸಿನ್ ಮಲಿಕ್. ಇವನ ಉದ್ದೇಶ ಕಾಶ್ಮೀರಿ ರಾಷ್ಟ್ರೀಯತೆ ಮತ್ತು ಪ್ರತ್ಯೇಕತಾವಾದ.
ತೀರ ಕೊನೆ ಕೊನೆಗೆ ವ್ಯವಸ್ಥೆ ಮತ್ತು ಆಗಿನ ಮಾಧ್ಯಮ ಅದ್ಯಾವ ಮಟ್ಟಕ್ಕೆ ಇವರನ್ನು ಒಳಕ್ಕೆ ಬಿಟ್ಟುಕೊಂಡವೆಂದರೆ ಆ ಕಾಲಕ್ಕೆ ದೇಶದ ಪತ್ರಕರ್ತೆಯರಿಗೆ ಮಾಡೆಲ್‌ನಂತೆ ಕಾಣುತ್ತಿದ್ದ ಅರುಂಧತಿ ರಾಯ್ ಅವನ ಕೈಹಿಡಿದು ತಂದು ರಾಜಧಾನಿಯ ಪಡಸಾಲೆ ಯಲ್ಲಿ (ಮಾರ್ಚ್ 17, 2005) ಹಲ್ಲು ಕಿರಿಯುತ್ತಾ ಅಡ್ಡಾಡುತ್ತಿದ್ದರೆ ಭಾರತೀಯ ಹಿಂದೂಗಳ ದುರಂತಕ್ಕೆ ಏನೆನ್ನಬೇಕೋ? ಅದಾಗಲೇ ಎರಡು ಬಾರಿ ದೇಶದ್ರೋಹದ ಅಪಾದನೆಯ ಮೇಲೆ ವರ್ಷಗಟ್ಟಲೆಮುದ್ದೆಮುರಿದಿದ್ದ ಅವನು.
ಜಗತ್ತೇ ಕಂಡ ಅತ್ಯಂತ ಹೆಚ್ಚು ಓದಿಕೊಂಡ, ಪದವೀಧರ ಎಂದೇ ಪರಿಚಿತ ನಿಸ್ಪ್ರಹ ಪ್ರಧಾನಿ ಮನಮೋಹನ್ ಸಿಂಗ್ ದಿಲ್ಲಿಯ ರಾಜಕೀಯ ಪಡಸಾಲೆಯಲ್ಲಿ ಇವನನ್ನು (17 ಪೆಬ್ರುವರಿ. 2006) ಎದುರುಗೊಳ್ಳಬೇಕಾಯಿತು. ಅತ್ಯಂತ ದುರುಳ ಪಾತಕಿಎನ್ನಿಸಿ ಕೊಂಡ ಸಯಿದ್‌ನೊಂದಿಗೆ ಕೈ ಸೇರಿಸಿದ್ದವನೊಡನೆ ಸಿಂಗ್ ಕೈ ಸೇರಿಸುವಂತಾಗಿದ್ದು ತುಷ್ಟೀಕರಣ ರಾಜಕೀಯದ ರಾಜಕಾರಣದ, ಅನಾಹುತಕಾರಿ ಪರಿಣಾಮ ಇದು. ವೈಯಕ್ತಿಕವಾಗಿ ಸಿಂಗ್‌ಗೆ ಇದೆಲ್ಲ ಬೇಕಿತ್ತೋ ಇಲ್ಲವೋ ಆದರೆ  ಅನಿವಾರ್ಯ ವಾಗಿ ಆಗಿನ ಸರಕಾರದ ಅಪಸವ್ಯಗಳಿಗೆ ಹೆಗಲು ನೀಡಿದ್ದು ಅವರ ಮೇಲೊಂದು ಕಳಂಕಕ್ಕೂ ಕಾರಣವಾಯಿತು.
ಆಗಲೆ ಹೆಸರು ಬದಲಿಸಿಸ-ರ್ಈ ಅಜಾದಿ ಎನ್ನುವ ಯಾತ್ರೆ ಚಾಲನೆಗೆ ಕೊಟ್ಟಿದ್ದ. ಇದನ್ನು ಜಗತ್ತಿನ ಮೂರುವರೆ ಸಾವಿರ ಪಟ್ಟಣಗಳ ಮೂಲಕ ನಡೆಸಿ ಜಾಗತಿಕ ಪ್ರಯತ್ನಕ್ಕೆ ಚಾಲನೆ ಕೊಟ್ಟಿದ್ದ. 1990ರ ಜನೆವರಿಯಲ್ಲಿ ರಾತ್ರೋ ರಾತ್ರಿ ಲಕ್ಷಾಂತರ ಕಾಶ್ಮೀರಿ ಹಿಂದೂಗಳನ್ನು ಒಕ್ಕಲೆಬ್ಬಿಸಿದರಲ್ಲ. ಅದೇ ವಾರ ಒಂದು ಮೆರವಣಿಗೆಯನ್ನು ಜನೆವರಿ 26ಕ್ಕೆ ಆಯೋಜಿಸಲು ಕೂಡಾ ಈತ ಸಿದ್ಧನಾಗಿದ್ದ. ಆದರೆ ಅದರ ಹಿಂದಿನ ದಿನವೇ ಅಂದರೆ ಜನವರಿ 25ರಂದು ಏರ್ ಫೋರ್ಸಿನ ರವಿ ಖನ್ನಾ ಮತ್ತು ಇತರ ಸಂಗಡಿಗರು ‘ರವಾಲ್ಪುರ’ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಕಾಯುತ್ತಿದ್ದಾಗ, ಮಾರುತಿ ಜಿಪ್ಸಿ ಮತ್ತು ಬೈಕುಗಳಲ್ಲಿ ಬಂದ ನಾಲ್ವರುಉಗ್ರರು ಎ.ಕೆ. 47ನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ್ದರು.
ವಾಯು ಸೇನೆಯ 13 ಜನ ಸಿಬ್ಬಂದಿ ನೆಲಕ್ಕುರುಳಿದ್ದರು. ಅದರಲ್ಲಿ ಮೂವರು ಅಲ್ಲಿಯೇ ಸತ್ತು ಹೋಗಿದ್ದರು. ಉಳಿದವರು ಗಾಯಗೊಂಡಿದ್ದರೆ ನಾಯಕತ್ವ ವಹಿಸಿದ್ದ ಯಾಸಿನ್ ಮಲಿಕ್ ಇದಕ್ಕೆ ತಾನೇ ಹೊಣೆ ಎಂದು ನಂತರದಲ್ಲಿ, ಟೀಮ್ ಸೆಬಾಸ್ಟಿನ್ ಎಂಬಾತ ಮಾಡಿದ್ದ ಸಂದರ್ಶನದಲ್ಲಿ ತಾನು ಒಪ್ಪಿಕೊಂಡಿದ್ದ. ಆಗಲೂ 1990 ರಿಂದ 1994ವರೆಗೆ ಜೈಲು ಪಾಲಾಗಿದ್ದ ಈಯಾಸಿನ್‌ಗೆ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದವನು ಇಸಾಕ್ ವಾನಿ.
ಲೆಕ್ಕ ಹಾಕಿ ಯಾವ ಮಟ್ಟದಲ್ಲಿ ಇತನ ಪಾತಕತನವಿದ್ದೀತು ಮತ್ತು ಆದರೂ ಇತ್ತಿಚೆಗೆ ಮೋದಿ ಸರಕಾರ ಇಂಥವೆಲ್ಲ ರಂಕುಗಳಿಗೆ ಗತಿ ಕಾಣಿಸಲು, ಒಂದು ಕಡೆಯಿಂದ ಇಂಥಾ ಎಲಿಮೆಂಟುಗಳನ್ನು ಗುಡಿಸತೊಡಗಿದ ಪರಿಣಾಮ ಕಂಬಿ ಹಿಂದೆ ಮುದ್ದೆ  ಮುರಿಯುವಂತಾಯಿತು. 2019 ರಿಂದ ತಿಹಾರ್ ಜೈಲಿನಲ್ಲಿದ್ದ ಈತನ ಮೇಲೆ ಸೆಕ್ಷನ್ 116- ಭಯೋತ್ಪದನಾ ಕೃತ್ಯ, 17 ಅದಕ್ಕಾಗಿ ಹಣಕಾಸು ನಿರ್ವಹಣೆ, 18 ಭ. ಸಂಚು, 20 ಗುಂಪು ಮತ್ತು ಸಂಘಟನೆ ಸದಸ್ಯ ಸ್ಥಾಪಕ, 120ಬಿ ಮತ್ತು 124-1 ದೇಶ ದ್ರೋಹದ ಆಪಾದನೆಗಳು ಸಾಬೀತಾಗಿದ್ದು ಜೀವಾವಧಿ ಶಿಕ್ಷೆ ಮತ್ತು ಹತ್ತು ಲಕ್ಷ ದಂಡ ವಿಧಿಸಲಾಗಿದೆ.
ಇನ್ನಾದರೂ ಆಜಾದಿ ಎಂದು ಕಿರುಚುವ ದ್ರೋಹಿಗಳನ್ನು ಬೆಂಬಲಿಸುವ, ಆ ಮೂಲಕ ಕರ್ನಾಟಕದಲ್ಲೂ ಪ್ರಚೋದನಕಾರಿ ಪೋಸ್ಟ್ ಬರೆದು ಹಿಂದೂಗಳನ್ನು ಅವಹೇಳನ ಮಾಡಿ ಪೊಸ್ಟ್ ಹಾಕಿ, ಅದಕ್ಕೆ ತಮ್ಮ ಬೆರಗಿನ ಚಿತ್ರ ಸೇರಿಸಿ ಲೈಕು ಕಮೆಂಟ್ ಗಿಟ್ಟಿಸುವ ಅರೆಬೆಂದ ಬರಹಗಾರ್ತಿಯ ಪೋಸಿನ ಹೆಂಗಸರು ಯಾರೊಂದಿಗೆ ಕೈ ಸೇರಿಸಬೇಕೆನ್ನುವುದನ್ನು ಇನ್ನಾದರೂ ಕೊಂಚ ಯೋಚಿಸಲಿ. ಕಾರಣ ನೆಲದ ಮತ್ತು ಗುಂಪಿನ ಚಿತ್ತ ಕೆಡುವಂತೆ ಮಾಡುವುದು ಈ ಹೆಂಗಸರಿಗೆ ಸುಲಭ. ಅದನ್ನು ಮತ್ಯಾರೊ ಕಾಶ್ಮೀರಿ ಪಂಡಿತರಂತೆ ಲೆಕ್ಕ ತಪ್ಪಿ ಅದರ ಪರಿಣಾಮ ಅಮಾಯಕರು ಅನುಭವಿಸಬೇಕಾಗುತ್ತದೆ.
ಸರಿಯಾಗಿ ಸಂಸಾರ ನಿಭಾಯಿಸಲಾಗದ, ಮನೆಯಲ್ಲಿ ಒದೆ ತಿನ್ನುವ, ಇzಬ್ಬ ಮಗನನ್ನೂ ಬಾಳಿಸಲಾಗದ ಹೆಂಗಸರೆಲ್ಲ ಇವತ್ತು ಇಂಥಾ ದೇಶದ್ರೋಹಿಗಳನ್ನು ಬೆಂಬಲಿಸಿದರೆ ಇದಕ್ಕಿಂತ ಭೇರೆ ಫಲಿತಾಂಶ ಬಂದಿತಾದರೂ ಹೇಗೆ? ಅಂದ ಹಾಗೆ ನಾನು ಮೇಲ್ಕಾಣಿಸಿದ ಕೇಸುಗಳೆಲ್ಲ ಇನ್ನು ಚಾಲನೆಯಲ್ಲಿವೆ. ಈದೀಗ ಬಂದ ತೀರ್ಪು ಕೇವಲ ಒಂದು ಕೇಸಿನದ್ದು. ಯಾರಿಗೆ ಜೈ ಎನ್ನುತ್ತಿರ ಯೋಚಿಸಿ