ಮಹಿಳಾ ಸಬಲೀಕರಣದಲ್ಲಿ ಆತ್ಮನಿರ್ಭರತೆ
ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್‌
2001ರಲ್ಲಿ ಮಧ್ಯಪ್ರದೇಶದಲ್ಲಿ 1000 ಗಂಡು ಮಕ್ಕಳಿಗೆ 932 ಹೆಣ್ಣು ಮಕ್ಕಳ ಜನನವಾಗುತಿತ್ತು. ಆದರೆ 2011ರಲ್ಲಿ ಇದರ ಸಂಖ್ಯೆಯು ಕುಸಿದು 918ಕ್ಕೆ ಕುಸಿಯಿತು. ಇದೇ ಪ್ರವೃತ್ತಿ ಮುಂದುವರಿದಿದ್ದರೆ 2022ಕ್ಕೆ ಹೆಣ್ಣು ಮಕ್ಕಳ ಸರಾಸರಿ ಜನನ 900ರೊಳಗೆ ತಲುಪುವ ಸಾಧ್ಯತೆಯಿತ್ತು.
ಮೋದಿ ಸರಕಾರದಲ್ಲಿ ಮಹಿಳಾ ಸಬಲೀಕ ರಣ ಕೇವಲ ಕಾಗದಕ್ಕೆ ಸಿಮೀತವಾಗದೆ ನೆಲಮಟ್ಟದಲ್ಲಿಯೂ ಅದರ ಅನುಭವ ವಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಮಹಿಳೆ ಯರ ಬದುಕು ಬದಲಾಗಿದೆ. ಕಳೆದ ಎಂಟು ವರ್ಷದಲ್ಲಿ ಅವರ ದೈನಂದಿನ ಚಟು ವಟಿಕೆಯಲ್ಲಿ ಮೋದಿ ಸರಕಾರದ ಮಹಿಳಾ ಕೇಂದ್ರೀಕೃತ ಯೋಜನೆಗಳು ಕೋಟ್ಯಂತರ ಗೃಹಿಣಿಯರ ಬದುಕಿನಲ್ಲಿ ಸಕಾರಾತ್ಮಕ ಪರಿವರ್ತನೆ ತಂದಿದೆ.
ಮಹಿಳೆಯರು ಸ್ವಯಂ ಉದ್ಯೋಗಿಗಳಾಗಲು ಮತ್ತು ಪ್ರತಿ ಹಂತದಲ್ಲಿಯೂ ಸ್ವಾವ ಲಂಬಿಗಳಾಗಲು ಕೈಗೊಂಡಿರುವ ಸರಕಾರದ ವಿಶೇಷ ಪ್ರಯತ್ನಗಳು ಫಲ ನೀಡುತ್ತಿದೆ. ಪ್ರಮುಖವಾಗಿ ಶೌಚಾಲಯ ನಿರ್ಮಾಣ, ಉಚಿತ ಗ್ಯಾಸ್ ಸಿಲಿಂಡರ್, ಕೊಳಾಯಿ ಮೂಲಕ ನೀರು ಮತ್ತು ಉಚಿತ ಪಡಿತರ ವಿತರಣೆ ಮುಂತಾದ ಜನಪರ ಯೋಜನೆಗಳು ಮಹಿಳೆಯರ ಮನದಲ್ಲಿ ಮೋದಿ ಯವರು ಭದ್ರವಾಗಿ ನೆಲೆಯೂರುವಂತೆ ಮಾಡಿದೆ.
ಇದೇನು ಉತ್ಪ್ರೇಕ್ಷಿತ ಬಣ್ಣನೆಯಲ್ಲ. 2019ರ ಚುನಾವಣೆಯಲ್ಲಿ ಅಂದಾಜು ಶೇ.46ರಷ್ಚು ಮಹಿಳಾ ಮತದಾರರು ಮೋದಿ ಯವರನ್ನು ಬೆಂಬಲಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳುತ್ತದೆ. ಇತ್ತೀಚೆಗೆ ನಡೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಶೇ.62.2 ರಷ್ಚು ಮಹಿಳಾ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪ್ರಧಾನಿ ಮೋದಿಯವರು ರಾಷ್ಟ್ರ ನಿರ್ಮಾಣದಲ್ಲಿ ನಾರಿ ಶಕ್ತಿಗೆ ಸಮಪಾಲು ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬುತ್ತಿದ್ದಾರೆ.
ಮನೆ ಒಡೆಯರಾಗುವುದು ಪ್ರತಿಯೊಬ್ಬ ಭಾರತೀಯರು ಕಾಣುವ ಕನಸು. ಬಡವರಿಗೆ ಅದು ಗಗನ ಕುಸುಮ. ಆದರೆ ಪಿಎಂ ಆವಾಸ್ ಯೋಜನೆಯಲ್ಲಿ ಕಡುಬಡ ಮಹಿಳೆಗೂ ಸ್ವಂತ ಸೂರು ನೀಡಿ ಅವರ ಕನಸು ನನಸು ಮಾಡುತ್ತಿದ್ದಾರೆ. ಈ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ, ಗ್ಯಾಸ್ ಸಂಪರ್ಕ, ಶೌಚಾಲಯ ಮತ್ತು ಕೊಳಾಯಿ ನೀರು ಸಂಪರ್ಕ ಸಹಿತ ಮನೆಗಳನ್ನು ನೀಡಲಾ ಗುತ್ತಿದೆ. ಇಲ್ಲಿ ತನಕ 2.5ಕೋಟಿ ಗ್ರಾಮೀಣ ಬಡ ಮಹಿಳೆಯರಿಗೆ ಮನೆ ಹಂಚಿ ಅದನ್ನು ಮನೆಯ ಮಹಿಳೆಯ ಹೆಸರಿಗೆ ನೋಂದಣಿ ಮಾಡಿ ಕೊಡಲಾಗುತ್ತಿದೆ.
ಸ್ವಯಂ ಉದ್ಯೋಗ ಆರಂಭಿಸಲು ಮುದ್ರಾ ಯೋಜನೆಯಲ್ಲಿ ಶೇ.68ರಷ್ಟು ಖಾತೆಗಳನ್ನು ಮಹಿಳೆಯರು ಹೊಂದಿದ್ದಾರೆ. ಇವರಿಗೆ 7.42 ಲಕ್ಷ ಕೋಟಿ ಸಾಲ ಮಂಜೂರು ಮಾಡಿ ಮಹಿಳೆಯರಲ್ಲಿ ಉದ್ಯಮಶೀಲತೆಗೆ ಆದ್ಯತೆಯ ಮೇಲೆ ಉತ್ತೇಜನ ನೀಡಲಾಗುತ್ತಿದೆ. ಜನ್‌ ಧನ್ ಬ್ಯಾಂಕ್ ಯೋಜನೆಯಲ್ಲಿ 41.93 ಕೋಟಿ ಖಾತೆಯಲ್ಲಿ ಮಹಿಳೆಯರು ೨೩.೨೧ ಕೋಟಿ ಖಾತೆಯನ್ನು ತೆರೆದಿರು ವವರು.
ಕರೋನಾ ಅವಧಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ 20 ಕೋಟಿ ಮಹಿಳೆಯರ ಖಾತೆಗೆ ಸತತವಾಗಿ ಮೂರು ತಿಂಗಳು ರು. 500 ನೇರವಾಗಿ ವರ್ಗಾವಣೆ ಮಾಡಲಾಯಿತು. ಸಂಕಷ್ಟದ ಸಮಯದಲ್ಲಿ ಬಡ ಮಹಿಳೆಯರ ನೆರವಿಗೆ ಮೋದಿ ಸರಕಾರ ಧಾವಿಸಿತು. ಏಪ್ರಿಲ್ 2020 ರಿಂದ ಕೇಂದ್ರ ಸರಕಾರ ೮೦ ಕೋಟಿ ರೇಷನ್ ಕಾರ್ಡ್‌ಗಳಿಗೆ ಉಚಿತ ರೇಷನ್ ನೀಡು ತ್ತಿದೆ. ಈ ಯೋಜನೆಯು ಸೆಪ್ಟಂಬರ್ 2022ರ ತನಕ ನೀಡಲಾಗುವುದು. ಅಡಿಗೆ ಮನೆಯಲ್ಲಿ ಯಾವುದೇ ಚಿಂತೆಯಿಲ್ಲದೆ ಅಡಿಗೆ ಮಾಡಲು ಇದರಿಂದ ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗಿದೆ.
11 ಕೋಟಿ ಶೌಚಾಲಯವನ್ನು ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಕಾರಣ ಮಹಿಳೆಯರು ದೈಹಿಕ ಚಿತ್ರಹಿಂಸೆಯಿಂದ ಮುಕ್ತಿ ಪಡೆದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಹೊಗೆ ತುಂಬಿದ ವಾತಾವರಣದಲ್ಲಿ ಅಡುಗೆ ಮಾಡುವ ಕಾರಣ ಭಾರತದಲ್ಲಿ 5 ಲಕ್ಷ ಮಹಿಳೆಯರು ಹೃದಯ ಸಂಬಂಧಿ, ಶ್ವಾಸಕೋಶ ಕ್ಯಾನ್ಸರ್ ಮುಂತಾದ ಖಾಯಿಲೆಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು.
ಉಜ್ವಲ ಯೋಜನೆಯಲ್ಲಿ 9 ಕೋಟಿ ಅಡುಗೆ ಅನಿಲದ ಸಿಲಿಂಡರ್ ಉಚಿತವಾಗಿ ನೀಡಿರುವುದರಿಂದ ಮಹಿಳೆಯರು ಈಗ ಆರೋಗ್ಯಕರ ಮತ್ತು ಹೊಗೆರಹಿತ ವಾತಾವರಣದಲ್ಲಿ ಅಡುಗೆ ಮಾಡಲು ಸಹಾಯವಾಗಿದೆ ಮತ್ತು ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಜಲಜೀವನ್ ಮಿಷನ್ ಮೂಲಕ ಮನೆ ಮನೆಗೂ ಕೊಳಾಯಿ ಮೂಲಕ ನೀರು ಕೊಡುವ ಯೋಜನೆಯಿಂದ ಮಹಿಳೆಯರು ನೀರಿಗಾಗಿ ದೂರ ದೂರ ಹೋಗಬೇಕಾದ ಕಷ್ಟದಿಂದ ಪಾರಾಗಿದ್ದಾರೆ.
ಅಂಗನವಾಡಿ ನೌಕರರಿಗೆ ಗೌರವ ಧನವನ್ನು ರು. 9678 ರಿಂದ ರು.12720ಗಳಿಗೆ ಹೆಚ್ಚಳ ಮಾಡಲಾಗಿದೆ. ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ 11 ಮಹಿಳೆಯರು ಸಚಿವ ಸ್ಥಾನ ಪಡೆದಿದ್ದಾರೆ. ಮೋದಿ ಸರಕಾರವು 8 ಮಹಿಳೆಯರನ್ನು ರಾಜ್ಯ ಪಾಲ ಮತ್ತು ಲೆಫ್ಟಿನೆಂಟ್ ಗೌವರ್ನರ್‌ಗಳಾಗಿ ನೇಮಕ ಮಾಡಿದ್ದಾರೆ. ಮತ್ತೊಂದು ವಿಶೇಷವೆಂದರೆ 2015ರಿಂದ 185 ಮಹಿಳೆಯ ರಿಗೆ ಪದ್ಮ ಪ್ರಶಸ್ತಿ ನೀಡಲಾಗಿದೆ. ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ಮುಸ್ಲಿಂ ಸಮಾಜದಲ್ಲಿ ಒಂದು ಎಸ್‌ಎಂಎಸ್ ಮೂಲಕ ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳಿ ಸುಲಭವಾಗಿ ವಿಚ್ಛೇದನ ನೀಡುತ್ತಿದ್ದ ಅನಿಷ್ಟ ಪದ್ಧತಿಗೆ ಮೋದಿ ಸರಕಾರ ವಿದಾಯ ಹೇಳಿದೆ.
ಈಗ ತ್ರಿವಳಿ ತಲಾಖ್ ಕೊಟ್ಟವರು ಕ್ರಿಮಿನಲ್ ಮೊಕದ್ದಮೆ ಎದುರಿಸ ಬೇಕಾಗುತ್ತದೆ. ಮಹಿಳೆಯು ಆರ್ಥಿಕವಾಗಿ ಸಬಲೀಕರಣವಾಗಲು ಮತ್ತು ಉದ್ಯಮ ಸ್ಥಾಪಿಸಲು     ಯೋಜನೆಯಡಿಯಲ್ಲಿ 10 ಲಕ್ಷ ದಿಂದ ಒಂದು ಕೋಟಿಯ ತನಕ ಬ್ಯಾಂಕ್ ಸಾಲ ನೀಡಲಾಗುತ್ತದೆ. ಇಲ್ಲಿಯತನಕ ಈ ಯೋಜನೆ ಯಡಿಯಲ್ಲಿ 1.34ಲಕ್ಷ ಜನ ಸಾಲ ಸೌಲಭ್ಯ ಪಡೆದಿದ್ದರೆ ಅದರಲ್ಲಿ ಶೇ.81ರಷ್ಟು ಫಲಾನುಭವಿಗಳು ಮಹಿಳೆಯರು ಎಂಬುದು ಗಮನಾರ್ಹ.
ಮಹಿಳೆಯರಿಗೆ ಪ್ರಸವದ ತರುವಾಯ ಹೆರಿಗೆ ರಜೆಯನ್ನು 12 ವಾರಗಳು ನೀಡಲಾಗುತ್ತಿತ್ತು ಮಗು ಮತ್ತು ತಾಯಿಯ ಆರೈಕೆ ಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆರಿಗೆ ರಜೆಯನ್ನು 26 ವಾರಗಳಿಗೆ ಏರಿಕೆ ಮಾಡಲಾಗಿದೆ. ಮಹಿಳೆಯರ ಸ್ಯಾನಿಟರಿ ನ್ಯಾಪ್‌ಕಿನ್ ಮೇಲಿನ ಶೇ.12ರಷ್ಟು ಜಿಎಸ್‌ಟಿಯನ್ನು ರದ್ದುಪಡಿಸಲಾಯಿತು. ಶೇ.12ರಷ್ಟು ಜಿಎಸ್‌ಟಿ ಹಾಕಿದಾಗ ಇದನ್ನು ತೀವ್ರವಾಗಿ ಟೀಕಿಸ ಲಾಗಿತ್ತು. ವಾಸ್ತವವಾಗಿ ಜಿಎಸ್‌ಟಿ ಬರುವ ಮುನ್ನವು ಶೇ.12ರಷ್ಟು ತೆರಿಗೆ ಹಾಕಲಾಗಿತ್ತು. ಆದರೂ ಕೇಂದ್ರ ಸರಕಾರ ಮಹಿಳೆಯರ ಬೇಡಿಕೆಯನ್ನು ಮನ್ನಿಸಿ ಜಿಎಸ್‌ಟಿ ಹಿಂಪಡೆಯಿತು.
ಮಹಿಳಾ ಸುರಕ್ಷತಾ ಕ್ರಮ ಕೈಗೊಳ್ಳಲು ನಿರ್ಭಯಾ ನಿಧಿಯನ್ನು ರು. 2000 ಕೋಟಿಯಿಂದ 4000 ಕೋಟಿಗೆ ಹೆಚ್ಚಳ ಮಾಡಲಾ ಯಿತು. ಕರ್ನಾಟಕ ರಾಜ್ಯಕ್ಕೆ ರು. 720 ಕೋಟಿ ಅತಿ ಹೆಚ್ಚು ಅನುದಾನ ದೊರೆತಿದೆ. 2018ರಲ್ಲಿ ಕೇಂದ್ರ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದರೆ ಮರಣದಂಡನೆ ಶಿಕ್ಷೆ ನೀಡುವ ಕಾಯಿದೆಯನ್ನು ಜಾರಿಗೆ ತಂದಿದೆ. ವಿಶ್ವದ ಕೇವಲ ಏಳು ದೇಶ ಗಳಲ್ಲಿ ಮಾತ್ರ ಅತ್ಯಾಚಾರಕ್ಕೆ ಮರಣದಂಡನೆ ಕಾಯಿದೆ ಜಾರಿಯಲ್ಲಿ ಇರುವುದು.
ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯು ಹೆಚ್ಚಾಗಿ ಗಂಡು ಮತ್ತು ಹೆಣ್ಣು ಸಂತತಿಯ ಸರಾಸರಿಯ ಅಂತರ ಹೆಚ್ಚಾಗಿ ಹೆಣ್ಣು ಮಕ್ಕಳ ಸಂಖ್ಯೆಯು ಕುಸಿಯ ತೊಡಗಿತು. ಮದುವೆಯ ಸಂದರ್ಭದಲ್ಲಿ ಅತಿ ಹೆಚ್ಚು ವರದಕ್ಷಿಣೆ ಕೊಡಬೇಕು ಎಂಬ ಕಾರಣಕ್ಕೆ ಭ್ರೂಣ ದಲ್ಲಿಯೇ ಹತ್ಯೆ ಮಾಡುವ ಅನಿಷ್ಟ ವ್ಯವಸ್ಥೆ ಹೆಚ್ಚಾಗಿ ನಡೆಯತೊಡಗಿತು. ೨೦೦೧ರಲ್ಲಿ ಮಧ್ಯಪ್ರದೇಶದಲ್ಲಿ 1000 ಗಂಡು ಮಕ್ಕಳಿಗೆ 932 ಹೆಣ್ಣು ಮಕ್ಕಳ ಜನನವಾಗುತಿತ್ತು. ಆದರೆ 2011ರಲ್ಲಿ ಇದರ ಸಂಖ್ಯೆಯು ಕುಸಿದು 918ಕ್ಕೆ ಕುಸಿಯಿತು.
ಇದೇ ಪ್ರವೃತ್ತಿ ಮುಂದುವರಿದಿದ್ದರೆ 2022ಕ್ಕೆ ಹೆಣ್ಣು ಮಕ್ಕಳ ಸರಾಸರಿ ಜನನ 900ರೊಳಗೆ ತಲುಪುವ ಸಾಧ್ಯತೆಯಿತ್ತು. ಈ ಸಾಮಾಜಿಕ ಪಿಡುಗಿಗೆ ತಡೆ ಹಾಕುವುದು ಅತ್ಯಾವಶ್ಯಕವಾಗಿತ್ತು. ಇದರ ಕುರಿತು ಜನಜಾಗೃತಿ ಅಭಿಯಾನ ಕೈಗೊಳ್ಳುವ ಸಲುವಾಗಿ ಬೇಟಿ ಪಡಾವ್ ಬೇಟಿ ಬಚಾವ್ ಅಭಿಯಾನವನ್ನು ಆರಂಭಿಸಲಾಯಿತು. ಇದರ ಜತೆ ಸುಕನ್ಯ ಸಮೃದ್ಧಿ ಯೋಜನೆ ಜೋಡಿಸಿಜಾರಿಗೆ ತಂದರು. ಈ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟು ಶೇ.7.6 ಬಡ್ಡಿ ದೊರೆಯುತ್ತದೆ. 21 ವರ್ಷಕ್ಕೆ ಈ ಠೇವಣಿಯು ಮುಕ್ತಾಯವಾಗುವುದು.
ಈಗಾಗಲೇ 1.5 ಕೋಟಿ ಖಾತೆಯನ್ನು ಈ ಯೋಜನೆಯಡಿಯಲ್ಲಿ ತೆರೆಯಲಾಗಿದೆ. ಬೇಟಿ ಪಡಾವ್ ಬೇಟಿ ಬಚಾವ್ ಯೋಜನೆಯಉದ್ದೇಶವು ಹೆಣ್ಣು ಮಕ್ಕಳ ಕಾಪಾಡಲು ಕೈಗೊಳ್ಳುವ ಪ್ರಚಾರ ಅಭಿಯಾನ. ಇದಕ್ಕೆ ಮೀಸಲಿಟ್ಚ ಹಣವು ಪ್ರಚಾರಕ್ಕೆ ಹೆಚ್ಚು ವೆಚ್ಚವಾಗಿದೆ ಎಂದು ಲೋಕಸಭೆಯಲ್ಲಿ ಉತ್ತರ ಕೊಟ್ಚ ಕೂಡಲೇ ಈ ಯೋಜನೆಯ ಅನುಷ್ಠಾನದ ವಿಧಾನವನ್ನು ತಿಳಿಯದೆ ಸದಾ ಬಕಪಕ್ಷಿಗಳ ಹಾಗೆ ಮೋದಿಯವರು ತಪ್ಪು ಮಾಡುವುದನ್ನು ಕಾಯುತ್ತಿರುವವರು ಮನಸೋಯಿಚ್ಛೆ ಟೀಕಿಸಿ ಮತ್ತಷ್ಟು ತಮ್ಮ ವಿಶ್ವಾಸಾರ್ಹತೆಗೆ ಧಕ್ಕೆ ತಂದುಕೊಂಡರು.
ವಿದೇಶಾಂಗ ಖಾತೆ, ರಕ್ಷಣಾ ಖಾತೆ ಮತ್ತು ಹಣಕಾಸು ಖಾತೆಯನ್ನು ಮಹಿಳೆಯರಿಗೆ ನೀಡಿ ಮಹಿಳಾ ಸಬಲೀಕರಣದ ಬದ್ಧತೆ ಯನ್ನು ಮೋದಿಯವರು ಪ್ರದರ್ಶಿಸಿದ್ದಾರೆ. ಇವೆಲ್ಲವು ಸಾಂಕೇತಿಕವಾಗಿದ್ದರೂ ಪುರುಷ ಪ್ರಾಧಾನ್ಯ ಸಮಾಜಕ್ಕೆ ಮಹಿಳೆಯರುಯಾವುದರಲ್ಲಿಯೂ ಪುರುಷರಿಗೆ ಕಡಿಮೆ ಇಲ್ಲ ಎಂಬ ಸಂದೇಶ ನೀಡಲಾಗಿದೆ. ಸೇನೆಯಲ್ಲಿಯೂ ಮಹಿಳಾ ಅಧಿಕಾರಿಗಳಿಗೆಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ.
ವಿಶೇಷವಾಗಿ ರಿಪಬ್ಲಿಕ್ ಡೇ ಪೆರೇಡ್‌ನಲ್ಲಿ. ಜನವರಿ 2020ರ ಪೆರೇಡ್‌ನಲ್ಲಿ ಕ್ಯಾ. ತಾನಿಯಾ ಶೇರ್ ಗಿಲ್ ಮೊಟ್ಟ ಮೊದಲ ಮಹಿಳಾ ಅಡ್ಜುಟೆಂಟ್ ಆಗಿ ರಿಪಬ್ಲಿಕ್ ಡೇ ಪೆರೇಡ್‌ನಲ್ಲಿ ಭಾಗಿಯಾಗಿದ್ದರು. ೨೦೧೯ರಲ್ಲಿ ಮೇಜರ್ ಖುಷ್ಬು ಅಸ್ಸಾಂ ರೈಫಲ್ಸ್ ಮಹಿಳಾ ಪಡೆಯ ನೇತೃತ್ವ ವಹಿಸಿದ್ದರು. ಫ್ಲೈಟ್ಲೆಫ್ಟಿನೆಂಟ್ ಸ್ವಾತಿ ರಾಥೋರ್ ಮೊದಲ ಬಾರಿಗೆ ಮಿಗ್-17 ಚಾಲನೆ ಮಾಡುತ್ತಾ ಫ್ಲೈ ಫಾಸ್ಟ್ನೇತೃತ್ವ ವಹಿಸಿದ್ದರು.
ಶಿವಾಂಗಿ ಸಿಂಗ್ ದೇಶದ ಮೊಟ್ಟ ಮೊದಲ ರಫೆಲ್ ಫೈಟರ್ ಜೆಟ್ ಪೈಲೆಟ್ ವಾಯುಪಡೆಯ ಪೆರೇಡ್‌ನ ಟ್ಯಾಬ್ಲೊ ಭಾಗ ವಾಗಿದ್ದರು. ದೇಶದ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶವಿರಲಿಲ್ಲ ಮೋದಿಯವರು 2021ರ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ದೇಶದ ಎಲ್ಲ ಸೈನಿಕ ಶಾಲೆಗಳಿಗೆ ಹೆಣ್ಣು ಮಕ್ಕಳ ಪ್ರವೇಶದ ಘೋಷಣೆ ಮಾಡಿದರು. ಮಹಿಳಾ ಸಬಲೀ ಕರಣಕ್ಕೆ ಹಿಂದೆಂದೂ ನೀಡದ ಪ್ರಾಮುಖ್ಯತೆಯನ್ನು ನೀಡಿ ಅವರನ್ನು ಸಮಾಜದಲ್ಲಿ ಎಲ್ಲರ ನಡುವೆ ಸರಿಸಮನಾಗಿ ನಿಲ್ಲುವ ಕಾರ್ಯವನ್ನು ಮೋದಿ ಸರಕಾರವು ನೀಡಲು ಕಂಕಣಬದ್ಧವಾಗಿದೆ.
ಮಹಿಳೆಯರನ್ನು ಆತ್ಮನಿರ್ಭರತೆಯ ಹಾದಿಗೆ ಕರೆದೊಯ್ಯುವುದು ಸಮಯದ ಕೂಗು ಆ ಕೂಗಿಗೆ ಮೋದಿ ಸರಕಾರವು ಸಕಾರಾ ತ್ಮಕವಾಗಿ ಸ್ಪಂದಿಸುತ್ತಿದೆ.