ಡಾ.ಹೆಡಗೇವಾರ್‌ ಜೀವನ ವೃತ್ತಾಂತ
ಪ್ರಸ್ತುತ
ಜಗದೀಶ್ ಮಾನೆ
ತಮ್ಮನ್ನು ತಾವೇ ಬುದ್ಧಿಜೀವಿಗಳು ಅಂತ ಹೇಳಿಕೊಂಡಿರುವ ನಕಲಿ ಸೆಕ್ಯುಲರ್‌ವಾದಿಗಳು, ಕಾಂಗ್ರೆಸ್ಸಿನವರು, ಕಮ್ಯೂನಿಸ್ಟರು ಇವರಿಗೆಲ್ಲ, ಆರ್‌ಎಸ್‌ಎಸ್‌ನ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರರ ಹೆಸರು ಕೆಳುತ್ತಿದ್ದಂತೆ ಮೈಯಲ್ಲಿ ಉರಿಶುರುವಾಗುತ್ತದೆ.
ಮಾತೆತ್ತಿದರೆ ಇವರೆಲ್ಲ ಆರ್‌ಎಸ್ ಎಸ್, ಬ್ರಿಟಿಷರ ವಿರುದ್ಧ ಹೋರಾಟ ಮಾಡಲೇ ಇಲ್ಲ, ಯಾವೊಬ್ಬ ಆರ್‌ಎಸ್‌ಎಸ್ ಕಾರ್ಯ ಕರ್ತ ಜೈಲಿಗೆ ಹೊಗಲೇ ಇಲ್ಲ ಅಂತ ಕಪ್ಪೆಯಂತೆ ಸದಾ ವಟವಟಿಸುತ್ತಲೇ ಇರುತ್ತಾರೆ. ಹಾಗೆ ವರ್ತಿಸೊದು ಅವರಿಗೆ ಹಿಂದಿ ನಿಂದಲೂ ಬಂದ ಕಾಯಿಲೆ. ವರ್ತಿಸಲಿ ಬಿಡಿ, ಶ್ವಾನಗಳು ಬೊಗಳಿದರೆ ದೇವಲೋಕವೆನೂ ಹಾಳಾಗೋದಿಲ್ಲ. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಆರ್‌ಎಸ್‌ಎಸ್ ಕೊಡುಗೆ ಏನಿದೆ? ಹೆಡಗೇವಾರ್ ಸ್ವಾತಂತ್ರ್ಯ ಹೋರಾಟಕ್ಕೆ ಏನು ಮಾಡಿದ್ದಾರೆ? ಅವರ ಸಾಧನೆ ಏನು? ಅಂತ ಪದೇ ಪದೇ ಪ್ರಶ್ನೆಗಳನ್ನು ಕೆಳುವವರೆಲ್ಲರೂ, ಹೆಡಗೇವಾರ್ ಜೀವನದ ಇತಿಹಾಸವನ್ನೊಮ್ಮೆ ತಿಳಿದುಕೊಳ್ಳಿ. ಆಗ ಅರ್ಥವಾಗುತ್ತದೆ.
ಕೇಶವ ಬಲಿರಾಮ ಹೆಡಗೇವಾರ್ ಬಾಲ್ಯದಿಂದಲೂ ಬ್ರಿಟಿಷರ ದಾಸ್ಯತನದಿಂದ ಭಾರತ ಮಾತೆಯ ಮುಕ್ತಿಯ ಕನಸು ಕಂಡತಂಹ ಅಪ್ಪಟ ದೇಶ ಭಕ್ತ. ಅವರು ಮೂರನೇ ಕ್ಲಾಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಆ ದಿನ ಇಂಗ್ಲೆಂಡಿನ ರಾಣಿ  ವಿಕ್ಟೋರಿಯಾ ಪಟ್ಟಕ್ಕೆ ಬಂದು 60ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕ್ಲಾಸ್ ರೂಮಿನಲ್ಲಿ ತನಗೆ ಕೊಟ್ಟಿದ್ದ ಸಿಹಿ ತಿನಿಸನ್ನು ಮುಲಾಜಿಲ್ಲದೆ ಎಲ್ಲರ ಎದುರಿಗೇ ಕಸದ ತೊಟ್ಟಿಗೆ ಎಸೆಯುತ್ತಾರೆ. ಅಷ್ಟೊಂದು ಸ್ವಾಭಿಮಾನದ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಹೆಡಗೇವಾರ್, ಅಂದು ಬ್ರಿಟಿಷರು ‘ವಂದೇ ಮಾತರಂ’ ನಿಷೇಧ ಮಾಡಿದ್ದ ಸಮಯದಲ್ಲಿ ವಿದ್ಯಾರ್ಥಿಗಳ ಜತೆ ಸೇರಿಕೊಂಡು ಸ್ಕೂಲ್ ಇನ್ಸೆಪೆಕ್ಟರ್ ನ್ನು ವಂದೇ ಮಾತರಂ ಘೋಷಣೆಯೊಂದಿಗೆ ಸ್ವಾಗತಿಸಿ ತಮ್ಮ ಸಂಘಟನಾ ಚತುರತೆ ಯನ್ನು ಪ್ರದರ್ಶನ ಮಾಡಿದ್ದರು. ಈ ನಡೆ ಯಿಂದ ರೊಚ್ಚಿಗೆದ್ದ ಬ್ರಿಟಿಷರು ಹೆಡಗೇವಾರ್ ಅವರನ್ನು ಆ ಶಾಲೆಯಿಂದ ಅಮಾನತ್ ಮಾಡುತ್ತಾರೆ.
ನಂತರ ತನ್ನ ಗೆಳೆಯರ ಸಹಕಾರದೊಂದಿಗೆ ಕೋಲ್ಕತಾದ ಮೆಡಿಕಲ್ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಅಲ್ಲಿಯೂ ಬ್ರಿಟಿಷರ ವಿರುದ್ಧ ತಂತ್ರಗಳನ್ನು ರೂಪಿಸಿ ಯುವಕರಲ್ಲಿ ಸ್ವಾಭಿಮಾನಿ ಹೋರಾಟದ ಕಿಚ್ಚನ್ನು ಹೊತ್ತಿಸುತ್ತ, ಅವರನ್ನು ಸಂಘಟಿಸುತ್ತಿದ್ದರು. ಆಸಮಯದಲ್ಲಿ ಕೋಲ್ಕತಾದ ನದಿಯೊಂದರಲ್ಲಿ ಪ್ರವಾಹ ಉಂಟಾಗಿತ್ತು. ಆಗ ರಾಮಕೃಷ್ಣ ಆಶ್ರಮದ ಜತೆಗೂಡಿ ಪ್ರವಾಹ ಸಂತ್ರಸ್ತರ ಸೇವೆ ಮಾಡುತ್ತಾರೆ.
ತಮ್ಮನ್ನು ಸಂಪೂರ್ಣವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿಸಿಕೊಂಡಿದ್ದರಿಂದ ಹೆಡಗೇವಾರರು ಮದುವೆಯ ವಿಚಾರ ದಿಂದ ಹಿಂದೆ ಉಳಿಯುತ್ತಾರೆ. ವೈದ್ಯಕೀಯ ಪದವಿ ಪಡೆದುಕೊಂಡಿದ್ದ ಹೆಡಗೇವಾರ್ ಅವತ್ತು ಏನಾದರೂ ಮನಸ್ಸು ಮಾಡಿದ್ದರೆ ವೈದ್ಯಕೀಯ ಜೀವನದಲ್ಲಿ ಲಕ್ಷಾಂತರ ರುಪಾಯಿ ಸಂಪಾದಿಸುತ್ತ, ವೈಭವಯುತ ಜೀವನವನ್ನು ನಡೆಸಬಹುದಿತ್ತು. ಆದರೆ ಹೆಡಗೇವಾರರು ಸ್ವಾರ್ಥ ಭೋಗ ಜೀವನದಿಂದ ಹೊರಬಂದು ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಡುತ್ತಾರೆ. ನಂತರ ಪುಣೆಗೆ ತೆರಳಿ ಬಾಲಗಂಗಾಧರ ತಿಲಕರನ್ನು ಭೇಟಿ ಮಾಡಿ ಅಸಹಕಾರ ಚಳವಳಿಯಲ್ಲಿ ಧುಮುಕುತ್ತಾರೆ.
ಆಗ ಬ್ರಿಟಿಷರ ವಿರುದ್ಧದ ಭಾರತೀಯ ಹೋರಾಟದಲ್ಲಿ ಒಡಕು ಬೀರದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನೇತೃತ್ವದಲ್ಲಿ ಒಮ್ಮತದಿಂದ ಸಾಗಬೇಕೆಂಬುದು ಬಹುತೇಕ ಹೋರಾಟಗಾರರ ಬಯಕೆಯಾಗಿತ್ತು. ಅದರಂತೆ ಹೆಡಗೇವಾರರು 1918ರಲ್ಲಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಪದಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ಯುವಕರಲ್ಲಿ ದೇಶಭಕ್ತಿಯನ್ನು ತುಂಬುತ್ತಾ ಅವರನ್ನು ಜಾಗೃತ ಗೊಳಿಸುತ್ತಿರುತ್ತಾರೆ.
ಅವರ ಕ್ರಾಂತಿಕಾರಕ ಭಾಷಣಗಳನ್ನು ಗಮನಿಸಿದ್ದ ಬ್ರಿಟಿಷ್ ಸರಕಾರ ಹೆಡಗೇವಾರರನ್ನು ಜೈಲಿಗೆ ತಳ್ಳುತ್ತದೆ. ಜೈಲು ವಾಸವನ್ನು ಅನುಭವಿಸಿ ಹೊರ ಬಂದು ಅವರು ಯೋಚಿಸುತ್ತಾರೆ. ಕೇವಲ ಹೋರಾಟ ಮಾಡುತ್ತ ಜೈಲಿಗೆ ಹೋಗಿ ಬರುತ್ತಿದ್ದರೆ ಅದರಿಂದಭಾರತಕ್ಕೇನೂ ಸ್ವಾತಂತ್ರ್ಯ ಬರುವುದಿಲ್ಲ. ಭಾರತ ಈಗಾಗಲೇ ಜಾತಿ, ಮತ, ಭಾಷೆ ಪಂಥಗಳಿಂದಾಗಿ ಒಡೆದು ವಿಭಜನೆ ಆಗಿದೆ. ಸದ್ಯ ದೇಶದ ಉಳಿವಿಗೆ ಒಗ್ಗಟ್ಟಿನ ಅವಶ್ಯಕತೆ ಇದೆ. ಸುಭದ್ರ ಸರಕಾರಗಳಿಂದ ವ್ಯವಸ್ಥೆ ಬದಲಾಯಿಸಬಹುದು ವಿನಾ ಈ ಅಮೂಲಾಗ್ರವಾದಂಥ ದೇಶದ ಚಿತ್ರಣ ರಾಷ್ಟ್ರ ಪುರುಷನಿಗೆ ಬಂದಿರುವ ಈ ಕಾಯಿಲೆಯನ್ನು ಗುಣಪಡಿಸಲು ಸರಕಾರದಿಂದ ಸಾಧ್ಯವಿಲ್ಲ ಎಂಬುದು ಅವರ ವಿಚಾರವಾಗಿತ್ತು.
ಹಾಗಾಗಿ ಮೊದಲು ವ್ಯಕ್ತಿ ಸರಿಯಾಗುವ ಮೂಲಕ ಆತನೊಳಗೆ ಬದಲಾವಣೆ ಆಗಬೇಕು. ಪ್ರತಿಯೊಬ್ಬ ಹಿಂದೂ ಜಾಗೃತನಾದಾಗ ಮಾತ್ರ ನಮಗೆಲ್ಲ ಸ್ವಾತಂತ್ರ್ಯ ಅತ್ಯಂತ ಸುಲಭವಾಗಿ ಸಿಗುತ್ತದೆ. ಹಾಗಾಗಿ ಆ ಒಗ್ಗಟ್ಟನ್ನು ಮೂಡಿಸಲು ಸಂಘಟನೆಯ ಅವಶ್ಯಕತೆ ಇದೆ ಎಂದು ಅವತ್ತು ಯೋಚಿಸಿದ ಹೆಡಗೇವಾರರು 1925 ಸೆಪ್ಟೆಂಬರ್ 27ರ ವಿಜಯ ದಶಮಿಯ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಸ್ಥಾಪನೆಗೆ ಭದ್ರ ಬುನಾದಿ ಹಾಕುತ್ತಾರೆ.
ಡಾ. ಹೆಡಗೇವಾರರು ಆರ್‌ಎಸ್‌ಎಸ್ ಸ್ಥಾಪನೆ ಮಾಡುವುದಕ್ಕೂ ಮೊದಲು ಹಿಂದೂ ಸಮಾಜದಲ್ಲಿನ ಹಲವು ಸಮಸ್ಯೆಗಳನ್ನು ಗುರುತಿಸಿದ್ದರು. ಅವರು ಹೆಳುತ್ತಾರೆ, ನಾವು ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ನಾವ್ಯಾರು ಎಂಬುದನ್ನು ನಾವೇಮರೆತು ಹೋಗಿರುವುದು. ನಾವ್ಯಾರು ಅಂತ ಇವತ್ತಿಗೂ ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಂಡರೆ ನಮ್ಮಲ್ಲಿ ಬಗೆ ಬಗೆಯ ಉತ್ತರ ಗಳು ಬರುತ್ತವೆ.
ಒಬ್ಬರು, ನಾವು ಬ್ರಾಹ್ಮಣರು ಅಂತ ಹೇಳಿದರೆ ಮತ್ತೊಬ್ಬ ಕುರುಬ, ಲಿಂಗಾಯತ, ದಲಿತ ಅಂತ ಹೇಳುತ್ತಾನೆ. ಹೀಗೆ ಈ ಸಮಾಜ ವನ್ನು ಮತ್ತಷ್ಟು ವಿಭಜಿಸಿದ್ದರಿಂದ ಅನಾಹುತಗಳಿಗೆ ಕಾರಣವಾಗಿದೆ. ಡಾ.ಹೆಡಗೇವಾರರು ಆರ್‌ಎಸ್‌ಎಸ್ ಸ್ಥಾಪನೆ ಮಾಡು ವಾಗಲೂ ಬಂದಿದ್ದು ಇದೇ ಪ್ರಶ್ನೆ. ಹಿಂದೂವಿನಲ್ಲಿ ಸ್ವಾರ್ಥ ಅನ್ನೋದು ಆಳಕ್ಕೆ ಹೋಗಿ ತುಂಬಿ ತುಳುಕುತ್ತಿದೆ. ಎಲ್ಲವೂ ನನಗೆ ಬೇಕು ಎನ್ನುವ ವ್ಯಾಮೋಹ ಇವತ್ತಿಗೂ ಹೋಗಿಲ್ಲ. ಸ್ವಾರ್ಥ ಅಂದೂ ಇತ್ತು, ಇವತ್ತಿಗೂ ಇದೆ. ಈ ಸ್ವಾರ್ಥವನ್ನು ಅಂದು ಹೆಡಗೇ ವಾರರು ಗುರುತಿಸಿದ್ದರು. ಅವರು ಕಂಡಂತಹ ಮತ್ತೊಂದು ಸಮಸ್ಯೆ, ಅದು ಅಧಿಕಾರದ ವ್ಯಾಮೋಹ, ಕುಟುಂಬ ರಾಜಕಾರಣ.
ಅಧಿಕಾರ ದಾಹ ಅನ್ನೊದು ಇವತ್ತಿಗೂ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಅಧಿಕಾರ ಪಡೆಯಬೇಕೆಂಬ ಏಕಮೇವ ಕಾರಣಕ್ಕಾಗಿ ಈ ಸಮಾಜವನ್ನು ವಿಭಜಿಸುವ ಹುನ್ನಾರಗಳು ನಡೆಯುತ್ತಲೇ ಇವೆ. ಈ ಸಮಾಜದ ಅಖಂಡತೆ, ಏಕತೆ ಹಾಗೂ ಅಸ್ತಿತ್ವವನ್ನು ಗುರುತಿಸಲಾರದೆ ಮತ್ತಷ್ಟು ಅದನ್ನು ವಿಘಟಿಸುವಂತಹ ಅತ್ಯಂತ ಹೀನ ಸ್ವಾರ್ಥ ಅನೇಕರಲ್ಲಿದೆ. ಡಾಕ್ಟರ್‌ಜಿ ಅವರಿಗೆ ಅನಿಸಿದ್ದ ಮತ್ತೊಂದು ಅಂಶ, ‘ಸಂಘಟನೆಯ ಕೊರತೆ.’ ರಾಜಾ ಮಹಾರಾಣಾ ಪ್ರತಾಪ, ಅಕ್ಬರನನ್ನು ಎದುರಿಸಿ ಮೊಘಲರನ್ನ ಈನೆಲದಿಂದ ಓಡಿಸಬೇಕೆಂಬ ಕಾರಣದಿಂದ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆದು ಹೋರಾಟ ಮಾಡುತ್ತಿದ್ದರೆ, ರಜಪೂತರು ಆತನಿಗೆ ಸಹಾಯ ಮಾಡಲು ಒಂದಾಗಲೇ ಇಲ್ಲ.
ಅಕ್ಬರನ ಸೇನೆ ಮೇವಾಡದ ಬಾಗಿಲಿಗೆ ಬಂದು ನಿಂತಾಗ ಮಹಾರಾಣಾ ಪ್ರತಾಪನಿಗೆ ಯಾರೂ ಸಹಾಯ ಮಾಡುವುದಕ್ಕೆ ಬರಲಿಲ್ಲ.ಮಹಾರಾಣಾ ಪ್ರತಾಪ್ ಮೇವಾ ಡವನ್ನು ಸೋತರೂ ತನ್ನ ಹಟ ಬಿಡದೆ ಉದ ಯಪುರವನ್ನು ಕಟ್ಟಿ ತನ್ನ ಹೋರಾಟ ಮುಂದು ವರಿಸುತ್ತಾನೆ. ಸಂಘಟನೆಯ ಕೊರತೆ ನಮ್ಮ ಸಮಾಜದಲ್ಲಿ ಇವತ್ತಿಗೂ ಹಾಗೇ ಇದೆ. ಅನುಶಾಸನದ ಕೊರತೆ ನಮ್ಮಲ್ಲಿ ಹೆಚ್ಚಾಗಿ ಕಾಣುತ್ತಲೇ ಇದೆ ಎಂಬುದು ಡಾಕ್ಟರ್‌ಜಿ ಅವರ ಗಮನಕ್ಕೆ ಬಂದ ಮತ್ತೊಂದು ಅಂಶ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮೇ 30, 1857ನೇ ವರ್ಷ ಇಡೀ ದೇಶದಲ್ಲಿ ಒಟ್ಟಿಗೆ ಆರಂಭ ಆಗಬೇಕು ಎನ್ನುವ ಯೋಜನೆ ಆಗಿತ್ತು.
ಆ ಕಾಲದಲ್ಲಿ ಸಂದೇಶಗಳನ್ನು ಸಂತರ ಮೂಲಕ, ಫಕೀರರ ಮೂಲಕ ದೇಶದ ಮೂಲೆ ಮೂಲೆಗೆ ತಲುಪಿಸಿ ಸ್ವಾತಂತ್ರ್ಯ ಆಂದೋ ಲನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ನಾನಾ ಸಾಹೇಬ ಪೇಶ್ವೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕುವರಸಿಂಗ್, ಅಜ್ಮಿಖಾನ್, ತಾತ್ಯಾ ಟೋಪೆ ಅನೇಕ ಪ್ರಮುಖರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಆಂಗ್ಲರ ವಿರುದ್ಧ ಏಕಕಾಲದ ಯುದ್ಧಕ್ಕೆ ಸರ್ವ ಸಿದ್ಧತೆ ಯನ್ನು ಮಾಡಿಕೊಂಡಿದ್ದರು. ೩-೪ ದಿನಗಳಲ್ಲಿ ಯುದ್ಧ ಆರಂಭವಾಗುವುದಿತ್ತು. ಆಗ ಇದ್ದಕ್ಕಿದ್ದಂತೆ ಆ ಒಂದು ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಗಾಳಿಯಲ್ಲಿ ಹಬ್ಬಿ ಬಿಡುತ್ತದೆ. ಅದು, ‘ಬ್ರಿಟಿಷರು ಗೋವಿನ ಕೊಬ್ಬನ್ನು ಗುಂಡಿಗೆ ಸವರಿದ್ದಾರೆ.’ ಸೈನಿಕರು ಅದನ್ನು ಬಾಯಿಂದ ಕಚ್ಚಿ ಹಾಕಬೇಕಾಗುತ್ತದೆ, ಅನ್ನೊ ಸುಳ್ಳು ಸುದ್ದಿ ಮಂಗಲ ಪಾಂಡೆ ಅನ್ನೊ ಸೈನಿಕನ ಮನಸ್ಸೊಳಗೆ ಆಕ್ರೋಶವನ್ನು ಹುಟ್ಟುಹಾಕಿದ್ದಲ್ಲದೆ ಆ ಆಕ್ರೋಶದ ಕಟ್ಟೆ ಒಡೆದು ಹೋಗಿದ್ದರ ಪರಿಣಾಮ ಮಂಗಲ ಪಾಂಡೆ ಯುದ್ಧವನ್ನು ಆರಂಭಿಸಿಬಿಟ್ಟ.
ಯಾವ ದಿನಾಂಕಕ್ಕೆ, ಏಕಕಾಲಕ್ಕೆ ಯುದ್ಧ ನಡೆಯಬೇಕಿತ್ತೊ ಅದರ ಬದಲಾಗಿ ಬಹು ಮುಂಚಿತವಾಗಿ ಯುದ್ಧ ಆರಂಭವಾಗಿ ಬಿಡುತ್ತದೆ. ಆದರೂ ದೆಹಲಿಯನ್ನು ಗೆದ್ದಿವಿ ನಿಜ, ಆದರೆ ಬ್ರಿಟಿಷರಿಗೆ ಸಮಯ ಸಿಕ್ಕಿದ್ದರಿಂದ ಈ ಹೋರಾಟವನ್ನು ವ್ಯವಸ್ಥಿತವಾಗಿ ದಮನಗೊಳಿಸಿ ತುಳಿದು ಹಾಕಿಬಿಟ್ಟರು. ಮಂಗಲ ಪಾಂಡೆ ಆ ಒಂದು ತಪ್ಪು ನಿರ್ಧಾರ ಕೈಗೊಳ್ಳದೇ ಹೋಗಿದ್ದಿದ್ದರೆ, ಆ ಸಂಗ್ರಾಮ ದಲ್ಲಿಯೇ ಭಾರತದ ಭಾಗ್ಯ ಬದಲಾಗಿ ಹೊಗುತ್ತಿತ್ತು. ಆ ಅನುಶಾಸನದ ಕೊರತೆ ನಮ್ಮಲ್ಲಿ ಇಂದಿಗೂ ಕಾಡುತ್ತಲೇ ಇದೆ.
ಹೀಗೆ ಸಮಾಜದಲ್ಲಿನ ಎಲ್ಲಾ ಅವಗುಣಗಳನ್ನು ಗುರುತಿಸಿದ ಹೆಡಗೇವಾರರು ಈ ಅವಗುಣಗಳು ಆಗುವುದು ವ್ಯಕ್ತಿಗಳಿಂದ, ಹಾಗಾಗಿ ಮೊದಲು ವ್ಯಕ್ತಿ ಸರಿ ಹೋದರೆ ಈ ದೇಶ ತನ್ನಿಂತಾನೇ ಸರಿ ಆಗುತ್ತದೆ ಎಂಬ ನಿರ್ಧಾರದಿಂದ ಆರ್‌ಎಸ್‌ಎಸ್ ಸ್ಥಾಪಿಸು ತ್ತಾರೆ. ಸಂಘದ ಶಾಖೆಯಲ್ಲಿ ಪ್ರತಿಯೊಬ್ಬ ಸ್ವಯಂಸೇವಕನಿಗೆ ಸಿಗುವಂತಹ ಸಂಸ್ಕಾರದ ಮೂಲಕ ಆತ ಯಾವ ಯಾವ ಕ್ಷೇತ್ರ ದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾನೊ, ಆ ಕ್ಷೇತ್ರದಲ್ಲಿ ತನ್ನ ಸ್ವಯಂ ಸೇವಕತ್ವದ ಪ್ರಕಟೀಕರಣದಿಂದಾಗಿ ಮಾನ್ಯತೆ ಪಡೆಯುವು ದಕ್ಕೆ ಸಾಧ್ಯವಾಗಿದೆ.
ಹೆಡಗೇವಾರರ ಭಾಷಣ, ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಹಿಂದೆಂದೊ ಅಳವಡಿಸಬೇಕಿತ್ತು. ಆದರೆ ಆ ಕೆಲಸವನ್ನು ಸರಕಾರ ಇದೀಗ ಮಾಡಿರುವುದು ಬಹಳ ಹೆಮ್ಮೆಯ ಸಂಗತಿ.