ದಣಿವರಿಯದ ನಾಯಕ ಮೋದಿ
ಅಭಿನಂದನೆ
ಸಿ.ಸಿ.ಪಾಟೀಲ
ಲೋಕೋಪಯೋಗಿ ಸಚಿವರು
ಶ್ರೀನರೇಂದ್ರ ಮೋದಿಜೀಯವರು ಪ್ರಧಾನಿಯಾಗಿ ಕೇಂದ್ರ ಸರಕಾರಕ್ಕೆ ಎಂಟು ವರ್ಷ ಪೂರ್ಣಗೊಂಡಿದೆ ಎಂಬುದು ಸಂತೋಷ ದಾಯಕ ಸಂದರ್ಭ.
ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ , ಅದರಲ್ಲೂ ಬಹು ಪಕ್ಷಗಳ ರಾಜಕೀಯ ವ್ಯವಸ್ಥೆಯಲ್ಲಿ ಎಂಟು  ವರ್ಷ ನಿರಂತರವಾಗಿ ಜನಪರ ಆಡಳಿತ ನೀಡಿ, ಇನ್ನೂ ದೀರ್ಘಕಾಲ ಅವರು ಸಮರ್ಥ ನಾಯಕತ್ವ ಮತ್ತು ಆಡಳಿತ ನೀಡುವ ಭರವಸೆ ಹುಟ್ಟಿಸಿರುವುದು ಸುಲಭದ ಸಾಧನೆಯಲ್ಲ. ಆದರೆ ಮೋದಿಯವರ ಪಾಲಿಗೆ ಎಂಟು ವರ್ಷ ಎಂದರೆ ತೀರಾ ಕಡಿಮೆಯೇ.
ಏಕೆಂದರೆ ಅವರದ್ದು ಪಾದರಸದಂತಹ ವ್ಯಕ್ತಿತ್ವ. ದಣಿವರಿಯದ ನಾಯಕತ್ವ. ಈ ೮ ವರ್ಷಗಳಲ್ಲಿ ಒಂದು ದಿನವೂ ರಜಾ ತೆಗೆದು ಕೊಳ್ಳದೇ, ತ್ರಿಕಾಲ ಸಂಚಾರಿಯಂತೆ ರಾಷ್ಟ್ರದ ಉದ್ದಗಲಕ್ಕೂ ಸುತ್ತಾಡುತ್ತ ನಮ್ಮ ದೇಶದ ಸುಧಾರಣೆಯ ಗತಿಗೆ ಹೊಸ ಸ್ಪರ್ಶ ನೀಡು ತ್ತಿದ್ದಾರೆ. ಸದಾ ಕಾಲದೊಂದಿಗೆ ಸೆಣಸಾಡುತ್ತಲೇ ಇರುವ ಮೋದಿಜೀಯವರು ಒಂದು ನಿಮಿಷವನ್ನೂ ವ್ಯರ್ಥ ಮಾಡುವುದಿಲ್ಲ.
ಹೀಗಾಗಿ ಅವರ ನಿತ್ಯದ ಕಾರ್ಯಕ್ರಮಗಳಲ್ಲಿ ಮತ್ತು ಪ್ರವಾಸಗಳಲ್ಲಿ ಹತ್ತು ಹಲವಾರು ಎಡೆಬಿಡದ ಚಟುವಟಿಕೆಗಳು ತುಂಬಿರುತ್ತವೆ. ಮೋದಿಜೀಯವರು ಪ್ರಧಾನಿಯಾಗಿ ನಿರಂತರವಾಗಿ ಸ್ವಚ್ಛ ದಕ್ಷ ಆಡಳಿತ ನೀಡುತ್ತ, ಭಾರತದ ರಾಜಕೀಯ ಇತಿಹಾಸದ ಚಹರೆಯನ್ನೇ ಬದಲಿಸುತ್ತಿದ್ದಾರೆ. ಮೊದಲು ಒಂದು ಕಾಲವಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಯಲ್ಲಿದ್ದ ಕೆಲವು ನಾಯಕರು ಸ್ವಾತಂತ್ರೋತ್ತರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರು.
ಅವರಲ್ಲಿ ಕೆಲವರ ಮಕ್ಕಳು, ಮೊಮ್ಮಕ್ಕಳು ತದನಂತರ ಹೆಚ್ಚಿನ ಪರಿಶ್ರಮವಿಲ್ಲದೇ ಆಯಕಟ್ಟಿನ ಅಧಿಕಾರಕ್ಕೆ ಬಂದು ಕುಳಿತು, ತಾವೇ ರಾಷ್ಟ್ರೀಯ ನಾಯಕರೆಂಬ ಭ್ರಮೆ ಹುಟ್ಟಿಸುತ್ತಿದ್ದರು. ಆದರೆ ಮೋದಿಜಿ ಹಾಗಲ್ಲ. ಅವರು ಪ್ರಧಾನಿಯ ಮಗನೂ ಅಲ್ಲ, ಮಂತ್ರಿಯ ಮೊಮ್ಮಗನೂ ಅಲ್ಲ. ಕೋಟ್ಯಧೀಶರ ಮನೆತನದ ವಾರಸುದಾರರೂ ಅಲ್ಲ. ಗುಜರಾತಿನ ಸಾಮಾನ್ಯ ಕುಟುಂಬದಿಂದ ಬಂದು, ಚಹಾ ಮಾರಿ ಬದುಕು ಪ್ರಾರಂಭಿಸಿ, ತಮ್ಮ ಸೇವಾ ಮನೋಭಾವದಿಂದ ಗುಜರಾತಿನ ಮುಖ್ಯಮಂತ್ರಿಯಾಗಿ ಅಲ್ಲಿ ಅಭಿವೃದ್ಧಿಯ ಹೊಸ ಪರ್ವದ ಅಡಿಪಾಯ ಗಟ್ಟಿಗೊಳಿಸಿದರು.
ತದನಂತರ ಎರಡು ಅವಧಿಗೆ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಅಭೂತಪೂರ್ವ ಆಡಳಿತ ನೀಡುತ್ತಿರುವುದು ನಿಜಕ್ಕೂ ಪ್ರಜಾ ಪ್ರಭುತ್ವದ ಚರಿತ್ರೆಯ ವಿಶೇಷವಾಗಿದೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ, Pಛ್ಟ್ಛಿಟ್ಟಞZಛಿ ಛಿ ಠಿಟ ಛ್ಚಿಟಜ್ಞಜಿಠಿಜಿಟ್ಞ . ಛ್ಚಿಟಜ್ಞಜಿಠಿಜಿಟ್ಞ ಛಿ ಠಿಟ ಛಿomಛ್ಚಿಠಿ  ಛಿomಛ್ಚಿಠಿ ಛಿ ಠಿಟ mಟಡಿಛ್ಟಿ ಅಂದರೆ ನಮ್ಮ ಸಾಧನೆಗಳೇ ನಮಗೆ ಸಿದ್ಧಿ, ಪ್ರಸಿದ್ಧಿಗಳನ್ನು ತರುತ್ತವೆ. ಈ ಪ್ರಸಿದ್ಧಿಯೇ ಮುಂದೆ ನಮ್ಮ ವ್ಯಕ್ತಿತ್ವದ ಗೌರವಕ್ಕೆ ಕಾರಣವಾಗುತ್ತದೆ ಮತ್ತು ಆ ಗೌರವವೇ ಮುಂದೆ ಅಧಿಕಾರವನ್ನು ತಂದುಕೊಡುತ್ತದೆ.
ಈ ಮಾತಿಗೆ ನಮ್ಮ ಮೋದಿಜೀಯವರು ಅತ್ಯಂತ ಸೂಕ್ತ ನಿದರ್ಶನರಾಗಿದ್ದಾರೆ. ಮೋದಿಜೀಯವರ ಸಾಧನೆಗಳನ್ನು ಒಂದು ಲೇಖನದಲ್ಲಿ ವಿವರಿಸುವುದು ಕಷ್ಟ. ಕಾರಣ ಇವುಗಳನ್ನೆಲ್ಲ ಹೇಳುತ್ತಾ ಹೋದರೆ ಬೃಹತ್ ಗ್ರಂಥವೇ ಆದೀತು. ಮನುಷ್ಯನಾಗಿ ಹುಟ್ಟಿದವನು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು? ಬದ್ಧತೆ ಮತ್ತು ಇಚ್ಛಾಶಕ್ತಿ ಇದ್ದರೆ ರಾಷ್ಟ್ರಕ್ಕೆ ಹೇಗೆಲ್ಲ ಕೊಡುಗೆಕೊಡಬಹುದು ಎಂಬ ಜೀವನ ಸಂದೇಶದ ಒಟ್ಟೂ ಫಲಶೃತಿಯೇ ಮೋದಿಜೀಯವರಾಗಿ ನಮಗೆಲ್ಲ ಸ್ಪೂರ್ತಿ ಮತ್ತು ಆದರ್ಶಗಳನ್ನು ತುಂಬುತ್ತಿರುವ ಶಕ್ತಿಯಾಗಿದ್ದಾರೆ.
ಆತ್ಮನಿರ್ಭರತಾ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಕಿಸಾನ್ ಸಮ್ಮಾನ್, ಎಕ್ಸ್‌ಪ್ರೆಸ್ ಹೆದ್ದಾರಿಗಳ ನಿರ್ಮಾಣ, -ಸಲ್ ಬಿಮಾ, ಜನಧನ್, ಉಜ್ವಲ್, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ್, ಜಿ. ಎಸ್.ಟಿ. ಜಾರಿ, ಕಡಿಮೆ ಬೆಲೆಗೆ ಜನರಿಕ್ ಔಷಧ..ಹೀಗೆ ಹತ್ತು ಹಲವು ಹೊಸ ಯೋಜನೆ/ಕಾರ್ಯಕ್ರಮಗಳ ಮೂಲಕ ಇಡೀ ದೇಶದಲ್ಲಿಯೇ ಅಭಿವೃದ್ಧಿಯ ಹೊಸ ಸಂಚಲನ ಮೂಡಿಸಿ ಆಧುನಿಕ ಕ್ರಾಂತಿಪುರುಷರಾಗಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಗರೀಬಿ ಹಟಾವೋ ಎಂದು ಹಲವು  ವರ್ಷಗಳವರೆಗೂ ಹೇಳುತ್ತಲೇ ಕೆಲವರು ಆಡಳಿತದ ಗದ್ದುಗೆ ಹಿಡಿದುಕೊಂಡು ಅಧಿಕಾರ ಅನುಭವಿಸಿದ ಗತದಿನಗಳನ್ನೂನಾವು ನೋಡಿದ್ದೇವೆ. ಆದರೆ ಮೋದಿಜೀಯವರು ಹಾಗಲ್ಲ.
ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಲು ಕಲಂ೩೭೦ರದ್ದು, ಭಯೋತ್ಪಾದನೆಯ ಸದ್ದಡಗಿಸಲು ಸರ್ಜಿಕಲ್ ಸೈಕ್, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ, ಹೀಗೆ ಆಡಳಿತದಲ್ಲಿ ದಿಟ್ಟತನದ ಮತ್ತು ಹೊಸತನದ ಅಪರೂಪದ ಕ್ರಮಗಳು ಮೋದಿಜೀಯವರ ಸಾಧನೆಯ ಬತ್ತಳಿಕೆಯಲ್ಲಿವೆ. ಇಂದು ವಿಶ್ವದಲ್ಲಿಯೇ ಭಾರತಕ್ಕೆ ಹಲವು ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನವಿದೆ. ಈ ಅದ್ವಿತೀಯ ಸಾಧನೆಯಲ್ಲಿ ಮೋದಿಜೀಯವರದ್ದು ಸಿಂಹಪಾಲು. ಅವರ ದೂರ ದೃಷ್ಟಿ, ಸಾಮರ್ಥ್ಯ ಮತ್ತು ಸೇವಾ ಮನೋಭಾವ ನಮ್ಮಂತಹವರಿಗೆ ಸದಾ ಮಾರ್ಗದರ್ಶಿಯಾಗಿದೆ.
ಮೋದಿಜೀಯವರ ಆಡಳಿತಕ್ಕೆ ಎಂಟು ವರ್ಷ ತುಂಬಿದ, ಹರ್ಷದ ಈ ಸಂದರ್ಭದಲ್ಲಿ ಶ್ರೀ ಮೋದಿಜೀಯವರಿಗೆ ಮತ್ತು ಕೇಂದ್ರ ಸಚಿವ ಸಂಪುಟದ ಎಲ್ಲ ಸಚಿವರಿಗೂ ನನ್ನ ಹಾರ್ದಿಕ ಅಭಿನಂದನೆಗಳು.