ಈ ಬದುಕಿನ ಎಲ್ಲ ಖುಷಿಗಳು ನಮ್ಮದಾಗಲಿ
ಶ್ವೇತಪತ್ರ
ಡಾ.ಶ್ವೇತಾ.ಬಿ.ಸಿ
@.
ಎಲ್ಲರ ಬದುಕಲ್ಲೂ ಬದಲಾಯಿಸಲಾಗದಂಥ ನೋವುಗಳು, ಕಹಿಘಟನೆಗಳು, ಒಂಟಿತನಗಳಿವೆ. ಅವುಗಳೊಟ್ಟಿಗೆ ಖುಷಿಯ ಆಲೋಚನೆಗಳನ್ನು ನಮ್ಮದಾಗಿಸಿಕೊಂಡು ಬದುಕಬೇಕಿದೆ. ನಮ್ಮೆಲ್ಲರ ಹೈಟೆಕ್ ಜೀವನಶೈಲಿ ನಮ್ಮ ಅರಿವಿಗೆ ಬಾರದಂತೆ ನಮ್ಮೆಲ್ಲರ ನೆಮ್ಮದಿಯ ಮೂಲವನ್ನೇ ಅಲುಗಾಡಿಸಿ ಬಿಟ್ಟಿದೆ.
ಸಂತೋಷವನ್ನು ಹುಡುಕುವುದೆಂದರೆ ನಮ್ಮನ್ನು ನಾವು ಹುಡುಕಿಕೊಂಡಂತೆ. ಸಂತೋಷ ನಮಗೆ ಎಲ್ಲಾ ಸಿಗುವುದಲ್ಲ ಅದನ್ನು ನಾವು ಕಂಡುಕೊಳ್ಳಬೇಕು.ನಮ್ಮ ಬದುಕಲ್ಲಿ ಏನು ಸಂಭವಿಸುತ್ತಿದೆಯೋ ಅದರ ಆಧಾರದಲ್ಲಿ ನಮ್ಮ ಸಂತೋಷಗಳು ನಿರ್ಧಾರ ವಾಗುವುದಿಲ್ಲ, ಬದುಕಿನ ಸಂಭವಿಸುವಿಕೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಸಂತೋಷವನ್ನು ಮುಖ್ಯವಾಗಿ ನಿರ್ಧರಿಸುತ್ತದೆ. ಇದಕ್ಕೆ ಪೂರಕವಾಗಿ ನಿಮಗೊಂದು ಘಟನೆಯನ್ನು ವಿವರಿಸುತ್ತೇನೆ.
ರಾಮ-ಶಾಮ ಎಂಬ ಇಬ್ಬರು ಗೆಳೆಯರು ಅನಿರೀಕ್ಷಿತವಾಗಿ ಕೆಲಸ ಕಳೆದುಕೊಳ್ಳುತ್ತಾರೆ. ಕೆಲಸ ಕಳೆದುಕೊಂಡ ನಂತರ ರಾಮ ತನ್ನ ಅನುಭವದ ಮೂಲಕ ಅತ್ಯಾಕರ್ಷಕವಾದ ಬದುಕಿನ ಹೊಸ ಸಾಧ್ಯತೆಗಳನ್ನ ಅವಕಾಶಗಳನ್ನ ಅನ್ವೇಷಿಸತೊಡಗುತ್ತಾನೆ. ಅದೇ ಶಾಮ ಕೆಲಸ ಕಳೆದುಕೊಂಡನೆಂಬ ಉದ್ವಿಗ್ನತೆ, ಆತಂಕಕ್ಕೊಳಗಾಗಿ ಆತ್ಮಹತ್ಯೆ ಮಾಡಿ ಕೊಳ್ಳುವ ಬಗ್ಗೆ ಯೋಚಿಸತೊಡಗು ತ್ತಾನೆ.
ಮೇಲಿನ ಘಟನೆಯಲ್ಲಿ ಸಂದರ್ಭ ಒಂದೇ ಆಗಿದ್ದರೂ ಇಬ್ಬರು ವ್ಯಕ್ತಿಗಳು ಅದನ್ನು ಅರ್ಥೈಸಿದ ರೀತಿಯಲ್ಲಿ ಅದರ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ ವಿಭಿನ್ನತೆ ಇದೆ. ಒಬ್ಬ ಬದುಕನ್ನ ಅಂತ್ಯಗೊಳಿಸ ಬಯಸಿದರೆ ಮತ್ತೊಬ್ಬ ಆ ನಕಾರಾತ್ಮಕ ಪರಿಸ್ಥಿತಿಯ ನಡುವೆಯೂ ಹೊಸ ಹೊಳಹುಗಳ ಮೂಲಕ ಬದುಕನ್ನ ಮತ್ತೆ ಕಟ್ಟ ಬಯಸುತ್ತಾನೆ. ಆಯ್ಕೆಗಳು ನಮ್ಮವು, ಮನಸ್ಥಿತಿ ನಮ್ಮದು, ಅದರೊಟ್ಟಿಗೆ ಸಂತೋಷ-ಅಸಂತೋಷಗಳು ನಮ್ಮವೇ. ಬದುಕಿನ ಒತ್ತಡಗಳು, ಹತಾಶೆಗಳು ನಮ್ಮನ್ನು ನಮ್ಮ ಆಲೋಚನೆ ಗಳನ್ನು ನಿರ್ಧಾರಗಳನ್ನು ಡಿಸ್ಟರ್‌ಬೆನ್ಸ್‌ಗೆ ಒಳಪಡಿಸುತ್ತಲೇ ಇರುತ್ತವೆ.
ಆಗೊಂದಿಷ್ಟು ಮನಸ್ಸಿಗೆ ಮಧ್ಯಂತರ ಬಿಡುವು ತೆಗೆದುಕೊಳ್ಳಿ     ಸಂತೋಷಗಳು ಮತ್ತೆ ಬುಗ್ಗೆಗಳಾಗಿ ತಂಪನೆರೆಯುತ್ತವೆ. ಸದಾ ಸಂತೋಷವಾಗಿರುವುದು ಹೇಳಿದಷ್ಟು ಬರೆದಷ್ಟು ಸುಲಭದ ಮಾತಲ್ಲ. ಅದೊಂದು ಬಹುದೊಡ್ಡ ಸವಾಲು. ಸಂಯಮವನ್ನು ನಿರಂತರತೆಯನ್ನು ಬೇಡುವ ಕೆಲಸ. ಪ್ರಬುದ್ಧತೆ  ಯ ಬಗ್ಗೆ ನಾವೆಲ್ಲ ದೊಡ್ಡದೊಡ್ಡ ಮಾತನಾಡುತ್ತಾ ಇರ್ತೀವಿ ಬದುಕಿನ ನಿಜವಾದ ಮನೋವೈeನಿಕಅಧ್ಯಾತ್ಮಿಕ ಪ್ರಬುದ್ಧತೆ ಎಂದರೆ ನಮ್ಮ ನಮ್ಮ ಬದುಕಿನ ಸಂತೋಷಗಳ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವುದು.
ಇಲ್ಲದೆ ಇರುವುದರ ಬಗ್ಗೆ ತುಡಿಯುವುದಕ್ಕಿಂತ ಇರುವುದರಲ್ಲಿ ಮತ್ತಷ್ಟು ಮಗದಷ್ಟು ಖುಷಿಗಳನ್ನು ಬದುಕಿನ ಚೀಲಕ್ಕೆ ತುಂಬಿ ಕೊಳ್ಳಬೇಕು. ನಮ್ಮ ಸಂತೋಷಗಳು  ನಮ್ಮ ನಿಯಂತ್ರಣದಲ್ಲಿರುತ್ತವೆ. ಹೇಗೆಂದರೆ ನಮ್ಮ ಆಲೋಚನೆಗಳ ಮೂಲಕ. ಸಂತೋಷವಾಗಿರುವುದಕ್ಕೆ ಸಂತೋಷದ ಆಲೋಚನೆಗಳನ್ನು ನಮ್ಮವಾಗಿಸಿಕೊಳ್ಳಬೇಕು. ಆದರೆ ನಾವು ಇದಕ್ಕೆ ತದ್ವಿರುದ್ಧವಾಗಿ ಅಸಂತೋಷವನ್ನು ಮನಸ್ಸಿಗೆ ಮಿದುಳಿಗೆ ಆವರಿಸಿಕೊಂಡು ಬಿಟ್ಟಿದ್ದೇವೆ.
ಎಂದೋ ನಡೆದ ಕಹಿ ಅನುಭವಗಳು ಮನಸ್ಸಿನ ತುಂಬಾ ವಾರಗಳ ಕಾಲ ತಿಂಗಳುಗಳ ಕಾಲ ಆಕ್ಯುಪೈ ಆಗಿಬಿಟ್ಟರೆ ನಮ್ಮ ಸಂತೋಷಕ್ಕೆ ಖುಷಿಗೆ ಜಾಗವೆಲ್ಲಿ? ನಮ್ಮೆಲ್ಲರ ಬದುಕಲ್ಲೂ ಬದಲಾಯಿಸಲಾಗದಂತಹ ನೋವುಗಳು, ಕಹಿಘಟನೆಗಳು, ಒಂಟಿತನ ಗಳಿವೆ. ಅವುಗಳೊಟ್ಟಿಗೆ ಖುಷಿಯ ಆಲೋಚನೆಗಳನ್ನು ನಮ್ಮದಾಗಿಸಿಕೊಂಡು ಬದುಕಬೇಕಿದೆ. ನಮ್ಮೆಲ್ಲರ ಹೈಟೆಕ್ ಜೀವನಶೈಲಿನಮ್ಮ ಅರಿವಿಗೆ ಬಾರದಂತೆ ನಮ್ಮೆಲ್ಲರ ನೆಮ್ಮದಿಯ ಮೂಲವನ್ನೇ ಅಲುಗಾಡಿಸಿ ಬಿಟ್ಟಿದೆ.
  ಗಳು ಜಾಸ್ತಿಯಾಗಿ ಅದರ ಹಿಂದೆಯೇ ಸಾಲಗಳು ಜಾಸ್ತಿಯಾಗಿವೆ. ಮನೆ ತುಂಬಿದೆ ಆದರೆ ಮನಸ್ಸಿನ ಖುಷಿ ಮಾತ್ರ ಖಾಲಿಯಾಗಿದೆ. ನಾವು ಯೋಚಿಸುವುದು ಹೇಳುವುದು ಮತ್ತು ನಡೆದುಕೊಳ್ಳುವುದರಲ್ಲಿ ಸಾಮರಸ್ಯ ಮೂಡಿದರೆ ಸಂತೋಷ ತಾನಾಗೇ ಒಡಮೂಡುತ್ತದೆ.
ಕೆಲವೊಮ್ಮೆ ಪುಳಕ ಕೆಲವೊಮ್ಮೆ ಹತಾಶೆ ಕೆಲವು ಸಲ ಸಾಧಿಸುವುದು ಕೆಲವು ಸಲ ಕಳೆದುಕೊಳ್ಳುವುದು ಇದು ಬದುಕು. ಇದರ ನಡುವೆ ಸಂತೋಷವಾಗಿರಬೇಕು ಎಂಬುದು ನಮ್ಮ ನಿರ್ಧಾರವಾಗಬೇಕು. ಪ್ರತಿದಿನ ನಮಗೆ ನಾವೇ ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಾ ಹೋಗಬೇಕು ಇದು ನನ್ನ ಬದುಕಿನ ಚೌಕಟ್ಟು, ಇಲ್ಲೇ ನಾನು ಸಂತೋಷಗಳನ್ನು ಹುಡುಕಿಕೊಳ್ಳಬೇಕು. ಇದು ನಮ್ಮ ಪ್ರತಿದಿನದ ನಿರ್ಧಾರವಾಗಿರಬೇಕು. ಇನ್ನೂ ಉತ್ತಮ ಬದುಕು ನನ್ನದಾದಾಗ ಖುಷಿಯಾಗಿರ್ತೀನಿ ಅನ್ನೋದು ಭ್ರಮೆಯೇ ಹೊರತು ಮತ್ತೇನಲ್ಲ! ನಾವೆಲ್ಲ ಮುಂದೊಂದು ದಿನ ಖುಷಿಯಾಗಿರಬೇಕೆಂಬುದಕ್ಕೆ ಈ ಹೊತ್ತು ತಯಾರಿ ನಡೆಸಿಕೊಳ್ಳುತ್ತೀವಿ.
ಆದರೆ ಇವತ್ತಿನ ಖುಷಿಗಳನ್ನು ಅನುಭವಿಸುವುದನ್ನು ಮರೆತು ಬಿಡುತ್ತೇವೆ. ಈ ಕ್ಷಣಗಳಲ್ಲಿ ನಾವು ಜೀವಿಸಿದ್ದು ಕಮ್ಮಿ ಭವಿಷ್ಯದ ಜೀವಿಸಿದ್ದು ಹೆಚ್ಚು. ಸಂತೋಷಗಳು ನಮ್ಮ ನಾಳೆಗಳಲ್ಲಿಲ್ಲ ಸಂತೋಷಗಳು ಇವತ್ತಿನ ನಮ್ಮ ಕ್ಷಣಗಳಲ್ಲಿವೆ. ಸಂತೋಷವೆಂದರೆ ಬರಿ ನಗು  ಮಾತ್ರವಲ್ಲ. ಬದುಕಲ್ಲಿ ಏನೇ ಬಂದರೂ ಅದರಂದು ನೆಮ್ಮದಿಯ ಇರುವಿಕೆಯನ್ನು ಗಳಿಸಿಕೊಳ್ಳುವುದು ಕೂಡ ಸಂತೋಷವೇ.
ತುಂಬಾ ಖುಷಿ ಮತ್ತು ನೆಮ್ಮದಿಯಾಗಿ ಬದುಕುತ್ತಿರುವ ಮನುಷ್ಯರು ಅವರ ಜೀವನದ ಏರಿಳಿತಗಳನ್ನು ಶಾಂತವಾಗಿ ಸ್ವೀಕರಿಸು ತ್ತಾರೆ. ಪುಟ್ಟ ಪುಟ್ಟ ಖುಷಿಗಳು ಬದುಕಿಗೆ ಬಹುಮುಖ್ಯ ಎಂಬ ಸ್ಥಿತಪ್ರಜ್ಞತೆ ಅವರ ಸಂತೋಷದ ಮನಸ್ಥಿತಿಯ ರಹಸ್ಯವಾಗಿರುತ್ತದೆ.ಬದುಕನ್ನು ನೋಡುವುದರಲ್ಲಿ ಎರಡು ದೃಷ್ಟಿಕೋನಗಳಿವೆ. ಒಂದು ನಾವು ಅಂದುಕೊಂಡಿದ್ದು ಆದಮೇಲೆ ಸಂತೋಷವಾಗಿರು ತ್ತೇವೆ ಅನ್ನುವುದು. ಎರಡನೆಯದು ಏನೇ ಬಂದರೂ ಸಂತೋಷವಾಗಿರುತ್ತೇವೆ ಅನ್ನುವುದು.
ಎರಡರಲ್ಲಿ ಆಯ್ಕೆ ನಮ್ಮದೇ. ನಾವೆಲ್ಲ ತುಂಬಾ ಸೀರಿಯಸ್ಸಾಗಿ  ಗಳಾಗಿ ಒಂದಾದ ಮೇಲೊಂದು ನಿಮಿಷಗಳನ್ನ, ಗಂಟೆಗಳನ್ನ ಲೆಕ್ಕಹಾಕುತ್ತಾ ಬದುಕಿ ಬಿಟ್ಟಿದ್ದೇವೆ.  ! ಸಣ್ಣಪುಟ್ಟ ತಪ್ಪುಗಳು, ಒಂದಿಷ್ಟು ಪೆದ್ದುತನ, ಒಂದಿಷ್ಟು ಹುಚ್ಚಾಟ ಎಲ್ಲವೂ ಬೇಕು ಬದುಕಿಗೆ. ಬದುಕನ್ನ ಬದಲಾಯಿಸಿ ಸಂತೋಷಗಳನ್ನ ಹುಡುಕಬೇಕಿಲ್ಲ ನಾವೊಂದಿಷ್ಟು ಬದಲಾದರೆ ಸಾಕು ಸಣ್ಣಪುಟ್ಟ ಹೊಂದಾಣಿಕೆಗಳಲ್ಲಿ ಸಂತೋಷವಿದೆ. ಈ ಅರಿವು ನಮ್ಮಲ್ಲಿ ಮೂಡಬೇಕು.
ನಮ್ಮ ಪುರಾಣದಲ್ಲಿ ಕಥೆಯೊಂದಿದೆ. ಒಂದಾನೊಂದು ಕಾಲದಲ್ಲಿ ಭೂಮಿ ಮೇಲಿನ ಎಲ್ಲ ಮನುಷ್ಯರು ತುಂಬಾ ಸಂತೋಷ ವಾಗಿದ್ದರಂತೆ. ಆ ಸಂತೋಷವನ್ನ ದುರುಪಯೋಗಿಸಿಕೊಳ್ತಾ ಇದ್ದರಂತೆ ಕೂಡ. ಇದನ್ನು ಅರಿತ ಬ್ರಹ್ಮ ಸಂತೋಷವನ್ನ ಯಾರು ಹುಡುಕಲಾಗದ ಜಾಗದಲ್ಲಿ ಮುಚ್ಚಿಡಬೇಕು ಅಂತ ಯೋಚಿಸುತ್ತಾನೆ. ಆದರೆ ಎಲ್ಲಿ ಬಚ್ಚಿಡುವುದು ಭೂಮಿಯ ಒಳಗಾ? ಸಮುದ್ರದ ಆಳದಲ್ಲ? ಎ ಬಚ್ಚಿಟ್ಟರೂ ಮನುಷ್ಯ ತಲುಪದ ಜಾಗವಿಲ್ಲ.
ಇದನ್ನೆಲ್ಲ ಯೋಚಿಸಿದ ಬ್ರಹ್ಮ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾನೆ. ಸಂತೋಷವನ್ನು ಮನುಷ್ಯನ ಮನಸ್ಸಿನಲ್ಲಿಯೇ ಅಡಗಿಸಿ ಬಿಡುತ್ತಾನೆ. ಯಾಕೆಂದರೆ ಯಾವಾಗಲೂ ಹೊರಗಡೆ ನೋಡುವುದರ ನಿರತನಾಗಿದ್ದ ಮನುಷ್ಯ ತನ್ನೊಳಗೆ ನೋಡಿ ಕೊಳ್ಳುವು ದನ್ನ ಮರೆತು ಬಿಟ್ಟಿದ್ದಾನೆ. ಅಂದಿನಿಂದ ಇಂದಿನವರೆಗೂ ಮನುಷ್ಯ ದೇವಸ್ಥಾನಗಳಲ್ಲಿ, ನಗೆಕೂಟಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಕೋರ್ಸ್‌ಗಳಲ್ಲಿ ಸಂತೋಷಗಳನ್ನು ಹುಡುಕುತ್ತಲೇ ಇದ್ದಾನೆ. ತನ್ನೊಳಗೆ ಹುಡುಕುವುದನ್ನು ನಿರ್ಲಕ್ಷಿಸಿ ಬಿಟ್ಟಿದ್ದಾನೆ.
ಸಂತೋಷಗಳನ್ನ ಹೇಳಿಕೊಡುವ ಯಾವ ಟೆಕ್ಸ್ಟ್ ಬುಕ್ಕುಗಳು ಫಾರ್ಮುಲಾಗಳು ಇಲ್ಲ. ಸಂತೋಷವನ್ನ  ಮಾಡುವ ಅವಶ್ಯಕತೆ ಕೂಡ ಇಲ್ಲ. ಬದುಕಿನ ಪ್ರತಿ ಕ್ಷಣಕ್ಕೂ ಅರ್ಥವಿದೆ, ಉದ್ದೇಶವಿದೆ ಎಂಬ ಸ್ವಯಂ ಅರಿವನ್ನು ನಮ್ಮದಾಗಿಸಿಕೊಂಡು ನಮ್ಮ ಸಂತೋಷಗಳನ್ನು ನಾವು ಪುನಃ ಪಡೆದುಕೊಳ್ಳಬೇಕಷ್ಟೇ. ಪ್ರತಿವರ್ಷ ನಾವೆಲ್ಲ ನಮ್ಮ ಇನ್‌ಕಮ್ ಟ್ಯಾಕ್ಸ್‌ನ-ಲ್ಮಾಡ್ತೀವಿ. ನಮ್ಮ ಇನ್ಕಮ್ ಟ್ಯಾಕ್ಸ್ ಇಷ್ಟು ಸಂಬಳ ಇಷ್ಟು ಅಂತೇಳಿ ಅದಕ್ಕೆ ಟ್ಯಾಕ್ಸ್ ಕೂಡ ಕಟ್ಟುತ್ತೀವಿ.
ವ್ಯಾವಹಾರಿಕ ಆದಾಯಗಳಾದ ಮನೆ, ಕಾರು, ಸೈಟು,  , ಚೀಟಿ ಹೀಗೆ ಹೂಡಿಕೆ ಮಾಡುತ್ತಾ ಹೋಗುತ್ತೀವಿ. ನಮ್ಮ ಖುಷಿ, ಸಂತೋಷಗಳಿಗೆ ಅರ್ಥ ಬರಬೇಕಾದರೆ ನಾವು ಮಾನಸಿಕ ಆದಾಯದ ಮೇಲೂ ಹೂಡಿಕೆ ಮಾಡಬೇಕು. ಏನಿದು ಮಾನಸಿಕ ಆದಾಯದ ಹೂಡಿಕೆ ಅನ್ನುತ್ತೀರಾ? ಜೀವನ ತೃಪ್ತಿ, ನನ್ನ ಬದುಕಿಗೆ ಸಂಪೂರ್ಣವಾದ ಅರ್ಥವಿದೆ ಎಂಬ ನಂಬಿಕೆ ಆಸಕ್ತಿದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ, ಜೀವನದ ಮುಖ್ಯವಾದ ಗುರಿಗಳನ್ನು ಅನ್ವೇಷಿಸುವುದು, ಸಕಾರಾತ್ಮಕ ಭಾವನೆ ಗಳನ್ನು ಸಂವೇದನೆಗಳನ್ನು ಅನುಭವಿಸುವುದು-ಅನುಭಾವಿಸುವುದು, ನಾನು ಅನ್ನುವುದಕ್ಕಿಂತ ನಾವು ಎಂಬ ಅಧ್ಯಾತ್ಮದ ಜತೆ ಕನೆಕ್ಟ್ ಆಗ್ತಾ ಹೋಗುವುದೇ ಮಾನಸಿಕ ಆದಾಯದ ಹೂಡಿಕೆ.           .
ನಮ್ಮ ಆಕಾಂಕ್ಷೆಗಳಲ್ಲಿ, ಆಲೋಚನೆಗಳಲ್ಲಿ ಒಂದು ಓಟವಿದೆ. ಸ್ವಲ್ಪ ನಿಧಾನಿಸೋಣ. ಇನ್ನೂ ಹೆಚ್ಚು ಹೆಚ್ಚು ನಮ್ಮದಾಗಿಸಿ ಕೊಳ್ಳಬೇಕೆಂಬ ವಿಪರೀತದ ಈ ಓಟಕ್ಕೆ ಬ್ರೇಕ್ ಹಾಕೋಣ. ನಮ್ಮ ಆಸೆಗಳು, ಆಯ್ಕೆಗಳು, ಕ್ರಿಯೆಗಳು, ಪ್ರತಿಕ್ರಿಯೆಗಳು ಎಲ್ಲವನ್ನೂ ನಮ್ಮ ಜವಾಬ್ದಾರಿಗಳಾಗಿ ಒಪ್ಪಿಕೊಳ್ಳೋಣ ಈ ಅನುಭವಗಳ ಮೂಲಕ ಬದುಕಿನ ಪಾಠಗಳನ್ನು ಕಲಿಯೋಣ. ಬದುಕಿನ ಬಗೆಗಿನ ಅಸಮಾಧಾನಗಳ ಹೊರಹಾಕುವುದನ್ನು  ಮಾಡುವುದನ್ನು ನಿಲ್ಲಿಸೋಣ. ನೆನಪಿಡಿ, ನಮ್ಮ ಬದುಕು ಇನ್ನೊಬ್ಬರಕನಸಾಗಿರುತ್ತದೆ. ಪ್ರತಿ ಕ್ಷಣಗಳನ್ನು ಜಡ್ಜ್ ಮಾಡಬೇಡಿ.
ಜಸ್ಟ್ ಬದುಕಿ. ಪ್ರತಿಯೊಂದು ಯೋಚನೆಯನ್ನು ಭಾವನೆಯನ್ನು ಸೀರಿಯಸ್ಸಾಗಿ ತೆಗೆದುಕೊಂಡಷ್ಟು ಮನಸ್ಸು ಭಾರವಾಗುತ್ತಾ ಹೋಗುತ್ತದೆ. ನೆನಪಿಡಿ, ನಿಮ್ಮ ನಿಜ ಸ್ವಭಾವ ನಿಮ್ಮ ಆ ಕ್ಷಣದ ಆಲೋಚನೆಯೂ ಅಲ್ಲ ಭಾವನೆಯೂ ಅಲ್ಲ,   ಆಗಬೇಡಿ. ನಿಮ್ಮ ಭಯಗಳನ್ನು ನೀವೇ ಎದುರಿಸಿ. ಆಗ ನಿಮ್ಮೊಳಗೆ ಒಂದು ಶಕ್ತಿ ಮೂಡುತ್ತಾ ಹೋಗುತ್ತದೆ. ಒಳಗೂ- ಹೊರಗೂ ಗಟ್ಟಿಯಾಗುತ್ತಾ ಹೋಗುತ್ತೀರಿ.ನಿಮ್ಮ ಆಸಕ್ತಿಗಳನ್ನು ಉತ್ಸಾಹವನ್ನು ಅನುಸರಿಸಿ    .
ನೆನಪಿಡಿ ನಾವೆಲ್ಲ ಸೂಪರ್ ಹ್ಯೂಮನ್ಸ್ ಅಲ್ಲ. ನಾವು ಮನುಷ್ಯರಷ್ಟೇ. ಭಾವನೆಗಳನ್ನು ಸಹಜವೆಂಬಂತೆ ಒಪ್ಪಿಕೊಳ್ಳೋಣ.  ಗಿಂತ  ಅನ್ನು ಮುಖ್ಯವಾಗಿಸಿಕೊಳ್ಳೋಣ. ಗಮನಾರ್ಹವಾದ, ಮನಸ್ಸಿಗೆ ಮುದ ನೀಡುವ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳೋಣ. ಸಂತೋಷಕ್ಕೆ ಅರ್ಥ ತಾನಾಗೆ ಮೂಡುತ್ತದೆ. ಒಂದು ವಿಚಾರ, ಸಂತೋಷ ನಮ್ಮ ಮನಸ್ಸಿನ ಸ್ಥಿತಿಯೇ ಹೊರತು ಬರಿ ಒಂದು ಸಂದರ್ಭವಲ್ಲ. ಸಂತೋಷವನ್ನು ನಮ್ಮ ಬದುಕಿನ ದಾರಿಯಾಗಿಸಿಕೊಳ್ಳೋಣ, ನಿಲ್ದಾಣ ವಾಗಲ್ಲ. ಆಗ ಬದುಕು ಮತ್ತೊಂದಿಷ್ಟು ಸುಂದರವಾಗಿ ಕಾಣತೊಡಗುತ್ತದೆ.
ಚಿಂತೆಗಳನ್ನು, ತೊಂದರೆಗಳನ್ನು ಆಶಾದಾಯಕವಾಗಿ ನೋಡೋಣ. ಸಂತೋಷದ ಕಾಮನಬಿಲ್ಲು ಮನೆಯಲ್ಲಿ ಮನಸಲ್ಲಿ ಬದುಕಲ್ಲಿ ಮೂಡುತ್ತದೆ.