ಪ್ರಾಯ ಪ್ರಾಯ ಪ್ರಾಯ: ಎಲ್ಲರಲ್ಲೂ ಏನು ತಪ್ಪು ಅಭಿಪ್ರಾಯ ?
ಶ್ವೇತಪತ್ರ
@.
ನಮ್ಮೆಲ್ಲರ ಪಾತ್ರ ಮತ್ತು ಪ್ರಭಾವ ಕೂಡ ಅವರ ವರ್ತನೆಯ ಮೇಲೆ, ಅವರ ಮನೋಭಾವದ ಮೇಲೆ, ಅವರ ಸಾಮಾಜಿಕ ವರ್ತನೆಯ ಮೇಲೆ, ಅವರ ಸಂಜ್ಞಾನಾತ್ಮಕ ಬುದ್ಧಿಶಕ್ತಿಯ ಮೇಲೆ, ಒಟ್ಟಾರೆಯಾಗಿ ಅವರ ವ್ಯಕ್ತಿತ್ವದ ಮೇಲೆ ಬಹಳ ದೊಡ್ಡ ಪರಿಣಾಮ ಉಂಟುಮಾಡುತ್ತದೆ. ಹದಿಹರೆಯದವರನ್ನು ಹ್ಯಾಂಡಲ್ ಮಾಡುವಲ್ಲಿ ನಮಗಿರಬೇಕಾದ ಮೊದಲಸೂಕ್ಷ್ಮತೆ ಹದಿಹರೆಯ ಮತ್ತು ಅದರ ಬದಲಾವಣೆಗಳು ಸಹಜ ಮತ್ತು ಅವರನ್ನು ಅಷ್ಟೇ ಸಹಜವಾಗಿ ನಡೆಸಿಕೊಳ್ಳಬೇಕು ಎನ್ನುವ ಅರಿವನ್ನು ಬೆಳೆಸಿಕೊಳ್ಳಬೇಕು.
            . , ’     .     !   ?   ? ಹದಿವಯಸ್ಸಿನ ಮನಸ್ಸುಗಳ ತುಮುಲಗಳು, ತಾಕಲಾಟಗಳು, ಭಾವನಾತ್ಮಕ ಡಿಸ್ಟರ್ಬೆನ್ಸ್‌ಗಳು, ಸಂವೇದನೆಗಳ ಏರುಪೇರು, ಮನಸ್ಸನ್ನು ಹತೋಟಿ ಯಲ್ಲಿಡಲು ಅವರು ಪಡುವ ಹರಸಾಹಸಗಳು, ಅತೃಪ್ತ ಬಯಕೆಗಳು, ಅಸಂಬದ್ಧ ಆಲೋಚನೆಗಳು, ಅತಾರ್ಕಿಕವಾದ ಭಯಗಳು, ನೈತಿಕ ಅಭದ್ರತೆಗಳು, ಸರಿತಪ್ಪುಗಳ ಗೊಂದಲಗಳು ಜ್ವಾಲಾಮುಖಿಗಳಾಗಿ ಸಿಡಿದು ಅವುಗಳನ್ನು ಹೇಗೆ ನಿಭಾಯಿಸಬೇಕು ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ನಿಲ್ಲುವ ವಯಸ್ಸೇ ಹದಿಹರೆಯ ಎಂಬುದನ್ನು ಮೇಲಿನ ಅಡಾಲಸೆನ್ಸ್ ಎಂಬ ಕವಿತೆ ಬಹಳ ಅದ್ಭುತವಾಗಿ ಕಟ್ಟಿಕೊಡುತ್ತದೆ.
ನಿಜ ಅಲ್ವ? ನಾವೆಲ್ಲ ಇದೇ ತುಮುಲ, ತಾಕಲಾಟಗಳನ್ನು, ಭಾವನೆಗಳ ಡಿಸ್ಟರ್ಬೆನ್ಸ್ ಗಳನ್ನು ದಾಟಿ ಇವತ್ತಿನ ಪ್ರೌಢಾವಸ್ಥೆಯಲ್ಲಿ ವ್ಯಕ್ತಿಗಳಾಗಿದ್ದು. ಒಂದಷ್ಟು ಮಂದಿಯ ವ್ಯಕ್ತಿತ್ವ ಪರಿಪಕ್ವವಾಗಿವೆ. ಇನ್ನೊಂದಿಷ್ಟು ಜನರು ಪರಿಪಕ್ವವಾಗುವ ಪ್ರಯತ್ನದಲ್ಲಿ ದ್ದೇವೆ. ಈ ಪರಿಪಕ್ವತೆ ಹ್ಯೂಮನ್ ಡೆವಲಪ್‌ಮೆಂಟ್‌ನ ಒಂದು ಪ್ರಕ್ರಿಯೆ. ಹ್ಯೂಮನ್ ಡೆವಲಪ್ಮೆಂಟ್ ಮನುಷ್ಯನ ಬೆಳವಣಿಗೆಯ ಹಂತಗಳ ಒಂದು ಲೈಫ್ ಸೈಕಲ್.
ಈ - ಗರ್ಭಾವಸ್ಥೆಯಿಂದ ಶುರುವಿಟ್ಟುಕೊಂಡು ಬಾಲ್ಯಾವಸ್ಥೆ, ಹದಿಹರೆಯ, ಪ್ರೌಢಾವಸ್ಥೆ, ಮಧ್ಯವಯಸ್ಸು, ವೃದ್ಧಾಪ್ಯ ಹೀಗೆ ಮುಂದುವರಿದು ಸಾವಿನಲ್ಲಿ ಕೊನೆಗೊಳ್ಳುತ್ತದೆ. ಈ ಇಡೀ ಲೈಫ್ ಸ್ಪ್ಯಾನ್ ಡೆವಲಪ್ಮೆಂಟ್‌ನಲ್ಲಿ ತಂದೆತಾಯಿಗಳಿಗೆ, ಪೋಷಕ ರಿಗೆ, ಶಿಕ್ಷಕರಿಗೆ, ಒಟ್ಟಾರೆ ಸಮಾಜಕ್ಕೆ ಬಹಳ ಸವಾಲಿನ ಘಟ್ಟ ಯಾವುದೆಂದರೆ ಅದು ಹದಿಹರೆಯ! ನಿಜವಾಗಲೂ ಹದಿಹರೆಯ ಚಾಲೆಂಜಿಂಗಾ? ಹೌದು! ಅನ್ನೋದಾದರೆ ಯಾಕೆ ಮತ್ತು ಹೇಗೆ? ಈ ಹದಿಹರೆಯದವರನ್ನು ಹ್ಯಾಂಡಲ್ ಮಾಡೋದರಲ್ಲಿ ನಮ್ಮೆಲ್ಲರ ಪಾತ್ರವೇನು? ಯಾವ ಎಚ್ಚರಿಕೆಯ ಪ್ರಜ್ಞೆಯ ಜತೆಗೆ ಅವರೊಂದಿಗೆ ನಾವೆಲ್ಲ  ಮಾಡಬೇಕು? ಈ ಎಲ್ಲ ಪ್ರಶ್ನೆ ಗಳನ್ನು ಇಟ್ಟುಕೊಂಡು ಮನೋ ವೈಜ್ಞಾನಿಕ ದೃಷ್ಟಿಕೋನದಿಂದ ಹದಿಹರೆಯವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.
ಹದಿಹರೆಯ ಎಂದರೇನು? ಎಂಬ ಪ್ರಶ್ನೆಗೆ ಮನೋವಿಜ್ಞಾನಿಗಳು ಅದ್ಭುತ ವ್ಯಾಖ್ಯಾನ ನೀಡುತ್ತಾರೆ – ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಪರಿವರ್ತನೆಗೊಳ್ಳುವ ಸಮಯವೇ ಹದಿಹರೆಯ. ಪರಿವರ್ತನೆ ಅಂತ ಯಾಕೆ ಹೇಳ್ತೀವಿ ಅಂದ್ರೆ ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಸಿದ್ಧಗೊಳ್ಳಲು ಅಣಿಯಾಗುತ್ತಿರುವ ಬದುಕಿನ ಒಂದು ಹಂತ. ಇವರನ್ನು ನಾವು ಮಕ್ಕಳು ಅಂತಲೂ  ಮಾಡಲಿಕ್ಕೆ ಆಗದ ಪ್ರೌಢರು ಅಂತಲೂ ಪರಿಗಣಿಸಲಾಗದ ಒಂದು ಹಂತ.
ಹದಿಹರೆಯ ಚಾಲೆಂಜಿಂಗ್ ಅನಿಸಿಕೊಳ್ಳಲು ಮುಖ್ಯವಾದ ಕಾರಣ ಈ ಹಂತದಲ್ಲಿ ಆಗುವ ಬದಲಾವಣೆಗಳು. ಉದಾಹರಣೆಗೆ ದೈಹಿಕ ಬದಲಾವಣೆಗಳು, ಸಂಜ್ಞಾನಾತ್ಮಕ ಬದಲಾವಣೆಗಳು, ಮಾನಸಿಕ- ಭಾವನಾತ್ಮಕ ಬದಲಾವಣೆಗಳು. ಅಡಾಲಸೆನ್ಸ್ ಅನ್ನುವ ಪದ ಲ್ಯಾಟಿನ್ ಭಾಷೆಯ ಅಡಲ-ಸರ್ ಎಂಬ ಪದದಿಂದ ಬಂದಿದೆ ಮತ್ತು ಇದರ ಅರ್ಥ ಪ್ರಬುದ್ಧನಾಗುವುದು ಎಂಬು ದನ್ನು ಸೂಚಿಸುತ್ತದೆ. ಲೈಂಗಿಕ ಪಕ್ವತೆ ಆರಂಭವಾದಾಗಬಾಲ್ಯಾವಽಅಂತ್ಯಗೊಳ್ಳುತ್ತದೆ. ಈ ಲೈಂಗಿಕ ಪಕ್ವತೆ ಹದಿಹರೆ ಯದ ಸೂಚನೆಯಾಗಿರುತ್ತದೆ. ಈ ಹಂತದಲ್ಲಿ ದೈಹಿಕವಾಗಿ ಅನೇಕ ಬದಲಾವಣೆಗಳು ಉಂಟಾಗುತ್ತವೆ.
ಅದರಲ್ಲಿ ಬಹಳ ಮುಖ್ಯವಾದ ಬೆಳವಣಿಗೆಯೆಂದರೆ ಪ್ರಾಥಮಿಕ ಮತ್ತು ಅನುಷಂಗಿಕ ಲೈಂಗಿಕ ಗುಣಲಕ್ಷಣಗಳ ಬೆಳವಣಿಗೆಗಳು. ಪ್ರಾಥಮಿಕ ಲೈಂಗಿಕ ಲಕ್ಷಣಗಳೆಂದರೆ ಶುಕ್ರಾಣು ಮತ್ತು ಅಂಡಾಣು ಎಂಬ ಹಾರ್ಮೋನುಗಳ ಉತ್ಪತ್ತಿ. ಈ ಲೈಂಗಿಕ ಹಾರ್ಮೋನುಗಳ ಬಿಡುಗಡೆ ಆರಂಭಗೊಳ್ಳುವುದರಿಂದ ಅನುಷಂಗಿಕ ಲೈಂಗಿಕ ಗುಣ ಲಕ್ಷಣಗಳಾದ ಪುರುಷರಲ್ಲಿ ಮೀಸೆ-ಗಡ್ಡ,  ಗಳ ಬೆಳವಣಿಗೆ, ಸೀಯರಲ್ಲಿ ಸ್ತನಗಳ ಬೆಳವಣಿಗೆ ಋತುಚಕ್ರ ಆರಂಭದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಹುಡುಗರಲ್ಲಿ 12 ರಿಂದ 13 ವಯಸ್ಸಿನ ಮತ್ತು ಹುಡುಗಿಯರಲ್ಲಿ 10 ರಿಂದ 11 ನೇ ವಯಸ್ಸಿನಲ್ಲಿ ತ್ವರಿತಗತಿಯ ಶಾರೀರಿಕ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಹದಿವಯಸ್ಸಿನ ಈ ದೈಹಿಕ ಬೆಳವಣಿಗೆಯ ಜತೆಗೆ ಕೆಲವೊಂದು ಪ್ರಮುಖ ಮಾನಸಿಕ ಬದಲಾವಣೆ ಗಳು ಉಂಟಾಗುತ್ತವೆ. ಹುಡುಗ-ಹುಡುಗಿಯರ ನಡುವೆ ಪರಸ್ಪರ ಲೈಂಗಿಕ ಆಕರ್ಷಣೆಗಳು ಕಂಡುಬರುತ್ತವೆ. ಇತರರನ್ನು ಮೆಚ್ಚಿಸು ವ ಹಂಬಲ, ಅಲಂಕಾರಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾರೆ ಅಸಹನೆ, ಚಡಪಡಿಕೆ ಈ ವಯಸ್ಸಿನವರ ಮೇಲೆ ಕೇಳಿಬರುವ ಸಾಮಾನ್ಯ ಕಂಪ್ಲೇಂಟ್.
ಲೈಂಗಿಕ ವಿಷಯಗಳ ಬಗ್ಗೆ ಚರ್ಚಿಸಲು ತಂದೆ-ತಾಯಿಯರು ತೋರುವ ಮಡಿವಂತಿಕೆಯಿಂದಾಗಿ ಹದಿವಯಸ್ಸಿನಲ್ಲಿ ಲೈಂಗಿಕ ತೆಯ ಬಗ್ಗೆ ತಪ್ಪು ತಿಳಿವಳಿಕೆ ಹೆಚ್ಚಾಗಿರುತ್ತದೆ. ಅತಿಯಾದ ಕುತೂಹಲದಿಂದಾಗಿ ಕೆಲವರು ಸುರಕ್ಷಿತವಲ್ಲದ ಲೈಂಗಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಏಡ್ಸ್ ಮುಂತಾದ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ.
ಹದಿಹರೆಯದವರ ಸಂಜ್ಞಾನಾತ್ಮಕ ಬೆಳವಣಿಗೆಯ ಬಗ್ಗೆ ಸೂಕ್ಷ್ಮವಾಗಿ ಗಮನಿಸೋಣ. ಹದಿವಯಸ್ಸಿನವರ ಆಲೋಚನೆಗಳು ಹೆಚ್ಚು  (ಅಮೂರ್ತ), ಲಾಜಿಕಲ್ (ತರ್ಕಬದ್ಧ) ಹಾಗೂ (ಆದರ್ಶ)ಗಳಾಗಿರುತ್ತವೆ. ತಮ್ಮ ಸ್ವಂತ ಆಲೋಚನೆ ಗಳನ್ನು, ಇತರರ ಆಲೋಚನೆಗಳನ್ನು, ಬೇರೆಯವರು ತಮ್ಮ ಬಗ್ಗೆ ಏನು ಆಲೋಚಿಸುತ್ತಿzರೆ ಅನ್ನುವುದನ್ನ ಎಕ್ಸಾಮಿನ್ಮಾಡುವಷ್ಟು ಸಮರ್ಥರಾಗಿರುತ್ತಾರೆ. ವಿವೇಚನಾ ಸಾಮರ್ಥ್ಯ ಹಾಗೂ ತಪ್ಪು ಸರಿಗಳ ನಡುವಿನ ಆಯ್ಕೆಗಳು ಅವರಲ್ಲಿ ಸಾಮಾ ಜಿಕ ಅರಿವನ್ನು ಸಹ ಮೂಡಿಸುತ್ತವೆ.
ಆಲೋಚನಾ ಸಾಮರ್ಥ್ಯ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಹಾಗಾಗಿ ಅವರು ಎಲ್ಲವನ್ನೂ ಪ್ರಶ್ನೆ ಮಾಡುವುದಕ್ಕೆ ಶುರು ಮಾಡು ತ್ತಾರೆ. ಜತೆಗೆ ಐಡಿಯಲ್ ಕ್ಯಾರೆಕ್ಟರ್‌ಸ್ಟಿಕ್ಸ್‌ಗಳನ್ನು ಬೆಳೆಸಿಕೊಳ್ಳಲು ಶುರುಮಾಡು ಮಾಡಿಕೊಳ್ಳುತ್ತಾರೆ. ಮತ್ತೆ ತಮ್ಮ ಆದರ್ಶ ಗುಣಗಳನ್ನು ಇತರರ ಐಡಿಯಲ್ ಸ್ಟ್ಯಾಂಡರ್ಡ್‌ಗಳ ಜತೆ ಹೋಲಿಸಿ ನೋಡುವುದಕ್ಕೆ ಕೂಡ ಶುರುಮಾಡುತ್ತಾರೆ. ಉದಾಹರಣೆಗೆ ಹೇಳುವುದಾದರೆ ಆದರ್ಶ ತಂದೆ-ತಾಯಿ ಯಾವ ತರಹ ಇರುತ್ತಾರೆ ಅನ್ನುವ ಆಲೋಚನೆಗೆ ಅವರ ತಂದೆ-ತಾಯಿಯ ಪೇರೆಂಟಿಂಗ್ ಸ್ಟೈಲ್ ತಮ್ಮ ಐಡಿಯಲ್ ಸ್ಟ್ಯಾಂಡರ್ಡ್ ಗೆ ಹೊಂದಾಣಿಕೆಯಾಗುತ್ತದೆಯಾ ಎನ್ನುವುದನ್ನು ಅವರು ಕಂಪೇರ್ ಮಾಡಿ ನೋಡುತ್ತಾರೆ.
ಇಲ್ಲಿ ಅವರಿಗೆ ಗೊಂದಲ, ಕನ್ಯೂಷನ್ಸ್, ತಿಕ್ಕಾಟಗಳು ಉಂಟಾಗುತ್ತ ಹೋಗುತ್ತದೆ. ಯಾವುದನ್ನು ಒಪ್ಪಬೇಕು ಯಾವುದನ್ನು ಬಿಡಬೇಕು ಎನ್ನುವ ಘರ್ಷಣೆಗೆ ಒಳಗಾಗುತ್ತಾರೆ. ಯಾಕೆಂದರೆ ತಂದೆ-ತಾಯಿಗಳು ಮಾಡುವ ತಪ್ಪು, ಸಮಾಜದಲ್ಲಿ ನಡೆಯು ತ್ತಿರುವ ಗೊಂದಲಗಳ ನಡುವೆ ತಮ್ಮನ್ನು ಮಾತ್ರ ‘ಹೀಗಿರಬೇಕು ಹಾಗಿರಬೇಕು’ ಎಂದು ಹೇಳುವ ಧೋರಣೆಗಳು ಅವರಲ್ಲಿ ತಾಕಲಾಟಗಳನ್ನು ಉಂಟುಮಾಡುತ್ತವೆ. ಸಿಗರೇಟು ಸೇದಲಾ, ಬಿಡಲಾ? ಎಕ್ಸಾಮ್‌ನಲ್ಲಿ ಕಾಪಿ ಹೊಡೆಯಲಾ, ಬಿಡಲಾ? ಈ ತರಹದ ತರ್ಕಬದ್ಧ ಆಲೋಚನೆ ಹದಿಹರೆಯ ದವರ ನೈತಿಕ ಚಿಂತನೆಯ ಮೇಲೆ ಪರಿಣಾಮವನ್ನು ಬೀರುತ್ತದೆ.
ಹದಿಹರೆಯದ ಹಂತದಲ್ಲಿ ಮುಖ್ಯವಾಗಿ ಘಟಿಸುವ ಮತ್ತೊಂದು ವಿಷಯವೆಂದರೆ ಅವರಲ್ಲಿ ತಮ್ಮದೇ ಆದ ಸ್ವಕೇಂದ್ರಿತ ಭಾವಬೆಳವಣಿಗೆ ಹೊಂದುತ್ತದೆ (    ). ಡೇವಿಡ್ ಎಲ್ ಕೈಂಡ್ ಎನ್ನುವ ಅಮೆರಿಕದ ಮನೋವಿಜ್ಞಾನಿ ಇಗೊ ಸೆಂಟ್ರಿಸಂನಲ್ಲಿ ಎರಡು ಪ್ರಮುಖವಾದ ಅಂಶಗಳನ್ನು ಗುರುತಿಸುತ್ತಾನೆ. ಮೊದಲನೆಯದು   (ಸ್ವಂತಿಕೆ) ಎರಡನೇಯದು   (ವೈಶಿಷ್ಟ್ಯ).   ಎನ್ನುವುದು ಹದಿಹರೆಯದವರ ಒಂದು ನಂಬಿಕೆ ಯಾಗಿರುತ್ತದೆ. ಎಲ್ಲರೂ ನನ್ನನ್ನೇ ಗಮನಿಸುತ್ತಿದ್ದಾರೆ, ಎಲ್ಲರೂ ನನ್ನನ್ನೇ  ಮಾಡ್ತಾ ಇದ್ದಾರೆ, ನನ್ನ ಪ್ರತಿಯೊಂದು ವರ್ತನೆಯನ್ನು  ಮಾಡ್ತಾ ಇದ್ದಾರೆ ಎಂದು ಯೋಚಿಸುವುದಕ್ಕೆ ಶುರುಮಾಡುತ್ತಾರೆ.
ಉದಾಹರಣೆಗೆ ಹೇಳುವುದಾದರೆ ಮುಖದ ಮೇಲೆ ಮೊಡವೆ ಮೂಡಿದರೆ ಅಯ್ಯೋ ನನ್ನ ಮೊಡವೆಯ ಬಗ್ಗೆಯೇ ಎಲ್ಲರು ಮಾತಾಡಿಕೊಳ್ಳುತ್ತಾರೆ ಎಂದುಕೊಳ್ಳುವುದು, ಯಾವುದಾದರು ಅಂಗಡಿಗೆ ಹೋದರೆ ಎಲ್ಲರು ನನ್ನ ಡ್ರೆಸ್ ಅನ್ನೇ ಗಮನಿಸುತ್ತಾರೆ ಅಂದುಕೊಳ್ಳುವುದು… ಹೀಗೆ ತಮ್ಮ ಬಗ್ಗೆ ತಮ್ಮ ಪ್ರತಿಯೊಂದು ವರ್ತನೆಯ ಬಗ್ಗೆ ವಿಪರೀತವಾಗಿ - ಆಗಿ ಬಿಡುತ್ತಾರೆ. ಇದು  . ಹಾಗಾಗಿ ಹದಿಹರೆಯದವರನ್ನು ನೀವು ಗಮನಿಸಿ ಯಾವುದೇ ಕೌಟುಂಬಿಕಕಾರ್ಯಕ್ರಮಗಳಿಗೆ ಹೋಗದೆ ತಪ್ಪಿಸಿಕೊಳ್ಳುತ್ತಾರೆ. ಆಗೆಲ್ಲ ತಂದೆತಾಯಂದಿರ ಮತ್ತು ಅವರ ಮಧ್ಯೆ ಘರ್ಷಣೆಗಳು ಉಂಟಾ ಗುತ್ತವೆ.
ಮತ್ತೊಂದು ಇಗೊ ಸೆಂಟ್ರಿಸಂ  . ಇದು ಹದಿಹರೆಯದವರ ಮನಸ್ಸಿನಲ್ಲಿ ಮೂಡುವ ಅನನ್ಯತೆ ಅಥವಾ ವೈಶಿಷ್ಟ್ಯತೆ. ಎಲ್ಲರೂ ನನ್ನನ್ನು ಅರ್ಥ ಮಾಡಿಕೊಳ್ಳಬೇಕು ಎಂಬ ಭಾವನೆ ಈ ಹಂತದಲ್ಲಿ ಉಂಟಾಗುತ್ತದೆ. ಜತೆಗೆ ಅವರಲ್ಲಿಕೆಲವೊಂದು ವಿಶಿಷ್ಟ ಯೋಚನೆಗಳು ಮೂಡುತ್ತವೆ. ಏನೆಂದರೆ  ಕಾರ್‌ನಲ್ಲಿ ಅಮ್ಮನ್ನ ಓಡಾಡಿಸಬೇಕು, ಅಮ್ಮನಿಗೆನವರತ್ನ ಹಾರ ಮಾಡಿಸಿಕೊಡ್ತೀನಿ ಈ ತರಹದ ವಿಶಿಷ್ಟ ಆಲೋಚನೆಗಳು. ಆಗೆಲ್ಲ ಪೋಷಕರಾದ ನಾವು ಏನ್ ಹೇಳ್ತಿವಿ ಅಂದರೆ ಮೊದಲು ನೆಟ್ಟಗೆ ಓದಿ, ಕೆಲಸಕ್ಕೆ ಸೇರಿಕೋ ಆಮೇಲೆ ಇದೆಲ್ಲ ಮಾತಾಡು ಅಂತ. ಆಗೆಲ್ಲ ಯಾರೂ ತಮ್ಮನ್ನು ಅರ್ಥ ಮಾಡಿ ಕೊಳ್ಳುವುದೇ ಇಲ್ಲವೆಂದು ಕೊರಗಲಿಕ್ಕೆ ಶುರುಮಾಡ್ತಾರೆ.
ಇದೇ ಪರ್ಸನಲ್ -ಬಲ. ಇದನ್ನು ಎಷ್ಟರಮಟ್ಟಿಗೆ ರಿಟೇಲ್ ಮಾಡಿಕೊಳ್ಳುತ್ತಾ ಹೋಗುತ್ತಾರೆಂದರೆ ವಾಸ್ತವವನ್ನು ಬಿಟ್ಟುತಮ್ಮದೇ ಕಾಲ್ಪನಿಕ ಜಗತ್ತನ್ನು ಕಟ್ಟಿಕೊಂಡು ಅಲ್ಲಿ ತಮ್ಮ ವೈಶಿಷ್ಟ್ಯಗಳನ್ನು ಹೆಣೆಯುತ್ತ ಹೋಗುತ್ತಾರೆ. ಈ   ಅಡಾಲಸೆಂಟ್‌ಗಳ ದಿನಚರಿಯ ಒಂದು ಭಾಗವೇ ಆಗಿರುತ್ತದೆ. ಬೇಕಿದ್ದರೆ ಗಮನಿಸಿ, ಹದಿಹರೆಯದವರಲ್ಲಿ ದೈಹಿಕ,ಮಾನಸಿಕ ಅಥವಾ ಭಾವನಾತ್ಮಕ ಬೆಳವಣಿಗೆಗಳಷ್ಟೇ ಆಗಲ್ಲ. ಅವರ ಆಲೋಚನೆಯ ಪ್ರಕ್ರಿಯೆಯಲ್ಲೂ ಬದಲಾವಣೆಗಳಾಗುತ್ತವೆ.
ಹೀಗೆ ಆಲೋಚನೆಗಳು ಬದಲಾದಂತೆ ಹದಿವಯಸ್ಸಿನ ಮಕ್ಕಳು ಐಡೆಂಟಿಟಿ ಫಾರ್ಮೇಶನ್-ತಮ್ಮ ಅಸ್ತಿತ್ವ ಸ್ಥಾಪಿಸಿಕೊಳ್ಳುವುದಕ್ಕೆಶುರುಮಾಡುತ್ತ ಹೋಗುತ್ತಾರೆ. ನಾನು ಯಾರು? ನನಗಿರುವ ಮೌಲ್ಯಗಳೇನು? ಕಮಿಟ್‌ಮೆಂಟ್‌ಗಳೇನು, ನಂಬಿಕೆಗಳೇನೂಈ ತರಹದ ಐಡೆಂಟಿಟಿ -ರ್ಮೇಷನ್ ನ ಮಾಡಿಕೊಳ್ಳತೊಡಗುತ್ತಾರೆ. ತಮ್ಮ ತಂದೆ-ತಾಯಂದಿರಿಂದ ಭಿನ್ನವಾದಐಡೆಂಟಿಟಿಯನ್ನು ಬೆಳೆಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.
ಉದಾಹರಣೆಗೆ ಇವರನ್ನು ಇವರ ಮೊಮ್ಮಗ/ಮೊಮ್ಮಗಳು ಅಂತ ಹೇಳಿದರೆ ಅವರಿಗೆ ಇಷ್ಟ ಆಗಲ್ಲ . ಅಂತಹ ಐಡೆಂಟಿಟಿಯನ್ನು ಹದಿಹರೆಯದವರು ಇಷ್ಟಪಡೋದಿಲ್ಲ. ಹೀಗೆ ತನ್ನದೇ ವ್ಯಕ್ತಿತ್ವ, ಆಸೆ ಅನಿಸಿಕೆ ಬೆಳೆಸಿಕೊಳ್ಳುವಾಗ ತಂದೆ-ತಾಯಂದಿರ ಜತೆ ಘರ್ಷಣೆ ಉಂಟಾಗುತ್ತದೆ. ಹದಿ ವಯಸ್ಸನ್ನು ಬಹಳ  ಫುಲ್ ವಯಸ್ಸು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಎಲ್ಲರ ಬದುಕಿನಲ್ಲೂ ಹದಿ ವಯಸ್ಸು ಒಂದು ರೀತಿಯ ಅಭದ್ರತೆ, ಒತ್ತಡ, ದ್ವಂದ್ವ ಅನುಭವಿಸಿದ ವಯಸ್ಸು ಎಂದು ಹೇಳ ಬಹುದು. ಈ ವಯಸ್ಸಿನಲ್ಲಿ ಒಡನಾಡಿಗಳ ಒತ್ತಡ, ಸ್ವಚ್ಛಂದತೆಯ ಅನುಭವ, ಬಗೆಹರಿಯದ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಒಡನಾಡಿಗಳ ಪ್ರಭಾವದಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇರುತ್ತದೆ.
ಕೆಟ್ಟದ್ದೆಂದರೆಧೂಮಪಾನ, ಮದ್ಯಪಾನ, ಮಾದಕ ವಸ್ತು ಚಟ, ತಂದೆ-ತಾಯಿಯರ ಮಾತಿಗೆ ಮನ್ನಣೆ ನೀಡದಿರುವುದುಇತ್ಯಾದಿ ದುರಭ್ಯಾಸಗಳನ್ನು ಸ್ನೇಹಿತರ ಪ್ರಭಾವದಿಂದ ಕಲಿಯುತ್ತಾರೆ. ಇದು ಒಂದು ರೀತಿಯ ಅಭದ್ರತೆ ಗೊಂದಲ, ಅನುಮಾನ, ಚಿಂತೆ, ಚಡಪಡಿಕೆ, ಅಸಹನೆ ಇತ್ಯಾದಿ ವೈಪರೀತ್ಯಗಳಿಗೆ ಕಾರಣವಾಗುತ್ತದೆ. ಒಳ್ಳೆಯದೆಂದರೆ ಅತಿ ಉತ್ಸಾಹ, ಆನಂದ, ಸ್ಪರ್ಧಾ ಮನೋಭಾವ, ಗುರಿಸಾಧನೆಯ ಹುಮ್ಮಸ್ಸು, ಹಾತೊರೆಯುವುದು ಮುಂತಾದ ಸದ್ಗುಣಗಳು ಕಂಡುಬರುತ್ತವೆ.
ಹದಿಹರೆಯದವರನ್ನು ಮತ್ತು ಕಾಡುವ ಬಹಳ ಮುಖ್ಯವಾದ ಮಾನಸಿಕ ಅಂಶವೆಂದರೆ    ಹಾಗೂ ತಮ್ಮ ಅಪಿಯರೆನ್ಸ್ ಬಗ್ಗೆ ಬೇರೆಯವರು ಏನು ಅಂದುಕೊಳ್ಳುತ್ತಾರೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು. ನಾನು ತುಂಬಾ ಉದ್ದ ಇದೀನಿ, ತೆಳ್ಳಗಿದ್ದೇನೆ, ಕುಳ್ಳಗಿದ್ದೇನೆ, ದಪ್ಪಗಿದ್ದೇನೆ ಹೀಗೆ…ಕೆಲವು ಹದಿಹರೆಯದ ಹುಡುಗಿಯರು       ಇನ್ನೂ ಕೆಲವರು      .  ಮತ್ತು  ಎನ್ನುವ ಮನೋವಿಜ್ಞಾನಿಗಳು ಹದಿಹರೆಯ ಮತ್ತು ಅದರ ಮಾನಸಿಕ ಪರಿಣಾಮಗಳು ಎನ್ನುವ ಸಂಶೋಧನೆಯನ್ನು ಮಾಡಿದ್ದಾರೆ.
ಅದರನ್ವಯ ನಾವು ಬದುಕುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಅಂಶಗಳು  ಅನ್ನು ನಕಾರಾತ್ಮಕವಾಗಿ  ಮಾಡುವ ಸಾಧ್ಯತೆಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಎಷ್ಟೋ ಜನ ಹೆಣ್ಣುಮಕ್ಕಳು ತಮ್ಮ ದೇಹದ ಬಗ್ಗೆ   ಅನ್ನು ಬೆಳೆಸಿಕೊಳ್ಳುತ್ತಾರೆ. ಜತೆಗೆ ದೇಹದ ತೂಕ ಹೆಚ್ಚಳದ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುತ್ತಾರೆ.
ಹಾಗಿದ್ದರೆ ಹುಡುಗರ ಬಾಡಿ ಇಮೇಜ್ ಹೇಗಿರುತ್ತದೆ ಎನ್ನುವುದನ್ನು ನೋಡುವುದಾದರೆ   ವಿಚಾರದಲ್ಲಿ ಹುಡುಗರು ಹುಡುಗಿಯರಿಗಿಂತ ಹೆಚ್ಚು  ಆಗಿರುತ್ತಾರೆ. ಸಂಶೋಧನೆಯ ಪ್ರಕಾರ ಶೇ.62 ಹುಡುಗರು ತಮ್ಮ ಸೆಮಿನಾರ್ ಕಿ ಯನ್ನು ಪಾಸಿಟಿವ್ ಆಗಿ ತಗೆದುಕೊಳ್ಳುತ್ತಾರೆ. ಆದರೆ ಶೇ.23 ಹುಡುಗಿಯರು ಮಾತ್ರ ತಮ್ಮ ಋತುಚಕ್ರವನ್ನು ಪಾಸಿಟಿವ್ ಆಗಿ  ಮಾಡುತ್ತಾರೆ.
ಸಮಾಜವಾಗಿ, ಪೋಷಕರಾಗಿ, ಶಿಕ್ಷಕರಾಗಿ, ಬಂಧುವಾಗಿ, ನೆರೆಹೊರೆಯವರಾಗಿ ಹದಿಹರೆಯದವರನ್ನು ಹೇಗೆ  ನಡೆಸಿಕೊಳ್ಳಬೇಕು, ಹೇಗೆ ಕನೆಕ್ಟ್ ಆಗಬೇಕು ಎಂಬುದನ್ನು ನಾವೆಲ್ಲ ಸೂಕ್ಷ್ಮವಾಗಿ ಅರಿಯಬೇಕಿದೆ. ಏಕೆಂದರೆ ನಮ್ಮೆಲ್ಲರ ಪಾತ್ರ ಮತ್ತು ಪ್ರಭಾವ ಕೂಡ ಅವರ ವರ್ತನೆಯ ಮೇಲೆ, ಅವರ ಮನೋಭಾವದ ಮೇಲೆ, ಅವರ ಸಾಮಾಜಿಕ ವರ್ತನೆಯ ಮೇಲೆ, ಅವರ ಸಂಜ್ಞಾನಾತ್ಮಕ ಬುದ್ಧಿಶಕ್ತಿಯ ಮೇಲೆ, ಒಟ್ಟಾರೆಯಾಗಿ ಅವರ ವ್ಯಕ್ತಿತ್ವದ ಮೇಲೆ ಬಹಳ ದೊಡ್ಡ ಪರಿಣಾಮ ಉಂಟು ಮಾಡುತ್ತದೆ.
ಹದಿಹರೆಯದವರನ್ನು ಹ್ಯಾಂಡಲ್ ಮಾಡುವಲ್ಲಿ ನಮಗಿರಬೇಕಾದ ಮೊದಲ ಸೂಕ್ಷ್ಮತೆ ಹದಿಹರೆಯ ಮತ್ತು ಅದರ ಬದಲಾ ವಣೆಗಳು ಸಹಜ ಮತ್ತು ಅವರನ್ನು ಅಷ್ಟೇ ಸಹಜವಾಗಿ ನಡೆಸಿಕೊಳ್ಳಬೇಕು ಎನ್ನುವ ಅರಿವನ್ನು ಬೆಳೆಸಿಕೊಳ್ಳಬೇಕು.   ಎನ್ನುವ ಕೆನಡಾ ದೇಶದ ಕವಿ ತುಂಬಾ ಅದ್ಭುತವಾಗಿ ಹೇಳುತ್ತಾನೆ.              ಎಂದು. ಮನಸ್ಸಿನ ಆಳದಲ್ಲಿ ನಾವೆಲ್ಲರೂ ಅಪೂರ್ಣವೇ ಆದರೆ ಪರಿಪಕ್ವರೂ ಎನ್ನುವ ಭ್ರಮೆಯ ಲೋಕ ಸೃಷ್ಟಿಸಿಕೊಂಡು ಮಕ್ಕಳನ್ನ ಅಡಾಲಸೆನ್ಸ್ ಅವರನ್ನ ಗಾಬರಿ ಬೀಳಿಸುತ್ತಿರುತ್ತೀವಿ ಅಷ್ಟೇ..!