ಉದ್ಯಾನನಗರಿಯಲ್ಲಿ ಅಪರೂಪದ ಪ್ರಕೃತಿ ಚಿಕಿತ್ಸೆ
ಸಂಸ್ಥೆ ಸಾಧನೆ
ಸೌಮ್ಯ ಗಾಯತ್ರಿ
ಬಡವ, ಮಾಧ್ಯಮ ಸಿರಿವಂತರೆನ್ನದೆ ಎಲ್ಲರನ್ನೂ ಸಮಾನ ಮನೋಭಾವದಿಂದ ನಗು ನಗುತ್ತಾ ಉಪಚರಿಸುವ ಈ ಆಸ್ಪತ್ರೆಯ ಸಿಬ್ಬಂದಿ ವರ್ಗ, ಸಹನೆಯಿಂದ ಜನರ ಕಷ್ಟಗಳನ್ನು ಕೇಳಿಸಿಕೊಳ್ಳುವ ವೈದ್ಯರು, ಅನ್ನಪೂರ್ಣೇಶ್ವರಿಯ ನಿಯೋಗ ಮಂಡಳಿಯ ಉತ್ತರಾಧಿಕಾರಿಗಳೆಂಬಂತೆ ಧಾರಾಳವಾಗಿ ರುಚಿರುಚಿಯಾಗಿ ಉಣಬಡಿಸುವ ಅಡುಗೆ ಮನೆ ಯವರು ಇದು ಈ ಸಂಸ್ಥೆಯ ಅಪರೂಪದ ಸಾಧನೆ.
ಮೊನ್ನೆಯಷ್ಟೇ ನಮ್ಮ ನೆಚ್ಚಿನ ಸಂಪಾದಕರು ಬೆಂಗಳೂರಿನ ಮೇಲೆ ಮುನಿಸಿಕೊಂಡು ಅವರ ನೆಚ್ಚಿನ ಥಾರ್‌ನಲ್ಲಿ ಪ್ರಕೃತಿಯ ಸುಂದರ ತಾಣವೊಂದರಲ್ಲಿ 2-3 ದಿನಗಳು ಕಳೆದು ಮುನಿಸು ತೀರಿಸಿಕೊಂಡು ಮರಳಿ ಬಂದದ್ದು ಎಲ್ಲರಿಗೂ ತಿಳಿದ ವಿಷಯವೇ ಸರಿ.
ಇದು ಓದಿ ತಿಳಿದ ನಂತರ ನನ್ನಲ್ಲೂ ಹೀಗೆ ಸ್ವಲ್ಪ ಮುನಿಸು ತೀರಿಸಿಕೊಳ್ಳುವ ಆಸೆ ಹುಟ್ಟಿತು. ಆದರೆ ಥಾರ್ ಇಲ್ಲದ ಕಾರಣ ನಮ್ಮ ಬೆಂಗಳೂರಿನಲ್ಲಿಯೇ ಅದನ್ನು ಮಾಡುವ ಎಂದೆನಿಸಿತು. ಆದರೆ ಒಂದು ಸಾಮಾನ್ಯ ಅಂಶ ಎಂದರೆ ಪ್ರಕೃತಿ. ನಮ್ಮ   ಎಂಬ ನವ ನಾಮಧೇಯದ ಬೆಂಗಳೂರಿನಲ್ಲಿ ಪ್ರಕೃತಿಯ ಮಡಿಲೇ? ಎಂಬ ಪ್ರಶ್ನೆ ಹುಟ್ಟುವುದು ಬಲು ಸಹಜ. ಹೌದು, ನಮ್ಮ ಸುಂದರ ಬೆಂಗಳೂರಿನಲ್ಲಿ ಅದೂ ಬಹಳ ಹೆಸರಾಂತ ಬಡಾವಣೆಯಾದ ದಕ್ಷಿಣ ಬೆಂಗಳೂರಿನ ಹೃದಯ ಭಾಗದ ಜಯ ನಗರದಲ್ಲಿ ಈ ರೀತಿಯ ‘ಪ್ರಕೃತಿ ಚಿಕಿತ್ಸಾಲಯ’ವೊಂದು ಸುಮಾರು 50 ಕ್ಕೂ ಹೆಚ್ಚು ವರ್ಷಗಳಿಂದ ಅನೇಕಾನೇಕ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತ ಬರುತ್ತಿದೆ.
ನನ್ನ ಅನೇಕ ಸ್ನೇಹಿತರು, ಪರಿಚಯಸ್ಥರು, ಸಂಬಂಧಿಗಳು ಧರ್ಮಸ್ಥಳದ ಉಜಿರೆಯಲ್ಲಿ ರುವ ಸೌಖ್ಯವನಕ್ಕೆ ಹೋಗುವುದು ಹಲವಾರು ಬಾರಿ ಕೇಳಿದ್ದೆ. ಇಂತಹ ಉತ್ತಮ ಚಿಕಿತ್ಸೆ ನಮ್ಮಲಿಯೇ ಮೊದಲು ಪ್ರಾರಂಭ ಗೊಂಡು ಯಶಸ್ವಿಯಾಗಿ ನಡೆಯುತ್ತಿರು ವಾಗ ಏಕೆ ಜನ ಅಷ್ಟು ದೂರ ಪ್ರಯಾಣ ಕೈಗೊಳ್ಳುತ್ತಾರೆ ಎನ್ನುವುದು ಒಂದು ದೊಡ್ಡ ಪ್ರಶ್ನೆ. ಇಲ್ಲಿನ ಚಿಕಿತ್ಸಾ ವಿಧಾನಗಳು, ಅದರ ಉಪಯೋಗಗಳ ಬಗ್ಗೆ ಸ್ವಲ್ಪ ತಿಳಿಯೋಣ.
ನ್ಯಾಚುರೋಪಥಿ ಅಥವಾ ಪ್ರಕೃತಿ/ನೈಸರ್ಗಿಕ ಚಿಕಿತ್ಸೆ ಎಂಬುವುದು ಪರ್ಯಾಯ ಔಷಧದ ಒಂದು ರೂಪ. ಪ್ರಕೃತಿಚಿಕಿತ್ಸೆಯ ಸಿದ್ಧಾಂತ ಮತ್ತು ವಿಧಾನಗಳು ಪುರಾವೆ-ಆಧಾರಿತ ಔಷಧಕ್ಕಿಂತ ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ಜೀವನ ಶೈಲಿ, ಹಿತ್ತಲ ಮದ್ದುಮತ್ತು ಜಾನಪದ ಔಷಧವನ್ನು ಆಧರಿಸಿವೆ. ಪ್ರಕೃತಿ ಚಿಕಿತ್ಸಕರು ಸಾಮಾನ್ಯವಾಗಿ ಆಧುನಿಕ ವೈದ್ಯ ಪದ್ಧತಿಗಳನ್ನು ಅನು ಸರಿಸುವುದಿಲ್ಲ.
ಆದರೆ ವೈದ್ಯಕೀಯ ಪರೀಕ್ಷೆ, ಔಷಧಗಳು, ಲಸಿಕೆಗಳು ಮತ್ತು ಶಸಚಿಕಿತ್ಸೆಗಳು ಈಪರಿಧಿಗೆ ಒಳಪಡುವುದಿಲ್ಲ. ಪ್ರಕೃತಿಚಿಕಿತ್ಸೆಯ ಅಭ್ಯಾಸವು ಅವೈeನಿಕ ಕಲ್ಪನೆಗಳ ಮೇಲೆ ಅವಲಂಬಿತವಾಗಿದೆ. ಆದರೆ ಈ ಪ್ರಕೃತಿ ಚಿಕಿತ್ಸೆಯು ಆರೋಗ್ಯಕರ ಜೀವನಶೈಲಿಯನ್ನುಅಳವಡಿಸಿಕೊಂಡು ಅನುಸರಿಸಲು ಬೇಕಾಗಿರುವ ಒಂದು ಸುಂದರ ಕಲೆ ಮತ್ತು ವಿeನವಾಗಿದೆ ಎಂದರೆ ತಪ್ಪಾಗಲಾರದು. ಈ ಪ್ರಕೃತಿ ಚಿಕಿತ್ಸೆಯವಿಜ್ಞಾನನೈಸರ್ಗಿಕ ದೇವದತ್ತ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು, ಮಾನವ ದೇಹದ ಅಂಗ ರಚನಾ ಶಾಸವನ್ನು ಚೆನ್ನಾಗಿ ತಿಳಿದು ಅದಕ್ಕೆ ತಕ್ಕ ಹಾಗೆ ಆರೋಗ್ಯದಾಯಕವಾದ, ರೋಗಮುಕ್ತ ಕಾಯ ಕಲ್ಪಿಸುವ ಒಂದುಫಲಕಾರಿಚಿಕಿತ್ಸೆಯಾಗಿದೆ.
ಈ ನಿಟ್ಟಿನಲ್ಲಿ 1966ರಲ್ಲಿ ಬೆಂಗಳೂರಿನ ಜಯ ನಗರದಲ್ಲಿ ಕರ್ನಾಟಕ ಪ್ರಕೃತಿ ಚಿಕಿತ್ಸಾ ಪ್ರಚಾರ ಟ್ರಸ್ಟ್ (ರಿ) ಎಂಬ ಸರಕಾರೇತರ ಲಾಭರಹಿತ, ಸಮಾಜದ ಒಳಿತಿಗಾಗಿ ದುಡಿಯುವ ಒಂದು ಸಂಸ್ಥೆ ‘ನೇಚರ್ ಕ್ಯೂರ್ ಹಾಸ್ಪಿಟಲ’ ಅನ್ನು ಸ್ಥಾಪಿಸಿತು ಮತ್ತುಔಷಧಿರಹಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸವನ್ನು ಸಾಮಾನ್ಯ ಜನರಲ್ಲಿ ಪ್ರಚಾರ ಮಾಡಲು ಪ್ರಾರಂಭಿಸಿತು. ಅಂದಿನಿಂದ ಅವಿರತವಾಗಿ ತನ್ನ ವಿಶಿಷ್ಟ ಚಿಕಿತ್ಸಾ ಸೌಲಭ್ಯಗಳ ಮುಖಾಂತರ ಸಮಾಜದ ಪ್ರತಿಯೊಂದು ವರ್ಗವನ್ನೂ ತಲುಪಿ ಉತ್ಕೃಷ್ಟ ಸೇವೆ ಸಲ್ಲಿಸುತ್ತಿದೆ ಈ ಕೇಂದ್ರ. ಕರ್ನಾಟಕದಲ್ಲಿ ಈ ಮಾದರಿಯ ಆಸ್ಪತ್ರೆ ಅತ್ಯಂತ ಹಳೆಯ ಸಂಸ್ಥೆಯಾಗಿದೆ.
ಇಲ್ಲಿ ಆರೈಕೆ, ಚಿಕಿತ್ಸೆ, ಪಥ್ಯ ದೊಂದಿಗಿನ ಊಟೋಪಚಾರ ಎಲ್ಲವೂ ಉತ್ತಮ ಗುಣಮಟ್ಟzಗಿದೆ. ಹೆಣ್ಣು ಮಕ್ಕಳು ತವರಿಗೆ ತುಸುಕಾಲಕ್ಕೆ ಬಂದಾಗ ದೊರೆಯುವ ಆರೈಕೆಯ ಸಮಾನಾರ್ಥಕ ಈ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಎಂದರೆ ಕಿಂಚಿತ್ತೂ ತಪ್ಪಾಗುವುದಿಲ್ಲ. ಬಡವ, ಮಾಧ್ಯಮ ಸಿರಿವಂತರೆನ್ನದೆ ಎಲ್ಲರನ್ನೂ ಸಮಾನ ಮನೋಭಾವದಿಂದ ನಗು ನಗುತ್ತಾ ಉಪಚರಿಸುವ ಈ ಆಸ್ಪತ್ರೆಯಸಿಬ್ಬಂದಿ ವರ್ಗ, ಸಹನೆಯಿಂದ ಜನರ ಕಷ್ಟಗಳನ್ನು ಕೇಳಿಸಿಕೊಳ್ಳುವ ವೈದ್ಯರು, ಅನ್ನಪೂರ್ಣೇಶ್ವರಿಯ ನಿಯೋಗ ಮಂಡಳಿಯ ಉತ್ತರಾಧಿಕಾರಿಗಳೆಂಬಂತೆ ಧಾರಾಳವಾಗಿ ರುಚಿರುಚಿಯಾಗಿ ಉಣಬಡಿಸುವ ಅಡುಗೆ ಮನೆಯವರು ಇದು ಈ ಸಂಸ್ಥೆಯಅಪರೂಪದ ಸಾಧನೆಯಾಗಿದೆ.
ಇಲ್ಲಿ 10-15 ದಿನಗಳ ಅನೇಕ ಮಾದರಿಯ ಚಿಕಿತ್ಸಾ ಕ್ರಮಗಳಿವೆ.   ಎಂದರೆ ನಮ್ಮ ದೇಹವನ್ನು ಅನೇಕ ಮೈ ಗೊಡ್ಡದ, ಹೆಚ್ಚಾದ ಎಣ್ಣೆ ಮತ್ತು ಕೊಬ್ಬಿನಂಶವಿರುವ, ಆರೋಗ್ಯವನ್ನು ಹಾಳುಗೆಡವಲು ಬೇಕಾದ ಎಲ್ಲ ಸಾಮಗ್ರಿಗಳುಳ್ಳ ಭಕ್ಷ್ಯಗಳನ್ನು ಸೇವಿಸಿ, ಗ್ಯಾಸ್ಟ್ರಿಕ್,  ,  ಮತ್ತು ಅನೇಕ ಪಾಚನಾಸಂಬಂಧಿಖಾಯಿಲೆಯಿಂದ ನರಳುತ್ತಿದ್ದಲ್ಲಿ ಈ10-15 ದಿನಗಳ  ಬಹಳ ಪರಿಣಾಮಕಾರಿ.
  ಎಂಬ ಮತ್ತೊಂದು ಚಿಕಿತ್ಸೆ ಇಲ್ಲಿ ಬಹಳ ಖ್ಯಾತ. ಇದರಲ್ಲಿ ಫಿಸಿಯೋ ಥೆರಪಿ, ಅಚ್ಚುಪಂಕ್ಟುರ್ ಸೇರಿದಂತೆ ಆಯಾ ನೋವಿಗೆಸಂಬಂಧಿಸಿದ ಹಾಗೆ ಎಳ್ಳೆಣ್ಣೆಯ ಮೃದು ಚಿಕಿತ್ಸಕಾ ಮಾದರಿಯ ಮಸ್ಸಾಜುಗಳು, ಆಯಾ ತೊಂದರೆಗೆ ಸರಿ ಹೊಂದುವ ಆರೋಗ್ಯ ಪದಾರ್ಥಗಳು ಮತ್ತು ಪೇಯಗಳನ್ನು ನೀಡಿ 10 ದಿನಗಳಲ್ಲಿ ಆ ನೋವು ಮಾಯವಾಗುವಂತೆ ನೋಡಿ ಕೊಳ್ಳುತ್ತಾರೆ.
  ಇದಂತೂ ಹಲವರಿಗೆ ಅತೀ ಪ್ರಿಯ ಪ್ಯಾಕೇಜ್. ಒಮ್ಮೆ ಬಂದರೆಂದರಾಯಿತು, ಮತ್ತೆ ಮತ್ತೆ ಬರುವವರೇ ಹೆಚ್ಚು. ಇದರಲ್ಲಿ ಸ್ಥೂಲಕಾಯದವರಿಗೆ 10 ದಿನಗಳಲ್ಲಿ ಸುಮಾರು 4-5 ಕಿಲೋಗ್ರಾಮಿನಷ್ಟು ತೂಕ ಇಳಿಸುವಲ್ಲಿ ಈ ಕಾರ್ಯ ಕ್ರಮ ಯಶಸ್ವಿಯಾಗಿದೆ.   ಇದು ಬೆಂಗಳೂರಿನವರಿಗೆ ಹೇಳಿ ಮಾಡಿಸಿದಂತಹ ಪ್ಯಾಕೇಜ. ನಮ್ಮ ಬೆಂಗಳೂರಿನ ಇಂದಿನ ದೈನಂದಿನ ಕಾರ್ಯಕ್ರಮಗಳಲ್ಲಿ ಎಷ್ಟು ಜನರಿಗೆ ಒತ್ತಡ ಇಲ್ಲ ಹೇಳಿ? ಔಷಧ ತಯಾರಕರಿಗೆ ಬಂಪರ್ ಲಾಟರಿ ಹೊಡೆದಿರುವುದು ನಮ್ಮ ಒತ್ತಡಮಯ ಜೀವನ ಶೈಲಿಯಿಂದಲೇ.
ಇದು 2-4 ದಿನಗಳ ಚುಟುಕು ಕಾರ್ಯಕ್ರಮ. ಇಲ್ಲಿ ಯೋಗಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭ ವಾಗುವ ಒಂದು ಗಂಟೆಯ ಸೌಮ್ಯ ಅಭ್ಯಾಸವಾಗಿರುತ್ತದೆ. ಇದರಲ್ಲಿ ಅತಿ ಸ್ಪಷ್ಟ ರೀತಿಯಲ್ಲಿ ಹಂತ ಹಂತವಾಗಿ ಸೂಚನೆ ಗಳನ್ನು ನೀಡಲಾಗುತ್ತದೆ. ಎಂತಹವರಿಗೂ ಅದನ್ನು ಪಾಲಿಸುವುದು ಸುಲಭ. ನೋವು ನಿವಾರಕ ಯೋಗಾಭ್ಯಾಸ, ದೇಹದ ತೂಕ ಇಳಿಸುವ ಯೋಗಾಭ್ಯಾಸ, ಎಲ್ಲರೂ ಮಾಡುವ ಸಾಮಾನ್ಯ ಅಭ್ಯಾಸ ಹೀಗೆ ಹಲವಾರು ಸಮಯಗಳಲ್ಲಿ ಯೋಗಾಭ್ಯಾಸ ಬೆಳಗ್ಗೆ 7 ರಿಂದ ಮಧ್ಯಾಹ್ನದ ವರೆಗೂ ತೊಡರುತ್ತದೆ.
ವೈದ್ಯರ ಸಲಹೆಯ ಮೇರೆಗೆ ನಿರ್ದಿಷ್ಟ ಅಭ್ಯಾಸದಲ್ಲಿ ಪಾಲ್ಗೊಳ್ಳಬೇಕು. ಬೆಳ್ಳಂಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವಆಹ್ಲಾದಕರ ಭಾವ ನಿಜಕ್ಕೂ ವರ್ಣನಾತೀತ. ನಂತರ ನಮ್ಮ ದೇಹ ದಿನಂಪೂರ್ತಿ ಚೈತನ್ಯದ ಚಿಲುಮೆಯ ಹಾಗೆ ಭಾಸವಾಗುತ್ತದೆ.ಇಲ್ಲಿನ ಚಿಕಿತ್ಸಾ ಕ್ರಮಗಳಲ್ಲಿ ಎನಿಮಾ ನೀಡುವುದು ಒಂದು ಸಾಮಾನ್ಯ ಕ್ರಿಯೆ. ನಮ್ಮ ದೇಹ ದಲ್ಲಿನ ಎಲ್ಲ ಕಲ್ಮಶಗಳನ್ನೂ ಸುಲಭ ರೀತಿಯಲ್ಲಿ, ನೈಸರ್ಗಿಕ ರೀತಿಯಲ್ಲಿ ( ಎನಿಮಾಗೆ ಬೇವಿನ ಸೊಪ್ಪನ್ನು ಉಪಯೋಗಿಸಲಾಗುತ್ತದೆ) ಹೊರತೆಗೆದು ನಮ್ಮ ದೇಹವನ್ನು ಮುಂದಿನ ಚಿಕಿತ್ಸಾ ಕ್ರಮಗಳಿಗೆ ತಯಾರು ಮಾಡುತ್ತಾರೆ.
ಅನೇಕ ಸತ್ವಯುಕ್ತ ಖನಿಜಾಂಶಗಳನ್ನೊಳಗೊಂಡ ಜೇಡಿ ಮಣ್ಣಿನ ಪ್ಯಾಕ್ ಅನ್ನು ಬಟ್ಟೆಗೆ ಅಂಟಿಸಿ ಹೊಟ್ಟೆಯ ಮೇಲೆ20ನಿಮಿಷಗಳ ಕಾಲ ಇರಿಸಲಾಗುತ್ತದೆ. ಇದು ವಾಯುಸಂಬಂಧಿತೊಂದರೆಗಳಿಂದ ಮುಕ್ತ ಮಾಡುವಲ್ಲಿ ಯಶಸ್ವಿ ಪ್ರಕ್ರಿಯೆಯಾಗಿದೆ ಮತ್ತು ಹಿಂದಿನ ಕಾಲದ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಂಬ ಗಾದೆಯ ನಿಜವಾದ ಅರ್ಥ ಇಲ್ಲಿದೆ. ಇದರಿಂದ ಹೆಚ್ಚು ಕಾಲದವರೆಗೂ ಹಸಿವಿನ ಅರಿವಾಗುವುದೇ ಇಲ್ಲ. ಇದಲ್ಲದೆ ಹರಳೆಣ್ಣೆಯ ಪ್ಯಾಕ್, ಕಿಡ್ನಿ ಪ್ಯಾಕ್, ಗ್ಯಾಸ್ಟ್ರೋ ಹೆಪಾಟಿಕ್ ಪ್ಯಾಕ್ಎಂಬ ಹಲವಾರು ಜಲಚಿಕಿತ್ಸೆಗಳು ಇಲ್ಲಿ ಬಹಳ ಪ್ರಖ್ಯಾತಿ.
ಜಲಚಿಕಿತ್ಸೆಯಲ್ಲಿ ಅನೇಕ ಚಿಕಿತ್ಸಾ ವಿಧಾನವಾಗಳಿದ್ದು ಬಿಸಿ ಮತ್ತು ತಣ್ಣನೆಯ ಚಿಕಿತ್ಸೆಯ ಸಂಯೋಜನೆಯಲ್ಲಿ ಅಂಗಾಂಶಚಯಾಪಚಯ, ರಕ್ತದ ಹರಿವು, ಉರಿಯೂತ ಇವೆಲ್ಲದರಿಂದ ಆರಾಮದಾಯಕ ಅನುಭವ ನೀಡುತ್ತದೆ. ಸ್ಟೀಮ್ ಬಾತ್, ಸೌನಾ ಬಾತ್‌ನಂತಹ ಚಿಕಿತ್ಸಾ ವಿಧಾನ ಇಲ್ಲಿ ಬಹಳ ಪರಿಣಾಮಕಾರಿ. ಇದರಿಂದ ತೂಕ ನಷ್ಟ, ಉತ್ತಮ ಪಾಚನ ಕ್ರಿಯೆ, ಸುಸೂತ್ರವಾದ ರಕ್ತ ಪರಿಚಲನೆ, ನೋವು ಕಡಿತ, ಚರ್ಮದ ಕಾಂತಿ ಹೆಚ್ಚಿ ನವ ಯೌವನ ಪಡೆಯುವುದಲ್ಲದೆ, ಹೃದಯರಕ್ತನಾಳದ ಕಾರ್ಯ, ಪ್ರತಿರಕ್ಷಣಾ ಕಾರ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದಾಗಿದೆ.
ಒತ್ತಡ ರಹಿತ ಉತ್ತಮ ಗುಣಮಟ್ಟದ ನಿದ್ರೆ ಈ ಕಾರ್ಯಕ್ರಮದ ಫಲಿತಾಂಶ. ಬೆಳಗ್ಗೆ ಕ್ಯಾರಟ್, ಬೀಟ್ರೂಟ್, ನೌಲ್‌ಕೋಲ,ಮೆಂತ್ಯ, ಜೀರಿಗೆ ಹೀಗೆ ನೈಸರ್ಗಿಕ ಸಾಮಗ್ರಿಗಳ ಒಂದು ಪೇಯ ನಂತರ ಆರೋಗ್ಯಕರ ಪುಷ್ಟಿದಾಯಕ ಖಾದ್ಯ. ಜೋಳದ ದೋಸೆ, ಸಿರಿಧಾನ್ಯದ ಪುಲಾವ್ ಇಲ್ಲವೇ ಬಿಸಿಬೇಳೆ ಬಾತ್, ಪೊಂಗಲ, ರಾಗಿ ದೋಸೆ ಹೀಗೆ ಹಲವು ರುಚಿಗಳು. ಪಥ್ಯದೂಟ ಎಂದರೆ ಉಪ್ಪಿಲ್ಲ ರುಚಿಯಿಲ್ಲ ಎಂಬ ಗ್ರಹಿಕೆಗೆ ವಿರುದ್ಧ ರುಚಿ ಇಲ್ಲಿ ದೊರಕುತ್ತದೆ.
ಇಲ್ಲಿನ ಅಡುಗೆ ಕೋಣೆ ಬಲು ಶುದ್ಧವಾಗಿದೆ ಮತ್ತು ಇಲ್ಲಿ ಉಣ ಬಡಿಸುವ ಮಹಿಳೆಯರು ನಗುಮುಖದಿಂದ ಅನ್ನ ಪೂರ್ಣೇ ಶ್ವರಿಯ ಉತ್ತರಾಧಿಕಾರಿಗಳೆಂಬಂತೆ ಧಾರಾಳವಾಗಿ ಬಡಿಸುತ್ತಾರೆ. ಒಮ್ಮೆಯೂ ಸಿಟ್ಟು ಇಲ್ಲವೇ ಗಂಟು ಹಾಕಿದ ಮುಖಚರ್ಯೆ ಕಾಣಸಿಗುವುದೇ ಇಲ್ಲ ಇನ್ನೂ ಮಸಾಜ್ ಮತ್ತು ಹಲವಾರು ಜಲಚಿಕಿತ್ಸೆ ನೀಡುವ ತರಬೇತಿ ಪಡೆದ ಸಿಬ್ಬಂದಿ ವರ್ಗ ಎಲ್ಲರನ್ನೂ ಪ್ರೀತಿಯಿಂದ ನಗುಮುಖದಿಂದ ಮಾತನಾಡಿಸಿ ಯಾವುದೊಂದೂ ನಿರೀಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡುತ್ತಾರೆ.
‘ಬಾ ಪುಟ್ಟ, ನೋವಾಯ್ತೆ?, ಸರಿ ಇದೆಯೇ? ಏನಾದರೂ ತೊಂದರೆ ಆದರೆ ಹೇಳಪ್ಪ ಪ್ಲೀಸ್’ ಅಂತ ಪ್ರೀತಿ ತುಂಬಿದ ಮಾತು ಗಳೊಡನೆ ಮನೆಯಲ್ಲಿರುವ ಭಾವನೆ ತಂದೊಡ್ಡುತ್ತಾರೆ. ಇಲ್ಲಿನ ಹಿರಿಯ ವೈದ್ಯ ಡಾ.ಗುರುಪಾದಪ್ಪ ಕಾಜಗಾರ್‌ರವರು ಅತೀ ಸಂಯಮದಿಂದ ಪ್ರತಿಯೊಬ್ಬರ ಮಾತುಗಳನ್ನಾಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ಬರೆಯುತ್ತಾರೆ. ಪ್ರತಿದಿನ ಚಿಕಿತ್ಸೆ ಯಾದ ನಂತರ ಅವರ ಅನುಭವ ಕೇಳಿ ಮುಂದಿನ ದಿನದ ಚಿಕಿತ್ಸೆ ಬರೆಯುತ್ತಾರೆ. ಬರುವ ಪ್ರತಿಯೊಬ್ಬರ ಮಾನಸಿಕ ಮತ್ತು ದೈಹಿಕ ಆರೋಗ್ಯ ಇವರ ಮೊದಲ ಆದ್ಯತೆ.
ಇವರಂತೆ ಇವರ ತಂಡವೂ ಯಶಸ್ವಿಯಾಗಿ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಒಂದಂತೂ ಖರೆ, ಎಲ್ಲಾ ದೂರ ಮಂಗಳೂರಿಗೆಹೋಗುವುದಕ್ಕಿಂತ ಈ ಚಿಕಿತ್ಸಾ ಕ್ರಮದ ಹಿರಿಯಜ್ಜ ಎನಿಸಿಕೊಂಡಿರುವ ಈ    ನಮ್ಮ ಬೆಂಗಳೂರಿನ ಜಯ ನಗರದಲ್ಲಿ ಇರುವುದರಿಂದ, ಇಲ್ಲಿಗೆ ಹೋಗಿ ಹತ್ತು ದಿನಗಳು ನಿಸರ್ಗದ ಮಡಿಲಲ್ಲಿ ದೇಹವೊಡ್ಡಿ ತನು ಮನವನ್ನು ಪ್ರೀತಿಯ ಆರೈಕೆಯಿಂದ ಹಸನು ಗೊಳಿಸಿಕೊಂಡು ಉತ್ತಮ ಆರೋಕ್ಯಕರ ರೋಗಮುಕ್ತ ಒಡಲಿಗೆ ಅಡಿಪಾಯ ಹಾಕಲು ಸೂಕ್ತ ಸ್ಥಳ.