ಸೋತು ಗೆದ್ದು ಮರೆಯಲಾಗದಂತಹ ಅದೊಂದು ದಿನ
ಪರಿಶ್ರಮ
@.
ಕರ್ನಾಟಕದ ಬಡ ಕುಟುಂಬದ ಹುಡುಗನೊಬ್ಬ ಧೈರ್ಯ ಎಂಬ ಶ್ರೀಮಂತಿಕೆಯಿಂದ ಕಟ್ಟಿದ ಪರಿಶ್ರಮ ಸಂಸ್ಥೆ ಇದು. ಕರ್ನಾಟಕದ ಪ್ರತಿ ಸರಕಾರಿ ಆಸ್ಪತ್ರೆಯಲ್ಲಿ ನನ್ನ ವಿದ್ಯಾರ್ಥಿಗಳು ವೈದ್ಯರಾಗಿ ಸೇವೆ ಸಲ್ಲಿಸಬೇಕೆಂಬ ದೃಢ ಸಂಕಲ್ಪದಿಂದ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿದ್ಯಾರ್ಥಿಗಳೇ ನನ್ನ ಪ್ರೇರಣೆ.
ಅದೊಂದು ದಿನ ಬರುತ್ತೆ. ಸೋಲು ಸನಿಹಕ್ಕೆ ಬಂದು ನಿಂತಿರುತ್ತೆ. ಬಾಳ ಸಂಗಾತಿಗಿಂತ ಹೆಚ್ಚು ಕಾಡಲು ಪ್ರಾರಂಭಿಸುತ್ತೆ. ಬದುಕಿನ ಎಲ್ಲಾ ಅವಕಾಶಗಳು ಮುಚ್ಚಿ ಹೋಗಿರುತ್ತೆ. ನಂಬಿದ ವರೆಲ್ಲಾ ದ್ರೋಹ ಬಗೆದಿರುತ್ತಾರೆ. ಸಂಬಂಧಿಕರ ಪ್ರೀತಿ ಆತ್ಮಹತ್ಯೆ ಮಾಡಿ ಕೊಂಡಿರುತ್ತೆ.
ಶ್ರೇಯೋಭಿಲಾಷಿಗಳ ಕಾಳಜಿ ಕೊನೆಯುಸಿರೆಳೆದಿರುತ್ತೆ. ನಡು ಬೀದಿಗೆ ಬಂದು ನಿಂತಿರುತ್ತಾರೆ. ಅವಮಾನವೆಂಬುವುದು ಪ್ರತಿ ದಿನ ಮುಂಜಾನೆ ಅತಿಥಿಯಾಗಿ ಆಹ್ವಾನ ನೀಡಿರುತ್ತೆ. ಜಗತ್ತೆಲ್ಲಾ ನಿಮ್ಮ ವಿರುದ್ಧ ತಿರುಗಿ ಬಿದ್ದಂತೆ ಬಾಸವಾ ಗಿರುತ್ತೆ. ಬದುಕಲ್ಲು ಯಾವ ಕಾರಣಗಳು ಉಳಿದಿರುವುದಿಲ್ಲ. ಅಂತಹ ಒಂದು ದಿನ, ಅದೊಂದು ದಿನ ಎಲ್ಲರ ಬದುಕಲು ಬಂದೆ ಬರುತ್ತೆ. ಅಂತಹ ಸನ್ನಿವೇಶದಲ್ಲಿ ಏನು ಮಾಡಬೇಕೆಂಬುವುದು ತೋಚದೆ ಕಂಗಾಲಾಗಿ ಬಿಡುತ್ತಾರೆ.
ಗೆಲುವು ತುಂಬಾ ವಿಚಿತ್ರವಾದುದು ಎಲ್ಲರನ್ನೂ ನಮ್ಮ ವರೆನ್ನಿಸಿ ಬಿಡುತ್ತೆ. ಪ್ರಾಮಾ ಣಿಕತೆ ಮತ್ತು ಅಪ್ರಾಮಾಣಿಕತೆಯ ಗೆರೆಯನ್ನ ಅರ್ಥಮಾಡಿಕೊಳ್ಳಲು ವಿಫಲವಾಗಿ ಬಿಡುತ್ತದೆ. ಸೋಲಿದೆಯಲ್ಲಾ ಅದು ನಿಮ್ಮ ಬದುಕಿನ ದಿಕ್ಕನ್ನೆ ಬದಲಿಸಿ ಬಿಡುತ್ತದೆ. ಯೋಚಿಸುವ ರೀತಿಯನ್ನು ಬದಲಿಸುತ್ತೆ. ನಿಮ್ಮ ತಾಕತ್ತೇನೆಂಬುವುದು ಅರ್ಥ ಮಾಡಿಸುತ್ತೆ. ಗೆಲ್ಲುವಿಗೆ ಬೇಕಾದ ಎಲ್ಲವನ್ನು ಸೋಲು ಕಲಿಸಿಬಿಡುತ್ತೆ.
ಅಂದು ಜುಲೈ 9, 2018. ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ಮಾತೃ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದೆ. ಆ ಸಂಸ್ಥೆಯ ಮುಖ್ಯಸ್ಥರ ಆರ್ಶೀವಾದ ಪಡೆದು ಹೊರ ನೆಡೆದಾಗ ಜೇಬಿನಲ್ಲಿ 150 ರುಪಾಯಿಗಳು ಇತ್ತು. ಆ ಇಳಿಸಂಜೆಯಲ್ಲಿ ಆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಮುಂದೇನೆಂಬ ಪ್ರಶ್ನೆಗೆ ಉತ್ತರವೆ ಇರಲಿಲ್ಲ. ಅಷ್ಟರಲ್ಲಿ ನನ್ನಫೊನಿಗೆಕರೆಯೊಂದು ಬಂದಿತ್ತು. ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಮುಂದೇನೆಂಬುದು ತೋಚುತ್ತಿಲ್ಲ ಎಂಬ ಮಾತುಗಳನ್ನ ನಾನು ಆಡಿದಾಗ ಅತ್ತ ಕಡೆಯಿಂದ ಮೌನವಾಗಿ ಕೇಳಿಸಿಕೊಂಡು ಬಿಕ್ಕಳಿಸಿ ಕಣ್ಣೀರಾಕಿದ ನನ್ನ ಬಾಳ ಸಂಗಾತಿ ನಯನ ಪ್ರದೀಪ್.
2018ರಲ್ಲಿ ದಾಂಪತ್ಯಕ್ಕೆ ಕಾಲಿಡಬೇಕೆಂಬ ತೀರ್ಮಾನ ಸೋತು ಹೋಗಿತ್ತು. ನಿರುದ್ಯೋಗಿ ಯುವಕನ ಮಾನಸಿಕ ಸ್ಥಿತಿ ಹೇಗಿರು ತ್ತೆಂಬುವುದು ಅಂದು ನನಗೆ ಅರ್ಥವಾಗಿತ್ತು. ಮತ್ತೊಂದು ಕೆಲಸಕ್ಕೆ ಅರ್ಜಿ ಸಲ್ಲಿಸಬೇಕೋ ಅಥವಾ ಹೊಸ ಸಂಸ್ಥೆಯನ್ನ ಕಟ್ಟಬೇಕೊ ಎಂಬ ಪ್ರಶ್ನೆ ಹುಟ್ಟಿತ್ತು. ಬೆಂಗಳೂರಿನಂತಹ ಮಹಾನಗರಿಯಲ್ಲಿ ಸಂಸ್ಥೆ ಕಟ್ಟುವುದು ಅಷ್ಟು ಸುಲಭವಲ್ಲ. ತಿಮಿಂಗಿಲಗಳ ನಡುವೆ ಚಿಕ್ಕ ಮೀನು ಈಜುವುದು ಅಷ್ಟು ಸುಲಭವೇ! ಬಾಲ್ಯದಲ್ಲಿ ತಂದೆ- ತಾಯಿಯನ್ನ ಕಳೆದುಕೊಂಡು, ಅನಾಥಪ್ರಜ್ಞೆಯಲ್ಲಿ ಬೆಳೆದ ನನ್ನಂತಹ ಬಡ ಕುಟುಂಬದ ಹುಡುಗ ಸಂಸ್ಥೆ ಕಟ್ಟುವುದು ಅಷ್ಟು ಸುಲಭವೇ!
 ಇಲ್ಲದೆ ಬೆಳೆದವ ಗೆಲುವಿನ  ನಲ್ಲಿ ಗೆಲ್ಲುವುದು ಸುಲಭವೇ! ಎಂಬ ಪ್ರಶ್ನೆಗಳು ಪದೇ ಪದೇ ಕಾಡಿದವು. ಭವಿಷ್ಯದ ಬಗ್ಗೆ ದೊಡ್ಡ ಕಲ್ಪನೆ, ಮನಸ್ಸಿಗೆ ಬಂದವಳು ಮನೆಗೆ ಬರಬೇಕಾದ ಸಮಯ. ಆರ್ಥಿಕ ಸಂಕಷ್ಟ, ನಿರುದ್ಯೋಗ, ಸುರಿದು ಸುರಿದು ನಿಂತೇ ಹೋಗಿದ್ದ ಕಣ್ಣೀರು. ಲೆಕ್ಕವಿಲ್ಲದಷ್ಟು ಅವಮಾನಗಳು. ವಿವರಿಸಲು ಸಾಧ್ಯವಾಗದಷ್ಟು ವಿಮರ್ಶೆಗಳು. ಜೀವನದಲ್ಲಿ ಪ್ರತಿ ಬಾರಿ ಸೋತಾಗ ನನಗೆ ಧೈರ್ಯ ತುಂಬಿದವರು ನನ್ನ ತಾಯಿ. ನನ್ನ ಮೊದಲ ಪ್ರೀತಿ, ನನ್ನ ತಾಯಿ, ಅಮ್ಮನ ಮೇಲೆ ಪ್ರೀತಿಯ ಸಾಕ್ಷಿಯಾಗಿ 2018ರ ಸೆಪ್ಟೆಂಬರ್ 12ರಂದು ಪರಿಶ್ರಮವೆಂಬ ವಿದ್ಯಾದೇಗುಲವನ್ನ ಪ್ರಾರಂಭಿಸಿದೆ.
ನನ್ನ ನಂಬಿಕೆಯೇ ಬಂಡವಾಳ, ನನ್ನ ಧೈರ್ಯವೇ ಪರಿಶ್ರಮದ / , , ವಿದ್ಯಾರ್ಥಿಗಳು ನೀಡಿದ ಗೌರವವೇ ನನ್ನ ಬ್ಯಾಂಕ್  ಬ್ಯಾಲೆನ್ಸ್. ಮೊದಲ ವರ್ಷದ ಬ್ಯಾಚಿಗೆ 60 ವಿದ್ಯಾರ್ಥಿಗಳು ದಾಖಲಾದರು. ನಂಬಲು ಅಸಾಧ್ಯವೆನ್ನಿಸಿದರು ನಂಬಲೇಬೇಕಾದ ಒಂದು ಸತ್ಯವನ್ನ ಹೇಳುತ್ತೇನೆ. ಪ್ರತಿ ದಿನ ಕೇವಲ 3 ರಿಂದ 4 ತಾಸು ನಿದ್ದೆ ಮಾಡಿ 20 ತಾಸು ವಿದ್ಯಾರ್ಥಿಗಳನ್ನು ಓದಿಸಿದೆ. ನಮ್ಮ ಶ್ರಮಕ್ಕೆ ಪಟ್ಟ ಪರಿಶ್ರಮಕ್ಕೆ -ಲಿತಾಂಶದ ದಿನ -ಲ ಸಿಕ್ಕಿತ್ತು. 60ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳಿಗೆ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟ್ ಲಭಿಸಿತು.
ಪರಿಶ್ರಮದ ವಿದ್ಯಾದೇಗುಲದ ಭವಿಷ್ಯಕ್ಕೆ ಈ -ಲಿತಾಂಶ ಮುನ್ನುಡಿಯೆನ್ನುವಂತಿತ್ತು. ನಂತರದ ಬ್ಯಾಚಿಗೆ 130 ವಿದ್ಯಾರ್ಥಿಗಳುದಾಖಲಾದರು. ಉಸಿರಾಡುವಷ್ಟು ಆರ್ಥಿಕ ಚೈತನ್ಯ, ಒಂದು ವರ್ಷ ಪರಿಶ್ರಮವೆಂಬ ದೋಣಿಯನ್ನು ಸಾಗಿಸಲು ಆರ್ಥಿಕ ಶಕ್ತಿ ಲಭಿಸಿತು. ಆದರೂ ಬೀಸಿದ ಬಿರುಗಾಳಿಯ ನೋವು ನನಗೆ ಮಾತ್ರ ಗೊತ್ತಿತ್ತು. ಬೀಸಿದ ಬಿರುಗಾಳಿಯ ನೋವು ಎಷ್ಟೇ ಇದ್ದರೂ, ನಂಬಿ ಬಂದಹಡಗುಗಳನ್ನ ಯಶಸ್ವಿಯಾಗಿ ದಡ ಸೇರಿಸಿದೆ. ೧೩೦ರಲ್ಲಿ ೮೮ ವಿದ್ಯಾರ್ಥಿಗಳಿಗೆ ಸೀಟು ಲಭಿಸಿತು.
ನಂತರದ ಬ್ಯಾಚಿಗೆ 240 ವಿದ್ಯಾರ್ಥಿಗಳು ದಾಖಲಾದರು. ನಿರಿಕ್ಷೇಗಳು ಮತ್ತು ಭರವಸೆಗಳು ಹೆಚ್ಚಾದವು. ಹಗಲು-ಇರುಳು ಶ್ರಮಿಸಿ 220 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಸಿಗಲು ಕಾರಣವಾದವು. ದಕ್ಷಿಣ ಭಾರತದ ಕೋಚಿಂಗ್ ಸೆಂಟರ್ ಇತಿಹಾಸದಲ್ಲೇ ನಮ್ಮ ಗೆಲುವು ಭಾರತದದ್ಯಂತ ಹಬ್ಬಿತ್ತು. ದೇಶದ ಪ್ರತಿಷ್ಠಿತ ವೈದ್ಯ ಸಂಸ್ಥೆಗಳಾದಂತಹ ಎಮ್ಸ್, ಜಿಪ್‌ಮರ್, ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ನಮ್ಮದು ಸಿಂಹ ಪಾಲು. ಕರ್ನಾಟಕದ ಪ್ರತಿ ಸರಕಾರಿ ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿಗಳು ಸೀಟನ್ನು ಗಳಿಸಿದ್ದಾರೆ. ಮುಂದಿನ ಭಾನುವಾರ ನಮ್ಮ ಸಂಸ್ಥೆಯಿಂದ 700 ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ.
ಕಳೆದ ೧೦ ತಿಂಗಳಿಂದ ನಿರಂತರ ಪ್ರಯತ್ನ, ಚದುರದ ಏಕಾಗ್ರತೆಯಿಂದ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ ಇತಿಹಾಸದಲ್ಲಿ ನಮ್ಮಫಲಿತಾಂಶದಾಖಲಾಗಲಿದೆ ಎಂಬುದು ನಮ್ಮ ಆಶಯ. ಕರ್ನಾಟಕದ ಬಡ ಕುಟುಂಬದ ಹುಡುಗನೊಬ್ಬ ಧೈರ್ಯ ಎಂಬ ಶ್ರೀಮಂತಿಕೆಯಿಂದ ಕಟ್ಟಿದ ಪರಿಶ್ರಮ ಸಂಸ್ಥೆ ಇದು. 18 ವರ್ಷಗಳ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ತಂದೆ-ತಾಯಿ ಪ್ರಪಂಚವನ್ನ ಬಿಟ್ಟು ಹೋದರು. ನನ್ನ ತಂದೆ ಮಾಡಿದ ದಾನ-ಧರ್ಮ, ನನ್ನ ತಾಯಿ ಮಾಡಿದ ಪೂಜೆಗಳೇ ನನ್ನ ಮುನ್ನಡೆಸುತ್ತಿದೆ. ಕರ್ನಾಟಕದ ಪ್ರತಿ ಸರಕಾರಿ ಆಸ್ಪತ್ರೆಯಲ್ಲಿ ನನ್ನ ವಿದ್ಯಾರ್ಥಿಗಳು ವೈದ್ಯರಾಗಿ ಸೇವೆ ಸಲ್ಲಿಸಬೇಕೆಂಬ ದೃಢ ಸಂಕಲ್ಪದಿಂದ ಹೆಜ್ಜೆ ಇಡುತ್ತಿದ್ದೇನೆ.
ನನ್ನ ವಿದ್ಯಾರ್ಥಿಗಳೇ ನನ್ನ ಪ್ರೇರಣೆ. ಖಾಲಿ ಜೇಬು, ಒಡೆದ ಹೃದಯ, ಖಾಲಿ ಹೊಟ್ಟೆ, ನೂರು ಪಾಠ ಕಲಿಸುತ್ತದೆ. ನನಗಂತು ಸಾವಿರ ಪಾಠ ಕಲಿಸಿದೆ. ಜಗತ್ತಿನ ಯಾವ ವಿಶ್ವವಿದ್ಯಾಲಯವು ಹೇಳಿಕೊಡದ ಪಾಠವನ್ನ ಬದುಕು ಹೇಳಿ ಕೊಟ್ಟಿದೆ. ಅವಮಾನಗಳು ಧೈರ್ಯದಿಂದ ಬದುಕಲು ಪ್ರೇರೇಪಿಸಿದೆ. ಒಂಟಿತನ ಶಾಪವಾದಾಗ ಏಕಾಂತವೆಂಬುವುದು ನನ್ನ ರೂಪಿಸಿದೆ. ಸುರಿಸಿದ ಕಣ್ಣೀರು ಸಾಗರದಾಚೆಗೆ ಬೆಳೆದುನಿಲ್ಲುವಷ್ಟು ಭರವಸೆ ಕೊಟ್ಟಿದೆ. ಸಂಬಂಧಿಕರ ನಿರ್ಲಕ್ಷ ಎಲ್ಲವನ್ನು ಅರ್ಥ ಮಾಡಿಸಿದೆ. ನೂರಾರು ವಿಮರ್ಶಕರ ಮಧ್ಯೆ ಗೌರವಿಸುವ ಸಾವಿ ರಾರು ವ್ಯಕ್ತಿಗಳ ಸ್ನೇಹ ಪಯಣವನ್ನ ಅಧ್ಬುತವಾಗಿಸಿದೆ.
  ಎಂದು ಭಾವಿಸದಿದ್ದರೆ ಒಂದು ಮಾತು ಹೇಳ್ತೀನಿ. ಎಲ್ಲವನ್ನೂ ಕಳೆದುಕೊಂಡ ನೀನು ಒಬ್ಬನೇ ಏನು ಸಾಧಿಸುತ್ತೀಯಾ ಎಂದರು, ಸಾವಿರ ವಿದ್ಯಾರ್ಥಿಗಳನ್ನ ವೈದ್ಯರನ್ನಾಗಿ ಮಾಡಿದೆ. ಅಪ್ಪ-ಅಮ್ಮ ಇಲ್ಲ ಹುಡುಗನಿಗೆ ಯಾರು ಮದುವೆ ಮಾಡ್ತಾರೆ ಎಂದು ಮಾತನಾಡಿದರು. ಸಂಪೂರ್ಣ ಕನ್ನಡ ಚಿತ್ರರಂಗವೇ ಬಂದು ನನ್ನನ್ನು ಆಶೀರ್ವದಿಸಿತು. ಇಷ್ಟೆಲಾ ಹೇಳಲು ಕಾರಣ ಪರಿಶ್ರಮ ಎಂಬ ಹಡಗು 3 ವರ್ಷಗಳನ್ನ ಪೂರೈಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ, ಪೆರೇಸಂದ್ರದ, ಪ್ರದೀಪ್ ಈಶ್ವರ್ ಎಂಬ ಬಾಲಕ ಈ ಸಂಸ್ಥೆಯ ನಾವಿಕ. ನಮ್ಮ ಸಂಸ್ಥೆಯಲ್ಲಿ ಯಶಸ್ವಿಯಾದ ಎಲ್ಲಾ ವಿದ್ಯಾರ್ಥಿಗಳು ನಮ್ಮ ಕರ್ನಾಟಕದವರೇ. ನಿಮ್ಮ ಪ್ರೀತಿ ಮತ್ತು ನಂಬಿಕೆ ಇದೇ ರೀತಿ ಮುಂದುವರೆಯಲಿ.      17TH  