ಮಾನ್ಯ ಮುಖ್ಯಮಂತ್ರಿಗಳೇ ಒಂದಷ್ಟು ಪ್ರಶ್ನೆಗಳು
ಜನಮತ
ಹಿರಣ್ಮಯಿ
.@.
ಮಾನ್ಯ ಮುಖ್ಯಮಂತ್ರಿಗಳೇ…,
ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ನಿಮ್ಮ ಸಾಧನೆಗಳು ಅಂತ ಒಂದಷ್ಟು ಜಾಹೀರಾತುಗಳು ಹಲವಾರು ಮಾದ್ಯಮಗಳಲ್ಲಿ ಬಂತು. ಆದರೆ ನಿಜ ಏನು ಅನ್ನೋ ದೊಡ್ಡ ಪ್ರಶ್ನೆ ಕಾಡ್ತಾನೆ ಇದೆ. ಹಾಗಾಗಿ ಒಂದಷ್ಟು ಪ್ರಶ್ನೆಗಳು.
1.ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿತ್ತು. ಈಗ ಆಗಿದೆ. ಮುಂದೆ… ಪ್ರತಿ ಕೊಲೆಯ ನಂತರವೂ ಅವರ ಮನೆಯವರು ಈ ರೀತಿ ಬೇರೆಯವರಿಗೆ ಆಗಬಾರದು ಅಂತ ಹೇಳ್ತಾನೆ ಇದಾರೆ. ಆದರೆ ನೀವು ಮಾಡಿದ್ದೇನು.
ಒಂದಷ್ಟು ಹಣ ಸರ್ಕಾರದಿಂದ, ಪಕ್ಷದಿಂದ ಅಂತ ಹೇಳಿ ತಿಪ್ಪೆ ಸಾರಿಸುವ ಕೆಲಸ. ಬೆದರಿಕೆಯ ಕರೆಗಳು ಬರುತ್ತಿತ್ತು ಅಂತ ಅವರ ಮನೆಯವರು ಹೇಳಿದ್ದಾರೆ ಇದರಲ್ಲಿ ಗೃಹ ಖಾತೆ ಸಚಿವರು ಏನು ಮಾಡುತ್ತಿದ್ದಾರೆ. ಇದು   ಅಲ್ಲವೇ. ನಾವು ತನಿಖೆ ಮಾಡ್ತಾ ಇದೀವಿ ಅನ್ನೋ ಸ್ಟ್ಯಾಂಡರ್ಡ್ ಸ್ಟೇಟ್ಮೆಂಟ್. ಮನೆಯೊಳಗೆ ಮನೆಯೊಡಯ ಇದ್ದಾನೋ ಇಲ್ಲವೋ ಅನ್ನೋ ಅನುಮಾನ ಗೃಹ ಇಲಾಖೆಯಲ್ಲಿ ದೊಡ್ಡದಾಗಿ ಕಾಣುತ್ತಿದೆ. ನಿಮಗೆ ಹಿಂದೂ ವೇದಿಕೆಯ ಹಾಗೂ ಸಮಾಜದ ಜನಗಳ ಮನಸ್ಥಿತಿಯ ಅರಿವು ಇದೆಯೇ.
ಚಕ್ರವರ್ತಿ ಸೂಲಿಬೆಲೆ ಹೇಳಿದಂತೆ ನಿನ್ನೆ ಅವರು, ನಂತರ ನಾನು, ತದನಂತರ ನಿಮ್ಮ ಸರದಿ ಅಂದ್ರೆ ನಿಜವಾಗಿ ಯೋಚನೆಮಾಡುವ ವಿಷಯ ಅಂತ ಅನ್ನಿಸಲಿಲ್ಲವೆ. ಇದರ ಬಗ್ಗೆ ಗಟ್ಟಿ ನಿಲುವು, ನಡೆ, ಸೂಕ್ತ ತನಿಖೆ, ಮುಂದಿನ ಕಾರ್ಯತಂತ್ರ, ಅಪರಾಧಿಗಳಿಗೆ ಶಿಕ್ಷೆ ಇದೆಲ್ಲ ಆಗುವುದು ಯಾವಾಗ. ಈಗ ಕಾರ್ಯಕರ್ತರೆಲ್ಲ ರೊಚ್ಚಿಗೆದ್ದ ಮೇಲೆ ನಿಮಗೆ ಜ್ಞಾನೋದಯ ಆಗಿ  ಗೆ ವಹಿಸಿದ್ದ. ಇದು ನಿಮ್ಮ ಸರ್ಕಾರ ಬಂದ ತಕ್ಷಣ ಆಗಬೇಕಾಗಿದ್ದ ಕೆಲಸ ಅಲ್ಲವೇ.
ಹಾಗೆಯೇ ನಮ್ಮ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಇಲ್ಲವೇ ಅಥವಾ ಇದರ ಮೂಲ ಬೇರೆಯೇ ಇದೆಯೇ.ವ್ಯವಸ್ಥಿತವಾಗಿ ಕೊಲೆಗಳನ್ನು ಮಾಡುತ್ತಿರುವ, ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಸಂಸ್ಥೆಗಳನ್ನು ಕೆಡವಲು, ಬ್ಯಾನ್ ಮಾಡಲು ನಿಮಗೆ ಎಷ್ಟು ವರ್ಷ ಬೇಕು? ಇಲ್ಲಿ ಬೇಕಾಗಿರುವುದು ದೃಢ ನಿರ್ಧಾರ ಮತ್ತು ನಿರ್ದಿಷ್ಟ ಕಾರ್ಯತಂತ್ರ. ಅದು ನಿಜವಾಗಿಯೂ ಮಾಡುತ್ತದೆಯೇ.
೨. ಪಠ್ಯ ಪುಸ್ತಕದ ವಿಷಯ:ಹೊಸ ಶಿಕ್ಷಣ ನೀತಿ ಮೊದಲಿಗೆ ಕರ್ನಾಟಕದಲ್ಲಿ ಅಳವಡಿಕೆ ಆಗಿದ್ದು ಖುಷಿ ಆದರೂ ಅದರಲ್ಲಿನ ಕೊರತೆಗಳ ರಾಡಿ ತುಂಬಾ ಶೋಚನೀಯವಾಗಿತ್ತು ನಿಮಗೆ ರೋಹಿತ್ ಚಕ್ರತೀರ್ಥ ಬಗ್ಗೆ ಪೂರ್ತಿಯಾಗಿ ಗೊತ್ತಿರಲಿಲ್ಲವೆ.ಕೆಲವು ವರ್ಷಗಳ ಹಿಂದೆ ಬಹಳಷ್ಟು ವಿಷಯಗಳು ಬಂದು ಹೋಗಿದೆ ಅವರ ಬಗ್ಗೆ. ಅಂತಹ ಜವಾಬ್ದಾರಿಯುತ ಸ್ಥಾನಕ್ಕೆ ಆರಿಸುವಾಗ ಯಾವುದೇ ಮಾನದಂಡಗಳು ಇರಲಿಲ್ಲವೇ. ಸರಿ ನಿಮಗೆ ಸರಿ ಅನ್ನಿಸಿತು, ಅವರು ಮಾಡಿದ ಪಠ್ಯವೂ ಒಪ್ಪಿಗೆ ಯಾಯಿತು. ಅದು ಪ್ರಕಟಣೆಗೆ ಬರುವಷ್ಟರಲ್ಲಿ ಎಷ್ಟೆ ಗಲಾಟೆಗಳು ಆದವು. ಕಾಂಗ್ರೆಸ್ ನವರಂತೂ ಯುದ್ಧದ ರೀತಿಯಲ್ಲಿ ಕಿರುಚಾಡಿ ಏನೋ ಘನಘೋರ ತಪ್ಪೇ ಆಗಿಬಿಟ್ಟಿತು ಅಂತ ಹಾರಡುವಾಗ, ನಿಮ್ಮ ಕಡೆಯಿಂದ ಹೋರಾಡಿದ್ದು ಶಿಕ್ಷಣ ಸಚಿವರು ಮಾತ್ರವೇ.
ಬರಗೂರು ಅವರಂತೂ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೊಸ ಪಠ್ಯದಲ್ಲಿ ಅದು ಇಲ್ಲ, ಇದು ಇಲ್ಲ ಅಂತ ಕಿರುಚಾಡಿ ದ್ದಷ್ಟೆ.ಅಕ್ಬರ್, ಅಲೆಕ್ಸಾಂಡರ್, ತುಘಲಕ್, ಘೋರಿ, ಟಿಪ್ಪು ಸುಲ್ತಾನ್ ಮಾತ್ರವೇ ಮಹಾನ್ ಅನ್ನುವ ಪಾಠಗಳನ್ನು, ಶಿಕ್ಷಕರು ಹೇಳಿದ್ದನ್ನು ಕೇಳಿ ಯಥಾವತ್ತಾಗಿ ಓದಿ, ಬರೆದು,ಮಾರ್ಕ್ಸ್ತೆಗೆದುಕೊಂಡು ನಂತರ ಗೂಗಲ್ ಸಹಾಯದಿಂದ ಹುಡುಕಿದಾಗ ತಿಳಿದದ್ದು ನಾವು ಓದಿದ್ದು ಸತ್ವ ಇಲ್ಲದ ಪಠ್ಯ ಗಳನ್ನು ಅಂತ.
ಅಳಬೇಕೋ, ಬೇಜಾರು ಮಾಡಿಕೊಳ್ಳಬೇಕೋ ಗೊತ್ತಾಗದೆ ನಮ್ಮಜೀವನ ಕಳೆದೆವು. ಈಗಲಾದರೂ ನಮ್ಮ ನಿಜವಾದ ಚರಿತ್ರೆ ಗೊತ್ತಾಗುತ್ತೆ ಅಂತ ಆಶಯ ಇದ್ದಾಗ ಅಷ್ಟೆ ರಾಡಿ ಮಾಡಿ ಈಗ ಆ ಮಕ್ಕಳನ್ನು ಅತಂತ್ರ ಸ್ಥಿತಿಗೆ ತಂದ ಹೆಗ್ಗಳಿಕೆ ನಿಮ್ಮ ಸರ್ಕಾರದ್ದು. ಹೋಗಲಿ ಶಿಕ್ಷಕರ ಸಲಹೆ ಪಡೆದಿರಾ. ಶೈಕ್ಷಣಿಕ ವರ್ಷಕ್ಕೆ ಮುನ್ನ ನೀವು ಶಿಕ್ಷಕರಿಗೆ ಕೊಟ್ಟ ಟ್ರೈನಿಂಗ್ ನಿಮಗೆ ಪ್ರೀತಿ ಯಾಕೆಂದರೆ ಏನು ಹೇಳಬೇಕು, ಟ್ರೈನಿಂಗ್ ಕೊಡಬೇಕು ಅನ್ನೋದು ಮಾಡಿದವರಿಗೇ ಸರಿಯಾಗಿ ಗೊತ್ತಿ ರಲಿಲ್ಲ.ಏನು ಪಾಠ ಮಾಡಬೇಕು ಅಂತ ಆ ಶಿಕ್ಷಕರಿಗೆ ಗೊತ್ತಾ, ಅದರ ತಿಳುವಳಿಕೆ ನಿಮಗೆ ಇದೆಯಾ.
೩. ಪೊಲೀಸ್ ನೇಮಕಾತಿಯ ಅಕ್ರಮ:ನಾವು ಸತ್ಯ ನಿಷ್ಠರಾಗಿ ಕೆಲಸ ಮಾಡುತ್ತೇವೆ. ತನಿಖೆ ಮಾಡುತ್ತಿರುವವರಿಗೆಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದೇವೆ ಅಂತ ಹೇಳಿದರಲ್ಲ, ನಿಜವಾಗಿಯೂ ಆಗಿದೆಯೇ. ನನಗೆ ತಿಳಿದಂತೆ ಕರ್ನಾಟಕಪೊಲೀಸ್ ನಲ್ಲಿ ಉತ್ತಮವಾದಅಧಿಕಾರಿಗಳು ಇದ್ದಾರೆ ಮತ್ತು ಸತ್ಯ ಕಂಡು ಹಿಡಿಯುವುದರಲ್ಲಿ ನಿಷ್ಣಾತರು ಸಹ. ಅವರಸದ್ಬಳಕೆ ಆಗುತ್ತಿದೆಯೇ. ಇನ್ನು ಬರಿಯ ಮೀನುಗಳನ್ನು ಹಿಡಿಯುತ್ತಾ ಇದ್ದರೆ. ತಿಮಿಂಗಿಲಗಳು ಹಾಗೆ ಈಜಾಡುತ್ತಿವೆ.
ಅವರುಗಳು ಹಿಡಿದರೆ ನಿಮಗೆ ತೊಂದರೆಯೇ. ಪ್ರಾರಂಭದಲ್ಲಿ ಮಾತ್ರ ಚುರುಕಾಗಿ ಕೆಲಸ ಮಾಡಿದರು ಈಗ? ಹಾಗೆಯೇ ಮುಂಚೆ ಇದೇ ರೀತಿಯ ಅಕ್ರಮ ಆಗಿಲ್ಲವೆಂದು ಏನು ಗ್ಯಾರಂಟಿ. ಅದರ ಬಗ್ಗೆ ನಿಮ್ಮ ಕ್ರಮ ಏನು.
೪. ಎ ಸಿ ಬಿ/ಸಿ ಸಿ ಬಿ :ಈ ಸಂಸ್ಥೆಗಳ ಕೆಲಸ ಏನು. ತಪ್ಪು ಮಾಡುವ/ಮಾಡಿದ್ದ, ಅಕ್ರಮ ಗಳಿಕೆ ಮಾಡಿದ, ಲಂಚಪಡೆದವರನ್ನು ಹಿಡಿಯುವುದು ಅಲ್ಲವೇ. ಅವರು ಹಿಡಿದು ಅದು ದಿನಗಟ್ಟಲೇ, ವಾರಗಟ್ಟಲೇಎಲ್ಲಾಚಾನೆಲ್ಗಳಲ್ಲಿ ಸುದ್ದಿ ಬಂದದ್ದಷ್ಟೆ ಆಗಿದ್ದು. ನಂತರ ಅವರುಗಳ ಮೇಲೆ ಏನು ಆಕ್ಷನ್ ತೆಗೆದುಕೊಂಡಿರಿ, ಅವರಿಗೆ ಏನು ಶಿಕ್ಷೆ ಆಯಿತು, ವಶಪಡಿಸಿಕೊಂಡ ಆಸ್ತಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತೇ, ಅವರಿಂದ ಆದ ಅನ್ಯಾಯಗಳಿಗೆ ದಂಡ ವಸೂಲಿ ಆಯಿತೇ. ನಿಜಕ್ಕೂ ಯಾರಿಗೂ ಗೊತ್ತಾಗಿಲ್ಲ. ಆ ಸಂಸ್ಥೆಗಳನ್ನು ಜನಸಾಮಾನ್ಯರ ಬಾಯಲ್ಲಿ ಜೋಕರ್ ತರಹ ಮಾಡಿದ್ದೇಕೆ.
ಹೀಗೆಯೇ ಮುಂಚೆ ಸಿಕ್ಕಿ ಹಾಕಿಕೊಂಡ ಎಷ್ಟೋ ಜನರಿಗೆ ಮುಂಬಡ್ತಿ ಸಹ ಕೊಟ್ಟು ಸರ್ಕಾರ ಗೌರವಿಸಿದೆ ಅಂತ ಸಹ ಕೇಳಲ್ಪಟ್ಟೆ. ಹಾಗಾದರೆ ಯಾವುದು ತಪ್ಪು. ಅವರುಗಳು ಅಕ್ರಮಹಿಡಿದದ್ದೆಅಥವಾ ನೀವು ಅವರನ್ನು ಅಮಾನತ್ತು ಸಹ ಮಾಡದೆ ಉಳಿಸಿ ಕೊಂಡದ್ದು. ಏನು ಆಕ್ಷನ್ ತೆಗೆದುಕೊಳ್ಳುವುದಿಲ್ಲ ಅಂದ ಮೇಲೆ ಆ ಸಂಸ್ಥೆ ಏಕೆ, ಅದನ್ನೆಲ್ಲ ವಜಾ ಮಾಡಿ, ಅವರ ಬುದ್ದಿವಂತಿಕೆ ಯನ್ನು ಬೇರೆ ಕಡೆ ಬಳಸಿಕೊಳ್ಳಿ.
೫. ಮಠ ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಗೆ ಕೊಡುವ ಹಣ:ಹಿಂದಿನ ಸರ್ಕಾರ ಆಗಲಿ ನಿಮ್ಮ ಸರ್ಕಾರ ಆಗಲಿ ಧಾರ್ಮಿಕ ಸಂಸ್ಥೆಗಳಿಗೆ ದುಡ್ಡು ಕೋಟಿಗಟ್ಟಲೆ ಕೊಟ್ಟಿರಲ್ಲ. ಅದರ ಲೆಕ್ಕ ಕೇಳಿದ್ದೀರಾ. ಈ ಸಂಸ್ಥೆಗಳ ಉದ್ದೇಶ ಜನ ಹಿತ ಅಲ್ಲವೇ. ಅದು ಆಗುತ್ತಿದೆಯೇ? ಅವರುಗಳು ಈಗ ಪಠ್ಯದಲ್ಲಿ ಅದು ಇಲ್ಲ ಇದು ಇಲ್ಲ ಅಂತ ಗಲಾಟೆ ಮಾಡುತ್ತಿರುವುದು ಯಾರ ಹುನ್ನಾರ. ಏನಾದರೂ ಹೇಳುವುದಿದ್ದರೆ ನಿಮ್ಮ ಬಳಿಯೇ ಹೇಳಿ ಪಠ್ಯ ತಿದ್ದುವ ಕೆಲಸ ಮಾಡಬಹುದಿತ್ತು. ಅಂತಹವರಿಗೆ ನೀವುಗಳು ಕೋಟಿ ಕೋಟಿ ಹಣ ಕೊಡುತ್ತೀರಾ.
ಅವರುಗಳು  ಅಲ್ಲವೇ. ಅದರ ಖರ್ಚು ವೆಚ್ಚಗಳ ಪಟ್ಟಿ ಜನತೆಗೆ ಸಿಗುವುದು ಯಾವಾಗ.(ಈ ವಿಷಯಕ್ಕೆ ಅವರೆಲ್ಲರೂ ರೊಚ್ಚಿ ಗೇಳುವುದು ಖಂಡಿತಾ , ಆಗ ನಿಮ್ಮ ನಡೆ ಏನು) ಇವರುಗಳಿಗೆ ಈ ಪ್ರಶ್ನೆ ಕೇಳುವ ಹಾಗಿಲ್ಲವೆ. ಇವರಿಗೆ ಕೊಡುವುದು ನಮ್ಮದೇ ಹಣ ಅಲ್ಲವೇ. ಮನೆಯಲ್ಲಿ ಪ್ರತಿ ಖರ್ಚಿಗೆ ಲೆಕ್ಕ ಕೊಡುವ/ಕೇಳುವ ರೀತಿ ಇದೆ ಅಂದರೆ ಇವರಿಗೆ ಕೊಟ್ಟ ಹಣದ ಖರ್ಚು ವೆಚ್ಚ ನಮಗೆ ತಿಳಿಯಬಾರದೆ.
೬. ಅಭಿವೃದ್ದಿ:ಕರ್ನಾಟಕದ ಅಭಿವೃದ್ದಿ ಅಂದರೆ ಬರೀ ಬೆಂಗಳೂರು ಮಾತ್ರವೇ. ಬೇರೆಎಲ್ಲಾಕಡೆ ಏನು ಅಭಿವೃದ್ದಿ ಆಗಿದೆ ಅನ್ನೋದು ಅಲ್ಲಿರುವವರಿಗೂ ಗೊತ್ತಿರಲಿಕ್ಕಿಲ್ಲ. ಇನ್ನು ನಮಗೆ ಹೇಗೆ ಗೊತ್ತಾಗುತ್ತದೆ. ಹಳ್ಳಿಗಳಲ್ಲಿ ರಸ್ತೆಗಳು, ಶಾಲೆಗಳ ಕಥೆ, ಮೂಲಭೂತ ಸೌಕರ್ಯ, ವಿದ್ಯುತ, ನೀರು, ಶೌಚಾಲಯ, ಇಂಟರ್ನೆಟ್ ಇದೆಲ್ಲದರ ಕಥೆ ಏನು. ಇದೆಲ್ಲ ಸರಿ ಹೋದರೆ ಮಾತ್ರವೇ ರಾಜ್ಯದಲ್ಲಿ ಹೊಸ ಕೈಗಾರಿಕೆ, ಹೂಡಿಕೆ, ಅಭಿವೃದ್ದಿ ಆಗುವುದು ಅಲ್ಲವೇ.
ಬೆಂಗಳೂರಿಗೆ ಮಾತ್ರ ಉತ್ತಮ ರಸ್ತೆಗಳು(?!) ಮೆಟ್ರೋ ರೈಲುಗಳು, ಬಸ್ಸುಗಳು, ಮೇಲ್ಸೇತುವೆ, ಉದ್ಯಾನವನ, ನಿರಂತರ ವಿದ್ಯುತ, ಉತ್ತಮ ಆರೋಗ್ಯ ಸೇವೆಗಳು… ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಆದರೆ ಬೇರೆ ಊರುಗಳಲ್ಲಿ, ಹಳ್ಳಿಗಳಲ್ಲಿ ಸರಿ ಯಾದ ರಸ್ತೆಗಳೇ ಇಲ್ಲ. ವಿದ್ಯುತ್ ಬರೀ ಬಿಲ್ ನಲ್ಲಿ ಮಾತ್ರ, ಇಂಟರ್ನೆಟ್ ಸೇವೆಗಳು, ಆರೋಗ್ಯ ಸೇವೆ ನಿಜವಾಗಿ ಇದೆಯೇ.
ಅಭಿವೃದ್ದಿ ಅನ್ನೋ ವಿಷಯ ಬಂದರೆ ನೆನಪಾಗುವುದು ಮೋದಿ ಮತ್ತೆ ಯೋಗಿ. ನಿಮ್ಮ ಸರ್ಕಾರದ ಹೆಸರು ಬರುವುದುಯಾವಾಗ. ಅಭಿವೃದ್ದಿ ಅನ್ನೋ ಅಜೆಂಡಾ ಇಟ್ಟುಕೊಂಡು ಅಽಕಾರಕ್ಕೆ ಬಂದ ಬಿಜೆಪಿ ಅದನ್ನು ಮರೆತು ಬೇಡದ ಬೇರೆವಿಷಯಕ್ಕೆ ಮಾತ್ರ ಸುದ್ದಿ ಅಗ್ತಾ ಇರೋದರ ಬಗ್ಗೆ ನಿಮ್ಮ ಅಭಪ್ರಾಯವೇನು. ಮೋದಿಯ ಹೆಸರಿನಲ್ಲಿ ಬರೀ ಮತ ಕೇಳುವುದು ಮಾತ್ರವಲ್ಲ, ಅದೇ ನಿಟ್ಟಿನಲ್ಲಿ ಅಭಿವೃದ್ಧಿಯ ಕೆಲಸ ಆಗಬೇಕಲ್ಲವೆ. ಅದು ಆಗುವುದು….
೭. ಮಂತ್ರಿಗಳು, ಎಂ ಎಲ್ ಎ ಗಳ ಕೆಲಸ:ಜನರಿಂದ ಚುನಾಯಿತರಾದ ಇವರುಗಳು ಮಾಡುತ್ತಿರುವುದು ಏನು. ಅವರುಗಳ ಮೌಲ್ಯ ಮಾಪನ ಆಗಿದೆಯೇ. ಅವರವರ ಕ್ಷೇತ್ರಗಳಲ್ಲಿ ಅವರುಗಳು ಮಾಡಿದ ಕೆಲಸಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ. ಇವರುಗಳೆಲ್ಲರು ಅವರಿಗೆ ಬರುವ ನಿಧಿಗಳನ್ನು ಸರಿಯಾಗಿ ಬಳಸಿದ್ದರೆ ನಮ್ಮ ರಾಜ್ಯ ಹೀಗೆ ಇರುತ್ತಿತ್ತೆ. ಆಗ ಜೋರಾಗಿ ಫ್ಲೆಕ್ಸ್ಹಾಕಿಸುವುದು ಮಾತ್ರವೇ ಅಭಿವೃದ್ಧಿಯೇ. ಅದೇ ಖರ್ಚನ್ನು ಕೆಲಸಗಳಿಗೆ ಬಳಸಿದರೆ ಆಗುವುದಿಲ್ಲವೇ.
ನಿಮ್ಮ ಕೆಲಸಗಳು ಮಾತನಾಡಬೇಕು, ಫ್ಲೆಕ್ಸ್ಗಳುಅಲ್ಲ ಅಲ್ಲವೇ ನೀವು ಯಡಿಯೂರಪ್ಪನವರ ನಂತರ ಬಂದಾಗ ಬಹಳಷ್ಟುಆಕ್ಷೇಪಣೆಗಳು (ನಿಮ್ಮದೇ ಪಕ್ಷದವರಿಂದ) ಹಾಗೂ ನಿರೀಕ್ಷೆಗಳು ನಮ್ಮೆಲ್ಲರಿಗೆ ಇದ್ದದ್ದು ನಿಜ. ಆದರೆ ನೀವು ಬರೀ ಖುರ್ಚಿಉಳಿಸಿಕೊಳ್ಳಲಿಕ್ಕೆ ಕೆಲಸ ಮಾಡ್ತಿದ್ದಿರಾ ಅಂತ ಅನ್ನಿಸುತ್ತಾ ಇರುವುದು ಅಷ್ಟೇ ನಿಜ. ಬೇರೆ ಪಕ್ಷಗಳ ಬಗ್ಗೆ ಮಾತನಾಡುವಬದಲು ಇರುವಅಧಿಕಾರವನ್ನು ಸರಿಯಾಗಿ ಉಪಯೋಗಿಸಿ ಉತ್ತಮ ಕಾರ್ಯಗಳನ್ನು ಮಾಡಲು ಆಗುವುದು ಯಾವಾಗ.
ನಿಮ್ಮನ್ನು ಮೆಚ್ಚ ಬೇಕಾದದ್ದು ಮೋದಿಯವರಲ್ಲ ಕನ್ನಡ ನಾಡಿನ ಪ್ರಜೆಗಳು. ಅದು ಆಗಿದ್ದರೆ ಮೋದಿಯವರು ಖಂಡಿತಾ ನಿಮ್ಮನ್ನು ಮೆಚ್ಚಿ ಹೊಗಳುತ್ತಾರೆ. ನಿಮ್ಮಿಂದ ಸೂಕ್ತ ನಿರ್ಧಾರ, ಕಾರ್ಯ ತತ್ಪರತೆ, ಅಭಿವೃದ್ದಿ ಗೆ ಪೂರಕವಾಗಿರುವಕೆಲಸಗಳು ಆಗುವುದು ಯಾವಾಗ. ಸತ್ಪ್ರಜೆ ಆಗಿರುವ ನಮ್ಮನ್ನು ಸತ್ತ ಪ್ರಜೆ ಮಾಡಬೇಡಿ. ಇನ್ನಾದರೂ ಎದ್ದೇಳಿ, ಎಚ್ಚರ ಗೊಳ್ಳಿ. ಇನ್ನಾದರೂ ಅಭಿವೃದ್ಧಿಯ ಪಥ ಕರ್ನಾಟಕದಲ್ಲಿ ಆಗಲಿ. ಜನರು ನೆಮ್ಮದಿ ಯಿಂದ ಬದುಕುವಂತಹ ಸಮಾಜ ನಿರ್ಮಾಣವಾಗಲಿ.ಎಲ್ಲಾಆಯಾಮಗಳಲ್ಲೂ ಪ್ರಗತಿ ಕಾಣಲಿ ಅನ್ನುವುದು ಕಳಕಳಿಯ ಮನವಿ. ಆದರೆ..