ಚೀನಾ-ಅಮೆರಿಕ ಯುದ್ದವಾದಲ್ಲಿ ಪರಿಣಾಮ ನಮಗೂ ತಟ್ಟುತ್ತದೆ
ಸಂಗತ
ವಿಜಯ್‌ ದರಡಾ
ತೈವಾನ್ ವಿರುದ್ಧದ ಸಮರ ಚೀನಾಗೆ ಬಹಳ ಕಷ್ಟಕರವಾಗಲಿದೆ. ರಷ್ಯಾ ಕೂಡ ಇದಕ್ಕೆ ಪ್ರತಿರೋಧವನ್ನು ಒಡ್ಡಲಿದೆ. ಜಾಗತಿಕ ವಾಗಿ ರಾಜತಾಂತ್ರಿಕ ನಡೆಗಳು ಭಿನ್ನವಾಗಿ ಇರುತ್ತವೆ. ಆ ಬಗ್ಗೆ ಯಾವುದೇ ಮುಂದಾಲೋಚನೆ ಮಾಡಲಾಗದು. ಏನಾಗಬಹುದೆಂಬುದರ ಅರಿವು ನಮಗಾರಿಗೂ ಇಲ್ಲ.
ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ಕೊಟ್ಟ ವಿಚಾರದಲ್ಲಿ ಚೀನಾ ಕೆಂಡಾಮಂಡಲವಾಗಿದೆ. ಈ ವಿಚಾರವಾಗಿ ಅಮೆರಿಕ- ಚೀನಾ ನಡುವೆ ಯುದ್ಧ ಸಂಭವಿಸಬಹುದೇ ಎಂದು ಕೆಲವರು ನನ್ನಲ್ಲಿ ಪ್ರಶ್ನಿಸುತ್ತಿದ್ದರು. ನನ್ನ ಪ್ರಕಾರ ಅಂತಹ ಪರಿಸ್ಥಿತಿ ಉದ್ಭವಿಸದು ಎಂದು ನಾನು ಹೇಳಿದ್ದೆ. ಈ ವಿಚಾರದಲ್ಲಿ ಎರಡೂ ದೇಶಗಳ ನಡುವಣ ಶೀತಲ ಸಮರ ಮುಂದು ವರೆಯಬಹುದು, ಆದರೆ ಅದು ಪೂರ್ಣ ಪ್ರಮಾಣದ ಯುದ್ಧದ ಮಟ್ಟಕ್ಕೆ ಹೋಗಲಾರದು.
ಔದ್ಯಮಿಕ ವಲಯ ಈಗ ವಿಶ್ವದ ಪ್ರಮುಖ ಚಾಲನಾಶಕ್ತಿಯಾಗಿದೆ. ಅಮೆರಿಕ ಅಥವಾ ಚೀನಾ ಯುದ್ಧವನ್ನು ಖಂಡಿತ ಅಪೇಕ್ಷಿಸುವುದಿಲ್ಲ. ಆದರೆ ದುರದೃಷ್ಟವಶಾತ್, ಒಂದೊ ಮ್ಮೆ ಯುದ್ಧ ನಡೆದೇ ಹೋದರೆ ಅದರ ಪರಿಣಾಮ ಜಾಗತಿಕ ಮಟ್ಟದಲ್ಲಿ ಪ್ರತಿಕೂಲ ವಾಗಿರುತ್ತದೆ, ಅಷ್ಟೇ ಅಲ್ಲ ಭಾರತ ಕೂಡ ಅದರ ಬಿಸಿಯಿಂದ ತತ್ತರಿಸಲಿದೆ.
ಮೊದಲಿಗೆ ನಾವು ತೈವಾನ್ ವಿಚಾರವನ್ನು ಪರಾಮರ್ಶೆ ಮಾಡೋಣ. ಚೀನಾ ಯಾಕೆ ಈ ವಿಚಾರದಲ್ಲಿ ಉತ್ಸುಕತೆ ತೋರುತ್ತಿದೆ ಎಂಬುದು ಇಲ್ಲಿರುವ ಪ್ರಶ್ನೆ. ಎರಡನೇ ಮಹಾಯುದ್ಧದ ವೇಳೆಯಲ್ಲಿ, ಮಾವೋತ್ಸೆ ತುಂಗ್ ನೇತೃತ್ವದ ಚೀನಾದ ಕಮ್ಯುನಿ ಪಾರ್ಟಿ ಅಲ್ಲಿ ಆಡಳಿತ ನಡೆಸುತ್ತಿದ್ದ ನ್ಯಾಶನಲಿ ಪಾರ್ಟಿಯ ಜತೆಗೆ ಸಂಘರ್ಷ ನಡೆಸುತ್ತಲೇ ಇತ್ತು. 1949ರಲ್ಲಿ ಮಾವೊತ್ಸೆ ತುಂಗ್ ನೇತೃತ್ವದ ಕಮ್ಯುನಿ ಪಕ್ಷ ಚೀನಾದ ಬಹುಪಾಲನ್ನು ಗೆಲ್ಲುವುದು ಸಾಧ್ಯವಾಯ್ತು.
ಆ ವೇಳೆ ನ್ಯಾಶನಲಿ ಪಕ್ಷದ ಕೊಮಿಟೊಂಗ್ ಸಮರ್ಥಕರು ತೈವಾನ್ ದ್ವೀಪಕ್ಕೆ ಬಂದು ಆಶ್ರಯ ಪಡೆದರು. ಆವಾಗಿನಿಂದ ಚೀನಾ ತೈವಾನ್ ಕೂಡ ತನ್ನದೇ ಭಾಗ ಎಂದು ಪರಿಗಣಿಸಿದೆ. ಇತ್ತಕಡೆ ಟಿಬೆಟನ್ನು ತನ್ನ ವಶಕ್ಕೆ ಪಡೆದ ನಂತರದಲ್ಲಿ ಚೀನಾ ಸಣ್ಣಪುಟ್ಟ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರದಲ್ಲಿ ನಿರಂತರ ತೊಡಗಿದೆ. ಆದರೆ ಗಾತ್ರದಲ್ಲಿ ಸಣ್ಣದಾದರೂ ತೈವಾನ್ ತನ್ನದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ, ಅಷ್ಟೇ ಅಲ್ಲ ತಾಂತ್ರಿಕವಾಗಿ ಬಹಳ ಶ್ರೀಮಂತವಾಗಿದೆ.
ಇನ್ನೊಂದು ಕಡೆ ಚೀನಾ ತನ್ನ ಏಕಚಕ್ರಾಧಿಪತ್ಯವನ್ನು ಎಡೆ ಸಾಧಿಸುವ ಛಲದೊಂದಿಗೆ ಮುನ್ನುಗ್ಗುತ್ತಲೇ ಇದೆ. ತನ್ನ ಸುತ್ತಲಿನಸಣ್ಣಪುಟ್ಟ ದ್ವೀಪರಾಷ್ಟ್ರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ವಾಂಛೆ ಜೋರಾಗಿದೆ. ಚೀನಾದ ಕಾರಣದಿಂದಾಗಿ ಒಂದಷ್ಟು ರಾಷ್ಟ್ರಗಳು ತೈವಾನನ್ನು ಗುರುತಿಸುವಂತಾಗಿದೆ. ಆದರೆ ಯು.ಎಸ್. ಮತ್ತು ಭಾರತಕ್ಕೆ ತೈವಾನ್ ಮೊದಲಿನಿಂದಲೂ ಪರಿಚಿತ, ಆದೇಶದೊಂದಿಗೆ ವ್ಯಾವಹಾರಿಕ ಸಂಬಂಧಗಳನ್ನೂ ಹೊಂದಿದೆ.
ತೈವಾನಿನ ರಕ್ಷಣೆಗಾಗಿ ಅಮೆರಿಕ ತನ್ನ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನೂ ಮಂಡಿಸಿದೆ. ಚೀನಾದ ಪ್ರತಿರೋಧದ ನಡುವೆ ಯೂ ಅಮೆರಿಕ ತೈವಾನಿಗೆಶಸ್ತಮಾರಾಟ ಮಾಡುತ್ತಿದೆ. ಹಾಂಗ್‌ಕಾಂಗ್ ತನ್ನ ವಶಕ್ಕೆ ಬಂದ ನಂತರದಲ್ಲಿ ತೈವಾನನ್ನೂ ಕಬಳಿಸುವ ಚೀನಾದ ಬಯಕೆಗೆ ಬಲಬಂದಿದೆ. ಮಿಲಿಟರಿ ವ್ಯವಸ್ಥೆಯ ವಿಚಾರಕ್ಕೆ ಬಂದರೆ ಚೀನಾದ ಶಕ್ತಿಯ ಮುಂದೆ ತೈವಾನ್ ಏನೇನೂ ಅಲ್ಲ. ಚೀನಾ 20 ಲಕ್ಷ ಸೈನಿಕರ ಪಡೆಯನ್ನು ಹೊಂದಿದ್ದರೆ, ತೈವಾನಿನ ಬಳಿ ಇರುವುದು 1.63 ಸೈನಿಕರ ದಂಡು. ಈ ಎರಡು ರಾಷ್ಟ್ರಗಳ ಮಧ್ಯೆ ಸ್ಪರ್ಧಾತ್ಮಕತೆ ಎಂಬುದೇ ಇಲ್ಲ.
ಕಳೆದ ವರ್ಷ ಅನೇಕ ಬಾರಿ ತೈವಾನಿನ ವಾಯುಯಾನ ಕ್ಷೇತ್ರದ ಪರಿಮಿತಿಯ ಒಳಗಡೆ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿವೆ. ಭೌಗೋಳಿಕವಾದ ಪರಿಸ್ಥಿತಿ ಹೇಗಿದೆಯೆಂದರೆ, ತೈವಾನ್ ದೇಶ ಚೀನಾದ ಆಡಳಿತಕ್ಕೆ ಒಳಪಡುವ ಸಾಧ್ಯತೆಯನ್ನು ಅಮೆರಿಕ, ಜಪಾನ್ ಮತ್ತು ಭಾರತ ಎಂದಿಗೂ ಸಹಿಸುವುದಿಲ್ಲ. ಅದಕ್ಕೋಸ್ಕರವೇ ಒಂದು ಪಡೆಯನ್ನು ಕಟ್ಟಲಾಗಿದೆ. ಚೀನಾದ ದಕ್ಷಿಣಭಾಗದ ಸಮುದ್ರಭಾಗ, ಮಿಲಿಟರಿ ಸುರಕ್ಷತೆಯ ದೃಷ್ಟಿಕೋನದಿಂದ ಭಾರತ, ಜಪಾನ್ ಮತ್ತು ಅಮೆರಿಕ ದೇಶಗಳಿಗೆ ಬಹಳಪ್ರಮುಖವಾದದ್ದು.
ಹಾಗಾಗಿ, ಚೀನಾ ಒಂದೊಮ್ಮೆ ತೈವಾನಿನ ಮೇಲೆ ದಾಳಿ ಮಾಡಿದಲ್ಲಿ ಅಮೆರಿಕ ಮಧ್ಯ ಪ್ರವೇಶಿಸುವುದು ನಿರ್ಣಾಯಕವಾಗ ಬಹುದು. ಅಷ್ಟೇ ಅಲ್ಲ ಜಪಾನ್, ಆಸ್ಟ್ರೆಲಿಯಾ, ಯುರೋಪ್‌ಗಳು ಕೂಡ ತೈವಾನ್ ನೆರವಿಗೆ ಧಾವಿಸಬಹುದು. ತೈವಾನಿನ ಕೊಲ್ಲಿಯಲ್ಲಿ 1996ರಲ್ಲಿ ಬಿಕ್ಕಟ್ಟು ತಾರಕಕ್ಕೇರಿತ್ತು. ಆಗ ಅಮೆರಿಕ ಎರಡು ಫೈಟರ್ ಜೆಟ್ ಗಳನ್ನು ತೈವಾನಿನ ಸಹಾಯಕ್ಕೆಂದು ಕಳಿಸಿತ್ತು. ತೈವಾನಿಗೆ ತಾನು ಮಾರಾಟ ಮಾಡಿರುವ ಶಸಗಳ ಮೇಲೆ ಕೈಹಾಕುವ ಚೀನಾದ ಪ್ರಯತ್ನವನ್ನು ಅಮೆರಿಕ ಎಂದಿಗೂ ಸಹಿಸಲಾರದು.
ತೈವಾನಿಗೆ ಇನ್ನೊಂದು ಬಹುದೊಡ್ಡ ರಕ್ಷಣಾಕವಚವಿದೆ. ಅದಕ್ಕೆ ಸಿಲಿಕಾನ್ ಶೀಲ್ಡ ಎಂದು ಕರೆಯಲಾಗುತ್ತದೆ. ವಿಶ್ವದ ಬಹುತೇಕ ರಾಷ್ಟಗಳು ತೈವಾನಿನ ಆಧುನಿಕ ಸೆಮಿಕಂಡಕ್ಟರ್ ಚಿಪ್ ಬಳಸುತ್ತಿವೆ. ಚೀನಾ ಕೂಡ ಸೆಮಿಕಂಡಕ್ಟರ್ ಚಿಪ್‌ಗಳಿಗೆ ತೈವಾನನ್ನು ಅವಲಂಬಿಸಿದೆ. ಒಂದು ವೇಳೆ ಈ ಚಿಪ್ ಉತ್ಪಾದನೆಗೆ ಧಕ್ಕೆ ಉಂಟಾದಲ್ಲಿ ಇಡೀ ವಿಶ್ವವೇ ಅದರ ಪರಿತಾಪವನ್ನು ಅನುಭವಿಸ ಬೇಕಾಗುತ್ತದೆ. ವಿಶ್ವದಲ್ಲಿ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರ ಸೆಮಿಕಂಡಕ್ಟರ್ ಚಿಪ್ ತಯಾರಿಸುತ್ತವೆ. ಆದರೆ ಈ ಕ್ಷೇತ್ರದಲ್ಲಿ ತೈವಾನಿನ ಪಾರಮ್ಯ ವಿಶ್ವವ್ಯಾಪಿ. ಅದನ್ನು ಬಿಟ್ಟರೆ ಆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಇನ್ನೊಂದು ರಾಷ್ಟ್ರವೆಂದರೆ ಅದು ದಕ್ಷಿಣ ಕೊರಿಯಾ. ಮೊಬೈಲ್ ಫೋನಿನಿಂದ ವಿಮಾನ ಮತ್ತು ಅಂತರಿಕ್ಷ ನೌಕೆಗಳ ತನಕ ಎಲ್ಲ ಕ್ಷೇತ್ರಕ್ಕೂ ಈ ಚಿಪ್ ಬೇಕೇಬೇಕು. ಯಾವುದೇ ತಾಂತ್ರಿಕ ಉಪಕರಣದ ಹೃದಯವೆಂದರೆ ಅದು ಸೆಮಿಕಂಡಕ್ಟರ್ ಚಿಪ್.
ಈ ನಡುವೆ ಚೀನಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಹಾಳೆದ್ದು ಹೋಗಿದೆ. ಚೀನಾದಕೆಲ ಭಾಗಗಳಲ್ಲಿ ಬ್ಯಾಂಕಿನಿಂದ ಹಣ ಹಿಂಪಡೆಯುವುದಕ್ಕೂ ನಿರ್ಬಂಧ ಹೇರಲ್ಪಟ್ಟಿದೆ. ಸಾರ್ವಜನಿಕರಿಂದ ಗಲಾಟೆಗಳಾಗದಂತೆ ತಡೆಯಲು ಮತ್ತು ಬ್ಯಾಂಕುಗಳಿಗೆ ರಕ್ಷಣೆ ನೀಡಲು ಮಿಲಿಟರಿ ಟ್ಯಾಂಕರ್‌ಗಳನ್ನು ವ್ಯವಸ್ಥೆಮಾಡಲಾಗಿದೆ.
ಆಂತರಿಕವಾಗಿ ಚೀನಾದ ಪ್ರಜೆಗಳಲ್ಲಿ ಅಸಮಾಧಾನದ ಭುಗಿಲು ತೀವ್ರವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಜನ ಬಂಡೇಳುವ ಮತ್ತು ಅಂತರ್ಯುದ್ಧ ಏರ್ಪಡುವ ಪರಿಸ್ಥಿತಿ ಚೀನಾದಲ್ಲಿದೆ. ಹಿಂದೊಮ್ಮೆ ನಡೆದ ಅಂತರ್ಯುದ್ಧದ ಪರಿಸ್ಥಿತಿ ಇನ್ನೊಂದು ಬಾರಿ ಮರುಕಳಿಸುವುದು ಜಿನ್ ಪಿಂಗ್ ಗೂ ಇಷ್ಟವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇಳಿ ಹೋರಾಟಕ್ಕಿಳಿದ ಲಕ್ಷಾಂತರ ಯುವಕರನ್ನು ಚೈನೀಸ್ ಟ್ಯಾಂಕರ್‌ಗಳು ಪುಡಿಗಟ್ಟಿದ್ದು ಇನ್ನೂ ಹಸಿರಾಗಿದೆ. ನಾನು ಪಿ.ವಿ.ನರಸಿಂಹರಾವ್ ಅವರ ಜತೆ ಚೀನಾಕ್ಕೆ ಹೋಗಿದ್ದಾಗ ಆ ಸ್ಥಳಕ್ಕೂ ಭೇಟಿಕೊಟ್ಟಿದ್ದೆವು.
ಘಟನೆಯ ಬಗ್ಗೆ ಚೀನೀಯರನ್ನು ಕೇಳಿದಾಗ ಅವರು ಏನೂ ನಡೆದಿಲ್ಲವೆಂಬಂತೆ ವರ್ತಿಸಿದ್ದರು. ಎಲ್ಲವೂ ಅಮೆರಿಕದವರು ಕಟ್ಟಿದ ಕಟ್ಟುಕಥೆ ಎಂಬಅತೆ ಮಾತನಾಡಿದ್ದರು. ನನ್ನೇನಿಕೆಯ ಪ್ರಕಾರ ತೈವಾನ್ ವಿರುದ್ಧದ ಸಮರ ಚೀನಾಗೆ ಬಹಳ ಕಷ್ಟಕರವಾಗಲಿದೆ. ರಷ್ಯಾ ಕೂಡ ಇದಕ್ಕೆ ಪ್ರತಿರೋಧವನ್ನು ಒಡ್ಡಲಿದೆ. ಜಾಗತಿಕವಾಗಿ ರಾಜತಾಂತ್ರಿಕ ನಡೆಗಳು ಭಿನ್ನವಾಗಿ ಇರುತ್ತವೆ. ಆ ಬಗ್ಗೆ ಯಾವುದೇ ಮುಂದಾಲೋಚನೆ ಮಾಡಲಾಗದು.
ಏನಾಗಬಹುದೆಂಬುದರ ಅರಿವು ನಮಗಾರಿಗೂ ಇಲ್ಲ. ಒಂದೊಮ್ಮೆ ಯುದ್ಧ ಅನಿವಾರ್ಯವಾದರೆ ಚೀನಾ ಕೂಡ ಅದಕ್ಕೆ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ. ಯುಕ್ರೇನಿಯನ್ನರು ರಷ್ಯಾ ವಿರುದ್ಧ ಸಮರ ಹೂಡಿದ್ದನ್ನು ನಾವು ಈಗಾಗಲೇ ಕಂಡಿದ್ದೇವೆ. ಅದೇರೀತಿ ಯುದ್ಧವಾದರೆ ತೈವಾನಿಗರಿಗೆ ದೊಡ್ಡ ನಷ್ಟವಾಗಲಿದೆ. ಒಂದೊಮ್ಮೆ ಯುದ್ಧ ಸಂಭವಿಸಿದ್ದೇ ಆದರೆ ಅದು ಚೀನಾ ಮತ್ತು ಅಮೆರಿಕ ನಡುವಣ ಯುದ್ಧವಾಗಲಿದೆ. ಅದು ಇಡೀ ವಿಶ್ವವನ್ನೇ ತಲ್ಲಣಗೊಳಿಸಲಿದೆ ಇಂಹದೊಂದು ಯುದ್ಧ ನಡೆದಾಗ ಭಾರತ ಸಾಕಷ್ಟು ಜಾಗೃತವಾಗಿರಬೇಕು. ಏಕೆಂದರೆ ಚೀನಾ ಕಡೆಯಿಂದ ಸಾಕಷ್ಟು ತೊಂದರೆಗಳು ಎದುರಾಗಲಿವೆ.
ಕಳೆದ ಜೂನ್ ತಿಂಗಳ ನಂತರದಲ್ಲಿ. ಚೀನೀ ಪಡೆಗಳು ಭಾರತದ ವಾಯುಯಾನ ಕ್ಷೇತ್ರವನ್ನು ಆಕ್ರಮಿಸತೊಡಗಿವೆ. ಡೋಕ್ಲಾಮ್ ಮತ್ತು ಗಾಲ್ವಾನ್ ಪ್ರಾಂತ್ಯದಲ್ಲಿ ಸಾಕಷ್ಟು ತೊಂದರೆಗಳನ್ನು ಚೀನಾ ನಮಗೆ ಒಡ್ಡಿದೆ. ಅದು ನಮ್ಮ ಕೆಲವು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು 1962 ರಿಂದಲೂ ಹವಣಿಸುತ್ತಲೇ ಇದೆ ಗಡಿಭಾಗದಲ್ಲಿರುವ ನಮ್ಮ ಸೈನಿಕರ ಶಕ್ತಿಯನ್ನು ನಾನು ಊಹಿಸಬ. ನಮ್ಮ ಜವಾನರು ಚೀನೀ ಯರನ್ನು ಮಣಿಸುವಷ್ಟು ಕ್ಷಮತೆ ಹೊಂದಿದ್ದಾರೆ. ಆದಾಗೂ ಯುದ್ಧ ಬೇಡ ಎಂಬ ನಿಲುವು ನನ್ನದು. ರಷ್ಯಾ ಮತ್ತು ಯುಕ್ರೇನ್ ನಡುವಣ ಯುದ್ಧದಿಂದ ಆಗಿರುವ ಹಾನಿಯನ್ನು ನಾವೆಲ್ಲ ಕಂಡಿದ್ದೇವೆ. ಯುದ್ಧ ದೇಶಗಳ ಶಕ್ತಿಯನ್ನು ಕುಂದಿಸುತ್ತದೆ. ದೇಶಗಳನ್ನು ದಿವಾಳಿಯೆಬ್ಬಿಸುತ್ತದೆ. ಹಾಗಾಗಿ ಯುದ್ಧಗ ಳನ್ನು ತಡೆಯುವುದೇ ಇಂದಿನ ಮುಖ್ಯ ಅಗತ್ಯ.