ಜಗತ್ತಿಗೆ ಬೀಳಲಿದೆ ಸಾಲದ ಬಾಂಬ್ !
ವಿತ್ತ ನೋಟ
ಜಿ.ಎಂ.ಇನಾಂದಾರ್‌
ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ಪಡುವಂಥದ್ದೇನೂ ಇಲ್ಲ. ವಿತ್ತೀಯ ಕೊರತೆ ಜಿಡಿಪಿಯ 6.8 % ಆಗಿದ್ದು ನಿಯಂತ್ರಣದಲ್ಲಿದೆ. ವಿದೇಶಿ ವಿನಿಮಯ ಸಂಗ್ರಹ 572.712 ಬಿಲಿಯನ್ ಡಾಲರ್ ಆಗಿದ್ದು ಒಂದು ವರ್ಷದ ಪೂರ್ತಿ ಆಮದನ್ನು ನಿಭಾಯಿಸುವ ಸ್ಥಿತಿಯಲ್ಲಿದೆ. ವಿದೇಶಿ ಹೂಡಿಕೆದಾರರು ಚೀನಾವನ್ನು ಬಿಟ್ಟು ಭಾರತದತ್ತ ಮುಖ ಮಾಡಿದ್ದಾರೆ.
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶದ ರಸ್ತೆಯೊಂದರ ಉದ್ಘಾ ಟನೆಯಲ್ಲಿ ಎಚ್ಚರಿಕೆಯೊಂದನ್ನು ನೀಡಿದರು. ರೇವಡಿ ಕಲ್ಚರ್‌ನಿಂದ ಅಪಾಯವಿದೆ ಎಂಬುದೇ ಆಗಿತ್ತು. ಹಾಗೆಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಸರಕಾರಗಳು ಉಚಿತ ಭಾಗ್ಯಗಳ ಬೆನ್ನು ಹತ್ತಿವೆ.
ಸರಕಾರದ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಹಂಚಿ ಅದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋಥರ ಎದ್ದು ಹೋಗುವುದು ಹಾಗೂ ಜನರಿಗಾಗಿ ತಾವೇನೋ ಮಹತ್ವದ್ದನ್ನು ಮಾಡಿದ್ದೇವೆ ಎಂದು ಪೋಸ್ ಕೊಟ್ಟು ವೋಟು ಕೇಳುವುದು. ಈ ರೀತಿಯ ಯೋಜನೆಗಳು ಜನರಿಗೆ ತಕ್ಷಣಕ್ಕೆ ಲಾಭ ದಾಯಕವೆನಿಸಿದರೂ ಅವುಗಳು ರಾಜ್ಯದ ಆರ್ಥಿಕತೆಯ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಬೀರುತ್ತದೆ.
ಕೆಲವೊಮ್ಮೆ ಈ ದುಷ್ಪರಿಣಾಮಗಳು ವ್ಯವಸ್ಥೆ ಕುಸಿದು ಬೀಳುವಂತೆ ಮಾಡುತ್ತವೆ. ಇದಕ್ಕೆ ನಮ್ಮ ನೆರೆಯ ಶ್ರೀಲಂಕಾ ಇದಕ್ಕೊಂದು ಜ್ವಲಂತ ಉದಾಹರಣೆ. ಈ ರೀತಿಯ ರಾಜಕೀಯ ಪ್ರೇರಿತ ನಿರ್ಧಾರಗಳಿಂದ ದೇಶದ ಕೆಲ ರಾಜ್ಯಗಳು ಆಗಲೆ ದುಸ್ಥಿತಿ ಯಲ್ಲಿವೆ. ಪಂಜಾಬ್, ಬಿಹಾರ್, ಪಶ್ಚಿಮಬಂಗಾಳ ಹಾಗೂ ಆಂಧ್ರ ಪ್ರದೇಶ್‌ಗಳೆಲ್ಲ ಪ್ರಪಾತದ ಅಂಚಿನಲ್ಲಿವೆ. ಸಾಲ ಮತ್ತು ಜಿಡಿಪಿ ಅನುಪಾತ: ಪಂಜಾಬ್ ೫೨%:, ಬಿಹಾರ್ ೩೮.೬೬:, ಪಶ್ಚಿಮ್ ಬಂಗಾಳ ೩೯.೦೦ : , ಆಂಧ್ರ ೩೮ :  ಈ ಅಂಕಿ-ಅಂಶಗಳು ಶ್ರೀಲಂಕಾದ ಆರ್ಥಿಕ ದುಸ್ಥಿತಿಯಷ್ಟೇ ಆಘಾತಕಾರಿಯಾಗಿವೆ.
3 ನೇ ಎಪ್ರಿಲ್‌ರಂದು ದೇಶದ ಹಿರಿಯ ಅಧಿಕಾರಿಗಳು ಈ ರಾಜ್ಯಗಳ ಜನಪ್ರಿಯತೆಗಾಗಿ ಖರ್ಚು ಮಾಡುವ ಕಾರ್ಯಕ್ರಮಗಳನ್ನು ನಿಯಂತ್ರಿಸದಿದ್ದರೆ ಈ ರಾಜ್ಯಗಳು ಆರ್ಥಿಕ ದುಸ್ಥಿತಿಯನ್ನು ತಲುಪಲಿವೆ ಎಂದು ಎಚ್ಚರಿಸಿದ್ದಾರೆ. ಫೆಬ್ರುವರಿ 15 ಅಂದರೆ, ರಷ್ಯಾ ಮತ್ತು ಯುಕ್ರೇನ್ ಯುದ್ಧದ 9 ದಿನಗಳ ಮುಂಚೆ, ಆಗ ವಲ್ಡ ಬ್ಯಾಂಕ್ ಒಂದು ಎಚ್ಚರಿಕೆಯನ್ನು ನೀಡಿತ್ತು. ಅದು ಅಭಿವೃದ್ಧಿ ಹೊಂದುತ್ತಿರುವ ಅನೇಕ ದೇಶಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿರುವ ಅಪಾಯದಲ್ಲಿವೆ ಎಂದು. ಜಗತ್ತಿನ 70 ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತು.
ಈ ಎಲ್ಲ ದೇಶಗಳು ಸುಮಾರು 11 ಬಿಲಿಯನ್ ಡಾಲರ್‌ನಷ್ಟು ಹಣ ಮರುಪಾವತಿ ಮಾಡಬೇಕಿದೆ. ಈ ಸಾಲದ ಹೊರೆ ಈ ದೇಶಗಳ ಆರ್ಥಿಕತೆಯನ್ನು ನಾಶಮಾಡಬಹುದಾಗಿದೆ. ಇದಾದ ಒಂಬತ್ತು ದಿನಗಳ ನಂತರ ರಷ್ಯಾ, ಯುಕ್ರೇನ್ ಮೇಲೆ ಯುದ್ಧ ಸಾರಿತು ಹಾಗೂ ಇಡೀ ವಿಶ್ವದ ಆರ್ಥಿಕತೆಯನ್ನು ಅಲುಗಾಡಿಸಬಲ್ಲ ಬೃಹತ್ ಆಘಾತ ದೊಂದಿಗೆ ಜಗತ್ತಿಗೆ ತೈಲ ಶಾಕ್ ನೀಡಿತು. ಇದರಿಂದ ಅನೇಕ ದೇಶಗಳ ಆರ್ಥಿಕತೆಯು ದಿವಾಳಿಯ ಅಂಚಿಗೆ ಬಂದು ನಿಂತಿದೆ.
ಮಾರ್ಚ್‌ನಲ್ಲಿ ವಿಶ್ವಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತು. ಇದರಲ್ಲಿ ಜಗತ್ತನ್ನು ಕಾಡುತ್ತಿರುವ ಮೂರು ಮುಖ್ಯ ಸಮಸ್ಯೆಗಳನ್ನು ಹೆಸರಿಸಿತ್ತು ಅದು ಏರುತ್ತಿರುವ ಆಹಾರದ ಬೆಲೆಗಳು, ಏರುತ್ತಿರುವ ಶಕ್ತಿಮೂಲಗಳ ಬೆಲೆಗಳು ಮತ್ತು ಆರ್ಥಿಕ ಬಿಕ್ಕಟ್ಟು. ವಿಶ್ವಸಂಸ್ಥೆ ಪ್ರಕಾರ ಜಗತ್ತಿನ 107 ದೇಶಗಳು ಈ ಸಮಸ್ಯೆಗಳಲ್ಲಿ ಒಂದನ್ನಾದರೂ ಎದುರಿಸುತ್ತಿವೆ. ಈ ದೇಶಗಳ ಒಟ್ಟು ಜನಸಂಖ್ಯೆ 1.7 ಬಿಲಿಯನ್ ಅಂದರೆ ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡ 20ರಷ್ಟು. ಒಟ್ಟು 69 ದೇಶಗಳು ಈ ಮೂರೂ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ 69 ದೇಶಗಳು ಶ್ರೀಲಂಕದಂತೆಯೇ ನಾಗರಿಕ ದಂಗೆಗೆ ತುತ್ತಾಗುವ ಹಾದಿಯಲ್ಲಿವೆ. ಆಫ್ರಿಕಾ ದಲ್ಲಿನ 25 ದೇಶಗಳು ಏಷ್ಯಾ ಪೆಸಿಫಿಕ್ ಭೂಭಾಗದ 25 ದೇಶಗಳು ಹಾಗೂ ೧೯ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳು ಈ ಪಟ್ಟಿಯ ಲ್ಲಿವೆ.
ಈಜಿಪ್ಟ್:ರಷ್ಯಾದಿಂದ ಅತಿ ಹೆಚ್ಚುಗೋಧಿಯನ್ನು ಆಮದು ಮಾಡುವ ರಾಷ್ಟ್ರವಾಗಿದ್ದು ರಷ್ಯಾ, ಯುಕ್ರೇನ್ ಯುದ್ಧದಿಂದಗೋಧಿಯನ್ನು ಆಮದು ಮಾಡಲಾಗದೆ ಆಹಾರ ಭದ್ರತೆಯು ಪ್ರಶ್ನಾರ್ಥಕ ಚಿಹ್ನೆಯಾಗಿ ಆ ದೇಶವನ್ನು ಕಾಡುತ್ತಿದೆ.
ಟ್ಯುನಿಶಿಯಾ:ಈ ದೇಶದ ಬಾಹ್ಯ ಸಾಲ ದೇಶದ ಜಿಡಿಪಿಯ 100% ದಾಟಿದ್ದು, ಈ ದೇಶದ ಟ್ರೇಡ್ ಡೆಫಿಸಿಟ್ (ಆಮದು ಮತ್ತು ರಫ್ತಿನ ವ್ಯತ್ಯಾಸ) 800 ಮಿಲಿಯನ್ ಡಾಲರ್ ದಾಟಿದೆ. ಹಣದುಬ್ಬರ ಮಿತಿ ಮೀರುತ್ತಿದ್ದು ತೈಲ ಬೆಲೆಗಳು ಗಗನಕ್ಕೇರಿವೆ. ಈ ದೇಶ ಕೂಡ ಶ್ರೀಲಂಕಾದಂತಹುದೇ ಪರಿಸ್ಥಿತಿಗೆ ತುತ್ತಾಗಲಿದೆ.
ಇದೇ ರೀತಿ ಲೆಬನಾನ್ ದೇಶದ ಪೌಂಡ್ ಮೌಲ್ಯ ಶೇಕಡಾ. 90% ಕುಸಿದಿದ್ದು ಆ ದೇಶದ ಸಾಲದ ಹೊರೆ ಲೆಬನಾನ್‌ನ ಆರ್ಥಿಕತೆಯ 360% ದಾಟಿದೆ. ಲೆಬನಾನ್ ಕೂಡಾ ರಷ್ಯಾದಿಂದಲೆಗೋಧಿಆಮದು ಮಾಡುತಿದ್ದು, ಇದೀಗ ಆಹಾರ ಧಾನ್ಯ ಹಾಗೂ ಖಾದ್ಯ ತೈಲಗಳ ಕೊರತೆಯನ್ನು ಅನುಭವಿಸುತ್ತಿದೆ. ಈ ದೇಶ೧೫೦ಮಿಲಿಯನ್ ಡಾಲರ್ ಸಾಲವನ್ನು ವರ್ಲ್ಡ್ ಬ್ಯಾಂಕ್‌ನಿಂದ ತೆಗೆಯ ಬೇಕಾಗಿದೆ.
ಅರ್ಜಿಂಟೈನಾ ಈಗಾಗಲೇ 9 ಬಾರಿ ತನ್ನ ಸಾಲ ಮರುಪಾವತಿಯಲ್ಲಿ ಸುಸ್ತಿದಾರನಾಗಿದ್ದು ತನ್ನ ಸಾಲವನ್ನು ಸರಳೀಕರಿಸಲು  ಗೆ 45 ಬಿಲಿಯನ್ ಡಾಲರ್ ಸಾಲವನ್ನು ಕೇಳಬೇಕಾದ ದುಸ್ಥಿತಿಯಲ್ಲಿದೆ.
ಇದೇ ರೀತಿ ಅನೇಕ ಲ್ಯಾಟಿನ್ ಅಮೆರಿಕದ ದೇಶಗಳು ಇದೇ ಹಾದಿ ಹಿಡಿಯಲಿವೆ. ಎಲ್ ಸಾಲ್ಪಡೋರ್, ಪೆರು ಮುಂತಾದದೇಶಗಳು ಆರ್ಥಿಕ ದುಸ್ಥಿತಿಯಲ್ಲಿವೆ. ಕಿನ್ಯಾದ ಸಾಲ 70 ಮಿಲಿಯನ್ ಡಾಲರ್ ಮುಟ್ಟಿದ್ದು ಅದರ ಜಿಡಿಪಿಯ 70% ತಲುಪಿದೆ .ಕಿನ್ಯಾ  ನಿಂದ೨೪೪ಮಿಲಿಯನ್ ಡಾಲರ್ ಸಾಲ ತೆಗೆದಿದ್ದು ತನ್ನ ಆರ್ಥಿಕತೆಯನ್ನು ಸುಧಾರಿಸಲು ಹರಸಾಹಸ ಪಡುತ್ತಿದೆ. ಟರ್ಕಿ ಕೂಡ ಇಂತಹುದೇ ದುಸ್ಥಿತಿಗೆ ತುತ್ತಾಗಿದ್ದು, ತುರ್ತಾಗಿ ಭಾರತದಿಂದ೫೦,೦೦೦ಟನ್ ಗೋಧಿ ಆಮದು ಮಾಡಿದೆ.
ವಿಶ್ವಸಂಸ್ಥೆಯ ಪ್ರಕಾರ ವಿಶ್ವದ ಅನೇಕ ದೇಶಗಳು ಮುಂದಿನ ವರ್ಷದೊಳಗೆ ತಮ್ಮ ಸಾಲದ ಮೇಲಿನ ಬಡ್ಡಿಯನ್ನು ಕೂಡಕಟ್ಟಲಾಗದ ಸ್ಥಿತಿ ತಲುಪಲಿವೆ. ಇಡೀ ವಿಶ್ವದ ಆರ್ಥಿಕತೆ ಈ ಸಾಲದ ಬಾಂಬ್‌ನಿಂದ ಸಂತ್ರಸ್ತವಾಗಲಿದೆ. ಇಂತಹ ಸಾಲದ ಸುನಾಮಿಯಿಂದ ಬಚಾವಾಗಲು ಆರ್ಥಿಕ ತಜ್ಞರು ಕೆಲ ಉಪಾಯಗಳನ್ನು ಸೂಚಿಸುತ್ತಿದ್ದಾರೆ. ಈ ಕ್ರಮಗಳನ್ನು ತುರ್ತಾಗಿ ಅನುಷ್ಠಾನ ಗೊಳಿಸುವ ಅವಶ್ಯಕತೆಯಿದ್ದು ಜಗತ್ತೆ ಇವುಗಳತ್ತ ಗಮನ ಹರಿಸಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಸಾಲ ಮತ್ತು ಅದರ ವಿತರಣೆಯನ್ನು ಹೆಚ್ಚು ಮುತುವರ್ಜಿಯಿಂದ ನಿಭಾಯಿಸಬೇಕಾದ ಅವಶ್ಯಕತೆ ಇದೆ. ಸಾಲ ನೀಡುವ ಸಂಸ್ಥೆಗಳು ಆ ದೇಶಗಳಿಗೆ ಸಾಲ ವಾಪಸಾತಿಗೆ ಹೆಚ್ಚು ಸಮಯ ನೀಡುವುದಲ್ಲದೆ ಅವು ದಿವಾಳಿಯಾಗದಂತೆ ಅವುಗಳ ತುರ್ತು ಮೂಲಭೂತ ಅಗತ್ಯಗಳ ಪೂರೈಕೆಗೆ ಕ್ರಮಗಳನ್ನು ನಿರೂಪಿಸುವುದು. ಇಂತಹ ಕ್ರಮಗಳಲ್ಲಿ ತಕ್ಷಣ ಸಾಲ ವಾಪಸಾತಿಗೆ ಕೆಲ ಕಾಲ ನಿಲುಗಡೆ ನೀಡುವುದು.
ಇಂತಹ ದೇಶಗಳು ತಮ್ಮ ಅಳವಿನಲ್ಲಿ ಇಲ್ಲದ ಸಂಗತಿಗಳಿಂದ (ರಷ್ಯಾ, ಯುಕ್ರೇನ್ ಯುದ್ಧ) ತ್ರಸ್ತವಾಗದಂತೆ ಯೋಜನೆಗಳನ್ನು ರೂಪಿಸುವುದು. ಇಂತಹ ದೇಶಗಳ ಮರುಪಾವತಿ ಮಾಡಲಾಗದ ಬೃಹತ್ ಸಾಲಗಳನ್ನು, ಅವುಗಳ ಸಾಲ ಮರುಪಾವತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡುವುದು. ಎಲ್ಲ ದೇಶಗಳು ಸಾಲ ನೀಡುವಿಕೆಯನ್ನು ಒಂದು ಸಾಮಾನ್ಯ ಶಿಸ್ತಿಗೆ ಒಳಪಡಿಸುವುದು. ಉದಾಹರಣೆಗೆ ಜಿ20 ರಾಷ್ಟ್ರಗಳು -ಮ್‌ವರ್ಕ್. ಈ ಸೌಲಭ್ಯ ವಿಶ್ವದ ಕೇವಲ 73 ರಾಷ್ಟ್ರಗಳಿಗೆ ಅನ್ವಯಿಸು ತ್ತಿದ್ದು ಇದನ್ನು ಅನೇಕ ಬಡ ರಾಷ್ಟ್ರಗಳಿಗೆ ವಿಸ್ತರಿಸುವುದು.
ಸಾಲದ ಬದಲು ಬಡ ರಾಷ್ಟ್ರಗಳು ತಮ್ಮ ದೇಶದಲ್ಲಿಯೇ ತೆರಿಗೆ ಸಂಗ್ರಹದ ಸುಧಾರಣೆ ಹಾಗೂ ದಕ್ಷತೆ () ಹೆಚ್ಚಿಸುವ ಮೂಲಕ ಸ್ವಾವಲಂಬನೆಯತ್ತ ದಾರಿ ಮಾಡುವುದು. ಸಾಲ ನೀಡಿಕೆಯಲ್ಲಿ ಪಾರದರ್ಶಕತೆ ಹಾಗೂ ಅದರ ಉಪಯೋಗದಲ್ಲಿ ಉತ್ತರದಾಯಿತ್ವವನ್ನು ಹೆಚ್ಚಿಸುವುದು. ಚೀನಾ ನೀಡುವ ಸಾಲಗಳಲ್ಲಿ ಪಾರದರ್ಶಕತೆ ಅತೀ ಕಡಿಮೆ, ಹಾಗೂ ಅದು ದೇಶದ ವಿದೇಶ ನೀತಿಯನ್ನೇ ಬದಲು ಮಾಡುವ ಹುನ್ನಾರದಿಂದ ಕೂಡಿರುವ ಸಾಧ್ಯತೆಯಿರುತ್ತದೆ.
ಉದಾಹರಣೆಗೆ ಶ್ರೀಲಂಕಾ ಸಾಲದ ಬದಲಾಗಿ ಅದರ ಒಂದು ಬಂದರನ್ನೆ ಚೀನಾ ವಶಪಡಿಸಿಕೊಂಡಿದ್ದು ಜ್ವಲಂತ ಉದಾಹರಣೆ ಯಾಗಿದೆ. ದೇಶಗಳು ಸಾಲದ ಸುಳಿಯಲ್ಲಿ ಸಿಲುಕದಂತೆ ( ) ಒಂದು ಚೌಕಟ್ಟಿನ ನಿರ್ಮಾಣ. ಜಗತ್ತು ಇದುವರೆಗೆ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಆದರೆ ನಾವೆಲ್ಲ ಒಂದೇ ಜಗತ್ತಿನಲ್ಲಿದ್ದು ಒಂದು ಕಡೆಯ ಆಪತ್ತು ಎಲ್ಲರನ್ನೂ ಬಾಧಿಸುವ ಸ್ಥಿತಿ ಯಲ್ಲಿದ್ದೇವೆ. (ಉದಾ: ಕರೋನಾ) ತುರ್ತಾಗಿ ವಿಶ್ವದ ಸಂಪದ್ಭರಿತ ರಾಷ್ಟ್ರಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವುದು ಇಂದಿನ ಅವಶ್ಯಕತೆ ಯಾಗಿದ್ದು, ನಿರ್ಲಕ್ಷ ನಮ್ಮೆಲ್ಲರನ್ನು ಬಾಧಿಸುವ ತುರ್ತು ಪರಿಸ್ಥಿತಿಯತ್ತ ದೂಡಲಿದೆ.
ಇನ್ನು ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ಪಡುವಂಥದ್ದೇನೂ ಇಲ್ಲ. ವಿತ್ತೀಯ ಕೊರತೆ ಜಿಡಿಪಿಯ 6.8 % ಆಗಿದ್ದುನಿಯಂತ್ರಣದಲ್ಲಿದೆ. ವಿದೇಶಿ ವಿನಿಮಯ ಸಂಗ್ರಹ 572.712 ಬಿಲಿಯನ್ ಡಾಲರ್ ಆಗಿದ್ದು ಒಂದು ವರ್ಷದ ಪೂರ್ತಿ ಆಮದನ್ನು ನಿಭಾಯಿಸುವ ಸ್ಥಿತಿಯಲ್ಲಿದೆ. ವಿದೇಶಿ ಹೂಡಿಕೆದಾರರು ಚೀನಾವನ್ನು ಬಿಟ್ಟು ಭಾರತದತ್ತ ಮುಖ ಮಾಡಿದ್ದಾರೆ. ಭಾರತದ ಜಿಡಿಪಿ ಅಭಿವೃದ್ಧಿ ದರ 8.2 % ಆಗಿದೆ. ರಾಜಕೀಯ ಸ್ಥಿರತೆಯಿಂದ ಭಾರತ ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳುವಲ್ಲಿ ಸಮರ್ಥ ವಾಗಿದೆ.
ಅಮೆರಿಕದ ಡಾಲರ್ ಎದುರು ರುಪಾಯಿ ಕುಸಿಯುತ್ತಿರುವಂತೆ ಕಂಡರೂ ಇತರ ದೇಶಗಳ ಕರೆನ್ಸಿಗಳ ಎದುರು ರುಪಾಯಿ ಬಲಿಷ್ಠವಾಗಿದೆ. ಈಗ ಜಪಾನಿ ಯೆನ್ 2021ರಲ್ಲಿ 0.70? ನಿಂದ 0.58? ಬಂದಿದೆ, ಹಾಗೂ ಬ್ರಿಟಿಷ್ ಪೌಂಡ್ 101? ಯಿಂದ 94? ಗೆ ಬಂದಿದೆ. ಯುರೋ 87? ಯಿಂದ 80? ಗೆ ಬಂದಿದೆ. ಫ್ರೆಂಚ್ ಪ್ರ್ಯಾಂಕ್ 13.60 ? ಯಿಂದ 12.20? ಬಂದಿದೆ. ಇನ್ನೂ ಅನೇಕ ದೇಶಗಳ ಕರೆನ್ಸಿಗಳ ಎದುರು ರುಪಾಯಿ ಬಲಿಷ್ಟವಾಗುತ್ತಿದೆ.
ಅಮೆರಿಕದಲ್ಲಿ ಹಣದುಬ್ಬರ ಜಾಸ್ತಿ ಇರುವುದರಿಂದ ಅಲ್ಲಿನ ಸರಕಾರವು ಡಿಪಾಸಿಟ್‌ಗಳ ಮೇಲೆ ಬಡ್ಡಿದರ ಜಾಸ್ತಿ ಮಾಡಲುಮುಂದಾಗಿದ್ದು ವಿದೇಶಿ ಹೂಡಿಕೆದಾರರು ಅಮೆರಿಕ ದತ್ತ ಮುಖ ಮಾಡಿದ್ದಾರೆ. ಆದರೆ ಭಾರತದ ಆರ್ಥಿಕತೆಯು ಅಂತಹ ತಾತ್ಕಾಲಿಕ ಏರಿಳಿತಗಳನ್ನು ತಡೆದುಕೊಳ್ಳಲು ಸಮರ್ಥವಾಗಿದೆ.
(ಲೇಖಕರು: ಮಾಜಿ ಸಚಿವ ದಿ.ಅನಂತಕುಮಾರ್‌ರವರ,ಮಾಜಿ ಕರ್ತವ್ಯಾಧಿಕಾರಿ)