ವೈಚಾರಿಕತೆ ಹೆಸರಲ್ಲಿ ಬೆತ್ತಲಾಗುತ್ತಿರುವವರು !
ಪ್ರಸ್ತುತ
ವಿನಯ್‌ ಖಾನ್
vinaykhan078@.
ಪಾಂಡಿತ್ಯವನ್ನು ಹೊಂದಿದವರಿಗೆ ಜನರ ಭಾವನೆಗಳ ಬಗ್ಗೆ ಗೊತ್ತೇ ಆಗಲಿಲ್ಲವೇ? ರಾಷ್ಟ್ರ, ನಾಡಿನ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿದಿರಲ್ಲಿವೇ? ಹೌದು, ರಾಷ್ಟ್ರಗೀತೆಗೆ ಎದ್ದು ಗೌರವ ಕೊಡಲಿಲ್ಲವೆಂದರೆ ಅದಕ್ಕೆ ಶಿಕ್ಷೆ ಇದೆ, ಆದರೆ ಅದನ್ನು ವಿರೂಪಗೊಳಿಸಿದ್ದಕ್ಕೆ ಏನೂ ಶಿಕ್ಷೆಯೇ ಇಲ್ಲವಾ?
ಜನಗಣ ಮನ ಜಢಭಾರತ ಜಯಹೇಬಡವರ ಬಾಳಿನ ಭೂತನಂಜುಳ್ಳ ಸಿಂಧು ಸವಿಮಾತ ಸಪೋಟವೈಭವ ಉತ್ಕಟ ಮಂಗಸತ್ಯ ಸಮಾನತೆ ಹಾದರ ಗಂಗಾಕಚ್ಚೆಯ ಬಿಚ್ಚಿದರೆಂಗಇದು ಪಠ್ಯ ಪುಸ್ತಕ ಸಮಿತಿ ಅಧ ಕ್ಷ ಆಗಿದ್ದ ಬರಗೂರುರಾಮಚಂದ್ರಪ್ಪ ಬರೆದ ‘ಭರತನಗರಿ’ ಎನ್ನುವಕಾದಂಬರಿಯಲ್ಲಿ ಇರುವ ಪದ್ಯ(?)***ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ಮಾತೆ..ಜೈ ಸುಂದರ ಮಟನ್ ಅಂಗ್ಡಿಗಳ ‘ಸಾಲೇ’ಜಯಹೇ ಎಣ್ಣೆ ಕುಡುಕರ ಬೀಡೇ..ಸೇಂದಿ ಸರಾಯಿಯೇ ತುಂಗಾಕಾವೇರಿದೆ ತಲೆ ತುಂಬಾ..ತೈಲ’ವ ಸೇವಿಪ ಜನಗಳ ಜಾಡೇಕುಡ್ಯಣ ತಿನ್ನಣ ನೆಚ್ಚಿನ ಬೀಡೇ..ಚೈತನ್ಯ ರಹಿತ ಅತಿ ಅವಿವೇಕಿಯಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ಮಾತೆಇದು ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಮಗೆ ವಾಟ್ಸ್‌ಆಪ್(?)ನಲ್ಲಿ ಬಂದಿದ್ದು ಅಂತ ಹೇಳಿ ಫೇಸ್ಬುಕ್‌ ನಲ್ಲಿ ಹರಿಬಿಟ್ಟಿದ್ದು. ಈವೆರಡೂ ಪದ್ಯ ಯಾವೋದೋ ಪೋಲಿ ಪದ್ಯ ಅಥವಾ ಸಿನಿಮಾ ಹಾಡಿನ ಸಾಲುಗಳಲ್ಲ. ಮೊದಲ ನೆಯದ್ದು ಕವಿ ರವೀಂದ್ರರು ಬರೆದ ನಮ್ಮ ರಾಷ್ಟ್ರಗೀತೆಯ ಸಾಲುಗಳು, ಎರಡನೆಯದ್ದು ರಾಷ್ಟ್ರಕವಿ ಕುವೆಂಪು ಅವರು ಬರೆದ ನಮ್ಮ ನಾಡಗೀತೆ ಸಾಲುಗಳು.
ಹಾಗೆಂದು ಇವುಗಳನ್ನು ಬದಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದೂ ಕೆಲಸ ಇಲ್ಲದ ಕೂತ ಪೋಲಿಗಳಲ್ಲ. ತಮ್ಮನ್ನೇ ತಾವು ಭಾರಿ ಬುದ್ಧಿವಂತರು ಎಂದು ಬಿಂಬಿಸಿಕೊಂಡು ಶಾಲಾ ಮಕ್ಕಳು ಓದುವ ಪುಸ್ತಕ ರಚನೆ ಮಾಡುವ ಪ್ರಮುಖರು(?). ತಿರುಚಿದ ನಾಡಗೀತೆಯನ್ನು ರೋಹಿತ್ ಚಕ್ರತೀರ್ಥ ವರ್ಷಗಳ ಹಿಂದೆ ತಮ್ಮ ಫೇಸ್‌ಬುಕ್‌ನಲ್ಲಿ ಹಾಕಿದ್ದರೆ, ಬರಗೂರರು ತಮ್ಮ ಕಾದಂಬರಿಯಲ್ಲಿ ತಾವೇ ಬರೆದಿದ್ದು! ಯಾರು ಯಾರನ್ನಾದರೂ ವಿರೋಧ ಮಾಡಬಹುದು, ಟೀಕಿಸಬಹುದು.
ಅದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯ. ಮಿಕ್ಕಿದ್ದನ್ನು ಟೀಕಿಸಿಕೊಂಡವರು ನೋಡಿಕೊಳ್ಳಲಿ. ಆದರಿದು ಹಾಗಲ್ಲ, ನಾಡ-ರಾಷ್ಟ್ರಗೀತೆಯ ಸಾಲುಗಳು. ದೇಶದ ಅಸ್ಮಿತೆಯ ಪ್ರತೀಕವನ್ನೇ ತಿರುಚುವುದು ಎಂದರೆ? ತಮ್ಮದೇ ಆದ ಹೊಸ ಸಾಲು ಗಳನ್ನು ಬರೆಯಲಾಗದ ಬೌದ್ಧಿಕ ದಿವಾಳಿತನಕ್ಕೆ ಹೋಗಿಬಿಟ್ಟರಾ ಇವರುಗಳು? ಸಾರ್ವಕಾಲಿಕ ಶ್ರೇಷ್ಠ ಕವಿಗಳು ಬರೆದ ಸಾಲುಗಳನ್ನು ತಮಗೆ ಬೇಕಾದಂತೆ ಬದಲಿಸಿ, ಅದನ್ನು ಅರ್ಥಹೀನ ಮಾಡಿ, ತಮ್ಮ ವೈಚಾರಿಕ ನಪುಂಸಕತೆಯನ್ನು ತೋರಿಸುವುದು ಇತ್ತೀಚಿಗೆ ಭಾರೀ ಟ್ರೆಂಡ್ ಆಗಿದೆ.
ಇಂಥವರು ವೇದಗಳ ಸಾಲುಗಳನ್ನೂ ಬಿಟ್ಟಿಲ್ಲ. ಬಸವಣ್ಣ, ಸರ್ವಜ್ಞರಂಥ ಸಮಾಜ ಸುಧಾರಕರ ವಚನಗಳನ್ನೂ ಬಿಟ್ಟಿಲ್ಲ. ಕುವೆಂಪು, ಬೇಂದ್ರೆ, ಠಾಗೋರ್, ಬಂಕಿಮ ಚಂದ್ರ ಚಟರ್ಜಿ ಅಂಥವರ ಸಾಹಿತ್ಯವನ್ನೂ ಬಿಟ್ಟಿಲ್ಲ. ಇದು ಕೇವಲ ವೈಚಾರಿಕ ವಾಗಿ ವಿರೋಧವೂ ಆಗಿ, ಹಾಸ್ಯವನ್ನೂ ಮಾಡುವಂಥ ಹೀನಾಯ ಮಟ್ಟಕ್ಕೆ ಇಳಿದಿದೆ.
ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷಗಿರಿ ಕೊಟ್ಟಾಗ ಇವರಿಬ್ಬರೂ ಮಹಾನ್ ಪಂಡಿತರಂತೆ, ಮೇಧಾವಿಗಳಂತೆ ಪತ್ರಿಕೆಮಾತ್ತು ಮೀಡಿಯಾದವರ ಮುಂದೆ ಬಂಬಡಾ ಬಡಿದುಕೊಳ್ಳುತ್ತಿದ್ದವರಿಗೆ ನಾಡಗೀತೆ ಮತ್ತು ರಾಷ್ಟ್ರಗೀತೆಗೆ ಜನರಮನಸ್ಸಿನಲ್ಲಿ ಬೇರೆಯದೇ ಸ್ಥಾನವಿದೆ ಎನ್ನುವ ಕಿಂಚಿತ್ ಯೋಚನೆಯೂ ಬರಲಿಲ್ಲವೇ. ಅವುಗಳ ಅರ್ಥ, ಸೌಂದರ್ಯವನ್ನು ಬದಲಿಸಿದ್ದಷ್ಟಕ್ಕೆ ತಾವೇನೋ ಮಹಾನ್ ಚಿಂತಕರು, ಕ್ರಾಂತಿಕಾರಿಗಳು ಎನಿಸಿಕೊಂಡು ಬಿಡುತ್ತಾರೆಯೇ? ಬರಗೂರು ಇದನ್ನು ತಮ್ಮ ‘ಭರತನಗರಿ’ ಕಾದಂಬರಿಯಲ್ಲಿ ಬರೆದು, ಯಾರೋ ಅದಕ್ಕೆ ವಿಶ್ಲೇಷಣೆಯನ್ನೂ ಕೊಟ್ಟ ಮೇಲೆ ಓದುಗರೊಬ್ಬರು ಇದರ ವಿರುದ್ಧ ಪ್ರಶ್ನೆ ಎತ್ತಿದ್ದಾರೆ.
ಮತ್ತೆ ಇದೇನು ಬರಗೂರು ಮಾಡಿದ ಮೊದಲ ಅಪಸವ್ಯವೇನೂ ಅಲ್ಲ. ಇದಕ್ಕೂ ಮೊದಲು ಸೈನಿಕರು ಗಡಿಗಳಲ್ಲಿ ಅತ್ಯಾಚಾರವನ್ನು ಮಾಡುತ್ತಾರೆ ಅಂತ ಬರೆದ ಕತೆಯನ್ನು ಮಂಗಳೂರು ವಿವಿ ಪಠ್ಯಕ್ಕೂ ಸೇರಿಸಿತ್ತು. ವಿಪರ್ಯಾಸ ಅಂದರೆ, ಇವರುಗಳೆಲ್ಲ ಆಯ್ಕೆಮಾಡಿದ್ದ ವಿಷಯವನ್ನೇ ಶಾಲಾ ಮಕ್ಕಳು ಓದಬೇಕಾಗಿದ್ದು! ಇಂಥವರನ್ನು ಜನ ಮೆಚ್ಚುವ ಸಾಹಿತಿ(?) ಗಳಾಗಿ ಸೀಕರಿಸಿದ್ದು.
ಹಾಗೆಯೇ, ೨೦೧೭ರಲ್ಲಿ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ವಾಲ್ ಮೇಲೆ ಹರಿಬಿಟ್ಟಿದ್ದಂತಹ ತಿರುಚಿದ್ದ ನಾಡಗೀತೆಯ ವಿಚಾರವೂ ಸಮ್ಮತವೇನಲ್ಲ. ಅಷ್ಟೂ ಸಾಲದೆಂಬಂತೆ ಅದನ್ನು ಸಂಭ್ರಮಿಸುವ ಹಾಗೆಯೂ ಅವರು ಬರೆದುಕೊಂಡಿದ್ದರು ಸಹ. ಅದರ ಕೆಳಗೆ ಒಂದು ಕ್ಯಾಪ್ಷನ್ ‘ಇದು ವಾಟ್ಸ್ ಆಪ್‌ನಲ್ಲಿ ಬಂದಿದ್ದು, ಇದರ ಮೂಲಕವಿಗಳು ಇದ್ದರೆ ಮುಂದೆ ಬನ್ನಿ. ಬುರ್ಜ್ ಖಲೀ- ಕೊಡ್ತೀನಿ’ ಇದೂ ಮೊನ್ನೆ ಮೊನ್ನೆವರೆಗೂ ಯಾರಿಗೂ ಗೊತ್ತಿರಲಿಲ್ಲ. ಇದೂ ಬೆಳಕಿಗೆ ಬಂದಿದ್ದು ಪಠ್ಯಪುಸ್ತಕದ ಕಾಂಟ್ರವರ್ಸಿಗಳು ಶುರುವಾದ ಮೇಲೆ. ಅಲ್ಲ, ಇಂಥದನ್ನೆಲ್ಲ ಹರಿಬಿಡುತ್ತಾರಲ್ಲ.
ಆಗ ತಮ್ಮ ಬುದ್ಧಿಯನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಿಬಂದಿದ್ದರಾ? ಇತಿಹಾಸವನ್ನು ಬಲ್ಲವರು, ಪಾಂಡಿತ್ಯವನ್ನು ಹೊಂದಿದವರಿಗೆ ಜನರ ಭಾವನೆಗಳ ಬಗ್ಗೆ ಗೊತ್ತೇ ಆಗಲಿಲ್ಲವೇ? ರಾಷ್ಟ್ರ, ನಾಡಿನ ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿ ದಿರಲ್ಲಿವೇ? ಹೌದು, ರಾಷ್ಟ್ರಗೀತೆಗೆ ಎದ್ದು ಗೌರವ ಕೊಡಲಿಲ್ಲವೆಂದರೆ ಅದಕ್ಕೆ ಶಿಕ್ಷೆ ಇದೆ, ಆದರೆ ಅದನ್ನು ಈ ರೀತಿ ವಿರೂಪಗೊಳಿಸಿದ್ದಕ್ಕೆ ಏನೂ ಶಿಕ್ಷೆಯೇ ಇಲ್ಲವಾ? ಬರೀ ಇದಷ್ಟೇ ಅಲ್ಲ, ಕಾಮಿಡಿ ಶೋಗಳ ಹೆಸರಲ್ಲಿಯೂ ಇದೇ ಥರದ ಉಪದ್ವ್ಯಾಪಿ ಕೆಲಸಗಳನ್ನು ನೋಡಿದ್ದೀವಿ.
‘ಭಾಗ್ಯದ ಲಕ್ಷ್ಮೀ ಬಾರಮ್ಮ..’ ಹಾಡಿಗೆ ಬೇರೇನೋ ಶಬ್ದಗಳನ್ನು ಸೇರಿಸಿ ಅದಕ್ಕೆ ಬೇರೆಯದ್ದೇ ಅರ್ಥವನ್ನು ಕೊಟ್ಟು,ಸರ್ವಜ್ಞರ ವಚನಗಳಿಗೆ ತಮ್ಮದೇ ಆದ ಗಲೀಜು ಪದಗಳನ್ನು ಸೇರಿಸಿ, ಬಸವಣ್ಣ, ಅಕ್ಕಮಹಾದೇವಿ ಇನ್ನೂ ಹಲವರವಚಗಳಿಗೆ ಬೇರೆ ಅರ್ಥವನ್ನೇ ಕೊಡುವ ಹಾಗೆ ಬದಲಿಸಿ, ವೇದ, ಪುರಾಣಗಳ ಕತೆಯನ್ನೂ ಬದಲಿಸಿ ತಮ್ಮ ತೀಟೆ ತೀರಿಸಿ ಕೊಳ್ಳುವವರಿಗೆ ಯಾವುದೇ ಶಿಕ್ಷೆಗಳೂ ಇಲ್ಲ. ಮೊನ್ನೆ ಮೊನ್ನೆ ತಾನೇ ಕಾಳಿ ಮಾತೆಗೆ ಮಾಡಿದ ಅಪಮಾನ, ನೂಪುರ್ಶರ್ಮಾರ ಮಾತಿಗೆ ಆದ ಕಾಂಟ್ರವರ್ಸಿಯನ್ನೂ ನೋಡಿದ್ದೇವೆ.
ಇಂಥದ್ದೆಲ್ಲ ನೋಡಿದ ಮೇಲೆ ಅಮೂಲ್ಯ ವಿಚಾರಗಳನ್ನು ವಿಕೃತಗೊಳಿಸುತ್ತಿರುವವರು ವೈಚಾರಿಕವಾಗಿ, ಮಾನಸಿಕವಾಗಿ ಬೆತ್ತಲಾಗುತ್ತಿದ್ದಾರಲ್ಲ ಎನಿಸದಿರದು! ರಾಹುಲ್‌ಗಾಂಧಿ ರಾಜ್ಯಕ್ಕೆ ಬಂದಾಗ, ‘ಇವನಾರವ ಇವನಾರವ’ ವಚನವನ್ನು ಹೇಳಲು ಹೋಗಿ ಇವನರ್ವಾ ಇವನರ್ವಾ ಎಂದು ವಿಕೃತಿಗೊಳಿಸಿದ್ದು, ನಾಡಗೀತೆಯನ್ನು ಅಪಸ್ವರದಲ್ಲಿ ಹಾಡಿದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅಂಥವರು, ವಂದೇ ಮಾತರಂ ಹಾಡಲಿಕ್ಕೆ ಬರದ ಅನೇಕ ನಾಯಕರು(?) ನಮ್ಮ ನಡುವಿದ್ದಾರೆ. ಕೊನೆಪಕ್ಷ ರಾಷ್ಟ್ರಗೀತೆ, ನಾಡಗೀತೆಯೇ ಗೊತ್ತಿಲ್ಲದೇ ಇರುವವರೂ ದೊಡ್ಡ ದೊಡ್ಡ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ ದ್ದಾರೆ.
ರಾಷ್ಟ್ರಭಕ್ತಿ, ಸ್ವಾತಂತ್ರ್ಯ, ದೇಶಾಭಿಮಾನ, ರಾಷ್ಟ್ರ ಲಾಂಛನಗಳು, ರಾಷ್ಟ್ರ ಧ್ವಜ, ಸ್ವಾತಂತ್ರ್ಯ ಹೋರಾಟಗಾರರು… ಹೀಗೆ ಎಲ್ಲವೂ ಇವರಿಗೆ ರಾಜಕೀಯ ಲಾಭದ ಲೆಕ್ಕಾಚಾರದ ವಸ್ತು-ವಿಷಯಗಳು. ಅದಕ್ಕಾಗಿಯೇ ಸರಕಾರದ ಜಾಹೀರಾತಿನಲ್ಲಿ ನೆಹರು ಕಣ್ಮರೆಯಾಗುತ್ತಾರೆ, ಇನ್ನೆಲ್ಲೋ ಸಾವರ್ಕರ್ ಬ್ಯಾನರ್ ಅನ್ನು ಹರಿದುಹಾಕುತ್ತಾರೆ. ಗಾಂಧಿ, ನೆಹರು, ಸಾವರ್ಕರ್, ಹೆಡಗೇವಾರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರೂ ಇಂಥವರ ಟೀಕೆಗೆ, ನಿಂದನೆಗೆ ವಸ್ತುವಾಗುತ್ತಾರೆ. ಕೊನೆಗೆ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳನ್ನೂ ಇಂಥವರ ಕನಿಷ್ಠ ಪದಬಳಕೆಗೆ ಸಿಲುಕುತ್ತಾರೆ.
ಒಪ್ಪೋಣ ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ, ಆದರೆ, ಹುದ್ದೆ, ಅವರು ನೀಡಿದ ಕೊಡುಗೆ, ಸ್ಥಾನಮಾನಗಳ ಪರಿವೆಯಾದರೂ ಬೇಡವೇ? ಕನಿಷ್ಠ ಮರ್ಯಾದೆಯನ್ನೂ ನೀಡದೇ ನಿಂದಿಸುವ ಮಟ್ಟಕ್ಕಿಳಿಯುವುದು ಯಾವ ಸೀಮೆ ವಿರೋಧ? ಯಾರನ್ನೋ ವಿರೋಧ ಮಾಡುವುದಕ್ಕಾಗಿ, ಇನ್ನಾರನ್ನೋ ಮೆಚ್ಚಿಸಲೋಸುಗ ಇಂಥ ಹೀನ ಸಂಸ್ಕೃತಿ ತೋರು ವುದು ಯಾರಿಗೆ ಶೋಭೆ ತಂದಿತು? ದೇಶದ ಕಾನೂನಿನಲ್ಲಿ ಕೆಲವು ಮಾರ್ಪಾಡುಗಳಾಗಬೇಕಿವೆ.
ಇದ್ದ ಹಳೆಯ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ದೇಶದ ಧ್ವಜಕ್ಕೆ ಅಪಮಾನ ಮಾಡುವುದು, ರಾಷ್ಟ್ರಗೀತೆಗೆ ಅಪಮಾನ ಮಾಡುವುದು, ರಾಷ್ಟ್ರ ಪುರುಷರಿಗೆ ಅಪಮಾನ ಮಾಡುವಂತಹ ಕೆಲಸಗಳು ನಿಲ್ಲಬೇಕಾಗಿವೆ. ಅಥವಾಅಂಥವುಗಳನ್ನು ನಿಲ್ಲಿಸಲು ಪ್ರಬಲ ಕಾನೂನನ್ನಾದರೂ ರೂಪಿಸಬೇಕಿದೆ. ಹಾಸ್ಯಕ್ಕಾಗಿಯೋ, ಯಾರನ್ನೋ ವಿರೋಧಿಸುವು ದಕ್ಕಾಗಿಯೋ ಮಾಡುವ ಈ ಕೆಲಸಗಳಿಂದ ಕೆಲವರಿಗೆ ಖುಷಿಯೇನೋ ಆಗಬಹುದು. ಆದರೆ ಇದು ವೈಚಾರಿಕವಾಗಿ ಬೆತ್ತಲು ಮಾಡುತ್ತದೆ, ಅಷ್ಟೇ!