ಗುಜರಾತಿನಲ್ಲಿ ಮತ್ತೆ ಕೇಸರಿ ಪಕ್ಷದ ಅಧಿಪತ್ಯವೇ ?
ವಿಶ್ಲೇಷಣೆ
ಡಾ.ಸತೀಶ್ ಕೆ.ಪಾಟೀಲ್‌
ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ ಗುಜರಾತ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಸತತವಾಗಿ1995ರಿಂದ ಅಂದರೆ 27 ವರ್ಷಗಳಿಂದ ಅಽಕಾರದಲ್ಲಿರುವ ಬಿಜೆಪಿ ಮರಳಿ ಈ ರಾಜ್ಯದಲ್ಲಿ ಮತ್ತೆಅಧಿಕಾರಕ್ಕೆಬರುವಹುಮ್ಮಸ್ಸಿನಲ್ಲಿ ಇದೆ. ಕಳೆದ ಸಲ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್, ಈ ಸಲ ಈ ರಾಜ್ಯದಲ್ಲಿಅಧಿಕಾರಪಡೆಯಬೇಕು ಎನ್ನುವಉಮೇದಿನಲ್ಲಿ ಇದೆ.
ಹಿಂದಿನ ಚುನಾವಣೆಯಲ್ಲಿ 2017ರಲ್ಲಿ ಬಿಜೆಪಿ ಒಟ್ಟು 1182 ಸ್ಥಾನ ಹೊಂದಿರುವ ಗುಜರಾತಿನಲ್ಲಿ 99 ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿತ್ತು. ಪ್ರತಿ ಪಕ್ಷ ಕಾಂಗ್ರೆಸ್ 77 ಸ್ಥಾನ ಗಳನ್ನು ಪಡೆದಿತ್ತು. ಅಂದರೆ 2012ರಲ್ಲಿ 115 ಸ್ಥಾನಗಳಿಸಿದ್ದು ಬಿಜೆಪಿ 16 ಸ್ಥಾನ ಗಳನ್ನು ಕಡಿಮೆ ಪಡೆದರೆ ಕಾಂಗ್ರೆಸ್ 16ಸ್ಥಾನಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ತೀವ್ರ ಪೈಪೋಟಿ ನೀಡಿತ್ತು.
ಕಳೆದ ಸಲ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆಯಲು ಕಾರಣವೇನೆಂದರೆ, ಜಿಎಸ್‌ಟಿ, ನೋಟ್ ರದ್ದತಿ, ಪಟೇಲ( ಪಾಟಿದಾರ್) ಸಮುದಾಯದ ಅಸಮಾಧಾನ, ಊನಾ ಘಟನೆ, ಆಡಳಿತ ವಿರೋಧಿಅಲೆ, ಗುಜರಾತಿನ ಗ್ರಾಮೀಣ ಪ್ರದೇಶದ ಜನ ಕೈ ಬಿಟ್ಟಿದ್ದು, ಚುನಾ ವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಬಳಸಿದ ‘ನೀಚ ’ ಪದ ಗುಜರಾತ್ ಜನರನ್ನು ಭಾವನಾತ್ಮಕವಾಗಿ ಸೆಳೆದಿದ್ದು ಮತ್ತು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಆಡಳಿತ ವೈಫಲ್ಯ ಮುಂತಾದ ಕಾರಣಗಳಿಂದ ಬಿಜೆಪಿ ಪಕ್ಷದ ಭರ್ಜರಿ ಜಯಕ್ಕೆ ಅಡತಡೆ ಉಂಟು ಮಾಡಿದ್ದವು.
ಕೊನೆಯ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ಮಾಡಿದ ತರುವಾಯ ಬಿಜೆಪಿಯು ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಿಸಿ ಸ್ವಲ್ಪದರಲ್ಲಿಯೇ ಅಧಿಕಾರ ಉಳಿಸಿಕೊಂಡಿತ್ತು. ಅದಕ್ಕೆ ಹಿಂದುತ್ವದ ಅಜೆಂಡಾ ಅಧಿಕಾರ ಉಳಿಸಿಕೊಟ್ಟಿತ್ತು. ಆದರೆ ಸದ್ಯದ ಪರಿಸ್ಥಿತಿ ತೀರ ಭಿನ್ನವಾಗಿದೆ. ಕಳೆದ ಸಲದ ಚುನಾವಣಾ ಫಲಿತಾಂಶದಿಂದ ಸಾಕಷ್ಟು ಪಾಠ ಕಲಿತಿರುವ ಬಿಜೆಪಿ, ಈ ಸಲ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ಪ್ರತಿಷ್ಠೆ ಇಬ್ಬರಿಗೂ ಇದೆ.
ಹಾಗಾದರೆ ಈ ಸಲ ಬಿಜೆಪಿ ಅಽಕಾರಕ್ಕೆ ಬರಲು ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗ, ಮೊದಲನೆಯದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ; ಗುಜರಾತ್ ನ ತುಂಬಾ ಮೋದಿ ಹೊಂದಿರುವ ಜನಪ್ರಿಯತೆ ಮತ್ತು ನಮ್ಮ ರಾಜ್ಯದವರು ಪ್ರಧಾನಿಯಾಗಿzರೆ ಎನ್ನುವ ಭಾವನೆ ಜನರಲ್ಲಿ ಇದೆ. ಈ ಮೋದಿ ಜನಪ್ರಿಯತೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಸಹಾಯಕ್ಕೆ ಬರುತ್ತದೆ ಎನ್ನುವ ಅಚಲ ವಿಶ್ವಾಸ ಬಿಜೆಪಿ ಪಕ್ಷ ಹೊಂದಿದೆ.
ಈ ಅಂಶವನ್ನು ಬಿಜೆಪಿ ಬಹುವಾಗಿ ನೆಚ್ಚಿಕೊಂಡಿದೆ. ಎರಡನೆಯ ಅಂಶವೆಂದರೆ ಆ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳು ತಮ್ಮ ನೆರವಿಗೆ ಈ ಚುನಾವಣೆಯಲ್ಲಿ ಬರುತ್ತವೆ ಎನ್ನುವ ಆಶಾವಾದ ಬಿಜೆಪಿ ಪಕ್ಷದ್ದು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಅಂದರೆ ಗುಜರಾತ್ ಮಾದರಿ ಅಭಿವೃದ್ಧಿಗಳು, ಈಗಲೂ ತಮ್ಮ ಪರವಾಗಿ ಕೆಲಸ ಮಾಡುತ್ತವೆ ಎನ್ನುವ ನಂಬಿಕೆ ಕೇಸರಿ ಪಕ್ಷದ್ದು.
ಇತ್ತೀಚಿಗೆ ಸಿಎಂ ಭೂಪೇಂದ್ರ ಪಟೇಲ್ ಸರಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳು ಗಮನ ಸೆಳೆಯುತ್ತಿವೆ. ಕೃಷಿಕರಿಗೆ ಸ್ಮಾರ್ಟ್ಫೋನ್, ಮುಖ್ಯಮಂತ್ರಿ ಗೃಹ ಯೋಜನೆ, ಮಾನವ ಗರಿಮಾ ಯೋಜನೆ ಅಂದರೆ ಬಡವರು, ಪರಿಶಿಷ್ಟ ಸಮುದಾಯ ದವರಿಗೆ ಉದ್ಯೋಗ ಒದಗಿಸುವುದು, ಗರ್ಭಿಣಿಯರಿಗಾಗಿ ಪೌಷ್ಟಿಕ ಆಹಾರ ಒದಗಿಸುವ ಮಾತಾ ಪೋಶಣ್ ಯೋಜನೆ, ಕೃಷಿವೈವಿಧ್ಯೀಕರಣಯೋಜನೆ ಅಂದರೆ ಬುಡಕಟ್ಟು ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ-ಗೊಬ್ಬರ, ಗಂಗಾ ಸ್ವರೂಪ ಯೋಜನೆ ಅಂದರೆ ವಿಧವಾ ಸಹಾಯ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳು, ಸ್ಮಾರ್ಟ್ ಸಿಟಿ ಯೋಜನೆ, ಮೂಲಭೂತ ಸೌಕರ್ಯ ಒದಗಿಸಲು ಹಲವು ಯೋಜನೆಗಳನ್ನು ಗುಜರಾತಿನ ಬಿಜೆಪಿ ಸರಕಾರ ರೂಪಿಸಿದೆ.
ಅದೂ ಅಲ್ಲದೆ ಸ್ವಲ್ಪಮಟ್ಟಿನ ಉತ್ತಮ ರಸ್ತೆ ನಿರ್ಮಾಣ, ಕೇಂದ್ರ ಸರಕಾರದ ಕೃಷಿ ಸಮ್ಮಾನ್ ಯೋಜನೆ ಹೀಗೆ ಈ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿದ ಅಭಿವೃದ್ಧಿ ಕಾರ್ಯಗಳು ಈ ಸಲದ ಚುನಾವಣೆಯಲ್ಲಿ ತಮ್ಮ ಕೈಹಿಡಿಯುತ್ತವೆ ಎನ್ನುವ ಲೆಕ್ಕಾಚಾ ರದಲ್ಲಿ ಬಿಜೆಪಿ ಇದೆ. ಇನ್ನು ಈ ಸಲದ ಚುನಾವಣೆಯಲ್ಲಿ ಜಾತಿ ಸಮೀಕರಣ ತಮ್ಮ ಪರ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಯೂ ಬಿಜೆಪಿಯದ್ದು, ಶೇ. ೧೨ರಷ್ಟು ಇರುವ ಪಟೇಲ್ ಸಮುದಾಯದ ಅಸಮಾಧಾನ ಈಸಲ ಕಡಿಮೆ ಆಗಿದ್ದು ಅದರ ಲಾಭ ತಮಗೆ ಆಗುತ್ತದೆ ಎನ್ನುವ ಆಲೋಚನೆಯಲ್ಲಿ ರಾಜ್ಯ ನಾಯಕರಿದ್ದಾರೆ.
ಕಳೆದ ಸಲ ಜೈನ ಸಮುದಾಯದ ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿದ್ದರು ಇದರಿಂದ ಪಾಟಿದಾರ್( ಪಟೇಲ್) ಸಮು ದಾಯದ ಅಸಮಾಧಾನಕ್ಕೆ ಇದು ಕೂಡ ಕಾರಣವಾಗಿತ್ತು. ಇದರಿಂದ ಪಾಠ ಕಲಿತಿರುವ ಬಿಜೆಪಿ ಈ ಸಲ ಪಟೇಲ್ ಸಮುದಾಯದ ಭೂಪೇಂದ್ರ ಪಟೇಲರನ್ನು ಸಿಎಂ ಮಾಡಿದ್ದು ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಲಾಗುತ್ತಿದೆ. ಇದರಿಂದ ಪಟೇಲ್ ಸಮುದಾಯದ ಬೆಂಬಲಗಳಿಸುವ ವಿಶ್ವಾಸ ಹೊಂದಿದೆ. ಇನ್ನು ಶೇ.೩೨ರಷ್ಟು ಜನಸಂಖ್ಯೆ ಹೊಂದಿರುವ ಓಬಿಸಿ ಅಂದರೆ ಇತರೆ ಹಿಂದುಳಿದ ವರ್ಗದ ಜಾತಿಗಳಾದ ಠಾಕೂರ್, ಕ್ಷತ್ರಿಯ ಚೌದರಿ ಪ್ರಜಾಪತಿ, ಬಕ್ಷಿ ಪಂಚ ಜಾತಿಗಳನ್ನು ಠಾಕೂರ್ ಹೊರತುಪಡಿಸಿ ಉಳಿದ ಹಿಂದುಳಿದ ಜಾತಿಗಳನ್ನು ಓಲೈಸುವ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದಾರೆ.
2002ರ ಗೋಧ್ರಾ ಘಟನೆಯ ನಂತರ ಗುಜರಾತಿನಲ್ಲಿ ಹಿಂದೂಗಳ ಮತಗಳು ಬಿಜೆಪಿಗೆ, ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ಎನ್ನುವ ಧರ್ಮಾಧಾರಿತ ಮತಗಳ ವಿಭಜನೆ ಈಗಲೂ ಮುಂದುವರಿದಿದ್ದು ಹೀಗಾಗಿ ಜಾತಿ ಸಮೀಕರಣ ತಮ್ಮ ಪರವಾಗಿ ಕೆಲಸ ಮಾಡುತ್ತದೆ ಎನ್ನುವ ಆಶಾವಾದ ಬಿಜೆಪಿಯದ್ದು. ಇನ್ನು ಕೇಂದ್ರದಲ್ಲೂ ಬಿಜೆಪಿ ಸರಕಾರವಿದ್ದು ರಾಜ್ಯಕ್ಕೆ ಹೆಚ್ಚಿನ ಅನುದಾನ ಬರುತ್ತದೆ. ಇದರಿಂದ ಗುಜರಾತದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎನ್ನುವ ಪ್ರಚಾರ ತಮ್ಮ ನೆರವಿಗೆ ಈ ಸಲದ ಚುನಾವಣೆ ಯಲ್ಲಿ ಬರುತ್ತದೆ ಎನ್ನುವ ಇನ್ನೊಂದು ಆಶಾವಾದವನ್ನೂ ಬಿಜೆಪಿ ಇಟ್ಟುಕೊಂಡಿದೆ. ರಾಜ್ಯದಲ್ಲಿ 1995ರಿಂದ ಸತತ ವಾಗಿಅಽಕಾರದಲ್ಲಿರುವ ಬಿಜೆಪಿ, ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಹೊಂದಿದೆ.
ಈ ವಿಷಯದಲ್ಲಿ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಸಂಘಟನೆ ದುರ್ಬಲಗೊಂಡಿದೆ. ಅದೂ ಅಲ್ಲದೆ ಸಂಘ ಪರಿವಾರದ ಬೆಂಬಲವೂ ಬಿಜೆಪಿ ಸಂಘಟನೆ ಪ್ರಬಲವಾಗಿ ಇರಲು ಕಾರಣವಾಗಿದೆ. ಈ ಅಂಶವೂ ಸಹ ಬಿಜೆಪಿಗೆ ವರವಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿಪಕ್ಷ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಅಽಕಾರಕ್ಕೆ ಬರಲು ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗಮೊದಲನೆಯದು, ಕೇಂದ್ರ ಸರಕಾರದ ಜಿಎಸ್‌ಟಿಯಿಂದ ಗುಜರಾತಿನ ವ್ಯಾಪಾರಿ ವರ್ಗ ಅಸಮಾಧಾನಗೊಂಡಿದ್ದು, ಹೇಳಿಕೇಳಿ ಗುಜರಾತ್ ವ್ಯಾಪಾರಿಗಳ ರಾಜ್ಯ. ಇದರ ಲಾಭ ತಮಗೆ ಆಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಕಾಂಗ್ರೆಸ್ ಸ್ಥಳೀಯ ನಾಯಕರು. ಇನ್ನು ದೀರ್ಘ ಕಾಲದ ಬಿಜೆಪಿ ಆಳ್ವಿಕೆಯಿಂದ ಆಡಳಿತ ವಿರೋಽ ಅಲೆ ಹುಟ್ಟಿಕೊಂಡಿದ್ದು ಬದಲಾವ ಬಯಸುವ ಮತದಾರರ ವರ್ಗ ಹೆಚ್ಚಳವಾದರೆ ಕಾಂಗ್ರೆಸ್‌ಗೆ ಲಾಭವಾಗಲೂಬಹುದು.
ಕಳೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್, ಈ ಸಲ ಅನುಕಂಪದ ಲಾಭ ಗಿಟ್ಟಿಸಿಕೊಳ್ಳಬಹುದೆಂಬ ವಿಶ್ಲೇಷಣೆಯೂ ಇದೆ. ಜತೆಗೆ ಹಿಂದುಳಿದ ವರ್ಗದಲ್ಲಿ ಪ್ರಬಲವಾದ ಠಾಕೂರ್ ಸಮುದಾಯದ ಜಗದೀಶ್ ಠಾಕೂರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಅವರಿಂದ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಬಹುದು. ಇದರೊಂದಿಗೆ ಮುಸ್ಲಿಂ, ದಲಿತ ವರ್ಗಗಳ ಮತಗಳೂ ಸೇರಿದರೆ ಈ ಜಾತಿ ಸಮೀಕರಣ ತಮಗೆ ವರವಾಗುತ್ತದೆ ಎನ್ನುವ ಆಲೋಚನೆಯಲ್ಲಿ ಕೈ ಪಕ್ಷವಿದೆ.
ಇನ್ನೊಂದು ಲೆಕ್ಕಾಚಾರದ ಪ್ರಕಾರ ಪಟೇಲ್ ಸಮುದಾಯದಲ್ಲಿ ಎರಡು ಪಂಗಡಗಳಾದ ಲೇವಾ ಮತ್ತು ಕುಡುವಗಳ ಮಧ್ಯೆ ವಿರೋಧವಿದೆ. ಒಂದು ಪಂಗಡ ಒಂದು ಪಕ್ಷಕ್ಕೆ ಬೆಂಬಲಿಸಿದರೆ ಇನ್ನೊಂದು ಪಂಗಡ ಬೇರೆ ಪಕ್ಷಕ್ಕೆ ಬೆಂಬಲಿಸುತ್ತದೆ. ಇದು ತಮಗೆ ಲಾಭ ತರಬಹುದು ಎನ್ನುವ ಸಮೀಕರಣ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಬೇಕಿದೆ.
ಇನ್ನು ಕಾಂಗ್ರೆಸ್ ಈ ಸಲದ ಚುನಾವಣೆಯಲ್ಲಿ ಈಗಾಗಲೇ ನೀಡಿರುವ ಭರವಸೆಗಳಾದ 3 ಲಕ್ಷ ರು.ಗಳವರೆಗೆ ರೈತರ ಸಾಲ ಮನ್ನಾ, ರೈತರಿಗೆ ದಿನದ 10 ಗಂಟೆ ಉಚಿತ ವಿದ್ಯುತ್ ಸರಬರಾಜು, ಕನಿಷ್ಠ ಬೆಂಬಲ ಬೆಲೆ, ರೈತರ ಖರೀದಿಸುವ ಉತ್ಪನ್ನಗಳನ್ನು ಕನಿಷ್ಠ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿಸಲು ಕಾನೂನು ಇತ್ಯಾದಿ ಭರವಸೆಗಳು ತಮಗೆ ಈ ಚುನಾವಣೆಯಲ್ಲಿ ವರವಾಗಿ ಬರುತ್ತವೆ ಎನ್ನುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ. ಈ ಮೇಲಿನ ಅಂಶಗಳಿಂದ ರಾಜ್ಯದಲ್ಲಿ ಈ ಸಲ ಅಽಕಾರಕ್ಕೆ ಬರುತ್ತೇವೆಎನ್ನುವ ಕನಸನ್ನು ಕೈ ಪಕ್ಷವು ಕಾಣುವಂತೆ ಮಾಡಿದೆ.
ಒಟ್ಟಿನಲ್ಲಿ ದೇಶದ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದ ಹಾಗೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಸಲದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯ ಮಧ್ಯೆಯೂ ಮತ್ತೆ ಬಿಜೆಪಿ ಮರಳಿಅಽಕಾರಉಳಿಸಿಕೊಳ್ಳವು ವಾತಾವರಣವೇ ಹೆಚ್ಚಾಗಿ ಕಂಡುಬರುತ್ತದೆ. ಒಟ್ಟಿನಲ್ಲಿ ಈ ರಾಜ್ಯದಲ್ಲಿ ಯಾವ ಪಕ್ಷವು ಮ್ಯಾಜಿಕ್ ಸಂಖ್ಯೆಯಾದ 93 ರ ಗಡಿಯನ್ನು ತಲುಪುತ್ತದೆ, ಯಾವ ಪಕ್ಷಕ್ಕೆ ಗುಜರಾತಿನ ಮತದಾರ ಪ್ರಭು ವಿಜಯದ ಮಾಲೆ ಹಾಕುತ್ತಾನೆ ಎನ್ನುವ ಡಾಲರ್ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.