ಪರಿವರ್ತನೆಯ ಹಾದಿಯಲ್ಲಿ ಗುರಿ ತಲುಪಲು ದೇಶ ಸಜ್ಜು
ಅನುಭವ
ವೆಂಕಯ್ಯ ನಾಯ್ಡು
ಸಂತೃಪ್ತಿಯ ಭಾವದಿಂದ ಹಿಂತಿರುಗಿ ನೋಡಿದಾಗ ಭಾರತದ ಉಪರಾಷ್ಟ್ರಪತಿಯಾಗಿ ಮತ್ತು ರಾಜ್ಯಸಭಾ ಅಧ್ಯಕ್ಷನಾಗಿನಾನು ಕಳೆದ ಅವಽಯನ್ನು ಒಂದು ನುಡಿಗಟ್ಟಿನಲ್ಲಿ ವ್ಯಾಖ್ಯಾನಿಸುವುದು ಸಾಧ್ಯವಿಲ್ಲದ ಮಾತು. ನನ್ನ ಸಾರ್ವಜನಿಕ ಜೀವನದಐದು ದಶಕಗಳ ಅವಽಯಲ್ಲಿ ಈ ಘಟ್ಟ ವಿಶೇಷವಾದದ್ದು. ದೇಶಾದ್ಯಂತ ಹಲವಾರು ಬಾರಿ ಸಂಚಾರ ಮಾಡುವ ಮತ್ತು ಸಮಾಜದ ಎಲ್ಲ ಸ್ತರದ ಜನರೊಂದಿಗೆ ಬೆರೆಯುವ ಅವಕಾಶ ನನಗೆ ಒದಗಿಬಂತು.
ನನ್ನ ಪ್ರಯಾಣದ ಅವಽಯಲ್ಲಿ ಅಸಂಖ್ಯ ಜನರೊಂದಿಗಿನ ಸ್ಪಂದನೆಯಲ್ಲಿ ನಾನು ಕಂಡ ಖಚಿತ ಸಂಗತಿಯೆ ಆದರೆ ಭಾರತ ಇಂದು ಬದಲಾವಣೆಯ ಪರ್ವದಲ್ಲಿದೆ. ಈ ದೇಶದ ಹೆಮ್ಮೆಯ ನಾಗರಿಕನಾಗಿ ಎಲ್ಲರೊಂದಿಗೆ ನಾನೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇನೆ. ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಕಾರಣದಿಂದ ಭಾರತ ಇದೀಗ ಹೊಸದಾಗಿ ವಿಶ್ವಸಮುದಾಯದ ಮುಂದೆ ತೆರೆದುಕೊಳ್ಳುತ್ತಿದೆ, ಮತ್ತು ಜಾಗತಿಕವಾಗಿ ತನಗೆ ಸಿಗಬೇಕಾದ ಸ್ಥಾನಮಾ ನಗಳನ್ನು ಪಡೆಯುವ ದಿಸೆಯಲ್ಲಿ ಸ್ಪರ್ಧಾತ್ಮಕವಾಗಿ ಮತ್ತು ಆತ್ಮವಿಶ್ವಾಸದಿಂದ ಮುಂದಡಿ ಯಿಡುತ್ತಿದೆ.
ಭಾರತ ಇಂದು ಪರಿವರ್ತನೆಯ ಹಾದಿಯಲ್ಲಿ ಗುರಿ ತಲುಪಲು ಸನ್ನದ್ಧವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಂತ್ರ; ಸುಧಾರಣೆ-ನಿರ್ವಹಣೆ-ಪರಿವರ್ತನೆ ಚಾಲ್ತಿಯಲ್ಲಿದೆ, ಜನರ ಮನದಲ್ಲಿ ಬೆಸೆದು ಕೊಂಡಿದೆ ಮತ್ತು ಅಭಿವೃದ್ಧಿಯನ್ನು ಹಲವು ಸ್ತರಗಳಲ್ಲಿ ಸಾಧಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಆಡಳಿತ ವಿಧಾನದಬಗ್ಗೆ ಹೇಳುವುದಾದರೆ ಅಲ್ಲಿ ಮಾದರಿ ಎನಿಸುವಂತಹ ಬದಲಾವಣೆಯಾಗಿದೆ.
ಅಭಿವೃದ್ಧಿಯ ಪಥದಲ್ಲಿ ಸರಕಾರದ ಸಾಧನೆ ಜನರ ವಿಶ್ವಾಸಾರ್ಹತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹಾಗಂತ ಇಲ್ಲಿ ಸವಾಲುಗಳಿಲ್ಲ ಎಂದರ್ಥವಲ್ಲ. ಬಡತನಮ ಅನಕ್ಷರತೆ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು, ಲಿಂಗ ಅಸಮಾನತೆ, ಅಸಮವಾದ ಅಭಿವೃದ್ಧಿಕಾರ್ಯಗಳು, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಇರುವ ಕಂದಕ, ಇವೆಲ್ಲವೂ ಇವೆ, ಇನ್ನೂಸುಧಾರಿಸಬೇಕಿದೆ. ಇದೆಲ್ಲದರ ನಡುವೆ ನಾನು ಕಂಡ ಬಹುಮುಖ್ಯ ಸಂಗತಿ ಎಂದರೆ ಯುವಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿರುವ ಕ್ರಿಯಾಶೀಲತೆ ಮತ್ತು ಉತ್ಸಾಹಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಬಹುಮುಖ್ಯವಾಗಿ ಯಶಕಂಡಿದೆ. ಭಾರತದ ಅಭಿವೃದ್ಧಿಯ ಗುರಿಸಾಧನೆಗೆ ಇದು ಬಹಳ ಮುಖ್ಯವೆನಿಸುವ ಪರ್ವ.
ನಾನು ರಾಜ್ಯಸಭೆಯ ಅಧ್ಯಕ್ಷನಾಗಿದ್ದ ಅವಧಿಯುದ್ದಕ್ಕೂ ನಾನು ಸದನದ ಎಲ್ಲ ಸದಸ್ಯರಿಗೆ ಹೇಳುತ್ತಿದ್ದದ್ದು ಒಂದೇ ಮಾತು. ಸರಕಾರ ಗೊತ್ತುವಳಿಯನ್ನು ಮಂಡಿಸಲಿ, ವಿರೋಧಪಕ್ಷದವರು ವಿರೋಧಿಸಲಿ ಮತ್ತು ಸದನ ಅದನ್ನು ತೀರ್ಮಾನಿಸಲಿ ಇದಕ್ಕೆ ಅನುಗುಣವಾಗಿಯೇ ನಾನು ಹೇಳುತ್ತಿದ್ದ ಮತ್ತೊಂದು ಮಾತೆಂದರೆ, ವಾದ- ಚರ್ಚೆಗಳನ್ನು ಮಾಡಿ ನಿರ್ಣಯಕ್ಕೆ ಬನ್ನಿ, ಆದರೆ ಎಂದೂ ನಡವಳಿಕೆಗಳಿಗೆ ಅಡ್ಡಿಪಡಿಸಬೇಡಿ.
ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಘನತೆ ಮತ್ತು ಗೌರವ ಸದಾ ಉನ್ನತವಾಗಿರಬೇಕು. ಇದು ನನ್ನ ಸ್ಪಷ್ಟ ಅಭಿಮತ. ರಚನಾತ್ಮಕ ಟೀಕೆಗಳಿದ್ದಲ್ಲಿ ಅವುಗಳನ್ನು ಸ್ವಾಗತಿಸೋಣ, ಆದರೆ ಅಲ್ಲಿ ವಿಧ್ವಂಸಕ ನಡವಳಿಕೆಗೆ ಅವಕಾಶವಿರ ಕೂಡದು, ಆದರೆ ವಿಷಾದದ ಸಂಗತಿಯೆಅದರೆ ಅದಿನ್ನೂ ನಮ್ಮ ವ್ಯವಸ್ಥೆಯಿಂದ ಪೂರ್ಣವಾಗಿ ತೊಲಗಿಲ್ಲ. ಸಂಸದೀಯನಡವಳಿಕೆಗಳಿಗೆ ಅಡ್ಡಿಪಡಿಸುವುದರಿಂದ ಕ್ರಮ ಭಂಗವಾಗುತ್ತದೆಯಲ್ಲದೇ ಅದು ಅಸಹನೆ ಮತ್ತು ಅಸಹಿಷ್ಣುತೆಯನ್ನೂ ಉಂಟು ಮಾಡುತ್ತದೆ. ಪ್ರಬುದ್ಧ ಚರ್ಚೆಗಳು ಮಂಡಿಸಿದ ವಿಷಯದ ಮೇಲೆ ಪ್ರಭಾವ ಬೀರಬೇಕು ಮತ್ತು ಅಂತಿಮವಾಗಿ ತೆಗೆದುಕೊಳ್ಳ ಲಾದ ಅಭಿವೃದ್ಧಿಯ ತೀರ್ಮಾನ ಇನ್ನಷ್ಟು ಉತ್ತಮವಾಗುವುದಕ್ಕೆ ಸಹಕಾರಿಯಾಗಬೇಕು.
ಸಮಗ್ರವಾಗಿ ನಮ್ಮ ನಾಗರಿಕ ಪ್ರಜ್ಞೆಯಲ್ಲಿ ಸುಪ್ತವಾಗಿರುವ ಜ್ಞಾನ ಮತ್ತು ಅಭಿವ್ಯಕ್ತಿಗೆ ಮಾತೃಭಾಷೆಯಷ್ಟು ಉತ್ತಮ ಮಾಧ್ಯಮಇನ್ನೊಂದಿಲ್ಲ. ದೇಶದ ವೈವಿಧ್ಯಮಯ ಭಾಷಾ ಸಂಸ್ಕೃತಿ ಯ ಬಗ್ಗೆ ಯಾರಾದರೂ ಹೆಮ್ಮೆಯಿಂದ ಮಾತನಾಡುತ್ತಿದ್ದರೆ ನಾನುಅವರನ್ನು ಬೆಂಬಲಿಸುತ್ತೇನೆ ಮತ್ತು ಭಾರತೀಯ ಭಾಷೆಗಳ ಬಳಕೆಗೆ ಹೆಚ್ಚು ಪ್ರೋತ್ಸಾಹವನ್ನು ಕೊಡುತ್ತೇನೆ. ರಾಜ್ಯಸಭಾಅಧ್ಯಕ್ಷನಾಗಿ ನಾನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟೀಕರಿಸಲಾದ22ಭಾಷೆಗಳ ಪೈಕಿ ತಮಗಿಷ್ಟವಾದಭಾಷೆಯಲ್ಲಿ ಮಾತನಾಡುವುದಕ್ಕೆ ಸದಸ್ಯರಿಗೆ ಅವಕಾಶವನ್ನು ಕೊಡುತ್ತಿದ್ದೆ.
ಉಲ್ಲೇಖಿಸಬಹುದಾದ ಸಾಧನೆಯೆಂದರೆ ಮೇಲ್ಮನೆಯಲ್ಲಿ ಸಭಾನಡವಳಿಕೆಗಳ ವ್ಯಾಖ್ಯಾನವನ್ನು ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಭಾಷಾಂತರಿಸಿ ಪ್ರಸ್ತುತ ಪಡಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಉದಾಹರಿಸಬೇಕೆಂದರೆ ಡೋಗ್ರಿ, ಕಾಶ್ಮೀರಿ, ಕೊಂಕಣಿ ಮತ್ತು ಸಾಂತಾಲಿ ಭಾಷೆಗಳು1952ರ ನಂತರದಲ್ಲಿ ಮೊದಲ ಬಾರಿಗೆ ರಾಜ್ಯಸಭೆಯ ಮುಖೇನ ಬಳಕೆಗೆ ಬಂದವು. ಇದಿಷ್ಟೇ ಅಲ್ಲ. ಅಸ್ಸಾಮಿ, ಬೋಡೋ, ಗುಜರಾತಿ, ಮೈಥಿಲೊಇ, ಮಣಿಪುರಿ ಮತ್ತು ನೇಪಾಳಿ ಭಾಷೆಗಳು ಕೂಡ ಬಳಕೆಗೆ ಬಂದವು.
ಕೋವಿಡ್ ಖಾಯಿಲೆ ಇಡೀ ವಿಶ್ವವನ್ನೇ ಅಟಕಾಯಿಸಿಕೊಂಡಿತ್ತು, ಭಾರತವೂ ಅದರಿಂದ ಹೊರತಾಗಿರಲಿಲ್ಲ. ಈ ಮಹಾ ಮಾರಿಯನ್ನು ತಡೆಯುವಲ್ಲಿ ವೈದ್ಯಕೀಯ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸ್ಟಾಫ್, ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರದ ಸಿಬ್ಬಂದಿ ವರ್ಗದವರು, ಪೋಲೀಸರು ಇನ್ನಿಲ್ಲದಂತೆ ಶ್ರಮಿಸಿದರು. ಜತೆಗೆ ಆಶಾ ಕಾರ್ಯಕರ್ತೆಯರ ಪರಿಶ್ರಮ, ವಿಜ್ಞಾನಿಗಳ, ಉದ್ಯಮಿಗಳ, ಸಂಶೋಧಕರ ಮತ್ತು ವ್ಯಾಕ್ಸೀನ್ ತಯಾರಕ ಕಂಪನಿಗಳ ಶ್ರಮವನ್ನೂ ಮರೆಯುವಂತಿಲ್ಲ.
ಅವರೆಲ್ಲರೂ ಶಕ್ತಿಮೀರಿ ಶ್ರಮಿಸಿದ್ದಾರೆ. ಸಂಸದೀಯ ನಡವಳಿಕೆಗಳ ಕಾಲದಲ್ಲಿ ಸಂಸದರ ಮತ್ತು ಸಂಬಂಧಿತ ಎಲ್ಲ ಸಿಬ್ಬಂದಿ ವರ್ಗದವರ ಆರೋಗ್ಯದ ಬಗ್ಗೆ ಕಾಳಜಿ ಯನ್ನು ವಿಶೇಷವಾಗಿ ವಹಿಸಲಾಗಿತ್ತು. ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಮತ್ತು ಇತರೆ ಸಿಬ್ಬಂದಿ ವರ್ಗದವರ ಜತೆ ಸೇರಿ ಒಂದು ವಿಸ್ತೃತವಾದ ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು. ಅದನ್ನು220ರ ಮುಂಗಾರು ಅಧಿವೇಶನದಲ್ಲಿ ಮಂಡನೆ ಮಾಡಲಾಗಿತ್ತು. ಈ ಯೋಜನೆಯ ಎಲ್ಲ ಅಂಶಗಳನ್ನು ಪಕ್ಷಾತೀತವಾಗಿ ಉಭಯ ಸದನಗಳ ಸದಸ್ಯರು ಶ್ಲಾಘಿಸಿದ್ದರು.
ಪಾರಿಸರಿಕವಾಗಿ ರಕ್ಷಣಾತ್ಮಕವಾದ ಅಂಶ ನಮ್ಮ ವಂಶವಾಹಿಯ ಕಾಲಾತೀತವಾಗಿ ಹೇಗೆ ಬೆಸೆದುಕೊಂಡಿದೆಯೆಂದರೆ, ಅದಕ್ಕೆ ಇತಿಮಿತಿಗಳಿಲ್ಲ. ನಾವು ನದಿ ಮರ, ಬೆಟ್ಟಗಳನ್ನೂ ಪೂಜಿಸುವವರು. ಪರಿಸರಕ್ಕೆ ಸಂಬಂಧಪಟ್ಟ ತೊಂದರೆಗಳು ಎದುರಾದಾಗ ನಾನು ಯುವಸಮೂಹವನ್ನು ಸದಾ ನೆನೆಸುತ್ತೇನೆ. ಏಕೆಂದರೆ ಅವರು ಪರಿಸರದ ಉಳಿವಿನ ಕುರಿತಾಗಿ ಚಿಂತನೆಯಲ್ಲಿ ಮೊದಲಿಗರಾಗಿರುತ್ತಾರೆ.
ಸಮಾನಾಂತರವಾಗಿ ಯೋಚಿಸುವುದಾದರೆ, ರೈತ ಹಿನ್ನೆಲೆಯಿಂದ ಬಂದಿರುವವರಿಗೆ, ರಾಷ್ಟ್ರದ ಪರಿಕಲ್ಪನೆಯ ಕುರಿತಾಗಿ ಸಾಕಷ್ಟು ಚಿಂತನೆಗಳಿರುತ್ತವೆ. ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಕೂಡ ರೈತರು ದಾಖಲೆಯ ಕೃಷಿ ಉತ್ಪನ್ನವನ್ನು ಮಾಡಿzರೆ. ನಾನು ಯುನಿವರ್ಸಿಟಿಗಳಿಗೆ ಭೇಟಿ ಕೊಟ್ಟಾಗ, ರೈತರೊಂದಿಗೆ ಮಾತುಕತೆ ಮಾಡಿದಾಗ, ವಿಜ್ಞಾನಿಗಳೊಂದಿಗೆ, ಸಂಶೋಧಕರೊಅಂಗೆ ಮಾತನಾಡಿದಾಗಲೆಲ್ಲ ಅಭಿವೃದ್ಧಿಯ ಹೊಸತೊಂದು ಅಧ್ಯಾಯ ತೆರೆದುಕೊಂಡಿದ್ದನ್ನು ಕಂಡಿದ್ದೇನೆ.
ರೈತರು ಮತ್ತು ವಿಜ್ಞಾನಿಗಳು ಪರಸ್ಪರ ಸಂವಹನ ನಡೆಸಬೇಕು ಮತ್ತು ಆ ಮೂಲಕವಾಗಿ ಕೃಷಿಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಆಗಬೇಕು ಎಂಬುದನ್ನು ನಾನು ಸದಾ ಬಯಸಿದ್ದವನು. ಮಹಿಳಾ ಸಬಲೀಕರಣದಿಂದ ದೇಶದ ಪ್ರಗತಿ ಬಹುಬೇಗ ಆಗುತ್ತದೆ ಎಂಬ ವಿಚಾರದಲ್ಲಿ ನನಗೆ ತುಂಬು ನಂಬುಗೆಯಿದೆ. ಹೆಣ್ಮಕ್ಕಳು ಶಾಲೆಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ ಹೊರಬಂದಾಗ ನನಗೆ ಅತೀವ ಸಂತೋಷವಾಗುತ್ತದೆ. ಕಳೆದ ಐದು ವರುಷಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ.
ಮಹಿಳಾಣಿಗಳು ಕ್ರೀಡೆಯೂ ಸೇರಿದಂತ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಮುನ್ನುಗ್ಗುತ್ತಿರುವ ಬಗ್ಗೆಯೂ ನನಗೆ ಹೆಮ್ಮೆಯಿದೆ. ನಾನು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದಾಗಲೆಲ್ಲ, ಸಾಮಾಜಿಕ ಬದಲಾವಣೆಯ ಬಗ್ಗೆ ಹೆಚ್ಚು ಮಾತ ನಾಡಿದ್ದೇನೆ. ಶಿಕ್ಷಣ ಜಾಗತಿಕವಾಗಿ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗುತ್ತದೆ ಎಂಬ ಅಂಶವನ್ನು ನಾನು ಸದಾ ಎತ್ತಿ ಹಿಡಿದಿದ್ದೇನೆ.
ಆರ್ಥಿಕ, ಸಾಮಾಜಿಕ ನ್ಯಾಯ, ಸಮಾನತೆ, ವೈಜ್ಞಾನಿಕ ಪ್ರಗತಿ, ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ವೇದಿಕೆಗಳ ವಿಚಾರ ಬಂದಾಗ ಇದೆಲ್ಲವೂ ಬಹುಮುಖ್ಯವೆನಿಸುತ್ತದೆ. ಎರಡನೇ ಅತ್ಯುನ್ನತ ನಾಗರಿಕ ಹುzಯನ್ನು ಹೊಂದಿದ್ದ ನಾನು ಸಾಂವಿಧಾ ನಿಕವಾಗಿ ನನ್ನ ಕರ್ತವ್ಯವನ್ನು ಆಶಾವಾದಿತ್ವದೊಂದಿಗೆ ಮುನ್ನಡೆಸಿಕೊಂಡು ಬಂದಿದ್ದೇನೆ. ಭಾರತ ಶ್ರೇಷ್ಟ್ರ ಭಾರತವಾಗಿ, ಸಶಕ್ತ ಭಾರತವಾಗಿ, ಆತ್ಮನಿರ್ಭರ ಭಾರತವಾಗಿ ಹೊರಹೊಮ್ಮುವ ವಿಚಾರದಲ್ಲಿ ಯಾವ ಅನುಮಾನವೂ ಇಲ್ಲ.
ಲೇಖಕರು ಮಾಜಿ ಉಪ ರಾಷ್ಟ್ರಪತಿ