ಅಷ್ಟಕ್ಕೂ ಈ ಕಾಲದಲ್ಲಿ ಮಕ್ಕಳು ಮಕ್ಕಳಾಗಿ ಇಲ್ಲ !
ದಾಸ್ ಕ್ಯಾಪಿಟಲ್
dascapital1205@.
ತಮ್ಮ ಮಕ್ಕಳ ಕಲಿಕೆ ಹಳಿ ತಪ್ಪಿದೆ ಅಂತ ಗೊತ್ತಾಗಿಯೂ ಹಲವು ಪೋಷಕರು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಶಿಕ್ಷಕರನ್ನು, ಶಾಲೆಯನ್ನು, ಸರಕಾರವನ್ನು, ಈ xಕ್ಷಣ ವ್ಯವಸ್ಥೆಯನ್ನು ನಿಂದಿಸುತ್ತಾ, ಜರೆಯುತ್ತಾ, ಬಾಯಿಗೆ ಬಂದಂತೆ ಮಾತಾ ಡುತ್ತಿದ್ದಾರೆ. ಇಂಥ ಮಕ್ಕಳು ಈಗ ಶಾಲೆಯನ್ನು ಸೇರಿzರೆ ಒಲ್ಲದ ಮನಸ್ಸಿನಿಂದ.
ಹಿಜಾಬ್ ವಿವಾದವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಹಾಗೆ ಅವಲೋಕಿಸುವಾಗ ಪ್ರತಿಯೊಂದೂ ಸಂದರ್ಭ, ಸನ್ನಿವೇಶವನ್ನು ಗ್ರಹಿಸುತ್ತ ಹೋಗಬೇಕು. ಮಾಧ್ಯಮದೆದುರು ಮಾತಾಡುವಾಗ ವಯೋಸಹಜವಾದ ನಡವಳಿಕೆಗಳು ಮಕ್ಕಳಲ್ಲಿ ಕಾಣಿಸುವುದೇ ಇಲ್ಲ. ಮಕ್ಕಳೇ ಆದರೂ ಚೆನ್ನಾಗಿ ಪಳಗಿಸಿಕೊಂಡ ಇಂಗ್ಲಿಷನ್ನು ಬಳಸಿದ್ದು ಗ್ರಹೀತವಾಗುತ್ತದೆ. ಅಂದರೆ ಅವರೆಲ್ಲರ ಆವರೆಗಿನ ವಿದ್ಯಾಭ್ಯಾಸ ಉತ್ತಮ ಬೋಧನೆ ಮತ್ತು ಕಲಿಕೆ ನಡೆದಿರುವಂಥ ಶಾಲೆಯ ನಡೆದಿರಬೇಕು ಎಂಬುದಂತೂ ಸ್ಪಷ್ಟ.
ಅಂದರೆ ಉತ್ತಮ ಖಾಸಗಿ ಆಂಗ್ಲಮಾಧ್ಯಮ ಶಾಲೆಯಾಗಿರಲೇಬೇಕು. ಆದ್ದರಿಂದಯಾರದ್ದೋಪ್ರಚೋದನೆಯಿದೆ ಎಂದರೂ ಮಕ್ಕಳು ಮಕ್ಕಳದೇ ಮಟ್ಟದ ವರ್ತನೆಯನ್ನು ಅಭಿವ್ಯಕ್ತಿಸಲಿಲ್ಲ ಎಂಬುದು ಮನವರಿಕೆಯಾಗಬೇಕಿದೆ. ಮಾತಿಗೆ ಮಾತು ಎನ್ನುವುದು ಅಷ್ಟು ಸುಲಭವೂ ಅಲ್ಲ, ಸಲೀಸೂ ಅಲ್ಲ. ಏನಕೇನ ಮೊಂಡು ಮಾತುಗಳನ್ನು ಬಾಯಿಗೆ ಬಂದಂತೆ ಆ ಮಕ್ಕಳು ಆಡಲಿಲ್ಲ ಎಂಬುದು ನೂರಕ್ಕೆ ನೂರು ಸತ್ಯ ಎಂತ ಹೇಳಿದರೆ ಯಾರಿಗೂ ಅಚ್ಚರಿಯಾಗಲಾರದು.
ಯಾಕೆಂದರೆ, ಮಕ್ಕಳು ದೊಡ್ಡವರ ಮಟ್ಟದ ಬುದ್ಧಿವಂತಿಕೆಯನ್ನು ಬೇಕಾದ ಸಂದರ್ಭದಲ್ಲಿ ಬೇಕಾದ ಹಾಗೆ ಪ್ರದರ್ಶಿಸುತ್ತಾರೆ. ತರಗತಿಯೊಳಗೆ ಹೆದರಿ ಹೆದರಿಯೇ ಹೋಗ ಬೇಕಾದ ಕಾಲದಲ್ಲಿ ಶಿಕ್ಷಕರು ತಮ್ಮ ವೃತ್ತಿಯನ್ನು ಸಾಗಿಸುವ ಹಂತಕ್ಕೆ ತಲುಪಿದ್ದಾರೆ. ಅಪ್ಪ ಅಮ್ಮಂದಿರು ತಮ್ಮ ಮಕ್ಕಳ ಬ್ಲ್ಯಾಕ್‌ಮೇಲ್‌ಗೆ ಹೆದರಿ ಬಾಯ್ಮುಚ್ಚಿಕೊಳ್ಳಬೇಕಾಗಿದೆ. ಎಷ್ಟೋ ಮನೆಗಳಲ್ಲಿ ಪರಿಸ್ಥಿತಿ ಕೈಮೀರಿಯೂ ಹೋಗಿದೆ.
ಶಾಲೆಗಳಲ್ಲೂ ಹೆಚ್ಚು ಕಡಿಮೆ ಇದೇ ಆಗಿದೆ. ಉಡಾಫೆ, ಉದಾಸೀನ, ನಿರಾಸಕ್ತಿ, ಅಗೌರವ ಮನೋಭಾವ, ದುರಹಂಕಾರ, ಮೊಂಡುತನ, ದುಷ್ಟತನ, ದುರುಳುಬುದ್ಧಿ, ಹಠಸ್ವಭಾವ ಮಿತಿಮೀರಿವೆ. ಕಲಿಕೆಯಲ್ಲಿ ನಿರಾಸಕ್ತಿ, ಕೊಟ್ಟ ಕೆಲಸಗಳನ್ನು ಮಾಡದೆ ಶಿಕ್ಷಕರಲ್ಲಿ ಒಣಜಂಭದ ವಾದವನ್ನು ಮಾಡುವುದು, ಶಿಕ್ಷಕರನ್ನು ಕೀಳಂದಾಜಿಸುವುದು, ಅಕಡೆಮಿಕ್ ಸಂಬಂಧಿತಯಾವ ಚಟುವಟಿಕೆಗಳನ್ನು ಮಾಡದೆಯಾರದ್ದೋನೋಟ್ಸ್ ಕದಿಯುವುದು, ಕದ್ದು ಇನ್ನೊಬ್ಬರು ಅನುಭವಿಸುವ ಯಾತನೆಯನ್ನು ಒಂಥರಾ ಹೊಲಸು ರೀತಿಯಲ್ಲಿ ಮಜಾ ತೆಗೆದುಕೊಳ್ಳುವುದು, ತರಗತಿಯಲ್ಲಿ ಬೋಧನೆ ನಡೆಯುವಾಗ ಚಾಕ್‌ಪೀಸ್, ಪೇಪರ್ ಉಂಡೆ ಮಾಡಿ ಬಿಸಾಡುವುದು, ರಾಕೆಟ್ ಬಿಡುವುದು, ಪರೀಕ್ಷೆಯಲ್ಲಿ ರಾಜಾಷವಾಗಿ ನಕಲು ಮಾಡುವುದು,ಅಧಿಕಪ್ರಸಂಗ ಮಾಡುವುದು- ಇಂಥ ಅನೇಕ ಬಗೆಯ ಕುಕೃತ್ಯಗಳನ್ನು ನಿತ್ಯವೂ ನಡೆಸುವ ಮನೋಪ್ರವೃತ್ತಿ ಹೆಚ್ಚಿದೆ.
ಕಿಟಕಿಯ ಗ್ಲಾಸುಗಳನ್ನು ಒಡೆಯುವುದು, ಹುಕ್‌ಗಳನ್ನು ಬೆಂಡ್ ಮಾಡುವುದು, ಮತ್ತೊಬ್ಬನು ತಂದ ಊಟದ ಚೀಲವನ್ನು ಕದ್ದು ತಿನ್ನುವುದು, ಕೆಟ್ಟ ಪದಗಳನ್ನು ಬಳಸುವುದು, ಕೋಡ್ ವರ್ಡ್‌ಗಳಲ್ಲಿ ಹಿರಿಯರನ್ನು, ಶಿಕ್ಷಕರನ್ನು ಟೀಕಿಸುವುದು, ವಾಟ್ಸಾಪ್ ಗ್ರೂಪ್ ಗಳಲ್ಲಿ ಅಶ್ಲೀಲ ಮೆಸೇಜುಗಳನ್ನು ಕಳಿಸುವುದು, ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಅಧ್ವಾನಗಳು ಕಾಣುತ್ತಾಹೋಗುತ್ತವೆ, ಎದುರಾಗುತ್ತಲೇ ಇರುತ್ತವೆ. ಹಾಗಾದರೆ ಮಕ್ಕಳಿಂದ ಈ ರೀತಿಯ ವರ್ತನೆಗಳು ಹೊಮ್ಮಲು ಕಾರಣವೇನು? ಹಿಂದೆಲ್ಲ ಇಂಥವು ನಡೆಯುತ್ತಿರಲಿಲ್ಲವೇ? ಅಥವಾ ಕಾಲಮಾನದ ವೈಪರೀತ್ಯವೇ? ಕಾಲಮಾನವೂ ನಾವಂದುಕೊಂಡಂತೆ ಇರುವುದಿಲ್ಲ ಎಂಬ ಸಮಾಧಾನ ಪಟ್ಟುಕೊಳ್ಳುವುದೇ ಇದಕ್ಕೆ ಉತ್ತರವಾಗುತ್ತದೆಯೇ? ನಮ್ಮದು ತಪ್ಪಿಲ್ಲ ಅಂತೀರಾ?ಆನ್‌ಲೈನ್ ತರಗತಿಗೆ ಅಂತ ಕೊಡಿಸಿದ ಮೊಬೈಲ್‌ನಿಂದ ಮಕ್ಕಳು ಏನು ಕಲಿತರೋ ಏನೋ ದೇವರೇ ಬಲ್ಲ!
ಆದರೆ ಅವರಲ್ಲಿ ವಿಪರೀತ ಎನ್ನಬಹುದಾದ ದುರ್ವರ್ತನೆಗಳಂತೂ ಮಿತಿಮೀರಿದ್ದು ಮಾತ್ರ ದುರಂತ ಸತ್ಯ! ಪೋಷಕರಲ್ಲಿ ಅನೇಕರಿಗೆ ತಮ್ಮ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಆಗಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಷ್ಟೂ ದಡ್ಡತನ ಮನೆ ಮಾಡಿಕೊಂಡಿದೆ. ಅದಕ್ಕೆ ಕಾರಣ ಮಕ್ಕಳ ಮೇಲೆ ಅವರಲ್ಲಿರುವ ಅತಿವ್ಯಾಮೋಹ! ಅನಗತ್ಯವಾಗಿ, ಅನಾವಶ್ಯಕವಾಗಿ ಬೇಕುಬೇಕಾದ್ದನ್ನು ಕೇಳಿದಾಗ ಕೊಡಿಸಲಾಗದು ಎಂದು ನಿರಾಕರಿಸುವ ಗಟ್ಟಿತನ ಪೋಷಕರಲ್ಲಿ ಇಲ್ಲವಾಗಿದೆಕೇಳಿದ್ದನ್ನೆಲ್ಲ ಕೊಡಿಸುವ ಹಾಗೆ ಪೋಷಕರನ್ನು ಬ್ಲ್ಯಾಕ್‌ಮೇಲ್ ಮಾಡುವ ಮಕ್ಕಳನ್ನು ಪೋಷಕರು ನಿಯಂತ್ರಿಸುವ ಯಾವಗೋಜಿಗೂ ಹೋಗದೆ ಮಕ್ಕಳು ಆಡಿದ್ದಕ್ಕೆ ಕುಣಿದುದ್ದಕ್ಕೆ ತಾಳ ಹಾಕಿದ್ದರ ಪರಿಣಾಮವಿದು.
ಶಾಲೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಡುವ ಮಕ್ಕಳು ವಾರದಲ್ಲಿ ಎರಡು ಮೂರು ದಿನಗಳಲ್ಲಿ ಶಾಲೆಯನ್ನು ಸೇರುವುದೇ ಇಲ್ಲ ಎಂಬ ವಿಚಾರವಂತೂ ಬಲು ಅಪಾಯಕಾರಿಯಾದುದು. ಪೋಷಕರಿಗೆ ಇದು ಗೊತ್ತಾಗುವುದೇ ಇಲ್ಲ. ಹಳ್ಳಿಗಳಲ್ಲಿ ಇಂಥ ವರ್ತನೆಗಳಿಂದ ಅಂಥಾ ಪರಿಯ ಅನಾಹುತಗಳೇನೂ ಆಗಲಾರದು. ಆದರೆ ನಗರ ಪ್ರದೇಶಗಳಲ್ಲಿ ಇದು ಅಪಾಯಕಾರಿ!
6-14 ವರ್ಷದವರೆಗಿನ ಮಕ್ಕಳನ್ನು ಕಡ್ಡಾಯವಾಗಿ ಪಾಸು ಮಾಡಲೇಬೇಕೆಂಬ ನಿಯಮದಿಂದ ಯಾವ ವಿದ್ಯಾರ್ಥಿಯೂಯಾವುದಕ್ಕೂ ಯಾರಿಗೂ ಭಯಪಡುವ ಅಗತ್ಯವೇ ಇಲ್ಲ. ಅಂದರೆ ಕಲಿಕೆಗೆ ಪೂರಕವಾಗಿ ಈ ನಿಯಮ ಬಲವನ್ನು ನೀಡಲಾರದು. “ನಾನೇನೂ ಮಾಡುವುದಿಲ್ಲ, ನೀವು ಏನ್ ಬೇಕಾದರೂ ಮಾಡಿಕೊಳ್ಳಿ. ಶಿಕ್ಷಿಸಿದರೆ ಅಪ್ಪಂಗೆ ಹೇಳ್ತೀನಿ,ನೀವ್ ನನಗೆ ಏನೂ ಮಾಡೋಕಾಗೋಲ್ಲ” ಎನ್ನುವ ರೀತಿ ಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮಕ್ಕಳು ಏನು ಓದಿಯಾರು? ಏನು ಬರೆದಾರು? ಏನು ಸಾಧನೆ ಮಾಡಿ ಯಾರು? ಕಡ್ಡಾಯ ಕಲಿಕೆಯ ಪರಿಣಾಮವನ್ನಂತೂ ಹೇಳಲು ಸಾಧ್ಯವಿಲ್ಲ! ಅದಕ್ಕಿಂತ ಹೆಚ್ಚು ಪರಿಣಾಮವನ್ನು ಬೀರಿದ್ದು ಕೊರೊನಾ ಸಂದರ್ಭದಲ್ಲಿ ಪರೀಕ್ಷೆಯೇ ಇಲ್ಲದೆ ಪಾಸು ಮಾಡಿದ್ದು! ವಯಸ್ಸಿ ನಾಧಾರದ ಮೇಲೆ ಮುಂದಿನ ತರಗತಿಗೆ ಅರ್ಹತೆ ನೀಡಿದ್ದು.
 ಅಲ್ಲಿ ಮುಂದೂಡಿದ್ದು. ಫೀಸು ಉಳಿಯಿತು ಅಂತ ಪೋಷಕರು ಖುಷಿಪಟ್ಟರು. ಮನೆಯ ಕೂತ ಮಕ್ಕಳು ಏನೂ ಕಲಿಯದೆ ಮುಂದಿನ ತರಗತಿಗೆ ಹೋಗುವುದು ಭವಿಷ್ಯದ ದೃಷ್ಟಿಯಿಂದ ಆರೋಗ್ಯ ಯುತವಲ್ಲ ಎಂಬ ಸಾಮಾನ್ಯ ಅಲೋಚನಾ ಪ್ರeಯೂ ಇಲ್ಲದ ಪೋಷಕರು ಈಗ ಬಾಯಿ ಬಡಿದುಕೊಳ್ಳುತ್ತಿzರೆ. ಯಾಕೆಂದರೆ ವಾಸ್ತವ ಈಗ ಅರಿವಾಗುತ್ತಿದೆ; ತಮ್ಮ ಮಕ್ಕಳಕಲಿಕೆ ಹಳಿ ತಪ್ಪಿದೆ ಅಂತ!
ಹಳಿ ತಪ್ಪಿದ್ದು ಗೊತ್ತಾಗಿಯೂ ಹಲವು ಪೋಷಕರ ಮನಸ್ಸು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಶಿಕ್ಷಕರನ್ನು, ಶಾಲೆಯನ್ನು, ಸರಕಾರ ವನ್ನು, ಈ ಶಿಕ್ಷಣ ವ್ಯವಸ್ಥೆಯನ್ನು ನಿಂದಿಸುತ್ತಾ, ಜರೆಯುತ್ತಾ, ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಇಂಥ ಮಕ್ಕಳು ಈಗ ಶಾಲೆಯನ್ನು ಸೇರಿದ್ದಾರೆಒಲ್ಲದ ಮನಸ್ಸಿನಿಂದ. ಕಲಿಕೆಯಲ್ಲಿ ನಿರಾಸಕ್ತಿ, ವಿಪರೀತವೆನಿಸುವ ದುರ್ವರ್ತನೆಗಳು, ಮೊಂಡುತನ, ಏಕಾಗ್ರತೆಯ ಕೊರತೆ, ಜಡಮನಸ್ಸು, ಚಟುವಟಿಕೆಯಿಲ್ಲದೆ ಯಾವುದಕ್ಕೂ ಸ್ಪಂದಿಸದ ಹದತಪ್ಪಿ ಬೆಳೆದ ದೇಹ!
ಅಬ್ಬಾ, ಒಂದೇ ಎರಡೇ. ಇಂಥದ್ದರ ಮಧ್ಯೆ ಕಲಿಕೆಯೆಂಬುದು ಬಹುದೂರದ ಮಾತು! ಹೊಡೆದು ಬುದ್ಧಿ ಕಲಿಸುವ ಕಾಲವಿದಲ್ಲ. ಶಿಕ್ಷೆಗೆ ಪುಕಾರುಗಳು! ಒಳ್ಳೆಯ ಮಾತು ಅರ್ಥವಾಗುವುದಿಲ್ಲ! ಬುದ್ಧಿವಾದ ದೌರ್ಬಲ್ಯವೆನ್ನುವ ದುರ್ಬುದ್ಧಿ! ಶಿಕ್ಷೆಗೆ ಮರ್ಯಾದೆ ಯಿಲ್ಲ. ಕೊನೆಯ ಪಕ್ಷ ಭಯವನ್ನೂ ಹುಟ್ಟಿಸಲಾರದು. ಇನ್ನು ಒಳ್ಳೆಯ ಮಾತು? ನೋ ಚಾನ್ಸ್. ಓದುವುದು, ಬರೆಯುವುದು ಮರೆತು ಹೋಗಿ ಕೆಲವು ತಿಂಗಳುಗಳು ಕಳೆದಿವೆ. ಓದುವುದನ್ನೇ ಮರೆತವರಿಗೆ ಬರೆಯುವುದು ಹೇಗೆ ಸಾಧ್ಯ? ಬರೆಯುವುದನ್ನು ಮರೆತವರಿಗೆ ಓದುವುದು ಅಸಾಧ್ಯ? ಓದು ಮತ್ತು ಬರೆಹ ಮರೆತ ಮಕ್ಕಳಿಗೆ ಹೇಗೆ ಕಲಿಸೋದು? ಅಕ್ಷರಾಭ್ಯಾಸದಿಂದ ಬ್ರಹ್ಮಸೃಷ್ಟಿಯಾಗಬೇಕಿದೆ!
ಹಿಂದೆ ಹೋದರೆ ಮುಂದೆ ಹೋಗೋದು ಹೇಗೆ! ಆದರೆ, ಪೋಷಕರಿಗಿದು ಅರ್ಥವಾಗುವುದಿಲ್ಲ.   ಪೋಷಕರಿಗೆ ಯಾವುದೂ ಅರ್ಥವಾಗುವುದೇ ಇಲ್ಲವೆಂಬಷ್ಟು ಅeನ! ಓದೋಕೆ ಬರೆಯೋಕೆ ಬರಲ್ಲ ಎಂದರೆ ವಾದಕ್ಕಿಳಿಯುತ್ತಾರೆ. ‘ಕರೋನಾ ಅಲ್ವಾ ಸರ್, ಶಾಲೆಯೇ ನಡೆಯದೆ ಮಕ್ಕಳು ಹಾಳಾಗಿದ್ದಾರೆ. ಮುಂದೆ ಸರಿಯಾಗ್ತಾರೆ ಬಿಡಿ’ ಎಂಬ ಅವಿವೇಕ! ಬೇಜವಾಬ್ದಾರಿಯ ಮಾತುಗಳು! ಸತ್ಯ ಒಪ್ಪಿಕೊಳ್ಳೋಕೆ ಅವರ ಮನಸ್ಸೊಪ್ಪದು.
ವಿಚಾರ ಮಾಡೋ ಶಕ್ತಿ ಅವರಲ್ಲಿಲ್ಲ. ಲಕ್ಷಗಟ್ಟಲೆ ಫೀಸು ಕಟ್ಟಿರುತ್ತಾರಲ್ಲ. ಶಿಕ್ಷಣವೆಂದರೆ ಹಣ ಕೊಟ್ಟು ಅಂಕಗಳನ್ನು ತಮಗೆ ಬೇಕಾದಷ್ಟು ಪಡೆದುಕೊಳ್ಳುವ ವ್ಯಾಪಾರವೆಂಬ ಮನೋವೃತ್ತಿಯಿಂದ ಪೋಷಕರು ಮುಕ್ತರಾಗಬೇಕಿದೆ!