ಬಿಜೆಪಿಗರೇ, ಮೋದಿ ಆಗಬಯಸುವ ಮುನ್ನ ತ್ರಿವೇದಿ ಆಗಿ !
ಅರ್ಜುನ ಉವಾಚ
ಅರ್ಜುನ್ ಶೆಣೈ
ಕಳೆದೆರಡು ದಶಕಗಳಿಂದ ಸುದ್ದಿಮಾಧ್ಯಮ ಸಾಕಷ್ಟು ಬದಲಾಗಿದೆ. ಒಂದೆಡೆ ತಂತ್ರಜ್ಞಾನದ ತಾಳಕ್ಕೆ ತಕ್ಕ ಹೆಜ್ಜೆಯನ್ನಿಟ್ಟು ವೀಕ್ಷಕರ ರುಚಿಗೆ ಅನುಗುಣವಾಗಿಯೂ, ಮತ್ತೊಂದೆಡೆ ತನ್ನ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸ್ವಲಾಭೋದ್ದೇಶವನ್ನು ಗಮನದಲ್ಲಿಟ್ಟುಕೊಂಡೂ ಸಾಗುತ್ತಿರುವುದು ಅವುಗಳ ನಿತ್ಯನೂತನ ರೂಪು ರೇಷೆಯಿಂದಲೇ ಅರ್ಥವಾಗುವಂಥದ್ದು. ಅದರಲ್ಲೂ ಕಳೆದ ಒಂದೂವರೆ ದಶಕದಿಂದ ಚಲಾವಣೆಯಲ್ಲಿರುವ, ಈಗಲೂ ಹಳತಾಗದ ‘ಡಿಬೇಟ್’ ಕಾರ್ಯಕ್ರಮಗಳು ಇಚ್ಛಾಪೂರ್ವಕವಾಗಿ ಜನಸಾಮಾನ್ಯರ ಮನಸೆಳೆದಿವೆ ಎಂದರೆ ತಪ್ಪಾಗಲಾರದು.
ಸಂಜೆ ಏಳರ ಹೊತ್ತಿಗೆ ಸುದ್ದಿವಾಹಿನಿ ಹಾಕಿದರೆ, ನಡೆಯುತ್ತಿರುವುದು ಮನೆಯ ಗಲಾಟೆಯೋ ಅಥವಾ ದೇಶದ್ದೇ ಎಂದೇ ಸಂಶಯ ಬರುವಷ್ಟರ ಮಟ್ಟಿಗೆ ಅವು ನಮಗೆ ಹತ್ತಿರಾಗಿವೆ! ಪರ-ವಿರೋಧದ ಗೌಜಿಯ ನಡುವೆ ಬಹುತೇಕ ಡಿಬೇಟುಗಳು ಅನರ್ಥವಾಗುಳಿಯುವುದೇ ಹೆಚ್ಚಾದರೂ ಅಂದಿಂದು ಡಿಬೇಟು ಅರ್ಥಪೂರ್ಣ ಅನ್ನಿಸುವುದೂ ಇಲ್ಲದಿಲ್ಲ. ಡಿಬೇಟುಗಳು ವ್ಯಕ್ತಿಗತವಾಗದೆ ವಸ್ತುನಿಷ್ಠವಾದಾಗ ನೋಡುಗರ ಮಾಹಿತಿ ಜ್ಞಾನ ಹೆಚ್ಚುವುದಲ್ಲದೆ, ಪರ-ವಿರೋಧಕ್ಕೆ ಸಮಂಜಸವಾದ ಸಮರ್ಥನೆಯೂ ಅರಿವಾಗುತ್ತದೆ. ಈ ಕಾಲಘಟ್ಟದಲ್ಲಿ ಡಿಬೇಟು ಎಂದಾಗ ಸಾಕಷ್ಟು ಮುಖಗಳು ಕಣ್ಮುಂದೆ ಸುಳಿದರೂ ಅಗ್ರಪಂಕ್ತಿಯಲ್ಲಿ ಕಾಣಿಸುವವರು ‘ಸುಧಾಂಶು ತ್ರಿವೇದಿ’ ಎಂಬ ಬಿಜೆಪಿಯ ವಕ್ತಾರರು!
ಸಂಘಪರಿವಾರದ ಚಿಂತನೆಯನ್ನು ಆಡಳಿತಾತ್ಮಕವಾಗಿ ಜಾಹೀರುಗೊಳಿಸುವ ಪಕ್ಷ ಬಿಜೆಪಿ ಎಂದು ಮೇಲ್ನೋಟಕ್ಕೆಅನ್ನಿಸಿದರೂ ಇತ್ತೀಚಿನ ಹಲವಾರು ಘಟನೆಗಳನ್ನು ನೆನೆಯುವಾಗ ಈ ಬಗ್ಗೆ ಸಂಶಯ ಮೂಡುವುದಿದೆ. ಏಕೆಂದರೆ ಸಂಘಪರಿವಾರದ ತತ್ವಗಳಿಗೂ, ಬಿಜೆಪಿಯ ಆಡಳಿತ ವೈಖರಿಗೂ ವ್ಯತ್ಯಾಸದ ದಪ್ಪಪದರವಿದೆ. ಹಿಂದುತ್ವದ ಪ್ರತಿಪಾದನೆಪರಿವಾರದ ಮೂಲಸಿದ್ಧಾಂತವಾದರೂ ದೇಶಭಕ್ತಿ ಮತ್ತು ಧರ್ಮಭಕ್ತಿಯನ್ನು ಒಂದೇ ನಾಣ್ಯದ ಎರಡು ಮುಖಗಳುಎಂದು ಅದು ನಂಬಿಕೊಂಡು ಬಂದಿರುವುದು ಅಲ್ಲಗಳೆಯಲಾಗದ ಮಾತು.
ಎಲ್ಲಿಯವರೆಗೆ ತತ್ವ-ಸಿದ್ಧಾಂತಗಳಿಗೆ ಮಸಿ ಮೆತ್ತುವುದಿಲ್ಲವೋ ಅಲ್ಲಿಯವರೆಗೂ ಪಕ್ಷವೊಂದು ಬೆಲೆಬಾಳಬಲ್ಲದು. ಈ ಎಲ್ಲ ವಿಚಾರವನ್ನು ಅವಲೋಕಿಸುವಾಗ ಸುಧಾಂಶು ಬಹಳ ಮೇಧಾವಿಯಾಗಿ ಕಾಣುತ್ತಾರೆ. ಶ್ರೀರಾಮನ ಅಸ್ತಿತ್ವದ ಬಗ್ಗೆ ಚರ್ಚೆಯೆದ್ದಾಗ ಸುಧಾಂಶು ಕೆಲವಾರು ವಾಸ್ತವದ ಮಾತನ್ನೆತ್ತಿ ವಿರೋಧಿಗಳ ಬಾಯಿಮುಚ್ಚಿಸುತ್ತಾರೆ.
‘ರಾಮನ ಹೆಸರನ್ನಿಡಿದು ಅದೆಷ್ಟು ದೇಶಗಳಿವೆ ನೋಡಿ! ಥಾಯ್ಲೆಂಡಿನ ಚಕ್ರ ರಾಜಮನೆತನದ ರಾಜನ ಹೆಸರು ಹತ್ತನೇ ರಾಮ, ಜಗತ್ತಿನ ಅತಿದೊಡ್ಡ ಮುಸ್ಲಿಂ ರಾಷ್ಟ್ರ ಇಂಡೋನೇಷ್ಯಾದ ರಾಷ್ಟ್ರೀಯ ಪ್ರಸಾರದಲ್ಲಿ ರಾಮಾಯಣ ಬಿತ್ತರಗೊಳ್ಳುತ್ತದೆ, ದಕ್ಷಿಣ ಕೊರಿಯಾದ ಮಂದಿ ತಮ್ಮನ್ನು ಶ್ರೀರಾಮನ ಕುಟುಂಬಸ್ಥರು ಎಂದು ಈಗಲೂ ವಾದಿಸುತ್ತಾರೆ. ಗಾಜಾದಲ್ಲಿನ ನಗರವೊಂದರ ಹೆಸರು ರಾಮ. ಅ ಸರಿ, ರಾಮ ಎಲ್ಲಿಂದ ಬಂದ?’- ಸುಧಾಂಶು ಬಾಯಲ್ಲಿ ಪಟಪಟನೆ ಹೀಗೆ ಸದ್ವಿಚಾರಗಳು ಬರುತ್ತಲೇ ಎದುರಾಳಿಯ ಎದೆಯಲ್ಲಿ ನಡುಕ ಶುರುವಾಗುತ್ತದೆ. ಅಷ್ಟಕ್ಕೂ ಈ ಎಲ್ಲ ಮಾತಿಗೆ ಏನೆಂದು ಪ್ರತಿಕ್ರಿಯಿಸಬಲ್ಲರು? ಅಸಹಿಷ್ಣುತೆ ಎಂದು ಊಳಿಟ್ಟ ಗುಳ್ಳೆನರಿಗಳಿಗೆ ಸುಧಾಂಶು ಝಾಡಿಸುವ ಪರಿ ಬಹಳ ಮಜವಾಗಿರುತ್ತದೆ.
ಅವರು ಇಸ್ರೇಲ್ ದೇಶದ ಉದಾಹರಣೆಯನ್ನು ಕೊಡುತ್ತಾರೆ. ಯಾವಾಗ ಇಸ್ರೇಲ್ ದೇಶ ಉದಯಿಸಿತೋ, ಆಗ ಯಹೂದಿ ಗಳು ಅಲ್ಲಿನ ಇತಿಹಾಸ ಬರೆಯಲು ಶುರುವಿಟ್ಟುಕೊಂಡರು. ಪ್ರಪಂಚದಾದ್ಯಂತ ತಮ್ಮ ಮೇಲಾದ ಅತ್ಯಾಚಾರ,ಅನಾಚಾರಗಳನ್ನು ದಾಖಲಿಸಲು ಶುರುವಿಟ್ಟುಕೊಂಡರು. ಆದರೆ ಭಾರತಕ್ಕೆ ಮಾತ್ರ   ,     ಎಂಬ ಪತ್ರವನ್ನು ಕಳುಹಿಸಲಾಯಿತು. ಭಾರತದ ಮೇಲೆ ನಮ್ಮ ‘ಹಕ್ಕು’ ಇದೆಎನ್ನುವ ಮುಸಲ್ಮಾನರಿಗೆ ಸುಧಾಂಶು ನೀಡುವ ಉತ್ತರ ಅವಲೋಕಿಸಲು ಅರ್ಹವಾದುದಾಗಿದೆ.
‘ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ಶಹನಾಯ್ ವಾದನ ಮಾಡಿದ್ದು ಉಸ್ತಾದ್ ಬಿಸ್ಮಿಲ್ಲ ಖಾನ್ ಅವರು. ಭಾರತದ ಸೇನೆಯ ಮೊದಲ ಗ್ಯಾಲಂಟ್ರಿ ಅವಾರ್ಡ್ ವಿಜೇತ ಬ್ರಿಗೇಡಿಯರ್ ಮೊಹಮ್ಮದ್ ಉಸ್ಮಾನ್. 1998ರ ಪೋಖ್ರಾನ್ ಅಣುಪರೀಕ್ಷೆ ಭಾರತದ ವೈeನಿಕ ಇತಿಹಾಸದ ಮೈಲಿಗಲ್ಲು, ಇದರ ವಾಸ್ತುಶಿಲ್ಪಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ. ಹಾಗಾದರೆ ಇವರೆಲ್ಲ ಹಕ್ಕನ್ನು ಕೇಳುತ್ತ ಕೂತವರೇ?’ ಎಂದು ಸುಧಾಂಶು ಪ್ರಶ್ನಿಸುತ್ತಾರೆ. ಅಲ್ಲಿಗೆ ಎದುರಿಗಿನ ವಕ್ತಾರರ ‘ಬೋಲ್ತೀಬಂದ್’ ಆಗುತ್ತದೆ.
ಸುಧಾಂಶು ಅವರ ಜ್ಞಾನದ ಮೂಲ ಗ್ರಂಥಗಳು. ಅವರು ಯಾವುದೇ ವಾದ ಮಂಡಿಸುವಾಗ ಅದಕ್ಕೆ ಮೂಲಆಕರಗಳನ್ನುತಿಳಿಸುತ್ತಾರೆ. ಭಾರತದಲ್ಲಿ ಕಲಿಸಿಕೊಟ್ಟ ಇತಿಹಾಸದ ಬಗ್ಗೆ ಅವರ ಅಸಮಾಧಾನ ವ್ಯಕ್ತಗೊಳ್ಳುವುದು ಹೀಗೆ. ಒಂದು ಡಿಬೇಟ್‌ನಲ್ಲಿ ಪ್ರತಿಪಕ್ಷದ ವಕ್ತಾರರು ‘ನಾವು ಕೇವಲ ಮೊಘಲರ ವಿಚಾರ ಓದಿಲ್ಲ, ಝಾನ್ಸಿರಾಣಿಯ ಕಥೆಯನ್ನೂ ಓದಿದ್ದೇವೆ’ ಎಂದು ಬೀಗುತ್ತ ಒಂದು ಕವನ ಹಾರಿಸುತ್ತಾರೆ. ತತ್‌ಕ್ಷಣ ಸುಧಾಂಶು, ‘ಇತಿಹಾಸದ ಪಠ್ಯಗಳು ನಮ್ಮನ್ನು ಹೇಗೆ ಮೋಸ ಮಾಡಿವೆ ಹೇಳುತ್ತೇನೆ ಕೇಳಿ. ಔರಂಗಜೇಬನ ತಂದೆ ಶಹಜಹಾನ್, ಶಹಜಹಾನ್‌ನ ತಂದೆ ಜಹಾಂಗೀರ್, ಜಹಾಂಗೀರನ ತಂದೆ ಅಕ್ಬರ್,… ಹೀಗೆ ನಿಮಗೆಲ್ಲ ಬಾಯಿಪಾಠವಿದೆ.
ಹಾಗಾದರೆ ಈಗ ಶಿವಾಜಿಯ ತಂದೆ, ಅಜ್ಜ, ಮುತ್ತಜ್ಜ ಅಥವಾ ಮಹಾರಾಣಾ ಪ್ರತಾಪನ ತಂದೆ, ಅಜ್ಜ, ಮುತ್ತಜ್ಜನ ಹೆಸರುಹೇಳಿ ನೋಡೋಣ. ಸಾಧ್ಯವಿದೆಯೇ? ಇಲ್ಲ! ಇದೇ ಇತಿಹಾಸದ ಪಾಠಪುಸ್ತಕಗಳು ನಮಗೆ ಮಾಡಿರುವ ಮೋಸ!’ಎನ್ನುತ್ತಾರೆ. ಸುಧಾಂಶು ಮಾಡುವ ಕೆಲವೊಂದುಉಖಗಳು ಅವರ ವಾದಗಳನ್ನು ಪುಷ್ಟೀಕರಿಸುತ್ತವೆ. ‘ಖ್ಯಾತ ನೊಬೆಲ್ ಪುರಸ್ಕೃತ ವಿ.ಎಸ್.ನೈಪಾಲ್ ಹೇಳುವ ಮಾತು ಕಟುವಾಸ್ತವ. ಅವರು ಹೇಳುತ್ತಾರೆ, ವ್ಯಕ್ತಿಯೊಬ್ಬನ ರಾಷ್ಟ್ರೀಯತೆಯನ್ನುದುರ್ಬಲಗೊಳಿಸುವ ಇತಿಹಾಸವನ್ನು ಕಲಿಸುವ ಏಕೈಕ ರಾಷ್ಟ್ರ ಭಾರತ.
ಅದರಲ್ಲೂ ತಾವು ಬರೆದ ಇತಿಹಾಸಕ್ಕಿಂತ ವಿದೇಶಿಗರು ಬರೆದ ಇತಿಹಾಸವೇ ಮೇಲು ಎನ್ನುವ ರಾಷ್ಟ್ರವಿದು. ಅದರಲ್ಲೂಯಾವ ವಿದೇಶಿಗರು? ಯಾರು ಅವರನ್ನು ಆಳಿದರೋ, ಯಾರು ಅವರನ್ನು ಗುಲಾಮರನ್ನಾಗಿ ಮಾಡಿದರೋ ಅವರುಬರೆದ ಇತಿಹಾಸವನ್ನೇ ಕಲಿಯುವ ರಾಷ್ಟ್ರವದು!’- ಸುಧಾಂಶು ಹೀಗೆ ಸತ್ಯ ತಲೆಯ ಮೇಲೆ ಹೊಡೆದಂತೆ ಹೇಳುವಾಗ ಎಂತಹಕಟುವಿರೋಧಿಗೂ ‘ಹೌದೌದು’ ಅನ್ನಿಸದೇ ಇದ್ದೀತೆ? ಭಾರತದ ಸಂಸ್ಕೃತಿ-ಸಂಸ್ಕಾರ ಮತ್ತು ಹಿಂದುತ್ವದ ಬಗ್ಗೆ ಪುರಾವೆ ಸಹಿತ ವಾದಕ್ಕಿಳಿಯಬಲ್ಲ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಸುಧಾಂಶು ಮೊದಲಿಗರೆಂದರೆ ಸುಳ್ಳಾಗದು.
ಇಂತಹ ವಿಚಾರದಲ್ಲಿ ಅವರ ಪಾಂಡಿತ್ಯ ಎಂಥವರನ್ನೂ ಬೆರಗುಗೊಳಿಸಬಲ್ಲದು. ಹಿಂದುತ್ವದ ಬಗ್ಗೆ ಅಪಸ್ವರವೆತ್ತುವವರನ್ನುಕುರಿತು ಸುಧಾಂಶು ಹೇಳುತ್ತಾರೆ, ‘ದೆಹಲಿಯಲ್ಲಿನ ಇಂಡೋನೇಷ್ಯಾ ರಾಯಭಾರಿ ಕಚೇರಿಯ ಗೇಟಿನಲ್ಲಿ ನೋಡಿ. ಅಲ್ಲಿ ಹೊರಗೆ ಗರುಡನ ಚಿತ್ರವಿದೆ. ಇಂಡೋನೇಷ್ಯಾದವರ ಬಳಿ ಕೇಳಿ ಇದಕ್ಕೂ ಅವರಿಗೂ ಏನು ಸಂಬಂಧವೆಂದು. ಏಕೆಂದರೆಗರುಡ ವಿಷ್ಣುವಿನ ವಾಹನ. ಅವರು ಹೇಳುತ್ತಾರೆ, ಇದು ನಮ್ಮ ಸಂಸ್ಕೃತಿ, ನಮ್ಮ ಧರ್ಮಕ್ಕೂ ಇದಕ್ಕೂ ಯಾವ ಸಂಬಂಧವೂಇಲ್ಲ ಎನ್ನುತ್ತಾರೆ’.
ಕಮ್ಯೂನಿಸ್ಟರೆಂದರೆ ಕಿಡಿಕಾರುವ ಸುಧಾಂಶು ಕಮ್ಯೂನಿಸ್ಟರ ಸಿದ್ಧಾಂತಕ್ಕೆ ನೀಡುವ ಉದಾಹರಣೆ ನೋಡಿ. ‘ಉಪ್ಪಿನರಾಸಾಯನಿಕ ಸೂತ್ರ “’. ‘’ ಅಂದರೆ ಸೋಡಿಯಂ ಮತ್ತು ‘’ಎಂದರೆ ಕ್ಲೋರೈಡ್. ಇವೆರಡರ ಮಿಶ್ರಣವೇ ನಾವುನಿತ್ಯ ಬಳಸುವ ಉಪ್ಪು. ಒಂದು ವೇಳೆ ನೀವು ಇದನ್ನು ತಿಳಿಯದವನಿಗೆ ಹೇಳಿದರೆ ಆತ ಮೊದಲು ಪದಕೋಶ ನೋಡುತ್ತಾನೆ. ಅಲ್ಲಿ ಇದರ ಬಗ್ಗೆ ಆತನಿಗೆ ಮಾಹಿತಿ ಸಿಗುವುದಿಲ್ಲ. ಆಗ ಆತ ಇದೆಲ್ಲವೂ ಬೊಗಳೆ, ಸುಳ್ಳು ಎಂದು ರೇಗಾಡುತ್ತಾನೆ.
ಇದೇ ಹಿಂದುತ್ವದ ತಿರುಳು ತಿಳಿಯದ ಮರುಳರ, ಬುದ್ಧಿಜೀವಿಗಳ, ಕಮ್ಯೂನಿಸ್ಟರ ಸಿದ್ಧಾಂತ! ಇವರಿಗೆ ಐಸ್ ಕ್ರೀಮ್ ಐವತ್ತು ಬಗೆಯದು ಬೇಕು, ಹಿಂದುಗಳಿಗೆ ದೇವರು ಒಬ್ಬನೇ ಯಾಕಿಲ್ಲ ಎಂದು ಕೇಳುತ್ತಾರೆ. ಮಳೆ ಬಂದಾಗ ನೀವು ಲೋಟ ಹಿಡಿದರೆ ಲೋಟದಷ್ಟು ನೀರು ಹಿಡಿಯುತ್ತದೆ. ಅದೇ ಸರೋವರದಲ್ಲಿ ಸರೋವರದಷ್ಟು ಹಿಡಿಯುತ್ತದೆ. ಅವರವರ ಜ್ಞಾನಕ್ಕೆ ತಕ್ಕುದಾಗಿ ಹಿಡಿಯುತ್ತದೆ’ ಎಂದು ಕುಟುಕುತ್ತಾರೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯ ಜತೆಗೆ ಪಿಎಚ್ .ಡಿ ಮುಗಿಸಿರುವ ಸುಧಾಂಶುರ ಜ್ಞಾನದ ಮೇಲೆಯೇ ನೂರಾರು ಜನ ಪಿಎಚ್.ಡಿ ಮಾಡಬಹುದು ಎಂದರೆ ಅತಿಶಯವಾಗದು! ಸುಧಾಂಶು ಡಿಬೇಟ್‌ಗೆ ಬರುತ್ತಿದ್ದೆರೆಂದರೆ ಎದುರಾಳಿಗೆ ಹೆಚ್ಚು ಕೆಲಸವೇನೂ ಇರುವುದಿಲ್ಲ! ತೆಪ್ಪಗೆ ಕೂತು ಕೇಳಿದರೆ ಸಾಕು, ಇವರು ಆಡಬಹುದಾದ ಮಾತಿಗೂ ಅವರು ಬ್ರೇಕ್ ಕೊಟ್ಟು ನಿಲ್ಲಿಸುತ್ತಾರೆ. ಸುಧಾಂಶುಗೆ ಎಲ್ಲಿ ಪೂರ್ಣವಿರಾಮ ನೀಡಬೇಕೆಂಬುದು ಸರಿಯಾಗಿ ತಿಳಿದಿದೆ. ಗಂಭೀರವದನರಂತೆ ಕಂಡರೂ ಅಲ್ಲಲ್ಲಿ ಅವರು ನೀಡುವ ಪಂಚ್‌ಗೆ ಎದುರು ಮಾತನಾಡುತ್ತಿರುವವರೇ ಕೆಲವೊಮ್ಮೆ ಸಂದರ್ಭ ಮರೆತು ನಕ್ಕುಬಿಡುವುದಿದೆ! ಅವರ ಡಿಬೇಟ್ ನೋಡುವವರು ಇನ್ನೊಂದು ವಿಚಾರವನ್ನು ಗಮನಿಸಿರಬಹುದು.
ಅವರು ಒಮ್ಮೆ ಆಡಿದ ಮಾತನ್ನು ಪುನರಾವರ್ತಿಸುವುದು ಬಹಳ ವಿರಳ. ಅರ್ಥಾತ್, ಅವರ ಜ್ಞಾನದ ಭಂಡಾರ ಆ ಮಟ್ಟಿಗಿನದು! ಹೀಗಾಗಿಯೇ ಅವರನ್ನು ಹಲವರು ‘ವಿದ್ವಾನ್’ ಎಂದೂ ಕರೆಯುತ್ತಾರೆ. ‘ಸುಧಾಂಶು ತ್ರಿವೇದಿಯವರ ಎದುರಿಗೆ ಡಿಬೇಟ್ ಗೆಲ್ಲುವುದು ಹೇಗೆಂದರೆ ಡಿಬೇಟ್‌ನಲ್ಲಿ ಪಾಲ್ಗೊಳ್ಳದೇ ಇರುವುದು’ ಎಂಬ ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಅವರ ಸಾಮರ್ಥ್ಯದ ಒಂದು ಮೂಲೆಯನ್ನಾದರೂ ಅರ್ಥೈಸೀತು.
ಬಿಜೆಪಿಯನ್ನು ಸಮರ್ಥಿಸುವ ಪ್ರತಿಯೊಬ್ಬರೂ ಸುಧಾಂಶುರಿಂದ ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟಿದೆ. ಹಿಂದುತ್ವ ವೆಂದರೆ ಬರಿಯ ಕೇಸರಿ ಶಾಲಲ್ಲ, ಹಣೆಯ ತಿಲಕ ಮಾತ್ರವಲ್ಲ. ಹಿಂದುತ್ವಕ್ಕೆ ಗಡಿ-ಸೀಮೆಯ ರೇಖೆಯಿಲ್ಲ, ನಿರ್ದಿಷ್ಟ ಮತವೊಂದಕ್ಕೆ ಅಂಟಿಕೊಂಡಿರುವ ಒಂದಿಷ್ಟು ತತ್ವವೂ ಅದಲ್ಲ. ಅದರ ಎಲ್ಲಾ ಮೊಗೆದಷ್ಟು ಮುಗಿಯದ್ದು ಎಂದು ಅರಿಯುವ ಅಗತ್ಯವಿದೆ. ೨೦೧೪ರ ಬಳಿಕ ಬಿಜೆಪಿಯಿಂದ ಆದ ಒಂದು ಮಹತ್ತರ ಬದಲಾವಣೆಯೆಂದರೆ ಅದು ಕೆಲವಾರು ಸ್ಥಾನಗಳಿಗೆ ಅತ್ಯಂತ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಿರುವುದು.
‘ಪದ್ಮ’ ಪುರಸ್ಕಾರಗಳ ಗೌರವದಿಂದ ಹಿಡಿದು ರಾಜ್ಯಸಭೆಗೆ ಮಾಡುವ ನೇಮಕಗಳವರೆಗೂ ಬಿಜೆಪಿಯ ಈ ನಿಲುವಿಗೆ ನಿದರ್ಶನ ಸಿಗುತ್ತದೆ. ಅದೇ ಸುಧಾಂಶು ವಿಚಾರದಲ್ಲೂ ಸತ್ಯ. ತಮ್ಮ ೩೫ನೇ ವಯಸ್ಸಿನಲ್ಲಿ ಸುಧಾಂಶು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರಾಜಕೀಯ ಸಲಹೆಗಾರರಾಗಿ, ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಕೋರ್ ಕಮಿಟಿಯಲ್ಲಿ ಸ್ಥಾನ ಪಡೆದರು. ಅವರ ಅಪರಿಮಿತ ಜ್ಞಾನಕ್ಕೆ, ನೈಪುಣ್ಯಕ್ಕೆ, ವಾಗ್ಝರಿಗೆ ಮನಸೋತು ಬಿಜೆಪಿಯ ಅರುಣ್ ಜೇಟ್ಲಿ ಸ್ಥಾನಕ್ಕೆ ಉತ್ತರಪ್ರದೇಶದಿಂದ ರಾಜ್ಯಸಭಾ ಸ್ಥಾನಕ್ಕೆ ಅವರನ್ನು ನೇಮಕ ಮಾಡಲಾಯಿತು. ಈ ನೇಮಕದ ಮೂಲಕ ಬಿಜೆಪಿ ತನ್ನ ಮೂಲಸಿದ್ಧಾಂತದ ಪ್ರತಿಪಾದಕರಿಗೆ ಮನ್ನಣೆ ನೀಡುವುದಾಗಿ ಪರೋಕ್ಷವಾಗಿ ಸಂದೇಶ ಕಳುಹಿಸಿದಂತಾಯಿತು.
ಬಿಜೆಪಿಯ ಹೆಸರಿಡಿದು ಎಂಥವರೂ ಗೆಲ್ಲಬಹುದಾದ ಉನ್ನತ ಜನಪ್ರಿಯತೆಯಲ್ಲಿ ಬಿಜೆಪಿ ಇದೆ ಎನ್ನುವುದೇನೋ ಸದ್ಯದ ಮಟ್ಟಿಗಿನ ಸತ್ಯವಾದರೂ ರಾಜಕೀಯ ನಿಂತ ನೀರಲ್ಲ ಎಂಬುದು ಬಿಜೆಪಿಗರು ಅರಿಯಲೇಬೇಕಾದ ವಾಸ್ತವ. ನರೇಂದ್ರ ಮೋದಿ ಜನಪ್ರಿಯತೆಯ ಉತ್ತುಂಗದಲ್ಲಿರುವುದು ಹೌದಾದರೂ, ಪಕ್ಷದ ಮೂಲಸಾರವಿಲ್ಲದೆ, ಸಿದ್ಧಾಂತದ ತಿಳುವಳಿಕೆಯಿಲ್ಲದೆ ಹೋದರೆ ಕಾಂಗ್ರೆಸ್ಸಿಗೂ ಬಿಜೆಪಿಗೂ ಬಹಳ ವ್ಯತ್ಯಾಸವೇನೂ ಕಾಣಿಸದು!
ಹೀಗಾಗಿ ತಕ್ಕಮಟ್ಟಿಗೆ ಮೋದಿ ಹೆಸರನ್ನು ಕೆಳಗಿಟ್ಟು ಬಿಜೆಪಿಯ ಮೂಲತತ್ವಗಳನ್ನು ಅರ್ಥೈಸಿಕೊಂಡು, ಸಿದ್ಧಾಂತಗಳನ್ನು ಮುನ್ನೆಲೆಗೆ ತಂದು ತಮ್ಮ ನಿಲುವನ್ನು ದೃಢಪಡಿಸಿಕೊಳ್ಳುವುದರ ಜತೆಗೆ ಮರ್ಥಿಸಿಕೊಳ್ಳಬೇಕಾಗಿರುವುದು ಸದ್ಯದ ತುರ್ತು. ಈವಿಚಾರದಲ್ಲಿ ಸುಧಾಂಶು ತ್ರಿವೇದಿಗಿಂತ ಉತ್ತಮ ನಿದರ್ಶನ ಬಿಜೆಪಿಗರಿಗೆ ಇನ್ಯಾರಲ್ಲೂ ಸಿಗದು!