ದೇಶಪ್ರೇಮಕ್ಕೆ ಒಂದು ವಿಶೇಷ ಮನೋಧರ್ಮ ಬೇಕು
ಪ್ರಸ್ತುತ
ಗ.ನಾ.ಭಟ್ಟ
‘ಅಮ್ಮಾ, ನಾನು ಹುಟ್ಟಿ ಬರುವ ಮೊದಲು ಎಲ್ಲಿದ್ದೆ?’ ಎಂದು ಚಿಕ್ಕ ಮಗುವೊಂದು ತಾಯಿಯನ್ನು ಕೇಳಿದಾಗ, ಆಕೆ ಮಗುವನ್ನುಎದೆಗವುಚಿಕೊಂಡು ಕಣ್ಣೀರು ಹಾಕುತ್ತ, ‘ಕಂದಾ, ನೀನು ಹುಟ್ಟುವ ಮೊದಲು ನಾನು ಬರೆಯುತ್ತಾ ಇದ್ದ ಹೆಣ್ಣುಗೊಂಬೆಗಳ ಚಿತ್ರದಲ್ಲಿದ್ದೆ. ಯಾವೆಲ್ಲ ಗೊಂಬೆಗಳನ್ನಿಟ್ಟುಕೊಂಡು ತಾಯಿ-ಮಗು ಅಂತ ಸಂಸಾರದ ಆಟವಾಡುತ್ತಿದ್ದೆನೋ ಆ ಆಟದಲ್ಲಿದ್ದೆ.
ನನ್ನ ಜೋಗುಳದಲ್ಲಿದ್ದೆ. ನಿನ್ನನ್ನು ಗರ್ಭದಲ್ಲಿ ಧರಿಸುವುದಕ್ಕೆ ನಾನು ಮಾಡಿದ ತಪಸ್ಸಿಗೆ ಇಂದು ನಿನಗೆ ಮೂರ್ತಸ್ವರೂಪ ಬಂದಿದೆ’ ಎನ್ನುತ್ತಾಳೆ (ರವೀಂದ್ರ ನಾಥ ಟ್ಯಾಗೋರರ ‘ಕ್ರೆಸೆಂಟ್ ಮೂನ್’ ಕವನ ಸಂಗ್ರಹದಿಂದ ಉದ್ಧೃತ). ಇಲ್ಲಿ ಮಗುವಿನ ಪ್ರಶ್ನೆಗೆ ತಾಯಿ ನೀಡಿದ ಉತ್ತರದಲ್ಲಿ ಒಂದು ದೇಶದ ಪರಿಕಲ್ಪನೆಯೇ ಅಡಗಿದೆ. ದೇಶವೆಂದರೆ ಏನು? ದೇಶಚಿಂತನೆ, ದೇಶಪ್ರೇಮ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಇದೊಂದು ರೋಚಕ, ಸಾಂಕೇತಿಕ ಅರ್ಥದಿಂದ ಕೂಡಿದ ಕವನ.
ಕೆಲವು ಪ್ರಶ್ನೆಗಳೇ ಹಾಗೆ. ಮನುಷ್ಯ ಎಂದರೇನು? ಸತ್ಯ, ಧರ್ಮ ಎಂದರೇನು? ಇಂಥ ಪ್ರಶ್ನೆ ಕೇಳುವುದು ಸುಲಭ, ಅವಕ್ಕೆ ಉತ್ತರಿ ಸುವುದು ಅಷ್ಟು ಸುಲಭವಲ್ಲ. ಹಾಗೆಯೇ ‘ದೇಶ’, ‘ದೇಶಪ್ರೇಮ’, ‘ರಾಷ್ಟ್ರಭಕ್ತಿ’ ಎಂದರೇನು? ಅಂತ ಕೇಳಿದರೆ ಥಟ್ಟನೆ ಉತ್ತರಿಸು ವುದು ಕಷ್ಟ. ದೇಶವೆಂದರೆ ಒಂದು ಭ್ರಮಾತ್ಮಕ, ಭಾವನಾತ್ಮಕ, ಧ್ಯೇಯಾತ್ಮಕ ಕಲ್ಪನೆಯೆ? ಬರೀ ಮಣ್ಣೇ, ಕಾಡೇ? ಕೇವಲ ಭೂಪ್ರದೇಶವೇ, ಭೂಪಟವೇ? ಅದೊಂದು ಜನಸಮೂಹವೇ, ಪರಿಸರವೇ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಹೌದು, ‘ದೇಶ’, ‘ರಾಷ್ಟ್ರ’ ಅನ್ನುವುದು ಒಂದು ಅಮೂರ್ತ ಕಲ್ಪನೆ. ಅದು ಕಣ್ಣಿಗೆ ಕಾಣುವುದಿಲ್ಲ. ದೇಶವನ್ನು ಪ್ರೀತಿಸುವುದಕ್ಕೆ,ರಾಷ್ಟ್ರಭಕ್ತಿ ಬೆಳೆಸಿಕೊಳ್ಳುವುದಕ್ಕೆ, ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಒಳಗಣ್ಣಿನ ಅಗತ್ಯವಿದೆ. ನಮ್ಮ ಬದುಕಿನಂತೆಯೇ ನಮ್ಮ ದೇಶದ ಬದುಕಿಗೂ ಏರಿಳಿತಗಳಿರುತ್ತವೆ; ನೋವು, ಸಂಕಟ, ಭಯ, ದುಃಖ, ಆಶೋತ್ತರಗಳಿರುತ್ತವೆ, ಕಷ್ಟ- ಸುಖಗಳಿರು ತ್ತವೆ.
ಅವಕ್ಕೆ ಸ್ಪಂದಿಸಲು, ಅವನ್ನು ಅರ್ಥಮಾಡಿಕೊಳ್ಳಲು ವಿಶೇಷ ಮನೋಧರ್ಮ ಬೇಕಾಗುತ್ತದೆ. ಅಂಥ ಮನೋಧರ್ಮ ಇಲ್ಲದ ವರು ದೇಶವನ್ನು ಸಮರ್ಥವಾಗಿ ಆಳಲಾರರು, ದೇಶಕ್ಕೆ ಗೌರವ ತರಲಾರರು, ಅದರ ಪ್ರತಿಷ್ಠೆ ಹೆಚ್ಚಿಸಲಾರರು. ನಮ್ಮ ದುರ ದೃಷ್ಟಕ್ಕೆ, ನಾವು ಸ್ವಾತಂತ್ರ್ಯ ಪಡೆದಂದಿನಿಂದ ಸುಮಾರು 65 ವರ್ಷಗಳ ಕಾಲ ನಮ್ಮ ದೇಶವು ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಅಡ್ಡದಾರಿ ಹಿಡಿಯಿತು.
ಸುಳ್ಳು ಭರವಸೆಗಳು, ಪೊಳ್ಳು ಘೋಷಣೆಗಳು, ಶತ್ರುಗಳ ಓಲೈಕೆ, ಶತ್ರು-ಮಿತ್ರ ಯಾರೆಂದು ತಿಳಿಯದ ಪರಮಮೂರ್ಖತನ ದಿಂದಾಗಿ, ಭಾರತದ ಭವ್ಯ ಪರಂಪರೆಯನ್ನು ಕಡೆಗಣಿಸಿ ನಮಗೆ ಹೊಂದದ ತತ್ತ್ವ-ಸಿದ್ಧಾಂತಗಳನ್ನು ಅಳವಡಿಸಲು ಹೋಗಿದ್ದ ರಿಂದಾಗಿ, ನಮ್ಮ ದೇಶ ಸಂಪೂರ್ಣ ಅವನತಿಯ ಹಾದಿ ಹಿಡಿಯಿತು. ಹೀಗಾಗಿ, 65 ವರ್ಷಗಳನ್ನು ನಾವು ವ್ಯರ್ಥವಾಗಿಸಿ ಕೊಂಡಿದ್ದೇವೆ.
ಇದಕ್ಕೆಲ್ಲ ಕಾರಣ, ತಮ್ಮ 29ನೇ ವಯಸ್ಸಿನವರೆಗೂ ಭಾರತದ ಒಂದು ಹಳ್ಳಿಯನ್ನೂ ನೋಡಿರದ ಜವಾಹರಲಾಲ್ ನೆಹರು ಎಂಬ ಷೋಕಿವಾಲನನ್ನು ಪ್ರಧಾನಮಂತ್ರಿಯಾಗಿ ಆಯ್ಕೆಮಾಡಿದ್ದು. ರಾಜ್ಯಶಾಸ್ತ್ರ, ಇತಿಹಾಸ, ಯುದ್ಧ-ಮುತ್ಸದ್ದಿತನ, ದೂರ ದರ್ಶಿತ್ವ, ಗಂಭೀರ ಚಿಂತನೆ, ರಾಷ್ಟ್ರಹಿತಾಸಕ್ತಿ, ರಾಷ್ಟ್ರ ಪ್ರೇಮಗಳ ಗಂಧ-ಗಾಳಿ ಇರದ, ಅವುಗಳ ಬಗ್ಗೆ ಆಸಕ್ತಿಯೂ ಇಲ್ಲದ ನೆಹರು ಪ್ರಧಾನಿ ಯಾದದ್ದು ಭಾರತದ ದೌರ್ಭಾಗ್ಯವೆಂದೇ ಹೇಳಬೇಕು. ಈ ಮಾತನ್ನು ಜೀರ್ಣಿಸಿಕೊಳ್ಳಲು ನೆಹರು ಭಕ್ತರಿಗೆ ಕಷ್ಟವಾಗಬಹುದು, ಆದರಿದು ಸತ್ಯ.
ರಾಷ್ಟ್ರಭಕ್ತಿ, ರಾಷ್ಟ್ರದ ಬಗೆಗಿನ ಕಾಳಜಿ ಇರುವ ಒಬ್ಬ ಪ್ರಧಾನಿಯನ್ನು ಪಡೆಯಲು ನಾವು 65 ವರ್ಷ ಕಾಯಬೇಕಾಯಿತು. ದೇಶವೊಂದರ ಆಗುಹೋಗುಗಳಿಗೆ ಸ್ಪಂದಿಸಲು, ಅದರ ಸಂಕಟ-ಸಂಕಷ್ಟಗಳನ್ನು ನಿವಾರಿಸಿ ಆಶೋತ್ತರಗಳನ್ನು ನೆರವೇರಿಸಲು ವಿಶೇಷ ಮನೋಧರ್ಮ ಬೇಕಾಗುತ್ತದೆ ಎಂದು ಮೇಲೆ ಉಲ್ಲೇಖಿಸಲಾಗಿದೆಯಲ್ಲವೇ? ಅಂಥ ವಿಶೇಷ ಮನೋಧರ್ಮ ಹೊಂದಿದವರು ಪ್ರಧಾನಿ ನರೇಂದ್ರ ಮೋದಿ. ಅವರ ‘ಮನ್ ಕೀ ಬಾತ್’ ಆಲಿಸಿದವರಿಗೆ ಅವರೆಂಥ ವ್ಯಕ್ತಿ ಎಂಬುದು ಮನವರಿಕೆ ಯಾಗುತ್ತದೆ.
ದೇಶದ ಪ್ರತಿಯೊಂದು ಸಂಗತಿಯನ್ನೂ ಅತ್ಯಂತ ಕಾಳಜಿಯಿಂದ ‘ದುರ್ಬೀನು ದೃಷ್ಟಿ’ಯಿಂದ ನೋಡುವ, ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಸದಾ ಆಲೋಚಿಸುವ, ದೇಶವನ್ನು ಅದಮ್ಯವಾಗಿ ಪ್ರೀತಿಸುವ ವಿಷಯದಲ್ಲಿ ಅವರಿಗೆ ಅವರೇ ಸಾಟಿ. ದೇಶದಲ್ಲಿ ಆಗಾಗ ಸಂಭವಿಸುವ ಭೂಕಂಪ-ಅತಿವೃಷ್ಟಿಯಂಥ ಪ್ರಾಕೃತಿಕ ವಿಕೋಪವಿರಲಿ, ಕೋವಿಡ್‌ನಂಥ ಭಯಂಕರ ರೋಗವಿರಲಿ, ಪರಿಹಾರೋಪಾಯ ಕಂಡುಕೊಳ್ಳಲು ಸದಾ ಸನ್ನದ್ಧರಾಗಿರುವ, ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬುವ ಮೋದಿ ಯಾರಿಗೂ ಆಪ್ತರಾಗಬಲ್ಲರು.
ಕೋವಿಡ್ ಅಪ್ಪಳಿಸಿದ ಕಾಲಘಟ್ಟದಲ್ಲಿ ಲಸಿಕೆ ತಯಾರಿಸಿ ಎಲ್ಲರೂ ಅದರಫಲಾನುಭವಿಗಳಾಗುವಂತೆ ಮಾಡಿದ್ದಲ್ಲದೆ ಇತರ ದೇಶಗಳಲ್ಲೂ ಅದಕ್ಕೆ ಮಾರುಕಟ್ಟೆ ಕಲ್ಪಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅದನ್ನು ಸಾಧಿಸಿ ತೋರಿಸಿದ್ದಾರೆ ಮೋದಿ. ಅವರ ದೇಶಪ್ರೇಮದ ಪರಿ ತಿಳಿಯಲು ಅವರು ಆಚರಣೆಗೆ ತಂದ ‘ಯೋಗದಿವಸ’ ಒಂದೇ ಸಾಕು. ‘ಇಡೀ ವಿಶ್ವವೇ ಯೋಗದ ವಿಷಯಕ್ಕೆ ಆಕರ್ಷಿತವಾಗಿದೆ.
ಅಂತಾರಾಷ್ಟ್ರೀಯ ಯೋಗದಿವಸವನ್ನು ಆಚರಿಸಿದಾಗ ಇಡಿ ಜಗತ್ತೇ ಜತೆಗೂಡಿತು. ಆಗ ನಮ್ಮದು ಹಿಂದೂಸ್ಥಾನ ಎಂಬ ಭಾವಮೂಡಿತು. ಯಾವಾಗ ನಮ್ಮ ವಿರಾಟ್‌ರೂಪದ ದರ್ಶನವಾಗುತ್ತದೋ, ಆಗ ನಮ್ಮಲ್ಲಿ ಅಂಥ ಭಾವ ಮೂಡುತ್ತದೆ’ ಎಂದು ಮೋದಿಯವರು ಹೇಳುತ್ತ ಅದನ್ನು ಪುರಾಣಪ್ರಜ್ಞೆಯಿಂದ ಸಮರ್ಥಿಸುವ ಪರಿ ನಿಜಕ್ಕೂ ಚೇತೋಹಾರಿ. ಈ ನಿಟ್ಟಿನಲ್ಲಿ ಅವರು ಕೊಡುವ ಉದಾಹರಣೆ ಮನನಾರ್ಹವಾದುದು- ‘ಬಾಲಕೃಷ್ಣ ಯಾವಾಗ ತನ್ನ ಬಾಯಿತೆರೆದು ತಾಯಿ ಯಶೋದೆಗೆ ಇಡೀಬ್ರಹ್ಮಾಂಡವನ್ನು ತೋರಿಸಿದನೋ, ಆಗ ಅವಳಿಗೆ ಅವನ ಶಕ್ತಿಯ ಅರಿವಾಯಿತು.
ಹಾಗೆಯೇ ನಾವು ಯೋಗವನ್ನು ಜಗತ್ತಿಗೆ ತೋರಿಸಿದಾಗ, ನಮ್ಮ ಶಕ್ತಿಯ ಅರಿವು ಜಗತ್ತಿಗೆ ಆಯಿತು’ ಎನ್ನುತ್ತಾರೆ ಮೋದಿ. ಭಾರತದ ಪುರಾಣಪ್ರಜ್ಞೆ ಇದ್ದವರು ಮಾತ್ರ ಇಂಥ ದಾರ್ಶನಿಕ, ಒಳನೋಟದ ಮಾತುಗಳನ್ನು ಆಡಬಲ್ಲರು. ಈಗಿನ ಪ್ರಧಾನಿ ಅಂಥವ ರಾಗಿದ್ದು ನಮ್ಮ ಸುದೈವ. ಲಾಲ್ ಬಹಾದುರ್ಶಾಸ್ತ್ರಿ,ಅಟಲ್ ಬಿಹಾರಿ ವಾಜಪೇಯಿ ಮತ್ತು ಪಿ.ವಿ. ನರಸಿಂಹರಾವ್‌ರಂಥಕೆಲವರನ್ನು ಹೊರತುಪಡಿಸಿದರೆ ಮಿಕ್ಕ ಯಾವ ಪ್ರಧಾನಿಗೂ ಭಾರತದ ಇತಿಹಾಸ, ಪುರಾಣ, ಕಾವ್ಯಗಳ ಪರಿಚಯ ಅಷ್ಟೊಂದು ಇರಲಿಲ್ಲ ಎನಿಸುತ್ತದೆ.
ದೇಶದ ಅಖಂಡತೆಗಾಗಿ ದುಡಿದ ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮದಿನವನ್ನು (ಅಕ್ಟೋಬರ್ 31) ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಣೆಗೆ ತಂದಿದ್ದು, ಜೀವನ್ಮರಣವನ್ನು ಲೆಕ್ಕಿಸದೆ ದೇಶಕ್ಕಾಗಿ ಹೋರಾಡುವ ಸೈನಿಕರಿಗಾಗಿ ‘ಒನ್ ರ‍್ಯಾಂಕ್-ಒನ್ ಪೆನ್ಷನ್’ ಯೋಜನೆ ಜಾರಿಗೆ ತಂದಿದ್ದು ಮೋದಿಯವರ ಹೆಗ್ಗಳಿಕೆ. ಈ ಯೋಜನೆಯ ಜಾರಿಯ ವೇಳೆ ಮೋದಿ, ‘ಇದನ್ನು ನಾನುಪ್ರಧಾನಮಂತ್ರಿಯಾಗಿ ಜಾರಿಮಾಡುತ್ತಿಲ್ಲ, ನನ್ನೊಳಗಿನ ಮಾನವೀಯತೆ ಮತ್ತು ಹೃದಯದ ಸತ್ಯವಂತಿಕೆಯಿಂದ ಮನಃ ಪೂರ್ವಕವಾಗಿ ಅನುಷ್ಠಾನಗೊಳಿಸುತ್ತಿದ್ದೇನೆ.
ಇದು ರಾಜನೀತಿಯ ಕಾರ್ಯಕ್ರಮವೂ ಅಲ್ಲ, ಸರಕಾರಿ ಕಾರ್ಯಕ್ರಮವೂ ಅಲ್ಲ. ಇದು ರಾಷ್ಟ್ರಭಕ್ತಿಯ ಪ್ರತೀಕ’ ಎಂದಿದ್ದುಶ್ಲಾಘನೀಯ. ಮೋದಿಯವರು ಅಪ್ರತಿಮ ದೇಶಭಕ್ತ. ಬ್ರಿಟಿಷರು ನಮ್ಮನ್ನಾಳಿದ್ದಕ್ಕೆ, ನಮ್ಮ ಸಂಸ್ಕೃತಿಯ ನಾಶಕ್ಕೆ ಯತ್ನಿಸಿದ್ದಕ್ಕೆಅವರಿಗೆ ಸಹಿಸಲಾರದಷ್ಟು ವೇದನೆಯಿದೆ. ನಮ್ಮನ್ನಾಳಿದ ಬ್ರಿಟಿಷರ ಕುರುಹೂ ಇರಬಾರದು ಎಂಬುದು ಅವರ ಬಯಕೆ. ಬ್ರಿಟಿಷರ ಅರಸೊತ್ತಿಗೆಯ ಸಂಕೇತವಾಗಿದ್ದ ನವದೆಹಲಿಯ ರಾಜಬೀದಿಗಿದ್ದ ‘ರಾಜ್‌ಪಥ್’ ಹೆಸರನ್ನು ತೆಗೆದು ಅದಕ್ಕೆ ‘ಕರ್ತವ್ಯ ಪಥ’ ಎಂದು ಮರುನಾಮಕರಣ ಮಾಡಿದ್ದು ಅವರೆಂಥ ಕೆಚ್ಚೆದೆಯ ದೇಶಭಕ್ತ, ಧೈರ್ಯಶಾಲಿ ಎಂಬುದರ ದ್ಯೋತಕ.
ಅಂದು ಅವರು, ಇಂಡಿಯಾ ಗೇಟ್ ನಲ್ಲಿದ್ದ ಬ್ರಿಟಿಷ್ ರಾಜ ೫ನೇ ಜಾರ್ಜ್‌ನ ಪ್ರತಿಮೆ ಸರಿಸಿ, ಸ್ವಾತಂತ್ರ್ಯ ಹೋರಾಟದ ಮಹತ್ವದ ನಾಯಕರೆನಿಸಿಕೊಂಡಿದ್ದ ಸುಭಾಷ್‌ಚಂದ್ರ ಬೋಸರ ಪ್ರತಿಮೆಯನ್ನು ಅಲ್ಲಿ ಪ್ರತಿಷ್ಠಾಪಿಸಿದ್ದು ಅವರ ಗಂಡೆದೆಗೆ ಬರೆದ ಭಾಷ್ಯ. ಮಿಕ್ಕಂತೆ, ನೌಕಾಪಡೆಯ ಧ್ವಜದಲ್ಲಿದ್ದ ಸೇಂಟ್ ಜಾರ್ಜ್‌ನ ಕ್ರಾಸ್ ಗುರುತನ್ನು ತೆಗೆದು ಛತ್ರಪತಿ ಶಿವಾಜಿಯ ಮುದ್ರೆ ಅಳವಡಿ ಸಿದ್ದು, ಪ್ರಧಾನಿ ನಿವಾಸವಿರುವ ರೇಸ್‌ಕೋರ್ಸ್ ರಸ್ತೆಗೆ ‘ಲೋಕಕಲ್ಯಾಣ ಮಾರ್ಗ’ವೆಂದು ಕರೆದಿದ್ದು, ಬ್ರಿಟಿಷರ ಕಾಲದ ಮತ್ತು ಈ ಕಾಲಕ್ಕೆ ತೀರಾ ಅಪ್ರಸ್ತುತವಾಗಿದ್ದ 1500ಕ್ಕೂ ಹೆಚ್ಚು ಕಾನೂನುಗಳನ್ನು ಮತ್ತು ಜಮ್ಮು- ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು, ಗಣರಾಜ್ಯೋತ್ಸವದ ವೇಳೆ ಬೀಟಿಂಗ್ ರಿಟ್ರೀಟ್‌ನಲ್ಲಿ ನುಡಿಸ ಲಾಗುತ್ತಿದ್ದ ಆಂಗ್ಲಗೀತೆಯೊಂದಕ್ಕೆ ತಿಲಾಂಜಲಿಯಿತ್ತು ‘ಯೇ ಮೇರೆ ವತನ್ ಕೆ ಲೋಗೋ’ ಗೀತೆಯನ್ನು ಆ ಜಾಗದಲ್ಲಿ ಅಳವಡಿ ಸಿದ್ದು, ಬ್ರಿಟಿಷ್ ಪರಂಪರೆಯಂತೆ ಪ್ರತ್ಯೇಕವಾಗಿ ಮಂಡಿಸಲಾಗುತ್ತಿದ್ದ ರೇಲ್ವೆ ಬಜೆಟ್ ಅನ್ನು ಕೇಂದ್ರ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಿದ್ದು ಹೀಗೆ ಹಲವು ಸಾಧನೆಗಳು ಮೋದಿಖಾತೆಯಲ್ಲಿ ದಾಖಲಾಗಿವೆ.
ಒಟ್ಟಿನಲ್ಲಿ, ಮೋದಿಯವರು ನಮ್ಮ ದೇಶ ಕಂಡ ಒಬ್ಬ ಅಪರೂಪದ, ದಕ್ಷ ಆಡಳಿತಗಾರ ಎಂಬುದರಲ್ಲಿ ಎರಡು ಮಾತಿಲ್ಲ.ವೋಟ್‌ಬ್ಯಾಂಕ್ ರಾಜಕಾರಣ, ಕುಟುಂಬ ರಾಜಕಾರಣ, ಸ್ವಾರ್ಥ, ಭ್ರಷ್ಟಾಚಾರ ಮೊದಲಾದ ಅನಿಷ್ಟ ಪರಂಪರೆಗಳಲ್ಲೇ ಮುಳುಗಿ ಹೋಗಿದ್ದ ನಮ್ಮ ರಾಜಕಾರಣಿಗಳಿಗೆ ಭಾರತೀಯತೆ, ರಾಷ್ಟ್ರಭಕ್ತಿ, ನಮ್ಮತನ ಮುಂತಾದವುಗಳು ಗಮನಕ್ಕೇ ಬರಲಿಲ್ಲ ಎನ್ನಬೇಕು. ಇಂಥ ಗುಣಗಳನ್ನು ಜಾಗೃತಗೊಳಿಸಲು ನರೇಂದ್ರ ಮೋದಿಯವರೇ ಬರಬೇಕಾಯಿತು.
ಇಂದು ಅವರಿಗೆ 72 ತುಂಬಿ 73ರ ಹರೆಯ ಆರಂಭವಾಗುತ್ತದೆ (ಜನನ: 1950ರ ಸೆಪ್ಟೆಂಬರ್ 17). ಭಗವಂತ ಅವರಿಗೆ ಮತ್ತಷ್ಟು ಆಯಸ್ಸು-ಆರೋಗ್ಯ ಕೊಟ್ಟು ಭಾರತಾಂಬೆಯ ಸೇವೆಗೆ ಅವರನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಲಿ ಎಂದು ಹೃತ್ಪೂರ್ವಕ ವಾಗಿ ಹಾರೈಸೋಣ.