ಕಡುವೈರಿಗೂ ಬಾರದಿರಲಿ ಅಲ್ಜೀಮರ್‌ ಕಾಯಿಲೆ !
ಯೋಗಕ್ಷೇಮ
ಡಾ.ಕರವೀರಪ್ರಭು ಕ್ಯಾಲಕೊಂಡ
’            -  ‘ಅರವತ್ತಕ್ಕೆ ಅರಳು ಮರಳು’ ಎನ್ನುತ್ತಾರೆ.
ಮುದುಕರಿಗೆ ಮುತ್ತಿಗೆ ಹಾಕುವ ಅಲ್ಜೀಮರ್ ಕಾಯಿಲೆಯಲ್ಲಿ ಮರೆವು ಮಾತ್ರವೇ ಹೆಚ್ಚಾಗುವುದಿಲ್ಲ, ಪರಿವರ್ತನೆಯ ಬದಲಾವಣೆಗಳಿಗೂ ಇಲ್ಲಿ ಬರವಿಲ್ಲ. ಹಾಗೆ ನೋಡಿದರೆ, ವೃದ್ಧಾಪ್ಯದಲ್ಲಿ ಸ್ಮರಣಶಕ್ತಿ ಹಾಗೂ ಬೌದ್ಧಿಕಶಕ್ತಿ ಕಡಿಮೆಯಾಗುವುದು ಸಾಮಾನ್ಯ. ಆದರೆ ಅಲ್ಜೀಮರ್ ಕಾಯಿಲೆಯಲ್ಲಿ ಇದರ ಪರಿಣಾಮ ಅದೆಷ್ಟು ತೀವ್ರ ವಾಗಿರುತ್ತದೆಂದರೆ ರೋಗದ ಅಂತಿಮ ಅವಸ್ಥೆಯಲ್ಲಿ ರೋಗಿಯ ಶಾರೀರಿಕ ಹಾಗೂ ಬೌದ್ಧಿಕ ಕ್ಷಮತೆ ಶೂನ್ಯಕ್ಕೆ ಸಮನಾಗಿರುತ್ತದೆ. ಈ ರೋಗ ವೃದ್ಧರನ್ನು ದಯನೀಯ ಸ್ಥಿತಿಗೆ ದೂಡುತ್ತದೆ.
ಈ ರೋಗವು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ನಿಧಾನವಾಗಿ ನಷ್ಟಗೊಳಿಸುತ್ತ ಹೋಗುತ್ತದೆ. ಪ್ರತಿಯೊಂದು ರೋಗದಲ್ಲೂ ವೈದ್ಯಕೀಯ ಚಟುವಟಿಕೆಗೆ ತಾತ್ಪೂರ್ತಿಕ ಅಡೆತಡೆ ಉಂಟಾಗುವುದು ಸಹಜ. ಆದರೆ ಈ ರೋಗ ಮನುಷ್ಯನ ಚೈತನ್ಯವನ್ನೇ ಉಡುಗಿಸುತ್ತದೆ. ಬ್ರಿಟನ್ ವಿಜ್ಞಾನಿಗಳು ಅಲ್ಜೀಮರ್ ರೋಗದ ರಹಸ್ಯವನ್ನು ಪತ್ತೆ ಹಚ್ಚುತ್ತ, ‘ಈ ಕಾಯಿಲೆಯಿರುವ ರೋಗಿಗಳ ಮಿದುಳಿನ ಯಾವ ಭಾಗದಲ್ಲಿ ಆಕುಂಚನ ಗೊಂಡಿರುತ್ತೊ, ಆ ಭಾಗದ ರೋಗದ ಪ್ರಭಾವವಿರುತ್ತದೆ’ ಎಂದಿದ್ದಾರೆ.
ನೆದರ್ಲೆಂಡ್ ವಿಜ್ಞಾನಿಗಳು, ‘ಧೂಮಪಾನ ಮಾಡುವವರು ವೃದ್ಧಾಪ್ಯದಲ್ಲಿ ಅಲ್ಜೀಮರ್ ಕಾಯಿಲೆಗೆ ಸಿಲುಕುವ ಸಾಧ್ಯತೆ ಹೆಚ್ಚು’ ಎಂದು ಹೇಳಿದ್ದಾರೆ.
ಕಾರಣಗಳು:ಜಗತ್ತಿನಲ್ಲಿ ಇಲ್ಲಿಯವರೆಗೆ ಆದ ಸಂಶೋಧನೆಗಳ ಸಾರವನ್ನು ಕ್ರೋಡೀಕರಿಸಿದಾಗ ಅಲ್ಜೀಮರ್ ಕಾಯಿಲೆಗೆ ನಾಂದಿ ಹಾಡಬಹುದಾದ ಕಾರಣಗಳು ಹೀಗಿವೆ: ಸ್ತನಪಾನ ಮಾಡದೇ ಇರುವುದು, ವಯಸ್ಸಿಗನು ಗುಣವಾಗಿ ಲೈಂಗಿಕ ಹಸಿವನ್ನು ಹಿಂಗಿ ಸದೇ ಇರುವುದು, ಅತಿಯಾದ ಮಾನಸಿಕ ಒತ್ತಡಗಳಿಗೆ ತುತ್ತಾಗುವುದು, ಧೂಮಪಾನ, ಮದ್ಯಪಾನ ಮುಂತಾದ ಮಾದಕವಸ್ತುಗಳ ಅತಿಬಳಕೆಯಿಂದಾಗಿಯೂ ಹಿಪೊಕ್ಯಾಂಪಸ್‌ನ ನರ-ಊತಕಗಳು ಕಡಿಮೆಯಾಗುತ್ತವೆ.
ಇದರ ಫಲವಾಗಿ ವೃದ್ಧಾಪ್ಯದಲ್ಲಿ ಅಲ್ಜೀಮರ್ ರೋಗ ವಕ್ಕರಿಸುತ್ತದೆ. ಈ ಅವಸ್ಥೆಯನ್ನು ಉದ್ರೇಕಿಸಲು ಜೀವನದ ಯಾವುದಾ ದರೂ ಕರುಣಾಜನಕ ಘಟನೆ ಕಾರಣವಾಗಿರುತ್ತದೆ. ಅಲ್ಜೀಮರ್ ಸಮಸ್ಯೆಯಿಂದ ದೂರವಿರಲು ಸಾಕಷ್ಟು ನಿದ್ರೆ ಮಾಡಬೇಕು. ಏಕೆಂದರೆ, ನಿದ್ರಾಹೀನತೆ ಇದಕ್ಕೆ ಆಹ್ವಾನ ನೀಡುವುದು. ಹೀಗಾಗಿಯೇ ದೀಪಕ ಚೋಪ್ರಾ ಎಂಬ ತಜ್ಞರು, “     ’ ,     ’ ಎಂದು ಹೇಳುತ್ತಾರೆ.
ರೋಗದ ಲಕ್ಷಣಗಳು:ಇದು ಮಿದುಳಿನ ಕಾರ್ಯಕ್ಷೇತ್ರದ ನರಗಳನ್ನು ನಾಶಗೊಳಿಸುವುದರಿಂದ ಮಿದುಳಿನ ಸಂಪರ್ಕಸಮನ್ವಯತೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಅಲ್ಜೀಮರ್‌ನಲ್ಲಿ ಮಾನಸಿಕ ಬದಲಾವಣೆ ಸ್ವರೂಪ ಮತ್ತು ಉಗ್ರತೆಯಲ್ಲಿ ಬಹಳ ವೈವಿಧ್ಯಗಳಿದ್ದು, ಈ ಕಾಯಿಲೆಯ ಕೆಲವು ವಿಶಿಷ್ಟ ಲಕ್ಷಣಗಳು ಹೀಗಿವೆ: ಸ್ಮರಣಶಕ್ತಿ ನಿಧಾನವಾಗಿ ಕುಂದುವುದು.
ವಾಸ್ತವತೆಯ ಅರಿವೇ ಹೊರಟು ಹೋಗುವುದು. ತರ್ಕಸಮ್ಮತ ಇಲ್ಲವೆ ವಿವೇಕಪೂರ್ಣ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ದಲ್ಲೂ ಇಳಿಮುಖವಾಗುವುದು. ವಸ್ತುಗಳನ್ನು, ವ್ಯಕ್ತಿಗಳನ್ನು ಗುರುತಿಸುವಿಕೆಯಲ್ಲಿ ತೊಂದರೆ ಉಂಟಾಗುವುದು. ಈ ಕಾಯಿಲೆಗೆ ಬಲಿಯಾದವರು ಯಾವ ವಿಷಯವನ್ನೂ ಕಲಿತುಕೊಳ್ಳಲಾರರು. ದೈನಂದಿನ ಕೆಲಸಗಳನ್ನು ಪೂರೈಸುವ ಸಾಮರ್ಥ್ಯದಲ್ಲೂ ಇಳಿಮುಖ ಕಂಡುಬರುವುದು.
ಭಾಷಾಪ್ರತಿಭೆ ಕಡಿಮೆಯಾಗುತ್ತ ಹೋಗುವುದು ಇಲ್ಲವೆ ಭ್ರಮಾಸ್ಥಿತಿ ರೂಪುಗೊಳ್ಳುವುದು. ಕಾರಣವಿಲ್ಲದೆ ಕೈ ಕಾಲುಗಳನ್ನು ಅಡಿಸುವ ಪರಿಪಾಠ ಕಂಡುಬರುವುದು. ನಿದ್ರೆ ಬರದಿರುವಿಕೆ ಹಾಗೂ ನಿದ್ರೆಯ ಹವ್ಯಾಸಗಳಲ್ಲಿ ಬದಲಾವಣೆಯಾಗುವಿಕೆ.ಧೈರ್ಯ ಕುಂದುವುದು, ಕ್ರೋಧ ಹೆಚ್ಚುವುದು. ತನ್ನನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿಯ ವಿರುದ್ಧವೇ ರೋಗಿಯು ಹೆಚ್ಚು ಸಿಟ್ಟು-ಸೆಡವು ತೋರಿಸುವಂತಾಗುವುದು. ಕತ್ತಲು ಹಾಗೂ ಒಂಟಿತನದ ಬಗ್ಗೆ ಭಯವುಂಟಾಗುವುದು. ಸ್ವಯಂ ಕಾಳಜಿಯ ಹವ್ಯಾಸ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ಸಂಬಂಧಗಳ ಬಗ್ಗೆ ಪ್ರಜ್ಞೆ ಇರದಿರುವುದು. ಸಾಮಾಜಿಕ ನಿಯಮಗಳಿಂದ ದೂರವಿರುವುದು. ಈ ಎಲ್ಲದರ ಪರಿಣಾಮವಾಗಿ ವ್ಯಕ್ತಿಯು ಮರೆವಿನ ರೋಗದ ಬಲೆಯಲ್ಲಿ ಬಂದಿಯಾಗುವುದು. ಜೇಡರ ಬಲೆಯಲ್ಲಿ ಸಿಕ್ಕಿಕೊಂಡ ಕೀಟದಂತೆ ಹೊರಬರಲಾಗದೆ,ಅಲ್ಲಿಯೂ ಇರಲಾರದೆ ಪೇಚಾಡುವಂತಾಗುವುದು.
ಬದಲಾವಣೆಗಳ ಪರ್ವ:ಮಿದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದ ಅಲ್ಲಿಯ ನರಗಳು ಕೃಶವಾಗುತ್ತವೆ. ರೋಗ ಯುಕ್ತ ಗಂಟುಗಳು ಉಂಟಾಗಿ ಅವುಗಳ ನಡುವೆ ಹಕ್ಕಳೆಗಳು () ರೂಪುಗೊಳ್ಳುತ್ತವೆ ಮತ್ತು ಇವು ಸೂಕ್ಷ್ಮದರ್ಶಕ ದಡಿ ಯಲ್ಲಿ ಗೋಚರಿಸುತ್ತವೆ. ಇವೇ ಈ ಕಾಯಿಲೆಯ ಪ್ರಮುಖ ಪುರಾವೆಗಳು.
ಮಿದುಳು ಸೊರಗಿ ಗಾತ್ರದಲ್ಲಿ ಕುಗ್ಗಿ ಭಾಗಶಃ ನಿಷ್ಕ್ರಿಯಗೊಳ್ಳುತ್ತದೆ. ತೊಗಟೆಯ ನರಕಣಗಳು ಗಣನೀಯ ಸಂಖ್ಯೆಯಲ್ಲಿ ನಶಿಸು ತ್ತವೆ. ಹಿಪೊಕ್ಯಾಂಪಸ್ ಭಾಗದಲ್ಲಿನ ಬೀಟಾ ಅಮೈಲಾಯ್ಡ ಹಕ್ಕಳೆಗಳು, ನಾಶಗೊಂಡ ನರಕಣ ಭಾಗದಲ್ಲಿ ತುಂಬಿ ಕೊಳ್ಳುತ್ತವೆ. ಈ ವಸ್ತುವು ಕಪೋಲ () ಮತ್ತು ನೆತ್ತಿ () ಭಾಗಗಳಲ್ಲಿಯೂ ಕಂಡುಬರುತ್ತದೆ. ಈ ಮೂರೂ ತಾಣಗಳಲ್ಲಿ ನರದ ಎಳೆಗಳು ಬಲೆಯ ರೂಪದಲ್ಲಿ ಗಂಟುಕಟ್ಟಿಕೊಂಡು, ಅದರಲ್ಲಿ ರಂಜಕಯುಕ್ತ ಪ್ರೋಟೀನು ಸರಪಳಿಯ ತುಂಟುಗಳು ತುಂಬಿ ಕೊಳ್ಳುತ್ತವೆ. ಹೀಗಾಗಿ ಈ ಕಣದ ಕೊರತೆ ಉದ್ಭವಿಸಿ ಸಂಜ್ಞಾವಾಹಕ ನರಕಣಗಳು ಘಾಸಿಗೊಳ್ಳುತ್ತವೆ.
ಸಂಜ್ಞಾಸಂವಹನೆ ಕ್ಷೀಣಿಸಿ ಬೌದ್ಧಿಕ ಮಟ್ಟ, ನೆನಪು ಮುಂತಾದ ಜ್ಞಾನಗಳು ಕುಂಠಿತಗೊಳ್ಳುತ್ತವೆ. ‘        ’ ಎಂದು ಅರಿಸ್ಟಾಟಲ್ ಹೇಳಿದ್ದಾರೆ. ಇದು ಸಾರ್ವಕಾಲಿಕ ಸತ್ಯ. ಇದರ ಜತೆಗೆ ಅಸಿಟೈಲ್ ಕೋಲಿನ್ ಎನ್ನುವ ರಾಸಾಯನಿಕದ ಉತ್ಪತ್ತಿ ಕಡಿಮೆಯಾಗುವುದರಿಂದ ಒಂದು ಕಣ ಮತ್ತೊಂದು ಕಣದೊಂದಿಗೆ ಸಂಪರ್ಕ ಸಾಧಿಸಲಾರದೆ ಹೋಗುತ್ತದೆ.
ರೋಗ ನಿಧಾನ:ದೈಹಿಕ ಪರೀಕ್ಷೆಯ ಫಲಿತಾಂಶ- ಚಲನವಲನಗಳಲ್ಲಿ ಏರುಪೇರು ಉಂಟಾಗುವುದು, ಪರಿಜ್ಞಾನದ ಕಿರು ಪರೀಕ್ಷೆ (   ), ಮನಸ್ವಾಸ್ಥ್ಯದ ಅಂಶಗಳಲ್ಲಿ ಒಂದೆರಡಾದರೂ ಕುಂದುಕೊರತೆಗಳು ಕಂಡು ಬರುವುದು, ನೆನಪಿನ ಶಕ್ತಿ ಮತ್ತು ಬೌದ್ಧಿಕ ಮಟ್ಟದಲ್ಲಿನ ಇಳಿತ, ೪೦ ರಿಂದ ೯೦ರ ನಡುವಿನ ವಯಸ್ಸು ಇವೆಲ್ಲವೂ ಒಟ್ಟಾಗಿ ಕಂಡುಬಂದಲ್ಲಿ ಮನೋವಿಕಲ್ಪ ರೋಗಿಯು ಅಲ್ಜೀಮರ್ ಕಾಯಿಲೆಯಿಂದ ಬಳಲುತ್ತಿರಬಹುದೆಂದು ತಿಳಿಯಬಹುದು.
ಪರೀಕ್ಷೆಯ ಸಮಯದಲ್ಲಿ ಭಯಭೀತರಾದ, ತಲ್ಲಣಗೊಂಡ ರೋಗಿಗಳಿಗೆ ಸಿ.ಟಿ. ಸ್ಕ್ಯಾನ್ ಪರೀಕ್ಷೆಯೇ ಸೂಕ್ತ.  (    ) ಪರೀಕ್ಷೆಯು ಎಂಆರ್‌ಐಗಿಂತ ನಿಖರವಾಗಿದ್ದು, ಅದರ ಚಿತ್ರಣದಲ್ಲಿ ಮಿದುಳಿನ ಪಾರ್ಶ್ವ ಮತ್ತು ಕಪೋಲ ಭಾಗದಲ್ಲಿ ರಕ್ತದ ಕೊರತೆ ಕಂಡುಬಂದಲ್ಲಿ ಅದು ಅಲ್ಜೀಮರ್ ರೋಗ ವನ್ನು ಸೂಚಿಸುತ್ತದೆ.
 (  ) ಪರೀಕ್ಷೆಯ ಫಲಿತಾಂಶಗಳು ಮಿದುಳಿನ ಚಯಾಪಚಯದ ಮಟ್ಟವನ್ನು ಸೂಚಿಸು ತ್ತವೆ. ರೋಗ ನಿದಾನದಲ್ಲಿ ಪ್ರಯೋಗಾಲಯ ಪರೀಕ್ಷೆಗಳ ವಿಪರೀತ ಅವಲಂಬನೆ ಸಲ್ಲದು. ಇವುಗಳ ಅಗಾಧ ವೆಚ್ಚದಿಂದಾಗಿ ರೋಗಿಯ ಪೋಷಕರು ಚಿಕಿತ್ಸೆಯನ್ನು ಆರಂಭದಲ್ಲಿಯೇ ಕೈಬಿಡಬಹುದು. ದೈಹಿಕ ಮತ್ತು ಮಾನಸಿಕ ಪರೀಕ್ಷೆಯಿಂದಲೇ ಶೇ. 80 ರಿಂದ 90ರಷ್ಟು ನಿಖರವಾಗಿ ಈ ವ್ಯಾಧಿಯನ್ನು ಗುರುತಿಸಲು ಸಾಧ್ಯ.
ರೋಗ ನಿರ್ವಹಣೆ:ಚಿಕಿತ್ಸೆ ನೀಡುವಿಕೆಯು ಕೇವಲ ರೋಗಿಗಷ್ಟೇ ಸೀಮಿತವಾದುದಲ್ಲ. ಕುಟುಂಬದ ಸದಸ್ಯರಿಗೂ ಶಿಕ್ಷಣ ಮತ್ತು ರೋಗದ ತಿಳಿವಳಿಕೆ ನೀಡಬೇಕಾದುದು ಅತ್ಯಗತ್ಯ. ಈ ವ್ಯಾಧಿಪೀಡಿತರ ನಿರ್ವಹಣೆಗೆ ಕುಟುಂಬದ ಸದಸ್ಯರೆಲ್ಲರ ಸಹಕಾರ ಅವಶ್ಯ.ಸತ್ವಯುತ, ಶಕ್ತಿಯುತ, ಸಮತೋಲಿತ ಆಹಾರ ಕೊಡ ಬೇಕು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸಿಟೈಲ್ ಕೋಲಿನ್ ನರವಾಹಕ ಲಭ್ಯತೆಯನ್ನು ಹೆಚ್ಚಿಸುವ ಮಾತ್ರೆಗಳು, ವಿಟಮಿನ್ ಮಾತ್ರೆಗಳು, ರಕ್ತನಾಳ ಅಡಚಣೆ ನಿವಾರಕಗಳು, ಧಮನಿಗಳನ್ನು ಹಿಗ್ಗಿಸುವ ಮದ್ದುಗಳು ಇವೆಲ್ಲ ರೋಗಪೂರಿತ ನರಕಣಗಳಿಗೆ ಮರುಶಕ್ತಿಯನ್ನು ನೀಡಲಾರವಾದರೂ, ರೋಗಿಯ ಸ್ಥಿತಿಯನ್ನು ಅಷ್ಟಿಷ್ಟು ಸುಧಾರಿಸಬಲ್ಲವು.
ಮರೆವಿನ ಹೆಚ್ಚಳವನ್ನು ಮುಂದೂಡಬಲ್ಲವು. ವಿಕಲ್ಪ ಸ್ಥಿತಿಯನ್ನು ಸುಧಾರಿಸಲು ಮತ್ತು ನೆನಪನ್ನು ಉತ್ತಮಪಡಿಸಲು ಹಲವಾರು ಔಷಧಗಳು ಬಳಕೆಯಲ್ಲಿವೆ. ನಿದ್ರಾಹೀನತೆಯನ್ನು ಕೂಡ ಸೂಕ್ತ ಔಷಧಗಳಿಂದ ತಹಬದಿಗೆ ತರಬಹುದು. ರೋಗಿಯ ಸಿಟ್ಟು-ಸೆಡವುಗಳನ್ನು ಮತ್ತು ಆತಂಕವನ್ನು ಶಮನಕಾರಿ ಹಾಗೂ ಆತಂಕ ನಿವಾರಕ ಮದ್ದುಗಳ ಬಳಕೆಯಿಂದ ನಿರ್ವಹಿಸ ಬಹುದು.
ಚಿಕಿತ್ಸೆಗಾಗಿ ಇಷ್ಟೆಲ್ಲ ಪ್ರಯತ್ನ ನಡೆಯುತ್ತಿದ್ದರೂ ವ್ಯಾಧಿಯೇ ಗೆಲ್ಲುತ್ತಿದೆಯೇ ಹೊರತು ವಿಜ್ಞಾನವಲ್ಲ. ವ್ಯಾಧಿ ಈಗಲೂ ಒಂದು ಸವಾಲಾಗಿ ನಿಂತಿರುವುದು ಸುಳ್ಳಲ್ಲ. “    .      ’ .   ’   ’’ ಎಂದು ಜಾರ್ಜ ಕಾರ್ಲಿನ್ ಹೇಳಿರುವ ಮಾತು ಅಕ್ಷರಶಃ ಸತ್ಯ.