ರೆಂಬೆ ಕತ್ತರಿಸುವ ಬದಲು ಬೇರು ಕಳಚಿ
ಬುಲೆಟ್‌ ಪ್ರೂಫ್
ವಿನಯ್ ಖಾನ್
vinaykhan078@.
ಪ್ರಪಂಚದಾದ್ಯಂತ ಭಯೋತ್ಪಾದಕತೆಯನ್ನು ನಿಷೇಧ ಮಾಡಿದೆ. ಆದರೂ ಇಂತಹ ಹಲವು ಸಂಘಟನೆಗಳ ಹೆಸರಲ್ಲಿ ಭಯೋ ತ್ಪಾದನೆಯ ತಮ್ಮ ಕೆಲಸವನ್ನು ಮುಂದುವರಿಸಿಯೇ ಇದ್ದಾರೆ. ಆದರೂ ಅದನ್ನು ಇನ್ನೂ ನಿರ್ನಾಮ ಮಾಡಲು ಆಗುತ್ತಿಲ್ಲ. ಎಲ್ಲೋ ಪಾಕಿಸ್ತಾನದಂತಹ ದೇಶದಲ್ಲಿ ಹುಟ್ಟುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ಭಾರತದ ನೆಲದಲ್ಲಿಯೂ ಹುಟ್ಟಿಬೆಳೆಯುತ್ತಿವೆ. ತುಂಬಾ ಆರಾಮವಾಗಿ ತಮ್ಮ ರೆಕ್ಕೆಪುಕ್ಕಗಳನ್ನು ಬಿಚ್ಚುತ್ತಿವೆ.
ಹಲವಾರು ಹಿಂದೂ ಕಾರ್ಯಕರ್ತ, ಮುಖಂಡರ ಮೇಲೆ ದೌರ್ಜನ್ಯ, ಹತ್ಯೆಗಳು ಜರುಗಿದ ಹಿನ್ನೆಲೆಯಲ್ಲಿ ದೇಶದ್ಯಾಂತ  ಪ್ರತಿಭಟನೆ, ವಿರೋಧ, ಹೋರಾಟಗಳ ಬಳಿಕ ದೇಶಕ್ಕೆ ಖ್ಯಾತಿಗೆ ಕಪ್ಪು ಚುಕ್ಕಿಯಂತಿದ್ದ ಪಿಎಫ್ಐ ಅನ್ನು ಕೊನೆಗೂ ಕೇಂದ್ರ ಸರಕಾರ ನಿಷೇಧಿಸಿದೆ. ಇದು ಒಳ್ಳೆಯ ನಡೆಯೇ, ಆದರೆ ಇದರಿಂದ ನಿರ್ಧಾರದ ಹಿಂದಿನ ಉದ್ದೇಶ ಎಷ್ಟರ ಮಟ್ಟಿಗೆ ಈಡೇರೀತು ಎಂಬುದು ಪ್ರಶ್ನೆ. ಏಕೆಂದರೆ ಕೇವಲ ಸಂಘಟನೆಗಳನ್ನು ನಿಷೇಧಿಸಿದರಷ್ಟೇ ಸಾಲದು.
ಅದರ ಹಿಂದಿರುವ ಮೂಲಭೂತ ಭಯೋತ್ಪಾದಕತೆ, ಜಿಹಾದಿ ಮನಃಸ್ಥಿತಿ ಯನ್ನು ಹಾಗೂ ದೇಶದಲ್ಲಿ ಬೆಳೆಯಲು ಹವಣಿಸು ತ್ತಿರುವ ಮತಾಂಧ ಶಕ್ತಿಗಳನ್ನು ಕಟ್ಟಿಹಾಕುವ ಬಗ್ಗೆಯೂ ಯೋಚಿಸಬೇಕಾಗುತ್ತೆ. ಬರೀ ಸಂಘಟನೆಯನ್ನು ಬ್ಯಾನ್ ಮಾಡಿದ ಕ್ಷಣಕ್ಕೆ ಅದರ ಕಾರ್ಯಕರ್ತರು, ನಾಯಕರೆನಿಸಿಕೊಂಡವರನ್ನು ಅಡಗಿಸಿದಂತಾಗುವುದಿಲ್ಲ. ನಿಷೇಧದ ಮೂಲಕ ದೇಣಿಗೆ ದಾರಿಯನ್ನು ಕತ್ತರಿಸುವುದು ಸರಿ ಇದ್ದರೂ, ಅವುಗಳ ಹಿಂದೆ ನಿಂತು ಪರೋಕ್ಷವಾಗಿ ಪೊರೆಯುತ್ತಿರುವ ಶಕ್ತಿಗಳ ವಿರುದ್ಧ ಯಾವುದೇ ಕ್ರಮವನ್ನು ತಗೆದುಕೊಳ್ಳದೇ ಸುಮ್ಮನೆ ಬಿಟ್ಟರೇ? ಇದನ್ನು ನಿಷೇಧಿಸಿದರೆ ಮತ್ತೊಂದು ಹೆಸರಲ್ಲಿ ಹುಟ್ಟಿ ಕೊಳ್ಳುತ್ತದೆಯಷ್ಟೇ; ಈ ಹಿಂದೆ ಸಿಮಿಯನ್ನು ನಿಷೇಧಿಸಿದ ಬಳಿಕವೇ ಅಲ್ಲವೇ ಪಿಎಫ್ಐ ಹುಟ್ಟಿಕೊಂಡದ್ದು? ಹೌದು, ಪಿಎಫ್ಐ ಮೊದಲು ಸ್ಟುಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ(ಸಿಮಿ) ಹೆಸರಿನಲ್ಲಿತ್ತು.
ವಾಜಪೇಯಿ ಸರಕಾರ ಅದನ್ನು 2001ರಲ್ಲಿ ಬ್ಯಾನ್ ಮಾಡಿದ ನಂತರ ಕೇವಲ ಐದಾರು ವರ್ಷಗಳಲ್ಲಿ (2007) ಮತ್ತೆ ಪಿಎಫ್ಐ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆದ ಭಾರಿ ಸಮಾವೇಶದೊಂದಿಗೆ ತಲೆ ಎತ್ತಿತು. ಆದರೆ ಅದರ ಮೇಲೆ ಯಾವುದಾ ದರೂ ಸರಕಾರ ಅಥವಾ ಅದರ ಸಂಘ ಸಂಸ್ಥೆಗಳು ನಿಗಾ ಇಟ್ಟವಾ? ಇಲ್ಲ. ಇತ್ತೀಚಿನ ದಿನಗಳಲ್ಲಿ ಅದರ ಆರ್ಭಟ ಹೆಚ್ಚಾದ ಮೇಲೆ ಅದರ ವಿರುದ್ಧ ಮೊಕದ್ದಮೆಗಳು ದಾಖಲಾದವು. ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಅದರ ಹೆಸರು ಸೇರಿದ ಮೇಲಷ್ಟೇ ಸರಕಾರ ಅದನ್ನು ಗಮನಿಸಲು ಶುರುಮಾಡಿಕೊಂಡದ್ದು.
ಇದೆಲ್ಲದಕ್ಕಿಂತ ಹೆಚ್ಚಾಗಿ ಪಿಎಫ್ಐ ಇನ್ನೂ ಚಿಗುರೊಡೆವಸಮಯದಲ್ಲಿ ಯಾರೂ ವಿರೋಧಿಸಿರಲಿಲ್ಲ. ಕನಿಷ್ಠ ಆಕ್ಷೇಪದದನಿಯೂ ಇರಲಿಲ್ಲ. ಅದು ಎಂಥ ಸಂಘಟನೆ, ಅದರ ಉದ್ದೇಶ ಏನು, ಅದರ ಅಸ್ತಿತ್ವದ ಔಚಿತ್ಯ ಏನು, ಭವಿಷ್ಯದ ಉದ್ದೇಶ ಗಳೇನು… ಇಂಥವುಗಳ ಬಗ್ಗೆ ಸರಕಾರವಾಗಲಿ, ಸಾರ್ವಜನಿಕರಾಗಲೀ ಯೋಚಿಸಿಯೇ ಇಲ್ಲ. ಅದನ್ನು ಇಸ್ಲಾಮಿನ ಧ್ವನಿ, ಅಲ್ಪಸಂಖ್ಯಾತರ ಸಂಘಟನೆ ಎಂದೇ ಗುರುತಿಸಿ ರಾಜಕೀಯ ಲಾಭಕ್ಕೆ ಹವಣಿಸಿದವರೇ ಹೆಚ್ಚು. ಕೆಲವು ರಾಜಕೀಯ ವ್ಯಕ್ತಿಗಳಂತೂ ಬಹಿರಂಗವಾಗಿಯೇ ಅದನ್ನು ಬೆಂಬಲಿಸಿದರು, ಅದರ ಹಿಂದೆ ಹಿಂದೆಯೇ ತಮ್ಮ ವೋಟ್ ಬ್ಯಾಂಕಿಗಾಗಿಓಡಾಡುತ್ತಿದರು.
ಎಲ್ಲದಕ್ಕಿಂತ ಮುಂದೆ ಹೋಗಿ ಕರ್ನಾಟಕದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರಕಾರ ಅದರ ಕಾರ್ಯಕರ್ತರ ಮೇಲಿದ್ದ ಕೇಸ್‌ಗಳನ್ನುತೆಗೆದು ಹಾಕಿತ್ತು. ಆಗ ಫಿಎಫ್ಐ ಭಯೋತ್ಪಾದಕರ ಜತೆ ಸಂಪರ್ಕದಲ್ಲಿದ್ದರು ಅಂದಿನ ಮುಖ್ಯಮಂತ್ರಿಗೆ ಗೊತ್ತಿರಲಿಲ್ಲವೇ?ಪಿಎಫ್ಐ ಅನ್ನು ಬೆಂಬಲಿಸುತ್ತಿದ್ದ ಸಾಹಿತಿ(?), ದಲಿತ ಪರ ಸಂಘಟನೆಗಳು ಈಗ ಏನೆಂದು ತಮ್ಮ ನಿಲುವನ್ನು ತೋರುತ್ತಾರೆ? ಇನ್ನು ಕೆಲವರು ಈಗ ಆರೆಸ್ಸೆಸ್ ಅನ್ನೂ ಬ್ಯಾನ್ ಮಾಡಿ ಅಂತನೂ ಹೇಳುತ್ತಿದ್ದಾರೆ.
ಅವರೆಲ್ಲರೂ ಒಂದು ಕಾಲದಲ್ಲಿ ಪಿಎಫ್ಐ ಅನ್ನು ಬೆಂಬಲಿಸಿದವರೇ! ಅವರಿಗೆ ಆಗ ಇದರ ಸುಳಿಯೂ ಇರಲಿಲ್ಲವೇ? ಮತ್ತೆಪಿಎಫ್ಐ ಅನ್ನುವಂತಹ ಸಂಘಟನೆ ಇಷ್ಟು ದೊಡ್ಡದಾಗಿ ಬೆಳೆದಿದ್ದು, ಭಯೋತ್ಪದಕ ಸಂಘಟನೆಗಳ ಜತೆ ಬೆಸೆದಿದ್ದು ಗುಪ್ತಚರಇಲಾಖೆಯವರಿಗೆ ಗೊತ್ತಾಗಲೇ ಇಲ್ಲವೇ? ಮಾಹಾರಾಷ್ಟ್ರದಲ್ಲಿ ಯಾವುದೋ ದೊಡ್ಡ ಕುಕೃತ್ಯಕ್ಕೆ ಪಿಎಫ್ಐ ಯೋಜಿಸುತ್ತಿತ್ತು ಎಂದು ಸ್ವತಃ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದ್ದರು. ಕರ್ನಾಟಕದಲ್ಲಿಯೂ ಹಾಗೆ, ಮೊನ್ನೆ ಮೊನ್ನೆ ನಡೆದ ಪ್ರವೀಣ್ ನೆಟ್ಟಾರು ಸಾವು ಇರಬಹುದು, ಮಂಗಳೂರಿನಲ್ಲಿ ಪ್ರತಿಭಟನೆ ಹೆಸರಿನಲ್ಲಿ ನಡೆದ ಧ್ವಂಸವಿರಬಹುದು, ಇವೆಲ್ಲದರ ಹಿಂದೆಯೂ ಇದ್ದಿದ್ದು ಪಿಎಫ್ಐನೇ.
ದೆಹಲಿಯ ಶಾಹೀನ್ ಭಾಗ್‌ನ ಕುಕೃತ್ಯ, ಕೇರಳದ ಕಾಡುಗಳಲ್ಲಿ ಶಸ್ತ್ರಾಸ್ತ್ರ ತರಬೇತಿ, ಹಲವಾರು ವಿದ್ವಂಸಕ ಕೃತ್ಯಗಳ ಹಿಂದೆ ಕೇಳಿದ್ದು ಪಿಎಫ್ಐನ ಹೆಸರೇ. ಇನ್ನು ಭಯೋತ್ಪಾದಕ ಸಂಘಟನೆಗಳಿಗೆ ಉಗ್ರರನ್ನು ಕಳುಹಿಸಿಕೊಡುವುದೂ ಇದೇ ಪಿಎಫ್ಐ. ಇದು ಮಾಡಿದ್ದು ಬರೀ ಭಯೋತ್ಪಾದಕತೆಯೇ, ಇಸ್ಲಾಮ್ ಹಾಗೂ ಜಿಹಾದ್ ಹೆಸರಿನಲ್ಲಿ ಜನರನ್ನು ಸೇರಿಸಿ ದೇಶಾದ್ಯಾಂತ ಗುಲ್ಲೆಬಿಸಿದ್ದೇ? ಇದೆಲ್ಲವೂ ಗೊತ್ತಿದ್ದು, ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳ ಜತೆ ನಂಟಿದ್ದಿದ್ದು ಸಾಬೀತಾದರೂ ಎಷ್ಟೋ ಜನ ಅದರ ಪರವಾಗಿಯೇ ಮಾತನಾಡುತ್ತಿದ್ದಾರೆ.
ಟ್ವಿಟರ್, ಫೇಸ್‌ಬುಕ್‌ಗಳಲ್ಲಂತೂ ಅದರ ಪರವಾಗಿ, ನಿಷೇಧವನ್ನು ವಿರೋಧಿಸಿ ಮಾತಾಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ದೇಶವನ್ನು ತುಂಡು ಮಾಡಬೇಕು, ಇಲ್ಲಿನ ಶಾಂತಿ ಭಂಗ ಮಾಡಬೇಕು, ಭಾರತವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸ ಬೇಕು ಅಂತ ಅಂದುಕೊಂಡವರು ಅವರು. ಸದಾ ಭಾರತದ ವಿರುದ್ಧ ಮಾತಾಡುವವರು ಈ ನಿಷೇಧವನ್ನು ವಿರೋಧಿಸುವವರೇ. ಹಾಗಿದ್ದರೆ ಅಂಥವರ ಮೇಲೆಯೂ ತನಿಖೆಯಾಗಬೇಕಲ್ಲವೇ? ಬರೀ ಪಿಎಫ್ಐ ನಿಷೇಧ ಆದರೆ ಸಾಲದು. ನಂತರದ ಹೆಜ್ಜೆಯಾಗಿ ಅದರ ಪ್ರೇರಣೆಯಿಂದ ನಡೆಯುತ್ತಿರುವ ಎಲ್ಲ ರೀತಿಯ ಜಿಹಾದ್, ಮತ್ತದನ್ನುಮಾಡುತ್ತಿದ್ದ ವ್ಯಕ್ತಿಗಳು, ಅದರ ರಾಜಕೀಯ ಮುಖ ಎಸ್‌ಡಿಪಿಐನ ನಾಯಕ ಮತ್ತು ಕಾರ್ಯಕರ್ತರ ವಿರುದ್ಧವೂ ಕಾನೂನು ಕ್ರಮ ಜರಗಿಸಬೇಕಲ್ಲವೇ? ಹಾಗೇ ನೋಡಿ, ಪಿಎಫ್ಐನ ಎನ್‌ಜಿಓ ರಿಹಾಬ್ ಫೌಂಡೇಷನ್‌ಗೆ ಹಲವಾರು ಇಸ್ಲಾಮಿಕ್ರಾಷ್ಟ್ರಗಳಿಂದ ದೇಣಿಗೆ ಬರುತ್ತಿದೆ. ಹೆಚ್ಚೂ ಕಡಿಮೆ 120 ಕೋಟಿಗೂ ಮಿಕ್ಕಿ ಹಣವನ್ನೂ ಈವರೆಗೆ ದೇಣಿಗೆ ಪಡೆದಿದ್ದಾರೆ.
ಹಾಗಾದರೆ, ಈ ಇಸ್ಲಾಮಿಕ್ ರಾಷ್ಟ್ರಗಳಿಂದ ದೇಣಿಗೆ ಕೊಡುತ್ತಿರುವರು ಯಾರು? ಅವರ ಹಿನ್ನೆಲೆ ಏನು? ಈಗ ಹೊರಗಡೆ ಬಂದಿದ್ದು 120 ಕೋಟಿಯ ಅಕ್ರಮ ಮಾತ್ರ, ಇನ್ನು ಗೊತ್ತಿರದೇ ಆಗಿದ್ದು ಎಷ್ಟಿವೆ? ಆ ಹಣದಿಂದ ಏನೇನು ಮಡುತ್ತಾರೆ? ಭಯೋತ್ಪಾದಕತೆಗೆ ಬೇಕಾದ ಶಸ್ತ್ರಾಸ್ತ್ರಗಳು ಎಲ್ಲಿಂದ ಸಿಗುತ್ತೆ? ಅದನ್ನು ಹೇಗೆ ಭಾರತಕ್ಕೆ ತಗೆದುಕೊಳ್ಳುತ್ತಾರೆ? ಅದರ ಕಾರ್ಯಕರ್ತರು ಯಾರು? ಅವರ ಹಿನ್ನೆಲೆ ಏನು ಇತ್ಯಾದಿ ಎಲ್ಲವೂ ಗೊತ್ತಾಗಬೇಕಲ್ಲವೇ? ಇನ್ನು ಸರಕಾರದಅಧಿಕಾರಿಗಳವರ್ಗ, ಕಾಲೇಜುಗಳ ಪ್ರಾಧ್ಯಾಪಕರು, ಕೆಲವು ಪತ್ರಕರ್ತ(?)ರೂ ಇಂತಹ ಸಂಘಟನೆಗಳ ಜತೆಗೆ ಇದ್ದೇ ಇರುತ್ತಾರೆ, ಅಂಥವರನ್ನು ಹೆಕ್ಕಿ ಕಟಕಟೆಗೆ ನಿಲ್ಲಿಸಲೇಬೇಕು.
ಪ್ರಪಂಚದಾದ್ಯಂತ ಭಯೋತ್ಪಾದಕತೆಯನ್ನು ನಿಷೇಧ ಮಾಡಿದೆ. ಆದರೂ ಇಂತಹ ಹಲವು ಸಂಘಟನೆಗಳ ಹೆಸರಲ್ಲಿ ಭಯೋತ್ಪಾದನೆಯ ತಮ್ಮ ಕೆಲಸವನ್ನು ಮುಂದುವರಿಸಿಯೇ ಇದ್ದಾರೆ. ಎಷ್ಟೋ ಸರಕಾರಗಳೂ ಭಯೋತ್ಪಾದನೆಯನ್ನುನಿರ್ನಾಮ ಮಾಡಲು ಪಣತೊಟ್ಟಿವೆ, ಆದರೂ ಅದನ್ನು ಇನ್ನೂ ನಿರ್ನಾಮ ಮಾಡಲು ಆಗುತ್ತಿಲ್ಲ. ಎಲ್ಲೋ ಪಾಕಿಸ್ತಾನದಂತಹ ದೇಶದಲ್ಲಿ ಹುಟ್ಟುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ಭಾರತದ ನೆಲದಲ್ಲಿಯೂ ಹುಟ್ಟಿ ಬೆಳೆಯುತ್ತಿವೆ.
ತುಂಬಾ ಆರಾಮವಾಗಿ ತಮ್ಮ ರೆಕ್ಕೆಪುಕ್ಕಗಳನ್ನು ಬಿಚ್ಚುತ್ತಿವೆ. ಎಷ್ಟೇ ತಾಂತ್ರಿಕವಾಗಿ, ರಕ್ಷಣಾತ್ಮಕ ದೃಷ್ಟಿಯಿಂದ ಅಭಿವೃದ್ಧಿ ಸಾಧಿಸಿದ್ದೇವೆ ಎಂದುಕೊಂಡರೂ ಭಯೋತ್ಪಾದನೆಯನ್ನು ಮೂಲದಲ್ಲಿಯೇ ಚಿವುಟುವುದರಲ್ಲಿ ಸರಕಾರಗಳು ವಿಫಲರಾಗುತ್ತಿವೆ ಎಂಬುದು ಸತ್ಯ. ಅದಾಗುವವರೆಗೆ ಇಂತ ಸಂಘಟನೆಗಳ ನಿಷೇಧ ದಿಂದ ಏನೂ ಪ್ರಯೋಜನವಿಲ್ಲ. ಬೇರೆ ಹೆಸರಿನಲ್ಲಿ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಇಂತಹ ಸಂಘಟನೆಗಳಿಗೆ ಕಡಿವಾಣ ಹಾಕು ಇರುವ ಏಕೈಕ ಮಾರ್ಗ ಅದರ ಬೇರುಗಳನ್ನುಕತ್ತರಿಸುವುದು. ಅದರ ಹೊರತಾಗಿ, ಇಂಥವೆಲ್ಲವೂ ರೆಂಬೆ ಕತ್ತರಿಸುವ ಕ್ರಮವಾದೀತು ಅಷ್ಟೇ.
ಗೊತ್ತಿದೆ, ಅದು ಹೇಳಿದಷ್ಟು ಸುಲಭವೇನಲ್ಲ ಎಂದು. ಅಮೆರಿಕದಂಥ ಅಮೆರಿಕಕ್ಕೆ ಅಮರಿಕೊಂಡ ದುಷ್ಟ ಶಕ್ತಿ ಅದು. ಆದರೂ ಆಂತರಿಕ ಭದ್ರತೆಗೆ ಸರಕಾರಗಳು ಮತ್ತಷ್ಟು ಒತ್ತನ್ನು ನೀಡುವ ಅಗತ್ಯ ಹಿಂದೆಂದಿಗಿಂತಳು ಹೆಚ್ಚಿದೆ. ಹೀಗಾಗಿ ಪಿಎಫ್ಐ ನಂಥ ಸಂಘಟನೆಗಳನ್ನು ಸಮರ್ಥಿಸಿಕೊಳ್ಳುವವರ, ನಿಷೇಧ ವಿರೋಧಿಸುವವರ ಮೇಲೆ ಮೊಕದ್ದಮೆಗಳು ದಾಖಲಾಗಲಿ, ಅವರ ಬಂಧನ ಆಗಲೇ ಬೇಕು!
ಧರ್ಮದ ಹೆಸರಿನಲ್ಲಿ ದೇಶದ ಭದ್ರತೆಗೆ ಮಾರಕವಾಗುವವರನ್ನು ಮೊದಲಿಗೆ ಶಿಕ್ಷಿಸಬೇಕಿದೆ. ಇಂತಹ ಸಂಘಟನೆಗಳಿಗೆ ಸೇರುವವರೂ ಅದಕ್ಕಿಂತ ಮೊದಲು ತಮ್ಮ ಜೀವ ಮತ್ತು ಜೀವನದ ಬಗ್ಗೆ ಯೋಚಿಸಿ ದೂರ ಸರಿಯುವಂತಾಗಬೇಕಿದೆ.