ದುರುಳರ ದಮನಕ್ಕೆ ಕಟಿಬದ್ದ ಇಂಟರ್‌ಪೋಲ್
ಪ್ರಸ್ತುತ
ಜರ್ಗೆನ್‌ ಸ್ಟಾಕ್‌
ಕದ್ದ ಪಾಸ್‌ಪೋರ್ಟ್ ಬಳಸಿಕೊಂಡು ದೇಶವೊಂದರ ಗಡಿದಾಟಲು ಯತ್ನಿಸುತ್ತಿದ್ದ ಭಯೋತ್ಪಾದಕನೊಬ್ಬನ ಬಂಧನ ವಾಯಿತು.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಚಿತ್ರಗಳ ಮೂಲಕ ಗುರುತಿಸಲ್ಪಟ್ಟ ನಂತರ ಶಿಶು ದೌರ್ಜನ್ಯದ ಬಲಿಪಶುವನ್ನು ರಕ್ಷಿಸಲಾಯಿತು. ವಂಚನೆಗೆ ಸುಲಭವಾಗಿ ಈಡಾ ಗುವ ವಿಶ್ವಾದ್ಯಂತದ ಬಲಿಪಶುಗಳನ್ನು ಗುರಿಯಾಗಿಸಿಕೊಂಡಿದ್ದ ಫಿಶಿಂಗ್ ಹಗರಣ ವೊಂದರಿಂದ ಲಕ್ಷಾಂತರ ಡಾಲರ್‌ಗಳು ಕಳುವಾಗುವುದನ್ನು ಪ್ರತಿಬಂಧೀಸಲಾಯಿತು- ಈ ಸಾಲುಗಳನ್ನೆಲ್ಲ ಅವಲೋಕಿಸಿದಾಗ ನಿಮಗನ್ನಿಸುವುದೇನು? ಇವು ಪತ್ರಿಕೆಯ ಸುದ್ದಿಶೀರ್ಷಿಕೆಗಳಲ್ಲ ಅಥವಾ ಇವು ಪ್ರಚಂಡ ಯಶಸ್ಸು ದಾಖಲಿಸಿದ ಚಲನಚಿತ್ರ ವೊಂದರ ಕಥೆಯ ಎಳೆಗಳೂ ಅಲ್ಲ.
ತನ್ನ 195 ಸದಸ್ಯ ರಾಷ್ಟ್ರಗಳಿಗೆ ಒತ್ತಾಸೆಯಾಗಿ ನಿಂತಿರುವ ‘ಇಂಟರ್‌ಪೋಲ್’ ಸಂಸ್ಥೆಯ ದೈನಂದಿನ ಕಾರ್ಯಶೈಲಿಯನ್ನು ಬಿಂಬಿಸುವ ಸಾಲುಗಳಿವು. ನಾವಿಂದು ಎದುರಿಸು ತ್ತಿರುವ ಬೆದರಿಕೆಗಳು ಕ್ಷಿಪ್ರವೂ, ಚಲನಶೀಲವೂ, ಸ್ವಯಂ ನಿರ್ಬಂಧಕ್ಕೆ ಒಳಪಡಿಸು ವಂಥವೂ ಮತ್ತು ಪರಸ್ಪರ ಸಂಬಂಧವಿರುವಂಥವೂ ಆಗಿವೆ. ಹೀಗಾಗಿ, ಕ್ರಿಮಿನಲ್ ಬೆದರಿಕೆಯ ವ್ಯಾಪ್ತಿಯಲ್ಲಿ ನಾವು ಹಿಂದೆಂದೂ ಕಂಡಿಲ್ಲದ ಸಂಕೀರ್ಣತೆಗೆ ಸಾಕ್ಷಿಯಾಗ ಬೇಕಾಗಿ ಬಂದಿದೆ ಎನ್ನಲಡ್ಡಿಯಿಲ್ಲ.
ಇಂಥ ಜಾಗತಿಕ ಬೆದರಿಕೆಗಳಿಗೆ ಮದ್ದು ಅರೆಯುವಲ್ಲಿ ವ್ಯಸ್ತವಾಗಿರುವ ಇಂಟರ್‌ಪೋಲ್‌ನ ಚಟುವಟಿಕೆಗಳು ಮೂರು ಅಂಶಗಳ ಸುತ್ತ ಗಿರಕಿ ಹೊಡೆಯುತ್ತಿದ್ದು, ಅವು ಇಂಟರ್‌ಪೋಲ್‌ನ ನಿಯಂತ್ರಕ ಕಾಳಜಿಗಳ ಪ್ರತಿಬಿಂಬವೂ ಆಗಿವೆ. ಅವೆಂದರೆ, ಭಯೋ ತ್ಪಾದನೆಯ ನಿಗ್ರಹ, ಸೈಬರ್ ಅಪರಾಧ, ಹಾಗೂ ಸಂಘಟಿತ ಮತ್ತು ಬೆಳಕಿಗೆ ಬರುತ್ತಿರುವ ಅಪರಾಧ.
ಅಷ್ಟೇ ಅಲ್ಲ, ವಿಶ್ವದ ಉದ್ದಗಲಕ್ಕೂಅಪರಾಽಕಚಟುವಟಿಕೆಗಳು ಹೆಚ್ಚುತ್ತಲೇ ಇರುವುದಕ್ಕೆ ಪ್ರತಿಕ್ರಿಯೆಯೆಂಬಂತೆ ಆರ್ಥಿಕ ಅಪರಾಧ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ಮೀಸಲಾದ ಕೇಂದ್ರವನ್ನೂ ಇಂಟರ್‌ಪೋಲ್ ಈ ವರ್ಷಾರಂಭದಲ್ಲಿ ಹುಟ್ಟುಹಾಕಿದೆ. ಜಾಗತಿಕ ಮಟ್ಟದ ಅಕ್ರಮ ಹಣ ವರ್ಗಾವಣೆ ಚಟುವಟಿಕೆಗಳ ಪೈಕಿ ಶೇ.1 ಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಮಾತ್ರವೇ ಪ್ರತಿಬಂಧಿಸಲ್ಪಟ್ಟಿರುವುದರಿಂದ ಮತ್ತು ಹೆಚ್ಚುತ್ತಲೇ ಇರುವ ಒತ್ತಡದಡಿಯಲ್ಲಿ ಜಾಗತಿಕ ಆರ್ಥಿಕತೆಯು ಸಿಲುಕಿರುವುದರಿಂದ, ಈ ನಿಟ್ಟಿನಲ್ಲಿ ಪರಿಣಾಮಕಾರಿ ಅಸಗಳನ್ನು ಸಜ್ಜುಗೊಳಿಸಬೇಕಿದೆ ಇಂಟರ್ ಪೋಲ್; ಹೀಗಾಗಿ ಅಕ್ರಮ ಸ್ವತ್ತುಗಳ ಜಾಡು ಹಿಡಿಯುವ, ವಶಪಡಿಸಿಕೊಳ್ಳುವ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಬಾಬತ್ತಿಗೆ ಹೆಚ್ಚಿಗೆ ಒತ್ತುನೀಡಬೇಕಾದ ಅನಿವಾರ್ಯತೆಎದುರಾಗಿದೆ.
ಈ ಹಿನ್ನೆಲೆಯಲ್ಲಿ, ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲೆಂದು ಜಾಗತಿಕ ಸದಸ್ಯ ದೇಶಗಳೆಲ್ಲ ಈತಿಂಗಳ 18ರಿಂದ 21ರವರೆಗೆ ನವದೆಹಲಿಯಲ್ಲಿ ಜಮಾವಣೆಗೊಳ್ಳಲಿವೆ ಮತ್ತು ಈ ಸಭೆಯು ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತಾತ್ಮಕ ಅಸ್ತಿತ್ವವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದ ನಿಯಂತ್ರಕ ಚಟುವಟಿಕೆಗಳಿಗೆ ಬೇಕಿರುವ ಸಹಕಾರದಂಥ ತುರ್ತು ಅಗತ್ಯದ ಈಡೇರಿಕೆಗೆ 1923ರಲ್ಲಿ ಇಂಟರ್‌ಪೋಲ್ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇದಾಗಿ ಸರಿಸುಮಾರು 1 ಶತಮಾನವೇ ಸಂದಿದ್ದರೂ, ಅಪರಾಧಿಕ ಚಟುವಟಿಕೆಗಳಿಗೂ ನಾಗಾಲೋಟ ದಕ್ಕಿರುವ ಕಾರಣದಿಂದಾಗಿ ಅವಕ್ಕೆ ಲಗಾಮು ಹಾಕುವ ಅಗತ್ಯವೂ ಮತ್ತಷ್ಟು ಬೆಳೆಯುತ್ತಿದೆ ಎನ್ನಲಡ್ಡಿಯಿಲ್ಲ.
ಗಡಿಯಾಚೆಯ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದ ಮಾನದಂಡಗಳನ್ನು ರೂಪಿಸುವುದಕ್ಕೆ ಬರೋಬ್ಬರಿ ಒಂದು ಶತಮಾನದ ಹಿಂದೆ ಒಂದು ‘ವಿನೂತನ ಉಪಕ್ರಮ’ ಎನಿಸಿಕೊಂಡಿದ್ದು ಈಗ ‘ಪ್ರಮಾಣಕ ಅಂಶ’ವೇ ಆಗಿಬಿಟ್ಟಿದೆ. ಆಗೆಲ್ಲ ಟೆಲಿಗ್ರಾಂಗಳು, ದೂರವಾಣಿ ಮತ್ತು ಅಂಚೆ ಸೇವೆಗಳು ಕಾನೂನು ಜಾರಿಯ ಸಹಕಾರಕ್ಕೆ ಸಂಬಂಧಿಸಿದಂತೆ ಮಿತಿಗಳನ್ನು ವಿಧಿಸಿದ್ದವು; ಆದರಿಂದು ಕೇವಲ ಒಂದು ಬಟನ್ ಒತ್ತುವುದರ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿರುವ ಪೊಲೀಸರು ಇಂಟರ್‌ಪೋಲ್‌ನ 19 ಜಾಗತಿಕ ದತ್ತಾಂಶ ಸಂಗ್ರಹಗಳನ್ನು ಕ್ಷಿಪ್ರವಾಗಿ ತಪಾಸಿಸಬಹುದು; ಡಿಎನ್‌ಎ ಪ್ರೊಫೈಲ್‌ಗಳು ಮತ್ತು ಮುಖಚಹರೆಯ ಗುರುತಿನಚಿತ್ರಗಳೂ ಸೇರಿದಂತೆ ಬರೋಬ್ಬರಿ 126 ದಶಲಕ್ಷ ದಾಖಲೆ ಪತ್ರಗಳನ್ನು ಈ ದತ್ತಾಂಶ ಸಂಗ್ರಹಗಳು ಒಳಗೊಂಡಿವೆ ಎಂಬುದು ಉಲ್ಲೇಖನೀಯ.
ದಿನವೊಂದರಲ್ಲಿ20ದಶಲಕ್ಷಕ್ಕೂ ಹೆಚ್ಚು ಬಾರಿ (ಅಂದರೆ ಪ್ರತಿ ಸೆಕೆಂಡಿಗೆ ಸರಿಸುಮಾರು 250 ಶೋಧಗಳು ) ಸದರಿ ದತ್ತಾಂಶ ಸಂಗ್ರಹಗಳು ಶೋಧಕ್ಕೆ ಒಳಗಾಗುತ್ತವೆ. ತನ್ನ ಸ್ವರೂಪಕ್ಕೆ ತಕ್ಕಂತೆ ಕಾನೂನು ಜಾರಿ ವ್ಯವಸ್ಥೆಯು ಸಾಂಪ್ರದಾಯಿಕವಾಗಿ ಪ್ರತಿಕ್ರಿಯಾತ್ಮವಾಗಿದೆ. ಆದಾಗ್ಯೂ, ಪೊಲೀಸ್ ಸಹಕಾರದ ಹೊಸತೊಂದು ಶತಮಾನದ ಉದಯಕ್ಕೆ ನಾವು ಸಮೀಪಿಸು ತ್ತಿರುವುದರಿಂದ, ಜಾಗತಿಕ ಕಾನೂನು ಜಾರಿ ಸಮುದಾಯವು ತನ್ನ ವ್ಯವಸ್ಥೆಗಳು ಭವಿಷ್ಯದಲ್ಲಿ ನಿರಂತರವಾಗಿ ಉಪಯೋಗಕ್ಕೆ ಬರುವಂತಾಗುವುದಕ್ಕೆ ಸದೃಢ ಕ್ರಮಗಳನ್ನೇ ಕೈಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಕಾನೂನು ಜಾರಿ ಸಹಕಾರ ವ್ಯವಸ್ಥೆಯ ಓರ್ವ ಸಕ್ರಿಯ ಮಧ್ಯವರ್ತಿ ಎನಿಸಿಕೊಳ್ಳಲು ಪೊಲೀಸರ ಕಾರ್ಯಶೈಲಿಯಲ್ಲಿ ತಾಂತ್ರಿಕ ಪ್ರಗತಿಗಳ ಫಲಶೃತಿಗಳನ್ನು ಅಳವಡಿಸಿಕೊಳ್ಳುವಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ.
ಆದರೆ ಒಂದು ಕೈಕುಲುಕುವಿಕೆಯನ್ನು ಯಾವ ಯಂತ್ರವೂ ಬದಲಿಸಲಾರದು ಅಥವಾ ಪರ್ಯಾಯವಾಗಲಾರದು, ಪರಸ್ಪರರ ನಡುವೆ ನಡೆಯುವ ಸಂಭಾಷಣೆಗೆ ದತ್ತಾಂಶ ಸಂಗ್ರಹವೊಂದು ಪರ್ಯಾಯವಾಗಲಾರದು. ಹೀಗಾಗಿ ಜಾಗತಿಕ ಭದ್ರತೆಯವಿಷಯದಲ್ಲಿ ಮಾನವ ಸಂಬಂಧವೆನ್ನುವುದು ಅತ್ಯವಶ್ಯಕವಾದ ಅಂಶವಾಗಿದೆ ಎನ್ನಲಡ್ಡಿಯಿಲ್ಲ. ಆದ್ದರಿಂದಲೇ, ‘ಸುರಕ್ಷಿತ ಪ್ರಪಂಚಕ್ಕಾಗಿ ಪೊಲೀಸರನ್ನು ಸಂಪರ್ಕಿಸುವಿಕೆ’ ಎಂಬ ಇಂಟರ್‌ಪೋಲ್‌ನ ಧ್ಯೇಯವು ಸಂಸ್ಥೆಯ ಸಾಮಾನ್ಯ ಸಭೆಯ ಪಾಲಿಗೆ ಮೂಲಭೂತವಾಗಿ ಮುಖ್ಯವೆನಿಸಿದೆ.
‘ಇಂಟರ್‌ಪೋಲ್’ನಂಥ ಅನನ್ಯ ವೇದಿಕೆಯಲ್ಲಿ ಒಗ್ಗೂಡುವ ಜಗತ್ತಿನೆಲ್ಲೆಡೆಯ ಪೊಲೀಸ್ ನಾಯಕರು, ಜಾಗತಿಕ ಭದ್ರತೆಗೆ ಸಂಬಂಧಿಸಿದ ಚರ್ಚಾವಿಷಯಗಳು ಮತ್ತು ಸಮಸ್ಯೆಗಳ ಕುರಿತಾಗಿ ಈ ವೇದಿಕೆಯ ಮೂಲಕ ಚರ್ಚಿಸುತ್ತಾರೆ, ಪರಿಹಾರೋ ಪಾಯದ ಮಾರ್ಗಗಳನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ. ಭದ್ರತೆ ಮತ್ತು ಖಾಸಗಿತನದ ನಡುವೆ ಒಂದು ಸಮತೋಲನವನ್ನು ಖಾತ್ರಿಪಡಿಸುವ ರೂಪರೇಷೆಗಳ ಅಗತ್ಯವೂ ಸೇರಿದಂತೆ. ಹೊಸ ತಾಂತ್ರಿಕ ವ್ಯವಸ್ಥೆಯೊಂದನ್ನು ಸ್ವೀಕರಿಸಿ ಅಳವಡಿಸಿಕೊಳ್ಳುವಲ್ಲಿ ತಾವು ಕಲಿತ ಪಾಠಗಳಿಂದ ಹೆಕ್ಕಿ ತೆಗೆದ ಅತ್ಯುತ್ತಮ ಪರಿಪಾಠಗಳನ್ನು ಅವರು ಈ ವೇಳೆ ಪರಸ್ಪರ ಹಂಚಿಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಶತಕೋಟಿ ಡಾಲರ್‌ಗಳ ಸರಿಸುಮಾರು ಮುಕ್ಕಾಲು ಪಾಲು ಮೌಲ್ಯದ ಮುಟ್ಟುಗೋಲಿನಲ್ಲಿ ಪರ್ಯವಸಾನಗೊಂಡಅಕ್ರಮ ಮಾದಕವಸ್ತುಗಳನ್ನು ಗುರಿಯಾಗಿಸಿಕೊಂಡ ಕಾರ್ಯಾಚರಣೆಯಿಂದ ಮೊದಲ್ಗೊಂಡು, ಮಾನವ ಕಳ್ಳಸಾಗಣೆಗೆ ಒಳಗಾಗಿದ್ದ ಸರಿಸುಮಾರು 700 ಬಲಿಪಶುಗಳ ರಕ್ಷಣೆಗೆ ಕಾರಣವಾದ ಅಪರಾಧಿಕ ಗುಂಪುಗಳ ದಮನ ದವರೆಗಿನ ಯಶೋಗಾಥೆ ಗಳನ್ನು ಅವರು ಕೇಳಿಸಿಕೊಳ್ಳುತ್ತಾರೆ.
ಅಷ್ಟಕ್ಕೂ, ಇಂಟರ್‌ಪೋಲ್ ಮುಖಾಂತರ ಕೈಗೊಳ್ಳಲಾಗುವ ಜಾಗತಿಕ ಸಹಕಾರವು ರಾಷ್ಟ್ರೀಯ ಮಟ್ಟದಲ್ಲಿ ವಾಸ್ತವಿಕ ಫಲಿತಾಂಶಗಳನ್ನು ತರುವುದು ಹೇಗೆಂಬುದನ್ನು ಇತ್ತೀಚಿನ ಉದಾಹರಣೆಯೊಂದರ ಮೂಲಕ ವಿವರಿಸಿದರೆ ಒಳಿತು. ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ಬಗ್ಗುಬಡಿಯುವ ಗುರಿಹೊಂದಿದ್ದ ‘ಆಪರೇಷನ್ ಲಯನ್‌ಫಿಶ್’ ಕಾರ್ಯಾಚರಣೆಯಲ್ಲಿನ ಭಾರತದ ಭಾಗೀದಾರಿಕೆ ಇದಕ್ಕೆ ಉತ್ತಮ ನಿದರ್ಶನವಾಗಬಲ್ಲದು. ಮುಂದ್ರಾ ಬಂದರಿನಲ್ಲಿ 75.3 ಕೆ.ಜಿ.ಯಷ್ಟು ಮಾದಕವಸ್ತುವನ್ನು ಹಿಡಿದುಹಾಕುವುದರೊಂದಿಗೆ ಭಾರತೀಯ ಅಧಿಕಾರಿಗಳು ಹೆರಾಯಿನ್ ದ್ರವ್ಯದ ಅತಿದೊಡ್ಡ ವಶದ ಕಾರ್ಯಾಚರಣೆಗೆ ಸಾಕ್ಷಿ ಯಾದ ನಿದರ್ಶನವಿದು.
ಇದರ ನಂತರದ್ದು ‘ಆಪರೇಷನ್ ಗರುಡ’ ಕಾರ್ಯಾಚರಣೆಯ ಯಶಸ್ಸು; ಇಂಟರ್‌ಪೋಲ್ ಮತ್ತು ಮಾದಕವಸ್ತು ನಿಯಂತ್ರಣ ದಳದ ನಿಕಟ ಸಹಯೋಗದೊಂದಿಗೆ ಸಿಬಿಐ ಸಂಸ್ಥೆಯು ಈ ಕಾರ್ಯಾಚರಣೆ ಕೈಗೊಂಡಿತು. ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದ್ದ ಮಾದಕವಸ್ತುಗಳ ಕೂಟಗಳನ್ನು ಗುರಿಯಾಗಿಸಲಾಗಿದ್ದ ಈ ಕಾರ್ಯಾಚರಣೆಯಲ್ಲಿ, ದೇಶಾದ್ಯಂತ 175  ಮಂದಿ ಯನ್ನು ಬಂಧಿಸಲಾಯಿತು ಹಾಗೂ 127 ಪ್ರಕರಣಗಳನ್ನು ದಾಖಲಿಸಲಾಯಿತು ಎಂಬುದು ಗಮನಾರ್ಹ.
ಇಂಟರ್‌ಪೋಲ್‌ನ ‘   ’ () ದತ್ತಾಂಶ ಸಂಗ್ರಹವು, ಅದು ನೀಡುತ್ತಿರುವ ಮಹತ್ತರ ಸಹಕಾರಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಶಿಶು ಲೈಂಗಿಕ ಶೋಷಣೆಯ ಸಾಮಗ್ರಿಯ 4  ದಶಲಕ್ಷಕ್ಕೂ ಹೆಚ್ಚಿನ ಚಿತ್ರಗಳು, ವಿಡಿಯೋಗಳು ಮತ್ತು ಹ್ಯಾಷ್‌ಗಳನ್ನು ಒಳಗೊಂಡಿರುವ ಈ ದತ್ತಾಂಶ ಸಂಗ್ರಹವು, ಪ್ರತಿದಿನ ಏನಿಲ್ಲವೆಂದರೂ 7 ಶಿಶು ದೌರ್ಜನ್ಯದ ಬಲಿಪಶುಗಳನ್ನು ಗುರುತಿಸುವಲ್ಲಿ ನೆರವಾಗುತ್ತದೆ ಹಾಗೂ ಇಲ್ಲಿಯತನಕ ಇದು ವಿಶ್ವಾದ್ಯಂತದ 30000ಕ್ಕೂ ಹೆಚ್ಚಿನ ಇಂಥ ಬಲಿಪಶುಗಳ ಗುರುತಿಸುವಿಕೆಯಲ್ಲಿ ಸಹಾಯಹಸ್ತ ಚಾಚಿದೆ ಎಂಬುದು ಉಲ್ಲೇಖನೀಯ.
ಈ ವರ್ಷಾರಂಭದಲ್ಲಿ, ಈ ವಿಶೇಷೀಕೃತ ದತ್ತಾಂಶ ಸಂಗ್ರಹದ ಲಭ್ಯತೆ ದಕ್ಕಿಸಿಕೊಳ್ಳುವಲ್ಲಿನ ೬೮ನೇ ದೇಶ ಎನಿಸಿಕೊಂಡ ಭಾರತ,  ಅತ್ಯಂತ ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳನ್ನು ಸಂರಕ್ಷಿಸಲೆಂದು ಸಮರ್ಪಿಸಿಕೊಂಡಿರುವ ಈ ಜಾಗತಿಕ ಜಾಲ ಬಂಧದ ಒಂದು ಭಾಗವಾಗಿರುವುದರಿಂದ ದಕ್ಕಿರುವ ಗಣನೀಯ ಫಲಿತಾಂಶಗಳಿಗೆ ಈಗಾಗಲೇ ಸಾಕ್ಷಿಯಾಗಿದೆ.
ಅಂತಾರಾಷ್ಟ್ರೀಯ ಕಾನೂನು ಜಾರಿಗೆ ಭಾರತವು ನೀಡಿರುವ ಕೊಡುಗೆಯನ್ನು ಗುರುತಿಸಿ, ಇಂಟರ್‌ಪೋಲ್‌ನ ಕಳೆದ ವರ್ಷದ ಸಾಮಾನ್ಯ ಸಭೆಯು ಸಿಬಿಐನ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರನ್ನು ಏಷ್ಯಾ ವಲಯದ ಕಾರ್ಯಕಾರಿ ಸಮಿತಿಯ ನಿಯೋಗಿಯಾಗಿ ಚುನಾಯಿಸಿತು. ಭಾರತದ ಸಮೃದ್ಧ ಇತಿಹಾಸ ಮತ್ತು ಮುಂಗಾಣ್ಕೆಯ ದೃಷ್ಟಿಕೋನದ ಹಿನ್ನೆಲೆಯಲ್ಲಿ, ಇಂಟರ್‌ ಪೋಲ್‌ನ ವಿಶ್ವಾದ್ಯಂತದ ನಿಯೋಗಿಗಳು ನವದೆಹಲಿಯಲ್ಲಿ ಸಭೆ ಸೇರಿ, ವರ್ತಮಾನದ ತೀವ್ರ ಅಪರಾಧಿಕ  ಚರ್ಚಾ ವಿಷಯಗಳು ಮತ್ತು ಸಮಸ್ಯೆಗಳ ಕುರಿತು, ನಾಳಿನ ಬೆದರಿಕೆಗಳನ್ನು ಬಗ್ಗುಬಡಿಯಲು ಅಗತ್ಯವಾಗುವ ಜಂಟಿ ಪ್ರಯತ್ನಗಳ ಕುರಿತುಚರ್ಚಿಸಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳಲಿದ್ದಾರೆ.
ಇಂಥ ಸಾಮಾನ್ಯ ಸಭೆಯು ಇಂಟರ್‌ಪೋಲ್‌ನ ದಿನಚರಿಯಲ್ಲಿ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಇದರ ಆಯೋಜ ನೆಗೆ ನವದೆಹಲಿಗಿಂತ ಸೂಕ್ತವಾದ ಮತ್ತೊಂದು ಸ್ಥಳವಿಲ್ಲ ಎಂಬುದು ನನ್ನ ಭಾವನೆ.