ಎಲ್ಲಕ್ಕಿಂತ ಹಿರಿದಾದುದು ಮಾನವೀಯತೆ
ಧರ್ಮ ದಂಗಲ್‌
ಮಣ್ಣೆ ಮೋಹನ್‌
1947 ರ ದೇಶ ವಿಭಜನೆಯ ಸಮಯ. ಹಿಂದೂ- ಮುಸ್ಲಿಮರ ನಡುವೆ ಗಲಭೆಯಾಗಿ ಭಾರಿ ಸಂಖ್ಯೆಯ ಜನ ಸತ್ತಿರುತ್ತಾರೆ. ಪಾಕಿಸ್ತಾನದಿಂದ ಸಾವಿರಾರು ಹಿಂದೂ ಕುಟುಂಬಗಳು ಭಾರತಕ್ಕೂ, ಇಲ್ಲಿಂದ ಅನೇಕ ಮುಸ್ಲಿಂ ಕುಟುಂಬಗಳು ಪಾಕಿಸ್ತಾನಕ್ಕೂ ಸ್ಥಳಾಂತರಗೊಂಡಿರುತ್ತವೆ.
ಹೀಗೆ ತೊರೆದುಹೋದ ದೆಹಲಿಯ ಮಸೀದಿಯೊಂದರಲ್ಲಿ ಪಾಕಿಸ್ತಾನದಿಂದ ಬಂದ ಸಿಖ್ ನಿರಾಶ್ರಿತರು ಆಶ್ರಯ ಪಡೆದಿರುತ್ತಾರೆ. ಆದರೆ ಪೊಲೀಸರು ಬಂದು ಅವರನ್ನು ಬೇರೆಡೆಗೆ ಸ್ಥಳಾಂತರಿಸಿ ಹಾನಿಯಾಗಿದ್ದ ಮಸೀದಿಯನ್ನು ದುರಸ್ತಿಗೊಳಿಸಿ ಮುಸ್ಲಿಮರಿಗೆ ಮತ್ತೆ ವಹಿಸಿಕೊಡುವ, ಅಲ್ಲಿಯೇ ಕಾಯುತ್ತ ಅವರಿಗೆ ರಕ್ಷಣೆ ನೀಡುವ ಸನ್ನಿವೇಶವೊಂದು ಶಶಿಧರ ಹಾಲಾಡಿ ಅವರ ‘ಕಾಲಕೋಶ’ ಕಾದಂಬರಿಯಲ್ಲಿದೆ. ಇದು ಅಂದಿನ ಸಿಖ್ ಸಂತ್ರಸ್ತನೊಬ್ಬ ಹೇಳುವ ಸತ್ಯಕಥೆ.
ಸ್ವಾತಂತ್ರ್ಯಾ ನಂತರದ ನೆಹರು ಸರಕಾರ ಇಲ್ಲಿ ಉಳಿದ ಮುಸ್ಲಿಮರಿಗೆ ಹೀಗೆ ಭದ್ರತೆ ಒದಗಿಸಿದ್ದಲ್ಲದೆ ಅವರಿಗೆ ಬೆಂಗಾವಲಾಗಿದ್ದು ಭಾರತದಲ್ಲೇ ವಾಸ್ತವ್ಯ ಕಲ್ಪಿಸಿದ ಪರಿ ಎಲ್ಲರಿಗೂ ತಿಳಿದ ನಗ್ನಸತ್ಯ. ಕಾಲಕ್ರಮೇಣ ಅವರಿಗೆ ‘ಅಲ್ಪಸಂಖ್ಯಾತರು’ ಎಂಬ ಹಣೆ ಪಟ್ಟಿ ದಕ್ಕುವಂತಾಗಿ ಬಗೆಬಗೆಯ ಪ್ರಯೋಜನಗಳು ಒದಗತೊಡಗಿದವು.
ಆದರೆ ದಿನಗಳೆದಂತೆ ಸವಲತ್ತುಗಳು ಹೆಚ್ಚಾಗಿ, ಅವೇಹಕ್ಕಾಗಿ, ಸ್ವಾತಂತ್ರ್ಯವು ಸ್ವೇಚ್ಛಾ ಚಾರವಾಗಿ, ಸ್ವೇಚ್ಛಾಚಾರವೇ ಜೀವನವಾಗಿ ಈ ಸಮುದಾಯವನ್ನು ರೂಪಿಸುತ್ತಿವೆ. ಭಾರತ ಇಷ್ಟೆಲ್ಲ ನೀಡಿದ್ದರೂ ಇವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯವೆಂದು ಅನಿಸುವು ದಾದರೂ ಏತಕ್ಕೆ ಎಂಬುದೇ ಬಿಡಿಸ ಲಾಗದ ಒಗಟು. ಇತರೆ ಮುಸ್ಲಿಂ ದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದ ಸ್ವಾತಂತ್ರ್ಯ- ಸವಲತ್ತುಗಳನ್ನು ನೀಡಿದರೂ, ‘ಹಿಂದೂ-ಮುಸ್ಲಿಂ ಭಾಯಿಭಾಯಿ’ ಎಂದು ಅಪ್ಪಿಕೊಂಡರೂ ಇವರಿಗೆ ‘ಈ ದೇಶ ನಮ್ಮದು’ ಅಂತ ಅನಿಸುತ್ತಲೇ ಇಲ್ಲ; ಇನ್ನು ಇವರು ಹಿಂದೂಗಳನ್ನು ಸ್ವೀಕರಿಸಲು ಸಾಧ್ಯವೇ? ಭಾರತದೊಳಗೆ ದ್ವೀಪಗಳಾಗಿಯೇ ಬದುಕುತ್ತಿರುವ ಇವರು ಮುಂದೆಯೂ ಹಾಗೇ ಬದುಕಲು ಬಯಸುತ್ತಾರಾ ಎನಿಸುತ್ತದೆ.
ಗಾಳಿ-ನೀರು, ಅನ್ನ-ಆಶ್ರಯ ನೀಡುತ್ತಿದೆ ಎಂಬ ಕಾರಣಕ್ಕೆ ಈ ದೇಶವನ್ನು ನಾವೆಲ್ಲ ‘ಭಾರತಮಾತೆ’ ಎಂದು ಪೂಜಿಸುತ್ತೇವೆ, ತಾಯಿಋಣ ತೀರಿಸಲು ಶ್ರಮಿಸುತ್ತೇವೆ. ಆದರೆ ಇವರಲ್ಲಿ ಕೆಲವರಿಗೆ ಹಾಗನ್ನಿಸುವುದೇ ಇಲ್ಲ; ಸಮಯ ಸಿಕ್ಕಾಗಲೆಲ್ಲ ದೇಶ ವಿರೋಧಿ ಗುಂಪುಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ ಅಥವಾ ಭಾರತದೆಡೆಗೆ ಜಗತ್ತಿನೆಲ್ಲೆಡೆ ದ್ವೇಷಭಾವನೆ ಉಕ್ಕುವಂತೆ ಮಾಡಲುಯತ್ನಿಸುತ್ತಾರೆ. ಹಿಜಾಬ್ ವಿವಾದ ಇದಕ್ಕೆ ಇತ್ತೀಚಿನ ಉದಾಹರಣೆ. ಈ ವಿಷಯಕ್ಕೆ ಪಾಕಿಸ್ತಾನ ಮತ್ತು ಇತರೆ ರಾಷ್ಟ್ರಗಳು ಅನಶ್ಯಕ ವಾಗಿ ಮೂಗುತೂರಿಸಿದವು, ತಾಲಿಬಾನ್‌ನಂಥ ಮೃಗೀಯ ಸಂಘಟನೆ ಇವರಿಗೆ ಬೆಂಬಲಿಸಿತು.
ಭಾರತದ ಮುಸ್ಲಿಮರು ಇಂಥ ಹಸ್ತಕ್ಷೇಪದ ವಿರುದ್ಧ ದನಿಯೆತ್ತಬೇಕಿತ್ತು, ‘ಇದು ನಮ್ಮ ದೇಶದ ವಿಚಾರ, ನೀವು ಮೂಗು ತೂರಿ ಸುವ ಅಗತ್ಯವಿಲ್ಲ, ನಾವೇ ಬಗೆಹರಿಸಿಕೊಳ್ಳುತ್ತೇವೆ’ ಎನ್ನಬೇಕಿತ್ತು. ಆದರೆ ಇದನ್ನು ಇವರಿಂದ ನಿರೀಕ್ಷಿಸಲಾದೀತೇ?ಶಾಲಾ ಸಮವಸ್ತ್ರದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪನ್ನು ಪಾಲಿಸದೆ ವಿರೋಧಿಸುವ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ, ಬಂದ್ ಆಚರಿಸುವ ಇವರ ಮನಸ್ಥಿತಿಯಾದರೂ ಎಂಥದ್ದು? ತಮ್ಮ ಸಮುದಾಯದ ಹೆಣ್ಣುಮಕ್ಕಳ ಮೇಲೆ ಓಬಿರಾಯನ ಕಾಲದವಸ್ತ್ರಸಂಹಿತೆ ಯನ್ನೂ ಹತ್ತಾರು ನಿಬಂಧನೆಗಳನ್ನೂ ಹೇರುವ ಮುಸ್ಲಿಂ ಗಂಡಸರು ತಾವು ಕಣ್ಣನ್ನು ಹೊರತುಪಡಿಸಿ ಇಡೀ ದೇಹಕ್ಕೆ ಕಪ್ಪುಬಟ್ಟೆ ಧರಿಸಿ ಕೆಲವೇ ದಿನಗಳವರೆಗೆ ಓಡಾಡಿದರೆ ಆ ಹೆಣ್ಣುಮಕ್ಕಳ ಕಷ್ಟ ಏನೆಂದು ಗೊತ್ತಾಗುತ್ತದೆ.
ಇನ್ನು ‘ಲವ್ ಜಿಹಾದ್’ ವಿಚಾರ. ಮುಗ್ಧ ಹಿಂದೂ ಹುಡುಗಿಯರನ್ನು ಪ್ರೇಮಪಾಶದಲ್ಲಿ ಸಿಲುಕಿಸಿಕೊಂಡು ನಂತರ ಮತಾಂತರಕ್ಕೆಒತ್ತಾಯಿಸುವ, ಒಪ್ಪದಿದ್ದರೆ ಸಾಯಿಸುವ ಅಥವಾ ಅವರ ಬದುಕನ್ನು ನರಕವಾಗಿಸುವ ಈ ಮೃಗೀಯ ವರ್ತನೆ ಯಾವ ಜನಾಂಗ ಕ್ಕಾಗಲಿ ಧರ್ಮಕ್ಕಾಗಲಿ ಶೋಭೆಯಲ್ಲ. ಇಂಥ ತಂಡಗಳು ದೇಶದ ಅನೇಕ ಭಾಗಗಳಲ್ಲಿ ಸಕ್ರಿಯವಾಗಿರುವುದನ್ನು ಮಾಧ್ಯಮದ ವರದಿಗಳಲ್ಲಿ ಓದುತ್ತಿದ್ದೇವೆ.
ಇವರು ಮನೆಗಳಲ್ಲಿ ಏನಾದರೂ ಮಾಡಿಕೊಳ್ಳಲಿ, ಹೊರಗೆ ಬಂದಾಗಲಾದರೂ ಈ ನಾಡಿನ ಭಾಷೆ ಕನ್ನಡದಲ್ಲಿ ವ್ಯವಹರಿಸ ಬೇಕೆಂಬ ಕನಿಷ್ಠ ಜ್ಞಾನವೂ ಇವರಿಗಿಲ್ಲ. ಇಬ್ಬರು ಮುಸ್ಲಿಮರು ಸೇರಿದರೆ ಅಲ್ಲಿ ಉರ್ದು ಇರುತ್ತದೆಯೇ ವಿನಾ ಕನ್ನಡಕ್ಕೆ ಜಾಗವಿರುವುದಿಲ್ಲ. ಇವರ ಮಾಲೀಕತ್ವದ ಸಂಸ್ಥೆಗಳಲ್ಲೂ ವ್ಯವಹಾರದಲ್ಲಿ ಉರ್ದು-ಇಂಗ್ಲಿಷ್‌ನದ್ದೇ ಪಾರಮ್ಯ. ಅಷ್ಟರ ಮಟ್ಟಿಗೆ ಇವರು ನಾಡಭಾಷೆಯನ್ನು ಧಿಕ್ಕರಿಸುತ್ತಿದ್ದರೂ ಕನ್ನಡದ ‘ಓರಾಟಗಾರರು’ ಎನಿಸಿಕೊಂಡವರಿಗೆ ಈ ಕಹಿವಾಸ್ತವದ ಅರಿವಾಗದಿರು ವುದು ವಿಪರ್ಯಾಸ.
ಕಣ್ಣೆದುರೇ ಕನ್ನಡವನ್ನು ಕಬಳಿಸುತ್ತಿರುವ ಉರ್ದುವಿಗಿಂತ ಇವರಿಗೆ ದೂರದ ಹಿಂದಿ-ಸಂಸ್ಕೃತಗಳದ್ದೇ ಚಿಂತೆಯಾಗಿದೆ, ಅವುಗಳವಿರುದ್ಧ ಹೋರಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಮುಸ್ಲಿಮರಾಗಿ ಹುಟ್ಟಿ ಈ ನಾಡಿನ ಹೆಮ್ಮೆಯ ಪುತ್ರರಾಗಿಯೇ ಬದುಕಿದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಪಕ್ಷಿತಜ್ಞ ಸಲೀಂ ಅಲಿ, ‘ನಿತ್ಯೋತ್ಸವ’ ಕವಿ ನಿಸಾರ್ ಅಹಮದ್, ಭಾವೈಕ್ಯತೆ ಸಾರಿದ ಇಬ್ರಾಹಿಂಸುತಾರ್ ಮೊದಲಾದವರು ಮುಸ್ಲಿಮರಿಗೆ ಅದೇಕೋ ಆದರ್ಶವಾಗಲೇ ಇಲ್ಲ.
ಇವರ ಫೋಟೋಗಳನ್ನು ಎಷ್ಟು ಜನ ಮುಸ್ಲಿಮರು ತಮ್ಮ ಮನೆ, ಕಚೇರಿ, ಆಟೋಗಳಲ್ಲಿ ಹಾಕಿಕೊಂಡಿದ್ದಾರೆ? ಇಂಥ ಸಾಧಕರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆ ಇರಬೇಕಾಗಿತ್ತು. ಆದರೆ ‘ಇವರು ನಮ್ಮವರು’ ಎಂಬುದಾಗಿ ಯಾರಾದರೂ ಮುಸ್ಲಿಮರುಹೇಳಿಕೊಂಡಿದ್ದಾರೆಯೇ? ಹೇಳಿಕೊಳ್ಳುತ್ತಿದ್ದಾರೆಯೇ? ತಮ್ಮ ಮುಂದಿನ ತಲೆಮಾರಿಗೆ ತಿಳಿಸಿಕೊಡುತ್ತಿದ್ದಾರೆಯೇ? ಇನ್ನು ನಮ್ಮ ರಾಜಕಾರಣಿಗಳು ಮುಸ್ಲಿಮರಿಗೆಂದು ಇಫ್ತಾರ್ ಕೂಟಗಳನ್ನು ಏರ್ಪಡಿಸುವುದು ಜಗಜ್ಜಾಹೀರು. ಕೇವಲ ವೋಟ್‌ಬ್ಯಾಂಕ್ ದೃಷ್ಟಿಯಿಂದ ಇಂಥ ಆಯೋಜನೆಗಳಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತು.
ಆದರೆ ಇವರು ಹಿಂದೂಗಳಿಗಾಗಿ ದಸರಾಕೂಟ, ದೀಪಾವಳಿ ಕೂಟಗಳನ್ನು ಇಷ್ಟೇ ಮುತುವರ್ಜಿಯಿಂದ ಏರ್ಪಡಿಸಿದ್ದಿದೆಯೇ? ಇಲ್ಲಿಯವರೆಗೂ ಒಬ್ಬ ರಾಜಕಾರಣಿಯೂ ಈ ಬಗ್ಗೆ ಪ್ರಶ್ನಿಸಿಲ್ಲವೇಕೆ? ಇಫ್ತಾರ್ ಕೂಟ ಆಯೋಜಿಸಿದ್ದರ ಜತೆಗೆ ಮುಸ್ಲಿಮರಂತೆ ತಾವೂ ತಲೆಗೆ ಬಿಳಿ ಟೋಪಿ ಧರಿಸಿ ಅವರನ್ನು ಮೆಚ್ಚಿಸುವ ಇಂಥ ‘ಜೋಕರ್’ ಪ್ರವೃತ್ತಿಯವರು, ‘ನಾವು ನಿಮ್ಮನ್ನು ಅನುಸರಿಸಿ ದಂತೆ ನೀವೂ ನಮ್ಮಂತೆ ತಿಲಕ ಧರಿಸಿ’ ಎಂದು ಬಾಯಿಬಿಡುವುದಿಲ್ಲವೇಕೆ? ಮುಸ್ಲಿಮರನ್ನು ‘ಬಾಂಧವರು’ ಎಂದು ಹೇಳಿ ಹಿಂದೂ ಗಳು ಅಪ್ಪಿಕೊಂಡರೂ ಅವರು ಇನ್ನಷ್ಟು ಮತ್ತಷ್ಟು ದೂರವಾಗುತ್ತಿರುವುದೇಕೆ? ಮಕ್ಕಳು ಮತ್ತು ಹಿರಿಯ ಜೀವಗಳು ಮುಂಜಾ ನೆಯ ಗಾಢನಿದ್ರೆಯಲ್ಲಿರುವಾಗ ಮಸೀದಿಯ ಮೈಕುಗಳಿಂದ ‘ಅಜಾನ್’ ಕೂಗು ಕೇಳುತ್ತದೆ.
ಇದರಿಂದ ಕಿರಿಕಿರಿಯಾಗುತ್ತದೆ ಎಂಬ ಅರಿವು ಇವರಿಗಿರಬೇಕಲ್ಲವೇ? ನಮಾಜು ಮಾಡುವ ಸಮಯವನ್ನು ನೆನಪಿಸಲೆಂದು ಅಜಾನ್ ಕೂಗಲು ಅನೇಕ ವರ್ಷಗಳ ಹಿಂದೆ ಮೈಕುಗಳನ್ನು ಒಂದು ಸಂವಹನ ಮಾಧ್ಯಮವಾಗಿ ಬಳಸಲಾಗುತ್ತಿತ್ತು. ಆದರಿಂದು ಜಗವೇ ಮೊಬೈಲ್‌ಮಯ ಆಗಿರುವುದರಿಂದ ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟವರಿಗೆ ತಂತಾನೆ ಸಂದೇಶ ಹೋಗುವ ವ್ಯವಸ್ಥೆ ಮಾಡಿದರಾಯಿತಲ್ಲವೇ? ಹೀಗೆ ಮಾಡಿದಲ್ಲಿ ನಮಾಜ್ ಸಮಯಕ್ಕೆಂದು ಎಚ್ಚರಿಸಿದಂತೆಯೂ ಆಗುತ್ತದೆ, ಯಾರಿಗೂ ತೊಂದರೆ ಯಾಗದಂತೆ ನಡೆದುಕೊಂಡಂತೆಯೂ ಆಗುತ್ತದೆ, ಅಲ್ಲವೇ? ಮಸೀದಿಯ ಮೇಲಿನ ಮೈಕುಗಳನ್ನು ತೆರವುಗೊಳಿಸಲು ಘನ ನ್ಯಾಯಾಲಯ ಸೂಚಿಸಿ ವರ್ಷಗಳೇ ಉರುಳಿವೆ.
ಆದರೆ ಎಷ್ಟು ಮಸೀದಿಗಳು ಇದನ್ನು ಪಾಲಿಸಿವೆ? ನ್ಯಾಯಾಂಗದ ಬಗ್ಗೆ ಹೀಗೆ ಅಗೌರವವಾಗಿ ನಡೆದುಕೊಳ್ಳುವುದು ತರವೇ?ಬಹುಮುಖ್ಯವಾಗಿ ಸರಕಾರ, ಪೊಲೀಸ್ ಇಲಾಖೆ ಇನ್ನೂ ಮೈಕುಗಳನ್ನು ತೆರವುಗೊಳಿಸಿಲ್ಲವೇಕೆ? ಕಾನೂನು ಎಲ್ಲರಿಗೂ ಒಂದೇ ತಾನೇ? ಮುಸ್ಲಿಮರಲ್ಲಿ ಕೆಲವರು, ‘ಶಿಕ್ಷಣಕ್ಕಿಂತ ನಮಗೆ ಧರ್ಮವೇ ಮೊದಲು’ ಎಂದರೆ, ಮತ್ತೆ ಕೆಲವರು, ‘ದೇಶಕ್ಕಿಂತಲೂ ನಮಗೆ ಧರ್ಮವೇ ಮಿಗಿಲು’ ಎನ್ನುತ್ತಾರೆ.
ಹಾಗಾದರೆ ಧರ್ಮವನ್ನು ನಿಷ್ಠೆಯಿಂದ ಪರಿಪಾಲಿಸಿಯೂ ಟಿಪ್ಪು ಸುಲ್ತಾನ್ ಬ್ರಿಟಿಷರಿಂದ ಹತನಾಗಿದ್ದೇಕೆ? ಆತ ತನ್ನ ಧರ್ಮದ ರಕ್ಷಣೆಯ ಹೆಸರಿನಲ್ಲಿ ಮತಾಂತರ ಮಾಡಿದ, ಮಲಬಾರ್ ಪ್ರಾಂತ್ಯದಲ್ಲಿ ಹಿಂದೂಗಳ ನರಮೇಧ ಮಾಡಿದ. ಆದರೂ ಟಿಪ್ಪುವನ್ನು ಅವನ ದೇವರು ಮತ್ತು ಧರ್ಮ ರಕ್ಷಿಸಲಿಲ್ಲವೇಕೆ? ಆತ ತನ್ನ ಮಕ್ಕಳನ್ನು ಒತ್ತೆಯಿಟ್ಟಿದ್ದೂ ಅಲ್ಲದೆ ರಾಜ್ಯವನ್ನೂ ಪ್ರಾಣವನ್ನೂಕಳೆದುಕೊಳ್ಳಬೇಕಾಯಿತು. ಹೀಗೇಕೆ? ಇದ್ಯಾವುದರ ಪರಿವೆಯೇ ಇಲ್ಲದೆ ಇಂದಿಗೂ ಸಾವಿರಾರು ಬಡ ಮುಸ್ಲಿಮರು ತಮ್ಮ ಪಾಡಿಗೆ ತಾವು ಬದುಕುತ್ತ, ಹಿಂದೂಗಳೊಂದಿಗೆ ಅನ್ಯೋನ್ಯವಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಕಾಣಸಿಗುತ್ತವೆ.
ಜಾನುವಾರುಗಳ ಕಾಲುಗಳಿಗೆ ಲಾಳ ಹೊಡೆಯುವ, ಪಾತ್ರೆಗಳಿಗೆ ಕಲಾಯ ಮಾಡುವ, ಹಳೆಪಾತ್ರೆ-ಹಳೆಕಬ್ಬಿಣ ಸಂಗ್ರಹಿಸುವ ವೃತ್ತಿಗಳನ್ನು ಅಪ್ಪಿಕೊಂಡಿರುವ ಮುಸ್ಲಿಮರು ಗ್ರಾಮೀಣ ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ ಮತ್ತು ಇವರು ಹಿಂದೂ ಗಳ ಜೀವನದ ಅನಿವಾರ್ಯ ಸಹವರ್ತಿಗಳಾಗಿ ಬೆರೆತುಹೋಗಿದ್ದಾರೆ. ಆದರೆ, ಮತಾಂಧತೆ ಎಂಬುದು ಜ್ವಾಲೆಯಂತೆ ಎಲ್ಲೆಡೆ ವ್ಯಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ಇಂಥ ಮುಗ್ಧ ಮುಸ್ಲಿಮರ ನಿರ್ವ್ಯಾಜ ಪ್ರೀತಿ, ರಾಗ-ದ್ವೇಷಗಳಿಲ್ಲದ ಬದುಕಿನ ಕ್ರಮ ಎಷ್ಟು ದಿನ ಉಳಿಯುತ್ತದೋ ಕಾದುನೋಡಬೇಕಿದೆ.
ಪರಿವರ್ತನೆ ಜಗದ ನಿಯಮ. ಯಾವುದೇ ಧರ್ಮವಾಗಲಿ, ತತ್ತ್ವ-ಸಿದ್ಧಾಂತವಾಗಲಿ ಕಾಲಕಾಲಕ್ಕೆ ಪರಿವರ್ತನೆ ಆಗಲೇಬೇಕು. ಸಾವಿರಾರು ವರ್ಷಗಳ ಹಿಂದಿನ ರೀತಿ-ರಿವಾಜುಗಳೇ ಇವತ್ತಿಗೂ ಅನ್ವಯವಾಗಲೇಬೇಕು ಎಂದೇನಿಲ್ಲ. ಆಗಿನ ಕಾಲಘಟ್ಟದಲ್ಲಿ ಸರಿಯೆನ್ನಿಸಿದ್ದು ಇವತ್ತಿಗೂ ಸರಿಯೆನ್ನಿಸಬೇಕು ಎಂದೇನಿಲ್ಲ. ಎಲ್ಲಕ್ಕಿಂತ ಹಿರಿದಾದುದು ಮಾನವೀಯತೆ, ವಿಶ್ವಮಾನವತ್ವ. ಅದು ಕಾಲಾತೀತವಾದದ್ದು. ಎಲ್ಲರ ಹೆಜ್ಜೆ ಅತ್ತ ಚಲಿಸಿದಾಗ ಮಾತ್ರ ಒಂದಷ್ಟು ಪ್ರೀತಿ, ವಿಶ್ವಾಸ, ವಾತ್ಸಲ್ಯ, ನಂಬಿಕೆ, ಬಾಂಧವ್ಯಗಳು ಗಟ್ಟಿಯಾಗುತ್ತವೆ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಅವು ಪಕ್ಕಕ್ಕೆ ಸರಿಸಿ, ಮನುಷ್ಯರನಡುವಿನ ಸಂಬಂಧಗಳಿಗೆ ಹೊಸಭಾಷ್ಯ ಬರೆಯುತ್ತವೆ.