ಸುಧಾಮೂರ್ತಿ ಅವರ ಕಾಲಿಗೆ ಬಿದ್ದಿದ್ದೇ ತಪ್ಪಾಯ್ತಾ ?
ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರು ಅತಿಥಿಯಾಗಿ ಹೋಗಿರ್ತಾರೆ. ಅದೂಪುಸ್ತಕದ ಬಿಡುಗಡೆಯ ಕಾರ್ಯಕ್ರಮ. ಹೇಗೂ ಸುಧಾಮೂರ್ತಿ ಅವರು ಭಾರತಕ್ಕೇ ಗೊತ್ತಿರುವ ವ್ಯಕ್ತಿ, ಮತ್ತೆ ಕತೆಗಾರ್ತಿ ಕೂಡ. ಜನ ಸೇರಿಯೇ ಸೇರಿರುತ್ತಾರೆ. ಅಲ್ಲಿ ಬಂದಿದ್ದ ಓದುಗರ ಜತೆ ಅವರ ಸಂವಾದ ಸಹ ಇತ್ತು.
ಅದರಲ್ಲೇ ನಿರತವಾಗಿದ್ದ ಸುಧಾಮೂರ್ತಿ ಅವರಿಗೆ, ಯಾರನ್ನೂ ಕೂಡ ಮುಖತಃ ಭೇಟಿಮಾಡಲು ಸಮಯವಿರಲಿಲ್ಲ. ಆದರೆ, ಆ ಕಾರ್ಯಕ್ರಮದ ಸಭಾಂಗಣದ ಹತ್ತಿರ ಸಂಭಾಜಿ ಭಿಡೆ ಮತ್ತವರ ಕೆಲ ಕಾರ್ಯಕರ್ತರು ಬಂದು, ಸುಧಾಮೂರ್ತಿಯವರನ್ನು ಭೇಟಿ ಮಾಡಬೇಕು, ಅವರ ಜತೆ ಒಂದೂವರೆ ಘಂಟೆಗಳ ಕಾಲ ಭಿಡೆ ಮಾತನಾಡುತ್ತಾರೆ ಅಂತ ಕೇಳುತ್ತಾರೆ.
ಮೊದಲೇ ಸಮಯವಿರದಿದ್ದ ಸುಧಾಮೂರ್ತಿ ಒಂದೂವರೆ ಘಂಟೆ ಅಲ್ಲ, ಒಂದೂವರೆ ನಿಮಿಷ ಕೂಡ ಸಮಯವಿಲ್ಲ, ಮಾತಾ ಡೋಕೆ ಆಗೋದೇ ಇಲ್ಲ ಎಂದು ಹೇಳುತ್ತಾರೆ. ಆದರೆ, ಆ ಸಭಾಂಗಣದ ಹತ್ತಿರ ಭಿಡೆಯ ಕಾರ್ಯ ಕರ್ತರು ಸೇರಲು ಶುರುಮಾಡುತ್ತಾರೆ. ಪೊಲೀಸರೂ ಬರುತ್ತಾರೆ. ಭಿಡೆ ಮತ್ತವರ ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಸುಧಾಮೂರ್ತಿ ಅವರಿಗೆ ವಿನಂತಿಸಿಕೊಳ್ಳುತ್ತಾರೆ, ಕೊನೆಗೆ ಸುಧಾಮೂರ್ತಿ ಭಿಡೆ ಅವರ ಜತೆ ಮಾತನಾಡಲು ಒಪ್ಪಿಕೊಳ್ಳುತ್ತಾರೆ. ಆಗ ಸಂಭಾಜಿ ಭಿಡೆ ಸಂಭಾಗಣಕ್ಕೆ ಬರುತ್ತಾರೆ.
ಭಿಡೆ ಹತ್ತಿರ ಹೊರಟಾಗ ಸುಧಾಮೂರ್ತಿ ಅವರು ಅಲ್ಲೇ ಜತೆಯಿದ್ದ ಕಾರ್ಯಕ್ರಮದ ಸಂಯೋಜಕಿ ಯೋಜನಾ ಯಾದವ್‌ಗೆ ಭಿಡೆವರ ವಯಸ್ಸನ್ನು ಕೇಳುತ್ತಾರೆ. ಎಷ್ಟೇ ಆಗಲಿ, ಭಿಡೆ ಅವರು ಸುಧಾಮೂರ್ತಿಯವರ ವಯಸ್ಸಿಗಿಂತ ಹಿರಿಯರು ಅಂತತಿಳಿದು ಅವರ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಅಲ್ಲಿ ನಡೆದಿದ್ದು ಇಷ್ಟೇ. ಆದರೆ. ಅದರ ಮುಂದೆ ಇದೇ ವಿಷಯವನ್ನು ಹಿಡಿದು ಹಲವರು ತಮ್ಮದೇ ಆದ ರೀತಿಯಲ್ಲಿ ಭಿಡೆಗೆ ಮತ್ತು ಸುಧಾಮೂರ್ತಿ ಅವರಿಗೆ ವಿರೋಧ ಮಾಡಲು ಶುರುಹತ್ತುತ್ತಾರೆ. ಇಲ್ಲಿ ಯಾರಿಗೂ ತಿಳಿಯದ ವಿಷಯವೆಂದರೆ, ವಯಸ್ಸಲ್ಲಿ ತನಗಿಂತ ಹಿರಿಯರಾಗಿದ್ದ ಭಿಡೆ ಅವರಿಗೆ ಸುಧಾಮೂರ್ತಿ ಅವರು ನಮಸ್ಕರಿಸಿದ್ದರಲ್ಲಿ ತಪ್ಪೇನಿದೆ.
ಹಾಗಂತ ಅವರು ಮೊದಲನೇ ಬಾರಿ ಯಾರಿಗೋ ಕಾಲಿಗೆ ನಮಸ್ಕರಿಸಿದ್ದಲ್ಲ, ಅವರಿಗಿಂತ ಹಿರಿಯರಿಗೆ ಎಷ್ಟೋ ಸಲ ನಮಸ್ಕರಿಸಿದ್ದು ನಾವು ನೋಡುತ್ತಲೇ ಇದ್ದೇವೆ. ಅವರು ಭಿಡೆ ಅವರಿಗೆ ನಮಸ್ಕರಿಸಿದ್ದಲ್ಲಿ ಏನಾದ್ರೂ ವಿವಾದ ಕಾಣುತ್ತಾ?ಊಹೂಂ. ಮತ್ತೆ ಇದೆ ಸ್ವಲ್ಪ ವರ್ಷಗಳ ಹಿಂದೆ ಇದೇ ರೀತಿಯಾಗೆ ಬೊಂಬಡಾವನ್ನು ಸುಧಾಮೂರ್ತಿ ಅವರ ವಿರುದ್ಧನಡೆಸಿದ್ದರು, ಅದು ಪ್ರಮೋದಾ ದೇವಿ ಒಡೆಯರ್ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಕ್ಕೂ ಇಂತಹ ಕೆಲವರೇ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ವಿರೋಧ ಶುರು ಮಾಡಿದ್ದರು. ಹೀಗೆ ಕೆಲ ದಿನಗಳ ಹಿಂದೆ ನಾರಾಯಣ ಮೂರ್ತಿ ಅವರು ಮನಮೋಹನ್ ಸಿಂಗ್ ಅವರ ಸರಕಾರದ ವಿರುದ್ಧ ಕೊಟ್ಟ ಹೇಳಿಕೆಯ ವಿರುದ್ಧವೂ ಇಂಥವರೇ ಕೆಲವರು ‘ಗುರ್’ ಅಂದಿದ್ದರು.
ಇನ್ನೂ ಸಂಭಾಜಿ ಭಿಡೆ, ಕರ್ನಾಟಕದಲ್ಲಿ ಅಷ್ಟೇನೂ ಪರಿಚಿತರಲ್ಲದ ವ್ಯಕ್ತಿ, ಆದರೆ ಮಹಾರಾಷ್ಟ್ರ, ಅದರಲ್ಲೂ ದಕ್ಷಿಣ ಮಹಾ ರಾಷ್ಟ್ರದಲ್ಲಿ ಗುರೂಜಿ ಅಂತಲೇ ಗುರುತಿಸಿಕೊಳ್ಳುವ ವ್ಯಕ್ತಿ, ಕೊಲ್ಲಾಪುರ್, ಸಂಗ್ಲಿ ಜಿಲ್ಲೆಗಳಲ್ಲಿ ತಮ್ಮದೇ ಆದ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಐತಿಹಾಸಿಕ ಸ್ಮಾರಕಗಳ ಉಳಿವಿಗಾಗಿ ಹೋರಾಡುತ್ತಿರುವವರು, ಮೊದಲು ಆರ್ ಎಸ್ ಎಸ್ ಕಾರ್ಯ ಕರ್ತರಾಗಿದ್ದ ಇವರು, ಈಗ ತಮ್ಮದೇ ಆದ ಶಿವ ಪ್ರತಿಷ್ಠಾನ ಹಿಂದೂಸ್ಥಾನ್ ಸಂಘಟನೆಯ ಮೂಲಕ ಹೋರಾಡುತ್ತಿದ್ದಾರೆ. ತಮ್ಮ ಹೇಳಿಕೆಗಳಿಂದ ಆಗಾಗ ಪತ್ರಿಉಕೆಗಳಲ್ಲಿ ಹೆಡ್‌ಲೈನ್ಸ್ ಆಗಿದ್ದರೂ ಸಹ.
ಮಹಾರಾಷ್ಟದಲ್ಲಿ ತುಂಬಾನೆ ಹೆಸರುವಾಸಿ ಆಗಿರುವ ಮನುಷ್ಯ, ಮೊನ್ನಮೊನ್ನೆ ತಾನೆ ಪತ್ರಕರ್ತೆಗೆ ಬಿಂದಿ ಹಚ್ಚಿದರಷ್ಟೇ ಮಾತಾನುಡುತ್ತೀನಿ ಅಂದಿದ್ದು ಹಲವರ ಕಣ್ಣುಕುಕ್ಕಿಸಿತ್ತು. ಎಲ್ಲದಕ್ಕಿಂತ ಹೇಳಬೇಕೆಂದರೆ, ನರೇಂದ್ರ ಮೋದಿ ಇವರನ್ನು ಗುರೂಜಿ ಅಂತ ಕರೆದಿದ್ದು ಸಿಕ್ಕಾಪಟ್ಟೆ ಸದ್ದುಮಾಡಿತ್ತು. ಇಲ್ಲಿ ಗೊತ್ತಾಗದೆ ಇರೋದು ಸುಧಾಮೂರ್ತಿ ಭಿಡೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದಕ್ಕಾ? ಅಥವಾ ಭಿಡೆ ಹಿಂದೂ ಕಾರ್ಯಕರ್ತ ಅಂತನಾ? ಅಷ್ಟಕ್ಕೂ ಸಂಭಾಜಿ ಭಿಡೆ, ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ್ದು ಯಾವುದೋ ರಾಜಕೀಯ ಮಹತ್ಕಾರ್ಯಗಳಿಗಲ್ಲ, ರಾಯಗಢದಲ್ಲಿ ನವೀಕರಣಗೊಳ್ಳುತ್ತಿದ್ದ ಶಿವಾಜಿ ಮಹಾರಾಜರ ಕೋಟೆಗೆ ಬಂಗಾರದ ಸಿಂಹಾಸನಕ್ಕೆ ನೆರವನ್ನು ಕೇಳುವುದಕ್ಕೆಡ ಹೋಗಿದ್ದರು.
ಸಮಯವಿಲ್ಲದ ಸುಧಾಮೂರ್ತಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸಿಗುತ್ತೀನಿ ಅಂತ ಹೇಳಿದರು. ಇವರು ಬರೀ ಕಾಲಿಗೆ ನಮಸ್ಕರಿಸಿದ್ದಕ್ಕೆ ವಿರೋಧ ಮಾಡಲು ಇರುವ ಕಾರಣಗಳೇನು? 2022ರ ಸಮಯದಲ್ಲಿ ಯಾರೂ ಯಾರ ಕಾಲಿಗೂ ನಮಸ್ಕಾರ ಮಾಡಬಾರದಾ? ಒಂದು ಸುದ್ದಿ ವಾಹಿನಿಯ ಕಾರ್ಯಕ್ರಮಕ್ಕೆ ಅವರ ಗುರುಗಳು ಬಂದಾಗ, ಅವರೇ ಓದಿದ್ದ ಕೆಎಲ್‌ಇ ಕಾಲೇಜಿನ ಕಾನ್ವೋಕೇಷನ್ ಕಾರ್ಯಕ್ರಮಕ್ಕೆ ಅತಿಥಿ ಆಗಿ ಹೋದಾಗ, ಇನ್ನೂ ನಾರಾಯಣ ಮೂರ್ತಿ ಅವರೂ ಗುರು ಹಿರಿಯರ ಕಾಲಿಗೆ ನಮಸ್ಕಾರ ಮಾಡಿದ್ದನ್ನು ಎಷ್ಟೋ ಸಲ ಎಲ್ಲರೂ ನೋಡಿದ್ದೇವೆ.
ಅದು ಭಾರತೀಯ ಸಂಸ್ಕೃತಿ. ಸುಧಾಮೂರ್ತಿ, ನಾರಾಯಣ ಮೂರ್ತಿ ತಮ್ಮದೇ ಆದ ಕಾರ್ಯಕ್ಷೇತ್ರದಲ್ಲಿ ಎಷ್ಟೇ ಎತ್ತರಕ್ಕೆ ಹೋಗಿ ಸಾಧನೆ ಮಾಡಿದರೂ ಅವರಲ್ಲಿ ಯಾವುದೇ ದುರಹಂಕಾರದ ವರ್ತನೆಗಳಿಲ್ಲದೆ ಸಮಾಜದ ಎಲ್ಲ ವರ್ಗದವರ ಜತೆಸೇರಿದ್ದನ್ನು ನೋಡುತ್ತಲೇ ಇದ್ದೀವಿ, ಹಾಗಾದರೇ ಅವರಿಗೆ ವಿರೋಧ ಏಕೆ? ಎಲ್ಲದಕ್ಕಿಂತ ಹೆಚ್ಚಾಗಿ ಸುಧಾಮೂರ್ತಿ ಅವರನ್ನು ರಿಷಿ ಸುನಕ್ ಅವರ ಅತ್ತೆ ಎಂದೇ ಎಲ್ಲ ಕಡೆ ತೋರಿಸುತ್ತಿದ್ದಾರೆ.
ಅದರೆ, ರಿಷಿ ಸುನಕ್ ಭಾರತಕ್ಕೆ ಗೊತ್ತಾಗುವ ಮುಂಚೆನೇ ಸುಧಾಮೂರ್ತಿ ಎಲ್ಲರಿಗೂ ಗೊತ್ತಿದ್ದವರೇ. ಮೊನ್ನೆ ಮೊನ್ನೆ ತಾನೇ ಬ್ರಿಟನ್‌ನ ಪ್ರಧಾನ ಮಂತ್ರಿ ಆದ ರಿಷಿ ಅವರನ್ನು ಮೆನ್ಷನ್ ಮಾಡುವುದು ಏಕೆ ಬೇಕಾಗಿತ್ತು? ಭಾರತೀಯರಿಗೆ ಬರೀ ಸುಧಾ ಮೂರ್ತಿ ಅಂದರೆ ಯಾರು ಅಂತ ಗೊತ್ತೇ ಇಲ್ಲವಾ? ಅಷ್ಟಕ್ಕೂ ಸುಧಾಮೂರ್ತಿ ಕಾಲಿಗೆ ಬೀಳುವುದಕ್ಕೂ, ಅದು ಕೆಲವರ ನೆತ್ತಿಗೆ ಏರುವುದಕ್ಕೂ ಏನಾದರೂ ಸಂಬಂಧ ಕಾಣುತ್ತಾ!