ಸಮಾನ ನಾಗರಿಕ ಸಂಹಿತೆ ಬರೀ ಪ್ರಣಾಳಿಕೆಯೇ ?
ಪ್ರಸ್ತುತ
ಪೃಥ್ವಿರಾಜ್ ಕುಲಕರ್ಣಿ
@.
ಏಕರೂಪ ನಾಗರಿಕ ಸಂಹಿತೆ- ಇತ್ತೀಚೆಗೆ ಮತ್ತೆ ಚರ್ಚೆಗೆ ಬಂದ ಮಾತು. 2023ರ ಚುಣಾವಣೆಗೆ ಬಹು ಪಕ್ಷಗಳು ಮತ ಬೇಟೆಗೆ ಸಿದ್ಧವಾಗಿವೆ. ಇದರ ಹಿನ್ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.
ಗುಜರಾತ್ ಬಿಜೆಪಿಯ ಮುಖ್ಯ ಪ್ರಣಾಳಿಕೆಯಾಗಿದ್ದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ತಯಾರಿ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ, ಇತ್ತ ಕರ್ನಾಟಕದಲ್ಲೂ 2023ರ ಚುನಾವಣೆಯಲ್ಲಿ ಸಮಾನ ನಾಗರಿಕ ಸಂಹಿತೆ ಬಹು ಮುಖ್ಯ ಪಾತ್ರ ವಹಿಸಲಿದೆ. ಆದರೆ ಇದು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ.
೧೮೪೦ರಿಂದಲೂ ಏಕರೂಪ ನಾಗರಿಕ ಸಂಹಿತೆ ತರುವ ಸತತ ಪ್ರಯತ್ನದಲ್ಲಿವಿಫಲಗೊಂಡಿದೆ. ಈ ಕಾನೂನಿಗೆ ಪರ, ವಿರೋಧ ವ್ಯಕ್ತವಾಗದೆ? ಹಾಗಾದರೆ ಏನಿದು ಏಕರೂಪ ನಾಗರಿಕ ಸಂಹಿತೆ? ಭಾರತದಲ್ಲಿ 2 ರೀತಿಯ ಕಾನೂನು ಗಳಿವೆ. ವೈಯಕ್ತಿಕ ಕಾನೂನು ಮತ್ತು ಕ್ರಿಮಿನಲ್ ಕಾನೂನು. ಕ್ರಿಮಿನಲ್ ಕಾನೂನುಗಳು ಎಲ್ಲರಿಗೂ ಒಂದೇ ರೀತಿಯಲ್ಲಿಅನ್ವಯವಾಗುತ್ತವೆ. ವೈಯಕ್ತಿಕ ಕಾನೂನುಗಳೆಂದರೆ ಮದುವೆ, ವಿಚ್ಛೇದನ, ಉತ್ತರಾಧಿಕಾರತ್ವ, ಮತ್ತು ದತ್ತು ವಿಷಯಗಳಿಗೆ ಸಂಬಂಧ ಪಟ್ಟಿದೆ. ಸಮಾನ ನಾಗರಿಕ ಸಂಹಿತೆ ಸಂವಿಧಾನದ 44ನೇ ವಿಧಿಯಲ್ಲಿದೆ. ಆದರೆ ಅದು ಕಡ್ಡಾಯವಾಗಿಲ್ಲ, ಬದಲಾಗಿ ರಾಜ್ಯ ನಿರ್ದೇಶಿತ ತತ್ವಗಳಲ್ಲಿ ಸೇರಿಸಲಾಗಿದೆ. ಎಂದರೆ ಈ ಕಾನೂನನ್ನು ಕೋರ್ಟ್ ಮೂಲಕ ಜಾರಿಗೆ ತರಲು ಸಾಧ್ಯವಿಲ್ಲ.
ಇದನ್ನು ಸರಕಾರ ತರಲು ಪ್ರಯತ್ನಿಸಬೇಕೆಂದು ಸಂವಿಧಾನ ಹೇಳುತ್ತದೆ. ಇನ್ನು೩೭ನೇ ವಿಧಿರಾಜ್ಯ ನಿರ್ದೇಶಿತ ತತ್ವಗಳಬಗ್ಗೆಯೂ ಸ್ಪಷ್ಟ ಅಭಿಪ್ರಾಯ ಹೊಂದಿದೆ. ರಾಜ್ಯ ನಿರ್ದೇಶಿತ ತತ್ವಗಳನ್ನೂ ಕೋರ್ಟ್ ಮುಖಾಂತರ ತರಲು ಸಾಧ್ಯವಿಲ್ಲ. ಹೀಗಾಗಿ ಈ ವಿಷಯವನ್ನು ಸಂಸತ್ತು ಒಮ್ಮತ ನಿರ್ಧಾರಕ್ಕೆ ಬಂದು ಜಾರಿಗೆ ತರಬೇಕು ಎಂದು ಸಂವಿಧಾನ ಹೇಳುತ್ತದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಸರ್ವ ಧರ್ಮಗಳ ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ.
ದೇಶದಲ್ಲಿ ಬೇರೆ ಬೇರೆ ಜನರಿಗೆ ಬೇರೆ ಬೇರೆ ಕಾನೂನುಗಳಿವೆ. ಭಾರತದ ಮುಸ್ಲಿಮರು ಷರಿಯಾ ಕಾನೂನನ್ನು ಅನ್ವಯಿಸು ತ್ತಾರೆ. ಇದನ್ನು ಮುಸ್ಲಿಂ ವೈಯಕ್ತಿಕ ಕಾನೂನು ಷರೀಯತ್ ಅಪ್ಲಿಕೇಶನ್ ಆಕ್ಟ್ 1937 ಎಂದು ಕ್ರೋಡೀಕರಿಸ ಲಾಗಿದೆ. ಮುಸ್ಲಿಂ ವಿವಾಹ ವಿಘಟನೆ 1939ರ ಪ್ರಕಾರ, ಮೊದಲ ಹೆಂಡತಿಯ ಒಪ್ಪಿಗೆ ಇಲ್ಲದೆ ಮುಸ್ಲಿಂ ಪುರುಷನಿಗೆ ೪ ಮದುವೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಪ್ರಶ್ನೆ ಏನೆಂದರೆ ಜಾತ್ಯತೀತ ಹೆಸರಿನಲ್ಲಿ ಇದನ್ನು ವಿರೋಧಿಸುವ ಹಾಗಿಲ್ಲ. ಬ್ರಿಟಿಷರ ಕಾಲದಿಂದಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸತತ ಪ್ರಯತ್ನಗಳಾಗಿವೆ.
ಆದರೆ ಇದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತವಾಗಿತ್ತು. ಹಾಗೆ ನೋಡಿದರೆ ನೆಹರು, ಡಾ. ಬಿ ಆರ್ ಅಂಬೇಡ್ಕರ್ ಮತ್ತು ಇಂದಿರಾ ಗಾಂಽಯವರು ಸಹ ಇದರ ಸಮಾನ ನಾಗರಿಕ ಸಂಹಿತೆ ಪರವಾಗಿದ್ದರು. ಆದರೆ ಒತ್ತಡಗಳಿಂದ ಇದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ತ್ತೀಚೆಗೆ ಇದನ್ನು ಜಾರಿಗೆ ತರಲು ಚರ್ಚೆ ನಡೆದರೆ, ಇದು ರಾಜಕೀಯ ಸ್ಟ್ರಾಟಜಿ, ಸರಕಾರದವೈಫಲ್ಯ,ಬೆಲೆ ಏರಿಕೆ ಮತ್ತು ಕೋಮುವಾದವನ್ನು ಮುಚ್ಚಿ ಹಾಕಿ ಜನರಿಗೆ ಡೈವರ್ಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಾರೆ ವಿರೋಧಿಗಳು.
ಹಾಗಾದರೆ ಇವರ ಪ್ರಕಾರ ಇದನ್ನು ಜಾರಿಗೆ ತರುವುದೇ ತಪ್ಪೇ ಅಥವಾ ಸೂಕ್ತವಾದ ಸಮಯವಲ್ಲವೆ? ಜಾತ್ಯತೀತ ಮಂತ್ರ ಹೇಳುವ ಇವರಿಗೆ ಜೆಂಡರ್ ಇನಿಕ್ವ್ಯಾಲಿಟಿ ಕಾಣುತ್ತಿಲ್ಲವೇ? ರಾಜಕಿಯ ತಿರುವು ಎನ್ನುವುದಾದರೆ ಇದರ ಬಗ್ಗೆ ರಾಜಕಾರಣಿ ಗಳು ಬಿಟ್ಟು ಯಾರು ನಿರ್ಧಾರ ಮಾಡಬೇಕು? ಸೂಕ್ತ ಸಮಯವಲ್ಲ ಎನ್ನುವ ಹಾಗಿದ್ದರೆ, 1947ರಿಂದ ಇಲ್ಲಿಯವರೆಗೆ ಸೂಕ್ತವಾದ ಸಮಯವೇ ಬಂದಿಲ್ಲವೆ?
ಬ್ರಿಟಿಷರ ಕಾಲದಲ್ಲಿ ವೈಯಕ್ತಿಕ ಕಾನೂನುಗಳು:ಬ್ರಿಟಿಷರ ಕಾಲದಲ್ಲಿ ವೈಯಕ್ತಿಕ ಕಾನೂನುಗಳನ್ನು ರಚಿಸಲಾಯಿತು. ಅದರಲ್ಲೂ ಹಿಂದೂ ಮತ್ತು ಮುಸ್ಲಿಮರಿಗಾಗಿ ಈ ಕಾನೂನುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಸಮಾನ ನಾಗರಿಕ ಸಂಹಿತೆ ಪರವಾಗಿ ಕೂಗುಗಳು ಆವಾಗಲೂ ಇತ್ತು. ಆದರೆ, ಆಯಾ ಧಾರ್ಮಿಕ ಆಚರಣೆಗಳಿಂದ ಪ್ರೇರೇಪಿತರಾಗಿರುವ ಕಾನೂನು ಗಳನ್ನು ಬದಲಾಯಿಸುವ ದುಸ್ಸಾಹಸ ಬ್ರಿಟಿಷ್ ಆಡಳಿತ ಮಾಡಲಿಲ್ಲ.
ಮಹಿಳಾ ಹಕ್ಕುಗಳ ಪರಿಕಲ್ಪನೆಯೊಂದಿಗೆ ಸಮಾನತೆ ಮತ್ತು ಜಾತ್ಯತೀತ ತಳಹದಿಯ ಮೇಲೆ ಸಮಾನ ನಾಗರಿಕಸಂಹಿತೆ ತರಬೇಕೆಂಬ ಎಂಬ ಕೂಗು ಇತ್ತು. ಸ್ವಾತಂತ್ರ್ಯದ ಬಳಿಕ ಮಹಿಳಾ ಹಕ್ಕುಗಳನ್ನು ರಕ್ಷಣೆ ಮಾಡಲು ಕೆಲವುಕಾನೂನುಗಳನ್ನು ತರಲಾಯಿತು. ಅದರಲ್ಲೂ ಹಿಂದೂ ವಿಧವೆಯರ ರಕ್ಷಣೆ ಪ್ರಮುಖವಾಗಿತ್ತು.
ತಿರುವುಗಳನ್ನು ಬದಲಿಸಿದ ಕಾನೂನುಗಳು:ಈ ವಿಷಯಕ್ಕೆ ಸಂಬಂಽಸಿದಂತೆ ನೀವು ಚರ್ಚೆ ಮಾಡಿದರೆ ಕೆಲವು ಕಾನೂನು ಗಳು ಬಂದೇ ಬರುತ್ತವೆ. ಅದರಲ್ಲಿ ಮುಖ್ಯವಾಗಿ ತೀವ್ರವಾದ ವಿರೋಧದ ಮಧ್ಯವೂ 1955 ರಲ್ಲಿ ಹಿಂದೂ ಮ್ಯಾರೇಜ್ ಆಕ್ಟ್ ತೀವ್ರ ಚರ್ಚೆಗೆ ಕಾರಣವಾಗಿತ್ತು. ಬರೀ ಹಿಂದೂಗಳಿಗೆ ಮಾತ್ರ ಅನ್ವಯವಾಗುವ ಈ ಕಾನೂನು ಜನರಲ್ಲಿ ಭಿನ್ನಾಬಿಪ್ರಾಯಸೃಷ್ಟಿಸಿತ್ತು. ಈ ಕಾನೂನಿನ ಪ್ರಕಾರ ವಿಚ್ಛೇದನ ಮತ್ತು ಅಂತರ್‌ಜಾತಿ ವಿವಾಹಕ್ಕೆ ಮಾನ್ಯತೆ ನೀಡಲಾಯಿತು. ಜತೆಗೆಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಕಾನೂನಿನ ಪ್ರಕಾರ ತಪ್ಪು ಅಂತ ಹೇಳಲಾಯಿತು.
1956ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ, ಹಿಂದೂ ದತ್ತು ತೆಗೆದುಕೊಳ್ಳೋದು ಮತ್ತು ಪೋಷಣೆ ಕಾಯಿದೆ ತರಲಾಯ್ತು. ನಂತರ ಸಿಖ್ ಬೌದ್ಧ ಮತ್ತು ಜೈನ ಧರ್ಮಗಳಿಗೂ ಇದೇ ರೀತಿಯ ಕಾನೂನುಗಳನ್ನು ತರಲಾಯಿತು. ಆದರೆ, ಮುಸ್ಲಿಮರುಮಾತ್ರ 1937ರಿಂದ ಜಾರಿಯಾಗಿದ್ದ ಷರೀಯತ್ ಕಾನೂನನ್ನೇ ಅನ್ವಯಿಸುತ್ತಿದ್ದರು. ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜವಾಗಿದೆ. ಇದರಲ್ಲಿ 1872ರ ಕ್ರೈಸ್ತ ವಿವಾಹ ಕಾಯಿದೆ, 1936ರ ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯಿದೆ, ವಿಶೇಷ ವಿವಾಹ ಕಾಯಿದೆ, 1954 ಮತ್ತು ಇತ್ಯಾದಿ ಕಾಯಿದೆಗಳು ಇದಕ್ಕೆ ಸಂಬಂಧಪಟ್ಟಿವೆ.
ಆದರೆ 1985ರಲ್ಲಿ ಶಾ ಬಾನು ಕೇಸ್ ಇದರ ತಿರುವನ್ನೇ ಬದಲಾಯಿಸಿತು. ತಮ್ಮ ಪತಿಯ ವಿರುದ್ಧ ಹಾಕಿದ್ದ ಕೇಸ್ ವಿಚಾರ ವಾಗಿ ಶಾಬಾನು ಅವರಿಗೆ ಜೀವನ ಪರ್ಯಂತ ಜೀವನಾಂಶ ನೀಡಲು ಸೂಚಿಸಿತು. ಈ ವಿಷಯ ದೇಶದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅದಕ್ಕಗಿ 1986ರಲ್ಲಿ ರಾಜೀವ್ಗಾಂಧಿನೆತೃತ್ವದ ಸರಕಾರ   (  ) , 1986 ಜಾರಿ ಮಾಡಿತು. ಈ ಕಾಯಿದೆ ಸುಪ್ರೀಂ ಕೋರ್ಟ್ ಆದೇಶವನ್ನೇ ಬದಲಾಯಿಸಿ ಬಿಟ್ಟಿತು. ಯಾಕೆಂದರೆ ಇದರ ಪ್ರಕಾರ ವಿಚ್ಛೇದನ ನಂತರ 90 ದಿನ ಜೀವ ನಿರ್ವಹಣೆ ನೀಡಿದರೆ ಸಾಕು ಎಂದು ಇತ್ತು. ಇದರ ಜತೆಗೆ ಎಲ್ಲರಿಗೂ ಅನ್ವಯವಾಗುವಂತೆ ಸಿವಿಲ್ ಮ್ಯಾರೇಜ್ ಆಕ್ಟ್ ಜಾರಿಗೆ ಬಂತು.
ಇದರ ಪ್ರಕಾರ ಮುಸ್ಲಿಮರೂ ಕೂಡ ಕೋಟ್ ನಲ್ಲಿ ಮದುವೆಯಾಗಬಹುದು ಎಂದು ಹೇಳಲಾಯಿತು ಮತ್ತು ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಕಾನೂನು ಪ್ರಕಾರ ತಪ್ಪು ಎಂದು ಹೇಳಲಾಯಿತು. ಇನ್ನು ತ್ರಿವಳಿ ತಲಾಖ್ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಜಗತ್ತಿನ 22 ಮುಸ್ಲಿಂ ರಾಷ್ಟ್ರಗಳು ತ್ರಿವಳಿ ತಲಾಖ್ ನಿಷೇಧಿಸಿವೆ, ಕಟ್ಟರ್ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದಲ್ಲಿ 1955ರಲ್ಲೇ ಇದನ್ನುನಿಷೇಧಿಸಲು ಪ್ರಕ್ರಿಯೆ ಪ್ರಾರಂಭವಾಗಿತ್ತು. ಆದರೆ ಭಾರತದಲ್ಲಿ 2018ರ ವರೆಗೆ ತ್ರಿವಳಿ ತಲಾಖ್ ಜಾರಿಯಾಗಿರಲಿಲ್ಲ. ಆದರೆ ಚರ್ಚೆಯ ನಂತರ ತ್ರಿವಳಿ ತಲಾಖ್ 2018ರ ಸೆಪ್ಟೆಂಬರ್ 1 ರಂದು ಜಾರಿಗೆ ತರಲಾಯಿತು.
ವಿರೋಧ ಯಾಕೆ?
1840ರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಯಾಕೆ ಎಂಬ ಪ್ರಶ್ನೆಗೆ ಕೆಲವರ ಉತ್ತರ ಸಂವಿಧಾನದ 25ನೇವಿಧಿಯ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಾರೆ. ಆದರೆವಿಧಿ14ರ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನದ ಬಗ್ಗೆ ಯಾಕೆ ಮಾತನಾಡುವುದಿಲ್ಲ? ವಿಧಿ15ರ ಪ್ರಕಾರ ಜಾತಿ, ಲಿಂಗ, ಬಣ್ಣ, ಧರ್ಮಗಳಲ್ಲಿ ತಾರತಮ್ಯ ತೋರದೇ ಎಲ್ಲರನ್ನೂ ಸಮನಾಗಿ ನೋಡಬೇಕು ಎನ್ನುವ ಬಗ್ಗೆ ಯಾಕೆ ಯೋಚಿಸಲ್ಲ, ಪ್ರತಿಯೊಂದಕ್ಕೂ ವಿಧಿ25ರ ಬಗ್ಗೆ ಹೇಳುವವರಿಗೆ ವಿಧಿ25 (2) ರ ಜಾತ್ಯತೀತ ಮತ್ತು ಧಾರ್ಮಿಕ ವಿಚಾರಗಳಲ್ಲಿ ದ್ವಂದ್ವ ಬಂದರೆ ಜಾತ್ಯತೀತ ಮೇಲುಗೈಸಾಧಿಸುತ್ತದೆ ಎಂಬುವುದು ಮರೆತರೆ? ಕೆಲವು ಜನರಿಗೆ ಇದು ಧಾರ್ಮಿಕ ಸಂಸ್ಕೃತಿಗೆ ಧಕ್ಕೆ ತರುತ್ತದೆಯಂದು ಹುಚ್ಚುತನದ ಅಭಿಪ್ರಾಯವಿದೆ.
ಅದರಿಂದ ಹೊರಗೆ ಬಂದು ಮಹಿಳೆಯರ ರಕ್ಷಣೆ ದೆಸೆಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದು ಈಗ ಅನಿವಾರ್ಯ.