ವಿವಿಧತೆಯಲ್ಲಿ ಏಕತೆ ಮತ್ತು ಜ್ಞಾನ ವ್ಯಾಧಿಗಳ ಪ್ರಲಾಪ
ಅವಲೋಕನ
ವಿನಾಯಕ ಓಣಿವಿಘ್ನೇಶ್ವರ, ಶಿರಸಿ
ಬುದ್ಧಿಜೀವಿಗಳು ಎಂಬ ಸೋಗಿನಲ್ಲಿ ಹಿಂದೂ ಶ್ರದ್ಧೆ, ನಂಬಿಕೆಗಳ ಮೇಲೆ ದಾಳಿ ನಡೆಸುವುದು ಅವ್ಯಾಹತವಾಗಿ ಮುಂದುವರಿ ದಿದೆ. ಇದಕ್ಕೆ ಜಾತ್ಯತೀತವಾದಿ ಗಳೆಂಬ ಸೋಗಲಾಡಿಗಳ ಬೆಂಬಲ, ಕುಮ್ಮಕ್ಕು ಬೇರೆ. ಅನ್ಯ ಧರ್ಮೀಯರ, ಮತಾವ ಲಂಬಿಗಳ ಶ್ರದ್ಧೆ, ನಂಬಿಕೆಗಳ ಮೇಲೆ ದಾಳಿ ನಡೆಸಿದರೆ ಅಂಥವರ ಅಡ್ರೆಸ್ಸೂ ಪತ್ತೆಯಾಗದ ಸ್ಥಿತಿ ಈ ದೇಶದಲ್ಲಿ ನಿರ್ಮಾಣವಾಗಿದೆ. ಆದರೆ ಇಂದು ಹಿಂದೂಗಳು ಎಚ್ಚತ್ತಿದ್ದಾರೆ. ಇದೊಂದು ಆಶಾ ದಾಯಕ ಸಂಗತಿ.
ಸ್ವತಂತ್ರ ಭಾರತದ ಸಂವಿಧಾನದ ಉತ್ಕೃಷ್ಟ ಆಶಯಗಳಲ್ಲಿ ವಿವಿಧತೆಯಲ್ಲಿ ಏಕತೆ ಅನ್ನುವ ಅಂಶ ಕೂಡಾ ಒಂದು. ತಾಯಿ ಭಾರತಿಯ ಪಾದ ಸದೃಶ ವಾದ ಕನ್ಯಾಕುಮಾರಿಯಿಂದ, ಕಿರೀಟದ ತುತ್ತ ತುದಿ ಕಾಶ್ಮೀರದ ವರೆಗಿನ ಪ್ರತಿ ಭೂಭಾಗ ತನ್ನದೇ ಆದ ವಿಶಿಷ್ಟತೆಗಳನ್ನು ಹೊಂದಿದೆ. ನೂರಾರು ವೈವಿಧ್ಯಮಯ ಜಾತಿಗಳನ್ನು ಹೊಂದಿದ್ದರೂ, ಹಿಂದುತ್ವ ಅನ್ನುವ ಬದುಕಿನ ಶೈಲಿ ಅನ್ನುವ ಏಕತೆಯನ್ನು ಮೈಗೂಡಿಸಿಕೊಂಡು ಬಂದಿರುವುದು ನಮ್ಮ ಸಂಸ್ಕೃತಿಯ ಅಗ್ಗಳಿಕೆ.
ವಿವಿಧ ಜಾತಿಗಳು ತಮ್ಮದೇ ಆದ ವಿಶಿಷ್ಟ ಪರಂಪರೆಯನ್ನು , ಸಂಪ್ರದಾಯ ಗಳನ್ನು ಆಚರಿಸುತ್ತ ಬರುತ್ತಿದ್ದರೂ, ಎಲ್ಲದಕ್ಕೂ ಮೂಲ ತತ್ವ ಹಿಂದುತ್ವ ಅನ್ನುವುದನ್ನು ಮರೆಯದೇ ಬದುಕುತ್ತಿವೆ. ಹಿಂದುತ್ವದ ಮೂಲದ ಆಚರಣೆ ಗಳಲ್ಲಿ ಆಧ್ಯಾತ್ಮಕ್ಕೆ ಮಹತ್ವದ ಸ್ಥಾನ. ಅದರಲ್ಲೂ, ಪ್ರಕೃತಿಯ ಆರಾಧನೆಯಾವ ಜಾತಿಗಳ ಬೇಧ ಇಲ್ಲದೆ ನಡೆಯುವ ಸಾಮಾನ್ಯ ಚಿಂತನೆಗಳಲ್ಲಿ ಒಂದು. ಇದೇ ಕಾರಣ ಇರಬೇಕು, ವಿವಿಧ ಜಾತಿಗಳ ಸಂಪ್ರದಾಯಗಳಲ್ಲಿ ಬೇರೆ ಬೇರೆ ದೇವರು ಗಳು ವಿವಿಧ ರೂಪಗಳಲ್ಲಿ ಕಾಣ ಸಿಗುತ್ತವೆ.
ಭೂಮಿ, ಆಕಾಶ, ನೀರು, ಮರ ಗಿಡ ಕಲ್ಲು ಹೀಗೆ ಪ್ರಕೃತಿಯ ಪ್ರತಿ ಭಾಗವೂ ಎಲ್ಲ ಜಾತಿಯವರಿಗೆ ದೇವರೇ. ಅಂದರೆ, ಹಿಂದೂ ಅನ್ನುವ ಎಲ್ಲರಿಗೂ, ಎಲ್ಲವೂ ಪೂಜ್ಯವೇ, ದೇವರೇ ಆಗಿ ಕಂಡು ಬರುತ್ತವೆ. ಹಿಂದೂ ಜೀವನ ಶೈಲಿಯ ವಸುಧೈವ ಕುಟುಂಬಕಂ ಅನ್ನುವ ಸೂತ್ರ ಈ ದೇವರ ಆರಾಧನೆಯ ನಿಟ್ಟಿನಲ್ಲೂ ಕಂಡು ಬರುತ್ತದೆ. ಇಲ್ಲಿನ ಸಾವಿರಾರು ದೇವರುಗಳಿಗೆಅವರದ್ದೇ ಆದ ಶಕ್ತಿ ಇದೆ. ಪೂಜಾ ವಿಧಾನಗಳಿವೆ.
ದೇವರನ್ನು ಒಲಿಸಿಕೊಳ್ಳುವ ವಿಶಿಷ್ಟ ಆಚರಣೆಗಳಿವೆ. ಅಂದ ಮಾತ್ರಕ್ಕೆ ಒಂದು ರೀತಿಯ ಕ್ರಮ ಮಾತ್ರ ಹಿಂದೂ, ಮತ್ತೊಂದು ಹಿಂದೂ ಅಲ್ಲವೇ ಅಲ್ಲ ಅನ್ನುವ ಮೂರ್ಖ ವಿಚಾರವೊಂದಕ್ಕೆ ಚೇತನ ನೀಡಲು ಕೆಲವರು ತಮ್ಮನ್ನು ಅಹಿಂಸಾವಾದಿಗಳೆಂದು ಕರೆದುಕೊಳ್ಳುತ್ತ ಪ್ರಚಾರ ಗಿಟ್ಟಿಸಲೂ ಪ್ರಯತ್ನಿಸಿದ್ದು ಇತ್ತೀಚೆಗೆ ಕಂಡು ಬಂತು. ಸೂಕ್ಷ್ಮವಾಗಿ ಗಮನಿಸಿದಾಗ, ಹಿಂದೂ ಅನ್ನುವ ಮೂಲ ಸೆಲೆ ಹುಡುಗಿರುವುದೇ ಈ ವೈಶಿಷ್ಟ್ಯಗಳ ಬೇರಿನಲ್ಲಿ. ಒಂದು ವ್ಯಕ್ತಿ ಅಥವಾ ಶಕ್ತಿ ಒಂದು ಗುಂಪಿಗೆ ಪೂಜ್ಯ ಎಂದುಅನ್ನಿಸಿದರೆ, ಮತ್ತೊಂದು ಗುಂಪು ಅದರ ಅಪಮಾನ ಮಾಡುವುದಾಗಲೀ, ಹೀಗಳೆಯುವುದಾಗಲೀ ಮಾಡುವುದಿಲ್ಲ. ಅದಕ್ಕೆ ಕೊಡಬೇಕಾದ ಗೌರವವನ್ನು ಕೊಟ್ಟೇ ಕೊಡುತ್ತದೆ.
ದೈವ ಅನ್ನುವ ಭಾವ ಜಾತಿಗಳಿಗೆ ಸೀಮಿತ ಆಗಿಲ್ಲ. ಬದಲಿಗೆ ಸಮಾಜದ ಜಾತಿಗಳನ್ನು ಒಗ್ಗೂಡಿಸುವ ಬಂಧವನ್ನು ಗಟ್ಟಿಗೊ ಳಿಸುವ ಧನಾತ್ಮಕ ಸಂಗಾತಿಯಾಗಿರುವುದು ನಮ್ಮ ಧರ್ಮದ ವಿಶೇಷತೆ. ಉದಾಹರಣೆಗೆ, ಪ್ರಪಂಚದ ಎಲ್ಲ ಭಾಗಗಳಲ್ಲಿ ಆಚರಿಸುವ ದೀಪಾವಳಿ ಹಬ್ಬ. ಒಂದೊಂದು ಕಡೆಗಳಲ್ಲಿ ಒಂದೊಂದು ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಬಹುತೇಕ ಕಡೆಗಳಲ್ಲಿ ದೀಪದ ಹಬ್ಬ ಆದರೆ, ಮತ್ತೊಂದಿಷ್ಟು ಭಾಗಗಳಲ್ಲಿ ಲಕ್ಷ್ಮಿ ಪೂಜೆಗೆ ಮಹತ್ವ.
ಕರ್ನಾಟಕದ ಮಲೆನಾಡಿನ ಭಾಗಗಳಲ್ಲಿ ದೀಪಾವಳಿಯಲ್ಲಿ ಗೋ ಪೂಜೆಗೆ ಮಹತ್ವದ ಸ್ಥಾನ, ಇದರ ಜೊತೆಗೆ ಮಹಾವಿಷ್ಣು ವಾಮನ ಅವತಾರದಲ್ಲಿ ಕೊಟ್ಟ ವರದ ಪ್ರಕಾರ ವರ್ಷಕ್ಕೆ ಮೂರು ದಿನ ಪೂಜೆ ಸ್ವೀಕರಿಸಲು ಬರುವ ಬಲಿ ಚಕ್ರವರ್ತಿ.ಇವುಗಳೆಲ್ಲದರ ಜೊತೆಗೆ ಪ್ರಕೃತಿಯ ದೈವಗಳಾದ, ಭೂತ, ಹುಲಿರಾಯ, ಚೌಡಿ, ಬೀರ ಮುಂತಾದ ಅನೇಕ ದೇವತೆಗಳಆರಾಧನೆ ಕೂಡಾ ದೀಪಾವಳಿಯಲ್ಲಿ ಸಾಮಾನ್ಯ. ಅಂದರೆ ಹಬ್ಬ ಒಂದೇ ಆದರೂ, ಅದನ್ನು ಆಚರಿಸುವ ಕ್ರಮ ಬೇರೆ ಬೇರೆ ಆಗಿರುವುದರಿಂದ, ಅವರೆಲ್ಲ ಬೇರೆ ಬೇರೆ ಧರ್ಮದ ಜನ ಅನ್ನಲು ಆಗುವುದಿಲ್ಲ ಅಲ್ಲವೇ.
ವಿವಿಧ ಸಂಪ್ರದಾಯಗಳೇ ಇದ್ದರೂ, ಹಿಂದೂ ಏಕತೆಯ ಹಬ್ಬ ದೀಪಾವಳಿ. ಅವರವರ ಸಂಪ್ರದಾಯದಂತೆ ಅವರ ಇಷ್ಟದದೈವವನ್ನು ಆರಾಽಸುವ ಸ್ವಾತಂತ್ರ್ಯ ಹಿಂದೂ ಧರ್ಮಕ್ಕಲ್ಲದೆ ಬೇರೆ ಯಾವ ಧರ್ಮಕ್ಕಿದೆ? ಹೀಗಿರುವ ಹಿಂದೂ ಧರ್ಮಕೆಲವರಿಗೆ ಅದ್ಯಾವ ಕೋನದಲ್ಲಿ ಅಸಹಿಷ್ಣು ಅನ್ನಿಸಿಕೊಳ್ಳುತ್ತದೆಯೋ ಅರ್ಥ ಆಗುವುದಿಲ್ಲ. ಕಂಡಲ್ಲಿ ವಿವಾದ ಹುಟ್ಟು ಹಾಕಿ ಹಿಂದೂಗಳಲ್ಲಿ ಬೇಧ ಸೃಷ್ಟಿಸುವ ಕೆಲಸಕ್ಕೆ ಇತ್ತೀಚೆಗೆ ಕೆಲವರು ಕೈ ಹಾಕಿರುವುದು ಕಂಡು ಬರುತ್ತಿದೆ. ಪ್ರಸಿದ್ಧ ಸಿನಿಮಾ ಬಗ್ಗೆ ವಿಮರ್ಶೆ ಮಾಡುತ್ತಾ, ಅಲ್ಲೂ ಹಿಂದೂಗಳ ನಡುವಿನ ಜಾತಿಗಳ ಮಧ್ಯೆ ಕಂದಕ ತೊಡುವ ವ್ಯವಸ್ಥಿತ ಪ್ರಯತ್ನಗಳನ್ನುನಡೆಸಲಾಗುತ್ತಿದೆ.
ಹಿಂದೂಗಳ ಮಧ್ಯೆಯೇ ದೇವತೆಗಳನ್ನು ವರ್ಣಾಧಾರಿತವಾಗಿ ವಿಂಗಡಿಸಿ ಜಾತಿಗಳ ಮಧ್ಯೆ ದ್ವೇಷವನ್ನು ಹುಟ್ಟು ಹಾಕುವ ಪ್ರಯತ್ನ ಸಾಗುತ್ತಿದೆ. ಈ ದೇವರನ್ನು ಆರಾಧಿಸಿದರೆ ಆತ ಹಿಂದೂ ಅಲ್ಲ. ಹಿಂದೂಗಳ ಒಂದು ಪಂಗಡ ಮತ್ತೊಂದು ಪಂಗಡವನ್ನು ತುಳಿಯುತ್ತದೆ ಮುಂತಾದ ಅನವಶ್ಯಕ ಗೊಂದಲಗಳನ್ನು ಸೃಷ್ಟಿ ಮಾಡಿ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಕುಕೃತ್ಯ ಇದು. ಈ ಪ್ರಯತ್ನದ ಮೂಲಕ ವಿವಿಧತೆಯಲ್ಲಿ ಏಕತೆ ಅನ್ನುವ ಸಂವಿಧಾನದ ಆಶಯಕ್ಕೆ ಗೌರವ ಕೊಡದ ಕೆಲಸಗಳು ಶುರುವಾಗಿವೆ.
ಇಂದಿನ ಹಿಂದೂ ಹಿಂದಿಗಿಂತ ಜಾಗೃತ. ಅಂತ ಹೇಳಿಕೆಗಳನ್ನು ನಂಬಿಕೊಂಡು ತನ್ನ ಒಗ್ಗಟ್ಟಿಗೆ ಭಂಗ ತಂದುಕೊಳ್ಳುವ ಹತಾಶೆಯ ಪರಿಸ್ಥಿತಿ ಈಗ ಇಲ್ಲ. ನಿಜವಾದ ಹಿಂದೂ ಎಂದಿಗೂ ಜಾತಿಯನ್ನು ನೋಡಲಾರ. ಹಿಂದೂ ಸಂಪ್ರದಾಯದ ಯಾವ ದೇವರೂ ಜಾತಿಗೆ ಸೀಮಿತವಾಗಿಲ್ಲ. ದೇವರೆನ್ನುವ ಎಲ್ಲ ಶಕ್ತಿಗಳಿಗೂ ಹಿಂದೂ ಮಣಿಯುತ್ತಾನೆ. ಗೌರವಿಸುತ್ತಾನೆ. ಆ ಮೂಲಕಸಂವಿಧಾನದ ಆಶಯಕ್ಕೆ ಬದ್ಧನಾಗಿಯೇ ಇದ್ದಾನೆ. ಮುಂದೆಯೂ ಇರುತ್ತಾನೆ.
ಅನವಶ್ಯಕ ಗೊಂದಲ ಸೃಷ್ಟಿಸುವ ವೈಯಕ್ತಿಕ ಪ್ರತಿಷ್ಠೆಯ ತೆವಲಿನ ಹೇಳಿಕೆಗಳಿಗೆ ಎಂದಿಗೂ ಬೆಲೆ ಬರುವುದಿಲ್ಲ. ಬದಲಿಗೆ ಅಂಥ ಹೇಳಿಕೆಗಳು ಹಿಂದೂ ಸಮಾಜದಲ್ಲಿ ಮತ್ತೊಂದಿಷ್ಟು ಜಾಗೃತಿಗೆ ಕಾರಣ ಆಗುತ್ತದೆ. ಅದು ಹಿಂದೂ ಧರ್ಮದ ತಾಕತ್ತುಎನ್ನಲಡ್ಡಿಯಿಲ್ಲ.