ಭವಿಷ್ಯದ ಉದ್ಯೋಗಿಗಳಿಗೆ ತಕ್ಕಂತೆ ಉದ್ಯಮಗಳು ಬದಲಾಗಬೇಕಿದೆ
ಮಾನದ ಸಂಪನ್ಮೂಲ
ಯಶಸ್ವಿನಿ ರಾಮಸ್ವಾಮಿ,
ವಾಣಿಜ್ಯೋದ್ಯಮಿ ಸಿಇಒ,
ಗ್ರೇಟ್ ಪ್ಲೇಸ್ ಟೂ ವರ್ಕ್ ಇನ್‌ಸ್ಟಿಟ್ಯೂಟ್‌
  (1997 ಮತ್ತು 2012ರ ನಡುವೆ ಜನಿಸಿದವರು) ಕಾರ್ಯಪಡೆಗೆ ಸಂಬಂಽಸಿ ಮತ್ತು ವಿವಿಧ ಉದ್ಯಮಗಳೊಂದಿಗೆ ಅವರ ಪ್ರಾತಿನಿಧ್ಯವು ಬೆಳೆಯುತ್ತಿರುವುದರಿಂದ ಈ ಸಹಸ್ರಮಾನದ ಉದ್ಯೋಗಿಗಳನ್ನು ತಡೆರಹಿತವಾಗಿ ಬಳಸಿಕೊಳ್ಳಲುಉದ್ಯಮಪತಿಗಳು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಈಗ ನಾವು ಮುಂದಿನ ಪೀಳಿಗೆಯತ್ತ ಗಮನಹರಿಸ ಬೇಕಾಗಿದೆ.
ಅದೇ- ಜೆನ್ ಆಲಾ ( ) ಪೀಳಿಗೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಅತ್ಯಂತ ವೈವಿಧ್ಯಮಯ ಮತ್ತು ಆಸಕ್ತಿ ದಾಯಕ ಮಾನವ ಸಂಪ ನ್ಮೂಲವಿದು. ಅವರೇ ನಮ್ಮ ಉದ್ಯೋಗ ಕ್ಷೇತ್ರದ ಭವಿಷ್ಯ ವಾಗಿದ್ದಾರೆ. ಹೊಸ ಪೀಳಿಗೆಯ ನಿರೀಕ್ಷೆ ಗಳು ಮತ್ತು ಆವಶ್ಯಕತೆಗಳನ್ನು ಪೂರೈಸಲು ಅಗತ್ಯವಿರುವ ರೂಪುರೇಷೆಗಳನ್ನು ಉದ್ಯಮಗಳು ಇನ್ನೂ ಶೋಧಿಸು ತ್ತಿರುವುದರಿಂದ ಜೆನ್ ಆಲಾ ಕುರಿತು ನಾವೀಗ ಗಮನ ಹರಿಸುತ್ತಿದ್ದೇವೆ. ಆದರೆ ಕ್ರಮಿಸಬೇಕಾದ ದಾರಿ ದೀರ್ಘವಾಗಿದೆ.
ಜೆನ್ ಆಲಾದ ಅತ್ಯಂತ ಹಿರಿಯ ಸದಸ್ಯರಿಗೆ ಈಗ 12 ವರ್ಷ. ಈ ಹಿಂದೆ ಅಸಾಧ್ಯವೆಂದು ಭಾವಿಸಿದುದನ್ನು ಸಾಧಿಸಲು, ಗಾಢವಾಗಿ ಕೆಲಸದ ಭವಿಷ್ಯವನ್ನು ರೂಪಿಸಲು ಸಿದ್ಧರಾಗಿದ್ದಾರೆ. ಇದು 21ನೇ ಶತಮಾನದಲ್ಲೇ ಜನ್ಮತಳೆದ ಮೊದಲ ಪೀಳಿಗೆಯಾಗಿರುವುದರಿಂದ, ಇವರು ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರವಾಗಿರುವ ಆಲಾದ ಖ್ಯಾತಿಗೆ ತಕ್ಕಂತೆ ಬದುಕುವ ಸಾಮರ್ಥ್ಯವನ್ನು ಹೊಂದಿದೆ ಎನ್ನಬಹುದು.
ಅಲ್ಲದೆ, ಅವರ ನಡವಳಿಕೆ, ಆದ್ಯತೆಗಳು ಮತ್ತು ವಿವಿಧ ವ್ಯಾಪಾರ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲಿನದೃಷ್ಟಿಕೋನಗಳು ಅವರನ್ನು ವಿಶಿಷ್ಟವಾಗಿ ಗುರುತಿಸುವಂತೆ ಮಾಡುತ್ತವೆ. ಆದ್ದರಿಂದ, ಉದ್ಯಮದ ಒಂದು ಭಾಗವಾಗಿ, ನಾವು ಇಂದು ಬಿತ್ತುವ ಬೀಜಗಳ ಫಲವನ್ನು ಪ್ರವರ್ಧಮಾನಕ್ಕೆ ತರಲು ಮತ್ತು ಭವಿಷ್ಯಕ್ಕೆ ಕೊಯ್ಲು ಮಾಡಲು ಅನುಕೂಲಕರ ಪರಿಸ್ಥಿತಿಗಳನ್ನು ಜೆನ್ ಆಲಾ ಪೀಳಿಗೆಗಾಗಿ ನಾವು ಸೃಷ್ಟಿಸಬೇಕು. ನಾಳೆಗಾಗಿ ಸಿದ್ಧತೆ ಇಲ್ಲದಿದ್ದರೆ ಅದರ ಪರಿಣಾಮವನ್ನುಊಹಿಸಲಾಗದು.
  ಸೃಷ್ಟಿಸಿದ ಒಂದು ವಿಭಿನ್ನ ಪೀಳಿಗೆ
  ಅನ್ನು ’ಡಿಜಿಟಲ್ ನೇಟಿವ್ಸ್’ ಎಂಬ ಜನಪ್ರಿಯ ಹೆಸರಿನಿಂದ ಕರೆಯಲಾ ಗುತ್ತದೆ. ಅಮೆರಿಕದ ಲೇಖಕ, ವಾಗ್ಮಿ ಮಾರ್ಕ್ ಪ್ರೆನ್ಸ್ಕಿ ಈ ಪದವನ್ನು ಮೊದಲು ಬಳಸಿದರು. ಇದರ ಅರ್ಥ, ಕಂಪ್ಯೂಟರ್ ಜೊತೆಗೆ ಬೆಳೆದವರು ಎಂದು. ಸಾಮಾಜಿಕ ಮಾಧ್ಯಮವು ಅವರ ಜೀವನದ ಪ್ರಮುಖ ಮತ್ತು ಅವಿಭಾಜ್ಯ ಅಂಗ. ಮತ್ತೊಂದೆಡೆ, ಕೃತಕ ಬುದ್ಧಿಮತ್ತೆ (ಎಐ), ವರ್ಧಿತ ರಿಯಾಲಿಟಿ (ವಿ.ಆರ್), ಯಂತ್ರ ಕಲಿಕೆ (ಎಂಎಲ್), ಬಿಗ್ ಡೇಟಾ, ಡೀಪ್‌ಟೆಕ್- ಇವುಗಳ ಮುಂದುವರಿದ ಜಗತ್ತಿನೊಂದಿಗೆ ಜೆನ್ ಆಲಾ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದೆ.
ಅದಕ್ಕಿಂತ ಹೆಚ್ಚಾಗಿ ಈ ಪೀಳಿಗೆಯು ಥಿಯರಿ ಕಲಿಕೆಯನ್ನು ಮೀರಿ ಜೀವನಕ್ಕೆ ಅಗತ್ಯವಿರುವ ಪ್ರಾಯೋಗಿಕ ಜ್ಞಾನವನ್ನುಹೆಚ್ಚಾಗಿ ಬಯಸುತ್ತದೆ. ಆದ್ದರಿಂದ, ೨೧ನೇ ಶತಮಾನದ ಅಗತ್ಯಗಳಿಗೆ ಅನುಸಾರವಾಗಿ ಸಾಧ್ಯವಾದಷ್ಟು ಅನನ್ಯಕೌಶಲಗಳನ್ನು ಪಡೆಯಲು ಅವರು ತಮ್ಮ ಶಾಲಾ ಶಿಕ್ಷಣದ ಆರಂಭಿಕ ಹಂತದಲ್ಲಿ ಕೋಡಿಂಗ್‌ನಂತಹ ಕೋರ್ಸ್‌ಗಳಿಗೆಬೇಡಿಕೆಯಿರಿಸಿ ಆಯ್ಕೆ ಮಾಡಿಕೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಎಛ್ಞಿ ಘ ನ ಜಗತ್ತು ಈ ಆಧುನಿಕ ತಂತ್ರಜ್ಞಾನಗಳನ್ನೇ ಆಶ್ರಯಿಸಿದೆ. ಹಾಗಾದರೆ, ಜೆನ್ ಆಲಾಗೂ ಇದಕ್ಕೂ ಇರುವ ವ್ಯತ್ಯಾಸವೇನು? ಇದಕ್ಕೆ ಉತ್ತರವೆಂದರೆ, ಕರೊನಾ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ತಂತ್ರಜ್ಞಾನಗಳು ಆಮೇಲೆ ಸಾಕಷ್ಟು ವಿಕಸನಗೊಂಡಿದ್ದರೂ, ವಿಶೇಷವಾಗಿ ಎಆರ್‌ನ ಕ್ಷೇತ್ರಗಳಲ್ಲಿ ಅವು ಇನ್ನೂ ಆರಂಭಿಕ ಹಂತದಲ್ಲಿವೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿ ನಡೆಯುವ ವ್ಯವಹಾರಗಳು ತುಲನಾತ್ಮಕವಾಗಿ ಈ ತಂತ್ರಜ್ಞಾನಗಳನ್ನು ಕಲಿಯುವ, ಅದಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿವೆ.
ಮಿಲೇನಿಯಲ್‌ಗಳು ಮತ್ತು ಎಛ್ಞಿ ಘಗಳಿಗೆ ಹೋಲಿಸಿದರೆ ಜೆನ್ ಆಲಾ ಪರಿಣಾಮಕಾರಿಯಾಗಿ ತನ್ನನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಮತ್ತು ಗರಿಷ್ಠ ಲಾಭವನ್ನು ಪಡೆಯಲು ಈ ಅವಕಾಶವೇ ಕಾರಣವಾಗಿದೆ. ಪ್ರಸ್ತುತ ಸನ್ನಿವೇಶವನ್ನು ನೋಡಿದರೆ, ಜೆನ್ ಆಲಾಗಳು ಕಾರ್ಯಪಡೆಯನ್ನು ಬದಲಿಸುತ್ತಾರೆ, ಇಂದಿನ ವ್ಯವಹಾರ ವಿಧಾನಗಳನ್ನು ಹೊಸ ಕಲ್ಪನೆ ಯೊಂದಿಗೆ ಪುನರ್ನಿರ್ಮಿಸುತ್ತಾರೆ.
ಇದು ಖಂಡಿತವಾಗಿಯೂ ‘ಚಲ್ತಾ ಹೈ’ ಮನೋಭಾವದ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಗ್ರಾಹಕರಿಗೆ ಹೊಸ ಮತ್ತು ತಾಜಾ ದೃಷ್ಟಿಕೋನವನ್ನು ನೀಡಬಹುದು. ಬಿಸಿನೆಸ್‌ಗಳ ಮೇಲೆ ಪರಿಣಾಮವೇನು? ಕೆಲವೇ ವರ್ಷಗಳಲ್ಲಿ, ಜೆನ್ ಆಲಾಗಳು ಕಾನೂನುಬದ್ಧ ಕೆಲಸದ ವಯಸ್ಸನ್ನು ತಲುಪುತ್ತಾರೆ. ಪ್ರಮುಖವಾಗಿ, ಕೆಲವರು ಅಗಲೇ ಕಾರ್ಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ.
ಉದಾಹರಣೆಗೆ, ರಿಯಾನ್ಸ್ ವರ್ಲ್ಡ್‌ನ ಕಿರಿಯ ಯೂಟ್ಯೂಬರ್, ರಿಯಾನ್ ಕಾಜಿ (೧೦), ಇಂದು ಸುಮಾರು ೩೧.೬ ದಶಲಕ್ಷ ಚಂದಾದಾರರನ್ನು ಹೊಂದಿದ್ದಾನೆ. ರಿಯಾನ್ ನಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಾಬಲ್ಯ ಹೊಂದಿರುವ ಲಕ್ಷಾಂತರ ಯುವ ಪ್ರಭಾವಿಗಳು ಇದ್ದಾರೆ. ಅವರ ಪ್ರಪಂಚ ಡಿಜಿಟಲ್ ಪರದೆಯನ್ನು ಅವಲಂಬಿಸಿದೆ ಎಂದು ಹೇಳಬಹುದು.ಸಾಂಕ್ರಾಮಿಕ ರೋಗದ ಕತ್ತಲಲ್ಲೂ ಬೆಳ್ಳಿ ರೇಖೆಯಂತೆ, ಜೆನ್ ಆಲಾ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು, ಇತರ ಜನರು/ ಸಂಬಂಧಿ/ ಮಿತ್ರರೊಂದಿಗೆ ವೀಡಿಯೊ ಕರೆಗಳ ಮೂಲಕ ತೊಡಗಿಸಿಕೊಳ್ಳಲು, ಆನ್‌ಲೈನ್‌ನಲ್ಲಿ ಆಟವಾಡಲು ಹೆಚ್ಚು ಒಗ್ಗಿಕೊಂಡಿದ್ದಾರೆ.
ಮುಂಬರುವ ವರ್ಷಗಳಲ್ಲಿ, ಕೈಗಾರಿಕೆಗಳಿಂದ ರಿಮೋಟ್ ಉದ್ಯೋಗಾವಕಾಶಗಳಿಗಾಗಿ ವ್ಯಾಪಕ ಬೇಡಿಕೆ ಬರಬಹುದು. ಅದನ್ನು ಪೂರೈಸಬಲ್ಲವರು ಜೆನ್ ಆಲಾ ಪೀಳಿಗೆಯವರು. ಏಕೆಂದರೆ, ಪ್ರಪಂಚವೇ ಅವರ ಬೆರಳ ತುದಿಯಲ್ಲಿರಲಿದೆ, ಉದ್ಯೋಗ-ಜೀವನದ ಸಮತೋಲನವನ್ನು ಹೊಂದಲು ಅವರಿಗೆ ಅನುವು ಮಾಡಿಕೊಡು ತ್ತದೆ. ಇದರ ಜೊತೆಗೆ, ಅವರು ತಮ್ಮ ಜನಾಂಗ, ಬಣ್ಣ, ರಾಷ್ಟ್ರೀಯ ಮೂಲ, ಲಿಂಗ, ಧರ್ಮ, ವಯಸ್ಸು, ಅಂಗವೈಕಲ್ಯ, ಗರ್ಭಧಾರಣೆ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ಲೈಂಗಿಕ ದೃಷ್ಟಿಕೋನ, ಪೂರ್ವಭಾವಿ ಆನುವಂಶಿಕ ಗುಣಲಕ್ಷಣಗಳು, ವೈವಾಹಿಕ ಸ್ಥಿತಿ ಮುಂತಾದವು ಗಳನ್ನು ಲೆಕ್ಕಿಸದೆಯೇ ತಮ್ಮ ಪ್ರತಿಭೆಗಳನ್ನು ಬೆಳಗಿಸುವ ಮತ್ತು ಸಮಾನ ಉದ್ಯೋಗ ಅವಕಾಶವನ್ನು (ಇಇಒ) ನೀಡುವ ಸಂಸ್ಥೆಗಳನ್ನು ಹುಡುಕಬಹುದು.
ಉದ್ಯಮಗಳು ಏನು ಮಾಡಬಹುದು?
ಇದಕ್ಕೆ ಮೊದಲ ಮತ್ತು ಪ್ರಧಾನವಾದ ಉತ್ತರವೆಂದರೆ, ತಂತ್ರಜ್ಞಾನವನ್ನು ಒಳಗೊಳ್ಳುವ ಮನಃಸ್ಥಿತಿಯನ್ನು ಅಭಿವೃದ್ಧಿ ಪಡಿಸುವುದು. ನಿಸ್ಸಂದೇಹವಾಗಿ, ತ್ವರಿತ ಸಾಂಸ್ಕೃತಿಕ ಬದಲಾವಣೆಗೆ ಹೊಂದಿಕೊಳ್ಳಲು ಆಧುನಿಕ ಪರಿಹಾರಗಳು ಉದ್ಯಮಗಳಿಗೆ ಅವಕಾಶ ಮಾಡಿಕೊಡುತ್ತವೆ. ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಅತ್ಯಾಧುನಿಕ ಕಂಪ್ಯೂಟರ್‌ ಗಳಂತಹ ಗ್ಯಾಜೆಟ್‌ಗಳು ಇನ್ನು ಮುಂದೆ ಜೆನ್ ಆಲಾದ ಗಮನವನ್ನು ಸೆಳೆಯಲು ಸಾಧ್ಯವಾಗದು. ಏಕೆಂದರೆ, ಪ್ರಾಥಮಿಕ ಅಂಶಗಳಾಗಿ ಅವುಗಳನ್ನು ಅವರು ಪರಿಗಣಿಸುತ್ತಾರೆ.
ಮುಂಬರುವ ವರ್ಷಗಳಲ್ಲಿ, ಉನ್ನತ ಉದ್ಯೋಗದಾತರು ತಮ್ಮ ಕಾರ್ಯಾಚರಣೆಗಳು ಮತ್ತು ಪ್ರಕ್ರಿಯೆಗಳಲ್ಲಿ ವಿಆರ್(ವರ್ಚುವಲ್ ರಿಯಾಲಿಟಿ) ಅನ್ನು ಸರಾಗವಾಗಿ ಮತ್ತು ದಕ್ಷತೆಯಿಂದ ಅಳವಡಿಸಿಕೊಳ್ಳಲಿದ್ದಾರೆ. ಬದಲಾವಣೆಗೆ ಒಗ್ಗದೆ ಪುರಾತನ ವ್ಯವಸ್ಥೆಗಳಲ್ಲೇ ಕೆಲಸ ಮಾಡುವ ಸಂಸ್ಥೆಗಳಿಗೆ ದುಡಿಯಲು ಜೆನ್ ಆಲಾಗಳು ಸಿದ್ಧರಿರುವುದಿಲ್ಲ.
ಬದಲಾಗಿ, ಎಐ ಮತ್ತು ಎಂಎಲ್ ಚಾಲಿತ ಪ್ರಕ್ರಿಯೆಗಳಿಂದ ಪ್ರಾಪಂಚಿಕ ಕಾರ್ಯಗಳನ್ನು ನಿರ್ವಹಿಸುವುದನ್ನು ಅವರು ನಿರೀಕ್ಷಿಸುತ್ತಾರೆ. ಇದಲ್ಲದೆ, ಅವರೆಲ್ಲರಿಗೂ ಆಪ್ತ ಸಹಾಯಕರ ಅಗತ್ಯವಿರುತ್ತದೆ. ಇದು ಅತ್ಯಂತ ಆಸಕ್ತಿದಾಯಕವಿದ್ಯಮಾನ. ಈಗಾಗಲೇ ಅಲೆಕ್ಸಾ, ಕೊರ್ಟೊನಾ ಮತ್ತು ಸಿರಿಯಂತಹ ಅಸಿಸ್ಟೆನ್ಸ್‌ಗಳನ್ನು ಅವರು ಬಳಸಿಕೊಂಡಿದ್ದಾರೆ, ಹಾಗಾಗಿ ಇದಕ್ಕೆ ಹಿನ್ನಡೆಯಾದೀತು ಎನ್ನುವ ವಿಚಾರದಲ್ಲಿ ನನಗೆ ಅನುಮಾನವಿದೆ.
ಬದಲಾವಣೆಯನ್ನು ಅಪ್ಪಿಕೊಳ್ಳಿ!ಬದಲಾವಣೆಯೊಂದೇ ಶಾಶ್ವತ, ಬೇರೇನೂ ಅಲ್ಲ ಎಂದು ನಮಗೆ ತಿಳಿದಿದೆ. ಉದ್ಯಮದ ನಾಯಕರಾಗಿ ನೀವು ಇಂದು ವಿಷಯಗಳನ್ನು ನೋಡುವ ರೀತಿಯನ್ನು ಪೂರ್ವಗ್ರಹಗಳು ಮತ್ತು ಸ್ಥಿರ ಕಲ್ಪನೆಗಳನ್ನು ಮೀರಿ ಬದಲಾವಣೆಯನ್ನು ಒಪ್ಪಿಕೊಂಡಿರಾದರೆ ನೀವು ನೋಡುವ ವಿಷಯಗಳು ಬದಲಾಗುತ್ತವೆ. ಜೆನ್ ಆಲಾ ಅಪೇಕ್ಷಿಸುವ ಭವಿಷ್ಯವನ್ನು ರಚಿಸಲು ನಮ್ಮ ಭೂತಕಾಲವು ಸ್ವಲ್ಪ ಸಹಾಯ ಮಾಡುತ್ತದೆ.
ಉದ್ಯೋಗದಾತರು ಯಶಸ್ವಿಯಾಗಲು ಮತ್ತು ಭವಿಷ್ಯದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವುದಕ್ಕಾಗಿ ತಮ್ಮ ವ್ಯವಹಾರದ ಮೇಲೆ ಸುಸ್ಥಿರ ಪರಿಣಾಮವನ್ನು ಸೃಷ್ಟಿಸಲು ಬಯಸಿದರೆ, ಅವರು ಹೊಸ ಪೀಳಿಗೆಯ ಆಶೋತ್ತರಗಳನ್ನು ಪರಿಗಣಿಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈಗಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ವೇಗವಾಗಿ ಬದಲಾಗುತ್ತಿರುವತಂತ್ರಜ್ಞಾನಗಳಿಗೆ ಜೆನ್ ಆಲಾಗಳು ತೆರೆದುಕೊಂಡಿದ್ದಾರೆ.
ನಿಶ್ಚಲವಾಗಿರುವ ಮಾದರಿಗಳು ಅಥವಾ ಕಾರ್ಯವಿಧಾನದಲ್ಲಿ ಕೆಲಸ ಮಾಡಲು ಕೇಳಿದರೆ ಅವರು ನಿರಾಶರಾಗುತ್ತಾರೆ. ಅಲ್ಲದೆ, ಜೆನ್ ಆಲಾಗಳು ತಮ್ಮ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಮ್ಮ ಪೂರ್ವಜರಿಗಿಂತ ಹೆಚ್ಚು ಬಹಿರಂಗವಾಗಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಏಕೆಂದರೆ ಅವರು ಹೆಚ್ಚು ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಲಸ ಮಾಡುತ್ತಾರೆ, ಅಲ್ಲಿ ಕೆಲಸದ ಒತ್ತಡವು ಸಾಮಾನ್ಯವಾಗಿರುತ್ತದೆ ಮತ್ತು ಅವರ ಸ್ಪರ್ಧೆ ಜಾಗತಿಕ ಮಟ್ಟದಲ್ಲಿರುತ್ತದೆ.
ಇದಕ್ಕೆ ಹಲವು ಆಯಾಮಗಳನ್ನು ಹೊಂದಿದ, ಸಮಾನತೆಯ ವ್ಯವಸ್ಥೆಯಲ್ಲಿ ಎಲ್ಲ ಉದ್ಯೋಗಿಗಳನ್ನೂ ಒಳಗೊಳ್ಳುವಪರಿಹಾರಗಳು ಅಗತ್ಯವಿದೆ. ವೈಯಕ್ತೀಕರಿಸಿದ ಉನ್ನತ ಮಟ್ಟದ ಗ್ರಾಹಕೀಕರಣದ ಜೊತೆಗೆ ವ್ಯವಹಾರ ನಡೆಸುವುದು ಅಗತ್ಯವಾಗುತ್ತದೆ. ಹೇಳುವುದು ಸುಲಭ, ಮಾಡುವುದು ಕಷ್ಟ ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ನಾವು ಈ ಬಗ್ಗೆಮಾತನಾಡಬೇಕು ಮತ್ತು ಅನಿವಾರ್ಯವಾದ ವಿಷಯಗಳಿಗೆ ನಮ್ಮನ್ನು ಒಗ್ಗಿಸಿಕೊಳ್ಳಬೇಕು.