ಆಟೋ ಕುಲುಕಾಟಕ್ಕೆ ಸ್ಫೋಟಿಸದೆ ಕೇವಲ ಸಿಡಿದ ಕುಕ್ಕರ್‌ !
ಜಿತೇಂದ್ರ ಕುಂದೇಶ್ವರ
ರಸ್ತೆ ಉಬ್ಬು ತಗ್ಗುಗಳಿಂದ ಕೂಡಿದ್ದು, ಒಂದೆರಡು ಕಡೆ ಸಣ್ಣ ಹೊಂಡಗಳಿಗೆ ಬಿದ್ದಿದೆ. ಇದರಿಂದಾಗಿ ಕುಕ್ಕರ್ ಒಳಗೆ ಸ್ಪೋಟಕದ ಮೇಲೆ- ಕೆಳಗೆ ಅಳವಡಿಸಿದ ರಬ್ಬರ್ ಜಾರಿದೆ, ದೊಡ್ಡ ಟ್ಯಾಂಕರ್ ಕೂಡಾ ರಸ್ತೆಯಲ್ಲಿ ಬರುತ್ತಿದ್ದ ಕಾರಣಕ್ಕೆ ಬ್ರೇಕ್ ಹೊಡೆದಿರ ಬೇಕು ಅಷ್ಟರಲ್ಲಿ ಸ್ಫೋಟಿಸಿದೆ. ಒಂದು ವೇಳೆ ಟೈಮರ್ ಪ್ರಕಾರ ಡಿಟೋನೇಟರ್ ಮೂಲಕವೇ ಸ್ಪೋಟವಾಗಿದ್ದರೆ ಪರಿಸ್ಥಿತಿ ಭೀಕರವಾಗಿರುತ್ತಿತ್ತು !
ಒಂದು ವೇಳೆ ನಡೆದೇ ಬರುತ್ತಿದ್ದರೆ ಕುಕ್ಕರ್ ಬಾಂಬ್ ಭೀಕರವಾಗಿ ಸ್ಪೋಟಿಸಿ ಅಪಾರ ಸಾವು ನೋವು ಸಂಭವಿಸಿ ದೇಶವನ್ನೇ ನಡುಗಿಸುಬಹುದಿತ್ತು. ಅದೃಷ್ಟವಶಾತ್ ಉಗ್ರ ಆಟೊ ರಿಕ್ಷಾದಲ್ಲಿ ಬಂದ ಕಾರಣ ರಸ್ತೆ ಗುಂಡಿಯ ಕುಲುಕಾಟಕ್ಕೆ, ರಿಕ್ಷಾದ ಅಲುಗಾಟದ ಒತ್ತಡಕ್ಕೆ ಕುಕ್ಕರ್ ಮುಚ್ಚಳ ಸಿಡಿದು ಹೋಗಿದೆ. ಅದು ಉಗ್ರನ ಒಂದು ಕಣ್ಣು ತೆಗೆದಿದೆ. ಪರಿಣಾಮ ದೊಡ್ಡಮಟ್ಟದ ಸಾವು ನೋವುಗಳು ತಪ್ಪಿ ಹೋಗಿದೆ. ಇದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡ ಸತ್ಯಗಳು.
ನ.೧೯ರಂದು ಸಂಜೆ ೪ ಗಂಟೆಗೆ ಪಡೀಲ್‌ನಿಂದ ಹೊರಟು ಪಂಪ್‌ವೆಲ್ ಬಳಿ 4.40ಕ್ಕೆ ಕುಕ್ಕರ್ ಬಾಂಬ್ ಸ್ಪೋಟ ನಡೆಸಲು ಉಗ್ರ ಶಾರಿಕ್ ಅರ್ಧ ಗಂಟೆಗೆ ಟೈಮರ್ ಫಿಕ್ಸ್ ಮಾಡಿದ್ದ. ಪಡೀಲ್‌ನಲ್ಲಿ ಇಳಿದು ನಡೆದುಕೊಂಡೇ ಅರ್ಧಗಂಟೆ ಒಳಗೆ ಪಂಪ್‌ವೆಲ್ ಬಸ್ ನಿಲ್ದಾಣ ಬಳಿಯ ಜನ ನಿಬಿಡ ಪ್ರದೇಶಕ್ಕೆ ಬಂದು ಆತ ಬಾಂಬ್ ಸ್ಪೋಟಿಸಬೇಕಿತ್ತು. ಆದರೆ ಆತನ ಸಮಯದ ಲೆಕ್ಕಾಚಾರ ತಪ್ಪಿದೆ. ಇನ್ನು ನಡೆದುಕೊಂಡು ಹೋದರೆ ಕಷ್ಟ ತಾನೂ ಸ್ಪೋಟಗೊಳ್ಳಬಹುದು ಎಂಬ ಭೀತಿಯಿಂದ ದಾರಿ ಮಧ್ಯೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕೈ ಹಿಡಿದ.
ರಸ್ತೆ ಉಬ್ಬು ತಗ್ಗುಗಳಿಂದ ಕೂಡಿದ್ದು, ಒಂದೆರಡು ಕಡೆ ಸಣ್ಣ ಹೊಂಡಗಳಿಗೆ ಬಿದ್ದಿದೆ. ಇದರಿಂದಾಗಿ ಕುಕ್ಕರ್ ಒಳಗೆ ಸ್ಪೋಟಕದ ಮೇಲೆ- ಕೆಳಗೆ ಅಳವಡಿಸಿದ ರಬ್ಬರ್ ಜಾರಿದೆ, ದೊಡ್ಡ ಟ್ಯಾಂಕರ್ ಕೂಡಾ ರಸ್ತೆಯಲ್ಲಿ ಬರುತ್ತಿದ್ದ ಕಾರಣಕ್ಕೆ ಬ್ರೇಕ್ ಹೊಡೆದಿರ ಬೇಕು ಅಷ್ಟರಲ್ಲಿ ಸ್ಪೋಟಿಸಿದೆ. ಒಂದು ವೇಳೆ ಟೈಮರ್ ಪ್ರಕಾರ ಡಿಟೋನೇಟರ್ ಮೂಲಕವೇ ಸ್ಪೋಟವಾಗಿದ್ದರೆ ಪರಿಸ್ಥಿತಿ ಭೀಕರವಾಗಿರುತ್ತಿತ್ತು !
ತಪ್ಪಿಸಿಕೊಳ್ಳಲು ಅನುಕೂಲವಾಗಲೆಂದು ಮೂರು ಅಂಗಿ ಧರಿಸಿದ್ದ:ಪೊಲೀಸರು ಶಂಕಿತ ಉಗ್ರ ಶಾರಿಕ್‌ನ ಚಲನವಲನ ಗಳನ್ನು ಸಿಸಿ ಕ್ಯಾಮೆರಾಗಳಲ್ಲಿ ಚೆಕ್ ಮಾಡಿದಾಗ ಇದಕ್ಕೆ ಪೂರಕ ಅಂಶಗಳು ಕಂಡು ಬಂದಿದೆ. ಶಾರಿಕ್ ಮೂರು ಅಂಗಿ ಧರಿಸಿದ್ದ. ರಿಕ್ಷಾ ಹತ್ತುವ ಮುನ್ನ ಒಂದು ಅಂಗಿ ಎಸೆದಿದ್ದ. ಬಹುಶಃ ಆತನ ಲೆಕ್ಕಾಚಾರ ಸರಿ ಆಗಿದ್ದರೆ ಪಂಪ್‌ವೆಲ್ ಜನ ನಿಬಿಡ ಪ್ರದೇಶದಲ್ಲಿ ಬಾಂಬ್ ಇಟ್ಟು ಅ ಇನ್ನೊಂದು ಅಂಗಿಯನ್ನು ಕಳಚಿ ಕೇರಳದತ್ತ ಅಥವಾ ಆತ ಅಡಗುತಾಣಕ್ಕೆ ತೆರಳಲು ಸಿದ್ಧತೆ ನಡೆಸಿದ್ದ.
ಸಂಜೆ ೪ ರಿಂದ ೫ ಗಂಟೆ ಹೊತ್ತಲ್ಲಿ ಪಂಪ್‌ವೆಲ್‌ನಲ್ಲಿ ಟ್ರಾಫಿಕ್ ದಟ್ಟಣೆ ಇರುತ್ತದೆ. ಶಾಲೆಯ ಮಕ್ಕಳು, ಕಾರ್ಮಿಕರು, ಉದ್ಯೋಗ ಮುಗಿಸಿ ಮನೆಗೆ ತೆರಳುವವರು ಹೀಗೆ ಜನ ಸಂಚಾರ ದಟ್ಟವಾಗಿರುತ್ತದೆ. ಅರ್ಧ ಗಂಟೆಯ ಒಳಗೆ ಆತ ನಡೆದು ಪಂಪ್ ವೆಲ್ಮುಟ್ಟಬೇಕಿತ್ತು. ಆದರೆ ಅರ್ಧಗಂಟೆಗೂ ಮುನ್ನ ಪಂಪ್ ವೆಲ್ ಮುಟ್ಟುವುದು ಕಷ್ಟ ಎಂದು ಆತನಿಗೆ ಅನಿಸಿರಬೇಕು. ಅದಕ್ಕೆ ಮಧ್ಯೆ ರಿಕ್ಷಾ ನಿಲ್ಲಿಸಿ ಹತ್ತಿದ್ದಾನೆ. ಜತೆಗೆ ಮಂಗಳೂರಿನ ರಸ್ತೆಯೂ ಸಹಕರಿಸಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ ಎಂದು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ.
ಶಾರಿಕ್ ಮೊಬೈಲ್ ಸರ್ಚ್:ಹಿಸ್ಟರಿಯಲ್ಲಿ ಮಂಗಳೂರಿನ ೬ ಪ್ರದೇಶ ಇದೆ. ಮಣ್ಣಗುಡ್ಡ, ಗಾಂಧಿನಗರ ಸರ್ಚ್ ಮಾಡಿದ್ದ. ಇದೇ ಪ್ರದೇಶದ ಸಂಘನಿಕೇತನದಲ್ಲಿ ೧೯ ಮತ್ತು ೨೦ರಂದು ಆರೆಸ್ಸೆಸ್ ಮೂಲದ ಸಂಘಟನೆ ಕನ್ನಡ ಶಾಲೆ ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಿತ್ತು. ಎರಡು ದಿನಗಳ ಕಾಲ ೨೦ ಸಾವಿರ ಮಕ್ಕಳು ಆಗಮಿಸಿದ್ದರು. ಅಲ್ಲಿ ಹಿಂದುತ್ವದ ಪ್ರಖರ ನಾಯಕರು, ಮುಸ್ಲಿಂ ಮೂಲಭೂತವಾದ ವಿರೋಧಿಸುವ ಕಲ್ಲಡ್ಕ ಪ್ರಭಾಕರ ಭಟ, ಚಕ್ರವರ್ತಿ ಸೂಲಿಬೆಲೆ, ರೋಹಿತ್ಚಕ್ರತೀರ್ಥ ಮತ್ತು ಸಚಿವ ನಾಗೇಶ್ ಕೂಡಾ ಇದ್ದರು. ಆದ್ದರಿಂದ ಸಹಜವಾಗಿ ಆತನ ಸರ್ಚ್ ಹಿಸ್ಟರಿ ಭೀತಿ ತಂದಿತ್ತು.
ಆದರೆ ಮಕ್ಕಳ ಹಬ್ಬದಲ್ಲಿ ಅಷ್ಟು ಮಂದಿ ಸೇರುವ ಸಾಧ್ಯತೆ ಕುರಿತು ಹೊರ ಪ್ರಪಂಚಕ್ಕೆ ಅಷ್ಟಾಗಿ ಪ್ರಚಾರ-ಮಾಹಿತಿ ಇರಲಿಲ್ಲ. ಶಿಕ್ಷಣ ಇಲಾಖೆ ಮತ್ತು ಶಾಲೆಗಳ ಮೂಲಕವೇ ಅಷ್ಟೊಂದು ಮಂದಿ ಸೇರಿಸಲಾಗಿತ್ತು. ಮಾಧ್ಯಮದ ಮಂದಿಯೂ ಹತ್ತಿರದಲ್ಲಿಯೇ ನಡೆಯುತ್ತಿದ್ದ ಮುಖ್ಯಮಂತ್ರಿ ಕಾರ್ಯಕ್ರಮ ದತ್ತಲೇ ಹೆಚ್ಚಿನ ಗಮನ ಇತ್ತು. ಅಲ್ಲಿಗೆ ಹೋದಾಗಲೇ ಅಷ್ಟೊಂದು ಮಂದಿ ಸೇರಿದ್ದು ಗೊತ್ತಾಗಿದ್ದು. ಪಡೀಲ್ ನಿಂದ ಟೈಮರ್ ಇಟ್ಟು ಅಷ್ಟು ದೂರ ಹೋಗುವ ಸಾಧ್ಯತೆ ಇರಲಿಲ್ಲ.
ದಿಕ್ಕು ತಪ್ಪಿಸುವ ಯತ್ನ:ಹಿಂದುಗಳ ಪುಣ್ಯ ಕ್ಷೇತ್ರಗಳೇ ಪ್ರಮುಖ ಗುರಿ ಅದರಲ್ಲಿಯೂ ಕದ್ರಿಯ ಮಂಜುನಾಥ ಕ್ಷೇತ್ರ ಎಂದು ಹೇಳಲಾಗುತ್ತಿದೆ. ಆದರೆ ಶಾರಿಕ್ ಆಟೊ ಹತ್ತುವಾಗ ಕದ್ರಿ ಪರಿಸರಕ್ಕೆ ಹೋಗುವ ಮಾರ್ಗದಲ್ಲಿ ನಿಲ್ಲಬೇಕಿತ್ತು. ಪಡೀಲ್‌ಗೆ ಮುಂಚಿತ ವಾಗಿ ಇಳಿದು ನಂತೂರು ಮೂಲಕ ನೇರವಾಗಿ ಕದ್ರಿಗೆ ಬರಬೇಕಿತ್ತು. ಈತ ನಡೆದು ಹೋಗುತ್ತಿದ್ದದ್ದು ಕಂಕನಾಡಿ- ಪಂಪ್‌ವೆಲ್ಮಾರ್ಗದಲ್ಲಿ. ಕದ್ರಿ ಮಂಜುನಾಥ ದೇಗುಲ ಸ್ಪೋಟ ಗುರಿಯಾಗಿತ್ತು ಎಂದು ಇಸ್ಲಾಮಿಕ್ ರೆಸಿಸ್ಟೆ ಕೌನ್ಸಿಲ್ ಎಂಬ ಅಜ್ಞಾತ ಸಂಘಟನೆಯೊಂದು ಹೇಳಿಕೊಂಡರೂ  ಅದು ದಿಕ್ಕುತಪ್ಪಿಸುವ ಯತ್ನವಾಗಿರಬಹುದು. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಇದರ ನೈಜತೆ ಕುರಿತೂ ತನಿಖೆ ನಡೆಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಸೆ.೮ರಂದು ಮೈಸೂರು- ಮಡಿಕೇರಿ ಮೂಲಕ ಬಿಸಿರೋಡ್ ಮೂಲಕ ಆತ ಮಂಗಳೂರಿಗೆ ಸುತ್ತು ಹೊಡೆದಿದ್ದ. ಪ್ರದೇಶಗಳನ್ನು ಪರಿಶೀಲನೆ ಮಾಡಿದ್ದ ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದು, ಆತನ ಟಾರ್ಗೆಟ್ ಸ್ಪಷ್ಟವಾಗಿತ್ತು. ಆದರೆ ಲೆಕ್ಕಾಚಾರ ಸ್ವಲ್ಪ ಹೆಚ್ಚು ಕಡಿಮೆಯಾದ ಕಾರಣ ಸಂಭಾವ್ಯ ದೊಡ್ಡ ದುರಂತ ತಪ್ಪಿದೆ.
ದುರ್ಗಾಪರಮೇಶ್ವರಿ ಆಟೋ:ಪುರುಷೋತ್ತಮ ಪೂಜಾರಿ ಅವರು ದುರ್ಗಾಪರಮೇಶ್ವರಿ ಹೆಸರಿನ ರಿಕ್ಷಾ ಚಲಾಯಿಸುತ್ತಿದ್ದು, ರಿಕ್ಷಾ ಹತ್ತಿದ್ದರಿಂದ ಅದು ಸ್ಪೋಟವಾಗದೆ ಕೇವಲ ಸಿಡಿಯುವಂತೆ ಮಾಡಿ ಆ ದೇವಿಯೇ ಕಾಪಾಡಿದ್ದಾರೆ, ಕಂಕನಾಡಿ ಗರೋಡಿಯ ದೈವಗಳು ಊರನ್ನು ಕಾಪಾಡಿದೆ ಎಂದು ಆಸ್ತಿಕರು ಭಾವನಾತ್ಮಕವಾಗಿ ಹೇಳಿಕೊಳ್ಳುತ್ತಿದ್ದಾರೆ.
ಝಾಕಿರ್ ನಾಯ್ಕ ಪ್ರೇರಣೆ, ಐಸಿಸ್ ಸ್ಟೈಲಲ್ಲಿ ಪ್ರತಿಜ್ಞೆ!:ಭಾರತದಲ್ಲಿ ನಿಷೇಧಗೊಂಡಿರುವ ವಿವಾದಿತ ಮುಸ್ಲಿಂ ವಿದ್ವಾಂಸ ಝಾಕಿರ್ ನಾಯ್ಕನ ೫೦ಕ್ಕೂ ಹೆಚ್ಚು ಭಾಷಣಗಳ ವೀಡಿಯೋಗಳನ್ನು ಯುಟ್ಯೂಬ್‌ನಿಂದ ಡೌನ್ಲೋಡ್ ಮಾಡಿಕೊಂಡು ರಿಯಲ್ ಇನ್ಸ್ಪಿರೇಶನ್ ಝಾಕಿರ್ ನಾಯ್ಕ ಎಂದು ಶಾರೀಕ್ ಬರೆದುಕೊಂಡಿದ್ದ. ಐಸಿಸ್ ಉಗ್ರನ ದಿರಿಸಿನಲ್ಲಿ ಪ್ರತೀಕಾರದ ಪ್ರತಿಜ್ಞೆ  ತೆಗೆದು ಕೊಂಡಿದ್ದ. ಬಾಂಬ್ ತಯಾರಿಸುವ ವೀಡಿಯೋ ಮಾಡಿಕೊಂಡಿದ್ದು ಇದನ್ನು ನೋಡಿಯೇ ಕುಕ್ಕರ್ ಬಾಂಬ್ ತಯಾರಿಸಿದ್ದ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯನ್ನು ಸ್ಥಳೀಯ ಪೊಲೀಸರು ಎನ್‌ಐಎಗೆ ನೀಡಲಿದ್ದಾರೆ. ೨೦೦೮ರಲ್ಲಿ ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದ್ದೀನ್‌ಗಳನ್ನು ಆಪರೇಶನ್ ಟೆರರ್ ಮೂಲಕ ಹಿಡಿದಾಗ ಅವರ ಬಳಿಯೂ ೩೦೦ಕ್ಕೂಹೆಚ್ಚು ಝಾಕಿರ್ ನಾಯ್ಕ ಭಾಷಣದ ಸೀಡಿಗಳು ಲಭ್ಯವಾಗಿತ್ತು.
ಮಂಗಳೂರು ಬಾಂಬ್ಶೈಲಿ:ಬಾಂಬ್ ತಯಾರಿಸುವಾಗ ನಟ್ಟು ಬೋಲ್ಟ, ಬೇರಿಂಗ್ ಬಾಲ್ ಗಳನ್ನು ಹಾಕುವುದುಇಂಡಿಯನ್ ಮುಜಾಹಿದ್ದೀನ್ ಬಾಂಬರ್‌ಗಳ ವೈಶಿಷ್ಟ್ಯ. ಇಂಥ ಬಾಂಬ್‌ಗಳಲ್ಲಿ ೧೫ ವರ್ಷಗಳ ಹಿಂದೆ ಮಂಗಳೂರಿನ ಉಳ್ಳಾಲ,ಚೆಂಬುಗುಡ್ಡೆ ಪರಿಸರಗಳಲ್ಲಿ ಉಗ್ರರು ಮಾಡಿ, ದೇಶದ ವಿವಿಧೆಡೆ ಕಳುಹಿಸಿ ಸ್ಪೋಟ ನಡೆಸಿದ್ದರು. ಇದೇ ಶೈಲಿಯಲ್ಲಿ ಬಾಂಬ್ ತಯಾರಿಸಲಾಗಿತ್ತು.
ಹಿಂಟ್ ಕೊಟ್ಟ ಸುನ್ನತ್!:ಆಟೊ ಬ್ಲಾ ಸಂದರ್ಭ ಗಾಯಗೊಂಡ ಶಾರಿಕ್‌ನನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತನ ಬಳಿ ಪ್ರೇಮ್  ರಾಜ್ ಎಂಬ ಐಡಿ ಕಾರ್ಡ್ ಸಿಕ್ಕಿತ್ತು. ಪೊಲೀಸರು ಸಂಶಯದಲ್ಲಿ ಆತನ ದೇಹವನ್ನು ಸಂಪೂರ್ಣ ಪರಿಶೀಲಿಸಿದಾಗ ಆತ ಸುನ್ನತ್ ಮಾಡಿಸಿರುವುದು ಬಯಲಾಯಿತು. ಅಲ್ಲಿಂದ ತನಿಖೆ ತೀವ್ರಗೊಳಿಸಿದಾಗ ಆತ ಈ ಹಿಂದಿನ ಮಂಗಳೂರಿನ ಉಗ್ರ ಗೋಡೆ ಬರಹದ ಆರೋಪಿ ಎನ್ನುವುದು ತಿಳಿದು ಬಂತು.