ಅನಿವಾಸಿಗಳಿಗೆ ಮುಜುಗರಗೊಳಿಸುತ್ತಿರುವ ಮಾಜಿ ನಟ
ಅಭಿವ್ಯಕ್ತ
ಬೆಂಕಿ ಬಸಣ್ಣ, ನ್ಯೂಯಾರ್ಕ್‌
ಅಮೆರಿಕದಲ್ಲಿ ಹುಟ್ಟಿದ ಭಾರತೀಯರ ಮಕ್ಕಳಿಗೆ ತಮಾಷೆಗಾಗಿ “” ಎಂದು ಕರೆಯುತ್ತಾರೆ.  ಅಂದರೆ    ಅಂತಾ. ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದರೆ ಅಹಿಂಸಾ ಚೇತನ್. ಇವರು ಅಮೆರಿಕದಲ್ಲಿ ಹುಟ್ಟಿ ತಾವು ಕನ್ಯೂಸ್ ಆಗಿ ಭಾರತಕ್ಕೆ ವಾಪಸ್ ಹೋಗಿ ಅಲ್ಲಿಯ ಜನತೆಯನ್ನು ಸಹ ಕನ್ಯೂಸ್ ಮಾಡುತ್ತಿದ್ದಾರೆ.
ಕೆಲ ದಶಕಗಳ ಹಿಂದೆ ಮಾತೃಭೂಮಿ ಕರ್ನಾಟಕದಿಂದ ಸಾವಿರಾರು ಮೈಲಿ ದೂರವಿ ರುವ ಅಮೆರಿಕಕ್ಕೆ ವಲಸೆ ಬಂದ ಕನ್ನಡಿಗರು ತಾವು ನೆಲೆಸಿರುವ ಊರುಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ಕನ್ನಡ ಭಾಷೆ, ಸಂಸ್ಕೃತಿ, ಕಲೆ, ನಾಟಕ, ಸಾಹಿತ್ಯ, ಪರಂಪರೆ ಬೆಳೆಸಲು ಹಗಲಿರುಳು ಶ್ರಮಿಸುತ್ತಿzರೆ. ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಸಲುವಾಗಿ ಕನ್ನಡ-ಕಲಿ ಶಾಲೆಗಳನ್ನು ಪ್ರಾರಂಭಿಸಿ ತಾವೇ ಸ್ವಯಂಸೇವಕ ಶಿಕ್ಷಕರಾಗಿ, ತಮ್ಮದೇ ದುಡ್ಡು ಮತ್ತು ವೈಯಕ್ತಿಕ ಸಮಯವನ್ನು ವಿನಿಯೋಗಿಸುತ್ತಿದ್ದಾರೆ.
ಕರ್ನಾಟಕದಿಂದ ಕಲಾವಿದರನ್ನು ತಮ್ಮ ದುಡ್ಡಿನಿಂದ ಕರೆಸಿ, ತಮ್ಮ ಮನೆಗಳಲ್ಲಿ ಊಟ, ವಸತಿ ಕೊಟ್ಟು ಕಲಾ ಸೇವೆಯನ್ನು ಮಾಡುತ್ತಿzರೆ. ಈ ಅಮೆರಿಕ ಕನ್ನಡಿಗರ ಹಲವಾರು ದಶಕಗಳ ಸತತ ಪರಿಶ್ರಮದ ಫಲವಾಗಿ ಅಮೆರಿಕದ ಕೆಲವು ಸರಕಾರಿ ಶಾಲೆ ಗಳಲ್ಲಿ ನಮ್ಮ ಕನ್ನಡ ಭಾಷೆಯನ್ನು ಅಧಿಕೃತ ವಿದೇಶಿ ಭಾಷೆ (ಫಾರಿನ್ ಲಾಂಗ್ವೇಜ್) ಆಗಿ ಕಲಿಸ ಲಾಗುತ್ತಿದೆ. ಅಮೆರಿಕದ ಕೆಲವು ರಾಜ್ಯಗಳಲ್ಲಿ ಈಗಾಗಲೇ ನವಂಬರ್ ತಿಂಗಳನ್ನು ಕನ್ನಡ ಪರಂಪರೆಯ ಮಾಸವಾಗಿ (  ) ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಹೀಗೆ ಅನಿವಾಸಿ ಕನ್ನಡಿಗರು ವಿದೇಶಗಳಲ್ಲಿ ಕೀರ್ತಿ ಪತಾಕೆಗಳನ್ನು ಹಾರಿಸುತ್ತಿದ್ದರೆ, ಅಮೆರಿಕದಿಂದ ಭಾರತಕ್ಕೆ ವಾಪಸ್ ಹೋಗಿರುವ ಚೇತನ ಅಹಿಂಸಾ ಅವರು ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ಕೊಡುತ್ತಾ, ದೇಶದ್ರೋಹಿಗಳಿಗೆ ಬೆಂಬಲ ಕೊಡುತ್ತಾ ಅನಿವಾಸಿ ಭಾರತೀಯರ ಮಾನವನ್ನು ಕಳೆಯುತ್ತಿದ್ದಾರೆ.
ಅಮೆರಿಕದಲ್ಲಿ ಟ್ರಂಪ್ ಮಾಡಿದಂತೆ, ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಪುಕ್ಕಟ್ಟೆ ಪಬ್ಲಿಸಿಟಿ ಪಡೆಯುವುದೇ ಚೇತನ್ ಗುರಿಯಾಗಿದೆ. ಅಮೆರಿಕದಲ್ಲಿರುವ ಕನ್ನಡಿಗರು ಈ ಚೇತನ್ ಯಾಕಾದರೂ ಭಾರತಕ್ಕೆ ಹೋಗಿ ನಮ್ಮ ಅನಿವಾಸಿ ಕನ್ನಡಿಗರ ಮಾನ ಮರ್ಯಾದೆಯನ್ನು ತೆಗೆಯುತ್ತಿದ್ದಾನೆ ಎಂದು ಕಳವಳ ಪಡುತ್ತಿzರೆ. ಚೇತನ್ ಅಹಿಂಸಾ ಅವರು ಪ್ರತಿದಿನವೂ ತಮ್ಮ ಲಾಜಿಕ್ ಇಲ್ಲದ ಹೇಳಿಕೆಗಳಿಂದ ಎಲ್ಲರಿಗೂ ತೀವ್ರ ಮಾನಸಿಕ ಹಿಂಸೆಯನ್ನು ಕೊಡುತ್ತಿರುವುದರಿಂದ ತಮ್ಮ ಹೆಸರನ್ನು ಚೇತನ್ ಹಿಂಸಾ ಎಂದು ಬದಲಿಸಿಕೊಂಡರೆ ಒಳ್ಳೆಯದು ಅನ್ನಿಸುತ್ತೆ.
ಚೇತನ್ ಅವರು ತಾವು ಅಮೆರಿಕದ ಯೇಲ್ ಯೂನಿವರ್ಸಿಟಿಯಲ್ಲಿ ಓದುತ್ತಿzಗ ಅನೇಕ ಪಾಕಿಸ್ತಾನಿ ಗೆಳೆಯ ಗೆಳೆತನ ಹೊಂದಿದ್ದಾ ಗಿಯೂ ಭಾರತದಲ್ಲಿ ಕೆಲವು ದೇಶ ದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಬದುಕುವುದನ್ನು ಸಮರ್ಥಿಸಿಕೊಂಡಿದ್ದಾರೆ. ನೋಡಿ. ನಾನು ಅಮೆರಿಕದಲ್ಲಿ ಕಳೆದ23ವರ್ಷಗಳಿಂದ ವಾಸವಾಗಿದ್ದೇನೆ. ನನ್ನ ಪಕ್ಕದ ಮನೆಯವರೇ ಪಾಕಿಸ್ತಾನಿಗಳು. ನಾವು ಭಾರತ  ಪಾಕಿಸ್ತಾನ ಕ್ರಿಕೆಟ್ ಮ್ಯಾಚ್‌ಗಳನ್ನು ಒಟ್ಟಿಗೆ ನೋಡುತ್ತೇವೆ. ಒಟ್ಟಿಗೆ ಕುಳಿತು ಕ್ರಿಕೆಟ್ ನೋಡುವಾಗ ಅವರು ಮತ್ತು ಅವರ ಮಕ್ಕಳು ಪಾಕಿಸ್ತಾನದ ಧ್ವಜವನ್ನು ಹಿಡಿದು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಾರೆ.
ನಾವು ಭಾರತದ ಧ್ವಜವನ್ನು ಹಿಡಿದು ಭಾರತಕ್ಕೆ ಸಪೋರ್ಟ್ ಮಾಡುತ್ತೇವೆ. ಇಲ್ಲಿರುವ ಭಾರತೀಯ ಮೂಲದ ಮುಸ್ಲಿಂ ಗೆಳೆಯರು ಸಹ ನನ್ನೊಟ್ಟಿಗೆ ಸೇರಿ ಭಾರತಕ್ಕೆ ಸಪೋರ್ಟ್ ಮಾಡುತ್ತಾರೆ. ಇಲ್ಲಿರುವ ಹಿಂದುಗಳು ಮತ್ತು ಭಾರತೀಯ ಮೂಲದ ಮುಸ್ಲಿಮರು ಒಟ್ಟಾಗಿ ಭಾರತ ತಂಡಕ್ಕೆ ಸಪೋರ್ಟ್ ಮಾಡುತ್ತೇವೆ. ಇಲ್ಲಿ ಧರ್ಮ ಮುಖ್ಯವಲ್ಲ. ನಾವೆಲ್ಲರೂ ಭಾರತೀಯರು ಎನ್ನುವುದು ಮುಖ್ಯ. ಪಾಕಿಸ್ತಾನದ ಪ್ರತಿ ವಿಕೆಟ್ ಬಿzಗಲೂ ಕುಣಿದು ಕುಪ್ಪಳಿಸುತ್ತೇವೆ.
ಕ್ರಿಕೆಟ್ ಮುಗಿಯುವವರೆಗೂ ನಾವು ಮತ್ತು ಪಾಕಿಸ್ತಾನದವರು ಬದ್ಧ ವೈರಿಗಳು. ಆದರೆ ಆಟ ಮುಗಿದ ತಕ್ಷಣ ಎಲ್ಲರೂ ಒಟ್ಟಿಗೆಕುಳಿತು ಊಟ ಮಾಡುತ್ತೇವೆ. ಆದರೆ ಒಮ್ಮೆಯೂ ಸಹ ನಾವು ಪಾಕಿಸ್ತಾನ ಜಿಂದಾಬಾದ್ ಅಂದಿಲ್ಲ. ಹಾಗೆಯೇ ಒಂದು ವೇಳೆ ಪಾಕಿಸ್ತಾನ ಮೂಲದವರು ತಮ್ಮ ಪಾಕ್ ತಂಡವನ್ನು ಬಿಟ್ಟು ಭಾರತ ತಂಡವನ್ನು ಸಪೋರ್ಟ್ ಮಾಡಿದರೆ ಅದು ದೇಶದ್ರೋಹ ವಾಗುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ತಮ್ಮ ಮೂಲ ದೇಶವನ್ನು ಮತ್ತು ಈಗ ನೆಲೆಸಿರುವ ದೇಶವನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು.
ಹೀಗಾಗಿ ಭಾರತದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರು ಹೇಗೆ ದೇಶದ್ರೋಹಿ ಆಗುತ್ತಾರೋ, ಹಾಗೆಯೇ ಅವರಿಗೆ ಬೆಂಬಲಕ್ಕೆ ನಿಂತಿರುವ ಚೇತನ್ ಸಹಿತ ದೇಶದ್ರೋಹಿಯಾಗುತ್ತಾರೆ. ಕೇಂದ್ರ ಸರಕಾರವು ಪಿಎಫ್ಐ ಬ್ಯಾನ್ ಮಾಡಿದ್ದನ್ನುವಿರೋಧಿಸುವ ಇವರ ಮನಸ್ಥಿತಿ ನಿಜಕ್ಕೂ ಅಪಾಯಕಾರಿ. ಚೇತನ್ ಅವರ ಪ್ರಕಾರ೧೨ನೇ ಶತಮಾನದಲ್ಲಿ ಶಿವಶರಣರೆ ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಧರ್ಮವನ್ನು ಮಾತ್ರ ಸ್ಥಾಪಿಸಿzರೆ ಎನ್ನುವುದು ತಪ್ಪು.
ಚೇತನ್ ಪ್ರಕಾರ ಅಂದಿನ ಕಾಲದ೨೬೦ವಚನಕಾರರು೨೬೦ಧರ್ಮಗಳನ್ನು ಸ್ಥಾಪಿಸಿzರೆ! ಇದೊಂದು ಹಾಸ್ಯಸ್ಪದ ವಿಚಾರ.ಚೇತನ ಅವರು ಕ್ರಿಕೆಟ್‌ನಲ್ಲಿ ಬರೀ ಬ್ರಾಹ್ಮಣರೇ ತುಂಬಿದ್ದು ಅಲ್ಪಸಂಖ್ಯಾತರಿಗೆ, ಆದಿವಾಸಿಗಳಿಗೆ, ಶೋಷಿತರಿಗೆ, ಕೆಳ ಜಾತಿಯ ವರಿಗೆ ಮೀಸಲಾತಿಯನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅವರಿಗೆ ಆಜರುದ್ದೀನ್, ಜಹೀರ್ ಖಾನ್, ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಮತ್ತು ವಿಶ್ವಕಪ್ ಅನ್ನು ಗೆದ್ದ ತಂಡದ ನಾಯಕತ್ವವನ್ನು ವಹಿಸಿದ್ದ ಕಪಿಲ್ ದೇವ್, ಮಹಿಂದ್ರ ಸಿಂಗ್ ಧೋನಿ ಇವರಾರು ಬ್ರಾಹ್ಮಣರಲ್ಲ ಎಂಬ ಸತ್ಯ ಗೊತ್ತಿಲ್ಲ ಅನಿಸುತ್ತೆ.
ಸಮಾನತೆಯನ್ನು ಸಾರುವ ಬಸವ, ಬುದ್ಧ, ಅಂಬೇಡ್ಕರ್, ಪೆರಿಯಾರ್, ಕುವೆಂಪು ಸಿದ್ದಾಂತಗಳೇ ತಮ್ಮ ಜೀವಾಳ ಎಂದುಹೇಳಿಕೊಳ್ಳುವ ಇವರಿಗೆ ಸ್ಪಷ್ಟತೆ ಎನ್ನುವುದಿಲ್ಲ. ಎಲ್ಲಾ ಸಿಂತಗಳು ಇವರ ಮಿದುಳಲ್ಲಿ ಸೇರಿ ಚಿತ್ರಾನ್ನವಾಗಿದೆ. ಇವರ ಪ್ರಕಾರ ರಾಮನು ಆರ್ಯ ಮೂಲದವನು, ಶಿವನು ಆದಿವಾಸಿ, ಆದರೆ ಇವರಿಗೆ ಹನುಮಾನ ಆರ್ಯನೊ ಅಥವಾ ಆದಿವಾಸಿಯೋ ಎಂಬ ಅನುಮಾನ! ಕಾಂತಾರ ಸಿನಿಮಾದಲ್ಲಿ ತೋರಿಸುವ ಭೂತಾರಾಧನೆಯು ಹಿಂದೂ ಧರ್ಮದ ಆಚರಣೆಯಲ್ಲ , ಅದು ಆದಿವಾ ಸಿಗಳ ಆಚರಣೆ ಎಂಬ ತಳ ಬುಡವಿಲ್ಲದ ವಾದವನ್ನು ಮಂಡಿಸಿzರೆ.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಇವರು ಸರಕಾರವು ಕಾಯಿದೆ ತಂದ ಮೇಲೆ ಮಾತ್ರ ತಮ್ಮಲ್ಲಿರುವ ಜಮೀ ನನ್ನು ಬಡವರಿಗೆ ಹಂಚುವುದಾಗಿ ಹೇಳಿದ್ದಾರೆ. ಅ, ತಮ್ಮ ಜಮೀನನ್ನು ತಕ್ಷಣವೇ ಬಡವರಿಗೆ ಹಂಚಿ ತಾವೇ ಪ್ರತಿಪಾದಿಸುವ ಸಮಾನತೆಯ ಆದರ್ಶವನ್ನು ಇವರು ಮೆರೆಯಬಹುದಲ್ಲವೇ ? ಆಡಿದಂತೆ ಮಾಡಿ ತೋರಿಸಬಹುದಲ್ಲವೇ ? ಇವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಪ್ ಹೀಗೆ ಎಲ್ಲಾ ರಾಜಕೀಯ ಪಕ್ಷಗಳು ಮೂಲನಿವಾಸಿಗಳ, ಆದಿವಾಸಿಗಳ , ಅಲ್ಪಸಂಖ್ಯಾತರ , ಬಡವರ ವಿರೋಧಿಗಳು ಎಂದು ಹೇಳುತ್ತಾರೆ.
ಭಾರತ ದೇಶಕ್ಕೆ ಬಂದು ೧೭ ವರ್ಷಗಳಾದರೂ ಭಾರತದ ಪೌರತ್ವವನ್ನು ಯಾಕೆ ಪಡೆದಿಲ್ಲ ಎಂದು ಪ್ರಶ್ನಿಸಿದರೆ ಸ್ಪಷ್ಟ ಉತ್ತರ ವಿಲ್ಲ. ಭಾರತದ ಪೌರತ್ವವನ್ನು ಪಡೆದು ಚುನಾವಣೆಯಲ್ಲಿ ಸ್ಪಽಸಲು ತಯಾರಿಲ್ಲ. ಎಲ್ಲಾ ಸಿದ್ದಾಂತಗಳು ಇವರ ಮಿದುಳಲ್ಲಿ ಸೇರಿ ಚಿತ್ರಾನ್ನವಾಗಿದೆ. ಇವರ ಪ್ರಕಾರ ರಾಮನು ಆರ್ಯ ಮೂಲದವನು, ಶಿವನು ಆದಿವಾಸಿ, ಆದರೆ ಇವರಿಗೆ ಹನುಮಾನ  ಆರ್ಯನೋ ಅಥವಾ ಆದಿವಾಸಿಯೋ ಎಂಬ ಅನುಮಾನ!
ಕಾಂತಾರ ಸಿನಿಮಾದಲ್ಲಿ ತೋರಿಸುವ ಭೂತಾರಾಧನೆಯು ಹಿಂದೂ ಧರ್ಮದ ಆಚರಣೆಯಲ್ಲ, ಅದು ಆದಿವಾಸಿಗಳ ಆಚರಣೆ ಎಂಬ ತಳ ಬುಡವಿಲ್ಲದ ವಾದವನ್ನು ಮಂಡಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಇವರು ಸರಕಾರವು ಕಾಯಿದೆ ತಂದ ಮೇಲೆ ಮಾತ್ರ ತಮ್ಮಲ್ಲಿರುವ ಜಮೀನನ್ನು ಬಡವರಿಗೆ ಹಂಚುವುದಾಗಿ ಹೇಳಿದ್ದಾರೆ. ಅ, ತಮ್ಮ ಜಮೀನನ್ನು ತಕ್ಷಣವೇ ಬಡವರಿಗೆ ಹಂಚಿ ತಾವೇ ಪ್ರತಿಪಾದಿಸುವ ಸಮಾನತೆಯ ಆದರ್ಶವನ್ನು ಇವರು ಮೆರೆಯಬಹುದಲ್ಲವೇ ? ಆಡಿದಂತೆ ಮಾಡಿ ತೋರಿಸಬಹುದಲ್ಲವೇ ? ಭಾರತದಲ್ಲಿರುವ ಕನ್ನಡಿಗರು ವಿದೇಶಕ್ಕೆ ಹೋಗಿ ನೆಲೆಸಿ ತಮ್ಮ ಕಠಿಣಶ್ರಮ, ಶಿಸ್ತು ಪ್ರತಿಭೆಗಳಿಂದ ನಮಗೆಲ್ಲ ಹೆಮ್ಮೆ ಕೀರ್ತಿಯನ್ನು ತರುತ್ತಿದ್ದರೆ , ಈ ಚೇತನ್ ಅಮೆರಿಕದಿಂದ ಕರ್ನಾಟಕಕ್ಕೆ ಹೋಗಿ ಭಾರತೀಯರ ಮಾನ ಮರ್ಯಾದೆ ಹರಾಜು ಹಾಕುತ್ತಿರುವುದು ದುರ್ದೈವದ ಸಂಗತಿ! ಚೇತನ ಅವರು ಮುಂದಿನ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ಗಳನ್ನು ಕೊಡುವುದನ್ನು ಬಿಟ್ಟು ನಾವೆಲ್ಲರೂ ಹೆಮ್ಮೆ ಪಡುವಂತಹ ಕೆಲಸ ಮಾಡಲಿ ಎಂದು ಆಶಿಸೋಣವೇ?