ಸಂಸ್ಕೃತ ಸೂತ್ರಕ್ಕೆ ಪರಿಹಾರ: ಕಂಪ್ಯೂಟರ್‌ಗೂ ದೇವಭಾಷೆ
ಸಾಧನೆ – ಶ್ಲಾಘನೆ
ಎಲ್‌.ಪಿ.ಕುಲಕರ್ಣಿ
kulkarnilp007@.
ಜಗತ್ತಿನಲ್ಲಿ ಒಂದು ಶಬ್ದಕ್ಕೆ ನಾನಾರ್ಥಗಳನ್ನು ಕೊಡುವ ಉತ್ಕೃಷ್ಠ ಭಾಷೆ ಅನ್ನೋದು ಏನಾದರೂ ಇದ್ದರೆ ಅದು ನಮ್ಮ ಸಂಸ್ಕೃತ. ದೇವ ಭಾಷೆ ಎಂದು ಕರೆಯಿಸಿಕೊಳ್ಳುತ್ತಿರುವ ಸಂಸ್ಕೃತ, ವೈಜ್ಞಾನಿಕವಾಗಿ ರಚಿತವಾದುದೆಂದು ನಾಸಾ ವಿಜ್ಞಾನಿಗಳೇ ಒಪ್ಪುತ್ತಾರೆ.
ಇದನ್ನೇಕೆ ಈಗ ಹೇಳುತ್ತಿದ್ದೇನೆಂದರೆ, ಕ್ರಿಸ್ತಪೂರ್ವ ೫ನೇ ಶತಮಾನದಿಂದ ಸಂಸ್ಕೃತ ವಿದ್ವಾಂಸರನ್ನು ಮಣ್ಣುಮುಕ್ಕಿಸಿದ್ದ ವ್ಯಾಕರಣದ ಸಮಸ್ಯೆಯೊಂದಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿ ಯೊಬ್ಬ ಕೊನೆಗೂ ಅದಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾನೆ. ಈ ಕುರಿತು ಕಳೆದ ಗುರುವಾರ ಆತ ಪ್ರಬಂಧ ಮಂಡಿಸಿದ್ದಾನೆ.
ಭಾಷಾಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಪಾಣಿನಿಯು ಕಲಿಸಿದ ಭಾಷಾ ನಿಯಮವನ್ನು ಡಿಕೋಡ್ ಮಾಡುವ ಮೂಲಕ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿ ರಿಷಿ ರಾಜ್‌ಪೋಪಾಟ್, ಈ ಸಾಧನೆಯನ್ನು ಮಾಡಿದ್ದಾನೆ. ಈಗ ಪಾಣಿನಿಯ ಅಷ್ಟಾಧ್ಯಾ ಯಿಯಲ್ಲಿನ ಒಂದು ನಿಯಮ ಸಂಘರ್ಷದ ನಿರ್ಣಯಕ್ಕಾಗಿ ಅಲ್ಗಾರಿದಮ (ಡಿಸ್ಕವರಿಂಗ್ ದಿ ಅಲ್ಗಾರಿದಮ್ ಫಾರ್ ಕನ್‌ಫ್ಲಿಕ್ಟ್ ರೆಸೊಲುಷನ್ ಇನ್ ದಿ ಅಷ್ಟಾಧ್ಯಾಯಿ) ಅನ್ನು ಕಂಡುಹಿಡಿಯುವುದು ಎಂಬ ಶೀರ್ಷಿಕೆಯ ಅವರ ಪ್ರಬಂಧ ಈಗ ಸುದ್ದಿಯಲ್ಲಿದೆ.
ವಿಶ್ವವಿದ್ಯಾನಿಲಯದ ಪ್ರಕಾರ, ಪ್ರಮುಖ ಸಂಸ್ಕೃತ ತಜ್ಞರು ರಾಜಪೋಪಾಟ್ ಅವರ ಆವಿಷ್ಕಾರವನ್ನು ಕ್ರಾಂತಿಕಾರಿ ಎಂದು ಬಣ್ಣಿಸಲಾಗಿದೆ. ಮತ್ತು ಈಗ ಇದನ್ನು ಪಾಣಿನಿಯ ವ್ಯಾಕರಣವನ್ನು ಕಂಪ್ಯೂಟರ್ಗಳಿಗೆ ಮೊದಲ ಬಾರಿಗೆ ಕಲಿಸಬಹುದು ಎಂದು ಇದನ್ನು ಅರ್ಥೈಸಬಹುದು. ಇಷ್ಟಕ್ಕೂ ಯಾರೀತ ರಿಷಿ ರಾಜಪೋಪಟ? ಮಹಾರಾಷ್ಟ್ರದ ಮುಂಬೈನ ಉಪನಗರವೊಂದರಲ್ಲಿ  ೯೯೫ ರಲ್ಲಿ ಜನಿಸಿದ ರಿಷಿ, ಪ್ರೌಢಶಾಲೆಯಲ್ಲಿದ್ದಾಗಲೇ ಸಂಸ್ಕೃತ ಭಾಷೆಯ ಮೇಲೆ ಪ್ರೀತಿ ತೋರಿದರು. ಈತನ ಆಸಕ್ತಿಯನ್ನುಗುರುತಿಸಿದ ನಿವೃತ್ತ ಭಾಷಾ ಪ್ರಾಧ್ಯಾಪಕರೊಬ್ಬರು ಪಾಣಿನಿಯ ಸಂಸ್ಕೃತ ವ್ಯಾಕರಣವನ್ನು ತಾವು ಫೀ ತೆಗೆದುಕೊಳ್ಳದೇ ಕಲಿಸಿಕೊಟ್ಟರು.
ಮುಂಬೈನ ಅರ್ಥಶಾಸದಲ್ಲಿ ಪದವಿ ಪಡೆದ ರಿಷಿ, ಹೆಚ್ಚಿನ ವ್ಯಾಸಂಗಕ್ಕಾಗಿ ಆಕ್ಸಫಡ್ ನಲ್ಲಿರುವ ಸೇಂಟ್ ಜಾನ್ಸ್ ಕಾಲೇಜಿನ ಮಧ್ಯಪ್ರಾಚ್ಯ ವಿಭಾಗದ ಭಾರತೀಯ ಅಧ್ಯಯನ ಕೇಂದ್ರದಲ್ಲಿ ೨೦೧೭ ರ ಪಿಎಚ್‌ಡಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಪ್ರಸ್ತುತಸೇಂಟ್ ಆಂಡ್ರ್ಯೂಸ್ ವಿವಿಯ ಸ್ಕೂಲ್ ಆಫ್ ಡಿವಿನಿಟಿಯಲ್ಲಿ ವೃತ್ತಿ ಪ್ರಾರಂಭಿಸಿದ್ದಾರೆ.
‘ಈ ಸಮಸ್ಯೆಯನ್ನು ಭೇದಿಸಲು ಒಂಬತ್ತು ತಿಂಗಳು ಪ್ರಯತ್ನಿಸಿದರೂ ಇದಕ್ಕೆ ಸೂಕ್ತವಾದ ಪರಿಹಾರ ಸಿಗಲಿಲ್ಲ. ಹೀಗಾಗಿ ನಾನು ಈ ಕುರಿತು ಯೋಚಿಸುವುದನ್ನು ಬಿಡಲು ನಿರ್ಧರಿಸಿದ್ದೆ. ತಲೆ ಚಿಟ್ಟು ಹಿಡಿದುಹೋಗಿತ್ತು. ಕಾರಣ ನಾನು ಒಂದು ತಿಂಗಳು ಪುಸ್ತಕ ಗಳನ್ನು ಮುಚ್ಚಿಡುವುದರ ಜತೆಗೆ ಕೈಗೊಂಡ ಸಂಶೋಧನೆಯನ್ನು ಅಷ್ಟಕ್ಕೆ ನಿಲ್ಲಿಸಿ ಬೇಸಿಗೆ ರಜೆಯನ್ನು ಆನಂದಿಸಿದೆ; ಈಜು, ಸೈಕ್ಲಿಂಗ್, ಅಡುಗೆ, ಪ್ರಾರ್ಥನೆ ಮತ್ತು ಧ್ಯಾನ ಮಾಡಿದೆ. ನಂತರ, ನಿರಾಶೆಯಿಂದ ನಾನು ಕೆಲಸಕ್ಕೆ ಮರಳಿದೆ. ಮತ್ತು ಈ ಹಿಂದೆ ಕೈಗೆತ್ತಿಕೊಂಡು ಆ ಸಂಶೋಧನೆಯನ್ನು ಕೈಗೆತ್ತಿಕೊಂಡೆ. ಕೆಲವೇ ನಿಮಿಷಗಳಲ್ಲಿ, ನಾನು ಪುಟಗಳನ್ನು ತಿರುಗಿಸಿದಂತೆ,  ರಿಹಾರದ ಈ ಮಾದರಿಗಳು ಹೊರಹೊಮ್ಮಲು ಪ್ರಾರಂಭಿಸಿದವು.
ವಿಚಿತ್ರವೇನು ಗೊತ್ತೆ! ಯಾವ ಸಮಸ್ತೆಗೆ ಪರಿಹಾರವೇ ಇಲ್ಲ, ಅರ್ಥವಾಗುತ್ತಿಲ್ಲ ಎಂದು ಗೊಣಗಾಡಿದ್ದಾನೋ, ಅದೇ ಇಂದುಸ್ಪಷ್ಟವಾಗಿ ಅರ್ಥವಾಗಲು ಪ್ರಾರಂಭಿಸಿತು. ಈ ಕುರಿತು ಮಾಡಲು ಇನ್ನೂ ಹೆಚ್ಚಿನ ಕೆಲಸವಿತ್ತು. ಆದರೆ, ನಾನು ಪಜಲ್‌ನ ದೊಡ್ಡ ಭಾಗವನ್ನು ಕಂಡುಕೊಂಡೆ ’ ಎಂಬುದಾಗಿ 27 ವರ್ಷದ ರಿಷಿ ತಮ್ಮ ಅನುಭವವನ್ನು ಸಂದರ್ಶಕರ ಜತೆ ಹಂಚಿಕೊಂಡಿದ್ದಾರೆ.
ಇದಾಗಿ ಮುಂದಿನ ಕೆಲವು ವಾರಗಳಲ್ಲಿ, ರಿಷಿ ತುಂಬಾ ಉತ್ಸುಕರಾಗಿದ್ದರು. ಅವರು ನಿದ್ರೆ ಮಾಡಲಿಲ್ಲ. ತಾವು ಕಂಡುಕೊಂಡ ದ್ದನ್ನು ಪರಿಶೀಲಿಸಲು ಮತ್ತು ಅದಕ್ಕೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಮಧ್ಯರಾತ್ರಿ ಸೇರಿದಂತೆ ಗ್ರಂಥಾಲಯದಲ್ಲಿ ಹಲವು ಗಂಟೆಗಳ ಕಾಲ ಕಳೆದರು. ನಿಜ, ಅಂತಿಮವಾಗಿ ಇದನ್ನು ಸಾಧಿಸಿ ತೋರಿಸಲು ರಿಷಿಗೆ ಎರಡೂವರೆ ವರ್ಷಗಳು ಬೇಕಾಯಿತು. ಪಾಣಿನಿಯು ಅಸಾಧಾರಣ ವ್ಯಕ್ತಿತ್ವ ಹೊಂದಿದ್ದವು. ಮಾನವ ಇತಿಹಾಸದಲ್ಲಿ ಅಪ್ರತಿಮವಾದ ಯಂತ್ರ ನಿರ್ಮಿಸಿದಾತ. ಆತನ ನಿಯಮಗಳಿಗೆ ಹೊಸ ಆಲೋಚನೆಗಳನ್ನು ಸೇರಿಸುವುದಾಗಿ ರಿಷಿ ನಿರೀಕ್ಷಿಸಿರಲಿಲ್ಲ.
‘ನಾವು ಪಾಣಿನಿಯ ವ್ಯಾಕರಣವನ್ನು ಎಷ್ಟು ಹೆಚ್ಚು ಟ್ಯೂನ್ ಮಾಡುತ್ತೇವೆಯೋ ಅದು ನಮ್ಮನ್ನು ಅಷ್ಟು ಬೇಗ ತಪ್ಪಿಸುತ್ತದೆ’ ಎಂಬುದು ರಿಷಿಯ ಅಭಿಪ್ರಾಯ. ಸದ್ಯ, ರಿಷಿ ಡೀಕೋಡ್ ಮಾಡಿದ 2500 ವರ್ಷಗಳ ಹಳೆಯ ಅಲ್ಗಾರಿದಮ, ಮೊದಲ ಬಾರಿಗೆಪಾಣಿನಿಯ ಭಾಷಾ ಯಂತ್ರ ಎಂದು ಕರೆಯಲ್ಪಡುವದನ್ನು ನಿಖರವಾಗಿ ಬಳಸಲು ಸಾಧ್ಯವಾಗಿಸುತ್ತದೆ. ರಾಜ್ ಪೋಗಾಟ್ ಈ ಆವಿಷ್ಕಾರವು ಪಾಣಿನಿಯ ಪೂಜ್ಯ ಭಾಷಾ ಯಂತ್ರವನ್ನು ಬಳಸಿಕೊಂಡು ಯಾವುದೇ ಸಂಸ್ಕೃತ ಪದವನ್ನು ಪಡೆಯಲು, ಲಕ್ಷಾಂತರ ವ್ಯಾಕರಣದ ಸರಿಯಾದ ಪದಗಳನ್ನು ನಿರ್ಮಿಸಲು ಸಾಧ್ಯವಾಗಿಸುತ್ತದೆ. ಇದನ್ನು ಇತಿಹಾಸದಲ್ಲಿ ಶ್ರೇಷ್ಠ ಬೌದ್ಧಿಕ ಸಾಧನೆಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಪಾಣಿನಿಯ ಸಿಸ್ಟಮ್ 4000 ನಿಯಮಗಳನ್ನು ಅವರ ಹೆಸರಾಂತ ಕೃತಿಯಲ್ಲಿ ವಿವರಿಸಲಾಗಿದೆ. ಅಷ್ಟಾಧ್ಯಾಯಿ ಯನ್ನು ಸುಮಾರು ಕ್ರಿ.ಪೂ 500 ರಲ್ಲಿ ಬರೆಯಲಾಗಿದೆ ಎಂದು ಭಾವಿಸಲಾಗಿದೆ. ಅದರ ಪ್ರಕಾರ ಪದದ ಮೂಲಮತ್ತು ಪ್ರತ್ಯಯದಲ್ಲಿ ಫೀಡ್ ಮಾಡಿ, ಅದನ್ನು ಹಂತ- ಹಂತದ ಪ್ರಕ್ರಿಯೆಯ ಮೂಲಕ ಅವುಗಳನ್ನು ವ್ಯಾಕರಣದ ಸರಿಯಾದ ಪದಗಳು ಮತ್ತು ವಾಕ್ಯಗಳಾಗಿ ಪರಿವರ್ತಿಸ ಬೇಕಾಗುತ್ತದೆ.
ಇಷ್ಟಾದರೂ, ಇಲ್ಲಿಯವರೆಗೆ, ಒಂದು ದೊಡ್ಡ  ಸಮಸ್ಯೆ ಹಾಗೆಯೇ ಇದೆ. ಅನೇಕ ವೇಳೆ, ಪಾಣಿನಿಯ ಈ ಎರಡು ಅಥವಾ ಹೆಚ್ಚಿನ ನಿಯಮಗಳು ಒಂದೇ ಹಂತದಲ್ಲಿ ಏಕಕಾಲದಲ್ಲಿ ಅನ್ವಯವಾಗುವುದರಿಂದ ವಿದ್ವಾಂಸರು ಯಾವುದನ್ನು ಆಯ್ಕೆ ಮಾಡ ಬೇಕೆಂಬ ಉಭಯ ಸಂಕಟದಲ್ಲಿ ಬೀಳುತ್ತಾರೆ. ಮಂತ್ರ ಮತ್ತು ಗುರುವಿನ ಕೆಲವು ರೂಪಗಳನ್ನು ಒಳಗೊಂಡಂತೆ ಲಕ್ಷಾಂತರ ಸಂಸ್ಕೃತ ಪದಗಳ ಮೇಲೆ ಪರಿಣಾಮ ಬೀರುವ ನಿಯಮ ಸಂಘರ್ಷಗಳನ್ನು ಪರಿಹರಿಸಲು ಅಲ್ಗಾರಿದಮ್ ಅಗತ್ಯವಿದೆ. ಪಾಣಿನಿಯ ತಥಾಕಥಿತ ಭಾಷಾ ಯಂತ್ರವೂ ಸ್ವಾವಲಂಬಿಯಾಗಿದೆ ಎಂದು ರಿಷಿಯ ಸಂಶೋಧನೆ ತೋರಿಸುತ್ತದೆ.
‘ನನ್ನ ವಿದ್ಯಾರ್ಥಿ ರಿಷಿ ಅದನ್ನು ಭೇದಿಸಿದ್ದಾನೆ. ಶತಮಾನಗಳಿಂದ ವಿದ್ವಾಂಸರನ್ನು ಕಂಗೆಡಿಸಿದ ಸಮಸ್ಯೆಗೆ ಅಸಾಧಾರಣವಾದ, ಸೊಗಸಾದ ಪರಿಹಾರವನ್ನು ಅವನು ಕಂಡುಕೊಂಡಿzನೆ. ಈ ಆವಿಷ್ಕಾರವು ಭಾಷೆಯಲ್ಲಿ ಆಸಕ್ತಿ ಹೆಚ್ಚುತ್ತಿರುವ ಸಮಯ ದಲ್ಲಿ ಸಂಸ್ಕೃತದ ಅಧ್ಯಯನವನ್ನು ಇನ್ನಷ್ಟು ಕ್ರಾಂತಿಕಾರಕ ನಿಟ್ಟಿಗೆ ಕೊಂಡೊಯ್ಯುತ್ತದೆ’ ಎನ್ನುತ್ತಾರೆ ರಾಜ್ ಪೋಪಾಟ್‌ಗೆ ಪಿಎಚ್‌ಡಿ ಮಾರ್ಗದಶಃಕರಾಗಿದ್ದ ಪ್ರೊ. ವಿನ್ಸೆಂಜೊ ವರ್ಜಿಯಾನಿ. ರಿಷಿ ತನ್ನ ಆವಿಷ್ಕಾರವನ್ನು ಮಾಡುವ ಆರು ತಿಂಗಳ ಮೊದಲು, ಪ್ರೊ. ವರ್ಜಿಯಾನಿ ಕೆಲವು ಪೂರ್ವಭಾವಿ ಸಲಹೆಯನ್ನು ನೀಡಿದ್ದರು.
ಅದರನ್ವಯ ರಾಜ್‌ಪೋಪಾಟ್ ಕೈಗೊಂಡ ಆವಿಷ್ಕಾರದ ಪ್ರಮುಖ ಅಂಶವೆಂದರೆ ಈಗ ಪಾಣಿನಿಯ ವ್ಯಾಕರಣವನ್ನು ನಡೆಸುವಅಲ್ಗಾರಿದಮ್ ಅನ್ನು ರಚಿಸಲಾಗಿದೆ. ಅದು ಕಂಪ್ಯೂಟರ್ ಗಳಿಗೆ ಈ ವ್ಯಾಕರಣವನ್ನು ಸಮರ್ಥವಾಗಿ ಕಲಿಸುತ್ತದೆ. ಸಹಜ ಭಾಷಾ ಸಂಸ್ಕರಣೆಯಲ್ಲಿ ಕೆಲಸ ಮಾಡುವ ಕಂಪ್ಯೂಟರ್ ವಿeನಿಗಳು ೫೦ ವರ್ಷಗಳ ಹಿಂದೆ ನಿಯಮ- ಆಧಾರಿತ ವಿಧಾನಗಳನ್ನು ತ್ಯಜಿಸಿದ್ದರು. ಆದ್ದರಿಂದ ಮಾನವ ಭಾಷಣ, ಪ್ರವಚನಗಳಲ್ಲಿ ವ್ಯಾಕರಣಬದ್ಧ ವಾಕ್ಯಗಳ ಬಳಕೆ ಅಸಂಬದ್ಧವೆನಿಸುತ್ತಿತ್ತು. ಆದರೆ ಈಗ ಪಾಣಿನಿಯ ನಿಯಮ-ಆಧಾರಿತ ವ್ಯಾಕರಣದೊಂದಿಗೆ ಭಾಷಣಕಾರನೊಬ್ಬನ ಉದ್ದೇಶವನ್ನು ಸಹಜವಾಗಿ ಸಂಯೋಜಿಸಬಹುದು.
ಮತ್ತು ಇದನ್ನು ಕಂಪ್ಯೂಟರ್‌ಗಳಿಗೂ ಕಲಿಸಲಾಗುತ್ತದೆ. ಇದು ಮಾನವ ಸಂವಹನದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲುಗಲ್ಲು. ಅಷ್ಟೇ ಅಲ್ಲ ಇದು ಯಂತ್ರಗಳೊಂದಿಗೆ, ಹಾಗೆಯೇ ಭಾರತದ ಬೌದ್ಧಿಕ ಇತಿಹಾಸದ ಒಂದು ಮಹತ್ತರ ಕಾರ್ಯ ಎನ್ನುತ್ತಾರೆ ರಾಜ್‌ಪೋಪಾಟ್. ಸಂಸ್ಕೃತವು ದಕ್ಷಿಣ ಏಷ್ಯಾದ ಪ್ರಾಚೀನ ಮತ್ತುಶಾಸೀಯಇಂಡೋ-ಯುರೋಪಿಯನ್ ಭಾಷೆಯಾಗಿದೆ. ಇಂದು ಭಾರತದಲ್ಲಿ ಈ ಭಾಷೆಯನ್ನು ಅಂದಾಜು ೨೫ ಸಾವಿರ ಜನರು ಮಾತ್ರ ಮಾತನಾಡುತ್ತಿದ್ದಾರೆ.
ಇದು ಪ್ರಪಂಚದಾದ್ಯಂತದ ಇತರ ಭಾಷೆಗಳು ಮತ್ತು ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿದೆ. ಭಾರತದ ಕೆಲವು ಪ್ರಾಚೀನ ಜ್ಞಾನವನ್ನು ಸಂಸ್ಕೃತದಲ್ಲಿ ಬರೆದಿಡಲಾಗಿದೆ. ಈ ಕುರಿತು ಸಂಶೋಧಿಸಲು ಹೊರಟಾಗ ನಮ್ಮ ಪೂರ್ವಜರು ಏನು ಸಾಧಸಿದ್ದಾ ರೆಂದು ನಮಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ. ಈ ಆವಿಷ್ಕಾರವು ಭಾರತದಲ್ಲಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಲ್ಲದೆ, ಹೆಮ್ಮೆಯ ಸಂಗತಿಯಾಗಿದೆ.
 - 