ಸ್ವಾತಂತ್ರ‍್ಯ ಸುಲ್ತಾನ್; ಅಪ್ರತಿಮ ದೇಶಭಕ್ತ ಅಶ್ಫಾಕ್‌ ಉಲ್ಲಾಖಾನ್
ತನ್ನಿಮಿತ್ತ
ಮಣ್ಣೆಮೋಹನ್‌
ನಿನ್ನೆ ಮುಸ್ಲಿಂ ಯುವಕನೊಬ್ಬ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾದುರಂತ ದಿನ. ಹಿಂದೂಸ್ಥಾನದ ರತ್ನವೆನಿಸಿದ, ಅಪ್ರತಿಮ ದೇಶಭಕ್ತ ಅಶ್ಫಾಕ್ ಉಲ್ಲಾಖಾನ್‌ರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದು ಡಿಸೆಂಬರ್ 19, 1927ರಂದು. ದುರಂತವೆಂದರೆ ಆಗಸ್ಟ್ 15, 1947ರಲ್ಲಿ ಬ್ರಿಟಿಷರ ಮತ್ತು ಕೆಲ ಮಹತ್ವಕಾಂಕ್ಷಿ ದೇಶವಿರೋಧಿಗಳ ಕುತಂತ್ರದಿಂದ, ಮುಸ್ಲಿಮರಿಗಾಗಿಯೇ ಪಾಕಿಸ್ತಾನಎಂಬ ದೇಶವನ್ನು ಸೃಷ್ಟಿಸಲು, ಹಿಂದೂಸ್ಥಾನವನ್ನು ವಿಭಜಿಸಲಾಯಿತು.
ಜಾತಿ ಧರ್ಮಗಳ ಹಂಗಿಲ್ಲದೆ ಹಿಂದುಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣ ವನ್ನಪ್ಪಿದ ಹತ್ತಾರು ಮುಸ್ಲಿಂ ಕ್ರಾಂತಿ ಕಾರಿಗಳ ಹೋರಾಟಕ್ಕೆ ಅಪಮಾನವಾಗುವಂತೆ, ಆನಂತರದ ಕೇವಲ 20 ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರವೊಂದನ್ನು ಸೃಷ್ಟಿಸಲು ದೇಶವನ್ನು ವಿಭಜಿಸಿದ ಶಕ್ತಿಗಳು, ನಿಜಕ್ಕೂ ದೇಶ ವಿರೋಧಿಗಳೇ ಅಲ್ಲವೇ? ಇದು ಸ್ವಾತಂತ್ರ್ಯ ಹೋರಾಟ ಗಾರರಿಗೆ ಮಾಡಿದ ಅಸಾಧಾರಣ ಅಪಮಾನವಲ್ಲವೇ? ಇಂತಹ ದೇಶ ವಿರೋಧಿ ಕುತಂತ್ರಿಗಳ ಮುಖವಾಡವನ್ನು ಇನ್ನಷ್ಟು ಕಳಚಿ ಹಾಕುವ ಕಾರ್ಯ ಇದೀಗ ಅತ್ಯಂತ ಜರೂರಾಗಿ ಆಗಬೇಕಿದೆ.
ದೇಶಕ್ಕಾಗಿ ಇವರು ಮಾಡಿದ ದ್ರೋಹವನ್ನು ಬಿಂಬಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ. ತನ್ನ 27ನೇ ವಯಸ್ಸಿ ನಲ್ಲಿ, ಇನ್ನೂ ಸರಿಯಾಗಿ ಮೀಸೆ ಚಿಗುರದ ಸಮಯ ದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವದಾನ ಮಾಡಿದ ಅಶಾಕ್, ಹುಟ್ಟಿದ್ದು 1900ರ ಅಕ್ಟೋ ಬರ್ 22ರಂದು. ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ಭೂಮಾಲೀಕ ವರ್ಗಕ್ಕೆ ಸೇರಿದ, ಶ್ರೀಮಂತ, ಸುಶಿಕ್ಷಿತ ಕುಟುಂಬದ ಖೈಬರ್ ಬುಡಕಟ್ಟಿನ ಮುಸ್ಲಿಂ ಪಠಾಣರಾದ ಶಫೀಕ್ ಉ ಖಾನ್ ಮತ್ತು ಮಜರುನಿಸ್ಸಾ ದಂಪತಿ ಗಳು ಈತನ ಹೆತ್ತವರು. ಅವನ ಪರಿವಾರದ ಹಲವರು ಬ್ರಿಟಿಷ್ ಸರಕಾರದ ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು.
1918ರಲ್ಲಿ, ಮೈನ್ಪುರಿ ಪಿತೂರಿ ಮತ್ತು ಲೂಟಿಗೆ ಸಂಬಂಧಿಸಿದಂತೆ ಪೊಲೀಸರು ಶಾಲೆಯೊಂದರ ಮೇಲೆ ದಾಳಿ ಮಾಡಿ, ವಿದ್ಯಾರ್ಥಿ ರಾಜಾರಾಮ್ ಭಾರತೀಯನನ್ನು ಬಂಧಿಸಿದರು. ಅದೇ ಶಾಲೆಯ, ಅದೇ ತರಗತಿಯ ವಿದ್ಯಾರ್ಥಿಯಾಗಿದ್ದ ಖಾನ್ ಮೇಲೆ ಈ ಘಟನೆ ಪ್ರಭಾವ ಬೀರಿತು. ದೇಶಪ್ರೇಮದ ಜ್ವಾಲೆ ಅವನ ನರನಾಡಿಗಳಲ್ಲಿ ವ್ಯಾಪಿಸತೊಡಗಿತು. ತಾನು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಕಾಂಕ್ಷೆ ಮೊಳೆಯಿತು. ಮೈನ್ಪುರಿ ಪಿತೂರಿಯ ಸಂಪೂರ್ಣ ವಿವರಗಳನ್ನು ತಿಳಿದು ಕೊಂಡನು.
ಪಿತೂರಿಯಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದ ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ ಅವರನ್ನು ಸ್ನೇಹಿತನ ಮೂಲಕ ಭೇಟಿ ಯಾದನು. ಈ ಭೇಟಿ ಖಾನ್ ಜೀವನದ ದಿಕ್ಕನ್ನೇ ಬದಲಿಸಿತು. ಅದಾಗಲೇ ಅವನ ಮೈಯಲ್ಲಿ ಹರಿಯುತ್ತಿದ್ದ ದೇಶಭಕ್ತಿಯ ರಕ್ತ,, ಅವನನ್ನು ಬಹುಬೇಗ ಕ್ರಾಂತಿಕಾರಿಯನ್ನಾಗಿ ರೂಪಿಸಲು ನೆರವಾಯಿತು. ರಾಮ್ ಪ್ರಸಾದ್ ಬಿಸ್ಮಿಲ್, ಅಪ್ರತಿಮ ಕ್ರಾಂತಿಕಾರಿ ಯಾಗಿ ಅದಾಗಲೇ ಗುರುತಿಸಿಕೊಂಡಿದ್ದರು. ಹಾಗೆಯೇ ಅವರು ಕವಿಯಾಗಿಯೂ ಗಮನ ಸೆಳೆದಿದ್ದರು. ಅವರ ಒಡನಾಟದಲ್ಲಿಖಾನ್ ಕ್ರಾಂತಿಕಾರಿ ಹೋರಾಟದ ಹೆಜ್ಜೆ ಗುರುತನ್ನು ಮೂಡಿಸುವ ಜತೆ ಜತೆಯ, ಕವಿಯಾಗಿಯೂ ರೂಪುಗೊಳ್ಳತೊಡಗಿದ್ದ.
ಸಹಜವಾಗಿ ರಾಮ್ ಪ್ರಸಾದ್ ಬಿಸ್ಮಿರ ಕವನಗಳ ಮೂಲಕ ಪ್ರೇರಿತರಾದ. ಅವರಿಬ್ಬರೂ ಪರಸ್ಪರ ಆತ್ಮೀಯ ಮಿತ್ರರೂ ಆದರು. ಅಷ್ಟರಲ್ಲಿ ಖಾನ್ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ‘ವರಾಸಿ ಮತ್ತು ಹಝರತ್’ ಎಂಬ ಕಾವ್ಯನಾಮದಿಂದ ದೇಶ ಭಕ್ತಿಗೀತೆ ಗಳನ್ನು ರಚಿಸಿ ಯುವಕರಿಗೆ ಸೂರ್ತಿ ನೀಡತೊಡಗಿದ. 1920ರಲ್ಲಿ ಗಾಂಧೀಜಿ ದೇಶಾದ್ಯಂತ ಅಸಹಕಾರ ಚಳವಳಿಗೆ ಕರೆ ನೀಡಿ ದರು.
ಪದವಿ ಶಿಕ್ಷಣ ಓದುತ್ತಿದ್ದ ಖಾನ್, ರಾಮ್ ಪ್ರಸಾದ್ ಬಿಸ್ಮಿ ಜತೆ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ. ದೇಶಾ ದ್ಯಂತ ಯುವ ಜನಾಂಗ ಬ್ರಿಟಿಷರ ವಿರುದ್ಧ ತಿರುಗಿಬಿತ್ತು. ಅಲ್ಲಿಯವರೆಗೂ ಮಡುಗಟ್ಟಿದ್ದ ಬ್ರಿಟಿಷರ ವಿರುದ್ಧದ ದ್ವೇಷ ಕಾಳ್ಗಿಚ್ಚಿ ನಂತೆ ಹಬ್ಬತೊಡಗಿತು. ಹಿಂಸಾತ್ಮಕ ಕೃತ್ಯಗಳ ಮೂಲಕ ಯುವಕರು, ಬ್ರಿಟಿಷರ ಕ್ರೌರ್ಯದ ವಿರುದ್ಧ ಸೇಡು ತೀರಿಸಿಕೊಳ್ಳ ತೊಡಗಿದರು.
1922ರ ಚೌರಿ ಚೌರಾ ಘಟನೆಯ ಬಳಿಕ ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳವಳಿ ಹಿಂಪಡೆದಾಗ, ಎಲ್ಲ ಕ್ರಾಂತಿಕಾರಿ ಗಳಂತೆ ಖಾನ್ ಸಹ ಅಸಮಾಧಾನಗೊಂಡರು. ಶಾಂತಿ ಸತ್ಯಾಗ್ರಹಗಳಿಗೆ ಬ್ರಿಟಿಷರು ಬಗ್ಗುವುದಿಲ್ಲವೆಂಬುದು ಅವರ ನಂಬಿಕೆ ಯಾಗಿತ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ, ಬ್ರಿಟಿಷರ ಕ್ರೌರ್ಯವನ್ನು ಕ್ರಾಂತಿಯಿಂದಲೇ ಸದೆಬಡಿಯಬೇಕೆಂಬುದು ಅವರ ಸಿದ್ಧಾಂತವಾಗಿತ್ತು. ಅವರ ದೃಷ್ಟಿಯಲ್ಲಿ ಕ್ರಾಂತಿಯೆಂದರೆ ಕೇವಲ ಧಿಕ್ಕಾರ ಕೂಗುವು ದಾಗಲಿ, ಕಲ್ಲುತೂರುವುದಾಗಲಿ ಆಗಿರಲಿಲ್ಲ. ಬದಲಿಗೆ ಅದುಸಶಸ್ತ್ರಕ್ರಾಂತಿಯಾಗಿತ್ತು. ಬಿಸ್ಮಿ ಸ್ನೇಹಿತರ ಜೊತೆಗೂಡಿ,ಸಶಸ್ತ್ರಕ್ರಾಂತಿಯನ್ನು ಸಂಘಟಿಸಲು ೧೯೨೪ರಲ್ಲಿ ‘ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್’ ಎಂಬ ಸಂಘಟನೆಯನ್ನು ಸ್ಥಾಪಿಸಿ, ಅದರ ಸಹ-ಸಂಸ್ಥಾಪಕ ರಾದರು.
ಸಂಘಟನೆಯ ಸದಸ್ಯರು ಷಹಜಹಾನ್ಪುರದಲ್ಲಿ ಸಭೆಯೊಂದನ್ನು ಆಯೋಜಿಸಿದರು.ಶಸ್ತ್ರಕ್ರಾಂತಿಗೆ ಬೇಕಾದಶಸ್ತ್ರಗಳನ್ನುಹೇಗೆ ಸಂಗ್ರಹಿಸಬೇಕೆಂದು ನಿರ್ಧರಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಹೋರಾಟಕ್ಕೆ ಬೇಕಾದಶಸ್ತ್ರಾಸ್ತ್ರಗಳನ್ನು ಜರ್ಮನಿಯಿಂದೇನೋ ತರಿಸಬಹುದಾಗಿತ್ತು. ಆದರೆ ಹಣದ ಸಮಸ್ಯೆ ಮುನ್ನೆಲೆಗೆ ಬಂತು. ತಮಗೆ ಪರಿಚಯವಿದ್ದವರ ಬಳಿ ಸಾಧ್ಯವಾ ದಷ್ಟು ಹಣ ಸಂಗ್ರಹಿಸುವ ಕೆಲಸ ಆರಂಭವಾಯಿತು.
ಆದರೆ ಅದು ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಯಿತು. ನಂತರ ತಂಡದ ಸದಸ್ಯರು ಕಂಡುಕೊಂಡ ಮಾರ್ಗ,ಆಂಗ್ಲ ಅಧಿಕಾರಿಗಳ ಮನೆ ದರೋಡೆ ಮಾಡುವುದು. ಇದರಿಂದಗಳ ದಾಸ್ತಾನಿನ ಯೋಜನೆಗೆ ತಕ್ಕಮಟ್ಟಿನ ವ್ಯವಸ್ಥೆಯಾಯಿತು. ಆದರೂ ಬ್ರಿಟಿಷರಂತಹ ಖೂಳರನ್ನು ಎದುರಿಸಲು ಅತ್ಯಾಧುನಿಕ ಮತ್ತು ಅತಿ ಹೆಚ್ಚುಶಸ್ತ್ರಾಸ್ತ್ರಗಳ  ಅವಶ್ಯಕತೆ ಇತ್ತು. ಅದಕ್ಕೆ ಬೇಕಾದ ದೊಡ್ಡ ಮೊತ್ತದ ಹಣಕಾಸು ಸಂಗ್ರಹಿಸುವ ಬಗೆಗೆ ಎಲ್ಲರೂ ಚಿಂತಿಸತೊಡಗಿದರು. ಆಗ ರಾಮ್‌ಪ್ರಸಾದ್, ಬಿಸ್ಮಿಲ್ ಹೆಣೆದ ತಂತ್ರವೇ ‘ಕಾಕೋರಿ ಪಿತೂರಿ’. ಅವರು ಲಖನೌ ಬಳಿಯ ಕಾಕೋರಿ ಮೂಲಕ ಸರಕಾರದ ಹಣವನ್ನು ಸಾಗಿಸುವ ರೈಲನ್ನು ದರೋಡೆ ಮಾಡಲು ನಿರ್ಧರಿಸಿದರು.
ಷಹಜಹಾನ್‌ಪುರದಿಂದ, ಲಖನೌವರೆಗೆ ತೆರಳುತ್ತಿದ್ದ ರೈಲಿನಲ್ಲಿ, ಬ್ರಿಟಿಷರು ಸುಂಕದ ಹಣವನ್ನು ಪ್ರತಿನಿತ್ಯ ಸಾಗಿಸುತ್ತಿದ್ದರು.ಇದು ಸುಮಾರು ಹತ್ತು ಸಾವಿರಕ್ಕೂ ಮೀರಿದ ಹಣವಾಗಿತ್ತು. ೧೯೨೫ರ ಆಗಸ್ಟ್ ೮ರಂದು ಖಾನ್ ಮತ್ತು ಇತರ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ, ಚಂದ್ರಶೇಖರ್ ಆಜಾದ್, ರಾಜೇಂದ್ರ ಲಾಹಿರಿ, ಬನ್ವಾರಿ ಲಾಲ, ಠಾಕೂರ್ ರೋಷನ್ ಸಿಂಗ್, ಸಚೀಂದ್ರ ಭಕ್ಷಿ, ಕೇಶಬ್ ಚಕ್ರವರ್ತಿ, ಸುರೇಶ ಭಟ್ಟಾಚಾರ್ಯ, ಮುರಾರಿ ಲಾಲ್ ಗುಪ್ತಾ, ಮನ್ಮಥನಾಥ್ ಗುಪ್ತಾ ಮತ್ತು ಮುಕುಂದಿ ಲಾಲ್‌ ರವರು ಕಾಕೋರಿ ರೈಲುನಿಲ್ದಾಣ ತಲುಪಿದರು. ದುರದೃಷ್ಟವಶಾತ್ ಅವರು ಬರುವುದು ತಡವಾದ್ದರಿಂದ, ಅಂದು ಅವರಯೋಜನೆ ಫಲಿಸಲಿಲ್ಲ. ಅವರು ದರೋಡೆ ಮಾಡಬೇಕಿದ್ದ ಏಯ್ಟ ಡೌನ್ ರೈಲು ಮುಂದೆ ಸಾಗಿತ್ತು.
ಕ್ರಾಂತಿಕಾರಿಗಳು ನಿರಾಶರಾಗಲಿಲ್ಲ. ಮಾರನೆಯ ದಿನ 1925 ಆಗಸ್ಟ್ 9ರಂದು ಲಖನೌಗೆ ತೆರಳಿ, ಅಲ್ಲಿಂದಲೇ ರೈಲಿನಲ್ಲಿ ಪಯ ಣಿಸಿ, ಕಾಕೊರಿಯ ನಿಲ್ದಾಣ ಬರುತ್ತಲೇ, ಪೂರ್ವ ನಿರ್ಧಾರದಂತೆ ರೈಲಿನ ಸರಪಳಿ ಎಳೆದು, ಗಾರ್ಡ್ ಡಬ್ಬಿಯೊಳಗೆ ನುಗ್ಗಿ, ಅಲ್ಲಿದ್ದ ಹಣದ ತಿಜೋರಿಯನ್ನು ಕೆಳಗಿಳಿಸಿ, ದೊಡ್ಡ ಸುತ್ತಿಗೆ-ಹಾರೆಗಳಿಂದ ಅದನ್ನು ಒಡೆದು, ಅದರಲ್ಲಿದ್ದ ಹಣದ ಚೀಲಗಳನ್ನು ತೆಗೆದು ಕೊಂಡು ಅಲ್ಲಿಂದ ಪರಾರಿಯಾದರು. ಆ ಮೂಲಕ ಕ್ರಾಂತಿಕಾರಿಗಳು ಬ್ರಿಟಿಷ್ ಸರಕಾರಕ್ಕೆ ನೇರವಾದ ಸವಾಲನ್ನು ಹಾಕಿದ್ದರು. ಭಾರತಕ್ಕೆ ಕಾಲಿಟ್ಟಾಗಲಿಂದ ಕುತಂತ್ರದಿಂದಲೇ ರಾಜ್ಯವಾಳುತ್ತ ಬಂದ ಬ್ರಿಟಿಷರಿಗೆ, ಕ್ರಾಂತಿಕಾರಿಗಳ ಈ ಸಾಹಸ ಎಚ್ಚರಿಕೆಯ ಗಂಟೆಯಂತಿತ್ತು.
ಬ್ರಿಟಿಷ್ ಸರಕಾರಕ್ಕೆ ಈ ಘಟನೆ ಅವಮಾನದ ಸಂಗತಿಯಾಗಿತ್ತು. ಸೋಲಿಲ್ಲದ ಸರದಾರರೆಂದು ತಮ್ಮನ್ನು ತಾವೇ ಬೆನ್ನು ತಟ್ಟಿ ಕೊಳ್ಳುತ್ತಿದ್ದ ಬ್ರಿಟಿಷರ ಅಧಿಕಾರದ ಅಹಂಕಾರಕ್ಕೆ ಬಿದ್ದ ಬಹುದೊಡ್ಡ ಪೆಟ್ಟು ಇದಾಗಿತ್ತು. ಈ ಅವಮಾನದಿಂದ ಪಾರಾಗಲು, ಸರಕಾರ ತ್ವರಿತಗತಿಯಲ್ಲಿ ಈ ಘಟನೆಗೆ ಕಾರಣರಾದವರ ಹುಡುಕಾಟದಲ್ಲಿ ತೊಡಗಿತು. ವ್ಯಾಪಕವಾದ ತನಿಖಾ ಕಾರ್ಯಾಚರಣೆ ಯನ್ನು ಪ್ರಾರಂಭಿಸಿತು. 1925 ರ ಅಕ್ಟೋಬರ್ 26ರಂದು ರಾಮ್ ಪ್ರಸಾದ್ ಬಿಸ್ಮಿ ಅವರನ್ನು ಪತ್ತೆಹಚ್ಚಿ ಸೆರೆ ಹಿಡಿಯಿತು. ಮನ್ಮಥ ನಾಥ್ ಗುಪ್ತ, ಸುರೇಶ ಭಟ್ಟಾಚಾರ್ಯ ಕಾಶಿಯಲ್ಲಿ ಬಂಧನಕ್ಕೊಳಗಾದರು.
ರಾಜೇಂದ್ರ ಲಾಹಿರಿ, ಬಾಂಬ್ ತರಬೇತಿಗಾಗಿ ಕೋಲ್ಕತಾಗೆ ಹೋಗಿದ್ದರಿಂದ ಅವನ ಸುಳಿವು ಸಿಗಲಿಲ್ಲ. ನಂತರದ ದಿನಗಳಲ್ಲಿಇವರನ್ನು ಸೆರೆ ಹಿಡಿಯಲಾಯಿತು. ಕಾಕೋರಿ ಪಿತೂರಿಯ ಇನ್ನೊಬ್ಬ ಪ್ರಮುಖ ಆರೋಪಿ ಖಾನ್, ಪೊಲೀಸರ ಕಣ್ತಪ್ಪಿಸಿ ನೇಪಾಳಕ್ಕೆ ಪಲಾಯನ ಮಾಡಿದರು. ಸ್ವಲ್ಪ ದಿನಗಳ ನಂತರ ಕಾನ್ಪುರಕ್ಕೆ ಬಂದರು. ನಂತರ ಡಾಲ್ಟೊಂಗಂಜ್ ತಲುಪಿ, ಅಲ್ಲಿ ಗುಪ್ತನಾಮದಲ್ಲಿ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದರು.
ಕ್ರಾಂತಿಯ ಜ್ವಾಲೆಯನ್ನು ಮೈಯಲ್ಲಿ ಅಡಗಿಸಿಕೊಂಡಿದ್ದ ಖಾನ್‌ಗೆ ಇದು ಸರಿಯೆನಿಸಲಿಲ್ಲ. ಕೆಲವೇ ದಿನಗಳಲ್ಲಿ ಕೆಲಸ ತ್ಯಜಿಸಿ, ತನ್ನ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರಿಸಲು ದೆಹಲಿಗೆ ತಲುಪಿದರು. ದೆಹಲಿಯ ಶಹಜಹಾನ್ಪುರದಲ್ಲಿ ತನಗೆ ಪರಿಚಯವಿದ್ದ ಪಠಾಣ್ ಸ್ನೇಹಿತನನ್ನು ಭೇಟಿಯಾದರು. ಆದರೆ ತನ್ನ ಸ್ನೇಹಿತನೇ ಮಿತ್ರದ್ರೋಹವೆಸಗುತ್ತಾನೆ ಎಂಬುದು ಖಾನ್‌ಗೆ ತಿಳಿಯಲಿಲ್ಲ. 1926ರ ಡಿಸೆಂಬರ್ 7ರಂದು ದೆಹಲಿಯ ಪೊಲೀಸರು ಖಾನ್‌ರನ್ನು, ಅವರ ಗೆಳೆಯನ ಸಹಕಾರದಿಂದ ಬಂಧಿಸಿ, ಫೈಜಾಬಾದ್‌ನ ಜಿಲ್ಲಾ ಕಾರಾಗೃಹದಲ್ಲಿ ಸೆರೆಯಲ್ಲಿಟ್ಟರು.
ಕಾಕೋರಿ ಪಿತೂರಿಯ ವಿಚಾರಣೆಯು ಲಖನೌದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆಯಿತು. ಸದಾ ಒಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದ ಕುತಂತ್ರಿ ಬ್ರಿಟಿಷ್ ಸರಕಾರ, ಬಿಸ್ಮಿ ಮತ್ತು ಖಾನ್‌ರನ್ನೂ ಪ್ರತ್ಯೇಕಿಸಿತು. ಖಾನ್ ಬಹದೂರ್ ತಹಸುಕ್ ಹುಸೈನ್ ಎಂಬ ಬ್ರಿಟಿಷ್ ಸರಕಾರದ ಪೋಲಿಸ್ ಸೂಪರಿಂಟೆಂಡೆಂಟ್, 1927ರ ಸೆಪ್ಟೆಂಬರ್ ತಿಂಗಳಒಂದು ದಿನ, ಖಾನ್ ನಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ, ಬಿಸ್ಮಿಲ್ಲ ವಿರುದ್ಧ ಸಾಕ್ಷಿ ನುಡಿಯಲು ಮತ್ತು ಎಲ್ಲ ಕ್ರಾಂತಿಕಾರಿಗಳಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಿದ.
ಸರಕಾರದೊಂದಿಗೆ ಸಹಕರಿಸಿದರೆ ನಿನ್ನನ್ನು ಬಂಧನದಿಂದ ಬಿಡುಗಡೆಗೊಳಿಸುವುದೇ ಅಲ್ಲದೆ ಸರಕಾರದ ಉದ್ಯೋಗ ಕೊಡಿಸು ತ್ತೇನೆ ಎಂದು ಆಶ್ವಾಸನೆಯನ್ನು ನೀಡಿದ. ಇಂತಹ ಚಾಂಚಲ್ಯಗಳಿಗೆ ಮರುಳಾಗುವ ನಕಲಿ ಕ್ರಾಂತಿಕಾರಿ, ಖಾನ್ ಆಗಿರಲಿಲ್ಲ. ಅವರು ಅಪ್ಪಟ ದೇಶಪ್ರೇಮಿಯಾಗಿದ್ದರು. ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಭಾರತವನ್ನು ವಿಭಜಿಸಿ ಆಳುವ ನಿಮ್ಮ ಪಿತೂರಿ ನಡೆಯುವುದಿಲ್ಲ. ನಾವು ಹಿಂದೂಸ್ಥಾನವನ್ನು ನಿಮ್ಮಿಂದ ಮುಕ್ತಗೊಳಿಸಿ ನಮ್ಮದಾಗಿಸುತ್ತೇವೆ- ಎಂದು ಗುಡುಗಿದರು ಖಾನ.
ನ್ಯಾಯಾಲಯದ ತೀರ್ಪು ಹೊರಬಂತು. ರಾಮ್ ಪ್ರಸಾದ್ ಬಿಸ್ಮಿಲ್ಲಾ, ಅಶಾಕ್ ಉಖಾನ್, ರಾಜೇಂದ್ರ ಲಾಹಿರಿ ಮತ್ತು ಠಾಕೂರ್ ರೋಷನ್ ಸಿಂಗ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಖಾನ್‌ಗೆ ಫೈಜಾಬಾದ್ ಜೈಲಿನಲ್ಲಿ 1927 ರ ಡಿಸೆಂಬರ್ 19 ರಂದು ಗಲ್ಲುಶಿಕ್ಷೆ ವಿಧಿಸಲಾಯಿತು. ಅದೇ ದಿನ ರಾಮ್ ಪ್ರಸಾದ್ ಬಿಸ್ಮಿಲ್‌ಗೆ ಕೂಡ ಗೋರಕ್‌ಪುರದ ಜೈಲಿನಲ್ಲಿ ಗಲ್ಲುಶಿಕ್ಷೆ ವಿಧಿಸಲಾಯಿತು. ಆ ಮೂಲಕ ಜೀವದ ಗೆಳೆಯರಾಗಿದ್ದ ಬಿಸ್ಮಿ ಮತ್ತು ಖಾನ್ ಸಾವಿ ನಲ್ಲೂ ಸಮಾಗಮಗೊಂಡರು.
ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅಜರಾಮರರಾದರು. ದೇಶದ ಈ ಹೆಮ್ಮೆಯ ಪುತ್ರನ ಬಲಿದಾನದ ಚರಿತ್ರೆಯನ್ನು ಹಿಂದಿ ಚಲನಚಿತ್ರ ‘ರಂಗ್ ದೇ ಬಸಂತಿ’ಯಲ್ಲಿ ಚಿತ್ರಿಸಲಾಗಿದೆ. ಅಲ್ಲಿ ಅವರ ಪಾತ್ರವನ್ನು ಕುನಾಲ್ ಕಪೂರ್ ಅಭಿನಯಿಸಿದ್ದಾರೆ. ವೇಣು ಗಂಬಕ್ಕೆ ಕೊರಳೊಡ್ಡುವ ಮುನ್ನ, ನೇಣುಗುಂಬದ ಹೊಸ್ತಿಲಲ್ಲಿ ನಿಂತು ಖಾನ್ ಹೇಳಿದ ಮಾತುಗಳು ಎಂದೆಂದಿಗೂಭಾರತೀಯರಿಗೆ ಸ್ಪೂರ್ತಿದಾಯಕ.
‘ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ನನ್ನ ಒಂದೇ ಒಂದು ಕನಸೆಂದರೆ, ಭಾರತ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆಯಾಗುವವರೆಗೂ ನನ್ನ ಮುಂದಿನ ಯುವಕರು ಇದೇ ರೀತಿ ಹೋರಾಟ ಮುಂದುವರಿಸಿ ದೇಶಕ್ಕಾಗಿ ಜೀವಮುಡಿಪಿಡಲಿ. ನನ್ನೀ ಪ್ರಿಯ ಮಾತೃಭೂಮಿಯು ಖೂಳರಿಂದ ಮುಕ್ತಗೊಂಡು ಎಂದೆಂದಿಗೂ ವೈಭವದಿಂದ ಮೆರೆಯು ವಂತಾಗಲಿ’.
 - 