ಜಗತ್ತಿನ ದೀರ್ಘಾವಧಿಯ ಗಡಿ ವಿವಾದ
ಪ್ರಸ್ತುತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಭಾರತ ಮತ್ತು ಚೀನಾ ಗಡಿ ವಿವಾದವನ್ನು ಜಗತ್ತಿನ ಅತ್ಯಂತ ದೀರ್ಘಾವಧಿಯ ಗಡಿ ವಿವಾದವೆಂದೇ ಗುರುತಿಸಲಾಗುತ್ತಿದೆ.ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದ 1912ರಲ್ಲಿಯೇ ಈ ಗಡಿ ವಿವಾದದ ರಾಜಿ ಒಪ್ಪಂದದ ಬಗೆಗಿನ ವಿಚಾರಗಳ ಯತ್ನಗಳುಪ್ರಾರಂಭವಾಗಿದ್ದವು.
ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದರೆ ಈ ವಿವಾದವು ಅದಕ್ಕಿಂತಲೂ ನೂರು ವರ್ಷಗಳ ಮೊದಲೇ ಇತ್ತು ಎಂಬುದು ತಿಳಿದು ಬರುತ್ತದೆ. ಇಲ್ಲಿ ಪ್ರಮುಖವಾದ ಚರ್ಚಾಸ್ಪದ ವಿಷಯವೆಂದರೆ ಮ್ಯಾಕ್‌ಮೋಹನ್ ಗಡಿರೇಖೆ. ಭಾರತ ಮತ್ತು ಚೀನಾಗಳನ್ನು ಮ್ಯಾಕ್‌ಮೋಹನ್ ರೇಖೆ ಎಂಬ ವಿಶಿಷ್ಟ ಗಡಿರೇಖೆ ವಿಭಜಿಸುತ್ತದೆ. ೧೯೧೪ರಲ್ಲಿ ನಡೆದ ಭಾರತ ಮತ್ತು ಟಿಬೆಟ್ ನಡುವಿನ ಸಿಮ್ಲಾ ಒಪ್ಪಂದದಲ್ಲಿ ಇದನ್ನು ಜಾರಿಗೆ ತರಲಾಗಿತ್ತು.
ಭಾರತ ತನ್ನ ಹಾಗೂ ಚೀನಾದ ವಾಸ್ತವ ಗಡಿರೇಖೆ (ಲೈನ್ ಆಫ್ ಆಕ್ಸುಯಲ್ ಕಂಟ್ರೋಲ್-ಎಲ್‌ಎಸಿ) ಎನ್ನುವ ಮ್ಯಾಕ್‌ಮೋಹನ್ ರೇಖೆಯು ೮೯೦ ಕಿಲೋ ಮೀಟರ್‌ಗಳಷ್ಟು ಉದ್ದವಾಗಿದೆ. ಚೀನಾ ಈ ರೇಖೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಭಾರತ ಮತ್ತು ಚೀನಾಗಳ ಉದ್ವಿಗ್ನ ಪರಿಸ್ಥಿತಿಗೆ ಇದು ಮೂಲ ಕಾರಣವಾಗಿದೆ. ಭಾರತವು ಈ ವಿವಾದಾತ್ಮಕ ಪ್ರದೇಶವು ೪೦೦೦ ಕಿಲೋಮೀಟರ್ ವ್ಯಾಪಿಸಿದೆ ಎಂದರೆ ಚೀನಾ. ಇದು ಕೇವಲ ೨೦೦೦ ಕಿಮೀ ವ್ಯಾಪ್ತಿ ಹೊಂದಿದೆ ಎನ್ನುತ್ತಿದೆ. ಈ ಪ್ರದೇಶದ ಕೆಲವೆಡೆ ೫೦-೧೦೦ ಕಿ. ಮೀವರೆಗಿನ ಖಾಲಿ ಪ್ರದೇಶಗಳ ಮೇಲೂ ಭಾರತ ಚೀನಾ ಸೇನೆ ನಿಗಾವಹಿಸುತ್ತವೆ.
೧೯೯೬ರಲ್ಲಿ ಎರಡೂ ರಾಷ್ಟ್ರಗಳು ಕೈಗೊಂಡ ಶಾಂತಿ ಒಪ್ಪಂದದ ಪ್ರಕಾರ ಎಲ್‌ಎಸಿಯ ಒಳಗಡೆ ಎರಡು ಕಿ.ಮೀ. ತನಕಬಂದೂಕುಗಳಾಗಲೀ, ಸೋಟಕಗಳನ್ನಾಗಲೀ ಈ ಎರಡೂ ದೇಶದ ಪಡೆಗಳು ಬಳಸುವಂತಿಲ್ಲ. ಆದುದರಿಂದ ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಸೈನಿಕರು ಸಣ್ಣಪುಟ್ಟ ಆಯುಧಗಳನ್ನು ಹಿಡಿದುಕೊಂಡು ಹೊಡೆದಾಡುತ್ತಿರುತ್ತಾರೆ. ಎಲ್ಎಸಿಯಾದ್ಯಾಂತ ಶಾಂತಿ ಕಾಪಾಡಲು ಭಾರತ ಮತ್ತು ಚೀನಾದ ಮಧ್ಯೆ ಮೂರು ದಶಕಗಳಲ್ಲಿ ೧೯೯೩, ೧೯೯೬ ಮತ್ತು ೨೦೧೩ರಲ್ಲಿ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಆದರೆ ಚೀನಾ ಈ ಒಪ್ಪಂದಗಳನ್ನು ಉಲ್ಲಂಘನೆ ಮಾಡುತ್ತಲೇ ಬರುತ್ತಿದೆ.
ಶಾಂತಿ ಮಂತ್ರ ಪಠಿಸುತ್ತಾ ಬೆನ್ನಿಗೆ ಇರಿಯುವ ಚೀನಾದ ಕಪಟ ಬುದ್ಧಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹಿಂದೂ ಚೀನಾಬಾಯಿ ಬಾಯಿ ಎಂದು ಕೈಕುಲುಕಿ ಭಾರತದ ನಾಯಕರನ್ನು ತಬ್ಬಿಕೊಂಡ ಚೀನಾ ೧೯೬೨ರಲ್ಲಿ ಭಾರತದ ಮೇಲೆ ದಂಡೆತ್ತಿಬಂದಿತ್ತು. ಇದು ಇತಿಹಾಸವಾದರೂ ಮರೆಯಲು ಸಾಧ್ಯವಿಲ್ಲ. ಭಾರತ ಮತ್ತು ಚೀನಾಗಳು ಶಾಂತಿಯುತ ಸಹಬಾಳ್ವೆಗೆ೧೯೫೪ರಲ್ಲಿ ಪಂಚಶೀಲ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಶಾಂತಿ ಸ್ಥಾಪನೆಗಾಗಿ ಐದು ನೀತಿಗಳನ್ನು ಭಾರತ ಮತ್ತು ಚೀನಾ ಮಧ್ಯೆ ನಿಯೋಜಿಸಲಾಗಿತ್ತು.
ಆ ನಿಟ್ಟಿನಲ್ಲಿ ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾವನ್ನು ಬೆಂಬಲಿಸಿತ್ತು. ಅಲ್ಲಿಯ ತನಕ ಶಾಂತವಾಗಿದ್ದ ಪರಿಸ್ಥಿತಿ ಚೀನಾ ಟಿಬೆಟ್ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದಾಗ ಹದೆಗೆಡತೊಡಗಿತು. ಇದು ಎರಡೂ ರಾಷ್ಟ್ರಗಳ ಮಧ್ಯೆ ಹೊಗೆ  ಯಾಡುವಂತೆ ಮಾಡಿತು. ೧೯೫೦ರಲ್ಲಿ ಚೀನಾವು ಟಿಬೆಟ್ಟನ್ನು ವಶಪಡಿಸಿಕೊಂಡ ಮೇಲೆ ಚೀನಾಕ್ಕೆ ಅರುಣಾಚಲ ಪ್ರದೇಶದ ಮೇಲೆ ದುರಾಸೆ ಹೆಚ್ಚಿತು.
ಟಿಬೆಟ್ಟನ್ನು ಆಕ್ರಮಿಸಿಕೊಂಡಿದ್ದ ಚೀನಾವು ಆ ರಾಷ್ಟ್ರದೊಂದಿಗೆ ೧೭ ಅಂಶಗಳ ಒಪ್ಪಂದಕ್ಕೆ ಸಹಿಹಾಕಿತು. ಟಿಬೆಟ್ಟಿನ ಜನರುತಮ್ಮದೇ ಆದ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಅದರ ರಾಜಕೀಯ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದುಚೀನಾ ಹೇಳಿತ್ತು. ಆದರೆ ಅಲ್ಲ ಅದ್ವಾನವನ್ನೇ ಎಬ್ಬಿಸಿತು. ಈ ಕೆಂಪು ಚೀನಾ ಮಾಡಿದ ಮರೆಯಲಾಗದ ಕಠೋರ ಇತಿಹಾಸ.೧೯೫೯ ಟಿಬೆಟ್ ಕ್ರಾಂತಿಯ ಬಳಿಕ ಭಾರತ ಭೌದ್ಧ ಧರ್ಮ ಗುರು ದಲೈಲಾಮ ಅವರಿಗೆ ಆಶ್ರಯ ನೀಡಿತು. ಇದನ್ನು ಚೀನಾ ಸಹಿಸಿಕೊಳ್ಳಲ್ಲಿಲ್ಲ. ಇದು ಟಿಬೆಟಿಯರನ್ನು ತನ್ನ ವಿರುದ್ಧ ಎತ್ತಿಕಟ್ಟುವ ಭಾರತದ ಸಂಚು ಎಂದು ನಂಬಿದ ಚೀನಾ ಭಾರತವನ್ನು ಟಿಬೆಟ್ ಮೇಲಿನ ತನ್ನ ಹಿಡಿತಕ್ಕೆ ಕಂಠಕ ಎಂದು ಭಾವಿಸತೊಡಗಿತು.
ಆ ಬಳಿಕ ಈ ವಿಚಾರವೂ ೧೯೬೨ರ ಯುದ್ಧಕ್ಕೆ ಒಂದು ಪ್ರಮುಖ ಕಾರಣವಾಯಿತು. ೧೯೬೨ರ ಯುದ್ಧದಲ್ಲಿ ಭಾರತ ಸೋತಾಗ ಅರುಣಾಚಲ ಪ್ರದೇಶದಲ್ಲಿ ಜಟಾಪಟಿ ಜೋರಾಗಿತ್ತು. ಅಲ್ಲಿನ ಪರಿಸ್ಥಿತಿಗಳು ಚೀನೀ ಸೈನಿಕರಿಗೆ ಅನುಕೂಲಕರ ವಾಗಿರಲಿಲ್ಲ. ೨೦೧೭ರಲ್ಲಿ ಚೀನಾ ಭಾರತಕ್ಕೆ ಒಂದು ಆಫರ್ ಮುಂದಿಟ್ಟಿತ್ತು. ಭಾರತವು ತವಾಂಗ್ ಪ್ರದೇಶವನ್ನು ಚೀನಾಕ್ಕೆ ಹಸ್ತಾಂತರಿಸಿದರೆ ತಾನು ಅಕ್ಸಾಯಿಚಿನ್ ಭಾಗವನ್ನು ಭಾರತಕ್ಕೆ ಹಸ್ತಾಂತರಿಸುತ್ತೇನೆ ಎಂದು ಹೇಳಿತು. ಭಾರತವು ಚೀನಾದ ಈ ಆಫರನ್ನು ಖಡಾಖಂಡಿತವಾಗಿ ತಿರಸ್ಕರಿಸಿ ಎರಡೂ ಕೂಡಾ ಭಾರತದ ಭಾಗಗಳು ಇದರಲ್ಲಿ ಚೀನಾಕ್ಕೆ ಹಸ್ತಾಂತರಿಸು ವುದೇನಿದೆ? ಎಂದು ಖಡಕ್ಕಾಗಿ ಪ್ರತ್ಯುತ್ತರಿಸಿತ್ತು.
ಪದೇಪದೆ ಗಡಿ ತಂಟೆ ತೆಗೆಯುವ ಚೀನಾ ಇದೀಗ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಮತ್ತೆ ಕಾಲು ಕೆದಕಿ ಜಗಳಕ್ಕೆ ನಿಂತಿದೆ. ಈ ಟೂರಿಸಂ ಜಾಗದ ಮೇಲೆ ಚೀನಾದ ಕಣ್ಣು ಬೀಳುತ್ತಲೇ ಇರುತ್ತದೆ. ತವಾಂಗ್‌ಗೆ ಭಾರತದ ಯಾವುದೇ ಕೇಂದ್ರ ಸಚಿವರು, ಪ್ರಭಾವಿ ನಾಯಕರು ಭೇಟಿ ನೀಡುತ್ತಾರೆ ಎಂದಾಗಲೆಲ್ಲಾ ಚೀನಾ ಇಲ್ಲಿನ ಗಡಿರೇಖೆಯಲ್ಲಿ ತಂಟೆಎಬ್ಬಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ ಚೀನಾದ ಪ್ರಸಕ್ತ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ಸದ್ದಿಲ್ಲದೆ ತವಾಂಗ್ ಸನಿಹಕ್ಕೆ ಭೇಟಿನೀಡಿದ್ದನು.
ವಿಸ್ತರಣಾವಾದಿ ಚೀನವು ಪೂರ್ವ ಲಡಾಖ್‌ನ ಗಾಲ್ವಾನ್ ಬಳಿಕ ಅರುಣಾಚಲ ಪ್ರದೇಶದಲ್ಲಿ ಪುಂಡಾಟಿಕೆ ಶುರು ಮಾಡಿದೆ. ಚೀನಾ ಅಧ್ಯಕ್ಷ ಕ್ಸಿeನ್‌ಸಿಂಗ್ ಮೂರನೇ ಅವಧಿಗೆ ಆರಿಸಿ ಬಂದ ಒಂದೇ ತಿಂಗಳೊಳಗೆ ಈ ವಿದ್ಯಾಮಾನ ನಡೆದಿರುವುದು ಹಿಂದಿನ ರಹಸ್ಯವಾದ ಕಾರ್ಯಯೋಜನೆಯು ಭಾರತದ ಪಾಲಿಗೆ ಯೋಚಿಸಬೇಕಾದ ಸಂಗತಿಯಾಗಿದೆ. ತವಾಂಗ್‌ನ್ನು ಬುಡಕಟ್ಟು ಜನಾಂಗಗಳ ಕಥೆಗಾರನೊಬ್ಬ ‘ಸ್ವರ್ಗವೆಂದರೆ ತವಾಂಗ್’ ಎಂದು ಬಣ್ಣಿಸಿದ್ದನಂತೆ.
ಅಲ್ಲಿಗೆ ಭೇಟಿ ನೀಡಿದವರು ಈ ಪ್ರದೇಶವನ್ನು ‘ಏಜಿbbಛ್ಞಿ PZZbಜಿoಛಿ’ ಎಂದು ಉದ್ಗರಿಸುವುದು ಸಾಮಾನ್ಯ. ಹಿಮಚ್ಚಾದಿತ ನೀಲಿ ಶಿಖರಗಳ ನಡುವಿನ ಈ ಪಟ್ಟಣ ಭಾರತದ ಹೆಮ್ಮೆಯ ಪ್ರವಾಸಿ ತಾಣ. ಒಮ್ಮೆ ತವಾಂಗನ್ನು ಸುತ್ತಾಡಿದರೆ ಮನಮೋಹಕ, ರಮಣೀಯ ಸುಂದರ, ಮೈಮನಸೂರೆಗೊಳ್ಳುವ ನಿಸರ್ಗದ ಸ್ವಾಭಾವಿಕ ದೃಶ್ಯಗಳು, ಸುತ್ತಮುತ್ತಲಿನ ದೇವಾಲಯಗಳು, ಸ್ತೂಪಗಳು, ನದಿ ಸರೋವರಗಳು, ಹಿಮಚ್ಚಾದಿತ ಪರ್ವತಮೂಲೆಗಳು ಒಮ್ಮೆ ನೋಡಿದರೆ ಪುನಃ ಪುನಃ ನೋಡಬೇಕೆಂದೆನಿಸದೆ” ಇರುವುದಿಲ್ಲ.
ನೆನಪಿಸಿಕೊಂಡಾಗ ಮನಸೂರೆಗೊಂಡ ದೃಶ್ಯಗಳು ಮನಃಪಟಲದಲ್ಲಿ ಹಾದುಹೋಗುತ್ತಿರುತ್ತವೆ. ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹರಡಿಕೊಂಡಿರುವ ಈ ಪಟ್ಟಣದ ಸುತ್ತಲೂ ಹಿಮಾವೃತ ನೀಲಿ ಶಿಖರಗಳು ಮುತ್ತಿಗೆ ಹಾಕಿ ನಿಂತಿವೆ. ತವಾಂಗ್‌ನ ರಮಣೀಯ ದೃಶ್ಯಗಳನ್ನು ನೋಡಬೇಕೆಂದಾದರೆ ಶಿಲ್ಲಾಂಗ್‌ನಿಂದ ಗುವಾಹಟಿ ಮಾರ್ಗವಾಗಿ ಬ್ರಹ್ಮಪುತ್ರ ನದಿಯನ್ನು ದಾಟಿ ೬೫೦ ಕಿ.ಮೀ ದೂರದ ಭಯಂಕರ ಬೀಭತ್ಸ್ಯ, ದುರ್ಗಮ ಪರ್ವತಗಳ ರಸ್ತೆಯಲ್ಲಿ ಪ್ರಯಾಣ ಬೆಳೆಸಿದರೆ ಈ ಪರಿಸರ ಮತ್ತು ಪ್ರವಾಸಿ ತಾಣವು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ನೆನಪನ್ನು ಸೃಷ್ಠಿಸದೇ ಇರಲಾರದು.
ಭಾರತ ದೇಶಕ್ಕೆ ಮೊದಲು ಅರುಣೋದಯವಾಗುವುದು ಅರುಣಾಚಲದಿಂದಲೇ ಆಗಿದೆ. ಬೆಳಗ್ಗೆ ಹೆಚ್ಚುಕಮ್ಮಿ ೪ ಘಂಟೆಗೆ ಅರುಣ ಕಿರಣಗಳು ಮೊದಲು ಬೀಳುವುದು ಈಶಾನ್ಯ ಭಾರತದ ಪ್ರದೇಶಗಳ ಮೇಲೆಯೇ. ಚೀನಾದ ಆಂತರಿಕ ಉದ್ವಿಗ್ನತೆ ಯಿಂದ ಅದು ಭಾರತದ ಸೇನೆಯೊಡನೆ ಅರುಣಾಚಲ ಪ್ರದೇಶದ ತವಾಂಗ್ ಪ್ರಾಂತ್ಯದಲ್ಲಿ ಕಾಲು ಕೆದರಿ ಜಗಳಕ್ಕೆ ಬರುತ್ತದೆ ಎನ್ನಲಾಗಿದೆ. ಚೀನಾದ ಆರ್ಥಿಕತೆ ಕುಸಿತಕ್ಕೆ ಒಳಗಾಗಿದೆ. ಚೀನಾ ಜನತೆ ಇದಕ್ಕೆ ಕ್ಸಿಜನ್ ಸಿಂಗ್ ವೈಫಲ್ಯ ಕಾರಣವೆಂದು ಆರೋಪಿಸುತ್ತಿದ್ದಾರೆ ಮತ್ತು ಜಿನ್‌ಪಿಂಗ್ ರಾಜೀನಾಮೆಗೆ ಜನತೆ ಅಗ್ರಹಿಸುತ್ತಿದ್ದಾರೆ.
ಇದೀಗ ಇಡೀ ಚೀನಾದಲ್ಲಿ ಕರೋನಾ ಹಾಸುಹೊಕ್ಕಾಗಿ ಮಲಗಿದೆ. ಸೋಂಕನ್ನು ನಿಯಂತ್ರಿಸಿ ಪ್ರಜೆಗಳನ್ನು ಕಾಪಾಡುವ ಉಸಾಬರಿ ಬಿಟ್ಟು ಅರುಣಾಚಲ ಪ್ರದೇಶದಲ್ಲಿ ತಮ್ಮ ಸೇನೆಯನ್ನು ಛೂ ಬಿಟ್ಟು ಭಾರತದ ಅವಿಭಾಜ್ಯ ಅಂಗವನ್ನು ಮತ್ತೊಮ್ಮೆ ಪುನಃ ತನ್ನದೆಂದು ಪ್ರತಿಪಾದಿಸಲು ಹೊರಟಿದೆ. ಈ ಚೀನಾ ಭಾರತದೊಂದಿಗೆ ಮಾತ್ರವೇ ಗಡಿತಂಟೆ ಹೊಂದಿಲ್ಲ. ಜಗತ್ತಿನ ೧೩ ದೇಶಗಳೊಂದಿಗೆ ಗಡಿವಿವಾದ ಮತ್ತಿತರ ಸಮಸ್ಯೆಗಳನ್ನು ಹೊಂದಿದೆ.
ಫಿಲಿಫೈನ್, ವಿಯಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪೂರ್, ಬ್ರೂನಿ, ನೇಪಾಳ, ಭೂತಾನ್, ಲಾವೋಸ್, ತೈವಾನ್‌ಗಳೊಂದಿಗೆ ಒಂದಿಲ್ಲೊಂದು ತಕರಾರಿದೆ. ಚೀನಾಕ್ಕೆ ಪ್ರತ್ಯಕ್ಷವಾಗಿ ಯಾವುದೇ ಮಿತ್ರ ರಾಷ್ಟ್ರಗಳಿಲ್ಲ. ಚೀನಾ ನಂಬಲು ಯೋಗ್ಯವಲ್ಲದ ರಾಷ್ಟ್ರವೆಂಬುದು ಜಗಜ್ಜಾಹಿರವಾಗಿದೆ. ಚೀನವನ್ನು ಯಾವ ರಾಷ್ಟ್ರವೂಗೌರವಯುತವಾಗಿ ಕಾಣುತ್ತಿಲ್ಲ. ಚೀನಕ್ಕೆ ಅಪರಿಮಿತ ಆರ್ಥಿಕ ಶಕ್ತಿಯನ್ನು ನೀಡಿ ಉತ್ಪದನಾ ಕಾರ್ಖಾನೆಯನ್ನಾಗಿ ಮಾಡಿದಪಾಶ್ಚಿಮಾತ್ಯ ರಾಷ್ಟ್ರಗಳೇ ತಪ್ಪಿ ಬಿದ್ದ ತಪ್ಪಿತಸ್ಥರು.
ಚೀನಾದ ಹಲವಾರು ನಿರ್ಲಕ್ಷ್ಯತನ, ಉಡಾಫೆ, ಧೀಮಾಕು, ಕುಕೃತ್ಯ, ದರ್ಪಗಳ ಬಗ್ಗೆ ವಿಶ್ವಸಂಸ್ಥೆ ಕೈಕಟ್ಟಿ ಕುಳಿತಂತೆ ಭಾಸವಾಗುತ್ತಿದೆ. ಕಮ್ಯುನಿಷ್ಟ್ ಚೀನಾ ದೊಡ್ಡ ಬಂಡವಾಳಶಾಹಿ ರಾಷ್ಟ್ರ. ಭಾರತವು ೧೯೬೨ರ ಭಾರತವಲ್ಲವೆಂಬುದನ್ನು ಚೀನಾ ಮನನ ಮಾಡಿಕೊಳ್ಳಬೇಕು. ಭಾರತವು ಯಾವತ್ತೂ ಶಾಂತಿಯನ್ನು ಬಯಸುತ್ತದೆ. ಶಾಂತಿಸೌಹಾರ್ಧ ಮತ್ತು ವಿಶ್ವಸೋದರತ್ವವನ್ನು ಕಾಪಾಡಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಚೀನಾ ಎಸಗುತ್ತಿರುವ ತಂಟೆ, ಕಿರಿಕ್, ಕುಕೃತ್ಯಗಳಿಗೆ ಪ್ರತಿ ಸವಲೆಸಗಲು ಸರ್ವಶಕ್ತವಾಗಿದೆ. ಭಾರತವನ್ನು ಚೀನಾ ಇನ್ನು ಕೆಣಕಿದರೆ ತಕ್ಕ ಶಾಸ್ತಿಯನ್ನು ಅನುಭವಿಸದೇ ಇರುವುದಿಲ್ಲ.