ಕ್ಲರ್ಕ್‌ ಆಗಿದ್ದ ಅವರು, ಗಣಿತವನ್ನೇ ಬದಲಿಸಿದರು !
ಬುಲೆಟ್ ಪ್ರೂಫ್
ವಿನಯ್ ಖಾನ್
ಈ ಮ್ಯಾಥ್ಸ್ ಅನ್ನೋ ಸಬ್ಜೆಕ್ಟ್ ಅನ್ನು ಯಾರ್ ಗುರು ಕಂಡುಹಿಡಿದಿದ್ದು, ಎಷ್ಟು ಓದಿದ್ರೂ ಕಾದಿರೋ ಹಂಚಿನ ಮೇಲೆ ನೀರ್ ಹಾಕ್ದಂಗೆ ಎಲ್ಲ ಮರೆತು ಹೋಗುತ್ತೆ ಅನ್ನೋದು ಎಲ್ಲರೂ ಕೇಳಿರುವ ಸಹಜವಾದ ವಿಚಾರ.
ನಮ್ಮಲ್ಲಿ ಬಹಳ ಜನಕ್ಕೆ ಗಣಿತ ಅನ್ನೋದೇ ಕಷ್ಟದ ಮೂಟೆಥರ. ಆದರೆ, ಭಾರತದ ಒಬ್ಬ ಸಾಮಾನ್ಯ ಕ್ಲರ್ಕ್ ಗಣಿತವನ್ನು, ಅದರ ಚಹರೆಯನ್ನೇ ಬದಲಿಸುತ್ತಾನೆ ಎಂದರೆ ಅದು ಆಶ್ಚರ್ಯವೇ! ಶ್ರೀನಿವಾಸ್ ರಾಮಾನುಜನ್!
1897ರಲ್ಲಿ ರಾಮಾನು ಜನ್ ಅವರಿಗೆ 10 ವರ್ಷ ತಮ್ಮ ಪ್ರೈಮರಿ ಶಾಲೆಯಲ್ಲಿ ಅವರ ಮೇಷ್ಟ್ರು ಪಾಠ ಹೇಳುತ್ತ, ಪ್ರತಿಯೊಂದು ಸಂಖ್ಯೆಯೂ ಅದೇ ಸಂಖ್ಯೆಯಿಂದ ಭಾಗವಾ ದಾಗ ಅದರಿಂದ ಬರುವ ಉತ್ತರ 1 ಅಂತ ಹೇಳಿದಾಗ, ಶಾಲೆಯ ಬ್ರಿಲಿಯಂಟ್ ವಿದ್ಯಾರ್ಥಿ ಯಾಗಿದ್ದ ರಾಮಾನುಜನ್ ಅವರಿಗೆ ಬಂದ ಪ್ರಶ್ನೆ, ಝೀರೋದಿಂದ ಝೀರೊವನ್ನು ಭಾಗಿಸಿದಾಗಲೂ ಉತ್ತರ 1 ಬರುತ್ತಾ? ಆ ಪ್ರಶ್ನೆ ಕೇಳುವಾಗಲೇ ರಾಮಾನುಜನ್ ಅವರಿಗೆ ಗಣಿತದಲ್ಲಿ ವಿಪರಿಮಿತ ಆಸಕ್ತಿ ಅವರ ಮೇಷ್ಟ್ರಿಗೆ ಕಂಡುಬಂದಿತ್ತು.
ಅದಾದ ಕೆಲವು ಕೆಲವು ದಿನಗಳ ನಂತರ ಅವರು ‘ಲೋನೀಸ್ ಟ್ರಿಗ್ನೋಮೆಟ್ರಿ’ ಪುಸ್ತಕ ವನ್ನು ಅವರ ಪಕ್ಕದ ಮನೆಯ ಬಿಎ ವಿದ್ಯಾರ್ಥಿಯಿಂದ ಪಡೆದು ಯಾರದೇ ಸಹಾಯ ವಿಲ್ಲದೆ ಅದರ ಸಮಸ್ಯೆಗಳೆಲ್ಲವನ್ನೂ ಬಿಡಿಸಿದ್ದರು, ಮತ್ತೇ 1903 ರಲ್ಲಿ ಅವರ ಸ್ನೇಹಿತನ ಹತ್ತಿರ “         ’ಅನ್ನು ತೆಗೆದುಕೋಂಡು, ಅದರಲ್ಲಿನ ಅಲ್ಜೆಬ್ರಾ, ಜೋಮೆಟ್ರಿ, ಟ್ರಿಗನೊಮೆಟ್ರಿ ಕ್ಯಾಲ್ಕುಲಸ್ ಬಗೆಗಿನ 6165 ಕ್ಕಿಂತ ಹಚ್ಚು ಥೇರಂಗಳು ರಾಮಾನುಜಂ ಅವರಲ್ಲಿನ ಗಣಿತದ ಬಗೆಗಿನ ಕುತೂಹಲವನ್ನು ಮತ್ತಷ್ಟೂ ಸ್ಪುರಿಸುತ್ತು.
ಇನ್ನಷ್ಟು ಗಣಿತದ ಒಳಗೆ ಇಳಿಯಲು () ಬೇಡುತ್ತಿತ್ತು. ಅವರ ಗಣಿತದ ಆಸಕ್ತಿ, ಬೇರೆ ವಿಷಯಗಳ ಮೇಲಿನ ಒಲವನ್ನು ಕಡಿಮೆ ಮಾಡಿತ್ತು. ಗಣಿತವೂ ಅವರಿಗೆ ಆಬ್ಸೆಷನ್ ಆಗಿಯೇ ಪರಿಣಿಮಿಸಿತ್ತು. ಯಾವಾಗಲೂ ಗಣಿತದ ಲೆಕ್ಕಗಳನ್ನು ಬಿಡಿಸುವುದೇ ಅವರ ಕೆಲಸ, ಶಾಲೆ, ಕಾಲೇಜುಗಳಲ್ಲೂ ಹಾಗೆ, ಬೇರೆ ವಿಷಯಗಳ ಬಗ್ಗೆ ಪಾಠ ನಡೆಯುತ್ತಿರುವಾಗಲೂ ಇವರ ಕೈ ಲೆಕ್ಕ ಬಿಡಿಸುವು ದರಲ್ಲೇ ನಿರತವಾಗಿರುತ್ತಿತ್ತು.
ಊಟದ ಮೇಲೂ ಗಮನವಿರುತ್ತಿರಲಿಲ್ಲ, ಅವರ ತಾಯಿಯ ಕೈತುತ್ತೇ ಅವರ ಊಟ. ಗಣಿತದ ಲೆಕ್ಕಗಳೇ ಅವರ ಸರ್ವಸ್ವ, ಗಣಿತದ ಪುಸ್ತಕಗಳೇ ಅವರ ಆಸ್ತಿ. ತಮ್ಮ ಕಾಲೇಜು ಶಿಕ್ಷಣದಲ್ಲಿ ಅವರಿಂದ ಬೇರೆ ವಿಷಯಗಳನ್ನು ಪಾಸ್ ಮಾಡಲು ಆಗಿರಲಿಲ್ಲ, ನಾವೆಲ್ಲ ಬಿಡಿ, ಎಷ್ಟೋ ಜನ ಗಣಿತ ಒಂದರಲ್ಲೇ ನಪಾಸ್!
೧೯೦೪ರಲ್ಲಿ ಕುಂಬಕೋಣಂನಲ್ಲಿ ಸ್ಕಾಲರ್‌ಶಿಪ್ ಪಡೆದು ಆರ್ಟ್ಸ್ ಸೇರುತ್ತಾರೆ. ಆದರೆ, ಬರೀ ಗಣಿತ ಪಾಸ್ ಆಗಿದ್ದ ಅವರಿಗೆ ಸ್ಕಾಲರ್‌ಶಿಪ್ ಕೂಡ ನಿಂತು ಹೋಗಿ, ಸ್ವಲ್ಪ ದಿನ ವಿಶಾಖಪಟ್ಟಣಂಗೆ ಹೋಗಿದ್ದಕ್ಕೆ, ಅಟ್ಟೆಂಡೆನ್ಸ್ ಕೂಡ ಸಿಗಲಿಲ್ಲ, ಡಿಗ್ರೀ ಕೂಡ! ಮತ್ತೆ ಮದ್ರಾಸಿನ ಪಚೈಯಪ್ಪ ಕಾಲೇಜು ಸೇರಿದ ಮೇಲೂ ಅವರಿಗೆ ಆದದ್ದು ಅದೇ. ಎರಡು ಸಲ ಎಫ್.ಎ ಎಕ್ಸಾಂ ಅನ್ನು ಬರೆದರೂ ಫೇಲ್!
1909 ರಲ್ಲಿ ಜಾನಕಿ ಜತೆ ಅವರ ಮದುವೆ ಆದ ಮೇಲೆ ಜೀವನವನ್ನು ನಡೆಸಲೇಬೇಕು. ಬರೋದು ಬರೀ ಮ್ಯಾಥ್ಸ್ . ಉಳಿದಿದ್ದರಲ್ಲಿ ಸೊನ್ನೆ. ಸರಿಯಾದ ಡಿಗ್ರೀ ಬೇರೆ ಇಲ್ಲ. ಮತ್ತೊಂದು ಕಡೆ ಬಡತನ, ತಮ್ಮ ಮಟ್ಟದ () ಕೆಲಸ ಸಿಗದಿದ್ದರೂ, ಸಿಕ್ಕ ಕೆಲಸವನ್ನು ಮಾಡಲೇಬೇಕಾದ ದರ್ದು. ಆಗ 1909ರಲ್ಲಿ ತಿರುಕೊಯಿಲುರ್‌ನ ಆಗಿನ ಡಿಸಿ ಹಾಗೂ ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿಯ ಸಂಸ್ಥಾಪಕ ಆಗಿದ್ದ ವಿ.ರಾಮಸ್ವಾಮಿ ಅಯ್ಯರ್ ಅವರನ್ನು ಭೇಟಿ ಆಗಿ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಸಾಧಾರಣ ಕ್ಲರ್ಕ್ ಕೆಲಸ ಪಡೆದುಕೊಂಡ ರಾಮಾನುಜನ್ ಅವರಿಗೆ ಆಗಲೂ ಗಣಿತದ ಮೇಲಿನ ಇಂಟ್ರೆಸ್ಟ್ ಸ್ವಲ್ಪವೂ ಕಡಿಮೆ ಆಗಲಿಲ್ಲ.
ಅವರು ಕಂಡು ಹಿಡಿದಿದ್ದ ಥೇರಂಗಳೆಲ್ಲವೂ ಭಾರತದ ಹಿರಿಯ ಗಣಿತಶಾಸಜ್ಞರಿಗೂ ಸುಲಭವಾಗಿ ಜೀರ್ಣವಾಗುತ್ತಿರಲಿಲ್ಲ, ಅವೆಲ್ಲವೂ ಅವರಿಗೂ ಸವಾಲಾಗಿದ್ದವು. ಆ ವಿಷಯಗಳೆಲ್ಲವನ್ನೂ ತಿಳಿದಿದ್ದ ಅವರ ಸಹೋದ್ಯೋಗಿಗಳೆಲ್ಲ ಸೇರಿ, ರಾಮಾನುಜಂ ಅವರಿಗೆ ಅವರು ಬಿಡಿಸಿದ್ದ ಥೇರಂಗಳೆಲ್ಲವನ್ನೂ ವಿಶ್ವದ ಅತ್ಯುನ್ನತ ಗಣಿತಶಾಸ್ತ್ರಜ್ಞರಾಗಿದ್ದ ಎಚ್.ಎಫ್.ಬೇಕ್ಸ್, ಇ. ಡಬ್ಲೂ. ಹಾಬ್ಸನ್ ಮತ್ತು ಜಿ. ಎಚ್. ಹಾರ್ಡಿ ಅವರಿಗೆ ಕಳಿಸಲು ಹೇಳುತ್ತಾರೆ.
ಆದರೆ, ಮೊದಲ ಇಬ್ಬರು ರಾಮಾನುಜಂ ಅವರ ಪೋಸ್ಟ್ ಅನ್ನು ತೆಗೆದು ನೋಡುವುದಕ್ಕೇ ಹೋಗಲಿಲ್ಲ, ಏನಿದೆ ಅಂತ ನೋಡಿದ್ದು ಜಿ. ಎಚ್. ಹಾರ್ಡಿ ಒಬ್ಬರೇ. ಅದನ್ನು ನೋಡುತ್ತಾ ಹೋದಾಗ ಹಾರ್ಡಿಗೆ ಆಶ್ಚರ್ಯ! ರಾಮಾನುಜಂ ಅವರು ಹಾರ್ಡಿಯ ಕೆಲವೊಂದು ಥೇರಂ ಅನ್ನೇತಾರ್ತಿಕವಾಗಿ ತಪ್ಪು ( ) ಎಂದು ವಾದಿಸಿದ್ದರು. ಆಗ ಹಾರ್ಡಿ ಯಿಂದ ರಾಮಾನುಜಂಗೆ ಬಂದ ಪೋಸ್ಟ್ ಅಲ್ಲಿ ಇದ್ದದ್ದು ‘ಇಂಗ್ಲೆಂಡ್‌ಗೆ ಬಂದು ನನ್ನ ಜೊತೆ ಕೆಲ್ಸ ಮಾಡ್ತೀಯಾ?’ ಅಂತ. ಹಾರ್ಡಿ, ರಾಮಾನುಜಂ ಅವರನ್ನು ಕರೆಯುವಾಗ ತಮ್ಮ ಸಹೋದ್ಯೋಗಿ ಗಳ ಬಳಿಗೆ ಹೇಳಿದ್ದು ‘eಛಿ ಜಿ bಛ್ಛಿಛಿZಠಿಛಿ ಞಛಿ!’
ಕೆಲವೊಂದು ವಿಷಯಗಳಲ್ಲಿ ಯಾರಾದರೂ ಸವಾಲು ಹಾಕಿ ತಮ್ಮನ್ನು ಸೋಲಿಸಿದ್ದರೆ, ಅದನ್ನು ಯಾರೂ ಸೋಲು ಅಂತತಿಳಿಯುತ್ತಿರಲಿಲ್ಲ. ಅಲ್ಲಿ ಆಗುತ್ತಿದ್ದುದು ವಿಷಯದ ಗೆಲುವು ಅಷ್ಟೇ. ಗಣಿತ, ವಿಜ್ಞಾನಗಳಿಲ್ಲವೂ ಪ್ರೂಫ್ ಮತ್ತು ಲಾಜಿಕ್‌ಗಳಮೇಲೆಯೇ ನಿಂತಿದ್ದು, ವಿಜ್ಞಾನಿಗಳಿಗೆಲ್ಲ ವಿಷಯವನ್ನು ಮತ್ತಷ್ಟೂ ಸುಲಭ ಮಾಡಬೇಕಾಗಿತ್ತು ಹೊರತು, ಸೋಲು ಗೆಲುವಿನ ಪ್ರಶ್ನೆಗಳೇ ಹುಟ್ಟುತ್ತಿರಲಿಲ್ಲ.
1914ರಲ್ಲಿ ಇಂಗ್ಲೆಂಡ್‌ಗೆ ಹೋದ ರಾಮಾನುಜಂ, ಹಾರ್ಡಿಯೊಂದಿಗೆ ಹಲವಾರು ಸಂಶೋಧನೆಗಳನ್ನು ಕೈಗೊಂಡು, ಇನಿನಿಟಿ ಬಗ್ಗೆ ಇನ್ನಷ್ಟು ತಿಳಿಯ ಹೊರಟಾಗ ಶುರುವಾಗಿದ್ದು ವಿಶ್ವ ಯುದ್ಧ! ಆಗ ರಾಮಾನುಜಂರವರ ಇನಿನಿಟಿ, ನಂಬರ‍್ಸ್, ಥೇರಂಗಳ ಬಗ್ಗೆ ಯಾರಿಗೂ ತಲೆಕೆಡಿಸಿಕೊಳ್ಳುವುದೇ ಬೇಕಾಗಿರಲಿಲ್ಲ, ಎಲ್ಲರಿಗೂ ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ಬಹಳ ಮುಖ್ಯ. ಅದೆಲ್ಲರ ಮುಂದೆ ರಾಮಾನುಜಂ ಯೂಸ್‌ಲೆಸ್!
ಅವರ ಯಾವುದೇ ಡಿಗ್ರೀ ಇರದೇ, ಸಾಂಪ್ರದಾಯಿಕತೆಯನ್ನು ಬಿಟ್ಟು ತಮ್ಮದೇ ರೀತಿಯಲ್ಲಿ ಪ್ರಾಬ್ಲಮ್ ಸಾಲ್ವ್ ಮಾಡುವುದು, ಎಲ್ಲವನ್ನೂ ತಮ್ಮ ಮನಸ್ಸಿನಲ್ಲಿಯೇ ಲೆಕ್ಕ ಮಾಡಿಕೊಳ್ಳುತ್ತಿದ್ದ ರಾಮಾನುಜಂರವರ ಥೇರಂಗಳೂ ಬಾಕಿ ಜನರಿಗೆ ತಿಳಿಯುತ್ತಲೂ ಇರಲಿಲ್ಲ. ಆಗ ರಾಮಾನುಜಂ ಅವರನ್ನು ಎಲ್ಲರೂ ಕಡೆಗಣಿಸಲು ಶುರು ಮಾಡಿದರು, ಇತ್ತ ರಾಮಾನುಜಂ ಅವರಿಗೂ ಕಾಯಿಲೆ ಗಳ ಮೇಲೆ ಕಾಯಿಲೆ.
ಅವರು ಹುಟ್ಟಿದ್ದ ಸಮಯವೇ ಹಾಗಿತ್ತೇನೋ?! ಭಾರತದಲ್ಲಿ ಆಧುನಿಕ ಶಿಕ್ಷಣ ಇನ್ನೂ ಬೆಳೆದಿರಲಿಲ್ಲ. ಭಾರತೀಯರೇನಾದರೂ ಬರೀ ಒಂದೇ ವಿಷಯದ ಮೇಲೆ ಸಂಶೋಧನೆ ಮಾಡಲು ಮುಂದಾದರೆ ಹಣ ಸಹಾಯವಿರಲಿಲ್ಲ. (ಈಗಲೂ ಅಷ್ಟೊಂದು ಇಲ್ಲ, ಅದು ಬೇರೆ ಮಾತು ಬಿಡಿ) ಎಲ್ಲ ಕಷ್ಟಗಳ ನಡುವೆ ೧೯೨೦ ಏಪ್ರಿಲ್ ೨೩ ರಂದು ರಾಮಾನುಜಂ ಅವರು ಗಣಿತ ಪುಸ್ತಕಗಳನ್ನೆಲ್ಲ ಮುಚ್ಚಿ, ಇಹಲೋಕಕ್ಕೆ ತ್ಯಜಿಸಿಬಿಟ್ಟರು.
ಹಾಗೆಲ್ಲ ಇದ್ದರೂ ರಾಮಾನುಜಂ ಅವರು, ಇನ್-ನೈಟ್ ‘1729’ ರಾಮಾನುಜನ್ ನಂಬರ್… ಹಾಗೆಯೇ ಕೆಲ ವರ್ಷಗಳ ಹಿಂದೆ ನೋಬೆಲ್ ಪಡೆದ ಡೇವಿಡ್ ಗ್ರಾಸ್ ಅವರು ತಮ್ಮ ಸಂಶೋಧನೆಯಲ್ಲಿ ಬಳಸಿದ ಎಷ್ಟೋ ಇಕ್ವೇಷನ್‌ಗಳನ್ನು ರಾಮಾನುಜಂ ಅವರೇ ಕಂಡುಹಿಡಿದಿದ್ದು. ಇದ್ದಂತಹ ಹಲವು ಹಳೆಯ ಮೆಥಡ್‌ಗಳನ್ನು ಹೊಸದಾದ ರೀತಿಯಲ್ಲಿ ಬಳಸುವುದನ್ನು ಹೇಳಿ ಕೊಟ್ಟರು.
ಅವರು ಬದುಕಿದ್ದು 32 ವರ್ಷಗಳಾದರೂ ಮಾಡಿದ ಸಾಧನೆಗೆ ಇಂದಿಗೂ ಅವರು ಗಣಿತ ಲೋಕದ ಧ್ರುವತಾರೆಯೇ. ಅವರುಇನ್ನಷ್ಟು ವರ್ಷ ಬದುಕಿದ್ದರೆ, ಏನೇನೆಲ್ಲ ಅನ್ವೇಷಣೆ ಮಾಡಬಹುದಿತ್ತೆನ್ನುವುದೂ ಊಹಿಸಲು ಸಾಧ್ಯವಾಗುವುದಿಲ್ಲ. ಅವರು ಹುಟ್ಟಿದ್ದೇ ಗಣಿತಕ್ಕೋಸ್ಕರ, ಅವರೇ ಹೇಳುವ ಹಾಗೆ ಅವರ ಜಾಣ್ಮೆಯೂ ಲಕ್ಷ್ಮೀ ದೇವರ ವರಪ್ರಸಾದವೇ. ಅವರನ್ನು ನೆನಪು ಮಾಡಲು ಇಂದಿಗೆ ಅವರು ಜನಿಸಿ 135 ವರ್ಷಗಳಾದವು.        !
 - 