ರಾಷ್ಟ್ರ ರಾಜಕಾರಣದ ಅಜಾತ ಶತ್ರು ವಾಜಪೇಯಿ
ತನ್ನಿಮಿತ್ತ
ಡಾ.ಮಲ್ಲಿಕಾರ್ಜುನ ಬಾಳಿಕಾಯಿ
ಮೋತ್ ಕಿ ಉಮ್ರ ಕ್ಯಾ?ದೋ ಫಲ್ ಭಿ ನಹಿ, ಜಿಂದಗಿ ಸಿಲ್ ಸಿಲಾ,ಆಜ್ ಕಲ್ ಕೀ ನಹಿ, ಮೇ ಜೀ ಭರ್ ಜಿಯಾ,ಮೇ ಮನ್ ಭರ್ ಮರೂ, ಲೌಟ್ ಕರ್ ಆವುಂಗಾ, ಕುಚ್ ಸೆ ಕ್ಯೂಂ ಡರು? ಹೀಗೆ ಕವಿತೆಯ ಸಾಲುಗಳನ್ನು ಬರೀ ತೋರಿಕೆಗೆ ಮಾತ್ರವೇ ಬರೆಯದೆ ನುಡಿದಿದ್ದನ್ನೇ ನಡೆದು, ಅದಕ್ಕಾಗಿಯೇ ತುಡಿದು ದುಡಿದವರು.
ಐವತ್ತು ವರ್ಷಗಳ ಕಾಲ ಭಾರತದ ರಾಜನೈತಿಕ ಕ್ಷೇತ್ರದಲ್ಲಿ ಪ್ರಕಾಶಮಾನ ವಾಗಿ ಮಿನುಗಿ ಮರೆಯಾದರೂ ಮರೆಯಲಾಗದ ಧೃವತಾರೆ. ಮೂರ್ನಾಲ್ಕು ತಲೆಮಾರುಗಳಿಗೆ ಪ್ರತ್ಯಕ್ಷವಾಗಿ ಬೆಳಕು  ನೀಡಿ, ಮುಂದೆ ಅದೇ ಧ್ಯೇಯ ನಿಷ್ಠೆಯ ಪಥದಲ್ಲಿ ಹಲವಾರು ಪೀಳಿಗೆಗಳನ್ನು ನಡೆಸಲು ತನ್ನನ್ನೇ ಸುಟ್ಟುಕೊಂಡು ಬೆಳಗಿದ ದಾರಿದೀಪ. ಸುಮ್ಮನೆ ಸತ್ತು ಸರಿದುಹೋದವರಸಾಲಿಗೆ ಸೇರದೆ, ಸತ್ತ ನಂತರವೂ ಬದುಕುತ್ತಿರುವ, ಅನೇಕರ ಬದುಕಿಗೆ ಗುರಿ ಕೊಟ್ಟು ಗುರುವಾಗಿ ಮುನ್ನೆಡೆಸುತ್ತಿರುವ ಕೆಲವೇ ರಾಜನೀತಿಯ ಆಧುನಿಕರಬ್ಬರು ಅವರು.
ವಿಚಲಿತರಾಗಲು ಅದೆಷ್ಟೋ ಸವಾಲು ಸಂಕಷ್ಟಗಳು ಎದುರಾದರೂ ಅಚಲ ರಾಗಿಯೇ ಉಳಿದವರು. ದೇಶದ ಅಂದಿನ ಪ್ರತಿಕೂಲ ವಾತಾವರಣ, ಎರವಲು ಪಡೆದ ಹಲವು ವಿದೇಶಿ ಸಾಮಾಜಿಕ ರಾಜಕೀಯ ವಿಚಾರಧಾರೆಗಳ ಕೆಸರಿನಲ್ಲಿಅರಳಿದ ಕಮಲವದು. ಪ್ರಾಯಶಃ ಅವರ ಬಹುಮುಖಿ ಮೇರು ವ್ಯಕ್ತಿತ್ವವನ್ನು ಕಾಣಲು, ಅರ್ಥ ಮಾಡಿಕೊಳ್ಳಲು ಶಬ್ದಗಳಿಗೆ ಬರ ಬರಬಹುದೇನೋ? ಇಷ್ಟೆಲ್ಲ ಹೇಳಲು ಪ್ರಯತ್ನ ಪಟ್ಟಿದ್ದು ಸ್ವರ್ಗೀಯ ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆಯೇ.
ಅದೆಷ್ಟೋ ಜನರಿಗೆ ವಾಜಪೇಯಿ ಅವರು ತಾವೇ ರಚಿಸಿದನ ಕವನಗಳನ್ನು ಕತ್ತು ಅಡಿಸಿ ಭಾವನಾತ್ಮಕವಾಗಿ ವಾಚನ ಮಾಡುತ್ತಿದ್ದ ಆ ಸಾಲುಗಳು ಇನ್ನೂ ಎದೆಯಲ್ಲಿ ಗುನುಗುತ್ತಿರುವ ಭಾವ,ಅವರು ಮಾಡಿದ ದೇಶಭಕ್ತಿಯ, ಮಾನವೀಯತೆಯ, ಕ್ಷಾತ್ರತೇಜದ ಭಾಷಣಗಳು ಇನ್ನೂ ಮನಸ್ಸಿನಲ್ಲಿ ಸುಳಿದಾಡಿ ದೇಶಕ್ಕಾಗಿ ಕೆಲಸಮಾಡುವ ಪ್ರೇರಣೆ ಕೊಡುತ್ತಿರುವ ಹಾಗೆ,ಅವರ ವಿಶಾಲ ಹೃದಯದ ವ್ಯಕ್ತಿತ್ವದ ವರ್ತನೆಗಳು ಮನಕಲುಕಿ ಹಿಂಸೆಮಾಡುತ್ತಿವುದು ಅವರು ಎಷ್ಟು ಆಳವಾಗಿ ನಮ್ಮೆಲ್ಲರ ಮೇಲೆ ಪ್ರಭಾವ ಬೀರಿದ್ದರು ಎನ್ನುವುದಕ್ಕೆ ಸಾಕ್ಷಿ. ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿತ್ವದಿಂದ ರಾಷ್ಟ್ರಕ್ಕೆ ಮೇಲ್ಪಂಕ್ತಿಯಾದ ಸಂತಸ್ವರೂಪಿ ಆಟಲ್ ಜೀ.
ಎಂದೂ ರಾಷ್ಟ್ರೀಯವಾದಿಗಳನ್ನು ಒಪ್ಪದ, ಬೇರೆಯವರನ್ನು ಹೊಗಳಿ ಭಾರತ ರತ್ನಗಳನ್ನು ಕೊಡಲು ಮನಸ್ಸೇ ಮಾಡದೆ ತಮಗೆ ತಾವೇ ರತ್ನ ಕೊಟ್ಟುಕೊಂಡ ನೆಹರು ಸಂತತಿಯ ಇಂದಿರಾಗಾಂಧಿ,ರಾಜೀವ ಗಾಂಧಿ ಸೇರಿದಂತೆ ನಾಲ್ಕು ಪಿಳೀಗೆ ಯವರೂ ಅವರನ್ನು ಆದರದಿಂದ ಕಂಡು ಗೌರವಿಸಿದ್ದು ಆಶ್ಚರ್ಯವೇ ಆದರೂ ಸತ್ಯ. ಹಾಗಂತ ನೆಹರು ಇಂದಿರಾರನ್ನು ಸಂಪೂರ್ಣವಾಗಿ ವಾಜಪೇಯಿ ಒಪ್ಪಿರಲಿಲ್ಲ,ಒಮ್ಮೆ ನೆಹರು ಅವರನ್ನು ಕುರಿತು ನಿಮ್ಮ ವ್ಯಕ್ತಿತ್ವದಲ್ಲಿ ಚರ್ಚಿಲ್ ಮತ್ತು ಚಮರ್ಲ್ಯಾನ್ ಇಬ್ಬರು ಇzರೆ ಅಂತ ಕಠೋರ ಶಬ್ದಗಳಲ್ಲಿ ಟೀಕಿಸಿದ್ದೂ ಇದೆ.
ಅಟಲ್ ಜಿ ವಿದೇಶಾಂಗ ಮಂತ್ರಿ ಆದ ಮೇಲೆ ಯಾರೋ ಕೆಲವರು ಸಂಸತ್ತಿನಲ್ಲಿ ನೆಹರು ಅವರ ತೆಗೆಸಿದ್ದ ಫೋಟೋವನ್ನು ಮತ್ತೆ ಹಾಕಿಸಿ ಗೌರವಸಿದ್ದು ಇದೆ. ಹಲವು ಸಮಕಾಲೀನ ನಾಯಕರು ವಾಜಪೇಯಿ ಅವರಿಗೆ ಪದೇ ಪದೇ ಒಂದು ಮಾತು ಹೇಳುತ್ತಿದ್ದರು ಅದು ‘ನೀವು ಒಳ್ಳೆಯವರು ಆದರೆ ನಿಮ್ಮ ಪಕ್ಷ ಸರಿಯಿಲ್ಲ’ ಆದರೆ ವಾಜಪೇಯಿ ಎಂದೂ ಇದನ್ನು ಒಪ್ಪಲಿಲ್ಲ. ಅದರಿಂದ ಹಿಗ್ಗಿ ಮಾತೃಸ್ವರೂಪಿ ಪಕ್ಷವನ್ನು ಹೀಗೆಳೆಯಲಿಲ್ಲ. ಬದಲಾಗಿ ಒಮ್ಮೆ ಖ್ಯಾತ ಅಂಕಣಕಾರ ಖುಶ್ವಂತ್ ಸಿಂಗರಿ ಗಂತೂ ನಾನು ಒಳ್ಳೆಯವನಾಗಿದ್ದು ನಿಜವೇ ಆಗಿದ್ದರೆ ತಪ್ಪು ಪಕ್ಷವನ್ನೇಕೇ ಆಯ್ಕೆಮಾಡಿಕೊಳ್ಳುತ್ತಿದ್ದೆ.
ಮತ್ತು ಪಕ್ಷ ಸರಿ ಇಲ್ಲದಿದ್ದರೆ ನಾನೂ ಸರಿ ಇರುತ್ತಿರಲಿಲ್ಲವಲ್ಲವೇ ಅಂತ ಮರು ಪ್ರಶ್ನೆ ಹಾಕಿ ಅವರ ಬಾಯಿ ಮುಚ್ಚಿಸಿದ್ದರು.೧೦-೧೨ ಪ್ರಾಯದಲ್ಲಿ ಬಾಲಕ ಆಟಲ್ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಠಪಾಠ ಮಾಡಿ ಮಾಡತಿದ್ದ ಭಾಷಣ ಮರೆವಿ ನಿಂದ ಅರ್ಧಕ್ಕೆ ನಿಂತು ನಗೆಪಾಟಲಿಗಿಡಾದ. ಅವತ್ತಿನ ದಿನವೇ ಮುಂದೆಂದೂ ಕಂಠಪಾಠ ಮಾಡಿ ಭಾಷಣ ಮಾಡವುದಿಲ್ಲ ಎಂದು ಸಂಕಲ್ಪ ಮಾಡಿದ. ಹಲವು ವರ್ಷಗಳ ನಂತರ ಅದೇ ಬಾಲಕನ ಭಾಷಣಗಳು ಇಡೀ ಭಾರತವಲ್ಲದೇ ಜಗತ್ತನ್ನು ಮಂತ್ರಮುಗ್ಧಗೊಳಿಸಿತು.
ವಾಜಪೇಯಿ ಜಗತ್ತು ಕಂಡ ಶ್ರೇಷ್ಠ ವಾಗ್ಮಿಗಳಲ್ಲಿ ಒಬ್ಬರಾದರು. ಇಡೀ ದೇಶ ಅವರ ಭಾಷಣಕ್ಕೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದರೂ ತಾನೇ ಶ್ರೇಷ್ಠ ವಾಗ್ಮಿ ಅಂತ ಎಂದೂ ಬೀಗಲಿಲ್ಲ. ಆರ್‌ಎಸ್‌ಎಸ್ ಪೂರ್ಣಾವಽ ಕಾರ್ಯಕರ್ತರಾಗಿ ಮುಂದೆ ದೇಶದ ರಾಜಕೀಯದ ಚಿಂತನೆಶೈಲಿಯನ್ನೇ ಬದಲಾಯಿಸಿದ ಜನಸಂಘದ ಸಂಸ್ಥಾಪಕ ಸದಸ್ಯರಾಗಿ ಅವರು ಅತ್ಯಂತ ಗೌರವದಿಂದ ಕಾಣುತ್ತಿದ್ದ ಪಂ.ದೀನದಯಾಳ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿ ಅವರ ನಾಯಕತ್ವದಲ್ಲಿ ರಾಜನೀತಿ ಆರಂಭ ಮಾಡಿದ ಆಟಲ್ ಜಿ ತಿರುಗಿ ನೋಡುವ ಪ್ರಶ್ನೆಯೇ ಉದ್ಭವಿಸಲಿಲ್ಲ.
೧೦ ಬಾರಿ ಲೋಕಸಭೆ, ೨ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಇತಿಹಾಸ ನಿರ್ಮಾಣ ಮಾಡಿದರು. ನಾಲ್ಕು ರಾಜ್ಯಗಳ ೬ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ(ಲಕ್ನೋ,ಗ್ವಾಲಿರ್ಯ,ಗಾಂಧಿನಗರ,ಬಲg ಮಪುರ, ವಿದೀಶಾ, ದಿಲ್ಲಿ)ಆಯ್ಕೆಯಾದ ದೇಶದ ಏಕೈಕ ಸಂಸದ ವಾಜಪೇಯಿ. ‘ಅಂಧೇರಾ ಚಟೇಗಾ, ಸೂರಜ್ ನಿಕಲೇಗಾ, ಕಮಲ್ ಖಿಲೇಗಾ’ ಅವರ ಈ ಸಾಲುಗಳನ್ನು ಕೇಳಿದಾಗ ಪ್ರತಿಯೊಬ್ಬ ಕಾರ್ಯಕರ್ತನಿಗೂ ಉತ್ಸಾಹ ಇಮ್ಮಡಿಯಾಗುತ್ತಿತ್ತು. ‘ಗೀತ್ ನಯಾ ಗಾತಾ ಹುಂ’ ಅಂತ ಹೊಸ ಹುರುಪಿನ ದೇಶ ಭಕ್ತಿಯ ಅಭೇಧ್ಯ ಸಂಘಟನೆ ಕಟ್ಟುವಲ್ಲಿ ಪ್ರಮುಖ ಸೇನಾನಿ ಆಟಲ್ ಜೀ.
ಮೊದಲ ಕಾಂಗ್ರೆಸ್ಸೇತರ ಸರಕಾರದ ವಿದೇಶಾಂಗ ಮಂತ್ರಿಯಾಗಿದ್ದ ಸಂದರ್ಭ ಅದು, ವಿಶ್ವಸಂಸ್ಥೆಯಲ್ಲಿ ದೇಶದ ಪರವಾಗಿ ಭಾಷಣ ಮಾಡುವ ಪವಿತ್ರ ಅವಕಾಶ ಸಿಕ್ಕಾಗ ಅವರು ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿ ಹಿಂದಿಯಲ್ಲಿ ಮಾತನಾಡಿ ದೇಶಭಕ್ತಿ ಮೆರೆದಿದ್ದರು. ನರಸಿಂಹರಾಯರ ಸರಕಾರದಲ್ಲಿ ವಿಪಕ್ಷ ನಾಯಕನಾಗಿದ್ದರೂ ಕೂಡ ಯೋಗ್ಯತೆಯ ಆಧಾರದ ಮೇಲೆ ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಭೆಯಲ್ಲಿ ದೇಶವನ್ನು ಪ್ರತಿನಿಧಿಸಲು ಅವಕಾಶ ಪಡೆದದ್ದು ಪಾಕ್ ಹಾಗೂವಿದೇಶಗಳನ್ನು ಆಶ್ಚರ್ಯಗೊಳಿತ್ತು.
ದೇಶದ ಜನರ ಆಸೆಯಂತೆ ಹಲವು ಪಕ್ಷಗಳನ್ನು ಸೇರಿಸಿಕೊಂಡು ಪ್ರಧಾನ ಮಂತ್ರಿಯಾದರು. ಒಬ್ಬ ತೀರ ಸಾಮಾನ್ಯ ವ್ಯಕ್ತಿ, ಕವಿಹೃದಯಿ ಸಹ ದೇಶದ ಪ್ರಧಾನಿಯಾಗಬಹುದು ಅಂತ ಭಾರತದ ಗಣತಂತ್ರ ವ್ಯವಸ್ಥೆಯ ವೈಶಿಷ್ಟ್ಯ ಜಗತ್ತಿಗೆ ತೋರಿಸಿ ಕೊಟ್ಟರು. ಅನಂತರ ಭಾರತ ಕಂಡಿದ್ದು ವಿಶಿಷ್ಠವಾದ ರಾಜನೀತಿಯ ಮೇಲ್ಪಂಕ್ತಿ ಮತ್ತು ಅಭಿವೃದ್ಧಿ ನವಯುಗ. ಅದು ಮೇ ೨೮, ೧೯೯೬ ವಿಶ್ವಾಸಮತ ಯಾಚನೆಯ ಸಮಯ. ಅಂದು ಸಂಸತ್ತಿನಲ್ಲಿ ಅಟಲ್ ಜಿ ಮಾಡಿದ ಭಾಷಣ ಪ್ರಾಯಶಃ ಸಾರ್ವಕಾಲಿಕ ಶ್ರೇಷ್ಠ ಭಾಷಣ.
‘ಸರಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ದೇಶ ಉಳಿಯಬೇಕು,ದೇಶದ ಪ್ರಜಾಪ್ರಭುತ್ವ ಉಳಿಯಬೇಕು’, ನಾನು ಮೃತ್ಯುವಿಗೆ ಹೆದರುವವನಲ್ಲ,ಹೆದರಿದರೆ ಬದನಾಮಿಗೆ ಮತ್ತು ಪ್ರಜೆಗಳಿಗೆ ಅಳಕುವವನು ಎಂದು ಮಾರ್ಮಿಕವಾಗಿ ಹೇಳಿ ವಿಶ್ವಾಸಮತ ಕೇಳದೆ ಕೆಳಗಿಳಿದರು. ಇಂದು ಜಗತ್ತಿನಲ್ಲಿ ಗೌರವಕ್ಕೆ ಪಾತ್ರವಾಗುತ್ತಿರುವ ಭಾರತವನ್ನು ಆರ್ಥಿಕ,ಶೈಕ್ಷಣಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಮಾಡುವ ಕಾರ್ಯಕ್ಕೆ ಮೋದಿ ಕಾಲದಲ್ಲಿ ವೇಗ ಸಿಕ್ಕರೂ ಅದರ ಬೀಜ ಬಿತ್ತಿ ಅದಕ್ಕೆ ಆರಂಭ ನೀಡಿದ್ದು ಅಟಲ್ ಜೀ.
ಪಾಕ್ ಜತೆ ಸ್ನೇಹಹಸ್ತ ಚಾಚಿ ಶಾಂತಿಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಟಲ್ಜೀ ಮಾಡಿದರು. ಭಾರತ-ಪಾಕ್ ಕ್ರಿಕೇಟ್ ಆಗಲಿ, ಲಹೋರಗೆ ಬಸ್ ಪ್ರಯಾಣವಾಗಲಿ,ಸಂಧಾನ ಮಾತುಕತೆಗಳಾಗಲಿಇವೆಲ್ಲವೂ ಅವರbಜಿmಟಞZqsಗೆ ಹಿಡಿದ ಕೈಗನ್ನಡಿ. ಆದರೆ ಸಂಸತ್ತಿನ ಮೇಲಿನ ದಾಳಿಯಾದಾಗಲೂ ತೀವ್ರ ಪ್ರತ್ಯುತ್ತರನೀಡಿ ದೇಶಕ್ಕೆ ಧೈರ್ಯ ತುಂಬಿದರು ಆಟಲ್ ಜಿ. ಲೋಕಪಾಲ ಬಿಲ್ ಸಲುವಾಗಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಕ್ರಾಂತಿಯಾಯಿತು, ಕಷ್ಟ ಪಟ್ಟಿದ್ದು ಹಜಾರೆ, ಅದರ ಹೆಸರಿನಲ್ಲಿ ಬೆಳಕಿಗೆ ಬಂದು ಬೆಳೆ ಬೇಯಿಸಿಕೊಂಡದ್ದು ಕೇಜ್ರಿವಾಲ್.
ಆದರೆ ಅದರ ಅವಶ್ಯಕತೆಯ ಬಗ್ಗೆ ಬಹಳ ಪ್ರಬಲವಾಗಿ ಸಂಸತ್ತಿನಲ್ಲಿ  ಸ್ವಪಕ್ಷ(?)-ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದೇ ಸ್ವತಃ ತಾವೇ ಪ್ರಧಾನಿಯಾಗಿದ್ದು ಅವರೂ ಸಹ ಸಂಸದರೇ ಅಲ್ಲವೇ ಅಂತ ಪ್ರಧಾನಿಯನ್ನು ಸಹ ಅದರ ವ್ಯಾಪ್ತಿಗೆ ಒಳಪಡಿಸುವ ಧೈರ್ಯ ಮತ್ತು ನೈತಿಕತೆ ತೋರಿದ ನಾಯಕ ಆಟಲ್ ಜೀ. ಅಂಬೇಡ್ಕರರ ಹೆಸರು ಬಳಸಿಕೊಂಡು ರಾಜಕೀಯ ಲಾಭ ಪಡೆದ ನೆಹರು ಕುಟುಂಬ ಅವರಿಗೆ ಭಾರತ ರತ್ನ ಕೊಡುವ ಸೌಜನ್ಯ ತೋರದಿದ್ದಾಗ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿಯಾದರೂ ರತ್ನ ಕೊಡಿಸುವಲ್ಲಿ ಆಟಲ್ ಜಿ ಪಾತ್ರ ಮರೆಯುಂತಿಲ್ಲ.
ದೇಶದ ಇತಿಹಾಸದಲ್ಲಿ ಒಂದು ದೊಡ್ಡ ಶೈಕ್ಷಣಿಕ ಕ್ರಾಂತಿ ಅದು ಸರ್ವ ಶಿಕ್ಷಣ ಅಭಿಯಾನ. ಹೆಣ್ಣು ಭ್ರೂಣ ಹತ್ಯೆ ತಡೆಯವ ಕಠಿಣ ಸಂಕಲ್ಪ,ಚತುಷ್ಪತ ರಸ್ತೆ ಕ್ರಾಂತಿ ಹೀಗೆ ಅನೇಕ ಜನಪರ ಕೆಲಸ ಮಾಡಿ ಭಾರತದ ಮನೆಮನೆಗಳನ್ನು ಮನಮನಗಳನ್ನು ಮುಟ್ಟಿದ್ದು ಅದೇ ವಾಜಪೇಯಿ. ಹಾಗೇ ಏಮ್ಸ್‌ನಲ್ಲಿ ಅಡ್ಮಿಟ್ ಇದ್ದಾಗಲೇ ನಾಲ್ಕು ವೇದಗಳ ಅಧ್ಯಯನ ಮುಗಿಸಿದ್ದರು ಜ್ಞಾನಿ ವಾಜಪೇಯಿ. ಇಂದು ಜೀವನದ ಪರಮಸತ್ಯದ ಹುಡುಕಾಟದ ವೇದಾಧ್ಯಯನ ಮುಗಿಸಿದ ಜಾಗದ ಬದುಕನ್ನು ಮುಗಿಸಿದ್ದು ಕಾಕತಾಳೀಯವೋ ವಿಧಿಲಿಖಿತವೋ ಗೊತ್ತಿಲ್ಲ.
ವಾಜಪೇಯಿ ಇಂದಿರಾ ಗಾಂಧಿ ಅವರನ್ನು ದುರ್ಗೆಗೆ ಹೋಲಿಸಿದ್ದರು ಎಂದು ಆಗಾಗ ಚರ್ಚೆಗೆ ಬರುತ್ತದೆ. ಆದರೆ ಅವರನ್ನೇ ಇದರ ಬಗ್ಗೆ ಕೇಳಿದಾಗ ತಾವು ಎಂದಿಗೂ ಇಂದಿರಾ ಗಾಂಧಿ ಅವರನ್ನು ದುರ್ಗೆಗೆ ಹೋಲಿಸಿ ಮಾತನಾಡಿಲ್ಲ ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಭೂಕಂಪ, ಪ್ರವಾಹಗಳು, ಯುದ್ಧ, ದೇಶೀ-ವಿದೇಶಿಯ ರಾಜಕೀಯ ಕಿರುಕುಳ ಬಹಿಷ್ಕಾರಗಳು, ಸಮ್ಮಿಶ್ರ ಸರ್ಕಾರದ ರಾಜಕೀಯ ಅಸ್ತಿರತೆಗಳು,ಬಾಂಬ್ ದಾಳಿಯ ಭಯೋತ್ಪಾದನೆಗಳು ಹೀಗೆ ಸಾಲು ಸಾಲು ಸಂಕಷ್ಟಗಳ ಸಂಕೋಲೆಯ ಸರಮಾಲೆಯಿಂದ ದೇಶವನ್ನು ಒಂದೊಂದಾಗಿ ಬಿಡಿಸುತ್ತಾ ದೇಶಭಕ್ತಿಯನ್ನು ಬಡಿದೆಬ್ಬಿಸಿದ್ದು ಅಟಲ್ ಜೀ.
ಜೈ ಜವಾನ್ ಜೈ ಕಿಸಾನ್ ಹೇಳಿಕೆಗೆ ಪೋಷಣೆ ಮಾಡಿದ್ದಲ್ಲದೆ ಜೊತೆಗೆ ಜೈ ವಿeನವನ್ನು ಸೇರಿಸಿ ದೇಶಕ್ಕೆ ವಿಜ್ಞಾನತಂತ್ರeನದಲ್ಲಿ ಶಕ್ತಿ ತುಂಬಿದರು. ಆ ರಾಷ್ಟ್ರನಾಯಕ ನಮ್ಮ ಜತೆಗೆ ದೈಹಿಕವಾಗಿ ಇಲ್ಲದೆ ಇದ್ದರೂ ದೇಶಕ್ಕಾಗಿ, ಮಾನವೀ ಯತೆಗಾಗಿ ಬದುಕಲು ಪ್ರೇರಣೆ ನಿರಂತರ ನೀಡುತ್ತಿದ್ದಾರೆ. ಭಾರತ ಮಾತೆಯನ್ನು ಆರಾಧಿಸಿ ಪೂಜಿಸಿ ಸೇವಿಸಲು ಹೀಗೆಪಾಠ ಹೇಳಿ ಹೋಗಿದ್ದಾರೆ.