ಕರೋನಾ ಪ್ಯಾರ್‌ ಹೈ !
ತುಂಟರಗಾಳಿ
ಸಿನಿಗನ್ನಡ
ಕಳೆದ ಒಂದು ವಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಗೆ ಗಳಾಗಿವೆ. ಅದಕ್ಕೆ ಕಾರಣ ದರ್ಶನ್ ಅಭಿಮಾನಿಗಳು ಮತ್ತು ಅಪ್ಪು ಸೇರಿದಂತೆ ಡಾ. ರಾಜ್ ಕುಮಾರ್ ಅವರ ಕುಟುಂಬದ ಅಭಿಮಾನಿಗಳ ನಡುವೆ ನಡೆಯುತ್ತಿರೋ ಫ್ಯಾನ್ ವಾರ್. ಈ ಫ್ಯಾನ್ ವಾರ್ ತೀರಾ ಅತಿರೇಕ ಎನ್ನುವ ಮಟ್ಟಕ್ಕೆ ಹೋಗಿ ಹೊಸಪೇಟೆಯಲ್ಲಿ ದರ್ಶನ್‌ಗೆ ಚಪ್ಪಲಿ ಎಸೆಯುವ ಮೂಲಕ ಇನ್ನಷ್ಟು ತಾರಕಕ್ಕೇರಿತು.
‘ತಾರಕ್’ ಫ್ಯಾನ್‌ಗಳು ಮಾಡಿದ ಮಾತಿನ ವಾರ್ ಇದಕ್ಕೆ ಕಾರಣ ಅಂದ್ರೆ ತಪ್ಪಿಲ್ಲ. ಹೇಳಿ ಕೇಳಿ ಅಪ್ಪು ಭದ್ರಕೋಟೆ ಆಗಿರುವ ಹೊಸಪೇಟೆಯಲ್ಲಿ ದರ್ಶನ್ ತಮ್ಮ ಸಿನಿಮಾದ ಹಾಡು ಬಿಡುಗಡೆ ಮಾಡಲು ಬರ್ತಾರೆ ಅಂದಾಗ, ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ, ನಿಮ್ಮ ಊರಿಗೇ ಬರ್ತಾ ಇದ್ದೀವಿ, ಏನ್ ಕಿತ್ಕೊತೀರಾ, ಕಿತ್ಕೊಳ್ರೋ ಅಂತ ಡೈಲಾಗ್ ಹೊಡೆದು ಅದು ದರ್ಶನ್‌ಗೆ ಹೊಸಪೇಟೆಯಲ್ಲಿ ಚಪ್ಪಲಿ ಸೇವೆಯ ಹೊಸ ಅನುಭವ ಕೊಟ್ಟಿತು.
ಇದರ ನಂತರ ಈ ಫ್ಯಾನ್ ವಾರ್‌ನಲ್ಲಿ ನಾವೂ ಒಂದಿಷ್ಟು ಫ್ಯಾನ್ ಗಾಳಿ ಬೀಸಿಕೊಳ್ಳೋಣ, ನಮ್ಮ ಬೇಳೆ ಬೇಯಿಸಿಕೊಳ್ಳೋಣ ಅಂತ ಗಾಳಿ ಬಂದಾಗ ತೂರಿಕೋ ಅನ್ನೋ ನಮ್ಮ ಚಿತ್ರರಂಗದ ಕೆಲ ಸ್ಟಾರ್‌ಗಳ ನಡವಳಿಕೆ ಈ ಸಮಯದಲ್ಲಿ ಬಯಲಾಗಿದ್ದು ಈ ಬೆಳವಣಿಗೆಗಳಲ್ಲಿ ಒಂದು.
ನಟರಾದ ದುನಿಯಾ ವಿಜಯ, ಸತೀಶ್ ನೀನಾಸಂ, ಧನಂಜಯ, ಸುದೀಪ್ ಮುಂತಾದವರು ದರ್ಶನ್‌ಗೆ ಚಪ್ಪಲಿ ಎಸೆದಿದ್ದು ತಪ್ಪು ಅಂತ ಸಿಡಿದು ನಿಂತರೇ ವಿನಃ ದರ್ಶನ್ ಅಭಿಮಾನಿಗಳು ರಾಜ್ ಕುಟುಂಬದವರ ಬಗ್ಗೆ ಅವಹೇಳನಕಾರಿ, ಅಶ್ಲೀಲ ಪೋಸ್ಟ್ ಹಾಕಿ ಕೆಣಕಿದ ವಿಷಯ ಎತ್ತಲೇ ಇಲ್ಲ. ಆದರೆ ಅದರ ನಂತರ ಈ ನಟರ ವಿರುದ್ಧ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಯಲ್ಲಿ ದುನಿಯಾ ವಿಜಯ, ರಾಜ್ ಕುಟುಂಬದ ಪರವಾಗಿ ಇನ್ನೊಂದು ಪೋಸ್ಟ್ ಹಾಕಿ ಬ್ಯಾಲೆ ಮಾಡಿಕೊಂಡರು.
ಆದರೆ ಉಳಿದವರು ಅದೇನನನ್ನೂ ಮಾಡದೇ ಕೇವಲ ‘ವೇದ’ ಸಿನಿಮಾಗೆ ಗುಡ್ ಲಕ್ ಅಂತ ಪೋಸ್ಟ್ ಹಾಕಿದ್ದಕ್ಕೆ, ಅಂದು‘ಥ್ಯಾಂಕ್ಸ್ ಅಣ್ಣಾ ನಮ್ಮ ಬಾಸ್‌ಗೆ ಸಪೋರ್ಟ್ ಮಾಡಿದ್ದಕ್ಕೆ’ ಅಂದಿದ್ದ ದರ್ಶನ್ ಅಭಿಮಾನಿಗಳು, ಇವತ್ತು ಆ ನಟರ ಪೇಜ್‌ನಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿ, ಈ ನಟರುಗಳೆ ತಮ್ಮ ಪೇಜ್‌ನಲ್ಲಿ ಕಾಮೆಂಟ್ ಬಾಕ್ಸ್ ಆಫ್ ಮಾಡಿಕೊಳ್ಳುವ ಪರಿಸ್ಥಿತಿ ತಂದಿಟ್ಟಿzರೆ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಅಂದ್ರೆ ಇದೇ ಅಲ್ವಾ? ಅಂದಹಾಗೆ ಇಂದು ದರ್ಶನ್ ಇನ್ನೊಂದು ಹಾಡಿನಬಿಡುಗಡೆಗಾಗಿ ಹುಬ್ಬಳ್ಳಿಗೆ ಹೋಗಿದ್ದಾರೆ. ಅನಾಗುತ್ತೋ, ಪುನೀತ್ ಕೆರೆಹಳ್ಳಿನೇ ಬಲ್ಲ.
ಲೂಸ್ ಟಾಕ್ಕರೋನಾ ವೈರಸ್ (ಕಾಲ್ಪನಿಕ ಸಂದರ್ಶನ)ಏನ್ರೀ ಸ್ವಾಮಿ, ಮೊನ್ನೆ ತಾನೇ ಬಂದಿದ್ರಿ, ಮತ್ತೆ ಬರ್ತಾ ಇದ್ದೀರಂತೆ?-ಏನ್ ಮಾಡೋದು, ನಾನ್ ಬರಲ್ಲ ಅಂದ್ರೂ ನಿಮ್ಮ ಸರಕಾರದೋರು, ಟಿವಿ ಚಾನೆಲ್ಗಳವರು ನನ್ನ ಬಿಡಲ್ವಲ್ಲ, ಮತ್ತೆ ಮತ್ತೆ ಕರೋನಾ ಪ್ಯಾರ್ ಹೈ ಅಂತಿರ್ತಾರೆ
ಏನೋ ಅಂತೂ ನಮ್ಮ ಜನ ಮತ್ತೆ ನೀನ್ ಬರ್ತೀಯಾ ಅಂತ ಹೆದರಿಕೊಂಡಿದ್ದಾರೆ.
-ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಸಮಸ್ಯೆ ಇಲ್ಲ, ಲಸಿಕೆ ಹಾಕಿಸಿಕೊಳ್ಳೋಕೆ ಆಲಸಿಕೆ ತೋರಿಸಿದವರು ಅನುಭವಿಸ್ತಾರೆ
ಅಲ್ಲ, ನೀನ್ ಯಾಕೆ ಹಿಂಗೆ ಹೇಳದೇ ಕೇಳದೇ ಬರೋದು?
-‘ಹೇಳಿ ಹೋಗು ಕಾರಣ’ ಥರ, ಇನ್ನೂ ಯಾರೂ ನಂಗೆ ‘ಹೇಳಿ ಬಾ ಕರೋನಾ’ ಅಂತ ಹೇಳಿಲ್ಲ ಅದಕ್ಕೇ
ಅದ್ಸರಿ, ಇಯರ್ ಎಂಡ ನಿನ್ ಹವಾ ಜಾಸ್ತಿ ಅಲ್ವಾ ಯಾಕೆ?-ಪ್ರತಿ ಎಂಡಿಂಗ್‌ನಲ್ಲು ಸ್ಟಾರ್ಟು ಇರ್ತದೆ ಅಂತ ಯೋಗರಾಜ್ ಭಟ್ರೇ ಹೇಳಿಲ್ವಾ?
ಆದ್ರೂ, ಮತ್ತೆ ಲಾಕ್ ಡೌನು, ಸೀಲ್ ಡೌನು ಅಂತಾದ್ರೆ ನಮ್ಮ ಜನಗಳಿಗೆ ಕಷ್ಟಆಗಲ್ವಾ?-ನೋಡಪ್ಪಾ, ಕರೋನಾ ಮನುಷ್ಯನಿಗೆ ಬರದೆ, ಮರಕ್ಕಾ ಬರುತ್ತೆ, ಹೃದಯ ಮತ್ತು ಶ್ವಾಸಕೋಶ ಎರಡನ್ನೂ ಗಟ್ಟಿ ಮಾಡ್ಕೊಂಡು ಎನೂ ಎದುರಿಸಬೇಕಪ್ಪಾ
ನೆಟ್ ಪಿಕ್ಸ್ಒಂದು ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಽಕಾರಿಗಳಿದ್ದರು. ಖೇಮು ಮತ್ತು ಸೋಮು. ಅದರಲ್ಲಿ ಖೇಮುವನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ ತಾನೇ ಮದುವೆ ಆಗಿದ್ದ ಖೇಮು ಅನಿವಾರ್ಯವಾಗಿ ಯುದ್ಧಕ್ಕೆ ಹೋಗಬೇಕಾಯಿತು. ಮಹಾರಾಜ ಕೂಡ ದೇಶ ಮುಖ್ಯ ಮೊದಲು ನೀನು ಯುದ್ಧಭೂಮಿಗೆ ಹೋಗಿ ನೀನು ಹೊಸರಾಜ ಅನೋದನ್ನ ಪ್ರೂವ್ ಮಾಡು ಅಂದ. ಸರಿ ಅಂತ ಖೇಮು ಹೊರಟ. ಆದರೆ ಅವನಿಗೆ ಹೊಸದಾಗಿ ಮದುವೆ ಆಗಿದ್ದ ಹೆಂಡತಿಯನ್ನ ಬಿಟ್ಟು ಹೋಗೋಕೆ ಮನಸ್ಸಿರಲಿಲ್ಲ.
ಆದರೆ ಏನ್ ಮಾಡೋದು. ರಾಜ್ಯದ ನೀತಿ ನಿಯಮದ ಪ್ರಕಾರ ಮಹಾರಾಜರ ಆe ಪಾಲಿಸಬೇಕಾಗಿತ್ತು. ಅದರ ಪ್ರಕಾರ ಸೋಮುವನ್ನು ಕರೆದು ಹೇಳಿದ ಖೇಮು, ‘ನೋಡು ಸೋಮು, ನಾನೀಗ ಯುದ್ಧಭೂಮಿಗೆ ಹೋಗ್ತಾ ಇದ್ದೀನಿ. ನಾನು ಗೆದ್ದು ಬಂದರೆ ಸಂತೋಷ, ಆಕಸ್ಮಾತ್ ನಾನು ಸತ್ತು ಹೋದರೆ, ಮುಂದೆ ನೀನೇ ರಾಜ್ಯ ಆಳಬೇಕು. ಅಲ್ಲದೆ, ನಾನು ಮದುವೆ ಆಗಿರುವ ಹುಡುಗಿ ಕೂಡ ನಿನ್ನವಳಾಗುತ್ತಾಳೆ. ಹಾಗಾಗಿ ಆಕೆಯನ್ನು ನನ್ನ ಕೋಣೆಯಲ್ಲಿಟ್ಟು ಬೀಗ ಹಾಕಿದ್ದೇನೆ. ಇದರ ಕೀ ಇಲ್ಲಿದೆ. ನಾನು ವಾಪಸ್ಸು ಬರದೇ ಇದ್ದರೆ ಮಾತ್ರ ಈ ಕೀ ಬಳಸಿ, ಬೀಗ ತೆಗೆ. ಆಕೆ ನಿನ್ನವಳಾಗುತ್ತಾಳೆ’.
ಸರಿ, ಖೇಮು ಕೀ ಕೊಟ್ಟು ಹೊರಟ. ಆದರೆ, ಕುದುರೆ ಹತ್ತಿ ಸ್ವಲ್ಪ ದೂರ ಹೋದಮೇಲೆ ಹಿಂದಿನಿಂದ ಯಾರೋ ಕೂಗಿದ ಹಾಗಾಯಿತು. ಕುದುರೆಯಿಂದ ಇಳಿದು, ಹಿಂದೆ ನೋಡಿದರೆ ಯಾರೋ ಧೂಳೆಬ್ಬಿಸಿಕೊಂಡು, ಇನ್ನೊಂದು ಕುದುರೆಯ ಮೇಲೆ ಬರ್ತಾ ಇದ್ದುದು ಕಾಣಿಸಿತು. ಸ್ವಲ್ಪ ಹೊತ್ತು ನಿಂತು ನೋಡಿದರೆ ಅಲ್ಲಿ ಬರ್ತಾ ಇದ್ದುದು, ಸೋಮು.
ಸೋಮು ತೀರಾ ಅವಸರದಿಂದ ಕುದುರೆಯಿಂದ ಇಳಿದು ಖೇಮು ಬಳಿಗೆ ಬಂದ. ಏನಾಯ್ತು ಸೋಮು?, ಅಂತ ಖೇಮು ಕೇಳಿದ್ದಕ್ಕೆ ಸೋಮು ಹೇಳಿದ, ಖೇಮು, ‘ನೀನು ಬೈ ಮಿಸ್ಟೇಕ್ ರಾಂಗ್ ಕೀ ಕೊಟ್ಟಿದ್ದೀಯ’
ಲೈನ್ ಮ್ಯಾನ್
ಕರೋನಾ ಅನುಮಾನ
-ಮತ್ತೆ ಮಾ ಕಡ್ಡಾಯ ಅಂತ ರೂಲ್ ಮಾಡಿರೋದು, ಕರೋನಾ ಬರುತ್ತೆ ಅಂತಾನಾ ಅಥವಾ ಅಪ್ಪು ಮತ್ತು ದರ್ಶನ್ ಅಭಿಮಾನಿಗಳ ‘ಬಾಯಿ ಮುಚ್ಚಿಸೋಕಾ’ ಅಂತ?
ಕೆಲವರು ಕುಡಿದ ಮೇಲೆ ಫೇಸ್‌ಬುಕ್‌ನಲ್ಲಿ ಪೋ ಹಾಕ್ತಾರೆ, ಆದ್ರೆ ಟ್ವೀಟ್ ಮಾಡಲ್ಲ ಯಾಕೆ?-ಯಾಕಂದ್ರೆ, ಟ್ವಿಟ್ಟರ್‌ನಲ್ಲಿ ಹಾಕೋಕೆ ಇ ಅಕ್ಷರ ಅಂತ ‘ಲಿಮಿಟ್’ ಅಂತ ಇರುತ್ತೆ.
ಬಿಜೆಪಿಯವರು ಇತಿಹಾಸದ ಎಲ್ಲ ವಿಷಯಗಳಿಗೂ ಕೇಸರಿ ಬಣ್ಣ ದ ಜೊತೆಲಿಂಕ್ ಮಾಡ್ತಾ ಇರೋದ್ ನೋಡಿದವರು ಹೇಳಿದ್ದು-ಎಲ್ಲದಕ್ಕೂ ಕೇ‘ಸರಿ’ ಬಣ್ಣ ಬಳಿಯೋದು ‘ತಪ್ಪು’
ಪಾರ್ಕಿನಲ್ಲಿ ಬೆಳೆದು ನಿಂತ ಹೂವುಗಳನ್ನು ಕೀಳುವವರದ್ದು-‘ಕೀಳು’ ಜಾತಿಎಲ್ಲದಕ್ಕೂ ಅದೇನ್ ಕಿತ್ಕೊತೀಯಾ ಕಿತ್ಕೋ ಅನ್ನೋದು-‘ಕೀಳು’ ಅಭಿರುಚಿಕವಿ ಆಗಿ ೧೪ ವರ್ಷ ಅನುಭವ ಇರೋನ ಸಾಧನೆ-ಕ‘ವನವಾಸ’ಕೈ ನಡುಗುವ ಖಾಯಿಲೆ ಇರೋನ ಸಮಸ್ಯೆ-ಯಾರ ಜೊತೆಗಾದ್ರೂ ‘ಹ್ಯಾಂಡ್ ಶೇಕ್’ ಮಾಡೋದು ಕಷ್ಟಅನುಮಾನದ ಆಧಾರದ ಮೇಲೆ ಮಾಡಿದ ವರದಿ- ರಿಪೋರ್ಟ್
ಉತ್ತರ ಪ್ರದೇಶದಲ್ಲಿ ಅಷ್ಟೊಂದ್ ಸಮಸ್ಯೆ ಇದ್ರೂ, ರಾಜ್ಯ ಅಭಿವೃದ್ಧಿ ವಿಷಯದಲ್ಲಿ ‘ಮೇಲೆ’ ಹೋಗ್ತಾ ಇದೆ ಅಂತ ಬಿಜೆಪಿಯೋರು ಹೇಳೋದ್ಯಾಕೆ-ಯಾಕಂದ್ರೆ, ಅದರ ಹೆಸರೇ ‘’
ಸಾಮಾನ್ಯ ಜನರ ಲೈಫು ನಿಧಾನವಾಗಿ ಹಾದಿಗೆ ಬರ್ತಾ ಇರೋ ಕಾಲದಲ್ಲಿಮತ್ತೆ ಬರ್ತಾ ಇರೋ ಕರೋನಾ ಹೇಳೋ ಮಾತು-ಹಾದಿಗೆ ಬಂದ ಲೈಫು ಬೀದಿಗೆ ಬಾರದೇ ಇರುತ್ಯೇ?