ಎರವಲು ತಂದ ಕನ್ನಡಕದಲ್ಲಿ ಕಂಡ ಅಸಹಿಷ್ಣುತೆ
ವಿಚಾರ
ಗಣೇಶ್ ಭಟ್, ವಾರಣಾಸಿ
ಈ ತಲೆಮಾರಿನ ಜನಾಂಗಕ್ಕೆ ಮನುಸ್ಮೃತಿ ಎಂದರೆ ಏನೆಂದೇ ಗೊತ್ತಿಲ್ಲ. ಭಾರತೀಯ ನಂಬಿಕೆಯ ಪ್ರಕಾರ ಕ್ರಿ.ಪೂ ೩೧೦೨ ರಿಂದ ಕಲಿಯುಗ ನಡೆಯುತ್ತಿದೆ. ಕಲಿಯುಗಕ್ಕೆ ಮನುಸ್ಮೃತಿಯು ಅನ್ವಯವಾಗುವುದಿಲ್ಲ ಎಂದು ವ್ಯಾಸರು ಹೇಳಿದ್ದಾರೆ. ಕಲಿಯುಗಕ್ಕೆ ಅನ್ವಯವಾಗುವ ಧರ್ಮ ಗ್ರಂಥ ಪರಾಶರ ಸ್ಮೃತಿ.
ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ – ವಿಶ್ವದ ಎಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂದು ಹೇಳುತ್ತದೆ ಋಗ್ವೇದದ ಒಂದು ಸಾಲು. ಉದಾತ್ತ ವಿಚಾರಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಭಾರತೀಯರಿಗೆ ಯಾವ ಹಿಂಜರಿಕೆಯೂ ಇಲ್ಲ. ಸನಾತನ ಧರ್ಮವೂ ಕಾಲಾಂತರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ಸುಧಾರಣೆಗಳನ್ನು ಒಪ್ಪಿಕೊಂಡು ಉಳಿದುಕೊಂಡಿದೆ.
ಜೈನ ಮತ, ಬೌದ್ಧಮತ, ಸಿಖ್ ಪಂಥ ಮೊದಲಾದವುಗಳು ಸನಾತನ ಧರ್ಮದ ಕವಲುಗಳಾಗಿ ಬೆಳೆದವು. ಈ ಪರಂಪರೆ ಯಲ್ಲಿ ಮೂರ್ತಿಪೂಜೆ- ನಿರಾಕಾರ ನಿರ್ಗುಣ ದೇವತಾರಾಧನೆ, ಬಹುದೇವತಾರಾಧನೆ- ಏಕದೇವ ತಾರಾಧನೆ, ಆಸ್ತಿಕತೆ-ನಾಸ್ತಿಕತೆ ಎಲ್ಲದಕ್ಕೂ ಅವಕಾಶವಿದೆ. ಪರಸ್ಪರ ವಿರೋಧಾತ್ಮಕ ನಂಬಿಕೆ ನಿಲುವುಗಳನ್ನು ಹೊಂದಿದ್ದರೂ ಸಹಬಾಳ್ವೆನಡೆಸುವ ಹೊಂದಾಣಿಕೆ ಇಲ್ಲಿದೆ. ವೈವಿಧ್ಯವೇ ಭಾರತದ ಶಕ್ತಿ ಹಾಗೂ ಸಾಮರ್ಥ್ಯವಾಗಿದೆ.
ಸಾವಿರಾರು ಭಾಷೆ, ಆಚಾರ, ಸಂಸ್ಕೃತಿಗಳು ಇಲ್ಲಿವೆ. ಆದರೂ ಒಗ್ಗಟ್ಟಿನಲ್ಲಿ ಬದುಕುವ ಸಾಮರಸ್ಯದ ವಾತಾವರಣ ಇಲ್ಲಿದೆ. ಹೂಣರು, ಶಕರು, ಮುಂಗೋಲಿಯನ್ನರು, ಇರಾನಿಗಳು, ಅರಬರು, ಫ್ರೆಂಚರು, ಪೋರ್ಚುಗೀಸರು, ಬ್ರಿಟಿಷರು ಹೀಗೆಆಕ್ರಮಣಗಳ ಮೇಲೆ ಆಕ್ರಮಣಗಳು ನಡೆದರೂ ಈ ನೋವನ್ನೆಲ್ಲ ನುಂಗಿಕೊಂಡು ಬದುಕುವ ಛಾತಿ ಈ ಮಣ್ಣಿಗೆ ಇದೆ.ಭಾರತವನ್ನು ೨೦೦ ವರ್ಷಗಳ ಕಾಲ ತಮ್ಮ ದಾಸ್ಯದಲ್ಲಿಟ್ಟು, ಜ್ಞಾನ ಹಾಗೂ ಸಂಪತ್ತನ್ನು ಕೊಳ್ಳೆ ಹೊಡೆದ ಬ್ರಿಟಿಷರು ಭಾರತೀಯರಲ್ಲಿ ವಸಾಹತು ದಾಸ್ಯದ ಮನಃಸ್ಥಿತಿಯನ್ನು ಬಿತ್ತಿಹೋದರು.
ಇಂಗ್ಲಿಷ್ ಶಿಕ್ಷಣ ಪಡೆದ ಅಂದಿನ ಭಾರತೀಯರು ಭಾರತದ ಬಗ್ಗೆ ವಿದೇಶೀಯರು ಬರೆದ ಇತಿಹಾಸ ಹಾಗೂ ವಿಶ್ಲೇಷಣೆಗಳನ್ನು ಸತ್ಯವೆಂದು ನಂಬಿ ಭಾರತದ ಸಂಸ್ಕೃತಿ, ಸಿದ್ಧಾಂತ ಹಾಗೂ ತತ್ವಗಳನ್ನು ಧಿಕ್ಕರಿಸಿ ನಡೆದರು. ಭಾರತದ ಬಗ್ಗೆ ಬಿಳಿಯರು ಹೇಳಿರುವ ಮಾತೇ ನವವಿದ್ಯಾವಂತರಿಗೆ ವೇದವಾಕ್ಯವಾಯಿತು. ಎಲ್ಲದಕ್ಕೂ ಪಶ್ಚಿಮದ ಕಡೆಗೆ ನೋಡಿದ ಭಾರತೀಯರಿಗೆಪಶ್ಚಿಮದ ದೇಶಗಳಲ್ಲಿ ಹುಟ್ಟಿಕೊಂಡ ಸಿದ್ಧಾಂತಗಳು ಹಾಗೂ ತತ್ವಗಳು ಆದರ್ಶಮಯವಾಗಿ ಕಂಡವು.
ಭಾರತದ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರೂ ಕಮ್ಯುನಿಸ್ಟ್ ಸೋವಿಯತ್ ರಷ್ಯಾದ ಕಡೆಗೆ ಹೆಚ್ಚು ಒಲವನ್ನು ಹೊಂದಿದವರಾಗಿದ್ದರು. ಇದರ ಪರಿಣಾಮ ಭಾರತದಲ್ಲಿ ಮಾರ್ಕ್ಸಿಸ್ಟ್- ಕಮ್ಯುನಿಸ್ಟ್ ಚಿಂತನೆಗಳು ಹಾಗೂ ಸಾಹಿತ್ಯಗಳು ಹೆಚ್ಚು ಪ್ರಚಾರಕ್ಕೆ ಬಂದವು. ಯುನಿವರ್ಸಿಟಿಗಳ ಪ್ರೊಫೆಸರ್‌ಗಳೂ ಈ ಚಿಂತನೆಯನ್ನೇ ವಿದ್ಯಾರ್ಥಿಗಳ ತಲೆಗೆ ತುಂಬಲು ಆರಂಭಿಸಿದರು.
ವಿಜ್ಞಾನ ಪಠ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾನವಿಕಶಾಸ್ತ್ರಅಧ್ಯಯನಗಳ ಪಠ್ಯಗಳಲ್ಲೂ ಕಮ್ಯುನಿಸಂ ಅನ್ನು ತುರುಕಲಾಗಿದೆ. ಭಾರತದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಹೀಗೆ ಎಲ್ಲ ಸಾಧ್ಯವೋ ಅಲ್ಲ ಕಮ್ಯುನಿಸಂ ಬಗೆಗಿನ ಪಾಠಗಳನ್ನು ಸೇರಿಸಲಾಗಿದೆ. ಬಿ ಎನ್ ದತ್ತಾ, ಡಿ ಡಿ ಕೊಸಾಂಬಿ, ಆರ್ ಎಸ್ ಶರ್ಮಾ, ರೊಮೀಲಾ ಥಾಪರ್, ಇರ್ಫಾನ್ ಹಬೀಬ, ಡಿ ಎನ್ ಝಾ, ಕೆ ಎನ್ ಪಣಿಕ್ಕರ್ ಮೊದಲಾದವರು ಮಾರ್ಕ್ಸಿಸ್ಟ್ ಚಿಂತನೆಯಿಂದ ಪ್ರೇರಣೆ ಪಡೆದು ಭಾರತೀಯ ಚರಿತ್ರೆಯನ್ನು ಬರೆದರು.
ಮಾರ್ಕ್ಸಿಸಂ ಮತ್ತು ಕಮ್ಯುನಿಸಂ ಭಾರತಕ್ಕೆ ಪ್ರಸ್ತುತವೇ ಅಲ್ಲ. ಅದು ಹುಟ್ಟಿದ್ದು ಯುರೋಪ್‌ನ ತಾರತಮ್ಯದ ವಾತಾವರಣ ದಲ್ಲಿ. ಇದರ ಜನಕ ಕಾರ್ಲ್ ಮಾರ್ಕ್ಸ್. ಕೈಗಾರಿಕೀಕರಣಕ್ಕೆ ಕಾಲಿಟ್ಟಿದ್ದ ಯುರೋಪ್ ನಲ್ಲಿ ಬೂರ್ಶ್ವಾ (ಬಂಡವಾಳಶಾಹಿ)ಗಳು ಹಾಗೂ ಪ್ರಾಲಿಟೇರಿಯಟ್(ಶ್ರಮಿಕ)ಗಳ ನಡುವೆ ಅಸಮಾನ ಆರ್ಥಿಕ ಹಂಚಿಕೆ ಆಗುತ್ತಿದೆ, ಬಂಡವಾಳ ಶಾಹಿಗಳಿಂದ ಶ್ರಮಿಕರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ, ಮುಂದೆ ಶ್ರಮಿಕರೆಲ್ಲ ಒಗ್ಗೂಡಿ ಬಂಡವಾಳ ಶಾಹಿಗಳೊಡನೆ ವರ್ಗ ಸಂಘರ್ಷ ನಡೆಸಿ, ಕೈಗಾರಿಕೆಗಳನ್ನು ತಮ್ಮ ವಶಕ್ಕೆ ಪಡೆದು, ನಂತರ ಸಮಾಜವಾದೀ ಸಮಾಜವು ನಿರ್ಮಾಣ ಆಗಲಿದೆ ಎಂಬ ಆಶಯವನ್ನು ಮಾರ್ಕ್ಸ್ ಹರಿಬಿಟ್ಟಿದ್ದನು.
ಆತ ಮರಣಿಸಿ ೩೪ ವರ್ಷಗಳ ನಂತರ ಲೆನಿನ್ ನೇತೃತ್ವದಲ್ಲಿ ರಷ್ಯಾ ಕ್ರಾಂತಿ ನಡೆದು ತ್ಸಾರ್ ರಾಜಮನೆತನದ ಸದಸ್ಯರೆಲ್ಲರ ಕಗ್ಗೊಲೆಯಾಗಿ, ದೇಶಾದ್ಯಂತ ನಡೆದ ಭೀಕರ ರಕ್ತಪಾತದಲ್ಲಿ ಸುಮಾರು ಒಂದು ಕೋಟಿ ನಾಗರಿಕರು ಸಾವಿಗೀಡಾಗಿ ಕೊನೆಗೆಮಾರ್ಕ್ಸ್‌ನ ಆದರ್ಶ ಕಮ್ಯುನಿಸ್ಟ್ ಸೋಶಿಯಲಿಸ್ಟ್ ಪಕ್ಷವು ಸೋವಿಯತ್ ರಷ್ಯಾದಲ್ಲಿ ಅಧಿಕಾರಕ್ಕೆ ಬಂತು. ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸುವ ಸಂದರ್ಭದಲ್ಲಿ ಮಾವೋ ನಡೆಸಿದ ಸಾಮೂಹಿಕ ನರಹತ್ಯೆ, ಕಠಿಣ ಜೈಲು ಶಿಕ್ಷೆ ಹಾಗೂ ಹಸಿವಿನಿಂದಾಗಿ ಅಲ್ಲಿ ಸುಮಾರು ೪ ರಿಂದ ೫ ಕೋಟಿ ಜನರು ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ.
ಕಮ್ಯುನಿಸ್ಟ್ ಮಾವೋವಾದಿ ನಕ್ಸಲೈಟ್‌ಗಳು ಭಾರತದಲ್ಲಿ ಇದುವರೆಗೆ ೧೭೦೦೦ ಕ್ಕೂ ಹೆಚ್ಚಿನ ನಾಗರಿಕರು, ಪೋಲೀಸರುಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಇಂತಹ ರಕ್ತಸಿಕ್ತ ಇತಿಹಾಸದ ಕಮ್ಯುನಿಸ್ಟ್ ಚಿಂತನೆಗಳನ್ನು ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ. ಪಠ್ಯಗಳಲ್ಲಿ ಕಮ್ಯುನಿಸಂಗೆ ಕೊಡಲಾದ ಪ್ರಾಮುಖ್ಯದಿಂದಾಗಿ ಸಾಹಿತ್ಯ, ಕಲೆ ಹಾಗೂ ಪತ್ರಿಕಾವಲಯಗಳಲ್ಲೂ ಕಮ್ಯುನಿಸ್ಟ್ ಚಿಂತಕರು ತುಂಬಿ ಹೋದರು. ಎಡ ಪಂಥೀಯರು ಎಂದು ಗುರುತಿಸಿಕೊಳ್ಳುವ ಭಾರತೀಯ ಕಮ್ಯುನಿಸ್ಟರು ತಮ್ಮನ್ನು ತಾವು ಅಂತಾರಾಷ್ಟ್ರೀಯವಾದಿಗಳುಎಂದು ತಿಳಿದುಕೊಂಡಿದ್ದಾರೆ.
ಇವರು ನಕ್ಸಲೈಟ್‌ಗಳ ಹಿಂಸೆಗೆ ಬೆಂಗಾವಲಾಗಿ ನಿಂತರೆ, ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕರ ಪರವಾಗಿಮಾತನಾಡುತ್ತಾರೆ. ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು, ಮುಂಬೈ ಸರಣಿಸ್ಫೋಟದ ರೂವಾರಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮನ್ ಮೊದಲಾದವರ ಮರಣದಂಡನೆಯನ್ನು ತಪ್ಪಿಸಲು ಹೋರಾಟ ಮಾಡುತ್ತಾರೆ. ಚೀನಾದ ಮೇಲಿನ ಇವರ ನಿಷ್ಠೆ ಅಚಲ. ಇಂತಹ ಎಡಪಂಥೀಯರು ಭಾರತದ ನೆಲವನ್ನು, ಇಲ್ಲಿನ ಧರ್ಮ ಹಾಗೂ ಸಂಸ್ಕೃತಿಯನ್ನುಪ್ರೀತಿಸುವ ರಾಷ್ಟ್ರೀಯವಾದಿಗಳಿಗೆ ಬಲಪಂಥೀಯರೆಂಬ ಹಣೆಪಟ್ಟಿಯನ್ನು ಹಚ್ಚುತ್ತಾರೆ.
ಬಲಪಂಥೀಯ ಎನ್ನುವ ಪದದ ಉಗಮವಾದದ್ದೂ ಪಶ್ಚಿಮದ.ಅಲ್ಲಿನ ಬಿಳಿಯ ಜನಾಂಗೀಯವಾದಿಗಳು, ಸಂಪ್ರದಾಯ  ವಾದಿಗಳು, ಬದಲಾವಣೆಗೆ ಒಪ್ಪದಿರುವವರು, ಸೀಸ್ವಾತಂತ್ರ್ಯ ವಿರೋಧಿಗಳು, ಧಾರ್ಮಿಕ ಕಟ್ಟರ್ ವಾದಿಗಳು, ಅಸಹಿಷ್ಣುಗಳು ಇವರನ್ನೆಲ್ಲ ಒಟ್ಟಾಗಿ ಬಲಪಂಥೀಯರು ಎಂದು ಗುರುತಿಸಲಾಗುತ್ತಿತ್ತು. ತಮಗಾಗದ ಬಂಡವಾಳ ಹೂಡಿಕೆಯ ವ್ಯವಸ್ಥೆಯನ್ನೂ ಬಲಪಂಥದಲ್ಲಿ ಗುರುತಿಸಿದ್ದರು ಕಮ್ಯುನಿಸ್ಟರು. ಆದರೆ ಭಾರತದ ಕಮ್ಯುನಿಸ್ಟರಿಂದ ಬಲ ಪಂಥೀಯರೆಂದು ಬ್ರ್ಯಾಂಡ್ ಮಾಡಿಸಲ್ಪಟ್ಟಿರುವ ಭಾರತದ ರಾಷ್ಟ್ರೀಯವಾದಿಗಳು ಧಾರ್ಮಿಕ ಅಸಹಿಷ್ಣುಗಳಲ್ಲ,ಸ್ತ್ರೀಸ್ವಾತಂತ್ರ್ಯ ವಿರೋಧಿಗಳಲ್ಲ,ಜನಾಂಗೀಯವಾದಿಗಳಲ್ಲ, ಇತರ ಧರ್ಮೀಯರ ಮೇಲೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಹೇರುವವರಲ್ಲ.
ಹೀಗಾಗಿ ಭಾರತೀಯ ರಾಷ್ಟ್ರೀಯವಾದಿಗಳು ಬಲಪಂಥೀಯರಲ್ಲ. ಕಮ್ಯುನಿಸ್ಟರು ಭಾರತೀಯ ಸನಾತನ ಧರ್ಮದ ಪೂಜೆ ಹಾಗೂ ಧಾರ್ಮಿಕ ಆಚರಣೆಯ ವ್ಯವಸ್ಥೆ ಯನ್ನು ಪುರೋಹಿತಶಾಹೀ ಎಂದು ಕಟಕಿ ಯಾಡುತ್ತಾರೆ. ಆದರೆ ಪುರೋಹಿತಶಾಹೀ ಸಮಾಜ ಅಥವಾ ಪ್ರೀಸ್ಟ್ಲೀ ಹುಡ್ ಎನ್ನುವ ಶಬ್ದದ ಉಗಮವಾದದ್ದೂ ಯುರೋಪಿನ. ಚರ್ಚುಗಳಲ್ಲಿ ದೇವರು ಹಾಗೂ ಭಕ್ತರ ನಡುವಿನ ಕೊಂಡಿಯಾಗಿ ಪ್ರೀಸ್ಟ್ ಅಥವಾ ಧರ್ಮಗುರುಗಳನ್ನು ಕಾಣಲಾಗುತ್ತದೆ. ದೇವರ ನಂತರದ ಸ್ಥಾನ ಇವರಿಗೆ ಸಲ್ಲುತ್ತದೆ.
ಚರ್ಚ್‌ಗಳ ಭಕ್ತಾದಿಗಳ ಮನಸ್ಸಿನಲ್ಲಿ ಪವಿತ್ರ ಸ್ಥಾನವನ್ನು ಪಡೆಯುವ ಈ ಧರ್ಮಗುರುಗಳು ಇಡೀ ಸಮಾಜದ ಜನರ ಭಾವನೆಗಳನ್ನು ನಿಯಂತ್ರಿಸುತ್ತಾರೆ. ಪ್ರತೀ ಆದಿತ್ಯವಾರ ಕ್ರೈಸ್ತರು ಚರ್ಚಿಗೆ ತೆರಳಿ ಪ್ರಾರ್ಥನೆ ಮಾಡಲೇಬೇಕು, ಪ್ರತೀ ಶುಕ್ರವಾರ ಮುಸಲ್ಮಾನರು ಪ್ರಾರ್ಥನೆಗಾಗಿ ಮಸೀದಿಗೆ ತೆರಳಲೇ ಬೇಕು ಎನ್ನುವ ಕಡ್ಡಾಯ ಇದೆ. ಆದರೆ, ಭಾರತೀಯಸನಾತನ ಧರ್ಮದಲ್ಲಿ ಇಂತಹ ಕಟ್ಟುಕಟ್ಟಲೆಗಳು ಇಲ್ಲ. ದೇವಸ್ಥಾನಕ್ಕೆ ತೆರಳದೇ ಇದ್ದರೂ ಧರ್ಮಬಾಹಿರರಾಗುತ್ತೇವೆ ಎನ್ನುವ ಭಯವಿಲ್ಲ. ದೇವಸ್ಥಾನಗಳ ಪುರೋಹಿತರಿಗೆ/ಅರ್ಚಕರಿಗೆ ಭಕ್ತರ ಮೇಲೆ ಹಾಗೂ ಸಾಧು- ಸನ್ಯಾಸಿಗಳಿಗೆ ಸನಾತನ ಧರ್ಮದ ಮೇಲೆ ನಿಯಂತ್ರಣವಿಲ್ಲ.
ಹೀಗಿರುವಾಗ ಇಲ್ಲಿನ ಸನಾತನ ಧರ್ಮವನ್ನು ಪುರೋಹಿತಶಾಹೀ ಎಂದು ಕರೆಯುವುದರಲ್ಲಿ ಯಾವುದೇ ಅರ್ಥವಿಲ್ಲ.ಮಾತೆತ್ತಿದರೆ ಬುದ್ಧಿಜೀವಿಗಳು ಮನುಸ್ಮೃತಿಯ ವಿಚಾರವನ್ನು ತಂದು ಅದುಸೀವಿರೋಧಿಯಾಗಿದೆ, ಅದು ಜಾತಿ ತಾರತಮ್ಯ ವನ್ನು ಬೋಧಿಸುತ್ತದೆ ಎಂದು ಹೇಳುತ್ತಾರೆ. ಆದರೆ ಭಾರತದಲ್ಲಿ ಪ್ರಸ್ತುತ ಸನಾತನ ಧರ್ಮವು ಮನುಸ್ಮೃತಿಯನ್ನು ಆಧರಿಸಿ ನಡೆಯುತ್ತಿಲ್ಲ. ಮನುಸ್ಮೃತಿ ಬಿಡಿ, ಯಾವುದೇ ರೀತಿಯ ನಿರ್ದಿಷ್ಟ ಧಾರ್ಮಿಕ ಗ್ರಂಥವನ್ನು ಕಲಿಯಬೇಕು ಅಥವಾ ನಿತ್ಯ ಪಠಿಸಬೇಕು ಎನ್ನುವ ಕಡ್ಡಾಯವೂ ಇಲ್ಲಿ ಇಲ್ಲ.
ಹೀಗಾಗಿ ಈ ತಲೆಮಾರಿನ ಜನಾಂಗಕ್ಕೆ ಮನುಸ್ಮೃತಿ ಎಂದರೆ ಏನೆಂದೇ ಗೊತ್ತಿಲ್ಲ. ಭಾರತೀಯ ನಂಬಿಕೆಯ ಪ್ರಕಾರ ಕ್ರಿ.ಪೂ ೩೧೦೨ ರಿಂದ ಕಲಿಯುಗ ನಡೆಯುತ್ತಿದೆ. ಕಲಿಯುಗಕ್ಕೆ ಮನುಸ್ಮೃತಿಯು ಅನ್ವಯವಾಗುವುದಿಲ್ಲ ಎಂದು ವ್ಯಾಸರು ಹೇಳಿದ್ದಾರೆ. ಕಲಿಯುಗಕ್ಕೆ ಅನ್ವಯವಾಗುವ ಧರ್ಮ ಗ್ರಂಥ ಪರಾಶರ ಸ್ಮೃತಿ. ಈಗ ಭಾರತದಲ್ಲಿ ಯಾರೂ ಮನುಸ್ಮೃತಿಯನ್ನು ಅನುಸರಿಸು ತ್ತಿಲ್ಲವಾದುದರಿಂದ ವಿನಾಕಾರಣ ಮನುಸ್ಮೃತಿಯನ್ನು ಮಾತು ಮಾತಿಗೆ ಎಳೆದು ತರುವುದರಲ್ಲಿ ಹಾಗೂ ಸನಾತನರನ್ನು ಮನುವಾದಿಗಳೆಂದು ಹೀಗಳೆಯುವುದರಲ್ಲಿ ಅರ್ಥವಿಲ್ಲ.
ಭಾರತದ ಕೆಲವು ಬುದ್ಧಿಜೀವಿಗಳು ಹಾಗೂ ರಾಜಕೀಯ ಪಕ್ಷಗಳು ಇದೀಗ ಭಾರತದಲ್ಲಿ ಫ್ಯಾಸಿಸ್ಟ್ ಪಕ್ಷವು ಅಧಿಕಾರದಲ್ಲಿದೆ ಎಂದು ಆರೋಪಿಸುತ್ತಲೇ ಇರುತ್ತಾರೆ. ಫ್ಯಾಸಿಸಂ ಅನ್ನುವುದು ಉಗಮವಾದದ್ದು ಇಟೆಲಿಯಲ್ಲಿ. ಫ್ಯಾಸಿಸಂ ಚಳವಳಿಯನ್ನು ಹಾಗೂ ಫ್ಯಾಸಿಸ್ಟ್ ಪಾರ್ಟಿಯನ್ನು ಹುಟ್ಟುಹಾಕಿದವನು ಬೆನಿಟೋ ಮುಸ್ಸೋಲಿನಿ. ೧೯೨೪ರಲ್ಲಿ ಅಧಿಕಾರಕ್ಕೆ ಬಂದ ಮುಸ್ಸೋಲಿನಿ ಸರ್ವಾಧಿಕಾರಿಯಾಗಿ ಸಾಮ್ರಾಜ್ಯಶಾಹೀ ಆಡಳಿತವನ್ನು ನಡೆಸಿದನು.
ಸಾಮ್ರಾಜ್ಯಶಾಹೀ ಮುಸ್ಸೋಲಿನಿಯು ಬಡ ದೇಶವಾದ ಇಥಿಯೋಪಿಯಾವನ್ನು ಹಾಗೂ ಗ್ರೀಸ್ ಗಳನ್ನು ಆಕ್ರಮಿಸಲು ಪ್ರಯತ್ನಿಸಿದನು. ತನ್ನನ್ನು ತಾನು ಎರಡನೇ ಡ್ಯೂಕ್ ಎಂದು ಕರೆದುಕೊಂಡ ಮುಸ್ಸೋಲಿನಿ ರೋಮನ್ ಸಾಮ್ರಾಜ್ಯವನ್ನು ಪುನರ್ ಸ್ಥಾಪಿಸುತ್ತೇನೆ ಎಂಬ ಘೋಷಣೆಯನ್ನು ಮಾಡಿದ್ದನು. ಮುಸ್ಸೋಲಿನಿಯು ಜರ್ಮನಿಯ ನಾಝೀ ಹಿಟ್ಲರ್ ಜತೆಗೆ ಪರಸ್ಪರ ಸಹಕಾರದ ಒಪ್ಪಂದವನ್ನೂ ಮಾಡಿಕೊಂಡಿದ್ದನು.
ಫ್ಯಾಸಿಸ್ಟ್ ಆಡಳಿತವು ಜನರ ಮೂಲಭೂತ ಅಧಿಕಾರವನ್ನು ಕಿತ್ತುಕೊಂಡಿತ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತಕ್ಕೆ ಬಂದಿರುವ ರಾಜಕೀಯ ಪಕ್ಷವನ್ನು ಫ್ಯಾಸಿಸಂಗೆ ಹೋಲಿಸಲಾಗುತ್ತಿರುವುದು ರಾಜಕೀಯ ಹತಾಶೆಯಲ್ಲದೆ ಬೇರೇನೂ ಅಲ್ಲ. ಎಡಚರು ಹಾಗೂ ಬುದ್ಧಿಜೀವಿಗಳ ಬತ್ತಳಿಕೆಯಲ್ಲಿ ಸದಾ ಸಿದ್ಧವಾಗಿರುವ ಇನ್ನೊಂದುಅಸಎಂದರೆಬ್ರಾಹ್ಮಣ್ಯ ಎನ್ನುವ ಪದ. ಟ್ವಿಟ್ಟರ್‌ನ ಸಿಇಒ ಆಗಿದ್ದ ಜ್ಯಾಕ್ ಡೋರ್ಸೆ ೨೦೧೮ ರಲ್ಲಿ ಭಾರತಕ್ಕೆ ಭೇಟಿಕೊಟ್ಟಿದ್ದ ಸಂದರ್ಭದಲ್ಲಿ ಕೈಯಲ್ಲಿ ಸ್ಮ್ಯಾಶ್ ಬ್ರಾಹ್ಮಿನಿಕಲ್ ಪ್ಯಾಟ್ರಿಯಾರ್ಕಿ ಎನ್ನುವ ಪೋಸ್ಟರ್‌ಅನ್ನು ಹಿಡಿದುಕೊಂಡು ಬರ್ಕಾದತ್ ಮೊದಲಾದ ಪತ್ರಕರ್ತೆಯರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದರು.
ಬ್ರಾಹ್ಮಣ ಪುರುಷ ಪ್ರಧಾನ ವ್ಯವಸ್ಥೆಯನ್ನು ಪುಡಿಗಟ್ಟಿ ಎನ್ನುವುದು ಈ ಪೋಸ್ಟರ್‌ನ ಅರ್ಥವಾಗಿತ್ತು. ಬ್ರಾಹ್ಮಣರಿಗೂ ಪುರುಷ ಪ್ರಧಾನ ವ್ಯವಸ್ಥೆಗೂ ಸಂಬಂಧವೇ ಇಲ್ಲ. ಬ್ರಾಹ್ಮಣರಲ್ಲಿ ಬಿಡಿ, ಇಡೀ ಹಿಂದೂ ಧರ್ಮದಲ್ಲಿ ಎಲ್ಲಿಯೂ ಈಗ ಪಿತೃ ಪ್ರಧಾನ ವ್ಯವಸ್ಥೆಯಿಲ್ಲ. ಇಲ್ಲಿ ಧಾರ್ಮಿಕ ಆಚರಣೆಗಳಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶವಿದೆ. ಸೌದೀ ಅರಬ, ಇರಾನ್, ಇರಾಕ್, ಅಫ್ಘಾನಿಸ್ತಾನ, ಪಾಕಿಸ್ತಾನ ಮೊದಲಾದ ಇಸ್ಲಾಮಿಸ್ಟ್ ದೇಶಗಳಲ್ಲಿ, ವ್ಯಾಟಿಕನ್ ಚರ್ಚ್‌ನಲ್ಲಿ ಇಂದಿಗೂ ಪುರುಷ ಪ್ರಭುತ್ವ ವ್ಯವಸ್ಥೆ ಮುಂದುವರಿದಿದೆ.
ಆದರೆ ಅವುಗಳನ್ನು ಪ್ರಶ್ನಿಸಲು ಧೈರ್ಯ ಇರದಿರುವ ಚೇತನ್ ಅಹಿಂಸಾ ನಂತವರು ಸದಾ ಬ್ರಾಹ್ಮಣ್ಯ, ಬ್ರಾಹ್ಮಣ ಅಂತಬಡಬಡಿಸುತ್ತಲೇ ಇರುತ್ತಾರೆ. ಹಿಂದೂ ಧರ್ಮದ ಆಚರಣೆಗಳಾದ ಕರ್ವಾ ಚೌತ್, ರಕ್ಷಾ ಬಂಧನ, ದೀಪಾವಳಿ, ಗೌರೀಹಬ್ಬ, ಛಾತ್ ಪೂಜಾ ಮೊದಲಾದ ಆಚರಣೆಗಳು ಪುರುಷಪ್ರಧಾನ ಹಬ್ಬಗಳು ಎಂದು ಬೊಬ್ಬೆಹಾಕುವ ಸೀವಾದಿಗಳು ಬುರ್ಖಾಪದ್ಧತಿ,ತ್ರಿವಳಿ ತಲಾಖ್‌ಗಳ ಪರವಾಗಿ ಮಾತನಾಡುತ್ತಾರೆ.
ಇರಾಕ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದವರಾಗಿರುವ ಯೆಝ್ದಿ ಮಹಿಳೆಯರ ಮೇಲೆ ಮತಾಂಧರು ನಡೆಸಿದ ಅಮಾನುಷ ಅತ್ಯಾಚಾರ, ಲೈಂಗಿಕ ಶೋಷಣೆ ಹಾಗೂ ಮಾರಾಟಗಳ ವಿರುದ್ಧ, ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಕ್ರೈಸ್ತ ರ ಹೆಣ್ಣುಮಕ್ಕಳನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ವಿವಾಹವಾಗುತ್ತಿರುವುದರ ವಿರುದ್ಧ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಮೇಲೆ ನಿಷೇಧ ಹೇರಿರುವುದರ ವಿರುದ್ಧ ನಮ್ಮ ದೇಶದ ಮಹಿಳಾವಾದಿಗಳು ಸೊಲ್ಲನ್ನು ಎತ್ತುವುದೇ ಇಲ್ಲ.
ಬಲಪಂಥೀಯ, ಪುರುಷಪ್ರಧಾನ ವ್ಯವಸ್ಥೆ, ಫ್ಯಾಸಿಸ್ಟ್, ಅಸಹಿಷ್ಣುತೆ, ಮಾನವಹಕ್ಕುಗಳ ಉಲ್ಲಂಘನೆ ಮೊದಲಾದ ಪದಗಳು ಭಾರತದಲ್ಲಿ ಯಥೇಚ್ಛವಾಗಿ ಬಳಸಲ್ಪಡುತ್ತಿದೆ. ಆದರೆ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಹೊಂದಿರುವ ಭಾರತವುಈ ಯಾವುದೇ ನಿಂದನೆಗಳಿಗೆ ಅರ್ಹವಲ್ಲ. ವಿಶ್ವಕುಟುಂಬ, ವಿಶ್ವಮಾನವ ಎನ್ನುವ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಸನಾತನ ಧರ್ಮ ಹಾಗೂ ನಂಬಿಕೆಯನ್ನು ಇತರರ ಮೇಲೆ ಹೇರಲಾಗುತ್ತಿಲ್ಲ.
ಅಲ್ಪಸಂಖ್ಯಾತರಾದ ಮುಸಲ್ಮಾನ, ಕ್ರೈಸ್ತ, ಸಿಕ್ಖರು ಮಾತ್ರವಲ್ಲ ಅತೀ ಸೂಕ್ಷ್ಮ ಅಲ್ಪಸಂಖ್ಯಾತರಾದ ಫಾರ್ಸಿ, ಜೈನ, ಬೌದ್ಧರಿಗೂ ಅವರವರ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳಿಗೆ ಇಲ್ಲಿ ಸಮಾನ ಅವಕಾಶವಿದೆ. ಹೀಗಾಗಿ ವಿದೇಶಗಳಿಂದ ಎರವಲು ತಂದ ಸವಕಲು ಸಿದ್ಧಾಂತಗಳು ಇಲ್ಲಿಗೆ ಅನ್ವಯವಾಗುವುದಿಲ್ಲ.