ಯಾರೊಬ್ಬರ ಭಾವನೆಗಳಿಗೂ ಧಕ್ಕೆಯಾಗಕೂಡದು
ಸಂಗತ
ವಿಜಯ್‌ ದರಡಾ
ವಿಶ್ವದ ಎಲ್ಲ ಧರ್ಮಗಳಿಗೂ ಮತ್ತು ಅಂತಹ ಧರ್ಮಗಳನ್ನು ಅನುಸರಿಸುವ ಮಂದಿಗೂ ಇಂಬುಕೊಟ್ಟಿರುವ ವಿಶೇಷ ನೆಲ ಈ ಭಾರತ. ಹೇಗೆ ಒಂದು ಉದ್ಯಾನದಲ್ಲಿ ವಿವಿಧ ಬಗೆಯ ಪುಷ್ಪಗಳಿದ್ದರೆ ಉದ್ಯಾನದ ಅಂದ ಹೆಚ್ಚುವುದೋ, ಈ ದೇಶದ  ಸೌಂದರ್ಯ ಅಡಗಿರುವುದು ಕೂಡ ಅಂತಹ ವಿಭಿನ್ನ ಧರ್ಮಗಳ ತತ್ವಾದರ್ಶಗಳ ನೆಲೆಗಟ್ಟಿನಲ್ಲಿ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕಿದೆ.
ದೇಶಾದ್ಯಂತ ಜೈನ ಸಮುದಾಯದ ಮಂದಿ ಪ್ರತಿಭಟನೆಗಳನ್ನು ಮಾಡಿದ ನಂತರದಲ್ಲಿ ಕೇಂದ್ರ ಸರಕಾರ ಸಮ್ಮದ್ ಶಿಖರಜಿ ಪರ್ವತ ಪ್ರದೇಶದಲ್ಲಿ ಮದ್ಯ-ಮಾಂಸ ಮತ್ತು ಧ್ವನಿವರ್ಧಕಗಳ ನಿಷೇಧವನ್ನು ಹೇರಿದೆ. ಆದರೆ ಆ ಪವಿತ್ರ ಪ್ರದೇಶವನ್ನು ಪ್ರವಾಸಿ ಪ್ರದೇಶಗಳ ಪಟ್ಟಿಯಿಂದ ಹೊರಗಿಡುವುದು ರಾಜ್ಯ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಒಂದು ವೇಳೆ ಸಮ್ಮದ್‌ಶಿಖರಜೀ ಕ್ಷೇತ್ರವನ್ನು ಪ್ರವಾಸಿ ಸ್ಥಳಗಳ ಪಟ್ಟಿಯಿಂದ ಹೊರಗಿಡುವುದಾದರೆ ಜಾರ್ಖಂಡ ಸರಕಾರ ಜೈನ ಸಮುದಾಯದವರ ಭಾವನೆ ಗಳನ್ನು ಪರಿಗಣಿಸಿಲ್ಲವೇ? ಇದು ಎಲ್ಲರ ಮುಂದಿರುವ ಪ್ರಶ್ನೆ.
ಜಾರ್ಖಂಡ ರಾಜ್ಯದ ಗಿರ್ಡಿಶ್ ಜಿಲ್ಲೆಯ ಚೋಟಾ ನಾಗಪುರ ಪ್ರಾಂತ್ಯದಲ್ಲಿ ರುವ ಶ್ರೀ ಸಮ್ಮದ್‌ಶಿಖರಜಿ ಕ್ಷೇತ್ರ ವಿಶ್ವಾದ್ಯಂತ ಇರುವ ಎಲ್ಲ ಜೈನ ಶ್ರದ್ಧಾಳುಗಳ ಪಾಲಿನ ಪವಿತ್ರ ಕ್ಷೇತ್ರ. ೨೪ ತೀರ್ಥಂಕರರ ಪೈಕಿ ೨೦ ತೀರ್ಥಂಕರರು ನಿರ್ವಾಣವನ್ನು ಹೊಂದಿದ್ದು ಇದೇ ಕ್ಷೇತ್ರದಲ್ಲಿ ಎಂಬುದು ವಿಶೇಷ. ಹಾಗಾಗಿ ಇದು ಸಿದ್ಧ ಕ್ಷೇತ್ರವೆಂದೇ ಹೆಸರಾ ಗಿದೆ. ಪ್ರತಿವರ್ಷ ವಿಶ್ವದ ವಿವಿಧ ಕಡೆಗಳಿಂದ ಲಕ್ಷಾಂತರ ಜೈನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ, ದರ್ಶನ ಪಡೆಯುತ್ತಾರೆ, ಭಕ್ತಿ ಮೆರೆಯುತ್ತಾರೆ.
ಹಿಂದೂಗಳು ಹೇಗೆ ತಮ್ಮ ಜೀವಿತಕಾಲದಲ್ಲಿ ಒಂದು ಬಾರಿಯಾದರೂ ತೀರ್ಥಯಾತ್ರೆ ಮಾಡಬೇಕೆಂದು ಬಯಸಿರುತ್ತಾರೋಅದೇ ರೀತಿಯಲ್ಲಿ ಜೈನರು ಕೂಡ ಸಮ್ಮದ್‌ಶಿಖರಜಿ, ಪಾವಾಪುರಿ, ಪಲಿಟಾಣ ಮತ್ತು ರಾಜಗೀರ್‌ಗಳಿಗೆ ಭೇಟಿ ಕೊಡುವ ಆಸೆಯನ್ನು ಹೊಂದಿರುತ್ತಾರೆ. ೨೦೧೯ರಲ್ಲಿ ರಾಜ್ಯ ಸರಕಾರದ ಆಶಯದ ಮೇರೆಗೆ ಕೇಂದ್ರ ಸರಕಾರವೂ ಕೂಡ ಶ್ರೀ ಸಮ್ಮದ್‌ಶಿಖರಜಿ ಕ್ಷೇತ್ರವನ್ನು ‘ಎಕೋ ಟೂರಿಸಂ’ ತಾಣವೆಂದು ಘೋಷಿಸಿದೆ. ಆದರೆ ಜೈನ ಸಮುದಾಯದ ಜನರು ತಕ್ಷಣಕ್ಕೆ ಅದಕ್ಕೆ ತಕರಾರು ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರದ ನಡವಳಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸುವುದು ಬೇಕಿರಲಿಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ್ಯ ಸರಕಾರದ ಸಮ್ಮದ್ ಶಿಖರಜಿ ಕ್ಷೇತ್ರವನ್ನು ಎಕೋ ಟೂರಿಸಂ ತಾಣವೆಂದು ಘೋಷಿಸಿಯಾಗಿದೆ. ಕೆಲವು ಜನರನ್ನು ಖುಷಿ ಪಡಿಸುವ ಸಲುವಾಗಿ ಧಾರ್ಮಿಕ ಕೇಂದ್ರವೊಂದನ್ನು ಪ್ರವಾಸಿ ತಾಣವೆಂದು ಘೋಷಿಸಿರುವುದು ನೀಚತನದ ಪರಮಾವಧಿ ಎಂಬ ಅಭಿಪ್ರಾಯವೂ ಇದೆ. ಇಂತಹ ಪ್ರದೇಶಗಳಲ್ಲಿ ಮದ್ಯ, ಮಾಂಸ ಮಾರಾಟಕ್ಕೂ ಅವಕಾಶ ಇದೆ ಎಂಬುದು ಇನ್ನೊಂದು ಆತಂಕದ ಸಂಗತಿ.
ಸಮ್ಮದ್ ಶಿಖರಜಿ ಕ್ಷೇತ್ರದಲ್ಲಿ ಟ್ರೆಕ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಮೂಲಕ ಅಲ್ಲಿನ ನಿಸರ್ಗದ ಸೌಂದರ್ಯವನ್ನೂಹಾಳುಗೆಡಹುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪ ಇನ್ನೊಂದೆಡೆ ಇದೆ. ಈ ಕಾರಣಕ್ಕಾಗಿ ದೇಶವ್ಯಾಪಿ ಪ್ರತಿಭಟನೆ ಕೂಡ ನಡೆದಿದೆ. ಇದಾದ ನಂತರದಲ್ಲಿ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕೆಲವೊಂದು ನಿರ್ಬಂಧಗಳನ್ನು ಅಲ್ಲಿ ಹೇರಿದೆ.
ಆದರೆ ಇಲ್ಲಿ ಆತಂಕದ ಸಂಗತಿಯೆಂದರೆ ಜೈನಸಂತರುಗಳು ಈ ಕುರಿತಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಏನೇ ಆಗಿರಲಿಸರಕಾರಗಳು ಒಂದು ಧರ್ಮದ ಭಾವನೆಗಳ ಜತೆಗೆ ಆಟವಾಡುವುದು ಸರಿಯೇ ಎಂಬುದು ಇಲ್ಲಿ ಎದ್ದಿರುವ ಬಹುದೊಡ್ಡ ಪ್ರಶ್ನೆ. ನಮ್ಮ ಸಂವಿಧಾನದಲ್ಲಿ ಕೂಡ ಎಲ್ಲ, ಅಲ್ಪಸಂಖ್ಯಾತರ ಘನತೆ ಮತ್ತು ಭಾವನೆಗಳನ್ನು ರಕ್ಷಿಸುವ ಕುರಿತಾಗಿ ಉಲ್ಲೇಖವಿದೆ. ಇದು ನಮ್ಮೆಲ್ಲರ ಕರ್ತವ್ಯವೂ ಹೌದು. ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು.
ಇಲ್ಲಿ ಯಾರ ಹಿರಿತನಕ್ಕೂ ಅವಕಾಶವಿಲ್ಲ. ಎಲ್ಲರೂ ಹಿಂದುಗಳು ಎನ್ನುವುದು ಕೂಡ ಸರಿಯಾದುದಲ್ಲ. ಪ್ರತಿಯೊಬ್ಬರಿಗೂಅವರದೇ ಆದ ನಂಬುಗೆಗಳಿವೆ. ಅನೇಕ ಜೈನ ಸಮುದಾಯದ ಮಂದಿ ತಮ್ಮ ದೇವರುಗಳ ಜೊತೆಗೆ ಹಿಂದೂ ದೇವರು ಗಳನ್ನೂ ಆರಾಽಸುತ್ತಾರೆ. ಜೈನಸಮುದಾಯದವರು ಪ್ರಮುಖವಾಗಿ ಭಗವಾನ್ ಮಹಾವೀರನ ಶಾಂತಿ, ಅಹಿಂಸೆ,ಕ್ಷಮಾ ಗುಣಗಳನ್ನು ಅನುಸರಿಸುತ್ತಾರೆ. ಇವು ಜೈನ ಸಮುದಾಯದ ಬಹುದೊಡ್ಡ ಗುಣಗಳು. ಜೈನರು ಜನಸಂಖ್ಯೆಯಲ್ಲಿ ಕಡಿಮೆ ಇರಬಹುದು, ಆದರೆ ಅವರು ಈ ದೇಶದ ಆರ್ಥಿಕತೆಗೆ ಮತ್ತು ದೇಶವನ್ನು ಕಟ್ಟುವುದಕ್ಕೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿದ್ದಾರೆ.
ಜೈನರ ಭಾವನೆಗಳಿಗೆ ಧಕ್ಕೆಯಾಗುವುದೆಂದರೆ ಅದು ಇಡೀ ದೇಶಕ್ಕೇ ಧಕ್ಕೆಯಾದಂತೆ ಎಂಬುದು ನನ್ನ ಭಾವನೆ. ಆದರೆ ಇತ್ತೀಚಿನ ದಿನಗಳಲ್ಲಿ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಪ್ರವೃತ್ತಿ ಎಲ್ಲೆಡೆ ವ್ಯಾಪಕವಾಗುತ್ತಿದೆ. ನಾಯಕರು ಗಳು ಇನ್ನೊಂದು ಕೋಮಿನ ಧಾರ್ಮಿಕ ವಿಚಾರಗಳ ಬಗ್ಗೆ ವೃಥಾ ಕಾಮೆಂಟುಗಳನ್ನು ಮಾಡುವುದರಲ್ಲೇ ವ್ಯಸ್ತರಾಗಿರುತ್ತಾರೆ.ಕೆಲವೆಡೆ ಧಾರ್ಮಿಕ ಸ್ಥಳಗಳನ್ನೇ ಗುರಿಯಾಗಿಟ್ಟುಕೊಂಡು ಟೀಕೆ ಟಿಪ್ಪಣಿ ಮಾಡಿದರೆ ಇನ್ನು ಕೆಲವೆಡೆ ಅಂತಹ ಸ್ಥಳಗಳಮೇಲೆ ದಾಳಿಯೂ ನಡೆಯುತ್ತದೆ. ಈ ಬಗ್ಗೆ ನಿರ್ದಿಷ್ಟ ಉದಾಹರಣೆ ಕೊಡುವುದು ಬೇಡವೆನಿಸುತ್ತದೆ.
ಸಮಾಜದ ತುಂಬಾ ಎಷ್ಟು ವೇಗದಲ್ಲಿ ದ್ವೇಷ ಹರಡುತ್ತಿದೆ ಎಂಬುದನ್ನು ನೀವೆಲ್ಲ ಗಮನಿಸುತ್ತಲೇ ಬಂದಿದ್ದೀರಿ. ದೇಶ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ನನಗೆ ಆತಂಕವಾಗುತ್ತಿದೆ. ನಾನು ಸ್ವಾಮಿ ವಿವೇಕಾನಂದರ ಮಾತುಗಳನ್ನು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇನೆ. ಧರ್ಮವೆಂಬುದು ವ್ಯಕ್ತಿಯೊಬ್ಬನನ್ನು ಮಾತ್ರವಲ್ಲ ಇಡೀ ದೇಶವನ್ನೇ ಪ್ರಭಾವಿಸಬಲ್ಲ ನೈತಿಕ ಶಕ್ತಿ ಎಂದವರು ಹೇಳುತ್ತಿದ್ದರು. ಯಾವುದೇ ಧರ್ಮವೂ ತಪ್ಪಲ್ಲ ಆದರೆ ಧರ್ಮಗಳನ್ನು ಅರ್ಥೈಸುವ ರೀತಿಯಲ್ಲಿತಪ್ಪಿದೆ. ಇದು ಇಂದಿಗೂ ಸತ್ಯವೆನಿಸುವ ಮಾತು.
ವಿಶ್ವದ ಎಲ್ಲ ಧರ್ಮಗಳಿಗೂ ಮತ್ತು ಅಂತಹ ಧರ್ಮಗಳನ್ನು ಅನುಸರಿಸುವ ಮಂದಿಗೂ ಇಂಬುಕೊಟ್ಟಿರುವ ವಿಶೇಷ ನೆಲ ಈ ಭಾರತ. ಹೇಗೆ ಒಂದು ಉದ್ಯಾನದಲ್ಲಿ ವಿವಿಧ ಬಗೆಯ ಪುಷ್ಪಗಳಿದ್ದರೆ ಉದ್ಯಾನದ ಅಂದ ಹೆಚ್ಚುವುದೋ, ಈ ದೇಶದ ಸೌಂದರ್ಯ ಅಡಗಿರುವುದು ಕೂಡ ಅಂತಹ ವಿಭಿನ್ನ ಧರ್ಮಗಳ ತತ್ವಾದರ್ಶಗಳ ನೆಲೆಗಟ್ಟಿನಲ್ಲಿ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕಿದೆ. ವಿಶ್ವದ ಎಲ್ಲ ಧರ್ಮಗಳನ್ನು ಸಮೀಪದಿಂದ ಕಾಣುವ ಅಧ್ಯಯನ ಮಾಡುವ ಅಪೇಕ್ಷೆ ನನ್ನದು. ವಿಶ್ವದ ಎಲ್ಲ ಜಾತಿ-ಧರ್ಮಗಳಲ್ಲಿ ನನ್ನ ಆತ್ಮೀಯ ಗೆಳೆಯರಿದ್ದಾರೆ.
ಎಲ್ಲ ಧರ್ಮಗಳ ಧಾರ್ಮಿಕ ಆಚರಣೆ ಗಳಲ್ಲಿ ನಾನು ಭಾಗವಹಿಸುತ್ತೇನೆ ಮತ್ತು ಮೂಲತಃ ಯಾವುದೇ ಧರ್ಮವೂ ದ್ವೇಷವನ್ನು ಬೋಽಸುವುದಿಲ್ಲ ಎಂಬುದು ನನ್ನ ದೃಢ ಅಭಿಪ್ರಾಯ. ಯಾವ ಧರ್ಮವೂ ಇನ್ನೊಂದು ಧರ್ಮದತ್ತ ಅಗೌರವ ತೋರುವುದಿಲ್ಲ. ಆದರೆ ಈಗ ಮತಾಂಧತೆ ಎಂಬುದು ಎಲ್ಲೆ ಮೀರಿದೆ. ನಮ್ಮ ನಂಬಿಕೆ ಹೇಗೆ ಸರಿ ಇದೆಯೋ, ಅನ್ಯರ ನಂಬಿಕೆಯೂಸರಿಯಾಗಿಯೇ ಇರುತ್ತದೆ ಎಂಬ ಅಭಿಪ್ರಾಯವೇ ಜನಮಾನಸದಿಂದ ಮಾಯವಾಗುತ್ತಿದೆ.
ಪಕ್ಷಪಾತಿಯಾಗಿ ಆಲೋಚನೆ ಮಾಡುವುದರಿಂದ ತೊಂದರೆಗಳೇ ಹೆಚ್ಚು. ಹಾಗಾಗಿ ನಾನು ಹೇಳುತ್ತಿರುವುದೇನೆಂದರೆ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸುವುದನ್ನು ನಾವು ಮೊದಲಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಧಾರ್ಮಿಕ ಪಂಗಡಗಳ ನಾಯಕರು ಮತ್ತು ರಾಜಕಾರಣಿಗಳು ತಮ್ಮ ಅನುಯಾಯಿಗಳನ್ನು ಪರಧರ್ಮ ಸಹಿಷ್ಣುತೆಯ ಚಿಂತನೆಯೊಂದಿಗೆಮುಂದೊಯ್ಯಬೇಕಿದೆ.
ಹಾಗಾಗಿ ನಾನು ಬಹಳ ಸ್ಪಷ್ಟವಾಗಿ ಹೇಳುವುದೇನೆಂದರೆ ಸಮ್ಮದ್ ಶಿಖರಜೀ ವಿಚಾರ ಯಾವುದೇ ಧರ್ಮ ಅಥವಾ ನಂಬಿಕೆಗೆಸಂಬಂಧಪಟ್ಟದಲ್ಲ. ಅದು ನಮ್ಮ ದೇಶದ ಅನನ್ಯ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ ವಿಚಾರ. ನಮ್ಮ ಸಂಸ್ಕೃತಿ ಉಳಿದರೆ, ನಮ್ಮ ದೇಶ ಅತ್ಯದ್ಭುತವಾಗಿ ಬೆಳವಣಿಗೆಯನ್ನು ಕಾಣಬಲ್ಲದು. ಪರ್ವತರಾಜ ಹಿಮಾಲಯ ನಮಗೆ ಬೋಧಿಸು ವುದು ಅದನ್ನೇ. ಗಂಗಾನದಿಯ ಆದರ್ಶವೂ ಅದೇ ಆಗಿದೆ. ನಮ್ಮ ಋಷಿಮುನಿಗಳು ಹೇಳಿದ್ದು ಕೂಡ ಅದನ್ನೇ. ಸಂಸ್ಕೃತಿ ಯನ್ನು ಗೌರವಿಸುವುದ ಕ್ಕಿಂತ ಮಹತ್ತರವಾದದ್ದು ಬೇರೇನೂ ಇಲ್ಲ. - 