ಅಸ್ಪಷ್ಟ ವಿಚಾರಧಾರೆ
ಅಭಿಮತ
ಅಜಯ್‌ ಅಂಗಡಿ
ಚೇತನ್ ಅಹಿಂಸಾ! ಇತ್ತೀಚೆಗೆ ಸಕಲ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರುತ್ತಿರುಧ ಹೆಸರು. ಜನ್ಮತಃ ಈತಭಾರತೀಯನಲ್ಲ. ಈತನ ಪೋಷಕರು ಅನಿವಾಸಿ ಭಾರತೀಯರು. ಭಾರತಕ್ಕೆ ಬಂದು ಹದಿನೇಳು ವರುಷವಾದರೂ ಈತ ಭಾರತದ ಪೌರತ್ವ ಹೊಂದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈತ ಆಡುತ್ತಿರುವ ಮಾತುಗಳಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಒಂದು ರೀತಿಯ ದ್ವಂದ್ವ ಮನಸ್ಥಿತಿಯನ್ನು ಹೊಂದಿರುವ ಈತ ಸಮಾನತೆ ಸಾರುವ ಹರಿಕಾರನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದ್ದಾನೆ.
ಎಡಪಂಥೀಯ ವಿಚಾರಧಾರೆಗಳನ್ನು ಆಳವಾಗಿ ಬೇರೂರಿಸಿಕೊಂಡು ಬೆಳೆದಿರುವವನಂತೆ ಕಾಣುತ್ತಾನೆ ಈತ. ಈತನ ವಿಶ್ವಮಾನವತಾ ವಾದ ವನ್ನೇನೋ ಒಪ್ಪಬಹುದು. ಹಾಗಂತ ವೈರಿಗಳನ್ನು ಸಹೋದರರೆನ್ನಲಾದೀತೆ? ತಾನಾಡುವ ಪ್ರತಿ ಮಾತಲ್ಲೂ ಬಾಬಾಸಾಹೇಬ್ ಅಂಬೇಡ್ಕರರನ್ನು ಎಳೆದು ತರುವ ಈತ ಅಂಬೇಡ್ಕರರನ್ನು ಪೂರ್ತೀ ತಿಳಿದುಕೊಂಡಿರಲು ಧ್ಯವೇ ಇಲ್ಲ. ಪಾಕಿಸ್ತಾನೀಯರು ಸೋದರು ಎನ್ನುತ್ತಾನಲ್ಲ ಈ ಮಹಾಶಯ? ವಿದೇಶಿಯರು, ವೈರಿ ಗಳನ್ನೆಲ್ಲ ಸಹೋದರರು ಎನ್ನುವ ಹಾಗಿದ್ದರೆ ಅಂಬೇಡ್ಕರ್ ಸಹಿತ ಇತರ ಸ್ವಾತಂತ್ರ್ಯ ಸೇನಾನಿಗಳು ಭಾರತವನ್ನು ಬ್ರಿಟಿಷರಿಂದ ಏಕೆ ಸ್ವತಂತ್ರಗೊ ಳಿಸುತ್ತಿದ್ದರು? ಅದರ ಅಗತ್ಯ ವಾದರೂ ಏನಿತ್ತು? ವಿಶ್ವಮಾನವರಾಗಿ ಅವರ ಅಡಿಯಲ್ಲಿ ಇರಬಹು ದಿತ್ತಲ್ವ? ಎಂದು ತಿಳಿಯಬೇಕಿದೆ.
ಬಾಯಿಬಿಟ್ಟರೆ ಬ್ರಾಹ್ಮಣ್ಯ, ಮೂಲನಿವಾಸಿ ಎಂದು ಉಚ್ಚರಿಸುವ ಚೇತನ್, ಈ ಭೂಮಿಯಲ್ಲಿ ಆರ್ಯರು, ದ್ರಾವಿಠರು ಎಲ್ಲರೂ ಮೂಲನಿವಾಸಿಗಳೇಎಂದೇಕೆ ಯೋಚಿಸಲಾರಿರಿ? ಒಟ್ಟಿನಲ್ಲಿ ಈ ಚೇತನ್ ಎಂಬ ಸಮಾನತೆಯ ಸರದಾರ ಭಾರತ ವನ್ನು ಅಕ್ಷರಶಃ ಹರಿದು ಹಂಚಲು ಹವಣಿಸುತ್ತಿರು ವವರ ಗುಂಪಿನ ಅಗ್ರಗಣ್ಯನಂತೆ ಕಾಣಿಸುತ್ತಾನೆ. ದಲಿತರು, ಆದಿವಾಸಿಗಳು, ಮೂಲನಿವಾಸಿಗಳು ಹಿಂದೂ ಧರ್ಮದ ವರಲ್ಲ ಎಂಬ ಅಸತ್ಯವನ್ನು ಜನರ ತಲೆಗೆ ತುರುಕಲು ಹೊರಟವನೀತ ಎನ್ನುವುದಂತೂ ಸತ್ಯ.
ಒಟ್ಟಾರೆಯಾಗಿ ಹಿಂದೂ ಧರ್ಮವೆನ್ನುವುದು ಅಸ್ತಿತ್ವದ ಇಲ್ಲ ಎಂದು ಸಾಧಿಸಲು ಈತ ಪಣತೊಟ್ಟು ನಿಂತಂತಿದೆ. ಜಗತ್ತೇ ಗೌರವಿಸುವ ಬುದ್ಧ, ಬಸವ, ಅಂಬೇ ಡ್ಕರರನ್ನು ಈತ ತನ್ನದೇ ಸಿದ್ಧಾಂತದ ಅನುಷ್ಠಾನಕ್ಕೆ ಬಳಸೂತ್ತಿರುವುದು ವಿಷಾದನೀಯ. ಯಾವುದೇ ವಿಸಯದ ಮಂಡನೆಯಂದು ಸ್ಪಷ್ಟತೆ ಇರಬೇಕು. ಆದರೆ, ಚೇತನ್ ಯಾವುದಕ್ಕೂ ಸರಿಯಾದ ಸ್ಪಷ್ಟನೆ ನೀಡದಿರುವುದು ಆತನ ಅಸ್ಪಷ್ಟ ಜ್ಞಾನದ ಕೊರತೆ. ಸರಕಾರವನ್ನು ಪ್ರಶ್ನಿಸಬೇಕು, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ಹಿಡಿಯಬೇಕು ಎಲ್ಲವೂ ಸರಿ ಆದರೆ, ದೇಶದ ವಿಷಯದಲ್ಲಿ ಈತನ ವಾದ ನಾಟ್ ಅಟ್ ಆಲ್ ರೈಟ್.
ಕೆಲ ದಿನಗಳ ಹಿಂದೆ ಸುವರ್ಣ ನ್ಯೂಸಿನ ‘ನ್ಯೂಸ್ ಅವರ್’ನಲ್ಲಿ ಅಜಿತ್ ಹನುಮಕ್ಕನವರ್, ಚೇತನ್ ಮತ್ತು ಪ್ರಶ್ನಾರ್ಥಿಗಳನ್ನು ಬಿಹೈಂಡ್ ದ ಸ್ಕ್ರೀನ್ ಅದು ಹೇಗೆ ಸಂಭಾಳಿಸಿದರೋ ಭಗವಂತನೇ ಬಲ್ಲ!