ಥ್ರಾಟಲ್‌ ನಿಯಂತ್ರಣದ ವಿಕಾಸ್ ಎಂಜಿನ್
ಬಾಹ್ಯಾಕಾಶ ಬೆಳವಣಿಗೆ
ಗಿರೀಶ್ ಲಿಂಗಣ್ಣ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ತನ್ನ ಪ್ರಮುಖ  ಉಡಾ ವಣಾ ವಾಹನದ ಎಂಜಿನ್, ‘ವಿಕಾಸ್’ನ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಥ್ರೋಟಲ್ ನಿಯಂತ್ರಣದ ಪರೀಕ್ಷೆಯಲ್ಲಿ ಇಂಜಿನ್ ಯಶಸ್ವಿಯಾಗಿದೆ. ಬುಧವಾರ ಈ ಕುರಿತು ಮಾಹಿತಿ ನೀಡಿದ ಇಸ್ರೋ, ಜನವರಿ ೩೦ರಂದು ನಡೆದ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಪರೀಕ್ಷಾ ಹಾಟ್ ಟೆಸ್ಟ್‌ನಲ್ಲಿ ಉದ್ದೇಶಿತ ಶೇ.೬೭ ಥ್ರೊಟಲ್ ಅನ್ನು ೪೩ ಸೆಕೆಂಡುಗಳ ಕಾಲ ಸಾಧಿಸಲಾಯಿತು ಎಂದು ಮಾಹಿತಿ ನೀಡಿದೆ.
ಥ್ರೋಟಲ್ ಮಾಡಬಹುದಾದ ವಿಕಾಸ್ ಎಂಜಿನ್ನಿನ ಆರಂಭಿಕ ಪರೀಕ್ಷಾ ಪ್ರಯೋಗಗಳು ಅನುಕೂಲಕರ ಸನ್ನಿವೇಶಗಳನ್ನು ಉಂಟುಮಾಡಿವೆ. ಇದರಲ್ಲಿ ದಹನ ಮತ್ತು ಉಪ ವ್ಯವಸ್ಥೆಗಳು ನಿರೀಕ್ಷಿಸಿದಂತೆಯೇ ಕಾರ್ಯ ನಿರ್ವಹಿಸಿವೆ. ಇಂಜಿನ್ನಿನ ಎಲ್ಲ ಉಪ ವ್ಯವಸ್ಥೆ ಗಳು, ನಿಯಂತ್ರಣ ವ್ಯವಸ್ಥೆಗಳು ಮತ್ತು ಪರೀಕ್ಷಾ ಕೇಂದ್ರದ ವ್ಯವಸ್ಥೆಗಳು ನಿರೀಕ್ಷಿತ ಪ್ರದರ್ಶನವನ್ನೇ ತೋರಿವೆ ಎಂದು ಇಸ್ರೋ ಮಾಹಿತಿ ನೀಡಿದೆ. ಅಷ್ಟಕ್ಕೂ ಏನಿದು ಏನು ಈ ವಿಕಾಸ್ ಎಂಜಿನ್? ಲಿಕ್ವಿಡ್ ಪ್ರೊಪಲ್ಷನ್ ಸೆಂಟರ್ ೧೯೭೦ರ ದಶಕದಿಂದಲೂ ದ್ರವ ಇಂಧನ ಆಧಾರಿತ ರಾಕೆಟ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುತ್ತ ಬಂದಿದೆ. ಈ ಎಂಜಿನ್ ಸರಣಿ ಯನ್ನು‘ವಿಕಾಸ್’ಎಂದು ಕರೆಯಲಾಗಿದೆ.
ವಿಕಾಸ್ ಎನ್ನುವುದು ಶ್ರೇಷ್ಠ ವಿeನಿ ವಿಕ್ರಮ್ ಅಂಬಾಲಾಲ್ ಸಾರಾಭಾಯ್ ಅವರ ಹೆಸರಿನ ಹೃಸ್ವರೂಪವಾಗಿದೆ. ಆರಂಭದಲ್ಲಿ ವಿಕಾಸ್ ಎಂಜಿನ್ ಫ್ರಾನ್ಸ್‌ನಿಂದ ತರಿಸಿದ ಬಿಡಿಭಾಗಗಳನ್ನು ಒಳಗೊಂಡಿತ್ತು. ಬಳಿಕ ಈ ಬಿಡಿಭಾಗಗಳ ಬದಲಿಗೆ ಭಾರತೀಯವಾಗಿ ನಿರ್ಮಿಸಲಾದ ಬಿಡಿಭಾ ಗಗಳನ್ನು ಅಳವಡಿಸಲಾಯಿತು. ವಿಕಾಸ್ ಪ್ರೊಪಲ್ಷನ್ ಮೋಟರ್‌ಗಳನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)ಗಳ ಎರಡನೇ ಹಂತಕ್ಕೆ ಇಂಧನ ಪೂರೈಸಲು, ಬೂಸ್ಟರ್‌ಗಳು ಹಾಗೂ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ) ಮಾರ್ಕ್ ೧ ಹಾಗೂ ೨,ಜಿಎಸ್‌ಎಲ್‌ವಿ ಮಾರ್ಕ್ ೩ ಅಥವಾ ಲಾಂಚ್ ವೆಹಿಕಲ್ ಮಾರ್ಕ್೩ರ (ಎಲ್ವಿಎಂ೩) ಮೊದಲ ಹಂತದಲ್ಲಿ ಬಳಸಲಾಗುತ್ತದೆ.
ಥ್ರೋಟ್ಲಿಂಗ್ ವಿಚಾರದಲ್ಲಿ ಪ್ರಯೋಗಗಳನ್ನು ನಡೆಸಿ, ಆ ಮೂಲಕ ಮುಂದಿನ ರಾಕೆಟ್‌ಗಳಲ್ಲಿ ಬೂಸ್ಟರ್ ಹಂತವನ್ನು ರಕ್ಷಿಸಲು ಸಾಧ್ಯವಾಗಿದೆ.ಮಾತ್ರವಲ್ಲ, ಇದು ಉಪಗ್ರಹದ ವೇಗ ಮತ್ತು ಪಥ ವನ್ನು ನಿಯಂತ್ರಿಸಲು ನೆರವು ನೀಡುತ್ತದೆ. ದ್ರವ ಇಂಧನ ಆಧಾರಿತ ಎಂಜಿನ್ ಒಂದು ತನ್ನ ಪೂರ್ಣ ಒತ್ತಡ (ಥ್ರಸ್ಟ್) ಸಾಮರ್ಥ್ಯದ ಶೆ. ೬೭ದಷ್ಟು ಕಾರ್ಯ ನಿರ್ವಹಿಸಿದರೆ, ಅದು ತನ್ನ ಪೂರ್ಣ ಸಾಮರ್ಥ್ಯದ ಶೇ.೬೭ರಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.
ಇಲ್ಲಿ ಥ್ರೋ ಟ್ಲಿಂಗ್ ಎಂದರೆ ಇಂಧನದ ಹರಿಯುವಿಕೆಯ ದರವನ್ನು ನಿಯಂತ್ರಿ ಸುವ ಮೂಲಕ ಜೆಟ್‌ನ ಒತ್ತಡವನ್ನು ನಿಯಂತ್ರಿಸುವುದಾಗಿದೆ. ಒಟ್ಟುಶಕ್ತಿಯನ್ನು ಶೇ.೬೭ಕ್ಕೆ ನಿಗದಿಪಡಿಸುವ ಮೂಲಕ, ಉಪಗ್ರಹ ತನ್ನ ವೇಗ ಮತ್ತು ಪಥವನ್ನು ಸರಿಹೊಂದಿಸಲು ಸಾಧ್ಯವಾಗುತ್ತದೆ. ಆ ಮೂಲಕಅದು ತನ್ನ ಕಕ್ಷೀಯ ಪಥಕ್ಕೆ ನಿಖರವಾಗಿ ಸರಿಹೊಂದಿ ಕೊಳ್ಳಲು ಸಾಧ್ಯವಾಗುತ್ತದೆ. ಈ ೬೭% ಥ್ರಸ್ಟ್ ಮಟ್ಟವು ಎಂಜಿನ್ನಿನ ವಿನ್ಯಾಸ ಮತ್ತು ಚಾಲ್ತಿಯಲ್ಲಿರುವ ಪರಿಸ್ಥಿತಿ ಗಳಲ್ಲಿ ಅನಿಶ್ಚಿತವೇ ಆಗಿದ್ದರೂ, ಇದು ಎಂಜಿನ್ ತನ್ನ ಪೂರ್ಣ ಸಾಮರ್ಥ್ಯದಲ್ಲಿ ಸಾಽಸುವುದಕ್ಕಿಂತ ಕಡಿಮೆಮಟ್ಟದ್ದಾಗಿರುತ್ತದೆ.
ದ್ರವ ಇಂಧನ ಉಪಗ್ರಹ ಎಂಜಿನ್ನಿನ ಥ್ರೋಟ್ಲಿಂಗ್ ಅವಽ ಎನ್ನುವುದು ಇಂಜಿನ್ ಕಡಿಮೆ ಥ್ರಸ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಅವಧಿಯನ್ನು ಸೂಚಿಸು ತ್ತದೆ. ಥ್ರೋಟ್ಲಿಂಗ್ ಬಾಹ್ಯಾಕಾಶ ವಾಹನದ ವೇಗ ಮತ್ತು ಎತ್ತರವನ್ನು ಸರಿಹೊಂದಿಸಲು ಬೇಕಾದಂತೆ ಇಂಜಿನ್ನಿನ ಒತ್ತಡವನ್ನು ಬದಲಾಯಿ ಸುತ್ತದೆ. ಒಟ್ಟಾರೆಯಾಗಿ ಥ್ರೋಟ್ಲಿಂಗ್ ಅವಧಿ ಕಾರ್ಯಾಚರಣೆಯ ಅವಶ್ಯಕತೆ ಮತ್ತು ಮೋಟರ್‌ ವಿನ್ಯಾಸದ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ, ೬೭% ಥ್ರಸ್ಟ್ ಮಟ್ಟವನ್ನು ೪೩ ಸೆಕೆಂಡುಗಳ ಕಾಲ ಕಾಯ್ದುಕೊಳ್ಳಬಹುದು.
ಉಪಗ್ರಹ ಒಂದರ ದ್ರವ ಇಂಧನ ಎಂಜಿನ್ನಿನಲ್ಲಿ ೪೩ ಸೆಕೆಂಡುಗಳ ಕಾಲ ೬೭% ಥ್ರಸ್ಟ್ ಕಾಯ್ದುಕೊಳ್ಳುವುದು ಉಡಾವಣಾ ವಾಹನದ ಬೂಸ್ಟರ್ ಹಂತವನ್ನು ಮರಳಿ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಡಿಮೆಗೊಳಿಸಿದ ಥ್ರಸ್ಟ್ ಮಟ್ಟ ಮತ್ತು ಸಮಯವನ್ನು ಅತ್ಯಂತ ನಿಖರವಾಗಿ ಲೆಕ್ಕಾಚಾರ ಹಾಕಿದ್ದು, ಬೂಸ್ಟರ್ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಂತೆ ಮಾಡುತ್ತದೆ. ಅದರೊಡನೆ ಪ್ರಮುಖ ಉಡಾವಣಾ ಕಾರ್ಯಾಚರಣೆ ಯಲ್ಲಿ ಇಂಧನ ಉಳಿಸುವಲ್ಲೂ ಸಹಾಯಕವಾಗಿದೆ. ದ್ರವ ಇಂಧನ ಇಂಜಿನ್ನಿನ ನಿಖರ ನಿಯಂತ್ರಣದ ಮೂಲಕ, ಇಂಜಿನ್ನಿನ ಭೂಸ್ಪರ್ಶವೂ ನಿಯಂತ್ರಿತವಾಗಿ ನಡೆಯುವಂತೆ ಮಾಡುತ್ತದೆ. ಆ ಮೂಲಕ ಬೂಸ್ಟರ್ ಹಂತಕ್ಕೂ ಯಾವುದೇ ಅಪಾಯ ಎದುರಾಗದಂತೆ ಮಾಡಿ, ಅದನ್ನು ಭವಿಷ್ಯದ ಯೋಜನೆ ಗಳಲ್ಲೂ ಮರು ಬಳಕೆ ಸಾಧ್ಯವಾಗುವಂತೆ ಮಾಡುತ್ತದೆ.