ಭಾರತದ ಕ್ರಿಮಿನಲ್‌ಗಳು ತೀರಾ ಕ್ರಿಯಾಶೀಲರು !
ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@.
ಮೊದಲೆಲ್ಲ ರೋಡ್‌ನಲ್ಲಿ ರೋಲ್‌ಕಾಲ್ ಮಾಡಿ, ಕೊಲೆ-ಸುಲಿಗೆಗಳನ್ನೆಲ್ಲ ಮಾಡಿ, ಜೀವನ ಮಾಡಿಕೊಂಡವರೆಲ್ಲ ಎಂಎಲ್‌ಎ, ಎಂಪಿ, ಮಿನಿಸ್ಟರ್‌ ಗಳಾಗಿದ್ದಾರೆ. ಹಾಗೆಯೇ ಒಂದು ಕಾಲದ ದೊಡ್ಡ ದೊಡ್ಡ ವ್ಯಾಪಾರಿಗಳೆನ್ನಿಸಿಕೊಂಡಿದ್ದವರೆಲ್ಲರ ಹೆಸರು ರೋಡಿಗೆ ಬಂದಿದೆ. ವಿಜಯ್ ಮಲ್ಯ, ಹರ್ಷದ್ಮೆಹ್ತಾ, ಮೆಹುಲ್ ಚೌಕ್ಸಿ, ನೀರವ್ ಮೋದಿ, ಅಬ್ದುಲ್ ಕರೀಂ ತೆಲ್ಗಿ, ಸುಬ್ರತಾ ರಾಯ್, ಜಿಗ್ನೇಶ್ ಶಾ, ರಾಮಲಿಂಗಂ ರಾಜು, ಕೇತನ್ ಪಾರೇಖ್, ಸಿಬಿ ಭನ್ಸಾಲಿ…ಹೀಗೆ ಪಟ್ಟಿ ಮಾಡುತ್ತ ಹೋದರೆ ಇಂಥ ನೂರಾರು ಮಂದಿಗಳ್ಯಾರೂ ರಸ್ತೆಬದಿಯ ಪಿಕ್‌ಪಾಕೆಟರ್ಸ್ ಅಲ್ಲ, ದರೋಡೆಕಾರರೂ ಅಲ್ಲ.
ಸಾವಿರಾರು ಕೋಟಿ ಮೌಲ್ಯಉಳ್ಳ ಪ್ರತಿಷ್ಠಿತ ಉದ್ದಿಮೆದಾರರು. ಆದರೂ, ಬ್ಯಾಂಕ್‌ಗಳಿಗೆ ‘ಕನ್ನ’ ಹಾಕಿದ್ದಾರೆ, ದೇಶದ, ಜನರ ಸಾವಿರಾರು ಕೋಟಿ ರು.ಗಳನ್ನು ‘ಲೂಟಿ’ ಮಾಡಿ, ಕೆಲವರು ದೇಶ ಬಿಟ್ಟು ಪರಾರಿಯಾದರೆ, ಇನ್ನು ಹಲವರು ಭೂಮಿಯನ್ನೇ ಬಿಟ್ಟಿದ್ದಾರೆ. ಆದರೆ ಅವರನ್ನು ನಂಬಿ ಕೊಟ್ಟ ಹಣ ಇನ್ನೂ ವಸೂಲಿ ಆಗಿಲ್ಲ. ಅದು ಆಗೋದೂ ಡೌಟೇ! ಹಾಗೆಯೇ ಇವರು ಯಾರೂ ಒಂದೇ ಕ್ಷೇತ್ರದ ಜನರಲ್ಲ, ಬೇರೆ ಬೇರೆ ಕ್ಷೇತ್ರದವರು, ವಿಧವಿಧವಾಗಿ ಪಂಗನಾಮ ಹಾಕಿದವರು. ಆದರೂ ಇಂತಹ ಹಲವಾರು ಮೋಸಗಳಿಗೆ ನಮ್ಮ ಕಾನೂನಿನಿಂದ, ಅದರ ಚೌಕಟ್ಟಲ್ಲೇ ದಗಲ್‌ಬಾಜಿ ಮಾಡಿದ ಘಟನೆಗಳು ಈ ದೇಶದಲ್ಲಿ ಎಷ್ಟೊಂದು ನಡೆದಿದೆ, ನಡೆಯುತ್ತಲೂ ಇದೆ. ಇತ್ತೀಚೆಗೆ ಅದೇ ಸಾಲಿಗೆ ಬರಲು ಮತ್ತೊಬ್ಬನ ಕತೆ ಕಾಯುತ್ತಿತ್ತು.
ಅವನು…
ಅವನೊಬ್ಬ ಕನಸುಗಾರ. ಹುಟ್ಟಿದ್ದು ಒಂದು ಸಣ್ಣ ಮಧ್ಯಮ ವರ್ಗದ ಮನೆಯಲ್ಲಿ. ಅವನ ತಂದೆ ಬಟ್ಟೆ ವ್ಯಾಪಾರಿ. ಅವನ ಬಾಲ್ಯದ ಜೀವನ ಕಳೆದದ್ದೂ ಎಲ್ಲರ ರೀತಿ ಯಲ್ಲಿ ಸಾಮಾನ್ಯ ಸಂಕೋಲೆಯಲ್ಲೇ, ಬೇಕಾಗಿದ್ದನ್ನು ಖರೀದಿಸಲಾಗದ ಸ್ಥಿತಿಯಲ್ಲೇ. ಇದ್ದಿದ್ದರಲ್ಲೇ ಜೀವನ ನಡೆಸುವ ಸ್ಥಿತಿ. ಅವನ ಕನಸುಗಳಿಗೆ ಬಡತನ ಸಹಜವಾಗಿ ಅಡ್ಡ ಬರುತ್ತಿತ್ತು. ಹಾಗಾಗಿ, ತನ್ನ ಎರಡನೇ ವರ್ಷದ ಡಿಗ್ರೀ ವ್ಯಾಸಂಗಕ್ಕೆ ಬಾಯ್ ಹೇಳಿ ಅವನು ಹೊರಟಿದ್ದು ಸಿಟಿ ಆಫ್ ಡ್ರೀಮ್ಸ್ ಬಾಂಬೆಗೆ.
ಅಲ್ಲಿ ಒಬ್ಬ ವಜ್ರ ವ್ಯಾಪಾರಿಯ ಹತ್ತಿರ ಕೆಲಸ ಮಾಡಿ, ಮುಂದೆ ತನ್ನ ಅಣ್ಣನ ಪಿವಿಸಿ ಪ್ಲಾಸ್ಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತ, ತನ್ನ ವ್ಯಾಪಾರವನ್ನೂ ಬೆಳೆಸತೊಡಗಿದ. ಬರೀ ಭಾರತಕ್ಕಷ್ಟೇ ಸೀಮಿತಗೊಳ್ಳದೇ, ಇಡೀ ಪ್ರಪಂಚಕ್ಕೆ ತನ್ನ ವ್ಯವಹಾರವನ್ನು ವಿಸ್ತರಿಸತೊಡಗಿದ. ಹಾಗೇ ಬೆಳೆಯುತ್ತ, ಕೆಲವೇ ವರ್ಷಗಳಲ್ಲಿ ಇಡೀ ಭಾರತದ ಅತೀ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದುಬಿಟ್ಟ. ಮುಂದೊಂದು ದಿನ ಇಡೀ ಪ್ರಪಂಚದ 3ನೇ ಶ್ರೀಮಂತ ವ್ಯಕ್ತಿಯೂ ಆಗಿಬಿಟ್ಟ. ಆದರೆ, ತನ್ನದೇ ಆದ ಕೆಲವು ತಪ್ಪುಗಳಿಗೆ ಇಂದು ಲಕ್ಷಾಂತರ ಕೋಟಿಯ ಲುಕ್ಸಾನ್‌ನಲ್ಲಿದ್ದ. ಮತ್ತೇ ಚೇತರಿಸಿಕೊಂಡಿದ್ದಾನೆ!ಅವನ ಹೆಸರು ಗೌತಮ್ ಅದಾನಿ!
ಜನವರಿ ೨೪, ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಗ್ಲೋಬಲ್ ಅವಾರ್ಡ್ ಬಂದ ದಿನ, ಹಾಗೆಯೇ ಹಿಂಡನ್‌ಬರ್ಗ್ ಅನ್ನುವ ಬರೀ ೫ ಜನ ಕೆಲಸಗಾರರಿರುವ ಸಣ್ಣ ಹೂಡಿಕೆದಾರರ ಸಂಶೋಧನಾ ಸಂಸ್ಥೆ, ತನ್ನ ವರದಿಯಲ್ಲಿ ಗೌತಮ್ ಅದಾನಿಯ ಎಲ್ಲ ಕಂಪನಿಗಳ ‘ಮೋಸದ’ ಬಗ್ಗೆ ವರದಿ ಮಾಡಿತು. ಹಾಗಂತ ಅದಾನಿ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದೇನೂ ಅಲ್ಲ; ಹಾಗಾದರೆ ಸತ್ಯವೇ? ಅದಕ್ಕೂ ಇನ್ನೂ ಆಧಾರ ಸಿಕ್ಕಿಲ್ಲ! ಷೇರುಗಳ ಲಾಭ-ನಷ್ಟವನ್ನು ಬಿಟ್ಟರೆ ಇಲ್ಲಿ ನೋಡಬೇಕಾಗಿರುವುದು, ಹಿಂಡನ್‌ಬರ್ಗ್ ವರದಿ ಬಗ್ಗೆ.
ಅದರಲ್ಲಿ ಹೇಳಿರುವ ಹಾಗೆ ಷೇರುಗಳನ್ನು ನಿಭಾಯಿಸಿರುವ () ರೀತಿ! ನಮಗೆ-ನಿಮಗೆ ಗೊತ್ತಿರುವ ಹಾಗೆ, ಷೇರುಮಾರುಕಟ್ಟೆ ತುಂಬಾ ಬಾಷ್ಪಶೀಲ (). ಅಲ್ಲಿ ಷೇರಿನ ದರದ ಬದಲಾವಣೆಯ ಬಗ್ಗೆ ನಿಖರತೆಯಿರಲ್ಲ. ಸರಿಯಾದ ಲೆಕ್ಕಾಚಾರ ಮಾಡಿ, ದುಡ್ಡು ಹಾಕಿದವರು ಸಹ ಎಷ್ಟೋ ಸಲ ದುಡ್ಡು ಕಳೆದುಕೊಂಡ ಉದಾಹರಣೆಯಿದೆ. ಏನೂ ಗೊತ್ತಿಲ್ಲದೆಯೂ ದುಡ್ಡು ಹಾಕಿ ಕೋಟ್ಯಧೀಶರಾದ ಘಟನೆಗಳೂ ನಡೆದಿವೆ. ಹಾಗಿದ್ದರೆ  ಆಗಿರುವ ಮಾರ್ಕೆಟ್ ಅನ್ನು ನಿಭಾಯಿಸುತ್ತಾರೆ, ತಮಗೆ ಬೇಕಾದ ರೀತಿಯಲ್ಲಿ ಷೇರ್‌ಗಳನ್ನು ಬಳಸಿಕೊಂಡು ದುಡ್ಡು ಮಾಡು ತ್ತಿದ್ದಾರೆ ಅಂದರೆ ಏನರ್ಥ? ಹೇಳಬೇಕೆಂದರೆ, ಅವರದ್ದೇ ದುಡ್ಡು ಅವರೇನಾದರೂ ಮಾಡಿಕೊಳ್ಳಲಿ ಅಂತ ನೀವೇನಾದರೂ ಸುಮ್ಮನಿದ್ದರೆ, ಅದೂ ನಿಮ್ಮ ಬುಡಕ್ಕೂ ಬರಬಹುದು!
ಏಕೆಂದರೆ, ದೇಶದ ಆರ್ಥಿಕತೆಯನ್ನು ಬದಲಿಸುವ ಶಕ್ತಿ ಷೇರು ಮಾರುಕಟ್ಟೆಗಿದೆ. 1992ರಲ್ಲಿ ನಡೆದ ಹರ್ಷದ್ ಮೆಹ್ತಾ ಹಗರಣದ ಕತೆಯನ್ನೇ ನೋಡೋಣ. 1990ರಲ್ಲಿ ಬ್ಯಾಂಕ್‌ಗಳು ಸರಕಾರಿ ಬಾಂಡ್‌ಗಳ ಮೇಲೆ ಸ್ವಲ್ಪವಾದರೂ ಹಣವನ್ನು ಹೂಡಿಕೆ ಮಾಡುವ ನಿಯಮ ಜಾರಿಯಲ್ಲಿತ್ತು. ಆ ಸಮಯದಲ್ಲಿ ಸರಕಾರಿ ಬಾಂಡ್‌ನ ಕೊಳ್ಳುವಿಕೆ ಹಾಗೂ ಮಾರುವಿಕೆ ನಡುವೆ ಸೇತುವೆಯಾಗಿ, ಬ್ರೋಕರ್ ಆಗಿ ಬಂದವನೇ ಹರ್ಷದ್ ಮೇಹ್ತಾ.
ಬ್ಯಾಂಕ್‌ನ ಹಣ, ವಿನಿಮಯ ಆಗುವ ಸಮಯದಲ್ಲಿ ಕೆಲವು ದಿನಗಳ ಕಾಲ (ಹೆಚ್ಚು ಕಡಿಮೆ 15 ದಿನ) ಹರ್ಷದ್ ಮೆಹ್ತಾನ ಹತ್ತಿರ ಇರುತ್ತಿದ್ದವು. ಅದೇ ಹಣವನ್ನು ತನ್ನ ಷೇರುಗಳ ಮೇಲೆ ಹೂಡಿ ಲಾಭ ಮಾಡಿಕೊಳ್ಳುತ್ತಿದ್ದ. ಆಗ ಸುಚೇತಾ ದಲಾಲ್ ಎಂಬ ಪತ್ರಕರ್ತೆ ಇವನ ಮೋಸನ್ನೆಲ್ಲ ಬಯಲು ಮಾಡಿದ ಮೇಲೆ ಅದು ದೊಡ್ಡ ರಾದ್ಧಾಂತವಾಗಿದ್ದು, ಬ್ಯಾಂಕ್‌ಗಳಿಗೆ ಅವನು ಮಾಡುತ್ತಿದ್ದ ಮೋಸ ಬಯಲಾಗಿದ್ದು. ಅದರಲ್ಲಿ ಸೆಬಿ (    )ಯ ಲೋಪದೋಷಗಳೂ ಕಾಣಸಿಗುತ್ತವೆ.
ಆಗಿನ ಕಾಲಕ್ಕೆ ಅದು ರು.೫ ಸಾವಿರ ಕೋಟಿಯ ಮೋಸ, ಅಷ್ಟೇ. ಹಾಗೆಯೇ ಇವತ್ತಿಗೂ, ಎಷ್ಟೋ ಜನ ಸರಕಾರವನ್ನು, ಸೆಬಿಯನ್ನು ಯಾಮಾರಿಸಿ ದುಡ್ಡು ಮಾಡುತ್ತಲೇ ಇದ್ದಾರೆ. ಇಷ್ಟೆಲ್ಲ ಆದರೂ ಸೆಬಿ ಇದಕ್ಕೆಲ್ಲ ಅನುವು ಮಾಡಿಕೊಡುತ್ತಿದೆಯೇ? ಮತ್ತೆ ಆ ವರದಿಯಲ್ಲಿ ಕಂಡಿದ್ದು ಶೆಲ್ ಕಂಪನಿ ಯಿಂದ ಹಣವನ್ನು ಷೇರುಗಳ ಮೇಲೆ ಹೂಡಿಕೆ ಮಾಡಿದ್ದು. ಇಲ್ಲಿ ಶೆಲ್ ಕಂಪನಿಯೆಂದರೆ, ಮಾರಿಷಸ್, ಬಹುಮಾಸ್, ಮಾರ್ಷ್ ಐಲ್ಯಾಂಡ್ಸ್‌ನಂತಹ ಇನ್ನಿತರ ದೇಶದಲ್ಲಿ ಒಂದು ಕಂಪನಿಯನ್ನು ತೆರೆದು ಅಲ್ಲಿಂದ ಬೇರೆ ಕಂಪನಿಗಳ ಮೇಲೆ ಹೂಡಿಕೆ ಮಾಡುವುದು. ಶೆಲ್ ಕಂಪನಿಗಳಿಗೆ ಕೆಲಸಗಾರರೂಬೇಕಾಗಿಲ್ಲ, ಆಫೀಸಿನ ವ್ಯವಸ್ಥೆಯೂ ಬೇಕಾಗಿಲ್ಲ, ಅದು ಆ ದೇಶಗಳಲ್ಲಿ ಬರೀ ನೋಂದಣಿ ಆಗಿದ್ದರೆ ಸಾಕು. ಅಲ್ಲಿ ವಿದೇಶಿ ಬಂಡವಾಳ ಹೂಡಿಕೆದಾ ರರಿಗೆ, ಟ್ಯಾಕ್ಸ್ ಕೂಡ ಜಾಸ್ತಿ ಇರುವುದಿಲ್ಲ. ಹಣ ವಿನಿಮಯದ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಲೆಕ್ಕ ತೋರಿಸುವ ಅವಶ್ಯಕತೆಯೂ ಇರುವುದಿಲ್ಲ.
ಅಂತಲ್ಲಿ ಗೌತಮ ಅದಾನಿ ಸಹೋದರ, ವಿನೋದ್ ಅದಾನಿ ಹೆಸರಲ್ಲಿ ಕೆಲವು ಕಂಪನಿಗಳು ನೋಂದಣಿ ಆಗಿವೆ. ಅದರಿಂದ ಅದಾನಿ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆಯಾಗಿದೆ. ಹಾಗೆ ಹೂಡಿಕೆ ಆದ ಹಣದ ಮೊತ್ತ ಲಕ್ಷಾಂತರ ಕೋಟಿ ಯಷ್ಟಿದೆ. ಹಾಗಾದರೆ, ಅಷ್ಟು ಮೊತ್ತದ ಹಣ ಎಲ್ಲಿಂದಬಂತು? ಹಾಗೆ ನೋಡಿದರೆ, ಹಿಂಡನ್‌ಬರ್ಗ್ ರಿಸರ್ಚ್ ಸೆಂಟರ್ಬ ಹೇಳಿಕೊಳ್ಳುವಂತಹ ಸಂಸ್ಥೆಯೇನೂ ಅಲ್ಲ. ಷೇರುಮಾರುಕಟ್ಟೆಯ ಆಗು ಹೋಗುಗಳ ಬಗ್ಗೆ ತನ್ನದೇ ಆದ ವರದಿಗಳನ್ನು ಮಾಡುವ, ಬರೀ ಐದೇ ಜನ ನೌಕರರಿರುವ, 2017ರಲ್ಲಿ ಆರಂಭವಾಗಿರುವ ಸಂಸ್ಥೆ.
ನಿಕೋಲಾ, ಕ್ಲೋವರ್ ಹೆಲ್ತ್, ಕ್ಯಾಂಡಿಯಂತಹ ಕೆಲ ಕಂಪನಿಗಳ ಹಗರಣವನ್ನು ವರದಿ ಮಾಡಿದ ಮೇಲೆ ಬೆಳಕಿಗೆ ಬಂದದ್ದು. (ಬೆಳಕಿಗೆ ಬರಬೇಕೆಂಬ ಉದ್ದೇಶದಿಂದಲೇ ಇಂಥ ವರದಿ ಮಾಡಿರಲೂಬಹುದು). ಇಂತಹ ಕಂಪನಿಯ ಮಾತನ್ನು ಕೇಳಿ, ಇಷ್ಟೊಂದು ದೊಡ್ಡ ಗುಲ್ಲೆಬ್ಬಿಸುವ ಹರಕತ್ತೂ ಇತ್ತೇ? ಬಹುಶಃ, ಕಾಂಗ್ರೆಸ್‌ನವರು 2024ರ ಚುನಾವಣೆಗೆ ಇದರಿಂದಲೇ ತಯಾರಿ ನಡೆಸುತ್ತಿರಬಹುದು. ಅದು ಅವರ ರಾಜಕೀಯ ಏನಾದರೂ ಮಾಡಿ ಕೊಳ್ಳಲಿ, ಆದರೆ, ಸರಕಾರ ಉದ್ಯಮಗಳನ್ನು ಪ್ರೋತ್ಸಾಹಿಸುತ್ತಿದೆ ಎಂದ ಮಾತ್ರಕ್ಕೆ ಅದಾನಿ ಕಂಪನಿಯ ತಾರಾತಿಕಡಿಯನ್ನೂ ಸರಕಾರ ದೊಂದಿಗೆ ಜೋಡಿಸಲಾದೀತೇ? ತೀರಾ ಅದಾನಿ ಸಮೂಹದ ಈ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮೇಲೆ ಆರೋಪಿಸುತ್ತಿರುವ ಕಾಂಗ್ರೆಸಿಗರಿಗೆ ತಮ್ಮ ಸರಕಾರದ ಅವಽಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆಯೂ ಗೊತ್ತಿರಬೇಕಿತ್ತು!
ಎಲ್ಲ ರಾಜಕೀಯ ಕಾರಣಗಳನ್ನು ಬದಿಗಿಟ್ಟರೂ, ದೇಶ ದಲ್ಲಿ ಕೋಟ್ಯಂತರ ರುಪಾಯಿಗಳ ಅವ್ಯವಹಾರ ಆಗಾಗ ಆಗುತ್ತಲೇ ಇದೆ. ಯಾವುದೇ ಸರಕಾರ ಬಂದರೂ, ಏನೇ ಕಾಯಿದೆಗಳನ್ನು ತಂದರೂ ಕಾರ್ಪೊರೇಟ್ ಮಟ್ಟದ ಅವ್ಯವಹಾರ ಗುರುತಿಸುವುದು ಕಷ್ಟವೇ. ಯಾವುದೋ ಬ್ಯಾಂಕಿನಲ್ಲಿ ಸಣ್ಣ ಮಟ್ಟದ ಸಾಲ ಪಡೆಯಲು ಹೋದಾಗ ಹತ್ತಾರು ಸಲ ಓಡಾಡಿಸುವ ಬ್ಯಾಂಕ್‌ಗಳು, ಇಂಥ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಜವಾಗಿ ದೊಡ್ಡ ಪ್ರಮಾಣದ ಸಾಲ ಸುಲಭದಲ್ಲಿ ನೀಡುತ್ತವೆ.
ಇಂಥವರ ವ್ಯವಹಾರ ತಮ್ಮ ಬ್ಯಾಂಕ್‌ನೊಂದಿಗಿದೆ ಎಂಬುದೇ ಬ್ಯಾಂಕಿಂಗ್ ಸಂಸ್ಥೆಗಳಿಗೆ ಗೌರವ-ಪ್ರತಿಷ್ಠೆಯ ಪ್ರಶ್ನೆ. ಜತೆಗೆ ಇಂಥ ಕಂಪನಿಗಳಿಂದ ವಹಿವಾಟೂ ಜೋರಾಗೇ ಇರುತ್ತದೆ. ಅದರಿಂದಲೇ ತಾನೇ ಬ್ಯಾಂಕ್ ಬೆಳೆಯುವುದು? ಕೋಟ್ಯಂತರ ಜನಕ್ಕೆ ಕೆಲಸ ಸಿಕ್ಕು ಜೀವನ ನಡೆಯುವುದು. ಹೀಗಾಗಿ ಮೋಸ ಹೋಗುವುದೂ ಸುಲಭ. ಜನರನ್ನು ಏಮಾರಿಸುವವರಿಗೆ ಬ್ಯಾಂಕ್‌ಗಳನ್ನು, ಸರಕಾರವನ್ನು ಏಮಾರಿಸುವುದು ಕಷ್ಟವೇ? ಬ್ಯಾಂಕ್-ಸರಕಾರಗಳಲ್ಲಿರುವವರೂ ನಮ್ಮಂಥ ಜನರೇ ತಾನೇ? ಇರಲಿ, ಗೌತಮ್ ಅದಾನಿ ಕಂಪನಿಯಲ್ಲಿ ಯಾವುದೇ ಕಳ್ಳ ವ್ಯವಹಾರ ಆಗದೆಯೂ ಇರಬಹುದು.
ಆದರೂ, ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ಎಷ್ಟೇ ಕಡಿವಾಣ ಹಾಕಿದರೂ ಹೊಸ ಮಾರ್ಗವನ್ನು ಮೋಸ ಮಾಡಲೆಂದೇ ಹುಡುಕುತ್ತಿದ್ದಾರೆ. ಮೇಲೆ ಬಂದಂತಹ ಹಲವಾರು ಉದ್ದಿಮೆದಾರರು(?!) ಮಾಡಿದ ಯಾವ ಮೋಸವೂ ಒಂದೇ ರೀತಿಯಲ್ಲಿಲ್ಲ. ಬೇರೆ ಬೇರೆಯೇ ಎಂಬುದು ಗಮನಾರ್ಹ. ಅದರ ಸ್ತರವೂ ಹಾಗೆಯೇ, ಬರೀ ಷೇರು ಮಾರ್ಕೆಟ್‌ನಲ್ಲಷ್ಟೇ ಅಲ್ಲ, ಪ್ರತೀ ಮಾರ್ಕೆಟ್‌ನಲ್ಲೂ ತಮ್ಮದೇ ಆದ ಹೊಸಹೊಸ ವಿಧಾನದಿಂದ ಮೋಸ ಮಾಡಲು ಮಾರ್ಗ ಹುಡುಕುತ್ತಲೇ ಇರುತ್ತಾರೆ. ಅದಕ್ಕೇ ಇರಬಹುದು ಹಿರಿಯ ಪತ್ರಕರ್ತ ಟಿಜೆಎಸ್ ಜಾಜ್ರವರು ’    ,   ’ ಅಂತ ಹೇಳಿದ್ದು! ಆ ಕ್ರಿಮಿನಲ್ ಗಳು ಉದ್ಯಮಿ, ರಾಜಕಾರಣಿಗಳೂ ಇರಬಹುದು!