ಬಿಬಿಸಿ ಸಾಕ್ಷ್ಯ ಚಿತ್ರ: 2024ಕ್ಕೆ ಟೂಲ್ ಕಿಟ್
ಅಭಿಮತ
ಸಿಂಚನ ಎಂ.ಕೆ.ಮ ಮಂಡ್ಯ
ಹೌದೇ, 2024ರ ಟೂಲ್ ಕಿಟ್ ಆಗಲೇ ರೆಡಿಯಾಗಿದ್ಯಾ? ಖಚಿತವಾಗಿಯೂ ಹೌದು ಎಂದು ಸಾಬೀತುಪಡಿಸುತ್ತಿದೆ ದೇಶವಿರೋಧಿ ಒಕ್ಕೂಟದಇತ್ತೀಚಿನ ಬೆಳವಣಿಗೆಗಳು! 2024 ದೇಶಭಕ್ತರು ಹಾಗೂ ದೇಶವಿರೋಧಿಗಳು ಇಬ್ಬರ ಪಾಲಿಗೂ ಅತಿ ಮುಖ್ಯವಾದ ವರ್ಷ. 2024ಕ್ಕೆ ಪ್ರಪಂಚದಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದಲ್ಲಿ ಲೋಕಸಭೆ ಚುನಾವಣೆ ಜರುಗಲಿದೆ.
ನೀವು ಇಷ್ಟ ಪಡಿ ಅಥವಾ ಪಡದಿರಿ, ರಾಜಕೀಯದಲ್ಲಿ ನೀವು ಆಸಕ್ತಿ ವಹಿಸಿ ಅಥವಾ ವಹಿಸದಿರಿ ಅದು ನಿಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ತೆರನಾಗಿ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಮೊಘಲರು, ಪಠಾಣರು, ಪೋರ್ಚುಗೀಸರು, ಬ್ರಿಟಿಷರು ಮುಂತಾದ ವಿದೇಶಿ ಆಕ್ರಮಣ ಕಾರರು ನಮ್ಮ ರಾಜಕೀಯ ಅಽಕಾರವನ್ನು ಕಸಿದುಕೊಂಡಾಗಲೆಲ್ಲ ಅದರ ವಿರುದ್ಧ ಸಿಡಿದೆದ್ದು ನಾವು ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದು!
ಮಾನವ ಜನಾಂಗ ಜೀವಂತವಾಗಿರುವವರೆಗೂ ರಾಜಕೀಯ ಸ್ವಾತಂತ್ರ್ಯದ ಹೋರಾಟವೂ ಜೀವಂತವಾಗಿರುವುದು. ಅಂದು ನಮ್ಮ ಪೂರ್ವಜರು ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಟಮಾಡುತ್ತಿದ್ದಾಗಲೂ ಶತ್ರುಗಳ ಜತೆ ನಿಂತು ಬೆನ್ನಿಗೆ ಚೂರಿ ಹಾಕಿದ ಗದ್ದಾರ್‌ಗಳು (ದೇಶದ್ರೋಹಿ ಗಳು) ಇದ್ದರು, ಈಗಲೂ ಇದ್ದಾರೆ. ಈಗ ಆ ಗದ್ದಾರ್‌ಗಳ ಸಂತಾನವು ಬಿಬಿಸಿ (ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್) ಪರ ನಿಂತಿವೆ. ಬ್ರಿಟಿಷರೇನೊ ಭೌತಿಕವಾಗಿ 1947ರಲ್ಲಿ ನಮ್ಮ ದೇಶದಿಂದ ಕಾಲ್ಕಿತ್ತರು, ಆದರೆ, ಹೊರಡುವಾಗ ತಾವೇ ಮೆಕಾಲೆ ಶಿಕ್ಷಣ ಪದ್ಧತಿಯಿಂದ ನಿರ್ಮಿಸಿದ ಶರೀರದಿಂದ ಭಾರತೀಯರಾಗಿ ಬುದ್ಧಿಯಿಂದ ಬ್ರಿಟಿಷರಾಗಿದ್ದ ಕಪ್ಪು ಬ್ರಿಟಿಷರ ಮೆದುಳನ್ನು ಅವರೊಡನೆ ಕೊಂಡೊಯ್ದರು.
ಪ್ರಧಾನಿ ಮೋದಿಯವರ ಆತ್ಮನಿರ್ಭರತೆ ಇವರಿಗೆ ಅರ್ಥವಾಗುವುದಿಲ್ಲ. ಅಂತೂ ೨ ಶತಮಾನ ನಮ್ಮನ್ನಾಳಿ, ನಮ್ಮ ಮೇಲೆ ನಿರಂತರ ದೌರ್ಜನ್ಯ ವೆಸಗಿದ್ದ ಬ್ರಿಟಿಷರ ದೇಶದ ಬಿಬಿಸಿ ಎಂದಿನಂತೆ ತಮ್ಮ ಹಿಂದೂ ವಿರೋಧಿ, ಭಾರತ ವಿರೋಧಿ ಪ್ರೋಪಗ್ಯಾಂಡವನ್ನು ಬಿತ್ತರಿಸದೇ ಬೇರಿನ್ನೇನನ್ನು ಮಾಡೀತು? ಮೋದಿ ವಿರುದ್ಧ ಬಿಡುಗಡೆ ಮಾಡಿರುವ ಗೋದ್ರಾ ಹತ್ಯಾಕಾಂಡದ ಬಗೆಗಿನ ‘ಇಂಡಿಯಾ: ದ ಮೋದಿ ಕೊಶ್ಶನ್’ ಎಂಬ ಡಾಕ್ಯು ಮೆಂಟರಿಯನ್ನು ಬೇಷರತ್ತಾಗಿ ಬೆಂಬಲಿಸುತ್ತಿದ್ದಾರೆ ಕಪ್ಪು ಬ್ರಿಟಿಷರು.
೨೦ ವರ್ಷಗಳ ಕಾಲ ನಿರಂತರ ವಿಪಕ್ಷಗಳಿಂದ ಪ್ರತೀ ಚುನಾವಣೆಯಲ್ಲೂ ಈ ಗೋದ್ರಾ ಹತ್ಯಾಕಾಂಡದ ಬಗೆಗಿನ ಪ್ರಶ್ನೆ, ನಿಂದನೆಗಳ ಆಕ್ರಮಣವನ್ನು ತಮ್ಮ ತಪ, ತಾಳ್ಮೆ, ತಿತಿಕ್ಷೆ ಸ್ವಭಾವದಿಂದ ಎದುರಿಸಿ ಕೊನೆಗೆ ಎಸ್‌ಐಟಿ ಹಾಗೂ ಸುಪ್ರೀಂ ಕೋರ್ಟ್ ಎರಡರಿಂದಲೂ ಮೋದಿ ಅವರು ಕ್ಲೀನ್ ಚಿಟ್ ಪಡೆದಿದ್ದಾರೆ. ಕೇವಲ ಒಂದು ಐಟಿ ರೇಡ್‌ನ ವಿಚಾರಣೆಗೆ ಹೆದರಿ ಗುಂಪು ಗುಂಪಾಗಿ ಹೋರಾಟ ಮಾಡಿಕೊಂಡು ಹಾಜರಾಗುವ ರಾಜಕೀಯ ನಾಯಕರ ಮಧ್ಯೆ ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಭರವಸೆಯಿದೆ ಎಂದು ಹೇಳಿ ಎಲ್ಲ ರೀತಿಯ ದೀರ್ಘಾವಽಯವಿಚಾರಣೆಗಳಿಗೆ ಸಹಕರಿಸಿ, ಅಂತಿಮವಾಗಿ ಗೆದ್ದ ಮೇಲೂ ಈಗ ಮತ್ತೆ ಅವರ ಮೇಲೆ ಬಿಬಿಸಿಯ ಡಾಕ್ಯುಮೆಂಟರಿ ಆಕ್ರಮಣವಾಗಿದೆ.
ಹೆಲೋ ಬಿಬಿಸಿ, ಇಂತಹ ನಾನಾ ಆಕ್ರಮಣಗಳು ಮೋದಿ ಅವರ ಮೇಲೆ ಆದಾಗಲೆಲ್ಲ ನಮ್ಮಂತಹ ಕೋಟ್ಯಂತರ ಭಾರತೀಯರ ಮತಾಶೀ ರ್ವಾದವು ಶ್ರೀರಕ್ಷೆಯಾಗಿ ಅವರನ್ನು ಕಾಪಾಡಿದೆ, ಗೋದ್ರಾ ಹತ್ಯಾಕಾಂಡದ ಗಲಭೆಯನ್ನು ಹತ್ತಿಕ್ಕಲು ಅವರು ಮುಖ್ಯಮಂತ್ರಿಯಾಗಿ ಸಕಲ ಪ್ರಯತ್ನಗಳನ್ನು ಮಾಡಿದ್ದರಿಂದಲೇ ಹಾಗೂ ಅವರು ನಿರ್ದೋಷಿ ಆಗಿರುವುದರಿಂದಲೇ ಇದರ ನಂತರವೂ ೨ ಬಾರಿ ಮತ್ತೆ ಗುಜರಾತ್ ನ ಮುಖ್ಯಮಂತ್ರಿಯಾದರು ಹಾಗೂ ೨ ಬಾರಿ ದೇಶದ ಪ್ರಧಾನಿಯೂ ಆದರು.
ಬಿಬಿಸಿಯಾಗಲಿ ಮತ್ತೊಂದು ವಿದೇಶಿ ಶಕ್ತಿಯಾಗಲಿ ಅಥವಾ ಒಳಗಿನ ದೇಶವಿರೋಽಗಳೇ ಆಗಲಿ ಅವರೆಲ್ಲ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದರೆ ವಾಸ್ತವದಲ್ಲಿ ನಮ್ಮನ್ನು (ಭಾರತೀಯರನ್ನು) ವಿರೋಽಸುತ್ತಿzರೆ ಎಂದೇ ಅರ್ಥ! ಮೋದಿ ಅವರು ನಮ್ಮ ಮತ್ತು ಶತ್ರುಗಳ ನಡುವಿನ ಯುದ್ಧ ದಲ್ಲಿ ನಮ್ಮ ನಾಯಕರಾಗಿದ್ದಾರೆ. ಅಂತೆಯೇ ಅಮಿತ್ ಶಾ ಅವರನ್ನು ಕಿರಾತಕ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಮಾಂತ್ರಿಕ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಬಿಸಿ ಪರ ಬ್ಯಾಟಿಂಗ್ ಮಾಡುತ್ತಿರುವ ವಿಪಕ್ಷಗಳು, ಬುದ್ಧಿ ಜೀವಿಗಳು, ಜೆ.ಎನ್‌ಯುನಂತಹ ವಿಶ್ವವಿದ್ಯಾಲಯಗಳು ಹಾಗೂ ಇನ್ನಿತರ ತುಕ್ಡೆ ತುಕ್ಡೆ ಗ್ಯಾಂಗ್‌ಗಳು… ಹೀಗೆ ಯಾರು ದಿನ ಬೆಳಗಾದರೆ ಮೋದಿ ಸರಕಾರದ ವಿರುದ್ಧ ಹೋರಾಟ ಮಾಡುತ್ತಿರುತ್ತಾರೊ ಅವರು ಸಂವಿಧಾನ, ಸುಪ್ರೀಂ ಕೋರ್ಟ್‌ಗಳನ್ನೇ ತಮ್ಮ ರಕ್ಷಾಕವಚವಾಗಿ ಬಳಸಿಕೊಳ್ಳುವುದು. ಆದರೆ ತಮ್ಮ ಪ್ರೋಪಗ್ಯಾಂಡಗಳಿಗೆ ಸಹಕಾರಿಯಾಗದ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೂ ಇವರು ಗೌರವ ಕೊಡುವುದಿಲ್ಲ ಎಂದು ಮತ್ತೊಮ್ಮೆ ಸಮಾಜದ ಮುಂದೆ ತೋರ್ಪಡಿಸಿಕೊಂಡಿದ್ದಾರೆ. ಅಂದು ಹಿಂದೂ ಕಾಶ್ಮೀರಿಪಂಡಿತರ ವೇದನೆಯನ್ನು ಜನರಿಗೆ ಮುಟ್ಟಿಸಲು ನಿರ್ಮಿಸಿದ ’ದ ಕಾಶ್ಮೀರಿ ಫೈಲ್ಸ್ ’ ಚಿತ್ರವನ್ನು ಪ್ರೋಪಗ್ಯಾಂಡ ಎಂದೆ ಅವಮಾನಿಸಿ ನಾಲಿಗೆ ಹರಿಬಿಟ್ಟಿದ್ದ ಇವರು ಕರಸೇವಕರ ಸಾವಿಗೆ ಅವಮಾನ ಮಾಡಿರುವ, ದೇಶದ ಪ್ರಧಾನಿ ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿರುವ ಬಿಬಿಸಿಯ ‘ಇಂಡಿಯಾ: ದ ಮೋದಿ ಕೊಶ್ಶನ್’ ಡಾಕ್ಯುಮೆಂಟರಿಯನ್ನು ಬೆಂಬಲಿಸುತ್ತಿದ್ದಾರೆ.
ಸ್ವಲ್ಪವೂ ನಾಚಿಕೆಯಿಲ್ಲದೆ ಈ ಡಾಕ್ಯುಮೆಂಟರಿಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್, ಗೋದ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ಗುಜರಾತ್ಸಿಎಂ ಆಗಿದ್ದ ಮೋದಿ ಅವರು ಶಾಂತಿ ಸುವ್ಯವಸ್ಥೆ ಕಾಪಾಡಲು ಅನಿವಾರ್ಯವಾಗಿದ್ದ ಪೋಲೀಸ್ ಪಡೆಯನ್ನು ಗುಜರಾತ್‌ಗೆ ಕಳುಹಿಸಬೇಕೆಂದು ಪಕ್ಕದ ೩ ರಾಜ್ಯಗಳಲ್ಲೂ ಇದ್ದ ಕಾಂಗ್ರೆಸ್ ಸರಕಾರವನ್ನು ವಿನಂತಿಸಿಕೊಂಡರೂ ಯಾಕೆ ಕಿವಿಗೊಡಲಿಲ್ಲ? ಅನಿವಾರ್ಯತೆಯಿದ್ದ ಆ ಸಂದರ್ಭದಲ್ಲಿ ಸಹಾಯ ಮಾಡದೆ ತಮಾಷೆ ನೋಡಿದ ಕಾಂಗ್ರೆಸ್ ಹಾಗೂ ಈ ಪ್ರಕರಣವನ್ನು ಅನವಶ್ಯಕವಾಗಿ ೨೦ ವರ್ಷಗಳ ಕಾಲ ಜೀವಂತವಾಗಿರಿಸಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಂಡ ಆಂದೋಲನ ಜೀವಿಗಳಿಗೆ ಇನ್ನೂ ಯಾವುದೇ ಕಠಿಣ ಶಿಕ್ಷೆಯಾಗಿಲ್ಲ.
೨೦೨೪ ಹತ್ತಿರ ಬರುತ್ತಿರುವಾಗಲೇ ಏಕೆ ಈ ಡಾಕ್ಯುಮೆಂಟರಿ ಬಂದದ್ದು? ತಾವು ಆಳ್ವಿಕೆ ಮಾಡಿ ಸಕಲ ಸಂಪತ್ತನ್ನು ದೋಚಿ ಬಡವಾಗಿಸಿದ್ದ ದೇಶವು ಇಂದು ನಮ್ಮನ್ನೇ ಹಿಂದಿಕ್ಕಿ ಪ್ರಪಂಚದ ಐದನೇ ದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂಬ ಕಾರಣಕ್ಕೇ? ತಾವು ಆಳ್ವಿಕೆ ಮಾಡಿದ ದೇಶದವರೇ ಆದ ಹಿಂದೂ ರಿಷಿ ಸುನಕ್ ಇಂದು ತಮ್ಮ ದೇಶವನ್ನು ಆಳುತ್ತಿzರೆ ಎಂಬುದನ್ನು ಸಹಿಸಿಕೊಳ್ಳಲಾಗದೆಯೇ? 2023ರ ಜಿ-20 ಸಭೆಯ ಅಧ್ಯಕ್ಷತೆಯ ಮಹಾ ಜವಾಬ್ದಾರಿಯು ಭಾರತದ ಪಾಲಾಯಿತೆಂಬ ಕಾರಣಕ್ಕೇ? ಸೋ ಕಾಲ್ಡ್ ಪ್ರಜಾಪ್ರಭುತ್ವದ ಬೋಧಕರಾದ ಇಂಗ್ಲೆಂಡ್ ನವರಾದ ನಾವೇಇತ್ತೀಚೆಗೆ ಸ್ಥಿರ ಸರ್ಕಾರವಿಲ್ಲದೆ ಹಲವು ಬಾರಿ ಪರಿತಪಿಸಿದ್ದರೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮಾತ್ರ ಈ ಮೋದಿ ಸರಕಾರ ಸುಸ್ಥಿರವಾಗಿ ಸಮೃದ್ಧವಾಗಿಯೇ ಇದೆ ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಕೊರೊನಾ ಸಮಯದಲ್ಲಿ ಜಗತ್ತಿನ ರಕ್ಷಕ ಸ್ಥಾನದಲ್ಲಿ ನಿಂತು ೭೦ಕ್ಕೂ ಅಽಕ ದೇಶಗಳಿಗೆ ವ್ಯಾಕ್ಸಿನ್ ನೀಡಿ ಸಂಕಟ ಮೋಚನ ಮಾಡಿದ ಭಜರಂಗಿ ಭೂಮಿ ಭಾರತ ನೀವೇ ಈ ಜಗತ್ತನ್ನು (ಕರಿಯರನ್ನು) ರಕ್ಷಿಸಬೇಕಾದವರು ಎಂಬ ನಿಮ್ಮ ‘ವೈಟ್ ಮ್ಯಾನ್ಸ್ ಬರ್ಡನ್’ ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಂಡಿತು ಎಂಬುದನ್ನು ಸಹಿಸಿಕೊಳ್ಳಲಾಗದೆ ಈ ಡಾಕ್ಯುಮೆಂಟರಿಯನ್ನು ಮಾಡಿದಿರಾ? ಉತ್ತರಿಸಿ.
ವೈಟ್ ಮ್ಯಾನ್ಸ್ ಬರ್ಡನ್ ಸಿದ್ಧಾಂತವು ವೈಟ್ ಮ್ಯಾನ್ಸ್ ಬರ್ನಿಂಗ್ ಸಿದ್ಧಾಂತವಾಗಿ ಪರಿವರ್ತ ನೆಯಾಗುತ್ತಿರುವ ಈ ಕಾಲವನ್ನು ಜಗತ್ತು ವೀಕ್ಷಿಸು ತ್ತಿದೆ. ಮಾನವೀಯತೆಯ ಹಕ್ಕುಗಳ ಪ್ರತಿಪಾದಕರು ನಾವೇ ಎಂದು ಹೇಳಿಕೊಳ್ಳುವ ಬ್ರಿಟಿಷರಾದ ನೀವು ಜಗತ್ತಿನೆಡೆ ನಾನಾ ದೇಶಗಳ ಮೇಲೆ ಆಳ್ವಿಕೆ ಮಾಡುವಾಗ ನಡೆಸಿದ ಅಮಾನವೀಯ ಕೃತ್ಯಗಳನ್ನು ಜಗತ್ತಿನ ಮುಂದೆ ಎಂದು ಪ್ರದರ್ಶಿಸುವಿರಿ, ಅಲ್ಲ ಹೇಗೆ ಮಾನವೀಯತೆಯ ಹತ್ಯೆಯನ್ನು ಮಾಡಿದಿರಿ ಎಂಬುದರ ಬಗ್ಗೆ ಯಾವಾಗ ಡಾಕ್ಯುಮೆಂಟರಿ ಮಾಡುವಿರಿ? ಬೇರೆಲ್ಲ ದೇಶಗಳನ್ನು ಬಿಟ್ಟು ಬಿಡಿ, ನಮ್ಮ ದೇಶದಲ್ಲಿ ನೀವು ನಡೆಸಿದ ಸಾವಿರಾರು ಜನರ ನಿರ್ದಯ ಸಾವಿಗೆ ಕಾರಣವಾದ ಅತ್ಯಂತ ಘೋರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ವಿಂಗ್ ಸ್ಟನ್ ಚರ್ಚಿಲ್‌ನಿಂದ ಕೃತಕವಾಗಿ ಸೃಷ್ಟಿಸಲಾಯಿತು ಎನ್ನಲಾದ 1943ರ ಬಂಗಾಳ ಕ್ಷಾಮದದ ೩೦ ಲಕ್ಷಕ್ಕೂ ಅಧಿಕ ಜನರ ಮಾರಣಹೋಮ ಮುಂತಾದ ವಿಷಯಗಳ ಬಗ್ಗೆ ಯಾವಾಗ ಡಾಕ್ಯುಮೆಂಟರಿ ಮಾಡುವಿರಿ? 2024 ಹತ್ತಿರವಾದಂತೆ ಮತ್ತಷ್ಟು ಮಗದಷ್ಟು ಟೂಲ್ ಕಿಟ್ ನ ಯೋಜನೆಗಳು ಜಾರಿಯಾಗುವುದು ಖಚಿತ.
ಇನ್ನೂ ಬಿಬಿಸಿಯ ಡಾಕ್ಯುಮೆಂಟರಿಯ ಬಿಸಿಯೇ ತಣ್ಣಗಾಗಿಲ್ಲ, ಆಗಲೆ ಅದಾನಿ ಕಂಪನಿಯನ್ನು ಟಾರ್ಗೆಟ್ ಮಾಡಿಕೊಂಡು ಮೋದಿಯವರ ಮೇಲೆಮತ್ತೊಂದು ಪರೋಕ್ಷ ದಾಳಿಯನ್ನು ಆರಂಭಿಸಿದ್ದಾರೆ.
ಕೊನೆಯದಾಗಿ ಚಾಣಕ್ಯ ಅವರ ನುಡಿ: ಎಲ್ಲಿಯವರೆಗೆ ಒಂದು ರಾಷ್ಟ್ರವು ತನ್ನ ಧರ್ಮ, ಸಂಸ್ಕೃತಿಯ ಮೌಲ್ಯಗಳನ್ನು ಸಂರಕ್ಷಿಸುವುದೋ ಅಲ್ಲಿಯ ವರೆಗೆ ಅದನ್ನು ಪರಾಜಯಗೊಳಿಸಲು ಸಾಧ್ಯವಿಲ್ಲ.