ರಕ್ಷಣಾ ವಲಯದಲ್ಲಿ ಕರ್ನಾಟಕದ ಮೇಲುಗೈ
ರಕ್ಷಣಾ ಮಾಹಿತಿ
ಗಿರೀಶ್ ಲಿಂಗಣ್ಣ
ದಕ್ಷಿಣ ಭಾರತ ಪ್ರಮುಖ ರಾಜ್ಯಗಳಂದಾಗಿರುವ ಕರ್ನಾಟಕ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ. ಹೆಚ್ಚಿನ ಪ್ರಮಾಣದ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗಳು, ಅಪಾರ ಸಂಖ್ಯೆಯ ಕುಶಲ ವೃತ್ತಿಪರರು, ಹಾಗೂ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದರಿಂದ ಕರ್ನಾಟಕ ಏರೋಸ್ಪೇಸ್ ಮತ್ತುರಕ್ಷಣಾ ಉದ್ಯಮಕ್ಕೆ ಪ್ರಥಮ ಪ್ರಾಶಸ್ತ್ಯ ತಾಣವಾಗಿದೆ.
ಅದರಲ್ಲೂ, ವಿಶೇಷವಾಗಿ ರಾಜಧಾನಿ ಬೆಂಗಳೂರು ಈ ವಲಯದಲ್ಲಿ ವಿದೇಶೀ ಹೂಡಿಕೆ ಯನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಕರ್ನಾಟಕದ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಭವಿಷ್ಯ ಉಜ್ವಲವಾಗುವಂತೆ ಮಾಡಿದೆ. ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಬೆಂಗಳೂರೇ ನೆಚ್ಚಿನ ತಾಣ. ಏಕೆಂದರೆ ಭಾರತದ ಸೇನಾಪಡೆಗಳ ಒಟ್ಟಾರೆ ಶೇ.೬೭ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಕರ್ನಾಟಕದ ನಡೆಯುತ್ತದೆ.
ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ರಫ್ತಿನ ಶೇ.೬೫ದಷ್ಟು ಕರ್ನಾಟಕವೇ ಕೊಡುಗೆ ನೀಡುತ್ತಿದೆ. ಕರ್ನಾಟಕ ಭಾರತದ ಶೇ.೨೫ ವೈಮಾನಿಕ ಮತ್ತು ಸ್ಪೇಸ್‌ಕ್ರಾ- ಉದ್ಯಮಕ್ಕೆ ಕರ್ನಾಟಕವೇ ಮನೆಯಾಗಿದೆ. ಈ ಉದ್ಯಮದ ಮೌಲ್ಯ ಸರಪಳಿಯಲ್ಲಿ ಕರ್ನಾಟಕದಪ್ರಾವೀಣ್ಯ ರಾಜ್ಯದ ಯಶಸ್ಸಿನ ಪ್ರಮುಖ ಕಾರಣವಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆ ಗಳನ್ನು ಒಳಗೊಂಡಿರುವ ಭಾರತದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಡಸಾಲ್ಟ ಸಂಸ್ಥೆಯೊಡನೆ ಒಪ್ಪಂದ ಹೊಂದಿ ನಿರ್ಮಿಸಲಾಗಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಸಹ ಕರ್ನಾಟಕದ ಸ್ಥಾಪನೆಯಾಗಿದ್ದು, ಇದು ಉದ್ಯಮ ಸಿದ್ಧರಾದ ಮಾನವ ಸಂಪನ್ಮೂಲವನ್ನು ಒದಗಿಸಲಿದೆ.
ಕರ್ನಾಟಕ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಶೇ.೭೦ ಪೂರೈಕೆಯ ತಾಣವಾಗಿದೆ. ಅದರೊಡನೆ, ಕರ್ನಾಟಕ ದಲ್ಲಿ ೨,೦೦೦ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಎಂಟಪ್ರೈಸ್‌ಗಳು (ಎಂಎಸ್‌ಎಂಇ) ಕಾರ್ಯ ನಿರ್ವಹಿಸುತ್ತಿವೆ. ಅವುಗಳು ಉಪಗುತ್ತಿಗೆ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಈ ಉದ್ಯಮದಲ್ಲಿ ರಾಜ್ಯದ ಯಶಸ್ಸಿನ ಹಿಂದೆ ಪೂರಕ ಉದ್ಯಮಗಳೂ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
ಭಾರತದ ಶೇ.೬೦ ಯಂತ್ರೋಪಕರಣಗಳನ್ನು ಬೆಂಗಳೂರಿನ ಉತ್ಪಾದಿಸಲಾಗುತ್ತಿದೆ. ಅದರೊಡನೆ ಕರ್ನಾಟಕ ಭಾರತದ ಎರಡನೇ ಅತಿದೊಡ್ಡ ಬೃಹತ್ ಎಲೆಕ್ಟ್ರಿಕ್ ಯಂತ್ರಗಳ ಉತ್ಪಾದಕ ರಾಜ್ಯವಾಗಿದೆ. ೮೫ಕ್ಕೂ ಹೆಚ್ಚು ಚಿಪ್ ವಿನ್ಯಾಸ ಸಂಸ್ಥೆಗಳನ್ನು ಹೊಂದಿ ರುವ ಕರ್ನಾಟಕ, ಭಾರತದ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ಸಾ-ವೇರ್ ರಫ್ತಿನ ವಿಚಾರದಲ್ಲೂ ಕರ್ನಾಟಕ ಭಾರತದ ನಂಬರ್ ವನ್ ರಾಜ್ಯವಾಗಿದೆ.
ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ೨೦೨೨-೨೭ರ ಅಡಿಯಲ್ಲಿ ರಾಜ್ಯ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ಆಕರ್ಷಕ ಪ್ರೋತ್ಸಾಹ ಧನ ಒದಗಿಸುತ್ತಿದೆ. ಈ ನೀತಿ ನಾಗರಿಕ ಮತ್ತು ರಕ್ಷಣಾ ವಿಮಾನಗಳಿಗೆ ಇಂಟಗ್ರೇಟೆಡ್ ಎಂಡ್ ಅಸೆಂಬ್ಲಿ  ಒದಗಿಸುವ ಘಟಕಗಳು, ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್‌ಓ) ಘಟಕಗಳು, ಬಾಹ್ಯಾಕಾಶ ಅಪ್ಲಿಕೇಷನ್ ನಿರ್ಮಿಸುವ ಸಂಸ್ಥೆಗಳು, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಕಂಪೋಸಿಟ್ ಉತ್ಪಾದನೆ ಮತ್ತು ತ್ರಿಡಿ ಪ್ರಿಂಟಿಂಗ್, ಏರೋಸ್ಪೇಸ್, ರಕ್ಷಣೆ ಮತ್ತು ಬಾಹ್ಯಾಕಾಶ ವಲಯಗಳಿಗೆ ಎಲೆಕ್ಟ್ರಾನಿಕ್ ಘಟಕಗಳನ್ನು ನಿರ್ಮಿಸುವ ಉದ್ಯಮಗಳು ಸೇರಿದಂತೆ ಐದು ಉಪ ವಲಯಗಳನ್ನು ಗುರುತಿಸುತ್ತದೆ.
ಈ ನೀತಿ ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮವನ್ನು ಪ್ರೋತ್ಸಾಹಿಸಲು ಆರು ಪ್ರಮುಖ ಕ್ರಮಗಳನ್ನೂ ಒಳಗೊಂಡಿದೆ. ಈ ಕ್ರಮಗಳು ಐದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಪಾರ್ಕ್ ನಿರ್ಮಾಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಗಳ ಅಭಿವೃದ್ಧಿ, ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಉತ್ಪಾದನೆಗೆ ಸೂಕ್ತ ರಾಜ್ಯ ಕರ್ನಾಟಕ ಎಂದು ಪ್ರಚಾರ ಕೈಗೊಳ್ಳುವುದು, ಹಾಗೂ ಎಂಎಸ್ ಎಂಇಗಳ ಮೇಲೆ ಪ್ರೋತ್ಸಾಹ ಮುಂದುವರಿಸುವುದನ್ನುಒಳಗೊಂಡಿದೆ. ಈ ನೀತಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯವನ್ನು ಅವಶ್ಯಕ ಸೇವೆಗಳಡಿ ಗುರುತಿಸುತ್ತದೆ. ಆ ಮೂಲಕ ಉದ್ಯಮ ಯಾವುದೇ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸಲು ಅನುಕೂಲ ಕಲ್ಪಿಸುತ್ತದೆ. - 