ಕಾಂಗ್ರೆಸ್‌ಗೆ ಅಧ್ಯಕ್ಷ ಅಭ್ಯರ್ಥಿಗಳೇ ಸಾಡೇಸಾತ್ ..!
ಜನಮತ
ಪವನ್‌ ವಶಿಷ್ಠ
ಸಿದ್ಧರಾಮಯ್ಯನವರ ಅಹಿಂದ ಓಲೈಕೆ ಪಕ್ಷಕ್ಕೆ ಮುಳುವಾಗುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದ್ದು ಈ ಓಲೈಕೆಯಿಂದಲೇ. ಆದರೆ, ಸದ್ಯ ಬಿಜೆಪಿಯ ದುರಾಡಳಿತ ಕಾಂಗ್ರೆಸ್ ವರದಾನವಾಗಿದೆ. ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಎಲ್ಲ ರೀತಿಯಲ್ಲೂ ವೇದಿಕೆ ಸಜ್ಜು ಮಾಡಿಕೊಂಡಿದೆ.
ಜನಸಾಮಾನ್ಯರು ಸರಕಾರಿ ಕಚೇರಿಗೆ ಹೋಗುವುದೇ ವಿರಳ. ಅದರಲ್ಲೂ ವಿಶೇಷವಾಗಿ ನಗರ ಭಾಗದ ಜನರು ಸರಕಾರಿ ಕಚೇರಿ ಹುಡುಕುವುದರ ಗೂಗಲ್ ಮುಂದೆ ಅರ್ಧ ದಿನ ಕಳೆದಿರುತ್ತಾರೆ!. ಇಂತಹ ಪರಿಸ್ಥಿತಿಯಲ್ಲಿ ಇವತ್ತಿನ ದಿನಮಾನಗಳಲ್ಲಿ ನೀವೇನಾದರೂ ಸರಕಾರಿ ಕಚೇರಿ ಪತ್ತೆ ಹಚ್ಚಿ ಒಳಹೊಕ್ಕರೆ ಅಲ್ಲಿನ ನುಂಗುಬಾಕರ ಮಧ್ಯೆ ಕೆಲಸ ಪೂರೈಸಿಕೊಂಡು ಬರುವುದೇ ದೊಡ್ಡ ಸಾಹಸ.
ಸರಳ ನಿರೀಕ್ಷೆಯ ನಮ್ಮ ಜನರು, ಹಾಳಾಗಿ ಹೋಗಲಿ ಕಾಸು ಕೊಟ್ಟೇ ಕೆಲಸ ಮಾಡಿಸಿಕೊಳ್ಳೋಣ ಎಂದುಕೊಂಡು ಕಾಸು ಕೊಟ್ಟರೂ ಕೆಲಸ ಆಗುತ್ತಿಲ್ಲ!! ಉಪನೋಂದಣಾಧಿಕಾರಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಆರ್‌ಟಿಒ ಕಚೇರಿ, ತಹಸೀಲ್ದಾರ್ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿ, ನಗರಾಭಿವೃದ್ಧಿ, ಜಲಮಂಡಳಿ… ಎಲ್ಲಿಯೇ ಹೋದರೂ ಶ್ರೀಸಾಮಾನ್ಯರ ಕೆಲಸ ಆಗುವುದು ಸುಲಭವಿಲ್ಲ. ಅಧಿಕಾರಿಗಳ ಹಿಂದೆ ದುಂಬಾಲು ಬೀಳುವುದಕ್ಕೆ ಇವರ್ಯಾರೂ ಸರಕಾರದ ಕಾಂಟ್ರಾಂಕ್ಟರ್‌ಗಳಲ್ಲ, ದಳಿಗಲ್ಲ, ರಿಯಲ್ ಎಸ್ಟೇಟ್‌ನವರಲ್ಲ.
ತಮಗೊಂದು ಸಿಎ ಸೈಟ್ ನೀಡಿ ಎಂದು ಅರ್ಜಿ ಹಾಕುವವರಲ್ಲ. ಕೆರೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿ ಖಾತೆ ಮಾಡಿಸಿಕೊಡುವಂತೆ ದುಂಬಾಲು ಬೀಳುವವರೂ ಅಲ್ಲ. ನ್ಯಾಯಯುತವಾಗಿ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕಾದ ಅವರ ಕೆಲಸಕ್ಕೆ ಜನ ಸಾಮಾನ್ಯರು ಶಿ-ರಸು ತರಬೇಕಿದೆ. ಅದರಲ್ಲೂ  ಆಡಳಿತಾರೂಢ ಬಿಜೆಪಿ ನಾಯಕರ ಬಳಿ ತೆರಳಿ ಸಹಾಯ ಕೇಳಿದರೆ ಅವರೋ ‘ಭಾರತಾಂಬೆಯ ನಿಜವಾದ ಪುತ್ರರು’ ತಾವೇ ಎಂಬಂತೆ ಆಡುತ್ತಾರೆ!
ನಿಮ್ಮ ಕೆಲಸ ನೀವೇ ಸ್ವಂತ ಕಾಲ ಮೇಲೆ ನಿಂತು ಮಾಡಿಸಿಕೊಳ್ಳಬೇಕು ಎಂಬುದರ ಬೌದ್ಧಿಕ್ ಅವರದ್ದು. ಹಾಗೆ ನೋಡಿದರೆ ಸ್ವಂತ ಕೆಲಸ ಆಗಬೇಕಾದರೆ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರ ಶಿಫಾರಸು ಹಿಡಿದು ಹೋದರೆ ಸುಲಭವಾಗಿ ಆಗುತ್ತದೆ. ಕೆಲಸವೇ ಆಗದೇ ಉಂಡೆ ನಾಮ ಹಾಕುವ ನಾಯಕರು ಸಿಗುವುದು ಬಿಜೆಪಿಯ. ಅಂತಹ ಪುರುಷಾರ್ಥ ಸಾಧನೆಯ ಗರಿ ಏರಿಸಿಕೊಂಡಿರುವ ಈ ಭಾರತಾಂಬೆಯ ಪುತ್ರರು ಬರಲಿರುವ ಚುನಾವಣೆ ಯಲ್ಲಿ ಎಂತಹ ಪಾತ್ರ ವಹಿಸಲಿದ್ದಾರೆ ಎಂಬ ಜಿಜ್ಞಾಸೆ ಎದ್ದಿದೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಎಲ್ಲ ಪಕ್ಷದವರೂ ಕಳೆದುಕೊಂಡಿದ್ದಾರೆ. ಯಾರಾದರೂ ನಿಮಗೆ ಭ್ರಷ್ಟ ಮುಕ್ತ ಆಡಳಿತನೀಡು ತ್ತೇವೆ ಎಂದರೆ ಅದಕ್ಕಿಂತ ಬೋಗಸ್ ಮತ್ತೊಂದಿಲ್ಲ. ಬಿಜೆಪಿಯವರಿಗಂತೂ, ಸಾಬೂ ನ್‌ನಲ್ಲಿ ತಿಕ್ಕಿದಷ್ಟೂ ಅಂತ್ಯವೇ ಕಾಣದಷ್ಟು ಕೊಳೆ ಹೊರಬರುತ್ತಿದೆ. ಮಾಡಾಳ್ ವಿರೂಪಾಕ್ಷಪ್ಪ, ಅವರ ಪುತ್ರ ಪ್ರಶಾಂತ್ ಮಾಡಾಳ್, ಬೆಸ್ಕಾಂ ಎಇ ದಿವ್ಯಾ ಅವರ ಲಂಚಾವತಾರಗಳೇ ಇಂದು ಎಲ್ಲಮಾಧ್ಯಮಗಳನ್ನು ಆವರಿಸಿಬಿಟ್ಟಿವೆ. ಇವರೆಲ್ಲರ ಮಧ್ಯೆ, ಐಎಎಸ್-ಐಪಿಎಸ್‌ನ ರೂಪಾ ಮತ್ತು ರೋರಂಪಾಟ. ಅದು ಕೂಡ ಅಂದಾಜು ? 500ಕೋಟಿ ಮೊತ್ತದ ಪ್ರಾಜೆಕ್ಟ್‌ನ ಡೀಲ್ ವಿಚಾರಕ್ಕೆ! ಆಪರೇಷನ್ ಕಮಲದ ಮುಖಾಂತರ ರಾಜ್ಯದ ಗದ್ದುಗೆ ಹಿಡಿದ ಬಿಜೆಪಿ ತನ್ನ ಮೌಲ್ಯ- ಸಿದ್ಧಾಂತಗಳನ್ನು ಸಾಬೂನಿನಲ್ಲಿ ತೊಳೆಯುತ್ತ ದಶಕಗಳೇ ಕಳೆದಿವೆ.
ಬಿಜೆಪಿಯ ರಾಷ್ಟ್ರೀಯ ನಾಯಕರು ಮಾತ್ರ ಇದಕ್ಕೆ ವ್ಯತಿರಿಕ್ತ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇವರುಗಳು ಮೇಲಿಂದ ಮೇಲೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವುದನ್ನು ನೋಡಿದರೆ ರಾಜ್ಯದ ಬಿಜೆಪಿ ಹುರಿಯಾಳುಗಳು ತಮ್ಮ ಪ್ರಾಮಾಣಿಕತೆಯನ್ನು ಹಗ್ಗಕ್ಕೆ ನೇತು ಹಾಕಿರುವುದು ಸ್ಪಷ್ಟ. ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಮಾಡಿಯಾದರೂ ಚುನಾವಣೆ ಗೆಲ್ಲುತ್ತೇವೆ ಎಂಬ ಮಾತನ್ನು ರಾಜ್ಯದ ಹಿರಿಯ ನಾಯಕರೇ ಮೂರೂ (ನಾಚಿಕೆ, ಮಾನ,ಮರ್ಯಾದೆ) ಬಿಟ್ಟು ಹೇಳುತ್ತಿದ್ದಾರೆ. ಈ ಮೂಲಕ ತಾವು ರಾಜ್ಯದ ಅಭಿವೃದ್ಧಿಯನ್ನು ಎಳ್ಳಷ್ಟೂ ಮಾಡಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಜೆಪಿಯ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ, ನಾಯಕರ ಅಧಿಕಾರದ ಅಮಲು, ದುರಹಂಕಾರದ ವರ್ತನೆ ಇವೆಲ್ಲವೂ ರಾಜ್ಯ ಬಿಜೆಪಿಯನ್ನ ಕಿತ್ತು ತಿನ್ನುತಿದೆ. ಜತೆಗೆ ಹಿಂದಿ ಹೇರಿಕೆಯ ಭೂತ. ಈ ಎಲ್ಲ ಚಕ್ರವ್ಯೂಹಗಳನ್ನು ಭೇದಿಸಿ ಹೊರಬರಬೇಕಾದರೆ ಅದು ಅಷ್ಟು ಸುಲಭದ ಮಾತಲ್ಲ. ರಾಜ್ಯ ಬಿಜೆಪಿಯ ಬಹುದೊಡ್ಡ ಡ್ರಾಬ್ಯಾಕ್ ಎಂದರೆ ಲೀಡರ್ ಲೆಸ್ ಪಕ್ಷವಾಗಿರುವುದು. ರಾಜ್ಯ ಕಾಂಗ್ರೆಸ್ ಇದಕ್ಕೆ ತದ್ವಿರುದ್ಧ. ಕಾಂಗ್ರೆಸ್ ನಲ್ಲಿ, ವಿಶೇಷವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಲೀಡರ್‌ಗಳಿಗೇನೂ ಕೊರತೆಯಿಲ್ಲ. ರಾಜ್ಯದ ಮಟ್ಟಕ್ಕೆ ಹೇಳುವುದಾದರೆ ಕಾಂಗ್ರೆಸ್ ಒಂದು ಕ್ವಾಲಿಫೈಡ್ ಪಕ್ಷ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸಂವಿಧಾನ ಅರಿತಿರುವ ಘಟಾನುಘಟಿ ನಾಯಕರು ರಾಜ್ಯ ಕಾಂಗ್ರೆಸ್‌ನ ಹೆಚ್ಚು ಸಿಗುತ್ತಾರೆ.
ರಾಜ್ಯ ಕಾಂಗ್ರೆಸ್ ನಾಯಕರ ಹೆಸರು ಹೇಳಿ ಎಂದರೆ ನಿರರ್ಗಳವಾಗಿ ಕನಿಷ್ಠ ೧೦ ಹೆಸರುಗಳನ್ನಾದರೂ ಹೇಳಬಹುದು. ಸಿದ್ದರಾಮಯ್ಯ, ಎಂ.ಬಿ. ಪಾಟೀಲ, ಎಚ್.ಕೆ.ಪಾಟೀಲ, ಆರ್ .ವಿ. ದೇಶಪಾಂಡೆ, ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ, ಬೊಮ್ಮಾಯಿ ವಿರುದ್ಧ ತೊಡೆ ತಟ್ಟಲು ಸಜ್ಜಾಗುತ್ತಿರುವ ವಿನಯ್ ಕುಲಕರ್ಣಿ ಇತ್ಯಾದಿ… ಅದೇ ಬಿಜೆಪಿ ನಾಯಕರು ಎಂದರೆ ನಮ್ಮ ಕಣ್ಣ ಮುಂದೆ ಲೀಡರ್‌ಗಳಿಗಿಂತತಗಲ್ಹಾಕಿ ಕೊಂಡ ಮಾಸ್ ಲೀಡರ್‌ಗಳ ಹೆಸರೇ ಹೆಚ್ಚು ಪ್ರಚಲಿತದಲ್ಲಿವೆ.
ಅದಿಕಾರದ ಗದ್ದುಗೆ ಏರಲು ಬಿಜೆಪಿ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಕಾಂಗ್ರೆಸ್ ಅವಧಿಯಲ್ಲಿ ನಡೆದ ವೈಟ್ ಟಾಪಿಂಗ್ ಹಗರಣ, ಲೋಕಾಯುಕ್ತ ಮರುಸ್ಥಾಪನೆ, ಐಎಎಸ್ ಅಧಿಕಾರಿ ಡಿ. ಕೆ.ರವಿ ಅವರ ಸಾವು ಇವುಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ೧೦೦ರ ಗಡಿ ದಾಟುವಲ್ಲಿ ಸಫಲವಾಯಿತು. ನಂತರ ರಾಜಕೀಯದದ ಪವಾಡ ಎಲ್ಲರಿಗೂ ತಿಳಿದೇ ಇದೆ. ಬೇಸರದ ಸಂಗತಿ ಎಂದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅವರು ಮಾಡಿದ ಆರೋಪಗಳನ್ನೆಲ್ಲ ಬಯಲಿಗೆ ಎಳೆಯುತ್ತೇವೆ ಎಂದು ಬೊಬ್ಬೆ ಹಾಕಿ ಅಧಿಕಾರಕ್ಕೆ ಬಂದ ಬಿಜೆಪಿ ತಕ್ಷಣವೇ ವೈಟ್ ಟಾಪಿಂಗ್ ಕಾಮಗಾರಿಗೆ ಎಲ್ಲಿಲ್ಲದ ವೇಗ ನೀಡಿತು.
ಲೋಕಾಯುಕ್ತ ಮರುಸ್ಥಾಪನೆ ವಿಚಾರವನ್ನಂತೂ ಮಾತನಾಡದಿರುವುದೇ ಲೇಸು. ಎಲ್ಲ ರಾಜಕೀಯ ಪಕ್ಷಗಳಿಗೂ ಒಬ್ಬ ಸಾಫ್ಟ್ ಕಾರ್ನರ್ ಇರುವ ಲೋಕಾಯುಕ್ತರ ಅವಶ್ಯಕತೆ ಇತ್ತು. ರಾಜಕಾರಣಿಗಳ ಹುರುಪು ಅಥವಾ ಇಮೇಜ್ ಡ್ಯಾಮೇಜ್ ಮಾಡುವಂತಹ ಲೋಕಾ ಯುಕ್ತ ಬೇಡವೇ ಬೇಡ ಎಂಬ ಸರ್ವಾನುಮತ ದಿಂದ ನಿರ್ಧಾರ ಆಗಿತ್ತೋ ಏನೋ. ಹೈಕೋರ್ಟ್ ಚಾಟಿ ಬೀಸುವ ತನಕ ಲೋಕಾಯುಕ್ತ ಕುರಿತು ಯಾರೊಬ್ಬರೂ ಕೆಮ್ಮಲಿಲ್ಲ. ನಂತರ ಲೋಕಾ ಯುಕ್ತ ಮರುಸ್ಥಾಪನೆಗೆ ಚಾಲ್ತಿ ದೊರಕಿತಾದರೂ, ಸಾಫ್ಟ್ ಕ್ಯಾಂಡಿಡೇಟ್ ಹುಡುಕುವಲ್ಲಿ ಬಿಜೆಪಿ ಯಶಸ್ವಿಯಾಯಿತು.
ಉಳಿದೆರಡು ಪಕ್ಷದವರಿಗೂ ಇದು ಸಮ್ಮತವಾಗುವಂತಿದ್ದುದೇ ಚಿದಂಬರ ರಹಸ್ಯ. ಈ ಹಿಂದೆ ಇದ್ದ ಗತ್ತು ಇಂದಿನ ಲೋಕಾ ಯುಕ್ತರಲ್ಲಿ ಗೋಚರಿಸುತ್ತಲೇ ಇಲ್ಲ. ಲೋಕಾಯುಕ್ತರ ವರ್ತನೆ ಕೂಡ ಸರಕಾರದ ಆಜ್ಞೆ ಪಾಲಿಸುತ್ತಿದೆಯೇನೋ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇವನ್ನೆಲ್ಲ ಗಮನಿಸಿದರೆ ಬಹುಶಃ ಸಿದ್ಧರಾಮಯ್ಯನವರ ಕಾಂಗ್ರೆಸ್ ಜನರಲ್ಲಿ ನಿಜಕ್ಕೂ ಆಶಾಭಾವನೆ ಮೂಡಿಸಿದ್ದು ಸುಳ್ಳಲ್ಲ. ಐದು ವರ್ಷಗಳ ಕಾಲ ಒಬ್ಬನೇ ಮುಖ್ಯಮಂತ್ರಿ ರಾಜ್ಯ ಆಳಬೇಕೆಂದರೇ ಈಗಿನ ಕಾಲಕ್ಕೆ ಅದು ಸವಾಲಿನ ಮಾತೆ ಸರಿ. ಐದು ವರ್ಷ ಅಧಿಕಾರ ಪೂರೈಸಿ ಎಲ್ಲಿಯೂ ತಾವು ನಂಬಿದ ಸಿದ್ಧಾಂತ ರಾಜೀ ಮಾಡಿಕೊಳ್ಳದ ಸಿದ್ದರಾಮಯ್ಯ ಸದ್ಯದ ಮಟ್ಟಿಗೆ ಪ್ರಶ್ನಾತೀತ ಜನನಾಯಕ.
ಜಾತಿ ಲೆಕ್ಕಚಾರ, ಹಣ, ಉಡುಗೆ ಇವೆಲ್ಲವೂ ಗೆಲುವಿಗೆ ಬೇಕಿರುವ ಪ್ರಮುಖ ಟೂಲ್‌ಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಜತೆಜತೆಗೇ ಇವೆಲ್ಲವನ್ನೂ ಮೀರಿಸುವ ಕೆಲ ಅಂಶಗಳೂ ಕಾಂಗ್ರೆಸ್ ಗೆಲುವಿಗೆ ದಾರಿ ತೆರೆಯುತ್ತಿವೆ. ಕಾಂಗ್ರೆಸ್ ತನ್ನ ತಂತ್ರಗಾರಿಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ನಿರೀಕ್ಷಿತ ಸ್ಥಾನಗಳಿಗಿಂತಲೂ ೧೦-೧೫ ಹೆಚ್ಚಿನ ಕ್ಷೇತ್ರಗಳನ್ನು ನಿಸ್ಸಂದೇಹವಾಗಿ ತನ್ನ ಮುಡಿಗೆ ಸೇರಿಸಿಕೊಳ್ಳಬಹುದು. ಸಿದ್ಧರಾಮಯ್ಯ ನವರ ಅಹಿಂದ ಓಲೈಕೆ ಪಕ್ಷಕ್ಕೆ ಮುಳುವಾಗುವುದರಲ್ಲಿ ಅನುಮಾನವೇ ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದ್ದು ಸಿದ್ಧರಾಮಯ್ಯ ನವರ ಈ ಓಲೈಕೆಯಿಂದಲೇ.
ಆದರೆ, ಸದ್ಯ ಬಿಜೆಪಿಯ ದುರಾಡಳಿತ ಕಾಂಗ್ರೆಸ್ ವರದಾನವಾಗಿದೆ. ಇದನ್ನು ಬಳಸಿಕೊಳ್ಳಲು ಕಾಂಗ್ರೆಸ್ ಎಲ್ಲ ರೀತಿಯಲ್ಲೂ ವೇದಿಕೆ ಸಜ್ಜುಮಾಡಿಕೊಂಡಿದೆ. ಆದರೆ ಪಕ್ಷ ದೊಳಗೆ ಕೆಪಿಸಿಸಿ ಅಧ್ಯಕ್ಷರ ಕುರಿತು ಯುದ್ಧ ಭೂಮಿಯಲ್ಲಿರುವ ಕಾಂಗ್ರೆಸ್ ಕಟ್ಟಾಳುಗಳ ಬಾಯಲ್ಲಿ ಒಳ್ಳೆಯ ಮಾತುಗಳೇ ಬರುತ್ತಿಲ್ಲ. ಬೂತ್ ಮಟ್ಟದಲ್ಲಿ ಗ್ರಾಮಾಂತರ ಭಾಗದಲ್ಲಿದ್ದ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆ ಯುವುದರಲ್ಲಿ ಹಾಲಿ ಅಧ್ಯಕ್ಷರು ಸಫಲವಾದರೂ ನಿರೀಕ್ಷಿತ ಮಟ್ಟದಲ್ಲಿ ಅವರನ್ನು ಚುನಾವಣೆ ಮುಗಿಯುವ ತನಕ ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ.
ಜನಾರ್ದನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಾಲಿ ಅಧ್ಯಕ್ಷರ ವಿರುದ್ಧ ಒಮ್ಮೆ ಹರಿ ಹಾಯ್ದಿದ್ದರು. ‘ಅಂಗಿ ಗುಂಡಿ ಬಿಚ್ಚಿಕೊಂಡುಪಕ್ಷದ ಕಚೇರಿಗೆ ಕಾಲಿಡುವವರು, ಇದು ಕಾಂಗ್ರೆಸ್ ಪಕ್ಷದ ಕಚೇರಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪಕ್ಷದ ಕಚೇರಿ ಎಂದರೆ ದೇಗುಲವಿದ್ದಂತೆ’ ಎಂದು ಗುಡುಗಿದ್ದರು. ಆದರೆ ಇವತ್ತು ಆಗುತ್ತಿರುವುದೇನು? ತಿಹಾರ್ ಜೈಲಿನಿಂದ ಹೊರಬಂದ ಕೂಡಲೆ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿನೇಮಿಸುವ ಮೂಲಕ ಕಾಂಗ್ರೆಸ್ ಆಗಲೇ ದೊಡ್ಡ ರಿಸ್ಕ್‌ಗೆ ಕೈ ಹಾಕಿತ್ತು. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ ೧೦-೧೫ ಸೀಟುಗಳದರೂ ಬೆಲೆ ತೆರಬೇಕಾಗಬಹುದೇನೋ.
ಇತಿಹಾಸವನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹೊರಗಿನವರು ಮಾಡುವ ಹಾನಿಗಿಂತ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕುಳಿತವರು ಮಾಡುವ ಹಾನಿಯೇ ಹೆಚ್ಚು ಎಂಬಂತಿದೆ. ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗ ಪಕ್ಷಕ್ಕೆ ಆಗಿದ್ದ ಲಾಭಕ್ಕಿಂತ ಹಾನಿ ಆಗಿದ್ದೇ ಹೆಚ್ಚು. ರಾಜ್ಯ ಮಟ್ಟದಲ್ಲೂ ಇದೇ ಮಾತನ್ನು ಪುನರುಚ್ಚರಿಸಬೇಕಾದ ಲಕ್ಷಣಗಳಿವೆ. ವಾಸ್ತವವನ್ನು ಗಮನಿಸಿದರೆ ಹೇಳಿಕೊಳ್ಳುವಂತಹ ಯಾವೊಬ್ಬ ನಾಯಕರೂ ಡಿಕೆಶಿ ಹಿಂದೆ ಕಾಣಿಸಿಕೊಳ್ಳುವುದೇ ಇಲ್ಲ.
ಅಬ್ಬಬ್ಬಾ ಎಂದರೆ ಅವರ ನಡತೆಯನ್ನೇ ಹೋಲುವ ಪಕ್ಷದ ಮತ್ತೊಬ್ಬ ಡ್ಯಾಮೇಜರ್ ಯುವ ಅಧ್ಯಕ್ಷ ನಳಪಾಡ್ ಅಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಹೊರತಂತೆ ಉಳಿದ ಂ   ಲ  ಞ ಅಧ್ಯಕ್ಷರಿಂದ ಅಂತರ ಕಾಪಾಡಿಕೊಂಡೇ ಇದ್ದಾರೆ. ಇವಲ್ಲದರ ಮಧ್ಯೆ ಯೂ ರಾಜ್ಯ ಕಾಂಗ್ರೆಸ್ ಅಧಿಕಾರದ ಗದ್ದುಗೆಏರಲು ಕಾಲ ಪಕ್ವವಾದಂತಿದೆ. ಆದರೆ, ಆ ಪಕ್ಷದ ಅಧ್ಯಕ್ಷರ ಮುಖಬೆಲೆಯೇ ಹಾನಿಕರವಾಗಿದೆ ಎಂಬುದು ಅದೇ ಪಕ್ಷದ ನಾಯಕರ ಲೆಕ್ಕಾಚಾರ. ಬಿಜೆಪಿಯ ಹಿರಿಯ ಮುಖಂಡ ಆರ್. ಅಶೋಕ್ ಅವರಂತೆ ಶಿವಕುಮಾರ್‌ರದ್ದು ಕೂಡ ಸಂದರ್ಭೋಚಿತ ರಾಜಕಾರಣ ಮಾಡುವುದರಲ್ಲಿ ಎತ್ತಿದ ಕೈ! ಆದರೆ, ಇದು ಪಕ್ಷಕ್ಕೆ ದೊಡ್ಡ ಹಾನಿ ಮಾಡುತ್ತದೆ ಎಂಬುದರನ್ನು ಅವರು ಅರಿಯಾದಾಗಿದ್ದಾರೆ.
ಇತ್ತೀಚಿಗೆ ರಾಮನಗರದ ಜಿಲ್ಲಾ ಆಸ್ಪತ್ರೆ ಶಂಕುಸ್ಥಾಪನೆ ಸಮಾರಂಭದಲ್ಲಿ ಅಧ್ಯಕ್ಷರ ಸಹೋದರನ ವರ್ತನೆ ದಶಕಗಳ ಹಿಂದಿನ ಬೆಂಗಳೂರಿನ ರೌಡಿಸಂ ನೆನಪಿಸುವಂತೆ ಮಾಡಿತ್ತು. ಇವೆಲ್ಲವೂ ಪಕ್ಷದ ಪಾಲಿನ ವಿಷಗುಳಿಗೆ. ಬಹುತೇಕ ಸಂದರ್ಭದಲ್ಲಿ ಅಧ್ಯಕ್ಷರ ಏಕ ಪಕ್ಷೀಯ ನಿರ್ಧಾರವೂ ಬೇರೆ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಹಿರಿಯ ನಾಯಕರಿಗೆ ಹೋಲಿಸಿದರೆ ಅಧ್ಯಕ್ಷರ ಹಿಂದೆ ಮುಂದೆ ಓಡಾಡುವ ಅಂಡೆಪಿರ್ಕಿಗಳೇ ಪಕ್ಷದಲ್ಲಿ ಮೇಲುಗೈಸಾಧಿಸುತ್ತಿದ್ದಾರೆಂಬುದೂ ಮೇಲ್ನೋಟಕ್ಕೆ ಸ್ಪಷ್ಟ. ಇತ್ತೀಚೆಗೆ ಸಿದ್ದರಾಮಯ್ಯನವರು ಪಕ್ಷದ ಸಾರ್ವಜನಿಕ ಸಭೆಗೆ ಬರುವವರಿಗೆ ತಲೆಗೆ ಐನೂರು ರೂಪಾಯಿ ಕೊಡುವಂತೆ ನೀಡಿದ್ದ ಹೇಳಿಕೆ ಮಾಧ್ಯಮದಲ್ಲಿ ಸೋರಿಕೆಯಾದದ್ದರ ಹಿಂದೆ ಅಧ್ಯಕ್ಷರ ಕೈವಾಡ ಇದೆ ಎಂಬ ಗುಮಾನಿ ಕೇಳಿ ಬರುತ್ತಿದೆ.
ಅಧ್ಯಕ್ಷರ ಸುತ್ತ ಅಂಟಿಕೊಂಡಿರುವ ಇಂತಹ ಹಲವು ಒಳಪೆಟ್ಟುಗಳ ಬಗ್ಗೆ ಬೇರೆ ಪಕ್ಷದವರಿಗಲ್ಲದೇ ಅವರ ಪಕ್ಷದವರಿಗೂ ದಿಗಿಲು ಹುಟ್ಟಿಸಿದೆ.ಅಧ್ಯಕ್ಷರ ಇಂತಹ ಚಿತಾವಣೆಗಳನ್ನೆಲ್ಲ ಕಾಂಗ್ರೆಸ್‌ನ ಹಿರಿ-ಕಿರಿಯ ನಾಯಕರು ಸಹಿಸಿಕೊಳ್ಳಲೇಬೇಕಿದೆ.