ದೇಶ ಕಂಡ ಅಪ್ರತಿಮ ವಿಜ್ಞಾನಿ ಪ್ರೊ.ಯು.ಆರ್‌.ರಾವ್‌
ಅವರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಓದುತ್ತಿದ್ದಾಗ ಇಂಗ್ಲಿಷ್ ಮತ್ತು  ಕನ್ನಡ ವಿಷಯದ ಗುರುಗಳಾಗಿದ್ದ ಪುಂಡಲೀಕ ಶೆಣೈರಿಂದ ಬಹಳ ಪ್ರಭಾವಿತರಾಗಿದ್ದರು.
ಪುಂಡಲೀಕ ಶೆಣೈ ಶಾಲಾವಧಿಯ ನಂತರ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಹೇಳಿಕೊಡುತ್ತಿದ್ದರು. ಶೆಣೈ ಅವರಿಗೂ ಇವರು ನೆಚ್ಚಿನ ವಿದ್ಯಾರ್ಥಿಯಾಗಿದ್ದರು. ಆರ್ಯಭಟ ಉಡಾವಣಾ ಯೋಜನೆ ಯಶಸ್ವಿಯಾದ ಬಳಿಕ ೧೯೭೫ರಲ್ಲಿ ಇವರು ಉಡುಪಿಗೆ ಒಂದು ಸನ್ಮಾನ ಸಮಾರಂಭಕ್ಕೆಂದು ಬಂದಿದ್ದರು. ಈ ವೇಳೆ ಉಡುಪಿಯ ಹಳೆಯ ನಗರ ಸಭೆ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿಧಿಗ, ತಮ್ಮ ಗುರು ಪುಂಡಲೀಕ ಶೆಣೈ ನಡೆದುಕೊಂಡು ಹೋಗುತ್ತಿರುವು ದನ್ನು ಗಮನಿಸಿ, ತಕ್ಷಣ ಕಾರು ನಿಲ್ಲಿಸಿ, ‘ನನ್ನ ಎಲ್ಲ ಯಶಸ್ಸಿನ ಚಿಂತನೆಗೆ ನೀವೇ ಕಾರಣ’ ಎನ್ನುತ್ತ ವಿನಯದಿಂದ ನಮಿಸಿದ್ದರು.
ಈ ವೇಳೆ ಗುರು – ಶಿಷ್ಯರಿಬ್ಬರೂ ಒಂದು ಕ್ಷಣ ಭಾವುಕರಾಗಿದ್ದರು. ಆ ಗುರುಗಳು ಕಂಡ ಅತ್ಯುತ್ತಮ ಶಿಷ್ಯೋತ್ತಮ, ಭಾರತ ದೇಶ ಕಂಡ ಮಹಾನ್ ವಿಜ್ಞಾನಿಯೇ ಕನ್ನಡಿಗ ಪ್ರೊ.ಯು.ಆರ್.ರಾವ್. ಇಂದು ಬಹಳಷ್ಟು ಜನ ವಶೀಲಿ ಹಿಡಿದು, ಲಂಚಕೊಟ್ಟು, ಕೊನೆಗೆ ಅವರಿವರ ಕೈಕಾಲು ಹಿಡಿದು ಉನ್ನತ ಹುದ್ದೆಗೇರುತ್ತಿರುವ, ಇಲ್ಲವೇ ಪ್ರಶಸ್ತಿ ಪಡೆಯುತ್ತಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.
ಹೀಗಿರುವಾಗ ರಾಜ್ಯಪಾಲ ಹುದ್ದೆಯನ್ನೇ ನಯವಾಗಿ ತಿರಸ್ಕರಿ ತಾನಿರುವ ವಿಜ್ಞಾನ ಕ್ಷೇತ್ರದ ಅನುರಣನೀಯ ಕಾರ್ಯ ಸಾಧಿಸಿ ಹೆಸರುವಾಸಿಯಾದವರ ಸಾಲಿನಲ್ಲಿ ನಿಂತವರೇ ಭಾರತದ ಮೇಲಾಗಿ ಅಪ್ಪಟ ಕನ್ನಡದ ಹೆಮ್ಮೆಯ ವಿeನಿ ಪ್ರೊ.ಯು. ಆರ್.ರಾವ್. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲ ವದು. ರಾವ್ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯ ಆಫರ್ ಕೊಟ್ಟಿದ್ದರು. ನಾನು ವಿಜ್ಞಾನಿ, ರಾಜಕಾರಣಿಯಾಗಲು ಬಯಸುವುದಿಲ್ಲ ಎಂದು ಪ್ರಧಾನಿಯಿಂದ ಬಂದ ನಿವೇದನೆಯನ್ನು ನಯವಾಗಿ ತಿರಸ್ಕರಿಸಿದ್ದರು ರಾವ್.
ಇಂದೇಕೆ ರಾವ್ ಅವರನ್ನು ನೆನಪಿಸಿ ಕೊಳ್ಳುತ್ತಿದ್ದೇನೆಂದರೆ, ಮಾರ್ಚ್೧೦ ಅವರ ಜನ್ಮ ದಿನ. ಆ ಧೀಮಂತ ವ್ಯಕ್ತಿ ಸದ್ಯ ನಮ್ಮ ಜತೆಗಿಲ್ಲ. ಆದರೆ ಅವರ ನೆನಪುಗಳು ಸದಾ ನಮ್ಮ ಮನದಾಳದಲ್ಲಿ ಯಾವಾಗಲೂ ಹಸಿರಾಗೇ ಇವೆ. ಉಡುಪಿ ರಾಮಚಂದ್ರ ರಾವ್ ಅವರು ಎಲ್ಲರ ಬಾಯಲ್ಲಿ ಯು.ಆರ್.ರಾವ್ ಎಂದೇ ಪ್ರಸಿದ್ದಿಯಾದವರು. ರಾವ್ ಅವರು ೧೦ನೇ ಮಾರ್ಚ್ ೧೯೩೨ ರಂದು ಉಡುಪಿ ಜಿಲ್ಲೆಯ ಅದಮಾರು ಎಂಬ ಪುಟ್ಟ ಗ್ರಾಮದಲ್ಲಿ, ಲಕ್ಷ್ಮೀನಾರಾ ಯಣಾಚಾರ್ಯ ಹಾಗೂ ಕೃಷ್ಣವೇಣಿ ದಂಪತಿಯ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಕಲಿಕೆಯನ್ನು ಅದಮಾರುವಿನಲ್ಲಿ ಮುಗಿಸಿದ್ದರು.
ಕನ್ನಡ ಮಾಧ್ಯಮದ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅವರು, ಉಡುಪಿಯ ಮಿಷನ್ ಕಂಪೌಡಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ತಮ್ಮ ಪ್ರೌಢ ಶಿಕ್ಷಣ ವನ್ನು ಪೂರೈಸಿದ್ದರು. ಬಾಲ್ಯದಿಂದಲೇ ವಿಜ್ಞಾನ ಹಾಗೂ ಗಣಿತ ವಿಷಯಗಳ ಬಗ್ಗೆ ಅವರಿಗಿದ್ದ ಆಸಕ್ತಿ ಸಹಜವಾಗಿ ಅವರಿಗೆ ವಿಜ್ಞಾನದಲ್ಲಿ ಪದವಿ ಪಡೆಯುವಂತೆ ಮಾಡಿತು. ೧೯೫೨ ರಲ್ಲಿ ಆಂಧ್ರಪ್ರದೇಶದ ಅನಂತಪುರ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಮಎಸ್ಸಿ ಪದವಿ ಪಡೆದು, ಅಹ್ಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೋರೆಟರಿ ಮೂಲಕ ಬಾರತದ ಇನ್ನೊಬ್ಬ ಹಿರಿಯ ವಿಜ್ಞಾನಿಯಾದ ಡಾ.ವಿಕ್ರಮ್ ಸಾರಾಬಾಯ್ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪಡೆದು ಡಾಕ್ಟರ್ ಆದರು.
೧೯೬೦ರಲ್ಲಿ ಡಾಕ್ಟರೇಟ್ ಪಡೆದ ನಂತರ, ಅಮೆರಿಕದ ಪ್ರಖ್ಯಾತ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಶಿಕ್ಷಕ, ಸಂಶೋಧಕರಾಗಿ ನೇಮಕಗೊಂಡರು. ಅಲ್ಲಿಂದ ಮುಂದೆ ಅಮೆರಿಕದ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ನಲ್ಲಿ ಸಂಶೋಧಕರಾಗಿ ಸೋಲಾರ್ ರೇಡಿಯೇಶನ್ ಮತ್ತು ಇತರ ಪ್ರಮುಖ ಸಂಶೋಧನೆಗಳಲ್ಲಿ ಗಣನೀಯ ಪಾತ್ರವಹಿಸಿದರು. ಮತ್ತು ಯೂನಿವರ್ಸಿಟಿ ಆಫ್ ಟೆಕ್ಸಾಸ್‌ನಲ್ಲಿ ಪ್ರೊಪೆಸರ್ ಆಗಿ ವೃತ್ತಿ ಆರಂಭಿಸಿದರು.
ಅಮೆರಿಕದಲ್ಲಿ ಸ್ಪೇಸ್ ಕ್ರಾಫ್ಟ್ ಗಳ ಬಗ್ಗೆ ಹಲವಾರು ಅಧ್ಯಯನ ಕೈಗೊಂಡರು. ತಾಯಿನಾಡಿನ ಸೇವೆ ಮಾಡಲು ಅವರ ಗುರುಗಳಾದ ಡಾ. ವಿಕ್ರಮ್ ಸಾರಾಭಾಯಿ ಅವರ ಕರೆ ಬಂದಾಗ, ಮರುಮಾತಿಲ್ಲದೇ ಒಪ್ಪಿಕೊಂಡು ೧೯೬೬ರಲ್ಲಿ ರಾವ್ ಮರಳಿ ಬಾರತಕ್ಕೆ ಬಂದರು. ಗುರುಗಳ ಅಣತಿಯಂತೆ ಇನ್ನೂ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಭಾರತದ ಉಪಗ್ರಹ ಯೋಜನೆ ಸಾರಥ್ಯ ವಹಿಸಿದರು. ಅಲ್ಲಿಂದ ಆರ್ಯಭಟ, ಭಾಸ್ಕರ, ರೋಹಿಣಿ, ಇನ್‌ಸ್ಯಾಟ್ ಮಾತ್ತು ಇಂಡಿಯನ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಮುಂತಾದ ಅನೇಕ ಯಶಸ್ವಿ ಯೋಜನೆಗಳ ಜನಕರಾದರು.
ಭಾರತದ ಉಪಗ್ರಹ ಮನುಷ್ಯ ಎಂದೇ ಹೆಸರುಗಳಿಸಿದರು. ೧೯೭೨ ರಲ್ಲಿ ಸ್ಯಾಟಲೈಟ್ ಟೆಕ್ನಾಲಜಿ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸಲು ಮುಂದಾದರು. ಇವರ ಈ ಅಚಲ ನಿರ್ಧಾರದ ಫಲವಾಗಿ ೧೯೭೫ರಲ್ಲಿ ಹಾರಿಬಿಟ್ಟ ಮೊದಲ ಸ್ಯಾಟಲೈಟ್ ಆರ್ಯಭಟ ಸೇರಿದಂತೆ ಭಾಸ್ಕರ್, ಆಪಲ, ರೋಹಿಣಿ, ಇನ್ಸಾಟ್-೧, ಇನ್ಸಾಟ್-೨ ಮುಂತಾದ ೧೮ ಕೃತಕ ಉಪಗ್ರಹಗಳನ್ನು ನಭಕ್ಕೆ ಕಳಿಸಲಾಯಿತು.
೧೯೮೪ರಲ್ಲಿ ಇಸ್ರೋದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ರಾಕೆಟ್ ತಂತ್ರeನಕ್ಕೆ ಹೆಚ್ಚಿನ ಬಲತುಂಬಿದರು. ಪಿಎಸ್‌ಎಲವಿ, ಎಸ್‌ಎಲವಿ ಮುಂತಾದ ರಾಕೆಟ್‌ಗಳನ್ನು ಹಾರಿಬಿಟ್ಟು ರಾಕೆಟ್‌ಗಳ ಉಡಾವಣೆಯಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ರಾವ್ ಅವರ ಕೊಡುಗೆ ಮರೆಯುವಂತಿಲ್ಲ. ೧೯೯೧ರ ಹೊತ್ತಿಗೆ ‘ಕ್ರಯೋಜೆನಿಕ್ ಎಂಜಿನ್’ಗಳನ್ನು ಹೊರತರುವಲ್ಲಿ ರಾವ್ ಅವರು ಸಾಕಷ್ಟು ಶ್ರಮವಹಿಸಿದ್ದರು. ಇನ್ಸಾಟ್ಸರಣಿಯ ಉಪಗ್ರಹಗಳನ್ನು ಹಾರಿಬಿಟ್ಟದ್ದು ಭಾರತದ ಕಮ್ಯುನಿಕೇಶನ್ (ಸಂವಹನ )ವಲಯದಲ್ಲಿ ಕ್ರಾಂತಿ ಮಾಡಿತು. ಒಂದು ಪೋನ್ ಕರೆ ಮಾಡಲು ಹಲವಾರು ನಿಮಿಷಗಳ ಕಾಲ ಕಾದು ಮಾತನಾಡುವ ಕಾಲವೊಂದಿತ್ತು.
ಇನ್ಸಾಟ್ ಉಪಗ್ರಹಗಳ ಪರಿಣಾಮವಾಗಿ ಎಸ್‌ಟಿಡಿ( ಸಬ್ ಸ್ಕ್ರೈಬ್ ಟ್ರಂಕ್ ಡೈಲ್) ವ್ಯವಸ್ಥೆ ಬಳಕೆಗೆ ಬಂದು, ಜನ ಒಬ್ಬರಿಗೊಬ್ಬರು ಮಾತನಾಡಲು ಬಲು ಸುಲಲಿತವಾಯಿತು. ಮುಂದೆ ಭಾರತವು ಮೊಬೈಲ್ ಮತ್ತು ಐಟಿ ವಲಯದಲ್ಲಿ ದೊಡ್ಡ ಬೆಳವಣಿಗೆ ಕಂಡಿದ್ದು ಇದೇ ಇನ್ಸಾಟ್ ಉಪಗ್ರಹಗಳ ನೆರವಿನಿಂದ ಎಂಬ ಮಾತು ಸುಳ್ಳಲ್ಲ. ಭಾರತದ ಉಪಗ್ರಹ ಉಡಾವಣಾ ರಾಕೆಟ್‌ಗಳಾದ ಎಎಸ್‌ಎಲ್‌ವಿ ಮತ್ತು ಪಿಎಸ್‌ಎಲ್‌ವಿಗಳ ಬೆಳವಣಿಗೆಯಲ್ಲಿ ರಾವ್ ಪ್ರಮುಖ ಪಾತ್ರ ವಹಿಸಿದರು. ಇಂದು ಭಾರತದ ಡಿಟ್ಟh eಟ್ಟoಛಿ ಎಂದು ಪ್ರಸಿದ್ಧಿಗಳಿಸಿದ ಪಿಎಸ್‌ಎಲ್‌ವಿ ರಾಕೆಟ್ ಯೋಜನೆ ಯಶಸ್ಸು ಪಡೆದದ್ದು ಯು ಆರ್ರಾವ್ ಸಾರಥ್ಯದಲ್ಲಿಯೇ.
ಇಂದು ಇಸ್ರೋ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಹೊರಹೊಮ್ಮಲು ಮತ್ತು ನಮ್ಮ ದೇಶ ಇಂದು ಖಗೋಲ ವಿಜ್ಞಾನದಲ್ಲಿ ಮುಂಚೂಣಿ ಯಲ್ಲಿರಲು ಅವರ ಅಂದಿನ ಅತ್ಯಂತ ಪರಿಶ್ರಮ ಮತ್ತು ದೂರದೃಷ್ಟಿಯೇ ಕಾರಣ ಎಂದರೆ ಅತಿ ಶಯೋಕ್ತಿಯೇನಲ್ಲ. ಅಷ್ಟೇ ಅಲ್ಲದೇ ಕಾಸ್ಮಿಕ್ ಕಿರಣಗಳಕುರಿತು ಬಹುವಿಧದಲ್ಲಿ ಅಧ್ಯಯನ ಮಾಡಿದ್ದ ರಾವ್ ಅವರು, ಸೂರ್ಯನ ವಿಕಿರಣಗಳು ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳನ್ನು ಹೊರಸೂಸುತ್ತವೆ. ಹೀಗೆ ಹೊರಬರುವ ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳು, ಜಿಯೋಮ್ಯಾಗ್ನಟಿಸಂ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡುತ್ತವೆ ಎಂಬುದರ ಬಗ್ಗೆ ಹಲವು ಪ್ರಯೋಗಗಳನ್ನು ನಡೆಸಿದ್ದರು.
ರಾವ್ ಅವರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ಪ್ರೊ. ಯು.ಆರ್.ರಾವ್ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಓದುತ್ತಿದ್ದಾಗ ಇಂಗ್ಲಿಷ್ ಮತ್ತು ಕನ್ನಡ ವಿಷಯದ ಗುರುಗಳಾಗಿದ್ದ ಪುಂಡಲೀಕ ಶೆಣೈರಿಂದ ಬಹಳ ಪ್ರಭಾವಿತರಾಗಿದ್ದರು. ಪುಂಡಲೀಕ ಶೆಣೈ ಶಾಲಾವಧಿ ನಂತರ ಮಕ್ಕಳಿಗೆ ಉಚಿತವಾಗಿ ಟ್ಯೂಷನ್ ಹೇಳಿಕೊಡುತ್ತಿದ್ದರು. ಶೆಣೈ ಅವರಿಗೂ ರಾವ್ ನೆಚ್ಚಿನ ವಿದ್ಯಾರ್ಥಿಯಾಗಿದ್ದರು. ಆರ್ಯಭಟ ಉಡಾವಣಾ ಯೋಜನೆ ಯಶಸ್ವಿಯಾದ ಬಳಿಕ ೧೯೭೫ ರಲ್ಲಿ ಯು.ಆರ್.ರಾವ್ ಉಡುಪಿಗೆ ಸನ್ಮಾನ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ ಉಡುಪಿಯ ಹಳೆಯ ನಗರ ಸಭೆ ಕಚೇರಿ ಎದುರು ಕಾರಿನಲ್ಲಿ ಹೋಗುತ್ತಿದ್ದಾಗ, ತಮ್ಮ ಗುರು ಪುಂಡಲೀಕ ಶೆಣೈ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ, ತಕ್ಷಣ ಕಾರು ನಿಲ್ಲಿಸಿ, ನನ್ನಎಲ್ಲ ಯಶಸ್ಸಿನ ಚಿಂತನೆಗೆ ನೀವೇ ಕಾರಣ ಎನ್ನುತ್ತಾ ವಿನಯದಿಂದ ನಮಿಸಿದ್ದರು.
ಈ ವೇಳೆ ಗುರು -ಶಿಷ್ಯರಿಬ್ಬರೂ ಒಂದು ಕ್ಷಣ ಭಾವುಕರಾಗಿದ್ದರು. ರಾವ್ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವುದಾದರೆ, ರಾವ್ ಅವರ ಪತ್ನಿಯಶೋಧಾ ಆರ್.ರಾವ್. ಪುತ್ರ ಡಾ.ಮದನ್ ರಾವ್ ಅವರು ಬೆಂಗಳೂರಿನ ರಾಷ್ಟ್ರೀಯ ಜೀವಶಾಸ್ತ್ರವಿಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕ. ಪುತ್ರಿ ಮಾಲಾ ರಾವ್ ವಾಸ್ತುಶಿಲ್ಪ ತಂತ್ರಜ್ಞಾನದಲ್ಲಿ ಪದವೀಧರೆ. ಕಾಸ್ಮಿಕ್ ರೇಸ್, ಇಂಟರ್ ಪ್ಲಾನೆಟರಿ ಫಿಸಿಕ್ಸ್, ಸೆಟಲೈಟ್ ಆಂಡ್ ರಾಕೆಟ್ ಟೆಕ್ನಾಲಜಿ ಸೇರಿ ಹಲವು ವಿಷಯಗಳ ಬಗ್ಗೆ ಯು.ಆರ್.ರಾವ್ ಅವರ ೩೫೦ಕ್ಕೂ ಹೆಚ್ಚು ಪ್ರಬಂಧಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡಿವೆ.
ಫಿಸಿಕ್ಸ್ ಆಫ್ ಕಮ್ಯೂನಿಕೇಷನ್, ಸ್ಪೇಸ್ ಆಂಡ್ ಅಜೆಂಡಾ ೨೧ – ಕೇರಿಂಗ್ ಫಾರ್ ದ ಪ್ಲಾನೆಟ್ ಅರ್ಥ್, ಸ್ಪೇಸ್ ಟೆಕ್ನಾಲಜಿ ಫಾರ್ ಸಸ್ಟೇನೆಬಲ್ ಡೆವಲಪ್ಮೆಂಟ್‌ಗಳನ್ನೆ ಮೊದಲು ಮಾಡಿಕೊಂಡು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೇ ಇವರು ೨೦೧೪ರಲ್ಲಿ ಪ್ರಸಿದ್ಧ ಕೃತಿ ‘ಇಂಡಿಯಾಸ್ ರೈಜ್ ಆಸ್ ಎ ಸ್ಪೇಸ್ ಪವರ್’ ಲೋಕಾರ್ಪಣೆಯಾಗಿದ್ದು ಒಂದು ವಿಶೇಷ. ೧೯೭೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹರಿ ಓಂ ವಿಕ್ರಮ ಸಾರಾಭಾಯಿಪ್ರಶಸ್ತಿ, ೧೯೭೬ರಲ್ಲಿ ಪದ್ಮಭೂಷಣ, ೧೯೯೪ ರಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನ್ ಆಫ್ ದಿ ಇಯರ್  ಪ್ರಶಸ್ತಿ, ೨೦೦೧ ರಲ್ಲಿ ನಾಡೋಜ ಪ್ರಶಸ್ತಿ, ೨೦೦೨ ರಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ಮೆಮೊರಿಯಲ್ ಪ್ರಶಸ್ತಿ, ೨೦೧೩ರಲ್ಲಿ ವಾಷಿಂಗ್ಟನ್‌ನ ಸೊಸೈಟಿ ಆಫ್ ಸೆಟಲೈಟ್ ಪ್ರೊಫೆಷನಲ್ ಇಂಟರ್ ನ್ಯಾಷನಲ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ಹಾಲ್ ಆಫ್ ಫೇಮ್’ ಗೌರವ (ಈ ಗೌರವ ಪಡೆದ ಪ್ರಥಮ ಭಾರತೀಯ ವಿಜ್ಞಾನಿ ಎಂಬ ಹೆಗ್ಗಳಿಕೆ ), ೨೦೧೬ ರ ಮೇ ೧೫ ರಂದು ಇಂಟರ್ ನ್ಯಾಷನಲ್ ಏರೋನಾಟಿಕ್ ಫೆಡರೇಷನ್‌ಗೆ ಸೇರ್ಪಡೆಗೊಂಡದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿ, ೨೦೧೭ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಪ್ರಶಸ್ತಿ.
ಇವುಗಳ ಜತೆಗೆ ವಿದೇಶಿ ವಿವಿಗಳಿಂದ ಒಟ್ಟು ೨೫ ಗೌರವ ಡಾಕ್ಟರೇಟ್ ಪದವಿ ಗೌರವಗಳಿಗೂ ಪ್ರೊ.ಯು.ಆರ್.ರಾವ್ ಭಾಜನರಾಗಿದ್ದಾರೆ. ಭಾರತ ಇಂದು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರಗಳ ಜತೆ ಪೈಪೋಟಿ ನಡೆಸುತ್ತಿದೆ ಎಂದರೆ, ಅದಕ್ಕೆ ಪ್ರೊ.ಯು.ಆರ್.ರಾವ್‌ರಂತಹ ಶ್ರೇಷ್ಠ ವಿಜ್ಞಾನಿಗಳ ಅವಿರತ ಪರಿಶ್ರಮವೇ ಸಾಕ್ಷಿ. ಇಂತಹ ಮೇಧಾವಿ ೨೦೧೭ರ ಜುಲೈ ೨೪ ರಂದು ಬೆಂಗಳೂರಿನಲ್ಲಿ ನಮ್ಮನ್ನಗಲಿದರು. ಭಾರತದ ಬಾಹ್ಯಾಕಾಶ ತಂತ್ರeನ ಕ್ಷೇತ್ರಕ್ಕೆ ಅಡಿಪಾಯ ಹಾಕಿಕೊಟ್ಟ ಮಹನೀಯರಲ್ಲಿ ಪ್ರೊ.ಯು.ಆರ್.ರಾವ್ ಅವರು ಪ್ರಾತಃ ಸ್ಮರಣೀಯರು.