ನವಣೆ ಬೆಳೆಯ ಸುಧಾರಿತ ತಾಂತ್ರಿಕತೆಗಳು
ಆಲೂರು ಸಿರಿ
ಡಾ.ಅಶೋಕ್‌ ಆಲೂರು
@.
ನವಣೆ ಸತ್ವಯುತ ಕಿರುಧಾನ್ಯ ಬೆಳೆಯಾಗಿದೆ. ಕಡಿಮೆ ಅವಧಿಯಲ್ಲಿ, ಮಳೆಯಾಶ್ರಿತ ಪ್ರದೇಶಗಳಲ್ಲಿ ಇದನ್ನು ಸುಲಭವಾಗಿ ಬೆಳೆಯಬಹುದು. ಕಡಿಮೆಫಲವತ್ತಾದ ಹೊಲಗಳಲ್ಲಿ ಇದನ್ನು ಬೆಳೆಯಬಹುದಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲೂ ಇದರ ಕೃಷಿ ಸಾಧ್ಯ. ಈ ಬೆಳೆ ಅತಿ ಕಡಿಮೆ ತೇವಾಂಶ ದಲ್ಲಿಯೂ ಬೆಳೆಯುವುದರಿಂದ ಬರಗಾಲದಂಥ ಪರಿಸ್ಥಿತಿಗೂ ನವಣೆ ಬೆಳೆ ಸೂಕ್ತವಾ ದದ್ದು. ನವಣೆ ಅತೀ ಹೆಚ್ಚು ಪೋಷಕಾಂಶಗಳಿಂದ ಕೂಡಿದ್ದು ಜಾನುವಾರ ಗಳಿಗೂ ಪ್ರಿಯವಾದ ಮೇವು.
ಚೀನಾ ದೇಶ ಇದರ ಉಗಮ ಸ್ಥಾನವಾಗಿದೆ. ಭಾರತ, ಯುರೋಪ್, ಆಫ್ರಿಕಾದ ಇತರ ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ ಒಟ್ಟು ೦.೯೮ ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ನವಣೆಯ ನ್ನು ಬೆಳೆಯಲಾಗುತ್ತಿದೆ. ನವಣೆ ಬೆಳೆಯನ್ನು ಚಿತ್ರದುರ್ಗ, ತುಮಕೂರು, ಬಳ್ಳಾರಿ, ಗುಲ್ಬರ್ಗ, ವಿಜಾಪುರ, ರಾಯ ಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಖುಷ್ಕಿ ಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ.
ನಮ್ಮ ರಾಜ್ಯದಲ್ಲಿ ಈ ಬೆಳೆಯನ್ನು ಸುಮಾರು ೩೪ ಸಾವಿರ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ. ಇದರ ಸರಾಸರಿ ಇಳುವರಿ ಪ್ರತಿ ಹೆಕ್ಟೇರಿಗೆ ೪೦೭ ಕೆಜಿ ಯಷ್ಟಿದ್ದು, ೧೪ ಸಾವಿರ ಟನ್‌ನಷ್ಟು ಉತ್ಪಾದನೆ ಮಾಡಲಾಗುತ್ತಿದೆ. ನವಣೆ ಯಲ್ಲಿರುವ ಮುಖ್ಯ ಪೋಷಕಾಂಶಗಳು ಪೌಷ್ಟಿಕಾಂಶ ಪ್ರತಿ ೧೦೦ ಗ್ರಾಂ.ನಲ್ಲಿ ಶಕ್ತಿ ಪ್ರೋಟೀನ್ ಕೊಬ್ಬಿನಾಂಶ ಶರ್ಕರ ಪಿಷ್ಟ ನಾರಿನಾಂಶ ಖನಿಜಾಂಶ ಕಬ್ಬಿಣಾಂಶ ಕ್ಯಾಲ್ಸಿಯಂ ಫಾಸ್ಪರಸ್ ಸತು ೩೩೧ ಕಿ.ಕ್ಯಾಲೊರಿ ೧೨.೩ ಗ್ರಾಂ. ೪.೩ ಗ್ರಾಂ. ೬೦.೯ ಗ್ರಾಂ. ೮.೦ ಗ್ರಾಂ. ೩.೩ ಗ್ರಾಂ. ೨.೮ ಗ್ರಾಂ. ೩೧ ಮಿ.ಗ್ರಾಂ ೨೯೦ ಮಿ.ಗ್ರಾಂ. ೨.೪ ಗ್ರಾಂ. ನವಣೆಯ ಉಪಯೋಗಗಳು ನವಣೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಏರಿಸುವ ಅಂಶ (ಗ್ಲೈಸೆಮಿಕ್ ಇಂಡೆಕ್ಸ್) ಕಡಿಮೆ ಪ್ರಮಾಣದಲ್ಲಿರುವುದರಿಂದ ಸಕ್ಕರೆ ರೋಗಿಗಳಿಗೆ ಸೂಕ್ತ ಆಹಾರ.
ಇದರಲ್ಲಿನ ಗಂಜಿಯು ಅಂಶ ನಿಧಾನವಾಗಿ ಶಕ್ತಿಯಾಗಿ ಪರಿವರ್ತನೆಯಾಗುವ ವಿಶಿಷ್ಟ ಗುಣ ಹೊಂದಿದೆ. ನವಣೆ ಹೆಚ್ಚು ನಾರಿನಾಂಶ ಹೊಂದಿರುವುದ ರಿಂದ ದೇಹದ ಕೊಬ್ಬು ಕಡಿಮೆ ಮಾಡಲು ಸಹಾಯಕಾರಿ. ಅಲ್ಲದೆ ಮಲಬದ್ಧತೆ, ಮೂಲವ್ಯಾಧಿಯಂಥ ಖಾಯಿಲೆಗಳು ಬರದಂತೆ ತಡೆಯುತ್ತದೆ. ನವಣೆಯಲ್ಲಿರುವ ಜೀವ ಸತ್ವಗಳು, ಲಘು ಪೋಷಕಾಂಶಗಳು, ಫಿನಾಲಿಕ್ ಸಂಯುಕ್ತಗಳು, ಲಗ್ನಿನ್‌ಗಳು, ಸ್ಫಟಿಕ, ಆಸಿಡ್ಸ್, ಟ್ಯಾನಿನ್ಸ್‌ಗಳು ಪ್ರತಿರೋಧಕ ಕಾರ್ಯ ನಿರ್ವಹಿಸಿ ಜೀವಕೋಶಗಳ ಉತ್ಕರ್ಷಣೆಯಿಂದ ಹಾನಿ ಉಂಟಾಗದಂತೆ ತಡೆಯುತ್ತವೆ. ಸೂಕ್ತವಾದ ತಳಿಗಳು ಹಾಗೂ ಅವುಗಳ ವಿಶೇಷ ಗುಣಗಳುತಳಿ: ಎಸ್‌ಐಎ ೩೨೬ (ಪ್ರಸಾದ್) ಅವಧಿ: ೭೦-೭೫ ದಿನಗಳು ಇಳುವರಿ: ೧೮-೨೨ ಕ್ವಿಂ/ಹೆಕ್ಟೇರ್ ವಿಶೇಷತೆ: ಮೇ- ಜೂನ್‌ನಿಂದ ಆಗಸ್ಟ್ ತಿಂಗಳವರೆಗೆಬಿತ್ತನೆ ಮಾಡಬಹುದು. ಈ ತಳಿಯು ಬರಸಹಿಷ್ಣುತೆ ಗುಣ ಹೊಂದಿದೆ.
ತೆಳುವಾದ ಕಾಂಡ ಹೊಂದಿದ್ದು ತೆನೆಯಲ್ಲಿ ದಟ್ಟವಾಗಿ ಕಾಳುಗಳು ಕಟ್ಟಿರುತ್ತವೆ ಹಾಗೂ ಹೆಚ್ಚು ಪ್ರೋಟಿನ್ ಅಂಶ (೧೩:೨೧-೧೩:.೩೦%) ಹೊಂದಿದೆ.ತಳಿ: ಎಸ್‌ಐಎ ೩೧೫೬ ಅವಧಿ: ೮೫-೯೦ ದಿನಗಳು ಇಳುವರಿ: ೨೦-೨೫ ಕ್ವಿಂ/ಹೆಕ್ಟೇರ್ ವಿಶೇಷತೆ: ಸಾರಜನಕ ಗೊಬ್ಬರಗಳಿಗೆ ಹೆಚ್ಚಾಗಿ ಸ್ಪಂದಿಸುವಗುಣ ಹಾಗೂ ಸುಳಿ ನೊಣ ಬಾಧೆಗೆ ನಿರೋಧಕ ಶಕ್ತಿ ಹೊಂದಿದೆ.
ನೇರಳೆ ಬಣ್ಣದ ತೆನೆ ಹೊಂದಿದ್ದು ಗಂಟುಗಳ ಮೇಲೂ ನೇರಳೆ ಗೆರೆಯಿರುತ್ತದೆ.ತಳಿ: ಎಸ್‌ಐಎ ೩೦೮೫ಅವಽ: ೮೫-೯೦ ದಿನಗಳುಇಳುವರಿ: ೨೦-೨೫ ಕ್ವಿಂ/ಹೆಕ್ಟೇರ್
ವಿಶೇಷತೆ: ಸುಳಿ ನೊಣ ಬಾಧೆಗೆ ನಿರೋಧಕ ಶಕ್ತಿ ಹೊಂದಿದೆ. ಮಿಶ್ರಬೆಳೆ/ಸರಣಿ ಬೆಳೆಗೆ ಸೂಕ್ತವಾಗಿದೆ. ನೇರಳೆ ಬಣ್ಣದ ತೆನೆ ಹೊಂದಿದ್ದು ಗಂಟುಗಳ ಮೇಲೂ ನೇರಳೆ ಗೆರೆಯಿರುತ್ತದೆ.
ತಳಿ: ಎಸ್‌ಐಎ ೩೦೮೮ (ಸೂರ್ಯ ನಂದಿ)ಅವಧಿ: ೭೦-೭೫ ದಿನಗಳುಇಳುವರಿ: ೨೦-೨೫ ಕ್ವಿಂ/ಹೆಕ್ಟೇರ್ವಿಶೇಷತೆ: ತೆನೆಗಳು ಮಧ್ಯಮ ಗಾತ್ರವಿದ್ದು, ದಟ್ಟವಾಗಿ ಕಾಳುಗಳು ಕಟ್ಟಿರುತ್ತವೆ. ಬರಸಹಿಷ್ಣು ಗುಣ ಹಾಗೂ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ.ತಳಿ: ನರಸಿಂಹರಾಯ
ಅವಧಿ: ೮೫-೯೦ ದಿನಗಳುಇಳುವರಿ: ೧೮-೨೦ ಕ್ವಿಂ/ ಹೆಕ್ಟೇರ್ವಿಶೇಷತೆ: ಗಿಡಗಳು ತೆಳುವಾದ ಕಾಂಡ ಹೊಂದಿದ್ದು, ಸುಮಾರು ೧೨೦-೧೩೦ ಸೆಂ.ಮೀ. ಎತ್ತರಕ್ಕೆ ಬೆಳೆಯುತ್ತವೆ. ಉದ್ದವಾದ ತೆನೆ ಹೊಂದಿರುತ್ತವೆ.
ತಳಿ: ಡಿಎಚ್‌ಎ-ಟಿ ೧೦೯-೩ಅವಧಿ: ೮೫-೯೦ ದಿನಗಳುಇಳುವರಿ: ೨೨-೨೫ ಕ್ವಿಂ/ ಹೆಕ್ಟೇರ್ವಿಶೇಷತೆ: ಮಿಶ್ರಬೆಳೆ/ಸರಣಿ ಬೆಳೆಗೆ ಸೂಕ್ತವಾಗಿದೆ.ಕಾಲ: ಮಳೆ ಚೆನ್ನಾಗಿ ಹಂಚಿಕೆಯಾಗುವ ಪ್ರದೇಶಗಳಲ್ಲಿ ನವಣೆಯನ್ನು ಮೊದಲ ಮುಂಗಾರಿನಲ್ಲಿ ಹಾಗೂ ತಡವಾದ ಮುಂಗಾರಿನಲ್ಲಿಯೂ ಸಹ ಬೆಳೆಯಬಹುದು. ಬಿತ್ತನೆ ಬೀಜವನ್ನು ೨೨.೫ ಸೆಂ.ಮೀ. ಅಂತರದ ಸಾಲುಗಳಲ್ಲಿ, ಪೈರಿನಿಂದ ಪೈರಿಗೆ ೧೦ ಸೆಂ.ಮೀ. ಗಿಂತ ಹೆಚ್ಚು ಆಳವಿಲ್ಲದೆ ಬಿತ್ತಬೇಕು. ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆಗೆ ೩-೪ ವಾರಗಳ ಮೊದಲು ಮಣ್ಣಿನಲ್ಲಿ ಸೇರಿಸಿ, ಚೆನ್ನಾಗಿ ಮಾಗಿದ ಗೊಬ್ಬರವಿದ್ದಲ್ಲಿ ಎರಡು ವಾರಗಳ ಮುಂಚೆ ಸಹ ಭೂಮಿಗೆ ಸೇರಿಸಬಹುದು, ಬೀಜವನ್ನು ಸಂಯುಕ್ತ ಕೂರಿಗೆ ಬಳಸಿ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಒಟ್ಟಾಗಿ ಕೂರಿಗೆಯಿಂದ ಬಿತ್ತಬೇಕು.
ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳು (ಹೆಕ್ಟೇರ್‌ಗೆ) ಬಿತ್ತನೆ ಬೀಜ:೮-೧೦ ಕೆ.ಜಿ. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ೫-೭.೫ ಟನ್ ರಾಸಾಯನಿಕ ಗೊಬ್ಬರ ಸಾರಜನಕ ೨೦ ಕೆ.ಜಿ ರಂಜಕ ೨೦ ಕೆ.ಜಿ ಮಧ್ಯಂತರ ಬೇಸಾಯ ಎರಡರಿಂದ ಮೂರು ಬಾರಿ ಮಧ್ಯಂತರ ಬೇಸಾಯ ಅಥವಾ ಕುಂಟೆ ಹಾಯಿಸುವುದರಿಂದ ಮಣ್ಣನ್ನು ಸಡಿಲ ಮಾಡುವುದು ಹಾಗೂ ಸಾಕಷ್ಟು ಕಳೆಗಳನ್ನು ಹತೋಟಿ ಮಾಡಬಹುದು.
ಕಳೆ ನಿಯಂತ್ರಣ:ಬಿತ್ತಿದ ಮೊದಲ ೩೦-೪೦ ದಿನಗಳವರೆಗೆ ಕಳೆಗಳನ್ನು ಹತೋಟಿ ಮಾಡುವುದು. ಇದಕ್ಕಾಗಿ ಒಂದೆರಡುಬಾರಿ ಕುಂಟೆ ಹಾಯಿಸಿ ತಪ್ಪಿದ ಕಳೆಗಳನ್ನು ಹಾಗೂ ಪೈರುಗಳ ನಡುವೆ ಇರುವ ಕಳೆಗಳನ್ನು ಒಂದು ಬಾರಿ ಕೈ ಕಳೆ ತೆಗೆಯುವುದರಿಂದ ಕಳೆಗಳನ್ನು ನಿಯಂತ್ರಿಸಬಹುದು. ಮಿಶ್ರ ಬೆಳೆ/ಬೆಳೆ ಪದ್ಧತಿಗಳು: ಅಂತರ ಬೆಳೆಯಾಗಿ ಸಾಮೆ ಮತ್ತು ತೊಗರಿ/ಅವರೆ/ಹೆಸರು (೫:೧) ಸರಣಿ ಬೆಳೆ: ಚೆನ್ನಾಗಿ ಮಳೆ ಹಂಚಿಕೆಯಾಗುವ ಪ್ರದೇಶಗಳಲ್ಲಿಸಾಮೆ : ಹುರುಳಿ
ಹೆಸರು : ಸಾಮೆ
ನವಣೆಯಿಂದ ವೈವಿಧ್ಯ ತಿನಿಸುಗಳನ್ನು ತಯಾರಿಸುವ ಮೂಲಕ ರುಚಿಯ ಜೊತೆಗೆ ಔಷಧಿಯಾಗಿಯೂ ಸೇವಿಸಬಹುದು. ಇದರಿಂದ ನಿಪ್ಪಟ್ಟು, ಚಿತ್ರಾನ್ನ, ಪುಳಿಯೋಗರೆ, ಅಂಬಲಿ ಇತ್ಯಾದಿಗಳನ್ನು ಸಿದ್ಧಪಡಿಸಬಹುದಾಗಿದೆ. ನವಣೆಯನ್ನು ಬಾಽಸುವ ರೋಗಗಳು ಮತ್ತು ಕೀಟಗಳು ೧. ಬೆಂಕಿರೋಗ ಮತ್ತು ಕಂದು ಚುಕ್ಕೆ ರೋಗ: ಲಕ್ಷಣ ಮತ್ತು ಹಾನಿ: ಎಲೆಯ ಮೇಲೆ ವಜ್ರಾಕಾರದ ಸಣ್ಣ ಚುಕ್ಕೆಗಳು ವಿಸ್ತರಿಸುತ್ತವೆ. ನಂತರ ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ. ತೆನೆಗಳಲ್ಲಿ ಮಚ್ಚೆಗಳು ತೆನೆಯ ಕೆಳಭಾಗದಲ್ಲಿ ಕಾಣಿಸುತ್ತವೆ. ತದನಂತರ ಕೊಳೆತು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಕಾಳು ಜೊಳ್ಳಾಗುತ್ತದೆ. ನಿರ್ವಹಣಾ ಕ್ರಮಗಳು: ನಿರೋಧಕ ತಳಿಯ ಬಳಕೆ ಎಸ್ ಐಎ- ೩೦೮೮, ಮ್ಯಾಂಕೋಜೆಬ್ ೭೫ ಡಬ್ಲು.ಪಿ ೨ ಗ್ರಾಂ. ಅಥವಾ ಕಾರ್ಬನ್‌ಡೈಜಿಮ್ ೫೦ ಡಬ್ಲುಪಿ ೦.೫ ಗ್ರಾಂ ಅಥವಾ ಕಿಟಾಜಿನ್ ೪೮ ಇಸಿ ೧.೦ ಮಿ.ಲಿ /ಲೀ ಬೆರೆಸಿ ಸಿಂಪರಣೆ ಮಾಡಿ.
೨. ಕಾಡಿಗೆ ರೋಗ:ಲಕ್ಷಣ ಮತ್ತು ಹಾನಿ: ತೆನೆಯಲ್ಲಿ ಕೆಲವು ಕಾಳುಗಳ ಮೇಲೆ ರೋಗ ಕಂಡು ಬಂದು ಕಾಳಾಗಿ ಬೆಳೆಯುವ ಬದಲು ಶಿಲೀಂಧ್ರ ಕೋಶಗಳಾಗಿ ಪರಿವರ್ತನೆಯಾಗುತ್ತವೆ. ನಿರ್ವಹಣಾ ಕ್ರಮಗಳು: ಒಂದು ಕಿಲೋ ಗ್ರಾಂ ಬೀಜಕ್ಕೆ ೨ ಗ್ರಾಂ ಮೆಟಿಲಾಕ್ಸಿಲ್ + ಮ್ಯಾಂಕೋಜೆಬ್ (ರಿಡೋಮಿಲ್ ಎಮ್ ಜಡ್ ೭೯ ಡಬ್ಲು.ಪಿ. ನಿಂದ ಬೀಜೋಪಚಾರ ಮಾಡಿ.
೩. ಹಸಿರು ತೆನೆ ರೋಗ:ಲಕ್ಷಣ ಮತ್ತು ಹಾನಿ: ತೆನೆಯ ಹೂವಿನಿಂದ ಕೂಡಿರದೇ ಸಣ್ಣ ಸಣ್ಣ ಹಲವಾರು ಎಲೆಗಳಾಗಿ ಮಾರ್ಪಾಡಾಗುತ್ತವೆ.
ನಿರ್ವಹಣಾ ಕ್ರಮಗಳು:ಒಂದು ಕಿಲೋ ಗ್ರಾಂ ಬೀಜಕ್ಕೆ ೨ ಗ್ರಾಂ ರಿಡೋಮಿಲ್ ಎಮ್ ಜಡ್ ಶಿಲೀಂಧ್ರ ನಾಶಕದಿಂದ ಬೀಜೋಪಚಾರಗೊಳಿಸಿ ಬಿತ್ತನೆ ಮಾಡಿ.
೪. ಸುಳಿನೊಣ:ಲಕ್ಷಣ ಮತ್ತು ಹಾನಿ: ಬೆಳೆಯ ಪ್ರಾರಂಭ ೧೫ ದಿನದಿಂದ ೩೦ ದಿನಗಳವರೆಗೆ ಅಽಕ ಬಾಧೆಗೊಳಗಾಗುತ್ತದೆ. ಮೊಟ್ಟೆಯಿಂದ ಮರಿಯಾದ ನಂತರ ಸಸ್ಯಗಳ ಸುಳಿಗೆ ದಾಳಿ ಮಾಡಿ. ಸುಳಿ ಒಣಗುವಂತೆ ಮಾಡುತ್ತದೆ. ಪೈರು ತೆನೆ ಹಂತದಲ್ಲಿದ್ದಾಗ ಜೊಳ್ಳು ತೆನೆಗಳಾಗುತ್ತವೆ.
ನಿರ್ವಹಣಾ ಕ್ರಮಗಳು:ನಿರೋಧಕ ತಳಿಯ ಬಳಕೆ ಎಸ್ ಐಎಫ್ ೩೧೫೬ ಎಸ್‌ಐಎ-೩೦೮೫. ಮುಂಗಾರಿನಲ್ಲಿ ಮೊದಲ ಮಳೆ ಬಂದ ಕೂಡಲೇ ಅಂದರೆ ಮೇ ತಿಂಗಳಿನಿಂದ ಮೊದಲನೆ ವಾರದವರೆಗೆ ಕಿರುಧಾನ್ಯ ಬೆಳೆಗಳನ್ನು ಬಿತ್ತನೆ ಮಾಡುವುದರಿಂದ ಸುಳಿ ನೊಣದ ಹಾವಳಿ ತಪ್ಪಿಸಬಹುದು. ತಡವಾಗಿ ಬಿತ್ತನೆ ಮಾಡಿದಲ್ಲಿ ಒಂದೂವರೆ ಕಿಲೋ ಹೆಚ್ಚು ಬಿತ್ತನೆ ಬೀಜವನ್ನು ಬಿತ್ತನೆಗೆ ಬಳಸಿರಿ. ಬಾಧೆಗೊಳಗಾದ ಸಸಿಗಳನ್ನು ಕಿತ್ತು ನಾಶಪಡಿಸಬೇಕು.
ಅವಶ್ಯಕವಿದ್ದಲ್ಲಿ ಮಾತ್ರ ಕೀಟನಾಶಕಗಳನ್ನು ಬಳಸುವುದು. ಸ್ಪರ್ಶ ಕೀಟನಾಶಕಗಳಾದ ಕ್ಲೋರೋಪೈರಿ-ಸ್ ಅಥವಾ ಕ್ವಿನಾಲ್ -ಸ್, ೨ ಮಿಲಿ ಪ್ರಮಾಣ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಸತ್ತ ಮೀನುಗಳಿಂದ ಬೆಳೆದ ಸುಳಿ ನೊಣಗಳನ್ನು ಆಕರ್ಷಿಸಿ ನಾಶಪಡಿಸಬೇಕು.
ಮುಖ್ಯವಾದ ಖರ್ಚು ಇಲ್ಲದ ಬೇಸಾಯ ಕ್ರಮಗಳು:ಕೆಂಪು ಮಣ್ಣಿನ ಭೂಮಿಯಲ್ಲಿ ಜೂನ್-ಜುಲೈ ಕೊನೆಯೊಳಗಾಗಿ ಬಿತ್ತನೆ ಮಾಡಿ. ೩.೫-೪ ಸೆಂ.ಮೀ. ಗಿಂತ ಹೆಚ್ಚು ಆಳದಲ್ಲಿ ಬಿತ್ತನೆ ಮಾಡಬೇಡಿ.