ಮಮತಾ ಬ್ಯಾನರ್ಜಿ ಮೊಘಲರ ಸಂತಾನವೇ ?!
ಮಾರುತೀಶ್ ಅಗ್ರಾರ
ಮಮತಾ ಬ್ಯಾನರ್ಜಿಯ ಮನಸ್ಥಿತಿ ಏನು, ಅವರ ಸಿದ್ಧಾಂತವೇನು, ಅವರು ಯಾವ ಸಮುದಾಯಕ್ಕೆ ಆಪ್ತರು ಎನ್ನುವುದು ಈಗಾಗಲೇ ಅನೇಕರಿಗೆ ಗೊತ್ತಿದೆ. ಕಳೆದ ಒಂದು ದಶಕದಿಂದ ಅಂದರೆ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬಂದ ನಂತರಬಂಗಾಳದಲ್ಲಿ ಕೋಮುಸಂಘರ್ಷಕ್ಕೆ ಅನೇಕ ಹಿಂದೂಗಳ ಕೊಲೆಗಳಾಗಿವೆ.
ಕಳೆದ ಗುರುವಾರ ದೇಶದ ಅನೇಕ ಕಡೆ ರಾಮ ನವಮಿ ಆಚರಣೆ ಬಹಳ ಸಂಭ್ರಮದಿಂದ ನಡೆದಿದೆ. ರಾಮನವಮಿ ಆಚರಣೆಗೆ ಸಂಬಂಧಿಸಿದಂತೆ ಮೂರ್ನಾಲ್ಕು ರಾಜ್ಯಗಳಲ್ಲಿ ಸಣ್ಣಪುಟ್ಟ ಗಲಾಟೆ ಸಂಭವಿಸಿದ್ದರೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆದಿರುವುದು ದುರ್ದೈವವೇ ಸರಿ. ಇನ್ನು ಜಮ್ಮು-ಕಾಶ್ಮೀರದ ಬೀದಿ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷವಾಕ್ಯದೊಂದಿಗೆ ನಡೆದ ರಾಮ ನವಮಿ ಶೋಭಾ ಯಾತ್ರೆಯೂ ಅನೇಕರ ಮನಸೂರೆಗೊಂಡಿದೆ.
ಯಾಕೆಂದರೆ ಉಗ್ರರ ಕರಿನೆರಳು ರಾಮನವಮಿಯ ಮೇಲೆ ಬೀಳದೆ ಯಶಸ್ವಿ ಯಾಗಿ ನೆರವೇರಿರುವುದು ಸಂತೋಷದ ವಿಚಾರ! ಅನೇಕ ನೆಟ್ಟಿಗರು ಆಶ್ಚರ್ಯಕರ ರೀತಿಯಲ್ಲಿ ಜಮ್ಮು-ಕಾಶ್ಮೀರದ ರಾಮ ನವಮಿ ಸಂಭ್ರಮದ ಶೋಭಾಯಾತ್ರೆಯ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿ ಕೊಂಡು, ಈ ಚಿತ್ರಗಳು ಎಲ್ಲಿನವು ಹೇಳಿ? ಎಂದು ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ಗಳನ್ನು ಕೇಳಿದ್ದಾರೆ. ನಿಜ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕವಿಲ್ಲದೆ ಶಾಂತಿಯುತವಾಗಿ ನಡೆದ ರಾಮನವಮಿ ಉತ್ಸವವು ಅನೇಕರಿಗೆ ಆಶ್ಚರ್ಯ ತರಿಸಿದೆ!
ಯಾಕೆಂದರೆ ಆರ್ಟಿಕಲ್ 370 ರದ್ದಾಗುವುದಕ್ಕೂ ಮೊದಲು ಭಯೋತ್ಪಾದಕರ ಹಾಗೂ ಕಾಶ್ಮೀರ ಪ್ರತ್ಯೇಕತಾವಾದಿ ಉಗ್ರರಅಡ್ಡೆಯಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಲು ಸಹ ಹಿಂದುಮುಂದು ನೋಡಬೇಕಾಗಿತ್ತು. ಅಂಥ ವಾತಾವರಣವನ್ನು ಭಯೋತ್ಪಾದಕರು ಜಮ್ಮು-ಕಾಶ್ಮೀರದಲ್ಲಿ ಸೃಷ್ಟಿಸಿದ್ದರು. ಹಾಗಾಗಿ ದಶಕಗಳ ಕಾಲ ಆ ಪ್ರಾಂತ್ಯದಲ್ಲಿತ್ರಿವರ್ಣ ಧ್ವಜವೂ ಸ್ವಾತಂತ್ರ್ಯವಾಗಿ ಹಾರಾಡಿರಲಿಲ್ಲ!
ಇಂಥ ಜಾಗದಲ್ಲಿ ಈಗ ನಿರ್ಭೀತಿಯಿಂದ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ ಎಂದರೆ ಆಶ್ಚರ್ಯವಲ್ಲದೇ ಮತ್ತೇನು? ಇದರ ಸಂಪೂರ್ಣ ಕ್ರೆಡಿಟ್ ಆರ್ಟಿಕಲ್ 370 ರದ್ದು ಮಾಡಿದ ಮೋದಿ ಸರ್ಕಾರಕ್ಕೆ ಸಲ್ಲಬೇಕಾದುದ್ದು ಎಂದರೆ ಅತಿಶಯೋಕ್ತಿಯಲ್ಲ. ಬಿಡಿ, ಅದೇನೆ ಇರಲಿ ಒಟ್ಟಿನಲ್ಲಿ ಜಮ್ಮು- ಕಾಶ್ಮೀರದಲ್ಲೂ ರಾಮನವಮಿ ಆಚರಣೆ ಅದ್ದೂರಿಯಾಗಿ ನಡೆದಿರುವುದೇ ಖುಷಿಯ ವಿಚಾರ.
ಆದರೆ ಅದೇ ದಿನ ದೇಶದ ಕೆಲವು ಭಾಗಗಳಲ್ಲಿ ಅಲ್ಪಸಂಖ್ಯಾತ ಕಿಡಿಗೇಡಿಗಳು ರಾಮ ನವಮಿ ಶೋಭಾಯಾತ್ರೆಯನ್ನು ಗುರಿ ಯಾಗಿಸಿ ದಾಳಿ ಮಾಡಿದ್ದಾರಲ್ಲದೇ, ಭದ್ರತೆಗಾಗಿ ನಿಯೋಜಿತರಾಗಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಿರುವುದು ದುರಂತವೇ ಸರಿ. ಅದರಲ್ಲೂ ಮಮತಾ ಬ್ಯಾನರ್ಜಿ ಆಡಳಿತವಿರುವ ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತ ಕಿಡಿಗೇಡಿಗಳಿಂದ ನಡೆದಿರುವ ರಾಮನವಮಿ ಶೋಭಾಯಾತ್ರೆ ಮೇಲಿನ ದಾಳಿ ಇಡೀ ರಾಮ ಭಕ್ತ ರಿಗೆ ಮಾಡಿದ ಅವಮಾನವೆಂದೇ ಹೇಳಬಹುದು.
ಅಂದು ದೇಶದ ಜನ ಪಾನಕ-ಮಜ್ಜಿಗೆ, ಕೋಸಂಬರಿ ತಿಂದು ಸಂತೋಷ, ಸಂಭ್ರಮದಿಂದ ರಾಮನನ್ನು ನೆನೆಯುತ್ತಿರುವಾಗಪಶ್ಚಿಮ ಬಂಗಾಳದ ರಾಮ ಭಕ್ತರ ಹಾಗೂ ಹಿಂದೂಗಳ ಮೇಲೆ ಕಲ್ಲೇಟುಗಳು ಬೀಳುತ್ತಿದ್ದವು! ಹೌದು, ಪಶ್ಚಿಮ ಬಂಗಾಳದ ಹೌರಾದ ಕಾಜಿಪಾರಾ ಪ್ರದೇಶದಲ್ಲಿ ಗುರುವಾರದಂದು ನಡೆಯುತ್ತಿದ್ದ ರಾಮನವಮಿ ಶೋಭಾಯಾತ್ರೆ ವೇಳೆ ಕೆಲ ಮುಸ್ಲಿಂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಲ್ಲದೇ, ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಿ ಉದ್ಧಟತನ ಮೆರೆದಿದ್ದಾರೆ. ಈ ದುರ್ಘಟನೆಯಿಂದಾಗಿ ಈ ಪ್ರದೇಶ ಅಂದು ಬೂದಿಮುಚ್ಚಿದ ಕೆಂಡದಂತೆ ಇತ್ತು.
ಮಾರನೇ ದಿನ ಅಂದರೆ ಮುಸ್ಲಿಮರ ಪವಿತ್ರ ದಿನವೆಂದು ಕರೆಯುವ ಶುಕ್ರವಾರದಂದು ಮುಸ್ಲಿಮರು ಮಧ್ಯಾಹ್ನದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬಂದ ತಕ್ಷಣವೇ ತಂಡೋಪತಂಡವಾಗಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಮತ್ತೆ ಕಲ್ಲು ತೂರಿ ಪುಂಡಾಟ ಮೆರೆದಿದ್ದಾರೆ. ಈ ಕೋಮು ಘರ್ಷಣೆಯಲ್ಲಿ ಅನೇಕರು ಗಾಯಗೊಂಡರೆ, ಕಿಡಿಗೇಡಿಗಳ ಅಟ್ಟಹಾಸಕ್ಕೆ ಒಬ್ಬ ಬಲಿಯಾಗಿದ್ದಾನೆ. ಆ ದಿನ ಇಷ್ಟೆಲ್ಲಾ ಸಂಘರ್ಷ ನಡೆಯುತ್ತಿದ್ದರೂ ಬಂಗಾಳದ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಅಸಹಾಯಕರಂತೆ ವರ್ತಿಸುತ್ತಿದ್ದ ವಿಡೀಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಅದನ್ನು ನೋಡಿದಾಗ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದ್ಯಾ? ಅಥವಾ ಒಂದು ಕೋಮಿನ ಪರ ಮಾತ್ರ ದೀದಿ ಸರ್ಕಾರದ ಕಾನೂನುಗಳು ಇವೆಯಾ? ಅಥವಾ ಪೊಲೀಸ್ ಇಲಾಖೆಯೇ ಒಂದು ಕೋಮಿನ ಪರ ನಿಂತಿದ್ಯಾ? ಎನ್ನುವ ಅನುಮಾನ ಹುಟ್ಟುತ್ತದೆ.
ಯಾಕೆಂದರೆ ಶೋಭಾಯಾತ್ರೆ ಹೋಗುತ್ತಿದ್ದ ಸಮಯದಲ್ಲಿ ಕಲ್ಲು ತೂರಿದ್ದು ಮುಸ್ಲಿಮರು. ಗಲಾಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದು ಹಾಗೂ ಸತ್ತಿರುವ ವ್ಯಕ್ತಿ ಹಿಂದೂ. ಆದಾಗ್ಯೂ ಈ ಗಲಾಟೆಯ ಹೊಣೆಯನ್ನು ಸ್ವತಃ ಮಮತಾ ಬ್ಯಾನರ್ಜಿಯೇ ಪರೋಕ್ಷವಾಗಿ ಹಿಂದೂಗಳ ಮೇಲೆ ಹೊರಿಸುತ್ತಿದ್ದಾರೆ! ದೀದಿ ಪ್ರಕಾರ, ಇದು ರಂಜಾನ್ ತಿಂಗಳು. ಮುಸ್ಲಿಮರಿಗೆ ಪವಿತ್ರವಾದ ದಿನಗಳು. ಇಂತಹ ಸಮಯದಲ್ಲಿ ಮುಸಲ್ಮಾನರು ತುಂಬಾ ಶ್ರದ್ಧೆ-ಭಕ್ತಿಯಿಂದ ಇರುತ್ತಾರಂತೆ.
ಗಲಾಟೆ- ದೊಂಬಿಗಳಿಂದ ಅವರು ದೂರವಿರುತ್ತಾರೆ ಎನ್ನುವ ಮೂಲಕ ರಾಮನವಮಿ ಗಲಾಟೆ ವಿಚಾರದಲ್ಲಿ ಮುಸ್ಲಿಮರ ಪಾತ್ರವೇನು ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿ ಬಿಟ್ಟಿದ್ದಾರೆ ಮಮತಾ! ಅದು ಪೊಲೀಸರು ಕೇಸು ದಾಖಲಿಸುವುದಕ್ಕೂ ಮುನ್ನವೇ ಮಮತಾ ದೀದಿಯೇ ಬಹಿರಂಗವಾಗಿ ಇದರಲ್ಲಿ ಮುಸ್ಲಿಮರ ಪಾತ್ರವೇನು ಇಲ್ಲವೆಂದು ಸರ್ಟಿಫಿಕೇಟ್ ಕೊಟ್ಟು ಬಿಟ್ಟಿದ್ದರು! ಆ ಮೂಲಕ ಪೊಲೀಸರ ಬಾಯಿಯನ್ನು ಮೊದಲು ಬಂದ್ ಮಾಡಿದರು ಮಮತಾ ಬ್ಯಾನರ್ಜಿ.
ಮಮತಾ ಬ್ಯಾನರ್ಜಿ ಹೇಳುವ ಪ್ರಕಾರ ರಂಜಾನ್‌ನ ಈ ಪವಿತ್ರ ದಿನಗಳಲ್ಲಿ ಶಾಂತಿದೂತರು ಶಾಂತಿಯಿಂದ ಇದ್ದಿದ್ದೇ ಹಾಗಿದ್ದರೆ ರಾಮನವಮಿಯ ಶೋಭಾ ಯಾತ್ರೆ ಮೇಲೆ ಬಿದ್ದ ಕಲ್ಲುಗಳು ಚೀನಾದ ಬೀಜಿಂಗ್ ನಿಂದ ಎಸೆದಿದ್ದೇ? ಅಥವಾ ತೈವಾನ್‌ನಿಂದ ಕಲ್ಲುಗಳನ್ನು ಎಸೆಯಲಾಗಿತ್ತೆ? ಇದಕ್ಕೆ ಉತ್ತರವನ್ನು ಮಮತಾ ದೀದಿಯೇ ಹೇಳಬೇಕು.
ಆದರೆ ವಿಷಯ ಮಾತ್ರ ಕಾಡ್ಗಿಚ್ಚಿನಂತೆ ಹೌರಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಬ್ಬಿದ ಪರಿಣಾಮ ಹಿಂಸಾಚಾರ ಮತ್ತಷ್ಟು ವ್ಯಾಪಿಸಿತು. ಆದರೂ ಮಮತಾ ಬ್ಯಾನರ್ಜಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿತು. ಇದಾಗಿ ಎರಡು ದಿನಗಳ ನಂತರ ಅಂದರೆ ಭಾನುವಾರ ಬಿಜೆಪಿ ಮತ್ತೊಮ್ಮೆ ರಾಮನವಮಿ ಶೋಭಾಯಾತ್ರೆ ಯನ್ನು ಹೂಗ್ಲಿಯಲ್ಲಿ ಹಮ್ಮಿಕೊಂಡಿತ್ತು. ಈ ಮೆರವಣಿಗೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು, ಬಿಜೆಪಿ ರಾಷ್ಟ್ರೀಯಉಪಾಧ್ಯಕ್ಷ ದಿಲೀಪ್ ಘೋಷ್ ಹಾಗೂ ಶಾಸಕ ಬಿಮನ್ ಘೋಷ್ ಸಹ ಭಾಗಿಯಾಗಿದ್ದರು.
ಶೋಭಾಯಾತ್ರೆಯು ಹೂಗ್ಲಿಯ ರಿಶ್ರಾ ಪ್ರದೇಶದಲ್ಲಿ ಸಾಗುತ್ತಿದ್ದಂತೆ ಮೆರವಣಿಗೆಯ ಮೇಲೆ ಮತ್ತೆ ಕಲ್ಲುಗಳ ಸುರಿಮಳೆ! ಬಿಮನ್ ಘೋಷ್ ಸೇರಿದಂತೆ ಅನೇಕರು ಕಲ್ಲೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿ ಇಪ್ಪತ್ನಾಲ್ಕು ಗಂಟೆ ಕಳೆದರೂ ಆರೋಪಿಗಳ ಮೇಲೆ ಎಫ್ ಐಆರ್ ದಾಖಲಾಗಲಿಲ್ಲ! ಅನೇಕರು ಹೇಳುವ ಪ್ರಕಾರ ಸರ್ಕಾರ ಮೊದಲೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದರೆ ಎರಡನೇ ಬಾರಿ ಇಂಥ ತಪ್ಪುಗಳು ನಡೆಯುತ್ತಿರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಅಲ್ಪಸಂಖ್ಯಾತರಿಗೆ ಉಪವಾಸದ ಪವಿತ್ರ ದಿನಗಳು ಎಂದಾಗಿದ್ದರೆ ಎರಡನೇ ಬಾರಿಗೆ ಅಂದರೆ ಬಿಜೆಪಿ ಭಾನುವಾರಹಮ್ಮಿಕೊಂಡಿದ್ದ ರಾಮನವಮಿ ಮೆರವಣಿಗೆ ಮೇಲೆ ಕಲ್ಲೆಸೆದವರು ಯಾರು? ಮಮತಾ ದೀದಿಯ ಪ್ರಕಾರ ಹಿಂದೂಗಳೇ! ಮುಸ್ಲಿಮರು ಅಮಾಯಕರಲ್ಲವೇ! ಅದು ಅಲ್ಲದೆ, ಅಲ್ಪಸಂಖ್ಯಾತರಿರುವ ಹಾಗೂ ಮಸೀದಿಗಳು ಇರುವ ಕಡೆ ಶೋಭಾಯಾತ್ರೆಯನ್ನು ಏಕೆ ಆಯೋಜಿಸಬೇಕಿತ್ತು?! ಎನ್ನುವುದು ಮಮತಾ ಬ್ಯಾನರ್ಜಿಯ ಪ್ರಶ್ನೆ.
ಪ್ರಶ್ನೆ ಮಾಡೋ ವರಸೆ ಅಂದ್ರೆ ಇದಪ್ಪಾ. ಅಯ್ಯೋ ದೇವಾ ಪಶ್ಚಿಮ ಬಂಗಾಳ ಇರುವುದು ಭಾರತದಲ್ಲಿ, ಪಾಕಿಸ್ತಾದಲ್ಲಲ್ಲ ಎನ್ನುವುದನ್ನು ಮೊದಲು ಮಮತಾ ಬ್ಯಾನರ್ಜಿ ಮನವರಿಕೆ ಮಾಡಿಕೊಳ್ಳಬೇಕು. ಬಂಗಾಳ ಹೇಳಿಕೇಳಿ ಸ್ವಾಮಿ ವಿವೇಕಾನಂದ,ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂಥ ವೀರರಿಗೆ ಜನ್ಮ ಕೊಟ್ಟ ನಾಡು. ಇಂಥ ವೀರರ ನಾಡಿನಲ್ಲಿ ಮಸೀದಿ ಇರುವ ಬೀದಿಯಲ್ಲಿ ಶೋಭಾಯಾತ್ರೆ ಹೋಗಬಾರದು ಎಂದರೆ ಆ ಭಗವಂತ ಕೂಡ ಮೆಚ್ಚೋದಿಲ್ಲ.
ಹಾಗೆಯೇ ಮುಸ್ಲಿಮರು ತಮ್ಮ ಹಬ್ಬ-ಹರಿದಿನಗಳಲ್ಲಿ ದೇವಸ್ಥಾನ-ಗುಡಿ-ಗೋಪುರಗಳ ಮುಂದೆಯೇ ಮೆರವಣಿಗೆ ಮಾಡುತ್ತಾ ರಲ್ಲ ಅದು ನಿಮಗೆ ಒಪ್ಪಿತವೇ ಮಮತಾ ಮೇಡಂ? ಒಂದುವೇಳೆ ಆ ಸಮಯದಲ್ಲಿ ಮತ್ತೊಂದು ಸಮುದಾಯ ಮುಸ್ಲಿಮರ ಮೆರವಣಿಗೆ ಮೇಲೆ ಇದೇ ರೀತಿ ಕಲ್ಲು ತೂರಿದರೆ ಪರಿಸ್ಥಿತಿ ಏನಾದೀತು ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ.
ಅಂದಹಾಗೆ ಮಮತಾ ಬ್ಯಾನರ್ಜಿಯ ಮನಸ್ಥಿತಿ ಏನು, ಅವರ ಸಿದ್ಧಾಂತವೇನು, ಅವರು ಯಾವ ಸಮುದಾಯಕ್ಕೆ ಆಪ್ತರು ಎನ್ನುವುದು ಈಗಾಗಲೇ ಅನೇಕರಿಗೆ ಗೊತ್ತಿದೆ. ಕಳೆದ ಒಂದು ದಶಕದಿಂದ ಅಂದರೆ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬಂದ ನಂತರ ಬಂಗಾಳದಲ್ಲಿ ಕೋಮು ಸಂಘರ್ಷಕ್ಕೆ ಅನೇಕ ಹಿಂದೂಗಳ ಕೊಲೆಗಳಾಗಿವೆ. ಆದರೆ ಯಾವೊಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ. ಅನೇಕ ಪ್ರಕರಣಗಳು ಪೊಲೀಸ್ ಕಡತದಿಂದಲೇ ಮಾಯವಾಗಿವೆ!
ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಅಧಿಕಾರಾವಧಿಯಲ್ಲಿ ರಾಜಕೀಯ ಸಂಘರ್ಷದಿಂದ ಹತ್ಯೆಯಾದವರ ಸಂಖ್ಯೆಯೂಲೆಕ್ಕಕ್ಕಿಲ್ಲ. ಈಗ ಉಪರಾಷ್ಟ್ರಪತಿಯಾಗಿರುವ ಜಗದೀಪ್ ಧನಕರ್ ಅವರು ಈ ಹಿಂದೆ ಬಂಗಾಳದ ರಾಜ್ಯಪಾಲರಾಗಿದ್ದಂತ ಸಮಯದಲ್ಲಿ ಬಂಗಾಳದಲ್ಲಿ ನಡೆಯುತ್ತಿದ್ದ ರಾಜಕೀಯ ಪ್ರೇರಿತ ಸಂಘರ್ಷಗಳಿಂದ ಬೇಸತ್ತು ರಾಜ್ಯದಲ್ಲಿ ಕಾನೂನುಸುವ್ಯವಸ್ಥೆ ಹದಗೆಟ್ಟು ಹೋಗಿದೆ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ರಾಜಕೀಯ ವೈಷಮ್ಯದಿಂದ ರಕ್ತಸಿಕ್ತ ಆಡಳಿತ ನಡೆಸುತ್ತಿದೆ ಎಂದು ಮಮತಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು ಎಂಬುದನ್ನು ಈ ಸಮಯದಲ್ಲಿ ನೆನೆಯಬಹುದು.
ಹಾಗೆ ನೋಡಿದರೆ ಮಮತಾ ಬ್ಯಾನರ್ಜಿಯ ಹಿಂದೂ ವಿರೋಧಿ ನಡೆ ಇದೇ ಮೊದಲಲ್ಲ. ಸದಾ ಅಧಿಕಾರದಲ್ಲಿ ಇರಬೇಕೆಂಬ ದುರಾಸೆಗೆ ಬಿದ್ದಿರುವ ಮಮತಾ ಬ್ಯಾನರ್ಜಿ ದಶಕಗಳ ಹಿಂದೆಯೇ ಮುಸ್ಲಿಮರ ತುಷ್ಟೀಕರಣಕ್ಕೆ ಇಳಿದಿರುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಬಂಗಾಳದಲ್ಲಿ ದುರ್ಗಾಪೂಜೆಗೆ ಬಹುದೊಡ್ಡ ಇತಿಹಾಸವೇ ಇದೆ. ಹಾಗಾಗಿ ಬಂಗಾಳದಲ್ಲಿ ದುರ್ಗಾಪೂಜೆ ಸಮಯದಲ್ಲಿ ಹಿಂದೂಗಳೆಲ್ಲ ಒಟ್ಟಿಗೆ ಸೇರಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ದೇವಿಯ ಮೆರವಣಿಗೆ, ಶೋಭಾಯಾತ್ರೆಗಳು ಬಂಗಾಳದಲ್ಲಿ ಸರ್ವೆ ಸಾಮಾನ್ಯ. ಆದರೆ ಮಮತಾ ಬ್ಯಾನರ್ಜಿ ಇದಕ್ಕೂ ಕ್ಯಾತೆ ತೆಗೆದು ದುರ್ಗಾಪೂಜೆ ಉತ್ಸವವನ್ನು ನಿಷೇಧಿಸಿದ್ದ ಉದಾಹರಣೆ ಇದೆ.
ಇನ್ನು 2017 ರಲ್ಲಿ ದಸಾರ ಹಬ್ಬದ ಕೊನೆಯಲ್ಲಿ ಮೊಹರಂ ಹಬ್ಬವೂ ಜೊತೆ ಜೊತೆಯಾಗಿ ಬಂದಿದ್ದರಿಂದ ಮಮತಾಬ್ಯಾನರ್ಜಿ ಮುಸ್ಲಿಮರಿಗೆ ನೋವಾಗುವುದು ಬೇಡವೆಂದು ದುರ್ಗಾದೇವಿಯ ಮೂರ್ತಿಗಳನ್ನು ಮೊಹರಂ ಹಬ್ಬದ ದಿನ ವಿಸರ್ಜನೆ ಮಾಡುವುದು ಬೇಡ ಎಂದಿದ್ದು ಸಹ ಅಂದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು ಜೈ ಶ್ರೀರಾಮ್ ಎಂದರೆಸಾಕು ಚೇಳು ಕುಟುಕಿದವರಂತೆ ಆಡುವ ಮಮತಾ ಬ್ಯಾನರ್ಜಿಯ ಹಿಂದೂ ವಿರೋಽ ನಿಲುವುಗಳನ್ನು ಹೇಳುತ್ತಾ ಹೋದರೆ ಒಂದು ದೊಡ್ಡ ಪುಸ್ತ ಕವನ್ನೇ ಬರೆಯಬಹುದು!
ಆದರೂ ಒಮ್ಮೊಮ್ಮೆ ತಾನು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಎಂದು ಹೇಳುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಹಾಗಾಗಿ ಮಮತಾ ಬ್ಯಾನರ್ಜಿ ಅವರ ದೀರ್ಘಾವಧಿಯ ಆಡಳಿತವನ್ನೊಮ್ಮೆ ಗಮನಿಸಿದಾಗ ಅವರು ರಾಜಕೀಯವಾಗಿ ಅನೇಕ ವಿವಾದಾತ್ಮಕ ನಿರ್ಧಾರಗಳನ್ನು ಜಾರಿಗೊಳಿಸಿದ್ದಾರಲ್ಲದೆ ತಮ್ಮ ಅಧಿಕಾರಾವಧಿಯುದ್ದಕ್ಕು ಹಿಂದೂಗಳನ್ನು ಕಡೆಗಣಿ ಸುತ್ತಲೇ ಬಂದಿದ್ದಾರೆ. ಮೊಘಲರು ತಮ್ಮ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲೆ ನಡೆಸಿದ ದಬ್ಬಾಳಿಕೆ, ಹಿಂಸಾಚಾರ ಯಾವ ಮಟ್ಟಿಗೆ ಘೋರವಾಗಿತ್ತೋ ಇಂದು ಸಹ ಹಿಂದೂಗಳ ವಿರುದ್ಧ ಅಂತಹದ್ದೇ ಪರಿಸ್ಥಿತಿಯನ್ನು ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣ ಮಾಡಿದ್ದಾರೆ.
ಕೇವಲ ವೋಟಿಗಾಗಿ ಪ್ರತಿಯೊಂದು ವಿಚಾರದಲ್ಲೂ ಅಲ್ಪ ಸಂಖ್ಯಾತರ ಪರ ವಕಾಲತ್ತು ವಹಿಸುವ ಹಾಗೂ ಹಿಂದೂಗಳನ್ನು ಕಂಡರೆ ನಖಶಿಖಾಂತ ಉರಿದು ಬೀಳುವ ಮಮತಾ ಬ್ಯಾನರ್ಜಿಯನ್ನು ನೋಡಿ ದಾಗ ಇವರೇನು ಮೊಘಲರ ಸಂತಾನವೇ ಅನ್ನೋ ಅನುಮಾನ ಹುಟ್ಟುತ್ತದೆ.