ಈಸ್ಟರ್‌ ಮಹತ್ವದ ಮೂರು ಆಯಾಮ
ಸೌಮ್ಯ ಗಾಯತ್ರಿ
ಈಸ್ಟರ್ ಸಂಡೆ ಎಂದೇ ಜನಜನಿತವಾಗಿರುವ ಕ್ರೈಸ್ತ ಬಾಂಧವರ ಪರಮೋಚ್ಚ ಧಾರ್ಮಿಕ ಆಚರಣೆ ಕ್ರಿಸ್ತೀಯರ ನಂಬಿಕೆ, ಪ್ರೀತಿ,ಕರುಣೆ, ಪಶ್ಚಾತ್ತಾಪದ ವಿಧಿ, ಆದರ್ಶ ಮತ್ತು ಕರುಣೆಯ ಬುನಾದಿ. ಕ್ರೈಸ್ತ ಧರ್ಮದ ಅಡಿಪಾಯದ ದಿನ ಈ ಪವಿತ್ರ ಭಾನುವಾರ.
೪೦ ದಿನಗಳ ಕಾಲ ಏಸುಕ್ರಿಸ್ತರು ಪಾಪಿ ಮಾನವರ ಕಡುಪಾಪಗಳನ್ನು ತೊಳೆಯಲು ಶೈತಾನನ ಅನೇಕ ಶೋಧನೆಗೆ ಒಳಗಾಗಿ ಉಪವಾಸ ಕೈಗೊಂಡು ಎಲ್ಲ ಪ್ರಲೋಭನೆಗಳನ್ನೂ ಮೆಟ್ಟಿ ನಿಂತು, ತಮ್ಮ ಆಪ್ತ ವಲಯದ ಕುತಂತ್ರಕ್ಕೆ ಬಲಿಯಾಗಿ, ಕುಹಕದ ಬಲಿಪಶುವಾಗಿ ನಿರಪರಾಧಿಯಾಗಿದ್ದೂ ಒಬ್ಬ ಅಪರಾಧಿಯಂತೆ ಬಂಧಿಸಲ್ಪಟ್ಟು ಕಡು ಕ್ರೂರವಾದ ಶಿಕ್ಷೆಯನ್ನನು ಭವಿಸಿ ಮಾನವಕುಲದ ಒಳಿತಿಗಾಗಿ ಪ್ರಾಣತ್ಯಾಗ ಮಾಡಿ ಮೂರನೆಯ ದಿನ ಪುನರುತ್ಥಾನರಾದ ದಿನವೇ ಈಸ್ಟರ್ ಭಾನುವಾರ.
ಇದನ್ನು ಕ್ರೈಸ್ತ ಬಾಂಧವರು ಸಾಂಕೇತಿಕವಾಗಿ ೪೦ ದಿನಗಳ ಕಾಲ ಉಪವಾಸ, ಪ್ರಾರ್ಥನೆ, ದಾನ ಧರ್ಮಗಳಲ್ಲಿ ಕಳೆಯುತ್ತಾ ಭಗವಂತನೆಡೆಗೆ ಸಾಗುವ ಹಾದಿ ಯಲ್ಲಿ ತಮ್ಮನ್ನೇ ತಾವು ಉತ್ತಮ ರೀತಿಯಲ್ಲಿ ತಯಾರಿಸಿಕೊಳ್ಳುವ ಈ ಸಮಯವನ್ನು  ; ತಪಸ್ಸು ಕಾಲ ಎಂದು ಕರೆಯುತ್ತಾರೆ. ಈ ಈಸ್ಟರ್ ಭಾನುವಾರಕ್ಕೆ ಮುಂಚಿನ ವಾರವನ್ನು ಪವಿತ್ರ ವಾರ ಎಂಬುದಾಗಿ ಆಚರಿಸುತ್ತಾ ಅನೇಕ ದೈವ ಪ್ರೇರಿತ ಸಾಂಗ್ಯಗಳಲ್ಲಿ ಹೆಚ್ಚಿನ ದಾಗಿ ತೊಡಗಿಸಿಕೊಳ್ಳುತ್ತಾರೆ. ಈ ಪವಿತ್ರ ವಾರ ದಲ್ಲಿ ,  &   ಸೇರಿದೆ.
ಈ ಪವಿತ್ರ ಭಾನುವಾರಕ್ಕೆ ಹೇಗೆ ತಯಾರಾಗಬೇಕು ಎಂಬುವುದರ ಮೂರು ಆಯಾಮದ ದೃಷ್ಟಿಕೋನ ಇಲ್ಲಿದೆ. ಈ ಪವಿತ್ರ ವಾರದಲ್ಲಿ ಪವಿತ್ರ ಗುರುವಾರ ಕ್ರೈಸ್ತ ಧರ್ಮದ ಯಾಜಕರ ದೀಕ್ಷೆಯ ಪ್ರತೀಕತೆ ಗೋಚರಿಸುತ್ತದೆ. ಶುಭ ಶುಕ್ರವಾರ ಆಪ್ತರ ಒಳಸಂಚಿನ ಫಲ ದೇವರ ಪುತ್ರರಾದ ಏಸುಕ್ರಿಸ್ತರು ಬಂಧಿತರಾಗಿ, ಕ್ರೂರ ಶಿಕ್ಷೆಗೊಳಗಾಗಿ ಶಿಲುಬೆಯ ಮೇಲೆ ಮರಣ ಹೊಂದು ತ್ತಾರೆ ಮತ್ತು ಮೂರು ದಿನ ನಂತರ ಅಂದರೆ ಭಾನುವಾರ ಮರಣದಿಂದ ಪುನರ್ಜೀವಂತರಾಗಿ ಬರುತ್ತಾರೆ.
ಈ ಘಟನೆಗಳು ನಡೆಯುವಾಗ ಮೂರು ವ್ಯಕ್ತಿಗಳ ಅಥವಾ ಮೂರು ವಿಭಿನ್ನ ಮನಃಸ್ಥಿತಿಯ ಪರಿಚಯ ನಮಗಾಗುತ್ತದೆ.ಮೊದಲನೆಯದು ಪೇತ್ರ ಅಂದರೆ .  ಕ್ರೈಸ್ತರ ಪ್ರಪ್ರಥಮ ಜಗದ್ಗುರು. ಏಸುಕ್ರಿಸ್ತರು ಪೇತ್ರನನ್ನು ಆರಿಸಿಕೊಂಡು ನಿನ್ನ ಮೇಲೆ ಸಾಮ್ರಾಜ್ಯ ಕಟ್ಟುವೆ ಅಂದು ಹೇಳುತ್ತಾರೆ. ಅಂತಹ ಪ್ರಿಯ ಶಿಷ್ಯ ಪೇತ್ರ ಎಲ್ಲೆಡೆಯಲ್ಲಿಯೂ ಸ್ವಾಮಿಯನ್ನು ಹಿಂಬಾಲಿ ಸುತ್ತ ನಿಮ್ಮನ್ನಗಲಿ ಇರಲಾರೆ ಎನ್ನುತ್ತಿದ್ದವ ಕ್ರಿಸ್ತನನ್ನು ಬಂಧಿಸಿದಾಗ, ಸೈನಿಕರು ತನ್ನನ್ನು ಬಂಧಿಸಿ ತನಗೂ ಕ್ರೂರ ಶಿಕ್ಷೆ ಕೊಡುವರೇನೋ ಎಂಬ ಪ್ರಾಣ ಭಯದಿಂದ ಅವನಾರೊ ನಾನರಿಯೆ ಎಂದು ಮೂರು ಬಾರಿ ಯೇಸುಕ್ರಿಸ್ತನ ಪರಿಚಯ ತನಗಿದೆ ಎಂಬುದನ್ನು ನಿರಾಕರಿಸುತ್ತಾನೆ.
ಆದರೆ ತನ್ನ ಪ್ರೀತಿಯ ಗುರುವನ್ನು ಹೀಗೆ ನಿರಾಕರಿಸಿಬಿಟ್ಟೆನಲ್ಲಾ, ನಮಗಾಗಿ ಶಿಕ್ಷೆ ಅನುಭವಿಸುತ್ತಿರುವ ನಮ್ಮ ಗುರುವಿಗೆ ಹೀಗೆ ದ್ರೋಹ ಬಗೆದೆನಲ್ಲಾ ಎಂದು ಅತಿವಿಷಾದದಿಂದ ಮಮ್ಮಲ ಮರುಗುತ್ತಾನೆ. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಾನೆ. ಮನನೊಂದು ವೇದನೆ ಪಡುತ್ತಾನೆ. ಯಾವ ಮನುಷ್ಯ ತಪ್ಪು ಮಾಡುವುದಿಲ್ಲ ಹೇಳಿ? ಆದರೆ ತಪ್ಪನ್ನು ಒಪ್ಪಿ, ತಿದ್ದಿ ನಡೆಯು ವವನೇ ನಿಜವಾದ ಮಾನವ.
ಭಗವಂತ ಆ ಪ್ರಾಯಶ್ಚಿತ್ತದ ಹೃದಯವನ್ನು ಸ್ವೀಕರಿಸುತ್ತಾನೆ, ಪ್ರೀತಿಸುತ್ತಾನೆ, ಹರಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ. ಮೊದಲನೆಯ ಆಯಾಮ ಪಶ್ಚಾತ್ತಾಪ. ಪ್ರಾಯಶ್ಚಿತ್ತ ಪಟ್ಟು ಭಗವಂತನೆಡೆಗೆ ಅಭಿಮುಖರಾಗಿ ನಡೆದಲ್ಲಿ ಭಗವತ್ಕೃಪೆ  ಎಂದೆಂದಿಗೂ ನೆಲೆಸುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಎರಡನೆಯ ಆಯಾಮದ ವ್ಯಕ್ತಿ ಜೂದಾಸ್. ಜೂದಾಸ್ ಎಂದಾ ಕ್ಷಣ ಮನಸ್ಸಿಗೆ ಬರುವುದು ನೀಚ ಗುರುದ್ರೋಹಿ. ಉಂಡ ಮನೆಗೆ ಖನ್ನ ಹಾಕುವ ನೀಚ ವ್ಯಕ್ತಿ ಎಂಬ ಯೋಚನೆ. ಯೇಸುಕ್ರಿಸ್ತರ ೧೨ ಮಂದಿ ಶಿಷ್ಯರಲ್ಲಿ ಒಬ್ಬನಾದ ಜೂದಾಸ ಅವರೊಡನೆ ರೊಟ್ಟಿ ಯನ್ನು ಹಂಚಿ ತಿಂದು ಕೇವಲ ೩೦ ಬೆಳ್ಳಿ ನಾಣ್ಯಗಳ ಆಸೆಗೆ ತನ್ನ ಗುರುವನ್ನೇ ಶತ್ರುಗಳಿಗೆ ತೋರಿಸಿ ಕೊಡುತ್ತಾನೆ. ಆತ ಗುರುವನ್ನುಹಿಡಿದು ಕೊಟ್ಟ ಮೇಲೆ ಮುಂದೆ ನಡೆಯುವುದೇ ಒಂದು ಧಾರ್ಮಿಕ ನಂಬಿಕೆಯ ಅಡಿಪಾಯ. ಜೂದಾಸ ಪಾಪ ಮಾಡುತ್ತಾನೆ. ಆದರೆ ನಂತರ ಅಯ್ಯಯ್ಯೋ ಹೀಗೆ ಮಾಡಿದೆ ನಲ್ಲಾ ಎಂದು ಕೊರಗುತ್ತಾನೆ.
ಕೊರಗಿದರೆ ಮಾಡಿದ ಪಾಪ ತೊರೆದು ಮೊದಲಿದ್ದ ಹಾಗೆ ಘಟನೆಗಳು ಹಿಂತಿರುಗಲು ಸಾಧ್ಯವೇ? ನಾವೂ ನಮ್ಮ ಜೀವನದಲ್ಲಿ ಅನೇಕ ಪಾಪಗಳನ್ನು ಚಿಕ್ಕದಿರಲಿ ದೊಡ್ಡದಿರಲಿ ಮಾಡುತ್ತಲೇ ಇರುತ್ತೇವೆ. ಆದರೆ ತಿಳಿದೋ ಅಥವಾ ತಿಳಿಯದೆಯೋ ಮಾಡುವ ತಪ್ಪುಗಳನ್ನು ಮೊದಲ ಸ್ಥಿತಿಗೆ ಹಿಂತಿರುಗಿಸಲು ಸಾಧ್ಯವೇ? ಇಲ್ಲವೇ ಇಲ್ಲ. ನಾವಾಡುವ ಹರಿತ ನಾಲಗೆಯನುಡಿಗಳಿರಬಹುದು, ಇಲ್ಲವೇ ಮೋಸ ವಂಚನೆಯ ಉದ್ದೇಶವಿರಬಹುದು, ಅದು ಪರರನ್ನು ತಲುಪಿ, ಅವರ ಜೀವನದಲ್ಲಿ ಅಲ್ಲೋಲಕಲ್ಲೋಲ ಮಾಡಿ, ಅವರಿಗೆ ನೋವುಂಟು ಮಾಡಿದಾಗ ಅದನ್ನು ಸರಿಪಡಿಸಲಾದೀತೇ? ಒಮ್ಮೆ ಕೆಳಗೆ ಬಿದ್ದ ಕನ್ನಡಿಯ ಚೂರುಗಳನ್ನು ಸೇರಿಸಬಹುದು.
ಆದರೆ ಅದು ಮೊದಲಿನಂತಾಗುತ್ತದೆಯೇ? ಆದ್ದರಿಂದ ಏನೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಏನೇ ಮಾತನಾಡುವ ಮೊದಲು, ಯೋಚಿಸಿ ಮಾಡಿದಲ್ಲಿ ಉತ್ತಮ. ಪ್ರಜ್ಞಾಹೀನರಾಗದೆ ಉತ್ತಮ ಮನಃಸ್ಥಿತಿಯಿಂದ ಭಗವಂತನ ನಾಮಸ್ಮರಣೆ ಮಾಡುತ್ತಾ ಅವನ ಕೃಪೆ ಬೇಡುತ್ತಾ ಉತ್ತಮ ದಾರಿ ಆಯ್ದುಕೊಳ್ಳುವ ಸಂದೇಶ ಜೂದಾಸನಿಂದ ಲಭಿಸುತ್ತದೆ. ಮೂರನೆಯ ಆಯಾಮ ನಮಗೆ ಇಸ್ರೇಲ್ ನಾಡಿನಿಂದ ದೊರೆಯುತ್ತದೆ. ಇಸ್ರೇಲ್ ನಾಡು ಭಗವಂತನಿಂದ ಆಶೀರ್ವದಿಸಲ್ಪಟ್ಟ ನಾಡು. ಆ ನಾಡು ಆಶೀರ್ವದಿತ ಭೂಮಿ. ಈಜಿಪ್ಟಿನವರ ದಾಸ್ಯದಿಂದ ಇಸ್ರೇಲ್ ಜನಾಂಗವನ್ನು ಬಿಡಿಸಿ ವಾಗ್ದತ್ತ ನಾಡಿಗೆ ಅನೇಕಅಡೆತಡೆಗಳನ್ನು ಎದುರಿಸಿ ತಲುಪಿಸುತ್ತಾರೆ ಭಗವಂತ.
ಆದರೆ ನಾನೇ ಎಲ್ಲ ಬಲ್ಲವ, ನಾನೇ ಹಿರಿಯವ, ನನ್ನ ಬಿಟ್ಟರಿಲ್ಲ, ನಾ ನಡೆಯುವ ದಾರಿ ಸರಿಯಾದ ದಾರಿ ಎಂಬ ಅಹಮ್ಮಿನ ಭಾವವೇ ಅವರಿಗೆ ಮುಳಿವು. ತಂತ್ರತಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಆ ರಾಷ್ಟ್ರ ಇಂದಿಗೂ ಸ್ವಚ್ಛಂದವಾಗಿ ಪೂರ್ಣ ಪ್ರಮಾಣದ ಸ್ವಾತಂತ್ಯವನ್ನು ಅನುಭವಿಸಲಿಕ್ಕೆ ಸಾಧ್ಯವಾಗಿಲ್ಲ. ಮುಂದೆಯೂ ಆ ಸಾಧ್ಯತೆ ಬಹಳವೇ ಕಮ್ಮಿಯಾಗಿ ಗೋಚರಿ ಸುತ್ತಿದೆ. ತಗ್ಗಿ ಬಗ್ಗಿ ನಡೆಯುವ ಮಾತೆ ಇಲ್ಲ. ಎಲ್ಲದರಲ್ಲಿಯೂ ಹಮ್ಮು-ಬಿಮ್ಮು. ತನ್ನ ಸುತ್ತ ಶತ್ರು ರಾಷ್ಟ್ರಗಳಿಂದ ಸುತ್ತುವರಿ ಯಲ್ಪಟ್ಟಿರುವ ಈ ನಾಡು ಎಂದಿಗೂ ಯುದ್ಧ ಭೀತಿಯಲ್ಲೇ ಇರುತ್ತದೆ.
ಎಲ್ಲಿಯವರೆಗೆ ಭಗವಂತನಿಗೆ ಸಂಪೂರ್ಣವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಧನ್ಯತಾ ಭಾವನೆ ಹೊಂದುವುದಿಲ್ಲವೋ ಅಲ್ಲಿಯವರೆಗೂ ಆ ನಾಡು ಶಾಪಗ್ರಸ್ತ ನಾಡಾಗಿಯೇ ಉಳಿಯುತ್ತದೆ. ಎಲ್ಲಿ ನಮ್ರತೆ ವಿಧೇಯತೆ ಇರುತ್ತದೆಯೋ, ಎಲ್ಲಿಭಗವಂತನ ಕೊಡುಗೆಗಳಿಗೆ ಧನ್ಯತಾ ಭಾವ ಇರುತ್ತದೆಯೋ ಅಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸಿರುತ್ತದೆ. ನಾನೇ ಎಲ್ಲ ಬಲ್ಲವ, ನಾ ನಡೆಯುವ ಹಾದಿಯೇ ಸರಿಯಾದದ್ದು ಎಂಬ ಹಮ್ಮು ಬಿಮ್ಮಿನ ಧೋರಣೆ ಬಿಟ್ಟು ಉತ್ತಮ ಮಾನವರಾಗಿ ಬಾಳಲುಬೇಕಾದ ಪ್ರeಯನ್ನು, ಏನೇ ಮಾಡುವುದಕ್ಕೆ ಮೊದಲು ಅದನ್ನು ಉತ್ತಮ ರೀತಿಯಲ್ಲಿ ಮಾಡಲು ಭಗವತ್ಕೃಪೆಯನ್ನು ಆಶಿಸುತ್ತಾ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ದೇವರ ಕ್ಷಮೆ ಕೋರುವ ಮನಃಸ್ಥಿತಿಯನ್ನು ಆ ಭಗವಂತ ನೀಡಿ, ಈ ಈಸ್ಟರ್ ಹಬ್ಬದಲ್ಲಿ ಪುನರುತ್ಥಾನರಾದ ಏಸು ಕ್ರಿಸ್ತರು ಎಲ್ಲರ ಮನೆ ಮನ ಬೆಳಗಿಸಲಿ ಎಂದು ಪ್ರಾರ್ಥಿಸುತ್ತ ಈಸ್ಟರ್ ಶುಭಾಶಯವನ್ನುಕೋರಲಿಚ್ಛಿಸುತ್ತೇನೆ.